ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 21-02-2017 ರಂದು ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ
ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ
ಮೇರೆಗೆ, ಶ್ರೀ ಚಂದ್ರಕಾಂತ ಹೆಚ್ ಸಿ-449 ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಯಲ್ಲಮ್ಮಾ ದೇವಿ ಗುಡಿಯ ಹತ್ತಿರ ಆವರಣದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ
ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ . ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ಲಕ್ಷ್ಮಣ ತಂದೆ ಖಾಜಪ್ಪ ಮಾಂಗ 2) ಬಸವರಾಜ ತಂದೆ ಲಕ್ಷ್ಮಣ ಸಿನ್ನೂರ ಸಾ|| ಇಬ್ಬರು ಮಣೂರ ತಾ||ಆಫಜಲಪೂರ ಅಂತಾ ತಿಳಿಸಿದರು ನಂತರ ಸದರಿಯವರ ಅಂಗ
ಶೋದನೆ ಮಾಡಲಾಗಿ ಲಕ್ಷ್ಮಣ ಮಾಂಗ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 520/- ರೂ
ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಬಸವರಾಜ ಸಿನ್ನೂರ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 250/- ರೂಪಾಯಿ ನಗದು ಹಣ
ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ
ಪೆನ್ನ ದೊರೆತವು, ಸದರಿಯವುಗಳನ್ನು ವಶಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 21/02/2017 ರಂದು, ಗೌರ(ಕೆ) ಗ್ರಾಮದ ಶಂಕರ ಭಜಂತ್ರಿ ರವರ
ಪಾನ ಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ
ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ
ಮೇರೆಗೆ ಶ್ರೀ ಸಿದ್ಧರಾಯ ಬೂಳ್ಳುರಗಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ
ಮಾರ್ಗದರ್ಶನದಲ್ಲಿ ಗೌರ(ಕೆ) ಗ್ರಾಮಕ್ಕೆ ಹೋಗಿ ಶಂಕರ ಭಜಂತ್ರಿ ಪಾನಶಾಪದಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಶಂಕರ ಭಜಂತ್ರಿ ಪಾನಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ
ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾನಂದ ತಂದೆ ಚಂದಪ್ಪ ಗೌರ(ಕೆ) ಸಾ||ಗೌರ(ಕೆ) ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 590/- ರೂಪಾಯಿ ನಗದು ಹಣ
ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ
ಠಾಣೆ : ದಿನಾಂಕ 21/02/2017
ರಂದು ಶಿವಪೂರ ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ಧರಾಯ ಬೂಳ್ಳುರಗಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷಿ ಗುಡಿ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಟ್ರ್ಯಾಕ್ಟರ ಚಾಲಕನಿಗೆ ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು MAHINDRA ARJUN ಕಂಪನಿಯದಿದ್ದು ಸದರಿ ಟ್ರ್ಯಾಕ್ಟರನ ಟ್ಯೈಲಿಯಲ್ಲಿ
ಮರಳು
ತುಂಬಿದ್ದು ಇತ್ತು ಮತ್ತು ಅದರ ನಂ KA 32 TA-6673 ಅಂತ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ ಇರಬಹುದು.
ಸದರಿ ಟ್ರ್ಯಾಕ್ಟರದಲಿದ್ದ ಮರಳಿನ ಅ.ಕಿ 3000/-
ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು
ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ
ಪ್ರಕರಣ :
ಸೇಡಂ ಠಾಣೆ : ಶ್ರೀ ರಮೇಶ ತಂದೆ ಮಲ್ಲಣ್ಣ ದಿಬಲಿ ಸಾ|| ಕೊಡ್ಲಾ,
ತಾ|| ಸೇಡಂ ರವರು ದಿನಾಂಕ: 18-02-17
ರಂದು ಬೆನಕನಳ್ಳಿ ಗ್ರಾಮದ ಹತ್ತಿರ ಇರುವ ಹೊಲಕ್ಕೆ ಹೋಗಿ ಮರಳಿ ಕೊಡ್ಲಾ ಗ್ರಾಮಕ್ಕೆ ಬರುವಾಗ ಶ್ರೀ ಸಿಮೆಂಟ್ ಕಂಪನಿ ಎದುರು ರಸ್ತೆಯ ಪಕ್ಕಕ್ಕೆ ನಿಂತುಕೊಂಡಿದ್ದಾಗ ಬೆನಕನಳ್ಳಿ ಗ್ರಾಮದ ಕಡೆಯಿಂದ ಒಬ್ಬ ಮೊಟಾರ ಸೈಕಲ ನಂ. ಕೆಎ 32 ಡಬ್ಲೂ
9122
ನೆದ್ದರ ಚಾಲಕನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತಿ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಸಿಕೊಂಡು ಬಂದು ಅಪಘಾತ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment