POLICE BHAVAN KALABURAGI

POLICE BHAVAN KALABURAGI

25 February 2017

Kalaburagi District Reported Crimes

ವಕ್ಪ ಬೋರ್ಡ ಸಂಸ್ಥೆಯ ಆಸ್ತಿ ಕಬಳಿಕೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಖಜಾತ (ಸುನ್ನಿ) ಅಫಜಲಪೂರ, ತಾಲೂಕ ಅಫಜಲಪೂರವು ಅಧಿಸೂಚಿತ ವಕ್ಪ ಸಂಸ್ಥೆಯಾಗಿದ್ದು, ಅಫಜಲಪೂರದ ಗೆಜೆಟ್ ಕ್ರಮ ಸಂಖ್ಯೆ:21 ರಲ್ಲಿ ನಮೂದಾಗಿರುತ್ತದೆ. ಹಾಗೂ ಈ ವಕ್ಪ ಸಂಸ್ಥೆಗೆಗಿರುವ ಜಮೀನಿನಲ್ಲಿ ಅನದಿಕೃತವಾಗಿ ಮರು ಒತ್ತುವರಿ ಮಾಡಿಕೊಂಡಿರುವವರ ಮೇಲೆ ವಕ್ಪ ಕಾಯ್ದೆ 1995 ಅಧಿನಿಯಮ 52ಎ ಹಾಗೂ ತಿದ್ದುಪಡಿ ಕಾಯ್ದೆ 2013 ರನ್ವಯ ಎಫ್..ಆರ್ ದಾಖಲಿಸಿ ಕಾನೂನು ಕ್ರಮ ಜರೂಗಿಸುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿಗಳು, ಕರ್ನಾಟಕ ರಾಜ್ಯ ವಕ್ಪ ಮಂಡಳಿ ಬೆಂಗಳೂರ ರವರು ರಾಜಶೇಖರ ಸಂಗಡ 5 ಜನರು ಸಾ : ಎಲ್ಲರು ಬೊಳ್ಳುರಗಿ ರವರು ಸರ್ವೆ ನಂಬರ  217, 427/2, 120,  15,  677/2/3 ರಲ್ಲಿ ಕಬ್ಜೆ ಇರುವುದಾಗಿ ಹೇಳುತ್ತಿದ್ದು. ಆದರೆ ಸದರಿಯವರು ಈ ಆಸ್ತಿಗಳ ಮೇಲೆ ಯಾವುದೆ ರೀತಿಯ ಕಾನೂನು  ಬದ್ದ ಅಧಿಕಾರ ಹೊಂದಿರುವುದಿಲ್ಲ. ಸದರಿ ಆಸ್ತಿಯು ವಕ್ಪ ಬೋರ್ಡಿಗೆ ಸಂಭಂದಿಸಿದ್ದು ಇರುತ್ತದೆ. ಈ ಆಸ್ತಿಗೆ ಸಂಭಂದಿಸಿದಂತೆ ತಹಸಿಲ್ದಾರ ಅಫಜಲಪೂರ ರವರು ದಿನಾಂಕ 06-05-2014 ರಂದು ಪಂಚನಾಮೆ ಮಾಡಿ ಈಗಾಗಲೆ ಸದರಿಯವರನ್ನು ಕಬ್ಜೆಯಿಂದ ತೆರವುಗೊಳಿಸಿರುತ್ತಾರೆ. ಆದರೆ ಆರೋಪಿತರು ಮರು ಒತ್ತುವರಿ ಮಾಡಿ ವಕ್ಪ ಕಾಯ್ದೆ 1995 ಅಧಿನಿಯಮ 52 ಎ ಹಾಗೂ ತಿದ್ದುಪಡಿ ಕಾಯ್ದೆ 2013 ರನ್ವಯ ಅಫರಾದ ಮಾಡಿರುತ್ತಾರೆಈ ವಿಷಯವನ್ನು ಗಂಬಿರವಾಗಿ ಪರಿಗಣಿಸಿ ಅನದಿಕೃತ ಮರು ಒತ್ತುವರಿದಾರರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಶ್ರೀ ಗುಲಾಮ ಸಮದಾನಿ ಜಿಲ್ಲಾ ವಕ್ಪ ಅಧಿಕಾರಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ : 23.02.17 ರಂದು ಸಾಯಂಕಾಲ ಸಮಯದಲ್ಲಿ ನಾನು ಮತ್ತು ನನ್ನ ಗೆಳೆಯ ಗೋಲ್ಲಾಳಪ್ಪಗೌಡ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ ಇಬ್ಬರು ನನ್ನ ಮೊಟಾರ ಸೈಕಲದ ಮೇಲೆ ಮತ್ತು ನಮ್ಮೂರ ಕಡೆಗೆ ನಡೆದಿದ್ದೆವು. ಅಲ್ಲದೆ ನಮ್ಮೂರ ಸಂತೋಷ ತಂದೆ ಮಲ್ಲಪ್ಪ ತಳವಾರ ಮತ್ತು ಸೈಯದ ಹಬೀಬ ತಂದೆ ಅಹೇಮದ ಸಾಬ ಜಮಾದಾರ. ಇವರು ಕೂಡಾ ತಮ್ಮ ಮೊಟಾರ ಸೈಕಲ ಮೇಲೆ ನಮ್ಮೂರ ಕಡೆಗೆ ನಡೆದಿದ್ದರು. ಸಾಯಾಂಕಾಲ 5.30 ಗಂಟೆ ಸುಮಾರಿಗೆ ನಾವು ಅವರಾದ ಕ್ರಾಸ ಹತ್ತಿರ ಹೋಗುತ್ತಿರುವಾಗ ಅವರಾದ ಕ್ರಾಸ ಹತ್ತಿರ ನಮ್ಮ ಮಾವ ತುಳಜಾರಾಮ ತಂದೆ ಶಂಕರ ರಾಠೋಡ ಇತನು ಕೂಡಾ ತನ್ನ ಮೊಟಾರ ಸೈಕಲ ನಂ ಕೆಎ-32-ಇಜಿ-5146 ನೇದ್ದರ ಮೇಲೆ ಕುಳಿತಕೊಂಡು ಊರ ಕಡೆಗೆ ನಡೆದಿದ್ದನು. ಅದೆ ವೇಳೆಗೆ ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಬ್ಬ ಟ್ಯಾಂಕರ ಚಾಲಕನು ತನ್ನ ಟ್ಯಾಂಕರ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮುಂದೆ ರೋಡಿನ ಸೈಡಿನಿಂದ ನಿದಾನವಾಗಿ ಹೋಗುತ್ತಿದ್ದ ನಮ್ಮ ಮಾವನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಚಾಲಕನು ತನ್ನ ಟ್ಯಾಂಕರ್ ಅನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದನು. ನಾವು ನಮ್ಮ ಮೊಟಾರ ಸೈಕಲಗಳನ್ನು ನಿಲ್ಲಿಸಿ ಓಡಿ ಹೋಗಿ ನೋಡಲು ನಮ್ಮ ಮಾವನ ಬಲಬಾಗದ ಮೇಲಕಿನ ಹತ್ತಿರ, ತಲೆಗೆ, ಹಣೆಗೆ, ಬಾಯಿಗೆ ಹಾಗೂ ಎಡಗೈ ಅಂಗೈಗೆ ಭಾರಿ ರಕ್ತಗಾಯವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಂತರ ಟ್ಯಾಂಕರ್ ನಂ ನೋಡಲಾಗಿ ಕೆ.ಎ03-ಎಎ-1194 ನೇದ್ದು ಇತ್ತು. ಅದರ ಚಾಲಕನಿಗೆ ಹೆಸರು ಕೇಳಲಾಗಿ ಅನೀಲ ತಂದೆ ಮಚೇಂದ್ರ ಕಾರಂಜೆ ಸಾ|| ಕೂಡ್ಲಿ ಎಂದು ಹೇಳಿ ಸ್ಥಳದಲ್ಲಿ ಜನರು ಸೇರುವುದನ್ನು ನೋಡಿ ಅವನು ಟ್ಯಾಂಕರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 23-02-2017 ರಂದು ಶ್ರೀ ಚಂದ್ರಶೇಖರ ತಂದೆ ದಾಸಪ್ಪಾ ರಾಗಿ ಸಾ: ಓಕಳಿ ಕ್ಯಾಂಪ ಸೇಡಂ ರೋಡ ಕಲಬುರಗಿ ರವರಿಗೆ ಪೋನ ಮೂಲಕ  ಯಾರೋ ನನ್ನ ಮಗ ಅವಿನಾಶನ ಕಾರು ಹಡಗಿಲ ಹಾರುತಿ ಕ್ರಾಸ ಹತ್ತಿರ ಇರುವ ಕೆಇ ಬಿ ಮುಂದಿನ ರೋಡ ಮೇಲೆ ಕಾರ ನ ಕೆಎ 32 ಎನ್ 3685 ನೇದ್ದು ಪಲ್ಟಿಯಾಗಿದ್ದು ಅವನಿಗೆ ಯುನೇಟೆಡ್ ಆಸ್ಪತ್ರೆಗೆ ತೆಗೆದು ಕೊಂಡು ಬರುತ್ತಿದ್ದೇವೆ ಅಂತಾ ಹೇಳಿದ್ದರಿಂದ ಆಸ್ಪತ್ರೆಗೆ ಬಂದು ನೋಡಲಾಗಿ ಅವಿನಾ ಶನಿಗೆ ಬಲಹಣೆಗೆ ಎರಡು ಕೈಗಳಿಗೆ ತರಚಿದ ಗಾಯವಾಗಿದ್ದು ಬಲ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಕಾರು ಅತಿವೇಗವಾಗಿ ಅಲಕ್ಷತನದಿಂದ  ಚಲಾಯಿಸಿ ದ್ದರಿಂದ ಕಾರಿನ ಮುಂದಿನ ಎಕ್ಸ್ಲ್ ಕಟ್ ಆಗಿಪಲ್ಟಿಯಾಗಿದ್ದು ಘಟನೆಯು ಮದ್ಯಾಹ್ನ 2:45 ಗಂಟೆಯ ಸುಮಾರಿಗೆ ಜರುಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

22 February 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-02-2017 ರಂದು  ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಚಂದ್ರಕಾಂತ ಹೆಚ್ ಸಿ-449  ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಯಲ್ಲಮ್ಮಾ ದೇವಿ ಗುಡಿಯ ಹತ್ತಿರ ಆವರಣದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ . ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ಲಕ್ಷ್ಮಣ ತಂದೆ ಖಾಜಪ್ಪ ಮಾಂಗ 2) ಬಸವರಾಜ ತಂದೆ ಲಕ್ಷ್ಮಣ ಸಿನ್ನೂರ  ಸಾ|| ಇಬ್ಬರು ಮಣೂರ ತಾ||ಆಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋದನೆ ಮಾಡಲಾಗಿ ಲಕ್ಷ್ಮಣ ಮಾಂಗ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 520/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಬಸವರಾಜ ಸಿನ್ನೂರ  ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 250/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು  ವಶಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 21/02/2017 ರಂದು, ಗೌರ(ಕೆ) ಗ್ರಾಮದ ಶಂಕರ ಭಜಂತ್ರಿ ರವರ ಪಾನ ಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸಿದ್ಧರಾಯ ಬೂಳ್ಳುರಗಿ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಗೌರ(ಕೆ) ಗ್ರಾಮಕ್ಕೆ ಹೋಗಿ ಶಂಕರ ಭಜಂತ್ರಿ ಪಾನಶಾಪದಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಶಂಕರ ಭಜಂತ್ರಿ ಪಾನಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾನಂದ ತಂದೆ ಚಂದಪ್ಪ ಗೌರ(ಕೆ) ಸಾ||ಗೌರ(ಕೆ) ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ  ಜಪ್ತಿ :
ಅಫಜಲಪೂರ ಠಾಣೆ :  ದಿನಾಂಕ 21/02/2017 ರಂದು ಶಿವಪೂರ ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ಧರಾಯ ಬೂಳ್ಳುರಗಿ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷಿ ಗುಡಿ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಟ್ರ್ಯಾಕ್ಟರ ಚಾಲಕನಿಗೆ ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು MAHINDRA ARJUN ಕಂಪನಿಯದಿದ್ದು ಸದರಿ ಟ್ರ್ಯಾಕ್ಟರನ ಟ್ಯೈಲಿಯಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ  KA 32 TA-6673 ಅಂತ ಇದ್ದು ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರದಲಿದ್ದ ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ರಮೇಶ ತಂದೆ ಮಲ್ಲಣ್ಣ ದಿಬಲಿ ಸಾ|| ಕೊಡ್ಲಾ, ತಾ|| ಸೇಡಂ ರವರು ದಿನಾಂಕ: 18-02-17 ರಂದು ಬೆನಕನಳ್ಳಿ ಗ್ರಾಮದ ಹತ್ತಿರ ಇರುವ ಹೊಲಕ್ಕೆ ಹೋಗಿ ಮರಳಿ ಕೊಡ್ಲಾ ಗ್ರಾಮಕ್ಕೆ ಬರುವಾಗ ಶ್ರೀ ಸಿಮೆಂಟ್ ಕಂಪನಿ ಎದುರು ರಸ್ತೆಯ ಪಕ್ಕಕ್ಕೆ ನಿಂತುಕೊಂಡಿದ್ದಾಗ ಬೆನಕನಳ್ಳಿ ಗ್ರಾಮದ ಕಡೆಯಿಂದ ಒಬ್ಬ ಮೊಟಾರ ಸೈಕಲ ನಂ. ಕೆಎ 32 ಡಬ್ಲೂ 9122 ನೆದ್ದರ ಚಾಲಕನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತಿ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಸಿಕೊಂಡು ಬಂದು ಅಪಘಾತ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

21 February 2017

Kalaburagi District Daily Reported Crimes.

ಸೇಡಂ ಪೊಲೀಸ್ ಠಾಣೆ : ದಿನಾಂಕ:20-02-2017 ರಂದು 1600 ಗಂಟೆಗೆ ಕೊಡ್ಲಾ ಗ್ರಾಮದ ಹತ್ತಿರ ವಾಹನ ಅಪಘಾತದಲ್ಲಿ ರೋಡಿನಲ್ಲಿ ಒಬ್ಬನು ಮೃತಪಟ್ಟಿದ್ದು ಇದೆ ಅಂತ ಮಾಹಿತಿ ಮೇರೆಗೆ ನಾನು ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ರೋಡಿನಲ್ಲಿ ಬಿದ್ದ ಮೃತದೇಹವನ್ನು ಸರ್ಕಾರಿ, ಆಸ್ಪತ್ರೆಗೆ ಶೀಫ್ಟ ಮಾಡಿ ನಂತರ ಫಿರ್ಯಾದಿ, ಶ್ರೀಮತಿ, ಕಾಮಾಕ್ಷಿ ಗಂಡ ದೀಪಕ, ವಯ:30 ವರ್ಷ, ಜಾತಿ:ಕ್ರಿಶ್ಚಿಯನ್, ಉ:ಕೊಡ್ಲಾ P.H.C ಯಲ್ಲಿ ಸ್ಪಾಫ್ ನರ್ಸ ಕೆಲಸ, ಸಾ:ಚಿಟಗುಪ್ಪ, ಜಿ:ಬೀದರ, ಹಾ.ವ:ಕೊಡ್ಲಾ ಗ್ರಾಮ, ತಾ:ಸೇಡಂ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಂಶವೇನೆಂದರೆ, ಇಂದು ದಿ:20-02-2017 ರಂದು ಮದ್ಯಾಹ್ನ 1500 ಗಂಟೆಗೆ ನನ್ನ ಗಂಡ ದೀಪಕ ಇತನು ಸೇಡಂಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ತನ್ನ ಮೊಟಾರು ಸೈಕಲ್ ನಂ-KA39-L-3852 ನೇದ್ದನ್ನು ತೆಗೆದುಕೊಂಡು ಹೋದರು ನಂತರ ಸ್ವಲ್ಪ ಸಮಯದಲ್ಲಿ ಮದ್ಯಾಹ್ನ 1515 ಗಂಟೆಯ ಸುಮಾರಿಗೆ ಕೊಡ್ಲಾ ಗ್ರಾಮದ ಜನರು ನಾನು ಕೆಲಸ ಮಾಡುವ ಆಸ್ಪತ್ರೆಗೆ ಬಂದು ಹೇಳಿದ್ದೇನೆಂದರೆ, ನನ್ನ ಗಂಡ ಸೇಡಂಕ್ಕೆ ಹೋಗುವಾಗ ಕೆ.ಇ.ಬಿ ಹತ್ತಿರ ಯಾದಗೀರ ಸೇಡಂ ರೋಡಿನ ಟರ್ನದಲ್ಲಿ ಯಾವುದೋ ವಾಹನ ನನ್ನ ಗಂಡನ ಮೊಟಾರು ಸೈಕಲಗೆ ಅಪಘಾತಪಡಿಸಿ ಹೋಗಿದ್ದು ನನ್ನ ಗಂಡ ರೋಡಿನನ ಮೇಲೆ ಬಿದ್ದು ಸತ್ತಿರುತ್ತಾನೆ ಅಂತ ತಿಳಿಸಿದರು, ಆಗ ನಾನು ಮತ್ತು ನಮ್ಮ ಆಸ್ಪತ್ರೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡ ದೀಪಕ ರೋಡಿನ ಎಡಗಡೆ ಬೋರಲಾಗಿ ಬಿದ್ದಿದ್ದು ಅವರ ಮುಖಕ್ಕೆ ಬಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲು ಮುರಿದಿದ್ದು ಭಾರಿ ರಕ್ತಗಾಯಹೊಂದಿ ಸ್ಥಳದ್ಲಲಿಯೇ ಸತ್ತಿದನು. ನನ್ನ ಗಂಡನಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೊಟಾರು ಸೈಕಲಗೆ ಅಪಘಾಥಪಡಿಸಿ ವಾಹನ ನಿಲ್ಲಿಸದೇ ಓಡಿ ಹೋಗಿದ್ದು ಇರುತ್ತದೆ ಕಾರಣ ಅಪಘಾತಪಡಿಸಿ ಓಡಿಹೋದ ಸದರಿ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆಯನ್ನು ಠಾಣೆಗೆ 1900 ಗಂಟೆಗೆ ಬಂದು ಸದರಿ ಹೇಳಿಕೆ ಸಾರಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ 19/2/2017 ರಂದು ರಾತ್ರಿ 2 ಗಂಟೆಯ ವರೆಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಸ್ಮೀತಾ ಮತ್ತು ನನ್ನ ಮಕ್ಕಳು ಇಬ್ಬರು  ಟಿವಿ ನೊಡಿ ಬೆಡ್ಡ  ರೂಮಿನಲ್ಲಿ ಮಲಗಿಕೊಂಡಿರುತ್ತೆವೆ.  