POLICE BHAVAN KALABURAGI

POLICE BHAVAN KALABURAGI

02 March 2017

Kalaburagi District Reported Crimes

ಕಳವು ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ನಬಿಸಾಬ ತಂದೆ ರಾಜಾಸಾಬ ಸೂಗೂರ ಸಾ: ನರಿಬೋಳ ತಾ: ಜೇವರಗಿ ರವರು  ಈಗ 4-5 ದಿವಸಗಳ ಹಿಂದೆ ನಾನು ಮತ್ತು ನನ್ನ ಹೆಂಡತಿ ಶೀಲಾರಬೀ ಹಾಗು ಮಕ್ಕಳು ಕೂಡಿ ನಮ್ಮ ಮಾವನ ಮನೆ ಶಾಂತಿ ಕಾರ್ಯಕ್ರಮ ಇರುವದರಿಂದ ಶಹಾಪೂರ ತಾಲೂಕಿನ ಡೋರನಳ್ಳಿ ಗ್ರಾಮಕ್ಕೆ ಹೋಗಿದ್ದೇವು. ನಮ್ಮ ಅಳಿಯ ಸೀರಾಜ ತಂದೆ ರಸೂಲಸಾಬ ಡೊಣಬೀ ಇವರು ನರಿಬೋಳಿಯ ನಮ್ಮ ಮನೆಯಲ್ಲಿ ಇದ್ದನು.  ದಿನಾಂಕ: 01.03.2017 ರಂದು ಬೇಳಗಿನ ಜಾವ 04.00 ಗಂಟೆಯ ಸುಮಾರಿಗೆ ನಮ್ಮ ಅಳಿಯ ಸೀರಾಜ ಇತನು ಫೋನ ಮಾಡಿ ನಮ್ಮ ಮನೆ ಕಳ್ಳತನವಾಗಿರುತ್ತದೆ ಎಂದು ಹೇಳಿದ ಕೂಡಲೇ ನಾನು ಮತ್ತು ನನ್ನ ಹೆಂಡತಿ ಶಿಲಾರಬೀ ಹಾಗೂ ಮಕ್ಕಳು ಕೂಡಿ ನರಬೋಳಿ ಗ್ರಾಮಕ್ಕೆ ಬಂದು ಮನೆಯಲ್ಲಿ ಹೋಗಿ ನೋಡಲು ಮನೆಯಲ್ಲಿ ಸಾಮಾನುಗಳು ಚಲ್ಲಾಪಿಲಿಯಾಗಿ ಬಿದ್ದಿದ್ದವು. ಕಬ್ಬಿಣದ ಅಲಮಾರ ಕೂಡಾ ತೆರೆದಿತ್ತು ನೋಡಲು ಅದರಲ್ಲಿ ಇಟ್ಟ ನಗದು ಹಣ ಮತ್ತು ಬಂಗಾರ ಆಭರಣಗಳು ಹೀಗೆ ಒಟ್ಟು 1,78,000/- ರೂಪಾಯಿ ಕಿಮ್ಮತ್ತಿನಷ್ಟು ಕಳುವಾಗಿತ್ತು. ನಮ್ಮ ಅಳಿಯನಿಗೆ ವಿಚಾರ ಮಾಡಲು ಅವನು ತಿಳಿಸಿದೆನಂದರೆ, ನಿನ್ನೆ ದಿನಾಂಕ: 28.02.17 ರಂದು ರಾತ್ರಿ ಊಟ ಮಾಡಿ ರಾತ್ರಿ 10.00 ಗಂಟೆಯ ಸುಮಾರಿಗೆ ಮನೆಯ ಬಾಗಿಲು ಕೀಲಿ ಹಾಕಿ ನಾನು ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದ್ದೇನು. ಬೆಳಗಿನ ಜಾವ 03.30 ಗಂಟೆಗೆ ನಾಯಿ ಬೊಗಳುವ ಸಪ್ಪಳ ಕೇಳಿ ಎದ್ದು ಕೇಳಗೆ ಬಂದು ನೋಡಲು ಮನೆಯ ಬಾಗಿಲು ಕೀಲಿ ಮುರಿದು ತೆರೆದಿತ್ತು ನಾನು ನಿಮಗೆ ಫೋನ ಮಾಡಿ ವಿಷಯ ತಿಳಿಸಿರುತ್ತೇನೆ. ಎಂದು ಹೇಳಿದನು. ಅಲ್ಲದೆ ನಮ್ಮ ಹಿಂದಿನ ಮನೆಯ ಕುತ್ಬುದ್ದೀನ ತಂದೆ ಜಮಲಸಾಬ ಯರಗೋಳ ಇವರ ಮನೆಯ ಬಾಗಿಲು ಕೀಲಿ ಮುರಿದು ಅವರ ಮನೆಯಿಂದ ನಗದು ಹಣ ಬಂಗಾರದ ಆಭರಣಗಳು  ಹಿಗೆ ಒಟ್ಟು 96,500/- ಕಿಮ್ಮತ್ತಿನಷ್ಟು ಕಳ್ಳತನವಾಗಿದ್ದ ಬಗ್ಗೆ ಗೊತ್ತಾಗಿರುತ್ತದೆ. ಅಲ್ಲದೆ ನಮ್ಮೂರ ರಾಜವಾಳ ರೋಡಿಗೆ ಇರುವ ತಿಪ್ಪಮ್ಮ ಗಂಡ ಗುಂಡಪ್ಪ ನಾಲವಾರ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿದ್ದ ನಗದು ಹಣ ಬಂಗಾರದ ಆಭರಣಗಳು  ಹಿಗೆ ಒಟ್ಟು 47,000/- ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನವಾಗಿದ್ದ ಬಗ್ಗೆ ಗೊತ್ತಾಗಿರುತ್ತದೆ. ನಾಗರಾಜ ತಂದೆ ಹಣಮಂತರಾಯ ಹಸರಗುಂಡಗಿ ಇವರು ಬಡೆಸಾಬನ ಮನೆಯಲ್ಲಿಟ್ಟ ತೋಗರಿ ತುಂಬಿದ ಚೀಲಗಳಲ್ಲಿ ಎಂಟು ತೊಗರಿ ತುಂಬಿದ ಚೀಲಗಳು ಅ.ಕಿ 40,000/- ರೂ ಮುದಕ್ಕಪ್ಪ ತಂದೆ ಸಿಂಗಡೆಪ್ಪ ಹಾಲಬಾವಿ ಇವರ ಮನೆಯ ಬಾಗಿಲು ಕೀಲಿ ಮುರಿದು ಮನಯಲ್ಲಿನ ನಗದು ಹಣ ಬಂಗಾರದ ಆಭರಣ  ಹೀಗೆ ಒಟ್ಟು 34,000/- ರೂಪಾಯಿ ಕಿಮ್ಮತ್ತಿನಷ್ಟು ಕಳುವಾಗಿದ್ದು ಗೊತ್ತಾಗಿರುತ್ತದೆ. ಹಾಗೂ ಮಲ್ಲಮ್ಮ ಗಂಡ ಮಲ್ಲಪ್ಪ ಬಾಬಾಗೋಳ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿನ ನಗದು ಹಣ ಬಂಗಾರದ ಆಭರಣ  ಹೀಗೆ ಒಟ್ಟು 1500/- ಕಿಮ್ಮತ್ತಿನಷ್ಟು ಕಳ್ಳತನವಾದ ವಿಷಯ ಗೊತ್ತಾಗಿರುತ್ತದೆ. ಮತ್ತು ಬಾಬು ತಂದೆ ಸೈಬಣ್ಣಾ ಬಾಬಾಗೊಳ ಇವರ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿನ ನಗದು ಹಣ ಬಂಗಾರದ ಆಭರಣ  ಹೀಗೆ ಒಟ್ಟು 32,500/- ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನವಾದ ಬಗ್ಗೆ ಅವರಿಂದ ನನಗೆ ಗೊತ್ತಾಗಿರುತ್ತದೆ. ಹೀಗೆ ಬಂಗಾರ, ಬೆಳ್ಳಿ ಆಭರಣಗಳು, ನಗದು ಹಣ, ಅಡಿಗೆ ಸಾಮಾನುಗಳು, ತೋಗರಿ ಚೀಲಗಳು, ಒಟ್ಟು 4,20,500/-ರೂ ಕಿಮ್ಮತಿನವುಗಳು ಕಳ್ಳತನವಾಗಿದ್ದು ಇರುತ್ತದೆ. ಅಕ್ಕಪಕ್ಕದ ಮನೆಯವರಿಗೆ ವಿಚಾರಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲಾ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಡಾ : ಶರಣಗೌಡ ಪಾಟೀಲ ತಂದೆ ಚಂದ್ರಶೇಖರ ಪಾಟೀಲ ಸಾ: ಎಫ್-4 ಮಾಲು ಅಪಾರ್ಟಮೆಂಟ್ ಸರಕಾರಿ ಐಟಿಐ ಕಾಲೇಜ ಕಲಬುರಗಿ ರವರು ತಾಯಿಯವರಾದ ನೀಲಮ್ಮಾ ಪಾಟೀಲ ಇವರ 4 ತೊಲಿಯ ಬಂಗಾರದ ಮಂಗಳಸೂತ್ರ ಎರಡು ಎಳೆಯದ್ದು ಇದ್ದು ಅದನ್ನು ನಮ್ಮ ತಾಯಿಯವರು ಹಾಕಿಕೊಳ್ಳುವುದು ಮತ್ತು ಅಲಮಾರಿಯಲ್ಲಿ ತೆಗೆದು ಇಡುವುದು ನಮ್ಮ ತಾಯಿಯವರೇ ಮಾಡುತ್ತಿದ್ದರು, ದಿನಾಂಕ 25-02-2017 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಯ ಟೇಬಲ ಮೇಲೆ ನಮ್ಮ ತಾಯಿಯವರು ಮಂಗಳ ಸೂತ್ರವನ್ನು ಇಟ್ಟಿದ್ದು ದಿನಾಂಕ 26-02-2017 ರಂದು ಸಾಯಂಕಾಲ 6 ಪಿ.ಎಂ.ಕ್ಕೆ ಕಾರ್ಯಕ್ರಮ ಇದ್ದ ಪ್ರಯುಕ್ತ ನಮ್ಮ ತಾಯಿಯವರು ಬಂಗಾರದ ಮಂಗಳಸೂತ್ರ ಹಾಕಿಕೊಳ್ಳುಲು ನೋಡಿದ್ದು ಮನೆಯಲ್ಲಿ ಇರಲಿಲ್ಲ, ಅಲ್ಲಲ್ಲಿ ಹುಡುಕಾಡಿದರೂ ಕೂಡ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಮನೆಯ ಟೇಬಲ ಮೇಲೆ ಇಟ್ಟಿದ್ದ 4 ತೊಲೆ ಬಂಗಾರದ ಮಂಗಳ ಸೂತ್ರ ಎರಡು ಎಳೆಯದ್ದು ಅಂದಾಜು ಕಿಮ್ಮತ್ತು 1,00,000-00 ರೂ. ನೇದ್ದನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಾಹನ ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಸೂರ್ಯಕಾಂತ ತಂದೆ ಬಸವಣಪ್ಪಾ ಡೋಣಿ ಸಾ: ಕುರಿಕೋಟಾ ತಾ:ಜಿ: ಕಲಬುರಗಿ ಇವರು ಈಗ ಸುಮಾರು 6-7 ತಿಂಗಳ ಹಿಂದುಗಡೆ ರಘೋಜಿ ಫೈನಾನ್ಸ ಕಡೆಯಿಂದ 2013ನೇ ಮಾಡಲ್ ಮಿಲ್ಕ ವೈಟ ಬಣ್ಣದ ಚೆವರಲೇಟ್ ಟವೇರಾ ಕಾರ ನಂ. ಕೆಎ:32, ಎನ್:3036 Engine No. 3LM162345 Chassis No. MA6ABCA5DCH012721 ನೇದ್ದನ್ನು 6,40,000-00 ರೂ. ಖರಿದಿ ಮಾಡಿರುತ್ತೇನೆ. ದಿನಾಂಕ: 26/02/2017 ರಂದು ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ 9-00 ಗಂಟೆಗೆ ನನ್ನ ಅಳಿಯ ಮಲ್ಲಿಕಾರ್ಜುನ ಮತ್ತು ನಮ್ಮೂರಿನ ರಮೇಶ ಸಾಹು, ಶಿವಲಿಂಗಪ್ಪಾ ಕಂಚನಾಳ, ಬಸವರಾಜ ಕಲ್ಯಾಣ, ರೇವಣಸಿದ್ದಪ್ಪಾ ಕಲ್ಯಾಣ, ಜಗನ್ನಾಥ ಚೀಲಶೆಟ್ಟಿ, ಸಂಗಣ್ಣಾ ಚೀಲಶೆಟ್ಟಿ ಎಲ್ಲರೂ ಕೂಡಿಕೊಂಡು ನನ್ನ ಚೆವರಲೇಟ್ ಟವೇರಾ ಕಾರನ್ನು ತೆಗೆದುಕೊಂಡು ಜಹೀರಾಬಾದ ಸಂಗಮಕ್ಕೆ ಹೋಗಿ ದರ್ಶನ ಮಾಡಿಕೊಂಡು ಮರಳಿ ದಿನಾಂಕ: 27/02/2017 ರಂದು ಬೆಳಿಗ್ಗೆ 2-00 ಗಂಟೆಗೆ ಕುರಿಕೋಟಾ ಗ್ರಾಮದ ರಮೇಶ ಸಾಹು ಇವರ ಗಿರಣಿಯ ಹತ್ತಿರ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕಾರನ್ನು ಲಾಕ್ ಮಾಡಿಕೊಂಡು ಮನೆಯಲ್ಲಿ ಮಲಗಿ ಮರಳಿ ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಬಂದು ನೋಡಲಾಗಿ, ರಮೇಶ ಸಾಹು ಇವರ ಗಿರಣಿಯ ಮುಂದುಗಡೆ ನಿಲ್ಲಿಸಿದ ಕಾರನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳ್ಳತನವಾದ ನನ್ನ ಕಾರನ್ನು ಪತ್ತೆ ಮಾಡಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪ ತಂದೆ ಶಿವಪ್ಪ ಕಾಂಬ್ಳೆ ಸಾ|| ಬಟಗೇರಾ ರವರು ದಿನಾಂಕ 2702/2017 ರಂದು 3.30 ಪಿಎಮ್ ಸುಮಾರಿಗೆ ನಾನು ನನ್ನ ವಯಕ್ತಿಕ ಕೆಲಸದ ನಿಮಿತ್ಯ ನಾನು ನಮ್ಮ ಗ್ರಾಮದಿಂದ ದೇವಲ ಗಾಣಗಾಪೂರಕ್ಕೆ ಹೋಗಲು ನಮ್ಮ ಗ್ರಾಮದ ಬಸ್ಟ್ಯಾಂಡ ಹತ್ತಿರ ನಿಂತಾಗ  ನಮ್ಮ ಗ್ರಾಮದ ಭೀಮರಾಯ ತಂದೆ ಸೋಮಣ್ಣ ರವರ ಟಿಪ್ಪರ ನಂ   ಕೆಎ-32 ಸಿ-6205 ನೇದ್ದನ್ನು ಬಂದಿದ್ದು ಸದರಿ ಟಿಪ್ಪರಕ್ಕೆ ನಾನು ಕೈ ಮಾಡಿ ನಿಲ್ಲಿಸಿದೆನು ಟಿಪ್ಪರ ನೇದ್ದರಲ್ಲಿ ನಮ್ಮ ಗ್ರಾಮದ ಶಿವಪ್ಪ ತಂದೆ ಹಿರಗೇಪ್ಪ ಕಾಂಬ್ಲೆ ಇತನು ಚಾಲಕನಿದ್ದು ಸದರಿ ಟಿಪ್ಪರದಲ್ಲಿ ನಾನು ದೇವಲ ಗಾಣಗಾಪೂರಕ್ಕೆ ಹೋಗುವ ಸಲುವಾಗಿ ಏರಿ ಕುಳಿತ ಬಳಿಕ ಸದರಿ ಚಾಲಕನು ಟಿಪ್ಪರನ್ನು ಚಲಾಯಿಸುತ್ತಾ ಬಟಗೇರಾ ದಾಟಿದ ಬಳಿಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸುತಿದ್ದನು ನಾನು ಸದರಿಯವನಿಗೆ ನಿಧಾನವಾಗಿ ಓಡಿಸು ಅಂತ ಹೇಳಿದರು ಕೇಳದೆ ಹಾಗೆಯೇ ಚಲಾಯಿಸಿ 3.45 ಪಿಎಮ್ ಸುಮಾರಿಗೆ ಕೆರಕನಹಳ್ಳಿ ಸಮೀಪ ಭಾಗಣ್ಣ ಹಳ್ಳಿ ರವರ ಹೊಲದ ಹತ್ತಿರ ಒಮ್ಮೇಲೆ ಟಿಪ್ಪರ ಕಟ್ ಹೊಡೆದಾಗ ಸದರಿ ಟಿಪ್ಪರ ರೋಡಿನ ಬಲಭಾಗಕ್ಕೆ ಪಲ್ಟಿಯಾಗಿ ಬಿದ್ದಿತ್ತು ಆಗ ಅಲ್ಲಿಂದ ಮೋಟಾರ ಸೈಕಲ್ ಮೇಲೆ ಹೋಗುತಿದ್ದ ನಮ್ಮ ಗ್ರಾಮದ ಶರಣಗೌಡ ಸೋಮಾಣಿ, ಸಿದ್ದಪ್ಪ ಜಮಾದಾರ ಇವರು ನಮ್ಮ ಹತ್ತಿರ ಬಂದು ನನಗೆ ಹಾಗು ಚಾಲಕನಿಗೆ ಟಿಪ್ಪರಿಂದ ಹೊರಗೆ ತಗೆದಿದ್ದು ನನಗೆ ಹಣೆಗೆ ರಕ್ತಗಾಯ, ಬಲಮುಂಡಿಗೆ ಗುಪ್ತಗಾಯ ವಾಗಿದ್ದು ನನ್ನಂತೆ ಚಾಲಕನಿಗೆ ಏಡಗೈ ಮುಂಗೈ ಕೆಳಗೆ ರಕ್ತಗಾಯ, ಬಲತೊಡೆಗೆ ಗುಪ್ತಗಾಯ ವಾಗಿದ್ದು ಇರುತ್ತದೆ ಸದರಿ ಟಿಪ್ಪರ ಮುಂದಿನ ಭಾಗ ಜಖಂ ವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಶೈಲ ತಂದೆ ಸಾಯಿಬಣ್ಣ ಮಂಗಳೂರ ಸಾ : ಬಡದಾಳ  ಇವರತಂದೆಯಾದ ಸಾಯಿಬಣ್ಣ ತಂದೆ ಚಂದಪ್ಪ ಮಂಗಳೂರ ಇವರು ನಮ್ಮ ಅಕ್ಕಂದಿರ ಮದುವೆಯ ಸಲುವಾಗಿ ಮತ್ತು ಹೋಲ ಸಾಗುವಳಿ ಸಲುವಾಗಿ ನಮ್ಮ ಊರ ಬ್ಯಾಂಕಿನಲ್ಲಿ ಮತ್ತು ಊರಲ್ಲಿ ಕೈಗಡವಾಗಿ 5 ಲಕ್ಷ ರೂಪಾಯಿ ಸಾಲ ಮಾಡಿದ್ದು  ಈ ವರ್ಷ ಮಳೆ ಸರಿಯಾಗಿ ಆಗದ್ದರಿಂದ ಬೆಳೆ ಬಾರದ ಕಾಣ ನಮ್ಮ ತಂದೆ ಮಾಡಿದ ಸಾಲ ಹೇಗೆ ತೀರಿಸುವುದು ಅಂತಾ ಚಿಂತೆ ಮಾಡುತ್ತಾ  ದಿನಾಂಕ ಸಾಯಂಕಾಲ 28-02-2017 ರಂದು  ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾಜೂಜಾಟದಲ್ಲಿ ನಿರತವನ ಬಂಧನ :      
ಫರತಾಬಾದ ಠಾಣೆ : ದಿನಾಂಕ 01-03-2017 ರಂದು ಫಿರೋಜಾಬಾದ ಗ್ರಾಮದಲ್ಲಿ ಮಟಕಾ ಜೂಜಾಟದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮ್ತು ಪಂಚರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪಾ ಮಾಮುನಿ ಸಾ : ಫರತಾಬಾದ ಇವನನ್ನು ವಶಕ್ಕೆ ತೆಗೆದುಕೊಂಡು ಆತನಿಂದ ನಗದು ಹಣ 800/- ರೂ ಹಾಗು ಮಟಕಾ ಚೀಟಿ ಮತ್ತು ಒಂದು  ಪೆನ್ನ ಜಪ್ತಿಪಡಿಸಿಕೊಂಡು ಸದರಿಯವನೊಂದಿ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

No comments: