POLICE BHAVAN KALABURAGI

POLICE BHAVAN KALABURAGI

13 March 2017

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ. ರಾಜೇಂದ್ರ ತಂದೆ ಮುಖ್ಯಪ್ರಾಣ ಉಪಾಧ್ಯಯ, :ಮ್ಯಾಜೇಜರ್ & ಮಾಲಿಕರು ಅಶೋಕ ಲಾಡ್ಜ್, ಸೇಡಂ, ಸಾ:ಮನೆ ನಂ-4-8-35/4-7-35/1 ಹನುಮಾನ ಗುಡಿಯ ಹಿಂದುಗಡೆ, ಕೆ..ಬಿ ಕಾಲೋನಿ, ಸೇಡಂ. ತಾ:ಸೇಡಂ, ಜಿಲ್ಲೆ:ಕಲಬುರಗಿ. ಇವರು ಸೇಡಂ ಪಟ್ಟಣದ ರೈಲ್ವೆಸ್ಟೇಶನ್ ಎದುರುಗಡೆ ಅಶೋಕಾ ಲಾಡ್ಜ್ ಎಂಬ ಹೆಸರಿನ ಲಾಡ್ಜ ಇಟ್ಟುಕೊಂಡಿದ್ದು ನಿನ್ನೆ ದಿನಾಂಕ:11-03-2017 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಒಬ್ಬ ವ್ಯಕ್ತಿಯು ತನ್ನೊಂದಿಗೆ ಒಬ್ಬ ಹೆಣ್ಣುಮಗಳನ್ನು ಸಂಗಡ ಕರೆದುಕೊಂಡು ಬಂದು ಅವಳು ತನ್ನ ಹೆಂಡತಿ ಇದ್ದು ಆಕೆಯ ಹೆಸರು ಹೇಳಿರುವದಿಲ್ಲ ತಾನು ಕೊಡ್ಲಾ ಗ್ರಾಮದಿಂದ ಬಂದಿದ್ದು ಬೆಳಗ್ಗೆ ತಾಂಡೂರಿಗೆ ಹೋಗಬೇಕಾಗಿದೆ ವಸತಿ ಕುರಿತು ಒಂದು ರೂಮ್ ಬೇಕಾಗಿದೆ ಅಂತ ಹೇಳಿದ್ದರಿಂದ ಆತನಿಗೆ ಐ.ಡಿ ಪ್ರೂಫ್ ಕೇಳಲು ತಾನು ಸಂಗಡ ಐ.ಡಿ ಪ್ರೂಫ್ ತಂದಿರುವದಿಲ್ಲ ಅಂತ ವಗೈರೆ ಹೇಳಿದನು. .ಡಿ ಫ್ರೂಫ್ ಇರಲಾರದೇ ರೂಮ್ ಕೊಡಲು ಆಗುವದಿಲ್ಲ ಅಂತ ಹೇಳಿದಾಗ ರಾತ್ರಿ ಹೊತ್ತಿನಲ್ಲಿ ಹೆಂಡತಿಯನ್ನು ರೈಲ್ವೆ ಸ್ಟೇಶನದಲ್ಲಿ ಕೂಡಿಸಿಕೊಳ್ಳುವದು ಸರಿಕಾಣುವದಿಲ್ಲ ಆದ್ದರಿಂದ ಒಂದು ರೂಮ್ ನೀಡಬೇಕೆಂದು ಕೇಳಿಕೊಂಡ ಮೇರೆಗೆ ಆತನಿಗೆ ರೂಮಿಗೆ 350/- ರೂಪಾಯಿ ಬಾಡಿಗೆ ಆಗುತ್ತದೆ ಅಂತ ಹೇಳಿದಾಗ ಆತನು ಹಣ ಕೊಟ್ಟು ತನ್ನ ಹೆಸರು ನರಸಪ್ಪ ತಂದೆ ಭೀಮಪ್ಪ ದೊಡ್ಮನಿ, ಸಾ:ಲಖ್ನಾಪೂರ ತಾಂಡೂರ. ಅಂತ ಹೇಳಿದ್ದು ಆತನು ಹೇಳಿದಂತೆ ಲಾಡ್ಜಿನ ರಜಿಸ್ಟರನಲ್ಲಿ ನಮೂದು ಮಾಡಿ ಅವರಿಗೆ ಲಾಡ್ಜಿನ ರೂಮ್ ನಂ-5 ನೇದ್ದನ್ನು ಬುಕ್ ಮಾಡಿ ಬೀಗದಕೈ ನೀಡಿ ರೂಮಿಗೆ ಕಳೂಹಿಸಿಕೊಟ್ಟೇನು. ರಾತ್ರಿ 11-00 ಗಂಟೆಯವರೆಗೆ ಎಚ್ಚರವಿದ್ದು ನಂತರ ಲಾಡ್ಜಿನ ಆಫೀಸಿನಲ್ಲಿ ಮಲಗಿಕೊಂಡಿದ್ದು ರಾತ್ರಿ 03-00 ಗಂಟೆ ಸುಮಾರಿಗೆ ಸದರಿ ವ್ಯಕ್ತಿಯು ಆಫೀಸಿನ ಬಾಗಿಲು ಬಡಿಯಲು ನನಗೆ ಎಚ್ಚರವಾಗಿ ವಿಚಾರಿಸಲು ತಿಳಿಸಿದ್ದೇನೆಂದರೆ, ತಾನು ರೈಲ್ವೆಸ್ಟೇಶನಗೆ ಟ್ರೇನ್ ಟೈಮ್ ತಿಳಿದುಕೊಂಡು ಬರಲು ಹೋಗಬೇಕಾಗಿದೆ. ಲಾಡ್ಜಿನ ಹೊರಬಾಗಿಲು ತೆಗೆಯಿರಿ ಅಂತ ಹೇಳಿದಾಗ ನಾನು ಅವನಿಗೆ ಹೊರಗೆ ಹೋಗಬೇಕಾದರೆ ಇಬ್ಬರೂ ಹೋಗಿರಿ ಅಂತ ಹೇಳಿದಾಗ ಆತನು ಈ ಅಪರಾತ್ರಿಯಲ್ಲಿ ಹೆಣ್ಣುಮಗಳನ್ನು ರೈಲ್ವೆಸ್ಟೇಶನವರೆಗೆ ಹೇಗೆ ಕರೆದುಕೊಂಡು ಹೋಗುವದು, ನನಗೆ ಕೇವಲ ಟ್ರೇನ್ ಟೈಮ್ ತಿಳಿದುಕೊಂಡು ಬರಬೇಕಾಗಿದೆ ವಾಪಸ್ ಬಂದ ನಂತರ ಟ್ರೇನ ಟೈಮಗೆ ಹೆಂಡತಿಯನ್ನು ಕರೆದುಕೊಂಡು ಹೋಗುವದಾಗಿ ಹೇಳಿದ್ದರಿಂದ ನಾನು ಲಾಡ್ಜಿನ ಹೊರ ಬಾಗಿಲನ್ನು ತೆರೆದಾಗ ಆತನು ರೈಲ್ವೆಸ್ಟೇಶನ ಕಡೆಗೆ ಹೋದನು. ಅವನು ಹೋದ ನಂತರ ಮೂತ್ರವಿಸರ್ಜನೆ ಕುರಿತು ಲಾಡ್ಜಿನ ಮೊದಲೇ ಅಂತಸ್ತಿಗೆ ಹೋಗಿ ವಾಪಸ್ ಬರುವಾಗ ಸದರಿ ವ್ಯಕ್ತಿಯು ಮರಳಿ ಲಾಡ್ಜಿಗೆ ಬರದೇ ಇದ್ದುದ್ದರಿಂದ ಅನುಮಾನಗೊಂಡು ಆತನು ಉಳಿದುಕೊಂಡಿದ್ದ ರೂಮ್ ನಂ-5 ರವರೆಗೆ ಹೋಗಿ ನೋಡಲಾಗಿ ರೂಮಿನ ಬಾಗಿಲು ಮುಂದಕ್ಕೆ ಮಾಡಿದ್ದು ಬಾಗಿಲು ತೆರೆದು ನೋಡಲಾಗಿ ರೂಮಿನ ಪಶ್ಚಿಮ ದಿಕ್ಕಿಗೆ ಇರುವ ಪಲಂಗ ಮೇಲೆ ಹೆಣ್ಣುಮಗಳು ಸತ್ತು ಬಿದ್ದಿದ್ದು ಆಕೆಯ ಕುತ್ತಿಗೆಯ ಹತ್ತಿರ ರಕ್ತಬಂದಂತೆ ಕಾಣುತಿತ್ತು. ನಾನು ಗಾಭರಿಗೊಂಡು ರೈಲ್ವೆಸ್ಟೇಶನ್ ವರೆಗೆ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಎಲ್ಲಿಯೂ ಕಾಣಲಿಲ್ಲ.ಸದರಿ ವ್ಯಕ್ತಿಯು ತನ್ನ ಹೆಸರು ನರಸಪ್ಪ ತಂದೆ ಭೀಮಪ್ಪ ದೊಡ್ಮನಿ ಸಾ:ಲಖ್ನಾಪೂರ, ತಾಂಡೂರ ಅಂತ ಹೇಳಿಕೊಂಡು ತನ್ನೊಂದಿಗೆ ಬಂದಿರುವ ಹೆಣ್ಣುಮಗಳು ತನ್ನ ಹೆಂಡತಿ ಅಂತ ಹೇಳಿ ನಮ್ಮ ಲಾಡ್ಜಿನಲ್ಲಿಯ ಒಂದು ರೂಮನ್ನು ಪಡೆದು ಯಾವುದೋ ಕಾರಣಕ್ಕಾಗಿ ಆಕೆಯ ಕುತ್ತಿಗೆಗೆ ಯಾವುದೊ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಓಡಿಹೋಗಿರುತ್ತಾನೆ. ಈ ಘಟನೆಯು ನಿನ್ನೆ ದಿನಾಂಕ:11-03-2017 ರಂದು ರಾತ್ರಿ 09-30 ಗಂಟೆಯಿಂದ 03-00 ..ಎಮ್ ಅವಧಿಯಲ್ಲಿ ಜರುಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

12 March 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:11/03/2017 ರಂದು ಮಧ್ಯಾನ ಬ್ರಹ್ಮಪೂರ ಬಡಾವಣೆಯ ಕೊಂಡೆದಗಲ್ಲಿಯಲ್ಲಿರುವ ಹಳೆ ಚಾಣುಕ್ಯ ಬಾರ ಹಿಂದುಗಡೆ 7 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ಜೂಜಾಟ ಆಡುತ್ತಿದ್ದಾರೆ ಅಂತಾ ಬಂದ ಮಾಹಿತಿ ಮೇರೆಗೆ ಶ್ರೀ ಸಂಜೀವಕುಮಾರ ಪಿ.ಎಸ್‌‌. ಆರ್‌‌.ಜಿ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಚಾಣುಕ್ಯಬಾರ ಹಿಂದುಗಡೆ ಖುಲ್ಲಾ ಸ್ಥಳದಲ್ಲಿ ಕಂಟೆಗಳ ಮರೆಯಲ್ಲಿ ನಿಂತು ನೋಡಲು 7 ಜನರು ದುಂಡಾಗಿ ಕುಳಿತು ಇಸ್ಪೇಟ್ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ 7 ಜನರನ್ನು  ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಗುರುರಾಜ ತಂದೆ ಭೀಮಶೇನರಾವ ಕುಲಕರ್ಣಿ ಸಾ:ಸುಭಾಸ ಚೌಕ ಈಶ್ವರ ದೇವಸ್ಥಾನ ಹತ್ತಿರ ಕಲಬುರಗಿ 2) ಆಕಾಶ ತಂದೆ ಮುರಳಿಧರ ಕುಲಕರ್ಣಿ ಸಾ:ಹಳೆ ಜಗತ ರಾಯರ ಗುಡಿಯ ಹತ್ತಿರ ಕಲಬುರಗಿ 3) ದಿಗಂಬರ ತಂದೆ ಪ್ರಭಾಕರ ಕುಲಕರ್ಣಿ ಸಾ:ಸದಾಶಿವ ನಗರ ಹಳೆ ಜೇವರ್ಗಿ ರಸ್ತೆ ಪಿ.ಎನ್‌‌.ಟಿ ಕ್ವಾಟರ್ಸ 4 )ದಿಲೀಪ ತಂದೆ ಕಮಲಾಕರ ಕುಲಕರ್ಣಿ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 5) ಸುರೇಶ ತಂದೆ ಶ್ರೀನಿವಾಸರಾವ ಪಾಟೀಲ ಸಾ:ಗಾಜಿಪುರ ಬೀಗಬಜಾರ ಹಿಂದುಗಡೆ ಕಲಬುರಗಿ 6) ಪದ್ಮಾಕರ ತಂದೆ ರಾಮರಾವ ಕುಲಕರ್ಣಿ ಸಾ:ಖಾಸಗಿ ಕೆಲಸ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 7) ಶ್ರೀನಾಥ ತಂದೆ ಸುಭಾಸ ಬರಾಡ ಸಾ:ಶಾಂತಿನಗರ ಹೌಸಿಂಗ ಬೋರ್ಡ ಕಾಲೋನಿ ಬಸಸ್ಟಾಂಡ ಎದರುಗಡೆ ಕಲಬುರಗಿ  ಅಂಥಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ  ನಗದು ಹಣ  12800/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 10/03/2017 ರಂದು  ಶಹಾಬಾದ ಪಟ್ಟಣದ ಮಿಲನ ಚೌಕ ಹತ್ತಿರ ಮಟಕಾ ಬರೆದುಕೊಳ್ಳುತ್ತಿ ದ್ದಾರೆ  ಅಂತಾ ಖಚಿತ ಬಂದ ಮೇರೆಗೆ ಶ್ರಿ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಮಿಲತ ಚೌಕ ಹತ್ತಿರ ಒಬ್ಬ ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಮೋಸದಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲು ಯುನುಸ ತಂದೆ ಬಾಬುಮಿಯಾ ಸಾ: ಮಜ್ಜೀದ ಚೌಕ ಶಹಾಬಾದ ಇತನಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟು ನಗದು ಹಣ 680-00 ರೂ ಒಂದು ಮಟಕಾ ನಂಬರ ಬರೆದ ಚೀಟಿ, ಅ.ಕಿ ಒಂದು ಬಾಲು ಪೆನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 10/03/2017 ರಂದು ರಾತ್ರಿ ಭೀರಪ್ಪಾ  ತಂದೆ ಹುಣಚಪ್ಪಾ ಮರತೂರ ಮೋ/ಸೈ ನಂ ಕೆಎ-32 ಇಜೆ-2282 ನೇದ್ದರ ಸವಾರ ಸಾ : ಹಸನಾಪೂರ ತಾ :ಜಿ :ಕಲಬುರಗಿ  ತನ್ನ ವಷದಲ್ಲಿ ಇದ್ದ ಮೋ/ಸೈ ನಂ ಕೆಎ-32 ಇಜೆ-2282 ನೇದ್ದನ್ನು ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ  ಎನ್.