POLICE BHAVAN KALABURAGI

POLICE BHAVAN KALABURAGI

02 March 2017

Kalaburagi District Reported Crimes

ಕಳವು ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ನಬಿಸಾಬ ತಂದೆ ರಾಜಾಸಾಬ ಸೂಗೂರ ಸಾ: ನರಿಬೋಳ ತಾ: ಜೇವರಗಿ ರವರು  ಈಗ 4-5 ದಿವಸಗಳ ಹಿಂದೆ ನಾನು ಮತ್ತು ನನ್ನ ಹೆಂಡತಿ ಶೀಲಾರಬೀ ಹಾಗು ಮಕ್ಕಳು ಕೂಡಿ ನಮ್ಮ ಮಾವನ ಮನೆ ಶಾಂತಿ ಕಾರ್ಯಕ್ರಮ ಇರುವದರಿಂದ ಶಹಾಪೂರ ತಾಲೂಕಿನ ಡೋರನಳ್ಳಿ ಗ್ರಾಮಕ್ಕೆ ಹೋಗಿದ್ದೇವು. ನಮ್ಮ ಅಳಿಯ ಸೀರಾಜ ತಂದೆ ರಸೂಲಸಾಬ ಡೊಣಬೀ ಇವರು ನರಿಬೋಳಿಯ ನಮ್ಮ ಮನೆಯಲ್ಲಿ ಇದ್ದನು.  ದಿನಾಂಕ: 01.03.2017 ರಂದು ಬೇಳಗಿನ ಜಾವ 04.00 ಗಂಟೆಯ ಸುಮಾರಿಗೆ ನಮ್ಮ ಅಳಿಯ ಸೀರಾಜ ಇತನು ಫೋನ ಮಾಡಿ ನಮ್ಮ ಮನೆ ಕಳ್ಳತನವಾಗಿರುತ್ತದೆ ಎಂದು ಹೇಳಿದ ಕೂಡಲೇ ನಾನು ಮತ್ತು ನನ್ನ ಹೆಂಡತಿ ಶಿಲಾರಬೀ ಹಾಗೂ ಮಕ್ಕಳು ಕೂಡಿ ನರಬೋಳಿ ಗ್ರಾಮಕ್ಕೆ ಬಂದು ಮನೆಯಲ್ಲಿ ಹೋಗಿ ನೋಡಲು ಮನೆಯಲ್ಲಿ ಸಾಮಾನುಗಳು ಚಲ್ಲಾಪಿಲಿಯಾಗಿ ಬಿದ್ದಿದ್ದವು. ಕಬ್ಬಿಣದ ಅಲಮಾರ ಕೂಡಾ ತೆರೆದಿತ್ತು ನೋಡಲು ಅದರಲ್ಲಿ ಇಟ್ಟ ನಗದು ಹಣ ಮತ್ತು ಬಂಗಾರ ಆಭರಣಗಳು ಹೀಗೆ ಒಟ್ಟು 1,78,000/- ರೂಪಾಯಿ ಕಿಮ್ಮತ್ತಿನಷ್ಟು ಕಳುವಾಗಿತ್ತು. ನಮ್ಮ ಅಳಿಯನಿಗೆ ವಿಚಾರ ಮಾಡಲು ಅವನು ತಿಳಿಸಿದೆನಂದರೆ, ನಿನ್ನೆ ದಿನಾಂಕ: 28.02.17 ರಂದು ರಾತ್ರಿ ಊಟ ಮಾಡಿ ರಾತ್ರಿ 10.00 ಗಂಟೆಯ ಸುಮಾರಿಗೆ ಮನೆಯ ಬಾಗಿಲು ಕೀಲಿ ಹಾಕಿ ನಾನು ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದ್ದೇನು. ಬೆಳಗಿನ ಜಾವ 03.30 ಗಂಟೆಗೆ ನಾಯಿ ಬೊಗಳುವ ಸಪ್ಪಳ ಕೇಳಿ ಎದ್ದು ಕೇಳಗೆ ಬಂದು ನೋಡಲು ಮನೆಯ ಬಾಗಿಲು ಕೀಲಿ ಮುರಿದು ತೆರೆದಿತ್ತು ನಾನು ನಿಮಗೆ ಫೋನ ಮಾಡಿ ವಿಷಯ ತಿಳಿಸಿರುತ್ತೇನೆ. ಎಂದು ಹೇಳಿದನು. ಅಲ್ಲದೆ ನಮ್ಮ ಹಿಂದಿನ ಮನೆಯ ಕುತ್ಬುದ್ದೀನ ತಂದೆ ಜಮಲಸಾಬ ಯರಗೋಳ ಇವರ ಮನೆಯ ಬಾಗಿಲು ಕೀಲಿ ಮುರಿದು ಅವರ ಮನೆಯಿಂದ ನಗದು ಹಣ ಬಂಗಾರದ ಆಭರಣಗಳು  ಹಿಗೆ ಒಟ್ಟು 96,500/- ಕಿಮ್ಮತ್ತಿನಷ್ಟು ಕಳ್ಳತನವಾಗಿದ್ದ ಬಗ್ಗೆ ಗೊತ್ತಾಗಿರುತ್ತದೆ. ಅಲ್ಲದೆ ನಮ್ಮೂರ ರಾಜವಾಳ ರೋಡಿಗೆ ಇರುವ ತಿಪ್ಪಮ್ಮ ಗಂಡ ಗುಂಡಪ್ಪ ನಾಲವಾರ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿದ್ದ ನಗದು ಹಣ ಬಂಗಾರದ ಆಭರಣಗಳು  ಹಿಗೆ ಒಟ್ಟು 47,000/- ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನವಾಗಿದ್ದ ಬಗ್ಗೆ ಗೊತ್ತಾಗಿರುತ್ತದೆ. ನಾಗರಾಜ ತಂದೆ ಹಣಮಂತರಾಯ ಹಸರಗುಂಡಗಿ ಇವರು ಬಡೆಸಾಬನ ಮನೆಯಲ್ಲಿಟ್ಟ ತೋಗರಿ ತುಂಬಿದ ಚೀಲಗಳಲ್ಲಿ ಎಂಟು ತೊಗರಿ ತುಂಬಿದ ಚೀಲಗಳು ಅ.ಕಿ 40,000/- ರೂ ಮುದಕ್ಕಪ್ಪ ತಂದೆ ಸಿಂಗಡೆಪ್ಪ ಹಾಲಬಾವಿ ಇವರ ಮನೆಯ ಬಾಗಿಲು ಕೀಲಿ ಮುರಿದು ಮನಯಲ್ಲಿನ ನಗದು ಹಣ ಬಂಗಾರದ ಆಭರಣ  ಹೀಗೆ ಒಟ್ಟು 34,000/- ರೂಪಾಯಿ ಕಿಮ್ಮತ್ತಿನಷ್ಟು ಕಳುವಾಗಿದ್ದು ಗೊತ್ತಾಗಿರುತ್ತದೆ. ಹಾಗೂ ಮಲ್ಲಮ್ಮ ಗಂಡ ಮಲ್ಲಪ್ಪ ಬಾಬಾಗೋಳ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿನ ನಗದು ಹಣ ಬಂಗಾರದ ಆಭರಣ  ಹೀಗೆ ಒಟ್ಟು 1500/- ಕಿಮ್ಮತ್ತಿನಷ್ಟು ಕಳ್ಳತನವಾದ ವಿಷಯ ಗೊತ್ತಾಗಿರುತ್ತದೆ. ಮತ್ತು ಬಾಬು ತಂದೆ ಸೈಬಣ್ಣಾ ಬಾಬಾಗೊಳ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿನ ನಗದು ಹಣ ಬಂಗಾರದ ಆಭರಣ  ಹೀಗೆ ಒಟ್ಟು 32,500/- ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನವಾದ ಬಗ್ಗೆ ಅವರಿಂದ ನನಗೆ ಗೊತ್ತಾಗಿರುತ್ತದೆ. ಹೀಗೆ ಬಂಗಾರ, ಬೆಳ್ಳಿ ಆಭರಣಗಳು, ನಗದು ಹಣ, ಅಡಿಗೆ ಸಾಮಾನುಗಳು, ತೋಗರಿ ಚೀಲಗಳು, ಒಟ್ಟು 4,20,500/-ರೂ ಕಿಮ್ಮತಿನವುಗಳು ಕಳ್ಳತನವಾಗಿದ್ದು ಇರುತ್ತದೆ. ಅಕ್ಕಪಕ್ಕದ ಮನೆಯವರಿಗೆ ವಿಚಾರಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲಾ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಡಾ : ಶರಣಗೌಡ ಪಾಟೀಲ ತಂದೆ ಚಂದ್ರಶೇಖರ ಪಾಟೀಲ ಸಾ: ಎಫ್-4 ಮಾಲು ಅಪಾರ್ಟಮೆಂಟ್ ಸರಕಾರಿ ಐಟಿಐ ಕಾಲೇಜ ಕಲಬುರಗಿ ರವರು ತಾಯಿಯವರಾದ ನೀಲಮ್ಮಾ ಪಾಟೀಲ ಇವರ 4 ತೊಲಿಯ ಬಂಗಾರದ ಮಂಗಳಸೂತ್ರ ಎರಡು ಎಳೆಯದ್ದು ಇದ್ದು ಅದನ್ನು ನಮ್ಮ ತಾಯಿಯವರು ಹಾಕಿಕೊಳ್ಳುವುದು ಮತ್ತು ಅಲಮಾರಿಯಲ್ಲಿ ತೆಗೆದು ಇಡುವುದು ನಮ್ಮ ತಾಯಿಯವರೇ ಮಾಡುತ್ತಿದ್ದರು, ದಿನಾಂಕ 25-02-2017 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಯ ಟೇಬಲ ಮೇಲೆ ನಮ್ಮ ತಾಯಿಯವರು ಮಂಗಳ ಸೂತ್ರವನ್ನು ಇಟ್ಟಿದ್ದು ದಿನಾಂಕ 26-02-2017 ರಂದು ಸಾಯಂಕಾಲ 6 ಪಿ.ಎಂ.