ಬೆಳಿಗ್ಗೆ 9  ಗಂಟೆಯ ಸುಮಾರಿಗೆ   ನಾನು ಎದ್ದು ಹೊರಗೆ ಹೊಗಲು ನಮ್ಮ ಮನೆಯ ಅಡಿಗಿ ಮನೆಯ ಬಾಗಲು ತೆರೆದಿದ್ದು  ಇದ್ದು,   ನಾವು ಮಲಗಿಕೊಂಡಿರುವ ಬೆಡ್ ರೂಮಿನಲ್ಲಿದ್ದ  ಅಲಮಾರಾ ತೆರೆದಿದ್ದು ಇದ್ದು ನಾನು ಮತ್ತು ನನ್ನ ಹೆಂಡತಿ ಸ್ಮೀತಾ ಇಬ್ಬರು ನೊಡಲು ಅಲಮಾರಾದಲ್ಲಿದ್ದ ಬಂಗಾರದ ಆಭರಣಗಳು ಇರಲಿಲ್ಲಾ. ಅಲಮಾರಾದಲ್ಲಿದ್ದ 1) 40 ಗ್ರಾಂ ಬಂಗಾರದ ಒಂದು ಜೊತೆ ಪಾಟ್ಲಿಗಳು. ಅ||ಕಿ|| 110000/ 2)55 ಗ್ರಾಂ ಬಗಾರದ ಮಂಗಳಸೂತ್ರ ಚೈನ್ ಮಾದರಿ  ಅದರಲ್ಲಿ ಕರಿಮಣಿಗಳು ಹವಳ ಮುತ್ತು ಇದ್ದಿದ್ದು  ಅ||ಕಿ|| 151250/ 3)25 ಗ್ರಾಂ ಬಂಗಾರದ ಒಂದು ಜೊತೆ ಬಳೆಗಳು ಅ||ಕಿ|| 68750 /ರೂ 4) 20 ಗ್ರಾಂ ಬಂಗಾರದ ಒಂದು ಜೊತೆ ಬಳೆಗಳು ಅ||ಕಿ|| 55000/ರೂ 5) 20 ಗ್ರಾಂದಲ್ಲಿ ಎರಡು ಲಾಕೆಟಗಳು  ಅದರಲ್ಲಿ ಒಂದು ಹಲೊ ಚೈನ್ ಇನ್ನೊಂದು  ರೊಪ್ ಲಾಕೇಟಅ||ಕಿ||55000/ರೂ 6) 5 ಗ್ರಾಂ ಬಂಗಾರದ ಪದಕ ಅ||ಕಿ|| 13750/ 7) 10 ಗ್ರಾಂ ಬಂಗಾರ ಒಂದು ಸುತ್ತಉಂಗುರ ಅ||ಕಿ|| 27500/ರೂ 8) 5 ಗ್ರಾಂ ಬಂಗಾರದ ಲೀಪ್ ( ನವಿಲು ಮಾದರಿ)ಉಂಗುರು ಅ||ಕಿ|| 13750/ರೂ 9) 32 ಗ್ರಾಂದಲ್ಲಿ 4 ಜೊತೆ  ಗುಂಡು ಬೆಂಡೊಲಿಗಳು ಅ||ಕಿ|| 88000/ರೂ 10) 10 ಗ್ರಾಂ ಬಂಗಾರದ ಒಂದು ಮಂಗಳಸೂತ್ರ  ಕಟ್ಟಾಗಿದ್ದು ಅ||ಕಿ|| 27500/ರೂ ಹಾಗು ನಗದು ಹಣ 40 ಸಾವಿರ ರೂಪಾಯಿ  ಇರಲಿಲ್ಲಾ ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಕಿಡಕೀಯ ಒಳಗಡೆಯಿಂದ ಕೈ ಹಾಕಿ ಒಳಗಿನ ಕೊಂಡಿ ತೆರೆದು ಒಳಗೆ ಪ್ರವೇಶ ಮಾಡಿ ಅಲಮಾರದಲ್ಲಿ ಇದ್ದ 23 ತೊಲೆಯ ಬಂಗಾರದ ಆಭರಣಗಳು ಒಟ್ಟು ಅ||ಕಿ|| 610500/-  ಹಾಗೂ ನಗದು ಹಣ 40000 ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ನನ್ನ ಅಣ್ಣನಾದ ಸಚೀನ ಸಾ|| ಐರವಾಡಿ ಕಲಬುರಗಿ ಇವರಿಗೆ ತಿಳಿಸಿ ವಿಚಾರ ಮಾಡಿ ಇಂದು ನಾನು ಠಾಣೆಗೆ ಬಂದು ದೂರು ಸಲ್ಲಿಸಿದ್ದು  ಪತ್ತೆ ಹಚ್ಚಿಕೊಡಲು ಹೇಳಿಕೆ ಸಾರಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ. 

ವಾಡಿ ಪೊಲೀಸ ಠಾಣೆ : ದಿನಾಂಕ:19/02/2017 ರಂದು 9.00 ಎಎಮ್ ಸುಮಾರಿಗೆ  ಪಿರ್ಯಾದಿಯ  ಗಂಡನಿಗೆ ದಾದರಾವ ತಂದೆ ಬಾಬುರಾವ , ಭಗವಾನ ತಂದೆ ಬಾಬುರಾವ, ಮಾರುತಿ ತಂದೆ ಬಾಬುರಾವ, ಬಲರಾಮ ತಂದೆ ಬಾಬುರಾವ ಹಾಗೂ ಸುಭಾಷ ತಂದೆ ದಾದರಾವ ರವರು ಕೂಡಿಕೊಂಡು ಏ ರಂಡಿ ಮಗನೇ ನೀನು ನಮಗೆ ಹಣ ಕೊಡು ಅಂತಾ ಊರಲ್ಲಿ ಎಲ್ಲರ ಮುಂದೆ ಹೇಳುತ್ತಾ ತಿರುಗಡುತ್ತಿದ್ದ ನಮ್ಮ ಮರ್ಯಾದೆ ಕಳಿತಾ ಇದ್ದಿ ರಂಡಿ ಮಗನೇ ನೀನು ಇನ್ನೂ ಮುಂದೆ ಊರಲ್ಲಿ ಯಾರ ಮುಂದೆ ನಾವುಹಣ ಕೊಡುವ ಬಗ್ಗೆ ಹೇಳಿದರೆ ನೀನಗೆ ಖಲಾಸ ಮಾಡುತ್ತೇವೆ. ನೀನು ಊರಲ್ಲಿ ಇರಬೇಡ ಸಾಯಿ ಮಗನೇ ಅಂತಾ ಧಮಕಿ ಹಾಕಿ ಹೊರಟು ಹೊದ ನಂತರ ಪಿರ್ಯಾದಿ ಗಂಡನು ಅಂಜಿ ಅದೇ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ದೇವರ ಕೊಣೆಯಲ್ಲಿ ಬಾಗಿಲು ಮುಚ್ಚಿ ಪ್ಲಾಸ್ಟಿಕ ಹಗ್ಗದಿಂದ ಜಂತಿಗೆ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದು ಇದಕ್ಕೆ ಕಾರಣ ಈ ಮೇಲ್ಕಂಡವರು ಪಿರ್ಯಾದಿ ಗಂಡನಿಗೆ ಬೈದು ಧಮಕಿ ಹಾಕಿದ್ದರಿಂದ ಮೃತ ಪಟ್ಟಿದ್ದು ಇರುತ್ತದೆ. ಪಿರ್ಯಾದಿಯು ಮನೆಯಲ್ಲಿ ಹಿರಿಯರಿಗೆ ಹೇಳಿ ಕೇಳಿ ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ್ದು ಇರುತ್ತದೆ  ಅಂತಾ ಇತ್ಯಾದಿ ವಗೈರೆ ಪಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ.