ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಣ್ಣಪ್ಪ ತಂದೆ ಶರಣಪ್ಪ ವರ್ಗಿ ಸಾ: ದೇಸಾಯಿ ಕಲ್ಲೂರ ತಾ: ಅಫಜಲಪೂರ ರವರಿಗೆ 1) ಅಂಬವ್ವ 2) ನಿಂಗವ್ವ 3) ಸಿದ್ದಪ್ಪ 4) ಲಕ್ಷಪ್ಪ ಹೀಗೆ ಒಟ್ಟು ನಾಲ್ಕು ಜನ ಮಕ್ಕಳಿರುತ್ತಾರೆ. ನನ್ನ ದೊಡ್ಡಮಗಳಾದ ಅಂಬವ್ವಳಿಗೆ ಅಕ್ಕಲಕೋಟ ತಾಲೂಕಿನ ಬೋರಟ್ಟಿ ಗ್ರಾಮದ ಹಣಮಂತ ಕೊಟಗೇನವರ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನ್ನ ಮಗಳಿಗೆ ಗಂಗಪ್ಪ ಎಂಬ ಸುಮಾರು 20 ವರ್ಷದ ಮಗನಿರುತ್ತಾನೆ ನನ್ನ ಮಗಳು ಅಂಬವ್ವಳು ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ಗಂಗಪ್ಪನು 15 ದಿವಸಗಳ ಮಗು ಇದ್ದಾಗಲೆ ತನ್ನ ಗಂಡನನ್ನು ಬಿಟ್ಟು ಬಂದು ನಮ್ಮೂರಲ್ಲೆ ಉಳಿದುಕೊಂಡಿರುತ್ತಾಳೆ. ನನ್ನ ದೊಡ್ಡ ಮಗನಾದ ಸಿದ್ದಪ್ಪ ವರ್ಗಿ ಲಕ್ಕವ್ವ ಮತ್ತು ಶೋಭಾ ಅಂತ ಇಬ್ಬರು ಹೆಂಡಂದಿರರು ಇರುತ್ತಾರೆ ಲಕ್ಕವ್ವಳಿಗೆ ಯಲ್ಲಪ್ಪ ಎಂಬ ಒಬ್ಬ ಗಂಡು ಮಗನಿದ್ದು ಸದರಿ ಲಕ್ಕವ್ವ ಇವಳು ಸುಮಾರು 15 ವರ್ಷಗಳ ಹಿಂದೆ ನನ್ನ ಮಗ ಸಿದ್ದಪ್ಪನೊಂದಿಗೆ ಜಗಳ ಮಾಡಿಕೊಂಡು ತನ್ನ ಮಗ ಯಲ್ಲಪ್ಪನೊಂದಿಗೆ ತವರು ಮನೆಗೆ ಹೋದವಳು ಮರಳಿ ನಮ್ಮ ಮನೆಗೆ ಬಂದಿರುವುದಿಲ್ಲ ಮೊದಲಿನ ಹೆಂಡತಿ ಬರದ ಕಾರಣ ನನ್ನ ಮಗ ಸಿದ್ದಪ್ಪನು ನಂತರ ಶೋಭಾ ಎಂಬಾಕೆಯೊಂದಿಗೆ ಮದುವೆ ಮಾಡಿಕೊಂಡಿದ್ದು ಆಕೆಗೆ ಮಕ್ಕಳು ಆಗಿರುವುದಿಲ್ಲ ಸದರಿ ಶೋಭಾ ಇವಳೂ ಸಹ ಸುಮಾರು 8 ವರ್ಷಗಳ ಹಿಂದೆ ನನ್ನ ಮಗ ಸಿದ್ದಪ್ಪನನ್ನು ಬಿಟ್ಟು ತವರು ಮನೆಗೆ ಹೋದವಳು ಮರಳಿ ನಮ್ಮ ಮನೆಗೆ ಬಂದಿರುವುದಿಲ್ಲ. ನನಗೆ ಒಟ್ಟು 10 ಎಕರೆ ಜಮೀನು ಇದ್ದು ಅದರಲ್ಲಿ 01 ಎಕರೆ ಹೊಲ ನನಗೂ ಮತ್ತು ನನ್ನ ಹೆಂಡತಿಯ ಉಪಜೀವನಕ್ಕಾಗಿ ಇಟ್ಟಿದ್ದು ಉಳಿದ 09 ಎಕರೆ ಜಮೀನಿನಲ್ಲಿ ಸಿದ್ದಪ್ಪನ ಪಾಲಿಗೆ 05 ಎಕರೆ ಹಾಗು ಲಕ್ಷಪ್ಪನ ಪಾಲಿಗೆ 04 ಎಕರೆ ಹೊಲ ಇರುತ್ತದೆ. ಸಿದ್ದಪ್ಪನ ಹೆಂಡತಿ ಲಕ್ಕವ್ವ ಇವಳು ಕೊರ್ಟನಲ್ಲಿ ಕೇಸು ಹಾಕಿದ್ದು ಆಗ ನನ್ನ ಮಗ ಸಿದ್ದಪ್ಪನು ತನ್ನ ಪಾಲಿನ 05 ಎಕರೆ ಹೊಲ ಲಕ್ಕವ್ವಳ ಪಾಲಾಗುತ್ತದೆ ಅಂತ ಸದರಿ ಹೊಲ ಅಂಬವ್ವಳ ಹೆಸರಿಗೆ ಮಾಡಿಸಿರುತ್ತಾನೆ. ಮುಂದೆ ಲಕ್ಕವ್ವಳು ಕೊರ್ಟಿನಲ್ಲಿ ಹಾಕಿದ ಕೇಸು ಖುಲಾಸೆಯಾಗಿರುತ್ತದೆ. ಕೊರ್ಟನಲ್ಲಿ ಕೇಸು ಮುಗಿದಿದ್ದರಿಂದ ನನ್ನ ಮಗ ಸಿದ್ದಪ್ಪನು ತನ್ನ ಪಾಲಿನ 05 ಎಕರೆ ಜಮೀನು ಮರಳಿ ತನ್ನ ಹೆಸರಿಗೆ ಮಾಡಿಸಿಕೊಡು ಅಂತ ಆಗಾಗ ಅಂಬವ್ವಳೊಂದಿಗೆ ತಕರಾರು ಮಾಡಿಕೊಳ್ಳುತ್ತ ಬಂದಿರುತ್ತಾನೆ. ಅಂಬವ್ವಳ ಮಗ ಗಂಗಪ್ಪನು ನನ್ನ ತಾಯಿಯ ಹೆಸರಿನಲ್ಲಿ ಇದ್ದ ಹೊಲ ಅದು ನನ್ನದಾಗುತ್ತದೆ ನಿನಗೆಕೆ ಮಾಡಿಸಿಕೊಡಬೇಕು ಅಂತ ನನ್ನ ಮಗ ಸಿದ್ದಪ್ಪನೊಂದಿಗೆ ಜಗಳ ಮಾಡಿರುತ್ತಾನೆ. ನನ್ನ ಮಗ ಸಿದ್ದಪ್ಪನು ಗಂಗಪ್ಪನ ತಾಯಿ ಅಂಬವ್ವಳಿಗೆ ಮುಂಬರುವ ಯುಗಾದಿ ಹಬ್ಬದ ವರೆಗೆ ನನ್ನ ಹೊಲ ನನಗೆ ಮಾಡಿಸಿಕೊಡಲೇ ಬೇಕು ಅಂತ ಷರತ್ತು ಹಾಕಿದ್ದನು. ಈ ವಿಷಯದಲ್ಲಿ ಗಂಗಪ್ಪನು ನನ್ನ ಮಗ ಸಿದ್ದಪ್ಪನ ಮೇಲೆ ದ್ವೇಷ ಹೊಂದಿದ್ದನು. ನಿನ್ನೆ ದಿನಾಂಕ 08/03/2017 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಮ್ಮ ಪತ್ರಾಸ ಶೆಡ್ಡಿನ ಮನೆಯಲ್ಲಿ ಮಲಗಿದ್ದೇವು ನನ್ನ ಮಗ ಸಿದ್ದಪ್ಪ ಮತ್ತು ಗಂಗಪ್ಪ ರವರು ನಮ್ಮ ಪತ್ರಾ ಶೆಡ್ಡಿನ ಪಕ್ಕದಲಿದ್ದ ಹೊಸ ಮನೆಯಲ್ಲಿ ಮಲಗಿದ್ದರು ದಿನಾಂಕ 09/03/2017 ರಂದು ಬೆಳಿಗ್ಗೆ 07-00 ಗಂಟೆಯಾದರು ನನ್ನ ಮಗ ಸಿದ್ದಪ್ಪ ಆಗಲಿ ಮತ್ತು ಗಂಗಪ್ಪ ಆಗಲಿ ಯಾರು ಎದ್ದಿರುವುದಿಲ್ಲ. ಆಗ ನಾನು ನನ್ನ ಮಗ ಸಿದ್ದಪ್ಪನಿಗೆ ಎಬ್ಬಿಸಲು ನಮ್ಮ ಹೊಸ ಮನೆಗೆ ಹೋಗಿ ಬಾಗಿಲು ತಟ್ಟೆ ಒತ್ತಿದಾಗ ಬಾಗಿಲು ತೆರೆಯಿತು. ಒಳಗಡೆ ಬಾಗಿಲ ಪಕ್ಕದಲ್ಲಿ ಮಲಗಿದ ನನ್ನ ಮಗ ಸಿದ್ದಪ್ಪನು ರಕ್ತದ ಮಡುವಿನಲ್ಲಿ ಮೃತಪಟ್ಟಿದನು ಆತನ ಕುತ್ತಿಗೆಗೆ ಯಾವುದೋ ಹರಿತವಾದ ಆಯುಧದಿಂದ ಹೊಡೆದು ಭಾರಿ ರಕ್ತ ಗಾಯ ಪಡಿಸಿದರಿಂದ ಮೃತಪಟ್ಟಿರುತ್ತಾನೆ. ನಂತರ ನಾನು ಈ ವಿಷಯವನ್ನು ನನ್ನ ಎರಡನೇಯ ಮಗ ಲಕ್ಷಪ್ಪ, ಲಕ್ಷಪ್ಪನ ಹೆಂಡತಿ ಸಿದ್ದಮ್ಮಾ ಹಾಗು ನನ್ನ ಹೆಂಡತಿ ಹೂವಕ್ಕ ರವರೆಲ್ಲರಿಗೆ ತಿಳಿಸಿದೆನು.ನಂತರ ಅವರು ಬಂದು ಸಿದ್ದಪ್ಪನ ಶವ ನೋಡಿರುತ್ತಾರೆ ಆಗ ನಾವೆಲ್ಲರು ಸಿದ್ದಪ್ಪನೊಂದಿಗೆ ಅದೆ ಮನೆಯಲ್ಲಿ ಮಲಗಿದ್ದ ಗಂಗಪ್ಪನಿಗೆ ಹುಡುಕಾಡಲು ಸಿಕ್ಕಿರುವುದಿಲ್ಲ ಮತ್ತು ಆತನ ಮೋಬೈಲ್ ಪೋನ್ ಬಂದ ಇರುತ್ತದೆ. ಗಂಗಪ್ಪ ತಂದೆ ಹಣಮಂತ ಕೊಟಗೆನವರ ಎಂಬಾತನು, ಹೇಗಿದ್ದರೂ ಸಿದ್ದಪ್ಪನಿಗೆ ಹೆಂಡತಿ ಮಕ್ಕಳು ಯಾರು ಇರುವುದಿಲ್ಲ ಅವನೊಬ್ಬನ ಕೊಲೆ ಮಾಡಿದರೆ 05 ಎಕರೆ ಜಮೀನು ನನ್ನದಾಗುತ್ತದೆ ಅಂತ ದಿನಾಂಕ 08/03/2017 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 09/03/2017 ರಂದು ಬೆಳಿಗ್ಗೆ 07-00 ಮದ್ಯದ ಅವದಿಯಲ್ಲಿ ಯಾವುದೋ ಹರಿತವಾದ ಆಯುಧದಿಂದ ನನ್ನ ಮಗ ಸಿದ್ದಪ್ಪನ ಕುತ್ತಿಗೆಗೆ ಹೊಡೆದು ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ
ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪವನ ತಂದೆ
ಶಂಭುಲಿಂಗ ನಂದಕನಳ್ಳಿ ಸಾ: ಹರಕಂಚಿ ತಾ:ಜಿ: ಕಲಬುರಗಿ ಇವರು ದಿನಾಂಕ: 09/03/2017 ರಂದು ಮಧ್ಯಾಹ್ನ ತಮ್ಮ ಪೈಕಿಯ
ಅನೀಲ ತಂದೆ ಗುರುಲಿಂಗಪ್ಪಾ ಜೋಗಾ ಇಬ್ಬರು ಕೂಡಿ ನಮ್ಮೂರಿನ ಭಗವಂತ ಡಿಗ್ಗೆ ರವರ ಹೊಟೇಲದಲ್ಲಿ
ಭಜಿ ತಿನ್ನುತ್ತಿರುವಾಗ ಅದೇ ಸಮಯಕ್ಕೆ ಗುಂಡಪ್ಪಾ ತಂದೆ ಸೂರ್ಯಕಾಂತ ನಾಯಿಕೋಡಿ ಈತನು ಬಂದು ಭೋಸಡಿ
ಮಕ್ಕಳೇ ನೀವು ಕೆಳಗಿನ ಜಾತಿಯವರಿದ್ದು. ಮೇಲಿನ ಜಾತಿಯವರ ಹೊಟೇಲದಲ್ಲಿ ಭಜಿ ತಿನ್ನುತ್ತಿರಿ
ಭೋಸಡಿ ಮಕ್ಕಳೇ ಅಂತಾ ಬೈದಿದ್ದು ಅಲ್ಲದೇ ನಮ್ಮೂರಿನ ಮಸೀದಿ ಹತ್ತಿರ ಹೋಗುತ್ತಿದ್ದಂತೆ
ಎದುರಿನಿಂದ ಗುಂಡಪ್ಪಾ ತಂದೆ ಸೂರ್ಯಕಾಂತ ನಾಯಿಕೋಡಿ 2) ಶಂಕರ ತಂದೆ ಪರಮೇಶ್ವರ ನಾಯಿಕೋಡಿ 3) ಶಿವಕುಮಾರ ತಂದೆ ಹಣಮಂತ ನಾಯಿಕೋಡಿ 4) ಅನೀಲ ತಂದೆ ಗುಂಡಪ್ಪಾ ನಾಯಿಕೋಡಿ 5) ನಾಗರಾಜ ತಂದೆ ಶಿವಪುತ್ರಪ್ಪಾ ನಾಯಿಕೋಡಿ ಮತ್ತು 6) ಮಂಜುನಾಥ ತಂದೆ ಬಾಬುರಾವ ನಾಯಿಕೋಡಿ ಎಲ್ಲರೂ ಕೂಡಿಕೊಂಡು ತಮ್ಮ
ಕೈಗಳಲ್ಲಿ ಬಿಡಗೆ ಹಿಡಿದುಕೊಂಡು ಬಂದು ಅವರಲ್ಲಿ ಗುಂಡಪ್ಪಾ ಈತನು ನನಗೆ ತಡೆದು ನಿಲ್ಲಿಸಿ ಭೋಸಡಿ
ಮಗನೇ ನೀನು ಹೊಲೆಯ ಜಾತಿಯವನಿದ್ದು. ಮೇಲ್ಜಾತಿಯವರ ಹೊಟೇಲದಲ್ಲಿ ಬರುತ್ತಿರಿ ಭೋಸಡಿ ಮಕ್ಕಳೇ
ನಿನಗೆ ಬಹಳ ಸೊಕ್ಕು ಬಂದಿದೆ ಅಂತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಮೂಗಿನ ಮೇಲೆ ಹೊಡೆದು
ರಕ್ತಗಾಯ ಪಡಿಸಿದನು. ಶಂಕರ ಹಾಗು ಶಿವಕುಮಾರ ಇವರು ನನಗೆ ಕೈಗಳಿಂದ ಬೆನ್ನು, ತಲೆಗೆ ಹೊಡೆಯುತ್ತಿರುವಾಗ ಅನೀಲ ನಾಯಿಕೋಡಿ, ನಾಗರಾಜ ನಾಯಿಕೋಡಿ ಮತ್ತು ಮಂಜುನಾಥ ನಾಯಿಕೋಡಿ ಇವರು ಈ ಹೊಲೆಯ
ಜಾತಿಯವನದು ಬಹಳ ನಡೆದಿದೆ ಇವತ್ತು ಇವನಿಗೆ ಜೀವ ಸಹಿತ ಬಿಡಬೇಡರಿ ಅಂತಾ ನನಗೆ ನೆಲಕ್ಕೆ ಹಾಕಿ
ಕಾಲುಗಳಿಂದ ಒದ್ದಿರುತ್ತಾರೆ ಅಂಥಾ ಸಲ್ಲಿಸಿದ
ದೂರು ಸಾರಾಂಸದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಹೀರಾಬಾಯಿ ಗಂಡ
ಜಯರಾಮ ಚವ್ಹಾಣ ಸಾ : ಕವಲಗಾ(ಬಿ) ಇವರು ಸುಮಾರು
4 ತಿಂಗಳ ಹಿಂದೆ ತನ್ನ ತಮ್ಮನಾದ ರಾಮು ತಂದೆ ಹೇಮುಲು ರಾಠೋಡ ಸಾ : ಕನ್ಯಾಕೋಳ್ಳುರ ಗಂಗಾರಾಮ ತಾಂಡಾ ತಾ : ಶಹಾಪೂರ ಜಿ : ಯಾದಗೀರ ಇತನು ನಮ್ಮೂರಿಗೆ ತನ್ನ 100 ಕುರಿಗಳನ್ನು ತೆಗೆದುಕೊಂಡು ಬಂದು ನಾನು ನಿಮ್ಮ ಹತ್ತಿರ ನನ್ನ ಕುರಿಗಳನ್ನು ಮೇಯಿಸಿಕೊಂಡು ಇರುತ್ತೇನೆ ಅಂತಾ ಹೇಳಿ ನಮ್ಮ ಹತ್ತೀರ ಇರುತ್ತೀದ್ದನು . ಸದರಿ ನನ್ನ ತಮ್ಮ ಬಂದಾಗಿನಿಂದ ನಾನು
& ನನ್ನ ತಮ್ಮ ರಾಮು ಇಬ್ಬರು ಕೂಡಿಕೊಂಡು
ನಮ್ಮಿಬ್ಬರ ಕುರಿಗಳನ್ನು ಕುರಿಗಳನ್ನು ಕೂಡಿಸಿ ದಿನಾಲು ಹಗಲು ಹೊತ್ತಿನಲ್ಲಿ ಕುರಿ ಮೇಯಿಸಿ ಸಂಜೆಯಾದ
ನಂತರ ನಾನು ಮನೆಗೆ ಹೊಗುತ್ತಿದ್ದು ನನ್ನ ಗಂಡ ಜಯರಾಮ
ಮತ್ತು ನನ್ನ ತಮ್ಮ ರಾಮು ಇಬ್ಬರು ನನ್ನ ಮೈದುನ
ಅಶೋಕ ಚವ್ಹಾಣ ಇವರ ಹೊಲ ಸರ್ವೆ ನಂ 378 ರಲ್ಲಿ
(ಹೊಲದಲ್ಲಿ ) ದೊಡ್ಡಿಯಲ್ಲಿ ಕುರಿಗಳನ್ನು
ಹಾಕಿ ರಾತ್ರಿ ಅಲ್ಲಯೇ ಮಲಗುತ್ತಿದ್ದರು . ಹೀಗಿರುವಾಗ ದಿನಾಂಕ 16/02/2017 ರಂದು ಸಂಜೆ