ಕ್ಕೆ ಕಾರ್ಯಕ್ರಮ ಇದ್ದ ಪ್ರಯುಕ್ತ ನಮ್ಮ ತಾಯಿಯವರು ಬಂಗಾರದ ಮಂಗಳಸೂತ್ರ ಹಾಕಿಕೊಳ್ಳುಲು ನೋಡಿದ್ದು ಮನೆಯಲ್ಲಿ ಇರಲಿಲ್ಲ, ಅಲ್ಲಲ್ಲಿ ಹುಡುಕಾಡಿದರೂ ಕೂಡ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಮನೆಯ ಟೇಬಲ ಮೇಲೆ ಇಟ್ಟಿದ್ದ 4 ತೊಲೆ ಬಂಗಾರದ ಮಂಗಳ ಸೂತ್ರ ಎರಡು ಎಳೆಯದ್ದು ಅಂದಾಜು ಕಿಮ್ಮತ್ತು 1,00,000-00 ರೂ. ನೇದ್ದನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಾಹನ ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಸೂರ್ಯಕಾಂತ ತಂದೆ ಬಸವಣಪ್ಪಾ ಡೋಣಿ ಸಾ: ಕುರಿಕೋಟಾ ತಾ:ಜಿ: ಕಲಬುರಗಿ ಇವರು ಈಗ ಸುಮಾರು 6-7 ತಿಂಗಳ ಹಿಂದುಗಡೆ ರಘೋಜಿ ಫೈನಾನ್ಸ ಕಡೆಯಿಂದ 2013ನೇ ಮಾಡಲ್ ಮಿಲ್ಕ ವೈಟ ಬಣ್ಣದ ಚೆವರಲೇಟ್ ಟವೇರಾ ಕಾರ ನಂ. ಕೆಎ:32, ಎನ್:3036 Engine No. 3LM162345 Chassis No. MA6ABCA5DCH012721 ನೇದ್ದನ್ನು 6,40,000-00 ರೂ. ಖರಿದಿ ಮಾಡಿರುತ್ತೇನೆ. ದಿನಾಂಕ: 26/02/2017 ರಂದು ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ 9-00 ಗಂಟೆಗೆ ನನ್ನ ಅಳಿಯ ಮಲ್ಲಿಕಾರ್ಜುನ ಮತ್ತು ನಮ್ಮೂರಿನ ರಮೇಶ ಸಾಹು, ಶಿವಲಿಂಗಪ್ಪಾ ಕಂಚನಾಳ, ಬಸವರಾಜ ಕಲ್ಯಾಣ, ರೇವಣಸಿದ್ದಪ್ಪಾ ಕಲ್ಯಾಣ, ಜಗನ್ನಾಥ ಚೀಲಶೆಟ್ಟಿ, ಸಂಗಣ್ಣಾ ಚೀಲಶೆಟ್ಟಿ ಎಲ್ಲರೂ ಕೂಡಿಕೊಂಡು ನನ್ನ ಚೆವರಲೇಟ್ ಟವೇರಾ ಕಾರನ್ನು ತೆಗೆದುಕೊಂಡು ಜಹೀರಾಬಾದ ಸಂಗಮಕ್ಕೆ ಹೋಗಿ ದರ್ಶನ ಮಾಡಿಕೊಂಡು ಮರಳಿ ದಿನಾಂಕ: 27/02/2017 ರಂದು ಬೆಳಿಗ್ಗೆ 2-00 ಗಂಟೆಗೆ ಕುರಿಕೋಟಾ ಗ್ರಾಮದ ರಮೇಶ ಸಾಹು ಇವರ ಗಿರಣಿಯ ಹತ್ತಿರ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕಾರನ್ನು ಲಾಕ್ ಮಾಡಿಕೊಂಡು ಮನೆಯಲ್ಲಿ ಮಲಗಿ ಮರಳಿ ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಬಂದು ನೋಡಲಾಗಿ, ರಮೇಶ ಸಾಹು ಇವರ ಗಿರಣಿಯ ಮುಂದುಗಡೆ ನಿಲ್ಲಿಸಿದ ಕಾರನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳ್ಳತನವಾದ ನನ್ನ ಕಾರನ್ನು ಪತ್ತೆ ಮಾಡಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪ ತಂದೆ ಶಿವಪ್ಪ ಕಾಂಬ್ಳೆ ಸಾ|| ಬಟಗೇರಾ ರವರು ದಿನಾಂಕ 2702/2017 ರಂದು 3.30 ಪಿಎಮ್ ಸುಮಾರಿಗೆ ನಾನು ನನ್ನ ವಯಕ್ತಿಕ ಕೆಲಸದ ನಿಮಿತ್ಯ ನಾನು ನಮ್ಮ ಗ್ರಾಮದಿಂದ ದೇವಲ ಗಾಣಗಾಪೂರಕ್ಕೆ ಹೋಗಲು ನಮ್ಮ ಗ್ರಾಮದ ಬಸ್ಟ್ಯಾಂಡ ಹತ್ತಿರ ನಿಂತಾಗ  ನಮ್ಮ ಗ್ರಾಮದ ಭೀಮರಾಯ ತಂದೆ ಸೋಮಣ್ಣ ರವರ ಟಿಪ್ಪರ ನಂ   ಕೆಎ-32 ಸಿ-6205 ನೇದ್ದನ್ನು ಬಂದಿದ್ದು ಸದರಿ ಟಿಪ್ಪರಕ್ಕೆ ನಾನು ಕೈ ಮಾಡಿ ನಿಲ್ಲಿಸಿದೆನು ಟಿಪ್ಪರ ನೇದ್ದರಲ್ಲಿ ನಮ್ಮ ಗ್ರಾಮದ ಶಿವಪ್ಪ ತಂದೆ ಹಿರಗೇಪ್ಪ ಕಾಂಬ್ಲೆ ಇತನು ಚಾಲಕನಿದ್ದು ಸದರಿ ಟಿಪ್ಪರದಲ್ಲಿ ನಾನು ದೇವಲ ಗಾಣಗಾಪೂರಕ್ಕೆ ಹೋಗುವ ಸಲುವಾಗಿ ಏರಿ ಕುಳಿತ ಬಳಿಕ ಸದರಿ ಚಾಲಕನು ಟಿಪ್ಪರನ್ನು ಚಲಾಯಿಸುತ್ತಾ ಬಟಗೇರಾ ದಾಟಿದ ಬಳಿಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸುತಿದ್ದನು ನಾನು ಸದರಿಯವನಿಗೆ ನಿಧಾನವಾಗಿ ಓಡಿಸು ಅಂತ ಹೇಳಿದರು ಕೇಳದೆ ಹಾಗೆಯೇ ಚಲಾಯಿಸಿ 3.45 ಪಿಎಮ್ ಸುಮಾರಿಗೆ ಕೆರಕನಹಳ್ಳಿ ಸಮೀಪ ಭಾಗಣ್ಣ ಹಳ್ಳಿ ರವರ ಹೊಲದ ಹತ್ತಿರ ಒಮ್ಮೇಲೆ ಟಿಪ್ಪರ ಕಟ್ ಹೊಡೆದಾಗ ಸದರಿ ಟಿಪ್ಪರ ರೋಡಿನ ಬಲಭಾಗಕ್ಕೆ ಪಲ್ಟಿಯಾಗಿ ಬಿದ್ದಿತ್ತು ಆಗ ಅಲ್ಲಿಂದ ಮೋಟಾರ ಸೈಕಲ್ ಮೇಲೆ ಹೋಗುತಿದ್ದ ನಮ್ಮ ಗ್ರಾಮದ ಶರಣಗೌಡ ಸೋಮಾಣಿ, ಸಿದ್ದಪ್ಪ ಜಮಾದಾರ ಇವರು ನಮ್ಮ ಹತ್ತಿರ ಬಂದು ನನಗೆ ಹಾಗು ಚಾಲಕನಿಗೆ ಟಿಪ್ಪರಿಂದ ಹೊರಗೆ ತಗೆದಿದ್ದು ನನಗೆ ಹಣೆಗೆ ರಕ್ತಗಾಯ, ಬಲಮುಂಡಿಗೆ ಗುಪ್ತಗಾಯ ವಾಗಿದ್ದು ನನ್ನಂತೆ ಚಾಲಕನಿಗೆ ಏಡಗೈ ಮುಂಗೈ ಕೆಳಗೆ ರಕ್ತಗಾಯ, ಬಲತೊಡೆಗೆ ಗುಪ್ತಗಾಯ ವಾಗಿದ್ದು ಇರುತ್ತದೆ ಸದರಿ ಟಿಪ್ಪರ ಮುಂದಿನ ಭಾಗ ಜಖಂ ವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಶೈಲ ತಂದೆ ಸಾಯಿಬಣ್ಣ ಮಂಗಳೂರ ಸಾ : ಬಡದಾಳ  ಇವರತಂದೆಯಾದ ಸಾಯಿಬಣ್ಣ ತಂದೆ ಚಂದಪ್ಪ ಮಂಗಳೂರ ಇವರು ನಮ್ಮ ಅಕ್ಕಂದಿರ ಮದುವೆಯ ಸಲುವಾಗಿ ಮತ್ತು ಹೋಲ ಸಾಗುವಳಿ ಸಲುವಾಗಿ ನಮ್ಮ ಊರ ಬ್ಯಾಂಕಿನಲ್ಲಿ ಮತ್ತು ಊರಲ್ಲಿ ಕೈಗಡವಾಗಿ 5 ಲಕ್ಷ ರೂಪಾಯಿ ಸಾಲ ಮಾಡಿದ್ದು  ಈ ವರ್ಷ ಮಳೆ ಸರಿಯಾಗಿ ಆಗದ್ದರಿಂದ ಬೆಳೆ ಬಾರದ ಕಾಣ ನಮ್ಮ ತಂದೆ ಮಾಡಿದ ಸಾಲ ಹೇಗೆ ತೀರಿಸುವುದು ಅಂತಾ ಚಿಂತೆ ಮಾಡುತ್ತಾ  ದಿನಾಂಕ ಸಾಯಂಕಾಲ 28-02-2017 ರಂದು  ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾಜೂಜಾಟದಲ್ಲಿ ನಿರತವನ ಬಂಧನ :      
ಫರತಾಬಾದ ಠಾಣೆ : ದಿನಾಂಕ 01-03-2017 ರಂದು ಫಿರೋಜಾಬಾದ ಗ್ರಾಮದಲ್ಲಿ ಮಟಕಾ ಜೂಜಾಟದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮ್ತು ಪಂಚರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪಾ ಮಾಮುನಿ ಸಾ : ಫರತಾಬಾದ ಇವನನ್ನು ವಶಕ್ಕೆ ತೆಗೆದುಕೊಂಡು ಆತನಿಂದ ನಗದು ಹಣ 800/- ರೂ ಹಾಗು ಮಟಕಾ ಚೀಟಿ ಮತ್ತು ಒಂದು  ಪೆನ್ನ ಜಪ್ತಿಪಡಿಸಿಕೊಂಡು ಸದರಿಯವನೊಂದಿ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

01 March 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಮುನಿರ್ ಪಟೇಲ್ ತಂದೆ ಮೌಲಾಲಿ ಪಟೇಲ್ ಸಾಃ ತಾಜ ಶಾಲೆಯ ಹತ್ತಿರ ತಾಜ ನಗರ ಮುಸ್ಲಿಂ ಸಂಘ ಕಲಬುರಗಿ ಇವರು ದಿನಾಂಕ  27.02.2017 ರಂದು ರಾತ್ರಿ ನಮ್ಮ ಓಣಿಯಲ್ಲಿರುವ ದುಬೈ ಹೋಟೆಲ ಏದುರಿನಿಂದ ಮೌಲಾಲಿ ಕಟ್ಟಾದ ಕೆಡೆಗೆ ನೆಡೆಯುತ್ತಾ ಹೊಗುವಾಗ ಅಷ್ಠರಲ್ಲಿ ನನ್ನ ಏದುರಿನಿಂದ ಸುಮಾರು 5-6 ಛೆಕ್ಕಾ ಜನರು & ಇವರ ಸಂಗಡ 6-7 ಹುಡುಗರು ಕೈಯಲ್ಲಿ ರಾಡ್ & ಬಡಿಗೆ ಹಿಡಿದುಕೊಂಡು ಓಡುತ್ತಾ ನನ್ನ ಹತ್ತಿರ ಬಂದವರೆ, ನನಗೆ ತಡೆನಿಲ್ಲಿಸಿ  “ಏ ಬೋಸಡಿಕೆ ರಿಂಗ್ರೋಡ ಹತ್ತಿರ ನಮ್ಮ ಛೆಕ್ಕಾ ಹುಡುಗಿಗೆ ಚುಡಾಯಿಸಿ, ಅವಳ ಮೊಬೈಲ್ ಯ್ಯಾಕೆ ತೆಗೆದುಕೊಂಡು ಬಂದಿದ್ದಿರಿ” ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು, “ನಮ್ಮ ಮೊಬೈಲ್ ಕೊಡು, ಇಲ್ಲಿದಿದ್ದರೆ ನಿನಗೆ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗುತ್ತೆವೆ”  ಅಂತಾ ಅಂದಾಗ ನಾನು “ಈಗ ತಾನೆ ಮನೆಯಿಂದ ಊಟ ಮಾಡಿ ಹೊರಗಡೆ ಬಂದಿದ್ದೇನೆ, ನನಗೆ ಯಾವುದೆ ವಿಷಯ ಗೊತ್ತಿಲ್ಲಾ” ಅಂತಾ ಅಂದಾಗ ಅವರು  “ಎ ಛಿನಾಕೆ ನೀನು ಸುಳ್ಳು ಹೆಳುತ್ತಿಯಾ, ನಮ್ಮ ಮೋಬೈಲ್ ಕೊಡು ಅಂದರೆ ಯಾವುದು ಗೊತ್ತಿಲ್ಲಾ ಅಂತಿಯಾ”  ಅಂದವರೆ ಇವರಲ್ಲಿಯ ಇಬ್ಬರು ಛೆಕ್ಕಾ ಜನರು ನನ್ನ ಎರೆಡು ಕೈಗಳು ಒತ್ತಿ ಹಿಡಿದಿದ್ದು, ಒಬ್ಬ ಛೆಕ್ಕಾ & ಇವರೊಂದೆಗೆ ಬಂದಿದ್ದ ಒಬ್ಬ ಹುಡುಗ ಇವರಿಬ್ಬರೂ ತಮ್ಮ ಕೈಯಲ್ಲಿದ್ದ ರಾಡಿನಿಂದ ಜೋರಾಗಿ ನನ್ನ ತಲೆಯ ಬಲಭಾಗಕ್ಕೆ & ಬಲಕಿವಿಗೆ ಹೊಡೆದು ಭಾರಿರಕ್ತಗಾಯ ಮಾಡಿದ್ದು ಅಲ್ಲದೆ ಇವರೊಂದೊಗೆ ಬಂದಿದ್ದ ಉಳಿದ ಛೆಕ್ಕಾ ಜನರು & ಹುಡುಗರು ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದಾಗ, ನಾನು ಕೆಳಗೆ ಬಿದ್ದು ಚಿರಾಡುತ್ತಿದಾಗ ಇದನ್ನು ನೋಡಿ ಅಲ್ಲಿಂದ ಬರುತ್ತಿದ್ದ ನಮ್ಮ ಓಣಿಯ ನನ್ನ ಗೆಳೆಯರಾದ ಮಹ್ಮದ ದಸ್ತಗೀರ ತಂದೆ ಖಾಜಾ ಮೈನೊದ್ದಿನ & ಇಸ್ಮಾಯಿಲ್ ಇವರು ಜಗಳ ಬಿಡಿಸಲು ಬಂದಾಹ ಇವರಿಗೂ ಸಹಃ ಸದರಿ ಛೆಕ್ಕಾ ಜನರು ಹಾಗೂ ಅವರ ಸಂಗಡ ಇದ್ದ ಹುಡುಗರೆಲ್ಲರೂ ಕೂಡಿಕೊಂಡು ನನ್ನ ಇಬ್ಬರೂ ಗೆಳೆಯರಿಗೂ ಕೈಯಿಂದ ಹೊಡೆದು ಗುಪ್ತಪೆಟ್ಟುಗೊಳಿಸಿದ್ದು, ಆಗ ನಾವು ಇವರಿಂದ ಬಿಡಿಸಿಕೊಂಡು ಓಡಿಹೊಗುವಾಗ ಈ ಮೇಲ್ಕಂಡ ಛೆಕ್ಕಾ ಜರು & ಅವರ ಹಿಂದೆ ಬಂದಿದ್ದ ಹುಡುಗರು ನಮಗೆ ಬೆನ್ನುಹತ್ತಿ ಹಿಡಿದು, ನಮ್ಮ ಛೆಕ್ಕಾ ಹುಡಿಗಿಗೆ ಚುಡಾಯಿಸಿ, ಮೊಬೈಲ ತೆಗದುಕೊಂಡಿರುತ್ತಾರೆ ಇವರಿಗೆ ಜೀವ ಸಹಿತ ಬಿಡಬೇಡಿರಿ ಖಲಾಸ್ ಮಾಡಿ ಬಿಡಿರಿ  ಅಂತಾ ಅಂದಾಗ ಅವರಲ್ಲಿಯ ಒಬ್ಬನು ಒಂದು ದೊಡ್ಡ ಕಲ್ಲು ಎತ್ತಿ ನನ್ನ ತಲೆಮೇಲೆ ಹಾಕಲು ಬಂದಾಗ ನಾನು ಆ ಕಲ್ಲಿನ ಎಟಿನಿಂದ ತಪ್ಪಿಸಿಕೊಂಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹಣಮಂತ ತಂದೆ ಲಕ್ಕಪ್ಪ ಜಮಾದಾರ ಸಾ|| ಬನ್ನೇಟ್ಟಿ ಇವರದು ನ್ಯೂ ಹಾಲೆಂಡ ಕಂಪನಿಯ ಟ್ಯಾಕ್ಟರ ನಂ ಕೆಎ-32 ಟಿಎ-5952 ನೇದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ನಾನು ಈಗ 02 ವರ್ಷಗಳ ಹಿಂದೆ ನಮ್ಮೂರಿನ ಲಕ್ಷ್ಮಣ ತಂದೆ ರಾಮಣ್ಣ ಜಮಾದಾರ ಇವರಿಗೆ, ನಮ್ಮೂರಿನ ಶರಣಪ್ಪ ತಂದೆ ಕಲ್ಲಪ್ಪ ಜಮಾದಾರ ಹಾಗೂ ಲಕ್ಷ್ಮಣ ತಂದೆ ಕುಪ್ಪಣ್ಣ ಜಮಾದಾರ ಇವರ ಸಮಕ್ಷಮ ಪ್ರತಿ ತಿಂಗಳು 15,000/- ರೂ ಕೊಡಬೇಕು ಅಂತಾ ಎಂಗೇಜ್ ಮೇಲೆ ಟ್ಯಾಕ್ಟರ ಕೊಟ್ಟಿರುತ್ತೇನೆ. ಲಕ್ಷ್ಮಣ ಈತನು ಟ್ಯಾಕ್ಟರ ತಗೆದುಕೊಂಡ ಮೇಲೆ ಇಲ್ಲಿಯವರೆಗೆ ಒಟ್ಟು 50,000/- ರೂ ಹಣ ಕೊಟ್ಟಿದ್ದು ಉಳಿದ ಹಣ ಕೊಡು ಎಂದು ಕೇಳಿದರೆ, ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ದಿನ ಹಾಕುತ್ತಾ ಬಂದಿರುತ್ತಾನೆ. ಸದರಿ ಲಕ್ಷ್ಮಣ ಈತನು ಹಣ ಕೊಡದೆ ಇದ್ದರಿಂದ ನಾನು ಹಣ ಆದರೂ ಕೋಡು ಇಲ್ಲವಾದರೆ ನನ್ನ ಟ್ಯಾಕ್ಟರ ನನಗೆ ವಾಪಸ ಕೊಡು ಎಂದು ಕೆಳುತ್ತಾ ಬಂದಿದ್ದಕ್ಕೆ ನನ್ನ ಮೇಲೆ ಸಿಟ್ಟು ಮಾಡಿಕೊಂಡು ಟ್ಯಾಕ್ಟರ ಇಂಜೆನ್ ಕೊಟ್ಟು, ಟ್ರೈಲಿ ಅವನ ಹತ್ತಿರವೆ ಇಟ್ಟುಕೊಂಡಿರುತ್ತಾನೆ. ದಿನಾಂಕ 21-02-2017 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ನನ್ನ ಸ್ಕಾರ್ಪಿಯೋ ವಾಹನದಲ್ಲಿ ನನ್ನ ಗೆಳೆಯರಾದ ಗುರಪ್ಪ ತಂದೆ ಕರೇಪ್ಪ ಜಮಾದಾರ ಹಾಗೂ ರಾಮಣ್ಣ ತಂದೆ ಸಿದ್ದಪ್ಪ ಜಮಾದಾರ ಇವರೊಂದಿಗೆ ಅಫಜಲಪೂರಕ್ಕೆ ಹೋಗುತ್ತಿದ್ದಾಗ ಬನ್ನೇಟ್ಟಿ ಕ್ರಾಸ ಹತ್ತಿರ, ಈ ಹಿಂದೆ ಟ್ಯಾಕ್ಟರ ಸಂಬದ ನನ್ನೊಂದಿಗೆ ತಕರಾರು ಮಾಡಿಕೊಂಡು ಲಕ್ಷ್ಮಣ ತಂದೆ ರಾಮಣ್ಣ ಜಮಾದಾರ ಮತ್ತು ಅವನ ಮಕ್ಕಳಾದ ಹಣಮಂತ ತಂದೆ ಲಕ್ಷ್ಮಣ ಜಮಾದಾರ ಹಾಗೂ ರಾಮಣ್ಣ ತಂದೆ ಲಕ್ಷ್ಮಣ ಜಮಾದಾರ ಮೂರು ಜನರು ಕೂಡಿ ಮೋಟರ ಸೈಕಲ ಮೇಲೆ ಬಂದು ನನ್ನ ಸ್ಕಾರ್ಪಿಯೋ ವಾಹನಕ್ಕೆ ತಮ್ಮ ಮೋಟರ ಸೈಕಲನ್ನು ಅಡ್ಡ ನಿಲ್ಲಿಸಿದರು ಆಗ ನಾನು ಸದರಿಯವರಿಗೆ ಮೋಟರ ಸೈಕಲ ತಗೆಯಲು ಹೇಳಿದಾಗ, ಲಕ್ಷ್ಮಣ ಈತನು ಬೋಸಡಿ ಮಗನೆ ನಿಂದು ತಿಂಡಿ ಜಾಸ್ತಿ ಆಗಿದೆ ನನಗೆ ಟ್ಯಾಕ್ಟರ ವಾಪಸ ಕೊಡು ಅಂತಾ ಕೇಳುತ್ತಿ ಎಂದು ಬೈಯುತ್ತಾ ನನ್ನ ಹತ್ತಿರ ಬಂದು ಮೂರು ಜನರು ಕೂಡಿ ನನ್ನನ್ನು ಹಿಡಿದು ನನ್ನ ವಾಹನದಿಂದ ಜಗ್ಗಿ ನನಗೆ ನೆಲಕ್ಕೆ ಹಾಕಿ ಮೂರು ಜನರು ಕೂಡಿ ನನಗೆ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡುತ್ತಿದ್ದರು, ಆಗ ನನ್ನ ಜೋತೆಗೆ ಬಂದಿದ್ದ ನನ್ನ ಗೇಳೆಯರಾದ ಗುರಪ್ಪ ಜಮಾದಾರ ಹಾಗೂ ರಾಮಣ್ಣ ಜಮಾದಾರ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿದರು, ಆಗ ಸದರಿಯವರು ಮಗನೆ ಇನ್ನೊಮ್ಮೆ ಟ್ಯಾಕ್ಟರ ಕೇಳಲು ಬಾ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೇದರಿಕೆ ಹಾಕಿ ಅಲ್ಲಿಂದ ಹೊಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಬಾಬು@ ಭವಾನಿ ತಂದೆ ನಾಗಪ್ಪ ಓಂಕಾರ @ ಗುರು ವೈಷ್ಠವಿ ಪವ್ಹಾರ ಸಾ : ಹೊಡೆ ಬೀರನಹಳ್ಳಿ ಸಧ್ಯ ಲಂಗರ ಹನುಮಾನ ನಗರ ಕಲಬುರಗಿ ಇವರು ದಿನಾಂಕ 27-02-2017 ರಂದು ರಾತ್ರಿ ಕಲಬರಗಿ ನಗರದ ತಾಜ ಸುಲ್ತಾನಪೂರ ರಿಂಗ ರೋಡಿಗೆ ಇರುವ ಪೆಟ್ರೋಲ್ ಪಂಪ ಎದುರಗಡೆ ಬಿಕ್ಷಾಟನೆ ಕುರಿತು ಹೋಗಬೇಕೆಂದು ರೇಲ್ವೆ ಸ್ಟೇಶನ ಆಟೋಕ್ಕಾಗಿ ನಾನು ಮತ್ತು 2) ಮೊಗಲಪ್ಪ @ ಮರಿಯಮ್ಮಾ ತಂದೆ ರಾಜಾ @ ಗುರು ಮನೀಶಾ ಚವ್ಹಾಣ, 3) ಮಹಮ್ಮದ ನವಾಜ @ ನಜಮಾ ತಂದೆ ನೂರ ಮಹಮ್ಮದ @ ಗುರು ಶಬ್ಬನಮ್ 4) ಶೇಖ ಇರಫಾನ @ ಶೈಹನಾಜ್ ತಂದೆ ಗುಲಾಮ ರಸೂಲ್ @ ಗುರು ಮುಸಕಾನ್ 5) ಶೇಖ ನದೀಮ್ @ ಸುಮೇರಾ ತಂದೆ ಸಿರಾಜ @ ಗುರು ವೈಷ್ಠವಿ ಪವ್ಹಾರ  ಎಲ್ಲರೂ ನಿಂತಾಗ ಆಗ ತಾಜ ನಗರ ಮುಸ್ಲಿಂ ಕಡೆಯಿಂದ ಮುನೀರ ಪಟೇಲ್ ತಂದೆ ಮೌಲಾಲಿ ಪಟೇಲ್ ಸಂಗಡ 5-6 ಜನರು ಕೂಡಿಕೊಂಡು ಬಂದು ನಮಗೇ ಹಣ ಕೊಡು ಅಂತಾ ಕೇಳಿದರು ನಾವೆಲ್ಲರೂ ನಮ್ಮ ಹತ್ತಿರ ಹಣವಿಲ್ಲಾ ಅಂತಾ ಅಂದಿದ್ದಕ್ಕೆ ಅವರಲ್ಲಿ ಮುನೀರ ಪಟೇಲ್ ಇತನು ನಮಗೇ ಹಣ ಕೊಡು ಅಂತಾ ಹೇಳಿ ಅವಮಾನ ಮಾಡುವ ಉದ್ದೇಶದಿಂದ ನಮ್ಮೆಲ್ಲರ ಕೈ ಹಿಡಿದು ಎಳೆದಾಡಿ 05 ಜನರಿಗೆ ಕೈಯಿಂದ ಕಪಾಳ ಮೇಲೆ ಮತ್ತು ಇತರೇ ಕಡೆಗಳಲ್ಲಿ ಹೊಡೆ ಬಡೆ ಮಾಡಿದರು. ಅವರಿಗೆ ಹೆದರಿ ಅಲ್ಲಿಂದ ನಮ್ಮ ಓಣಿಯ ಕಡೆಗೆ ಹೋಗಿ ಈ ವಿಷಯ ನಮ್ಮ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ, ಶಬನಾಮ್ ಚವ್ಹಾಣ, ಇವರಿಗೆ ಈ ಮೇಲಿನ ವಿಷಯ ತಿಳಿಸಿದಾಗ ತಾಜ ಸುಲ್ತಾನಪುರ ರಿಂಗ ರೋಡಕ್ಕೆ ನಾವೆಲ್ಲರೂ ಹೋಗಬೆಂಕೆಂದು ಹೊರಟಾಗ ರಾತ್ರಿ 10-30 ಗಂಟೆ ಸುಮಾರಿಗೆ ಈ ಮೇಲಿನ ಮುನೀರ ಪಟೇಲ್ ತಂದೆ ಮೌಲಾಲಿ ಪಟೇಲ್ ಸಂಗಡ 5-6 ಜನರು ಕೂಡಿಕೊಂಡು ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ನಮ್ಮ ಓಣಿಗೆ ಬಂದು ನನಗೆ ಮತ್ತು ಮೊಗಲಪ್ಪ @ ಮರಿಯಮ್ಮಾ, ಮಹಮ್ಮದ ನವಾಜ್ @ ನಜಮಾ, ಶೇಖ ಇರಫಾನ @ ಶೈಹನಾಜ್, ಶೇಖ ನದೀಮ್ @ ಸುಮೇರಾ, ನಮ್ಮ ಎಲ್ಲರಿಗೂ ಬಡಿಗೆಯಿಂದ ಕಲ್ಲಿನಿಂದ, ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ಈ ಜಗಳ ಅಲ್ಲಿಯೇ ಇದ್ದ ನಮ್ಮ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ, ಶಬನಾಮ್ ಚವ್ಹಾಣ ಇವರು ಬೀಡಿಸಲು ಬಂದಾಗ ಅವರಿಗೂ ಕೂಡಾ ಬಡಿಗೆಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ ಮತ್ತು ನಮ್ಮಲ್ಲರ ಕೈ ಕಾಲು ಕಡಿದು ಜೀವ ತೆಗೆಯುತ್ತೇವೆ ಅಂತಾ ಚಾಕು ತೋರಿಸಿ ಭಯ ಹಾಕಿದಾಗ ಅವರಿಗೆ ಅಂಜಿ ನಾವೆಲ್ಲರು ಸಿಕ್ಕ ಸಿಕ್ಕ ಕಡೆಗೆ ಓಡಿ ಹೋದೇವು ಮುನೀರ ಪಟೇಲ ಸಂಗಡ ಇದ್ದ ಜನರು ನಮ್ಮ ಮನೆಗಳಿಗೆ ಹೋಗಿ ಮನೆಯಲ್ಲಿನ ವಸ್ತುಗಳನ್ನು ಚಲ್ಲಾ ಪಿಲ್ಲಿ ಮಾಡಿ ಟಿವಿ ಪ್ರಿಡ್ಜ ಒಡೆದು ಸುಮಾರು 50,000/- ರೂ ಗಳಷ್ಟು ಲುಕ್ಸನ ಮಾಡಿ. ಕಾರಣ ನನಗೆ ಮತ್ತು ಈ ಮೇಲಿನ 4 ಜನರಿಗೆ  ಹೊಡೆ ಬಡೆ ಮಾಡಿದ್ದು.  ದಲಿತನಾದ ನನ್ನ ಮೇಲೆ ಮತ್ತು ದಲಿತ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ ಇವರ ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