ಹೆಚ್ 218 ರೋಡಿನ ಮೇಲೆ  ನದಿಶಿನ್ನೂರ ಕ್ರಾಸ ಹತ್ತೀರ  ಪಂಚರ ಆಗಿ ರೋಡಿನ ಬದಿಗೆ ನಿಂತಿರು ಲಾರಿ ನಂ  ಎಪಿ-13 ಎಕ್ಸ- 1373 ನೇದ್ದಕ್ಕೆ ಡಿಕ್ಕಿ ಪಡಿಸಿ ಗಾಯ ಮಾಡಿಕೊಂಡಿರುತ್ತಾನೆ ಅಂತಾ  ಶ್ರೀ ಶಿವಪ್ಪಾ ತಂದೆ ಹುಣಚಪ್ಪಾ ಮರತೂರ ಸಾ : ಹಸನಾಪೂರ ತಾ : ಜಿ :ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಕಲ್ಲಣ್ಣಗೌಡ ತಂ ಸಿದ್ರಾಮಪ್ಪಗೌಡ ಹುಲಿಗುಡ್ಡ ಸಾ: ಜಮಖಂಡಿ ತಾ: ಜೇವರಗಿ ರವರು 09-03-2017 ರಂದು ಬೆಳಗ್ಗೆ 10 ಗಂಟೆಗೆ ನಾನು ಸಿಂದಗಿಗೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಅಲ್ಲೆ ಉಳಿದುಕೊಂಡಿದ್ದು ದಿನಾಂಕ: 10-03-17 ರಂದು ನನ್ನ ಮಗ ನನಗೆ ಪೋನ ಮಾಡಿ  ತಿಳಿಸಿದ್ದೇನೆಂದರೆ ರಾತ್ರಿ ನಾವೆಲ್ಲರೂ ಕೆಳಗಿನ ಮನೆಗೆ ಕಿಲಿ ಹಾಕಿಕೊಂಡು ಮಾಳಗಿ ಮೇಲೆ ಮಲಗಿಕೊಂಡಿದ್ದೆವು. ನಮ್ಮ ಅಳಿಯ ಅಯ್ಯಣ್ಣ ತಂ ಶಿವಪುತ್ರ ಹುಲಿಗುಡ್ಡ ಇವರು ಬೆಳಗಿನ ಜಾವ 2 ಗಂಟೆಗೆ ಎದ್ದು ಕಾಲುಮಡಿಯಲು ಬಂದಾಗ ನಮ್ಮ ಮನೆಯ ಬಾಗಿಲು ತೆರೆದಿದ್ದು, ನೋಡಿ ಮಾಳಗಿ ಮೇಲೆ ಬಂದು ವಿಷಯ ತಿಳಿಸಿದನು ಆಗ ನಾವೆಲ್ಲರೂ ಗಾಬರಿಗೊಂಡು ಕೆಳಗೆ ಬಂದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು, ಟ್ರಜರಿ ಸಹ ತೆರೆದು ಕಳುವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಹೇಳಿದ್ದು, ನಾನು ಗಾಬರಿಗೊಂಡು ಸಿಂದಗಿಯಿಂದ ನಮ್ಮೂರಿಗೆ ಬಂದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದ್ದಿದ್ದು, ಟ್ರಜರಿಯ ಮೇಲುಗಡೆಯಿಟ್ಟ ಕೀಲಿಯಿಂದ ಟ್ರಜರಿ ತೆಗೆದು ಒಳಗೆ ಬಂಗಾರ , ಹಣ ಇಟ್ಟ ಲಾಕರ ತೆರೆದು ಅದರಲ್ಲಿದ್ದ  ನಗದು ಹಣ ಮತ್ತು ಬಂಗಾರದ ಆಭರಣಗಳು  ಒಟ್ಟು  2,62,500=00 ರೂ   ಬೆಲೆಬಾಳುವ ಆಭರಣಗಳು ಮತ್ತು ಹಣ ದಿನಾಂಕ: 10-03-17 ರಂದು ರಾತ್ರಿ 12-05 ಗಂಟೆಯಿಂದ 01-45 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

10 March 2017

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಣ್ಣಪ್ಪ ತಂದೆ ಶರಣಪ್ಪ ವರ್ಗಿ ಸಾ: ದೇಸಾಯಿ ಕಲ್ಲೂರ ತಾ: ಅಫಜಲಪೂರ ರವರಿಗೆ 1) ಅಂಬವ್ವ 2) ನಿಂಗವ್ವ 3) ಸಿದ್ದಪ್ಪ 4) ಲಕ್ಷಪ್ಪ ಹೀಗೆ ಒಟ್ಟು ನಾಲ್ಕು ಜನ ಮಕ್ಕಳಿರುತ್ತಾರೆ. ನನ್ನ ದೊಡ್ಡಮಗಳಾದ ಅಂಬವ್ವಳಿಗೆ ಅಕ್ಕಲಕೋಟ ತಾಲೂಕಿನ ಬೋರಟ್ಟಿ ಗ್ರಾಮದ ಹಣಮಂತ ಕೊಟಗೇನವರ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನ್ನ ಮಗಳಿಗೆ ಗಂಗಪ್ಪ ಎಂಬ ಸುಮಾರು 20 ವರ್ಷದ ಮಗನಿರುತ್ತಾನೆ ನನ್ನ ಮಗಳು ಅಂಬವ್ವಳು ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು  ಗಂಗಪ್ಪನು 15 ದಿವಸಗಳ ಮಗು ಇದ್ದಾಗಲೆ ತನ್ನ ಗಂಡನನ್ನು ಬಿಟ್ಟು ಬಂದು  ನಮ್ಮೂರಲ್ಲೆ ಉಳಿದುಕೊಂಡಿರುತ್ತಾಳೆ. ನನ್ನ ದೊಡ್ಡ ಮಗನಾದ ಸಿದ್ದಪ್ಪ ವರ್ಗಿ ಲಕ್ಕವ್ವ ಮತ್ತು ಶೋಭಾ ಅಂತ ಇಬ್ಬರು ಹೆಂಡಂದಿರರು ಇರುತ್ತಾರೆ ಲಕ್ಕವ್ವಳಿಗೆ ಯಲ್ಲಪ್ಪ ಎಂಬ ಒಬ್ಬ ಗಂಡು ಮಗನಿದ್ದು ಸದರಿ  ಲಕ್ಕವ್ವ ಇವಳು ಸುಮಾರು 15 ವರ್ಷಗಳ ಹಿಂದೆ ನನ್ನ ಮಗ ಸಿದ್ದಪ್ಪನೊಂದಿಗೆ ಜಗಳ ಮಾಡಿಕೊಂಡು ತನ್ನ ಮಗ ಯಲ್ಲಪ್ಪನೊಂದಿಗೆ ತವರು ಮನೆಗೆ ಹೋದವಳು ಮರಳಿ ನಮ್ಮ ಮನೆಗೆ ಬಂದಿರುವುದಿಲ್ಲ ಮೊದಲಿನ ಹೆಂಡತಿ ಬರದ ಕಾರಣ ನನ್ನ ಮಗ ಸಿದ್ದಪ್ಪನು ನಂತರ ಶೋಭಾ ಎಂಬಾಕೆಯೊಂದಿಗೆ ಮದುವೆ ಮಾಡಿಕೊಂಡಿದ್ದು  ಆಕೆಗೆ ಮಕ್ಕಳು ಆಗಿರುವುದಿಲ್ಲ ಸದರಿ ಶೋಭಾ ಇವಳೂ ಸಹ ಸುಮಾರು 8 ವರ್ಷಗಳ ಹಿಂದೆ ನನ್ನ ಮಗ ಸಿದ್ದಪ್ಪನನ್ನು ಬಿಟ್ಟು ತವರು ಮನೆಗೆ ಹೋದವಳು ಮರಳಿ ನಮ್ಮ ಮನೆಗೆ ಬಂದಿರುವುದಿಲ್ಲ.    ನನಗೆ ಒಟ್ಟು 10 ಎಕರೆ ಜಮೀನು ಇದ್ದು ಅದರಲ್ಲಿ 01 ಎಕರೆ ಹೊಲ ನನಗೂ ಮತ್ತು ನನ್ನ ಹೆಂಡತಿಯ ಉಪಜೀವನಕ್ಕಾಗಿ ಇಟ್ಟಿದ್ದು ಉಳಿದ 09 ಎಕರೆ ಜಮೀನಿನಲ್ಲಿ ಸಿದ್ದಪ್ಪನ ಪಾಲಿಗೆ 05 ಎಕರೆ  ಹಾಗು ಲಕ್ಷಪ್ಪನ ಪಾಲಿಗೆ 04 ಎಕರೆ ಹೊಲ ಇರುತ್ತದೆ. ಸಿದ್ದಪ್ಪನ ಹೆಂಡತಿ ಲಕ್ಕವ್ವ ಇವಳು  ಕೊರ್ಟನಲ್ಲಿ ಕೇಸು ಹಾಕಿದ್ದು ಆಗ ನನ್ನ ಮಗ ಸಿದ್ದಪ್ಪನು ತನ್ನ ಪಾಲಿನ 05 ಎಕರೆ ಹೊಲ ಲಕ್ಕವ್ವಳ ಪಾಲಾಗುತ್ತದೆ ಅಂತ ಸದರಿ ಹೊಲ ಅಂಬವ್ವಳ ಹೆಸರಿಗೆ ಮಾಡಿಸಿರುತ್ತಾನೆ. ಮುಂದೆ ಲಕ್ಕವ್ವಳು ಕೊರ್ಟಿನಲ್ಲಿ ಹಾಕಿದ ಕೇಸು ಖುಲಾಸೆಯಾಗಿರುತ್ತದೆ. ಕೊರ್ಟನಲ್ಲಿ ಕೇಸು ಮುಗಿದಿದ್ದರಿಂದ ನನ್ನ ಮಗ ಸಿದ್ದಪ್ಪನು ತನ್ನ ಪಾಲಿನ 05 ಎಕರೆ ಜಮೀನು ಮರಳಿ ತನ್ನ ಹೆಸರಿಗೆ ಮಾಡಿಸಿಕೊಡು ಅಂತ ಆಗಾಗ ಅಂಬವ್ವಳೊಂದಿಗೆ ತಕರಾರು ಮಾಡಿಕೊಳ್ಳುತ್ತ ಬಂದಿರುತ್ತಾನೆ. ಅಂಬವ್ವಳ ಮಗ ಗಂಗಪ್ಪನು ನನ್ನ ತಾಯಿಯ ಹೆಸರಿನಲ್ಲಿ ಇದ್ದ ಹೊಲ ಅದು ನನ್ನದಾಗುತ್ತದೆ ನಿನಗೆಕೆ ಮಾಡಿಸಿಕೊಡಬೇಕು ಅಂತ ನನ್ನ ಮಗ ಸಿದ್ದಪ್ಪನೊಂದಿಗೆ ಜಗಳ ಮಾಡಿರುತ್ತಾನೆ. ನನ್ನ ಮಗ ಸಿದ್ದಪ್ಪನು ಗಂಗಪ್ಪನ ತಾಯಿ ಅಂಬವ್ವಳಿಗೆ ಮುಂಬರುವ ಯುಗಾದಿ ಹಬ್ಬದ ವರೆಗೆ ನನ್ನ ಹೊಲ ನನಗೆ ಮಾಡಿಸಿಕೊಡಲೇ ಬೇಕು ಅಂತ ಷರತ್ತು ಹಾಕಿದ್ದನು. ವಿಷಯದಲ್ಲಿ ಗಂಗಪ್ಪನು ನನ್ನ ಮಗ ಸಿದ್ದಪ್ಪನ ಮೇಲೆ ದ್ವೇಷ ಹೊಂದಿದ್ದನು. ನಿನ್ನೆ ದಿನಾಂಕ 08/03/2017 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಮ್ಮ ಪತ್ರಾಸ ಶೆಡ್ಡಿನ ಮನೆಯಲ್ಲಿ ಮಲಗಿದ್ದೇವು ನನ್ನ ಮಗ ಸಿದ್ದಪ್ಪ ಮತ್ತು ಗಂಗಪ್ಪ ರವರು ನಮ್ಮ ಪತ್ರಾ ಶೆಡ್ಡಿನ ಪಕ್ಕದಲಿದ್ದ ಹೊಸ ಮನೆಯಲ್ಲಿ ಮಲಗಿದ್ದರು  ದಿನಾಂಕ 09/03/2017 ರಂದು ಬೆಳಿಗ್ಗೆ 07-00 ಗಂಟೆಯಾದರು ನನ್ನ ಮಗ ಸಿದ್ದಪ್ಪ ಆಗಲಿ ಮತ್ತು ಗಂಗಪ್ಪ ಆಗಲಿ ಯಾರು ಎದ್ದಿರುವುದಿಲ್ಲ. ಆಗ ನಾನು ನನ್ನ ಮಗ ಸಿದ್ದಪ್ಪನಿಗೆ ಎಬ್ಬಿಸಲು ನಮ್ಮ ಹೊಸ ಮನೆಗೆ ಹೋಗಿ ಬಾಗಿಲು ತಟ್ಟೆ ಒತ್ತಿದಾಗ ಬಾಗಿಲು ತೆರೆಯಿತು. ಒಳಗಡೆ ಬಾಗಿಲ ಪಕ್ಕದಲ್ಲಿ ಮಲಗಿದ ನನ್ನ ಮಗ ಸಿದ್ದಪ್ಪನು ರಕ್ತದ ಮಡುವಿನಲ್ಲಿ ಮೃತಪಟ್ಟಿದನು ಆತನ ಕುತ್ತಿಗೆಗೆ ಯಾವುದೋ ಹರಿತವಾದ ಆಯುಧದಿಂದ ಹೊಡೆದು ಭಾರಿ ರಕ್ತ ಗಾಯ ಪಡಿಸಿದರಿಂದ ಮೃತಪಟ್ಟಿರುತ್ತಾನೆ. ನಂತರ ನಾನು ವಿಷಯವನ್ನು ನನ್ನ ಎರಡನೇಯ ಮಗ ಲಕ್ಷಪ್ಪ, ಲಕ್ಷಪ್ಪನ ಹೆಂಡತಿ ಸಿದ್ದಮ್ಮಾ ಹಾಗು ನನ್ನ ಹೆಂಡತಿ ಹೂವಕ್ಕ ರವರೆಲ್ಲರಿಗೆ ತಿಳಿಸಿದೆನು.ನಂತರ ಅವರು ಬಂದು ಸಿದ್ದಪ್ಪನ ಶವ ನೋಡಿರುತ್ತಾರೆ ಆಗ ನಾವೆಲ್ಲರು ಸಿದ್ದಪ್ಪನೊಂದಿಗೆ ಅದೆ ಮನೆಯಲ್ಲಿ ಮಲಗಿದ್ದ ಗಂಗಪ್ಪನಿಗೆ ಹುಡುಕಾಡಲು ಸಿಕ್ಕಿರುವುದಿಲ್ಲ ಮತ್ತು ಆತನ ಮೋಬೈಲ್ ಪೋನ್ ಬಂದ ಇರುತ್ತದೆ. ಗಂಗಪ್ಪ ತಂದೆ ಹಣಮಂತ ಕೊಟಗೆನವರ ಎಂಬಾತನು, ಹೇಗಿದ್ದರೂ ಸಿದ್ದಪ್ಪನಿಗೆ ಹೆಂಡತಿ ಮಕ್ಕಳು ಯಾರು ಇರುವುದಿಲ್ಲ ಅವನೊಬ್ಬನ ಕೊಲೆ ಮಾಡಿದರೆ 05 ಎಕರೆ ಜಮೀನು ನನ್ನದಾಗುತ್ತದೆ ಅಂತ  ದಿನಾಂಕ 08/03/2017 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 09/03/2017 ರಂದು ಬೆಳಿಗ್ಗೆ 07-00 ಮದ್ಯದ ಅವದಿಯಲ್ಲಿ ಯಾವುದೋ ಹರಿತವಾದ ಆಯುಧದಿಂದ ನನ್ನ ಮಗ ಸಿದ್ದಪ್ಪನ ಕುತ್ತಿಗೆಗೆ ಹೊಡೆದು ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪವನ ತಂದೆ ಶಂಭುಲಿಂಗ ನಂದಕನಳ್ಳಿ ಸಾ: ಹರಕಂಚಿ ತಾ:ಜಿ: ಕಲಬುರಗಿ ಇವರು ದಿನಾಂಕ: 09/03/2017 ರಂದು ಮಧ್ಯಾಹ್ನ ತಮ್ಮ ಪೈಕಿಯ ಅನೀಲ ತಂದೆ ಗುರುಲಿಂಗಪ್ಪಾ ಜೋಗಾ ಇಬ್ಬರು ಕೂಡಿ ನಮ್ಮೂರಿನ ಭಗವಂತ ಡಿಗ್ಗೆ ರವರ ಹೊಟೇಲದಲ್ಲಿ ಭಜಿ ತಿನ್ನುತ್ತಿರುವಾಗ ಅದೇ ಸಮಯಕ್ಕೆ ಗುಂಡಪ್ಪಾ ತಂದೆ ಸೂರ್ಯಕಾಂತ ನಾಯಿಕೋಡಿ ಈತನು ಬಂದು ಭೋಸಡಿ ಮಕ್ಕಳೇ ನೀವು ಕೆಳಗಿನ ಜಾತಿಯವರಿದ್ದು. ಮೇಲಿನ ಜಾತಿಯವರ ಹೊಟೇಲದಲ್ಲಿ ಭಜಿ ತಿನ್ನುತ್ತಿರಿ ಭೋಸಡಿ ಮಕ್ಕಳೇ ಅಂತಾ ಬೈದಿದ್ದು ಅಲ್ಲದೇ ನಮ್ಮೂರಿನ ಮಸೀದಿ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಗುಂಡಪ್ಪಾ ತಂದೆ ಸೂರ್ಯಕಾಂತ ನಾಯಿಕೋಡಿ 2) ಶಂಕರ ತಂದೆ ಪರಮೇಶ್ವರ ನಾಯಿಕೋಡಿ 3) ಶಿವಕುಮಾರ ತಂದೆ ಹಣಮಂತ ನಾಯಿಕೋಡಿ 4) ಅನೀಲ ತಂದೆ ಗುಂಡಪ್ಪಾ ನಾಯಿಕೋಡಿ 5) ನಾಗರಾಜ ತಂದೆ ಶಿವಪುತ್ರಪ್ಪಾ ನಾಯಿಕೋಡಿ ಮತ್ತು 6) ಮಂಜುನಾಥ ತಂದೆ ಬಾಬುರಾವ ನಾಯಿಕೋಡಿ ಎಲ್ಲರೂ ಕೂಡಿಕೊಂಡು ತಮ್ಮ ಕೈಗಳಲ್ಲಿ ಬಿಡಗೆ ಹಿಡಿದುಕೊಂಡು ಬಂದು ಅವರಲ್ಲಿ ಗುಂಡಪ್ಪಾ ಈತನು ನನಗೆ ತಡೆದು ನಿಲ್ಲಿಸಿ ಭೋಸಡಿ ಮಗನೇ ನೀನು ಹೊಲೆಯ ಜಾತಿಯವನಿದ್ದು. ಮೇಲ್ಜಾತಿಯವರ ಹೊಟೇಲದಲ್ಲಿ ಬರುತ್ತಿರಿ ಭೋಸಡಿ ಮಕ್ಕಳೇ ನಿನಗೆ ಬಹಳ ಸೊಕ್ಕು ಬಂದಿದೆ ಅಂತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಶಂಕರ ಹಾಗು ಶಿವಕುಮಾರ ಇವರು ನನಗೆ ಕೈಗಳಿಂದ ಬೆನ್ನು, ತಲೆಗೆ ಹೊಡೆಯುತ್ತಿರುವಾಗ ಅನೀಲ ನಾಯಿಕೋಡಿ, ನಾಗರಾಜ ನಾಯಿಕೋಡಿ ಮತ್ತು ಮಂಜುನಾಥ ನಾಯಿಕೋಡಿ ಇವರು ಈ ಹೊಲೆಯ ಜಾತಿಯವನದು ಬಹಳ ನಡೆದಿದೆ ಇವತ್ತು ಇವನಿಗೆ ಜೀವ ಸಹಿತ ಬಿಡಬೇಡರಿ ಅಂತಾ ನನಗೆ ನೆಲಕ್ಕೆ ಹಾಕಿ ಕಾಲುಗಳಿಂದ ಒದ್ದಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ  ಹೀರಾಬಾಯಿ ಗಂಡ ಜಯರಾಮ ಚವ್ಹಾಣ ಸಾ : ಕವಲಗಾ(ಬಿ)  ಇವರು ಸುಮಾರು 4 ತಿಂಗಳ ಹಿಂದೆ  ತನ್ನ ತಮ್ಮನಾದ  ರಾಮು ತಂದೆ ಹೇಮುಲು ರಾಠೋಡ ಸಾ : ಕನ್ಯಾಕೋಳ್ಳುರ  ಗಂಗಾರಾಮ ತಾಂಡಾ ತಾ : ಶಹಾಪೂರ  ಜಿ : ಯಾದಗೀರ ಇತನು ನಮ್ಮೂರಿಗೆ ತನ್ನ 100 ಕುರಿಗಳನ್ನು  ತೆಗೆದುಕೊಂಡು ಬಂದು ನಾನು ನಿಮ್ಮ ಹತ್ತಿರ  ನನ್ನ ಕುರಿಗಳನ್ನು  ಮೇಯಿಸಿಕೊಂಡು ಇರುತ್ತೇನೆ  ಅಂತಾ ಹೇಳಿ ನಮ್ಮ ಹತ್ತೀರ  ಇರುತ್ತೀದ್ದನು . ಸದರಿ ನನ್ನ ತಮ್ಮ ಬಂದಾಗಿನಿಂದ ನಾನು & ನನ್ನ ತಮ್ಮ ರಾಮು ಇಬ್ಬರು ಕೂಡಿಕೊಂಡು ನಮ್ಮಿಬ್ಬರ ಕುರಿಗಳನ್ನು ಕುರಿಗಳನ್ನು ಕೂಡಿಸಿ ದಿನಾಲು ಹಗಲು ಹೊತ್ತಿನಲ್ಲಿ ಕುರಿ ಮೇಯಿಸಿ ಸಂಜೆಯಾದ ನಂತರ ನಾನು ಮನೆಗೆ ಹೊಗುತ್ತಿದ್ದು ನನ್ನ ಗಂಡ ಜಯರಾಮ  ಮತ್ತು ನನ್ನ ತಮ್ಮ ರಾಮು ಇಬ್ಬರು ನನ್ನ ಮೈದುನ  ಅಶೋಕ  ಚವ್ಹಾಣ  ಇವರ ಹೊಲ ಸರ್ವೆ ನಂ 378  ರಲ್ಲಿ  (ಹೊಲದಲ್ಲಿ ) ದೊಡ್ಡಿಯಲ್ಲಿ ಕುರಿಗಳನ್ನು  ಹಾಕಿ ರಾತ್ರಿ ಅಲ್ಲಯೇ ಮಲಗುತ್ತಿದ್ದರು . ಹೀಗಿರುವಾಗ ದಿನಾಂಕ 16/02/2017 ರಂದು ಸಂಜೆ ಸದರಿ ನನ್ನ ತಮ್ಮ ನನ್ನ ಹತ್ತೀರ ಖರ್ಜಿಗೆ ಹಣ ಬೇಕು ಅಂತಾ 20 ಸಾವಿರ ರೂಪಾಯಿ ತೆಗೆದುಕೊಂಡು ನಮ್ಮ ಕುರಿ ದೊಡ್ಡಿಗೆ ಹೊಲಕ್ಕೆ ಹೋಗಿ ಅಂದು ರಾತ್ರಿ 11 ಗಂಟೆಯ ಸುಮಾರಿಗೆ ನನ್ನ ಗಂಡ ಜಯರಾಮ ಇವರೊಂದಿಗೆ ವಿನಾಕರಣ ತಕರಾರು ಮಾಡಿದ್ದರಿಂದ ನನ್ನ ಗಂಡ ಜಯರಾಮ ಇವರು ಮನೆಗೆ ಬಂದು ಮಲಗಿಕೊಂಡಿರುತ್ತಾರೆ ಮರುದಿನ ದಿನಾಂಕ 17/02/2017 ರಂದು ಬೆಳೆಗ್ಗೆ 8 ಗಂಟೆಯ ಸುಮಾರಿಗೆ ನಾನು ನಮ್ಮ ಕುರಿ ದೊಡ್ಡಿಗೆ ಹೋಗಿ ನೋಡಿದಾಗ  ಅಲ್ಲಿ ನನ್ನ 8 ಕುರಿಗಳು ಹಾಗೂ 20 ಕುರಿ ಮರಿಗಳು ಮತ್ತು ನನ್ನ ತಮ್ಮನ ಕುರಿಗಳು ಹಾಗು ನನ್ನ ತಮ್ಮ ರಾಮು ಇರಲಿಲ್ಲಾ ಆಗ ನಾನು ಮನೆಗೆ ಬಂದು  ಈ ವಿಷಯ ನನ್ನ  ಗಂಡನಿಗೆ ತಿಳಿಸಿ  ನನ್ನ ತಮ್ಮನಿಗೆ  ಪೋನ ಮೂಲಕ ಸಂಪರ್ಕಿಸಿ ನಮ್ಮ ಕುರಿಗಳು ಯಾಕೆ ತೆಗೆದುಕೊಂಡು ಹೊಗಿದ್ದಿ ಅಂತಾ ಕೆಳಿದಾಗ ನಿಮ್ಮ ಕುರಿಗಳನ್ನು ತೆಗೆದುಕೊಂಡು ಹೋಗಿದ್ದೇನೆ ಎನು ಮಾಡುಕೋತಿ ಮಾಡಿಕೊ  ಅಂತಾ ಅಂದಿರುತ್ತಾನೆ  ಮತ್ತು ಇಲ್ಲಿಯವರೆಗೆ ನಮ್ಮ ಕುರಿಗಳನ್ನು ನಮಗೆ ಕೊಟ್ಟಿರುವದಿಲ್ಲಾ ನನ್ನ ತಮ್ಮ ರಾಮು ತಂದೆ ಹೇಮುಲು ರಾಠೋಡ  ಇತನು  ದಿನಾಂಕ  16/02/2017  ರ ರಾತ್ರಿ 11 ಗಂಟೆಯಿಂದ ಮರುದಿನ ದಿನಾಂಕ 17/2/2017 ರ ಬೆಳಿಗ್ಗೆ 8 ಗಂಟೆ ನಡುವಿನ ಅವದಿಯಲ್ಲಿ  ನಮ್ಮ 8 ಕುರಿಗಳು ಅ//ಕಿ// 65,000/-ರೂ ಹಾಗೂ 20 ಕುರಿ ಮರಿಗಳು ಅ//ಕಿ// 80,000/- ರೂ ಹೀಗೆ ಒಟ್ಟು 1,45,000/- ರೂ ಮೌಲ್ಯದ  ಕುರಿಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.