ಸದರಿ ನನ್ನ ತಮ್ಮ ನನ್ನ ಹತ್ತೀರ ಖರ್ಜಿಗೆ ಹಣ ಬೇಕು ಅಂತಾ 20 ಸಾವಿರ ರೂಪಾಯಿ ತೆಗೆದುಕೊಂಡು ನಮ್ಮ
ಕುರಿ ದೊಡ್ಡಿಗೆ ಹೊಲಕ್ಕೆ ಹೋಗಿ ಅಂದು ರಾತ್ರಿ 11 ಗಂಟೆಯ ಸುಮಾರಿಗೆ ನನ್ನ ಗಂಡ ಜಯರಾಮ ಇವರೊಂದಿಗೆ
ವಿನಾಕರಣ ತಕರಾರು ಮಾಡಿದ್ದರಿಂದ ನನ್ನ ಗಂಡ ಜಯರಾಮ ಇವರು ಮನೆಗೆ ಬಂದು ಮಲಗಿಕೊಂಡಿರುತ್ತಾರೆ ಮರುದಿನ
ದಿನಾಂಕ 17/02/2017 ರಂದು ಬೆಳೆಗ್ಗೆ 8 ಗಂಟೆಯ ಸುಮಾರಿಗೆ ನಾನು ನಮ್ಮ ಕುರಿ ದೊಡ್ಡಿಗೆ ಹೋಗಿ ನೋಡಿದಾಗ ಅಲ್ಲಿ ನನ್ನ 8 ಕುರಿಗಳು ಹಾಗೂ 20 ಕುರಿ ಮರಿಗಳು ಮತ್ತು
ನನ್ನ ತಮ್ಮನ ಕುರಿಗಳು ಹಾಗು ನನ್ನ ತಮ್ಮ ರಾಮು ಇರಲಿಲ್ಲಾ ಆಗ ನಾನು ಮನೆಗೆ ಬಂದು ಈ ವಿಷಯ ನನ್ನ
ಗಂಡನಿಗೆ ತಿಳಿಸಿ ನನ್ನ ತಮ್ಮನಿಗೆ ಪೋನ ಮೂಲಕ ಸಂಪರ್ಕಿಸಿ ನಮ್ಮ ಕುರಿಗಳು ಯಾಕೆ ತೆಗೆದುಕೊಂಡು
ಹೊಗಿದ್ದಿ ಅಂತಾ ಕೆಳಿದಾಗ ನಿಮ್ಮ ಕುರಿಗಳನ್ನು ತೆಗೆದುಕೊಂಡು ಹೋಗಿದ್ದೇನೆ ಎನು ಮಾಡುಕೋತಿ ಮಾಡಿಕೊ ಅಂತಾ ಅಂದಿರುತ್ತಾನೆ ಮತ್ತು ಇಲ್ಲಿಯವರೆಗೆ ನಮ್ಮ ಕುರಿಗಳನ್ನು ನಮಗೆ ಕೊಟ್ಟಿರುವದಿಲ್ಲಾ
ನನ್ನ ತಮ್ಮ ರಾಮು ತಂದೆ ಹೇಮುಲು ರಾಠೋಡ ಇತನು ದಿನಾಂಕ
16/02/2017 ರ ರಾತ್ರಿ 11 ಗಂಟೆಯಿಂದ ಮರುದಿನ
ದಿನಾಂಕ 17/2/2017 ರ ಬೆಳಿಗ್ಗೆ 8 ಗಂಟೆ ನಡುವಿನ ಅವದಿಯಲ್ಲಿ ನಮ್ಮ 8 ಕುರಿಗಳು ಅ//ಕಿ// 65,000/-ರೂ ಹಾಗೂ 20 ಕುರಿ ಮರಿಗಳು ಅ//ಕಿ// 80,000/- ರೂ ಹೀಗೆ ಒಟ್ಟು 1,45,000/- ರೂ ಮೌಲ್ಯದ ಕುರಿಗಳನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment