ಯಡ್ರಾಮಿ ಪೊಲೀಸ್ ಠಾಣೆ : ದಿನಾಂಕ 11-12-2016 ರಂದು 8;10 ಪಿ.ಎಂ ಕ್ಕೆ ಫಿರ್ಯಾದಿ ಶ್ರೀಶೈಲ ತಂದೆ ಬಸಪ್ಪ ದೊಡಮನಿ ವಯ;
20 ವರ್ಷ ಜಾ; ಹರಿಜನ ಉ; ಕೂಲಿ ಕೆಲಸ ಸಾ|| ಹಂಗರಗಾ (ಕೆ) ರವರು
ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ಅರ್ಜಿ ತಂದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ,
ಈ ಮೊದಲು ನಮ್ಮೊಂದಿಗೆ ನಮ್ಮೂರ ನಾಗರಾಜ ಹೊಸಮನಿ ಹಾಗು ಇತರರು
ಕೂಡಿ ಮೋಹರಮ ಸಮಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ. ಇಂದು ದಿನಾಂಕ
11-12-2016 ರಂದು ಬೆಳಿಗ್ಗೆ 10;00 ಗಂಟೆಗೆ ನಾನು
ಮತ್ತು ನಮ್ಮೋಣಿಯ ಹರೀಶ್ಚಂದ್ರ ತಂದೆ ಮರೆಪ್ಪ ದೊಡಮನಿ, ಭೀಮಣ್ಣ ತಂದೆ
ಚನ್ನಪ್ಪ ದೊಡಮನಿ, ಮಡಿವಾಳಪ್ಪ ತಂದೆ ಶರಣಪ್ಪ ದೊಡಮನಿ ರವರು ಕೂಡಿಕೊಂಡು
ನಮ್ಮು ಎತ್ತುಗಳು ಮತ್ತು ದನ ಕರಗಳನ್ನು ಮೈಸಲು ಮನೆಯಿಂದ ಹೋಗಿರುತ್ತೇವೆ. ಮೈಸುತ್ತಾ ಮದ್ಯಾಹ್ನ 3;30 ಗಂಟೆ ಸುಮಾರಿಗೆ ನಮ್ಮೂ ದನಗಳನ್ನು
ನಮ್ಮೂರ ಗೌರಿಶಂಕರ ಸಗರದವರ ರವರ ಹೊಲದಲ್ಲಿ ಮೈಸುತ್ತಿದ್ದೇವು, ಆಗ ಅಲ್ಲೆ
ಕೆಲಸ ಮಾಡುತ್ತಿದ್ದ ನಮ್ಮೂರ ನಾಗರಾಜ ತಂದೆ ರಾಮಣಗೌಡ ಹೊಸಮನಿ ಈತನು ನಮ್ಮ ಹತ್ತಿರ ಬಂದು ನಮಗೆ ಏ
ಹೊಲ್ಯಾ ಸುಳಿ ಮಕ್ಕಳ್ಯಾ ಇಲ್ಲಿ ದನಗಳು ಬಿಡಬ್ಯಾಡರಿ ಅಂತಾ ಅನ್ನುತಿದ್ದಾಗ ನಾವು ಈ ಹೊಲಕ್ಕೆ ನಿನಗೇನು
ಸಂಬಂಧ ಅಂತಾ ಅಂದಾಗ ಸದರಿ ನಾಗರಾಜ ಈತನು ತನ್ನ ಅಣ್ಣತಮ್ಮಂದಿರರಿಗೆ ಫೋನ ಮಾಡಿ ನಮ್ಮ ಹತ್ತಿರ ಕರೆಯಿಸಿದಾಗ
1] ನಾಗರಾಜ ತಂದೆ ರಾಮಣಗೌಡ ಹೊಸಮನಿ, 2] ವೆಂಕಟೇಶ
ತಂದೆ ಸಂಜೀವಪ್ಪಗೌಡ ಹೊಸಮನಿ, 3] ಬಸವರಾಜ ತಂದೆ ರಾಮಣಗೌಡ ಹೊಸಮನಿ,
4] ಶರಣು ತಂದೆ ದೇವಿಂದ್ರ ದೊರೆ, 5] ಚಂದ್ರಕಾಂತ
ತಂದೆ ಸಾಹೇಬಗೌಡ ದ್ಯಾವಾಪೂರ, 6] ನಿಂಗಪ್ಪ ತಂದೆ ಧನರಾಜ ದ್ಯಾವಾಪೂರ,
7] ಹಣಮಂತ್ರಾಯ ತಂದೆ ರಾಮಣಗೌಡ ಹೊಸಮನಿ, 8] ಗೌಡಪ್ಪ
ತಂದೆ ಸಿದ್ದಣ್ಣ ಹೊಸಮನಿ ರವರೆಲ್ಲರು ಕೂಡಿಕೊಂಡು ಈ ಸೂಳಿ ಮಕ್ಕಳಿಗೆ ಇವತ್ತ ಜೀವ ಸಹಿತ ಬಿಡಬ್ಯಾಡರಿ
ಅಂತಾ ಅನ್ನುತ್ತಾ ಬಂದವರೆ ಅವರಲ್ಲಿ ನಾಗರಾಜ ಈತನು ಕೊಲೆ ಮಾಡುವ ಉದ್ದೇಶದಿಂಧ ತನ್ನ ಕೈಯಲ್ಲಿದ್ದ
ಬಾರಕೊಲನಿಂದ ನನ್ನ ಕುತ್ತಿಗೆಗೆ ಸುತ್ತಿ ಒತ್ತಿ ಜೊಗ್ಗಾಡಿದನು, ವೆಂಕಟೇಶ
ಬಸವರಾಜ ರವರು ನನಗೆ ತಡೆದುನಿಲ್ಲಿಸಿ ಕೈಯಿಂದ ಮೈಕೈಗೆ ಹೊಡೆ ಬಡೆ ಮಾಡಿದರು, ಆಗ ಬಿಡಿಸಲು ಬಂದ ಹರೀಶ್ಚಂದ್ರ ಈತನಿಗೆ ಶರಣು ಮತ್ತು ಚಂದ್ರಕಾಂತ ರವರು ಹರೀಶ್ಚಂದ್ರನಿಗೆ
ಕಾಲಿನಿಂದ ಬೆನ್ನಿನ ಮೇಲೆ, ಮತ್ತು ತೊರಡಿನ ಮೇಲೆ ಒದ್ದಿರುತ್ತಾರೆ.
ನಂತರ ನಮ್ಮೊಂದಿಗೆ ಇದ್ದ ಭೀಮಣ್ಣ ಮತ್ತು ಮಡಿವಾಳಪ್ಪ ರವರು ಬಿಡಿಸಲು ಬಂದಾಗ
ಅವರಿಗೆ ನಿಂಗಪ್ಪ, ಹಣಮಂತ್ರಾಯ, ಗೌಡಪ್ಪ
ರವರು ಕೈಯಿಂದ, ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ. ನಂತರ ಅಲ್ಲೆ ಇದ್ದ ಸದ್ದಾಂ ತಂದೆ ಗಫೂರಸಾಬ, ಬುಡ್ಡೇಸಾಭ
ತಂದೆ ಅಬ್ದುಲಸಾಬ, ನಿಂಗಪ್ಪ ತಂದೆ ಚಂದಪ್ಪ ರವರು ಬಂದು ಬಿಡಿಸಿಕೊಂಡಿರುತ್ತಾರೆ.
ಇಲ್ಲದಿದ್ದರೆ ಇನ್ನು ಹೊಡೆ ಬಡೆ ಮಾಡುತ್ತಿದ್ದರು. ಮೇಲ್ಕಂಡ 08 ಜನರು ಹಳೆ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ
ನನಗೆ ಬಾರಕೋಲನಿಂದ ಕುತ್ತಿಗೆಗೆ ಹಾಕಿ ಜೊಗ್ಗಾಡಿದ್ದು, ಅಲ್ಲದೆ ಹರಿಶ್ಚಂದ್ರನಿಗೆ
ತೊರಡಿನ ಮೇಲೆ ಒದ್ದು ಗುಪ್ತ ಪೆಟ್ಟು ಮಾಡಿರುತ್ತಾರೆ, ಈ ಬಗ್ಗೆ ನಮ್ಮ
ಮನೆಯವರೊಂದಿಗೆ ವಿಚಾರಿಸಿ ಫಿರ್ಯಾದಿ ಕೊಡಲು ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ.
ಆದ್ದರಿಂದ ನನಗೆ ಹಾಗು ಹರೀಶ್ಚಂದ್ರನಿಗೆ ಉಪಚಾರ ಕುರಿತು ದವಾಖಾನೆಗೆ ಕಳುಹಿಸಿಕೊಟ್ಟು
ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.
POLICE BHAVAN KALABURAGI
12 December 2016
11 December 2016
Kalaburagi District Reported Crimes
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 10/12/16 ರಂದು ರಾತ್ರಿ ತಾವರಗೇರಾ ಕ್ರಾಸ ಸಮೀಪ ಇರುವ
ಹೊಡ್ಡಿನ ಹತ್ತಿರದಲ್ಲಿ ಜಬ್ಬಾರಶಹಾ ಇತನು ತನ್ನ ಆಟೋರಿಕ್ಷಾ ಕೆಎ 32 ಸಿ 7695 ನೇದ್ದರ ಹಿಂದೆ
ತನ್ನ ಹೆಂಡತಿ ಶೈನಾಜಬೇಗಂ, ಮಗ ಆರೀಫಶಹಾ,ಹೆಂಡತಿ ತಮ್ಮಮೋಸಿನಶಹಾ ಇವರಿಗೆ ಕೂಡಿಸಿಕೊಂಡು ತನ್ನ ಸೈಡ
ಹಿಡಿದುಕೊಂಡು ಕಲಬುರಗಿಯಿಂದ ಆಟೋ ನಡೆಸುತ್ತಾ ಮಹಾಗಾಂವ ಕಡೆಗೆ ಹೊರಟಿದ್ದು, ಜಬ್ಬಾರಶಹಾಕ್ಕಿಂತ
ಸ್ವಲ್ಪ ಮುಂದೆ ಮೋಟಾರ ಸೈಕಲ ಕೆಎ 32 ಇಇ 5339 ನೇದ್ದರ ಮೇಲೆ ಉದಯಕುಮಾರ ನಡೆಯಿಸಿಕೊಂಡು
ಹೊರಟಿದ್ದು, ಅದೇ ಸಮಯಕ್ಕೆ ಎದುರುನಿಂದ ಹುಮನಾಬಾದ ರೋಡ ಕಡೆಯಿಂದ ಯಾವುದೋ ಒಬ್ಬ ಲಾರಿ ಚಾಲಕ
ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು
ಉದಯಕುಮಾರನ ಮೋಟಾರ ಸೈಕಲಿಗ ಡಿಕ್ಕಿ ಹೊಡೆದು ಅಪಘಾತಪಡಿಸಿ, ಅದೇ ವೇಗದಲ್ಲಿ ನಡೆಯಿಸಿಕೊಂಡು
ಜಬ್ಬಾರಶಹಾ ಆಟೋಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಲಾರಿ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ನಂತರ
ಕಲಬುರಗಿ ಕಡೆ ಓಡಿಸಿಕೊಂಡು ಹೋಗಿರುತ್ತಾನೆ. ಮೋಸಿನಶಹಾ ಇತನು ಲಾರಿ ನಂಬರ ನೋಡಿರುತ್ತಾನೆ ಅವನು
ಮನೆಗೆ ಹೋಗಿರುತ್ತಾನೆ. ಅವನಿಂದ ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋದ ಲಾರಿ ನಂಬರ ತಿಳಿದುಕೊಂಡು
ನಂತರ ತಿಳಿಸುತ್ತೇನೆ. ಈ ಅಪಘಾತದಿಂದಾಗಿ ಶೈನಾಜಬೇಗಂ,ಆರೀಫ ಶಹಾ, ಉದಯಕುಮಾರ ಇವರಿಗೆ ಹಣೆಗೆ
ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಮೂವರು ಸ್ಥಳದಲ್ಲಿ ಮೃಪಟ್ಟಿರುತ್ತಾರೆ. ಜಬ್ಬಾರಶಹಾ ಇತನಿಗೆ
ಟೊಂಕಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ. ಮೋಸಿನ ಇತನಿಗೆ ಸಣ್ಣಪುಟ್ಟ ಗಾಯಗಳಾಗಿ ರುತ್ತೇವೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಹೀನಾಕೌಸರ ಗಂಡ ಸಾದಿಕ ಅಲಿ ಸಾ;ನೂರಾನಿ ಚೌಕ ಎಂ.ಎಸ್.ಕೆ ಮಿಲ್ ಕಲಬುರಗಿ ಇವರು ದಿನಾಂಕ 21.07.2016
ರಂದು ಸಾದಿಕ ಅಲಿ ಎನ್ನುವವರ ಜೊತೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ನಮ್ಮ ತಂದೆ ತಾಯಿಯವರು 6
ತೊಲೆ ಬಂಗಾರ 10 ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಾನುಗಳೂ ಊಟದ ಕಚುಧ ಮತ್ತು ಕಲ್ಯಾಣ ಮಂಟಪದ ಖರ್ಚು 4 ಲಕ್ಷ ರೂಪಾಯಿ ನಗದು ಹಣ
ಕೊಟ್ಟಿರುತ್ತಾರೆ. ಹೀಗಾಗಿ ಒಟ್ಟು ನನ್ನ
ಮದುವೆಗೊಸ್ಕರ 25 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. ನನ್ನ ಗಂಡ ನನ್ನ ಜೊತೆ ಒಂದು
ರಾತ್ರಿಯೂ ಕೂಡಾ ದಾಂಪತ್ಯ ಜೀವನ ನಡೆಸಲಿಲ್ಲ ಒಂದು ತಿಂಗಳವಾದ ನಂತರ ನನ್ನ ಗಂಡನನ್ನು ದಿನಾಂಕ
20.08.2016 ರಂದು ರಾತ್ರಿ 9 ಗಂಟೆಗೆ ವಿಚಾರಿಸಿದರೆ 5 ಲಕ್ಷ ರೂಪಾಯಿ ವರದಕ್ಷಿಣೆ ಕೊಟ್ಟರೆ ಮಾತ್ರ ನಿನ್ನ ಜೊತೆ ಸಂಬಂದ ಬೆಳೆಸುತ್ತೇನೆ. ನಹಿತೋ ತಲಾಖ ದೇತೆ ಎಂದು
ಹೇಳಿದ ನಂತರ ಈ ವಿಷಯ ಬೇರೊಬ್ಬರಿಗೆ ತಿಳಿಸಿದರೆ ನಾನೇ ನಿನಗೆ ಊಟದಲ್ಲಿ ವಿಷ ಹಾಕಿ
ಸಾಯಿಸುತ್ತೇನೆ ನಂತರ ನೀನೆ ವಿಷ ಕುಡಿದು ಸತ್ತಿದ್ದಾಳೆ ಎಂದು ಹೇಳುತ್ತೇನೆ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲದೇ ನೀನು ಎನಾದರೂ ಎದುರು ಮಾತನಾಡಿದರೆ ನಿನ್ನ ಕೂದಲು ಹಿಡಿದು ನಿನ್ನ ತಲೆ ಗೋಡೆಗೆ
ಹೊಡೆಯುತ್ತೇನೆ ಎಂದು ನನಗೆ ಜೀವದ ಬೆದರಿಕೆ ಹಾಕಿದ್ದಾನೆ. ದಿನಾಂಕ 11.09.2016 ರಂದು 6 ಗಂಟೆಗೆ
ನನ್ನ ಗಂಡನ ಮನೆಯಲ್ಲಿ ಹಾಗೆ ನನ್ನ ಗಂಡನ ಸಹೋದರಿಯರೆಲ್ಲರೂ ಕೂಡಾ ಪಕ್ಕದ ಮನೆಯಲ್ಲೇ ವಾಸ
ಮಾಡುತ್ತಿದ್ದರಿಂದ ನನ್ನ ನಾದಿನಿಯ ಗಂಡ ಸಾದಿಕ ಈತನು ಮದುವೆಯ ಸಮಯದಲ್ಲಿ ಸಾಮಾನು ಸರಿಯಾಗಿ
ಕೊಟ್ಟಿಲ್ಲವೆಂದು ನನ್ನ ನಾದಿನಿ ನಸೀಂ ಬೇಗಂ ಇವಳು ಹೇಳುವದೆನೆಂದರೆ ನನ್ನ ಅಣ್ಣನನ್ನು
ಇನ್ನೊಬ್ಬರ ಜೊತೆ ಮದುವೆ ಮಾಡಿದ್ದರೆ 5 ಲಕ್ಷ ರೂಪಾಯಿ ಕೊಡುತ್ತಿದ್ದರು. ನಿನ್ನ ಜೊತೆ ಸುಮ್ಮನೆ
ಮದುವೆ ಮಾಡಿದಂಗ ಆಗಿದೆ ಎಂದು ಹಿಂಸಿಸುತ್ತಿದ್ದಳು. ನಂತರ ಅಬೇದಾ ಬೇಗಂ ಇವಳು ಬಾರ್ ಬಾರ್ ಮನೆಗೆ
ಬಂದು ನನ್ನ ಅಣ್ಣನಿಗೆ 1 ಲಕ್ಷ ರೂಪಾಯಿ ಶಾಲರಿ ಇದೆ ಮದುವೆಯಲ್ಲಿ 5,00,000/- ರೂಪಾಯಿ ಕೊಟ್ಟರೆ ನಿಮಗೆ ಏನು ತೊಂದರೆ ಆಗುತ್ತಿತ್ತು ಎಂದು
ತೊಂದರೆ ಕೊಡುತ್ತಿದ್ದಳು. ನಾದಿನಿಯ ಗಂಡನಾದ ರಹಮತ ಇತನು ಯಾವ ರೀತಿ ಅವಮಾನಸುತ್ತಿದ್ದ ಎಂದರೆ ಏ
ಲಡಕಿ ಪಸಂದ ನಹಿ ಇಸಕೆ ಲಿಯೆ ಉಸುಕು ಮೂಡ ನಹಿ ಆತೆ ಅಂಥ ಹೇಳುತ್ತಿದ್ದ. ಈ ಎಲ್ಲಾ ವಿಷಯ ನನ್ನ
ಅತ್ತೆಯಾದ ಸಾಬೆರಾ ಬೇಗಂ ಇವರಿಗೆ ಹೇಳಲು ಹೋದರೆ ಇದೆಲ್ಲಾ ನಾನೇ ಹೇಳಿ ಕೊಟ್ಟಿನಿ. ಮೊದಲು ನೀನು
5 ಲಕ್ಷ ರೂ ತಂದು ನಂತರ ನೋಡು ಎಂದು
ಹೇಳಿದ್ದಾಳೆ. ನಂತರ ನನ್ನ ಗಂಡನು ಕಂಪನಿಯ ಕೆಲಸದ ನಿಮಿತ್ಯ 45 ದಿವಸ ನೆದರಲ್ಯಾಂಡಗೆ ಹೋಗಿ ಹೋದ
ತಿಂಗಳ ನವೆಂಬರನಲ್ಲಿ ಮರಳಿ ಬಂದಿದ್ದಾನೆ ಅವನು ಬಂದ ನಂತರ ನಾನು 3 ಬಾರಿ ಪಂಚಾಯತಿಯನ್ನು ದಿನಾಂಕ
01.11.2016 ರಂದು 13,11,2016 ರಂದು ಮತ್ತು ದಿನಾಂಕ 20.11.2016 ರಂದು ಅವರ ಮನೆಯಲ್ಲಿಯೇ 5 ಗಂಟೆಗೆ ಹಿರಿಯರ
ಸಮ್ಮುಖದಲ್ಲಿ ಮಾಡಿಸಿದ್ದೆನೆ. ಇದಕ್ಕೆ ಅವನಾಗಲೀ ಅಥವಾ ಅವನ ಕುಟುಂಬದವರಾಗಲೀ ಕಿಮ್ಮತ್ತು
ಕೊಟ್ಟಿಲ್ಲ ಆದ್ದರಿಂದ ನಾನು ಮತ್ತೇ ನನ್ನ ಕುಟುಂಬಸ್ಥರೊಂದಿಗೆ ಚರ್ಚಿಸಿ ಇಂದು ತಮ್ಮ ಬಳಿಗೆ
ಬಂದು ದೂರು ಕೊಡಲು ವಿಳಂಬವಾಗಿರುತ್ತದೆ, ಹೀಗಾಗಿದ್ದರಿಂದ ನನ್ನ ಜೊತೆ ದಾಪಂತ್ಯ ಜೀವನ ನಡೆಸದ
ಮತ್ತು 5 ಲಕ್ಷ ರೂ ತರುವಂತೆ ಒತ್ತಾಯಿಸುತ್ತಿರುವ ಮತ್ತು ನನಗೆ ಜೀವ ಬೆದರಿಕೆ ಹಕಿದ ನನ್ನ ಗಂಡನ
ಮೇಲೆ ಮತ್ತು ಅದಕ್ಕೆ ಸಹಕರಿಸಿದ ಮತ್ತು ಪ್ರಚೋದಿಸಿದ ನಾದಿನಿಯ ಗಂಡಂದಿರ ಮೇಲೆ ಮತ್ತು ನಾದಿನಿಯರ
ಮೇಲೆ ಮತ್ತು ನನ್ನ ಅತ್ತೆಯ ಮೇಲೆ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೋಡಬೇಕಾಗಿ
ತಮ್ಮಲ್ಲಿ ವಿನಂತಿಸಿಕೊಳ್ಳೂತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
10 December 2016
Kalaburagi District Reported Crimes
ದರೋಡೆ
ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ
ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ
ಕಲಬುರಗಿ ಹಾಗು ಸಿಬ್ಬಂದಿ ದಿನಾಂಕ: 09-12-2016 ರಂದು ರಾತ್ರಿ ವಿಶೇಷ ಗಸ್ತು ಕತ್ರ್ವವ್ಯದಲ್ಲಿದ್ದಾಗ
ಬೆಳಗಿನ ಗ್ರಾಮಿಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ
ಬರುವ ಕಲಬುರಗಿ-ಆಳಂದ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಭೀಮಳ್ಳಿ ಕ್ರಾಸನಲ್ಲಿ ಬಸಸ್ಟಾಂಡ
ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು
ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ತಡೆದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ
ಅಂತಾ ಪೋನ ಮುಖಾಂತರ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ
ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ,
ಮಾನ್ಯ ಸಿಪಿಐ ಗ್ರಾಮೀಣ
ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು
ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಭೀಮಳ್ಳಿ ಕ್ರಾಸದಲ್ಲಿ ಇರುವ ಬಸಸ್ಟಾಂಡದ
ಪೂರ್ವದ ದಿಕ್ಕಿನ ಗೋಡೆಯ ಮರೆಯಲ್ಲಿ ನಿಂತು ಜೀಪಿನ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ
ಬಸಸ್ಟಾಂಡದಿಂದ ಸ್ವಲ್ಪ ಅಂತರದಲ್ಲಿ ಒಂದು ಆಟೋ ಮತ್ತು ಎರಡು ಮೋಟಾರ ಸೈಕಲ್ ನಿಲ್ಲಿಸಿದ್ದು
ಬಸಸ್ಟಾಂಡ ಗೋಡೆಯ ಮರೆಯಲ್ಲಿ 05 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು
ತಮ್ಮ ತಮ್ಮ ಕೈಯಲ್ಲಿ ತಲವಾರ, ಖಂಚಚರ್, ಹಗ್ಗಾ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ
ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಿ
ಹಿಡಿಯಲು 02 ಜನರು ಸಿಕ್ಕಿ ಬಿದಿದ್ದು, ಉಳಿದ 03 ಜನರು ನಮ್ಮನ್ನು ನೋಡಿ
ತಮ್ಮ ಕೈಯಲ್ಲಿದ್ದ ತಲವಾರ ಮತ್ತು ಖಂಚರ್ ಹಾಗು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ
ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 02 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ
ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1. ಸಿದ್ದು ತಂದೆ ಲಕ್ಷ್ಮಣ @
ಅಪ್ಪರಾಯ ಗೋಳಾ ಸಾ:ಕೇರಿ
ಭೋಸಗಾ ತಾ:ಜಿ:ಕಲಬುರಗಿ ಅಂತಾ ತಿಳಿಸಿದನು ಇತನ ಹತ್ತಿರ ಒಂದು ಖಂಚರ್ ಒಂದು ನಾಡ ಪಿಸ್ತೂಲ್ ಹಾಗು
8 ಜೀವಂತ ಗುಂಡುಗಳು ಅಕಿ-25,000/-ರೂ. ಮತ್ತು ಒಂದು ಹಿರೋ ಹೊಂಡಾ ಸ್ಪ್ಲೇಂಡರ್ ಮೋಟಾರ ಸೈಕಲ್
ನಂ ಕೆಎ-36 ಡಬ್ಲೂ-3583 ಅಕಿ-25,000/- ರೂ ದೊರೆಯಿತು. ಸದರಿ ನಾಡ ಪಿಸ್ತೂಲನ್ನು ನನ್ನ ಗೆಳೆಯ
ಗುರಲಿಂಗಪ್ಪ @ ಗುರನಾಥ ಇತನು ಕೃತ್ಯವೆಸಗಲು
ನನ್ನ ಹತ್ತಿರ ಇಟ್ಟಿಕೊಳ್ಳಲು ಕೊಟ್ಟಿದನ್ನು ನಾನು ಇಟ್ಟಿಕೊಂಡಿದ್ದು ಈ ಪಿಸ್ತೂಲ್ ನಾಡ ಪಿಸ್ತೂಲ
ಆಗಿದ್ದು ಅದನ್ನು ಇಟ್ಟುಕೊಳ್ಳಲು ನನ್ನ ಹತ್ತಿರವಾಗಲಿ ಹಾಗು ನನ್ನ ಗೆಳಯ ಗುರಲಿಂಗಪ್ಪನ
ಹತ್ತಿರವಾಗಲಿ ಯಾವುದೇ ಲೈನಸ್ ವಗೈರೇ ಇರುವುದಿಲ್ಲಾ ಅನಧೀಕೃತವಾಗಿ ಇಟ್ಟಿಕೊಂಡಿರುತ್ತೇವೆ ಅಂಥಾ
ತಿಳಿಸಿದ್ದು 2. ವಿನೋದ ತಂದೆ ಗುಂಡಪ್ಪ
ಗುತ್ತೆದಾರ ಸಾ:ಇಂದಿರಾ ನಗರ ಚಿತ್ತಾಪುರ ಅಂತಾ ತಿಳಿಸಿದನು ಇತನ ಹತ್ತಿರ ಒಂದು ಖಂಚರ್ ಮತ್ತು
ಒಂದು ಆಟೋ ನಂ ಕೆಎ-32 ಸಿ-6816 ಅಕಿ-40,000/-ರೂ, ಅದರಲ್ಲಿ ಶೀಟಿನ ಹಿಂದುಗಡೆ ಒಂದು ಖಂಚರ್ ದೊರೆಯಿತು,
ಸಿಕ್ಕಿ ಬಿದ್ದ ಜನರಿಗೆ
ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ವಿನೋದ ತಂದೆ ಗುಂಡಪ್ಪ ಗುತ್ತೆದಾರ ಇತನು ಓಡಿ
ಹೋದವರ ಹೆಸರು 3. ಗುರಲಿಂಗಪ್ಪ @ ಗುರನಾಥ ತಂದೆ ಮಚೆಂದ್ರ ಹಡಪಾದ ಸಾ:ಜಳಕಿ ತಾ:ಆಳಂದ. 4. ಲಕ್ಷ್ಮಣ ತಂದೆ ಅರ್ಜುನ ಕಾಂಬಳೇ ಸಾ:ಇಂಡಸ್ಟ್ರೀಯಲ್ ಏರಿಯಾ
ಚಿತ್ತಾಪುರ 5. ಅಂಬರೀಶ ಸಾ:ಚಿತ್ತಾಪುರ ಅಂತಾ ತಿಳಿಸಿದನು. ನೀವು 5 ಜನರು ಇಲ್ಲಿ
ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ ವಿನೋದ ಇತನು ನಾನು ಮತ್ತು ಲಕ್ಷ್ಮಣ
ಕಾಂಬಳೇ ಮತ್ತು ಅಂಬರೀಶ 3 ಜನರು ಕೂಡಿಕೊಂಡು ನನ್ನ ಆಟೋ ನಂ ಕೆಎ-32 ಸಿ-6816 ನೇದ್ದರಲ್ಲಿ
ಮತ್ತು ಸಿದ್ದು ಗೋಳಾ ಇತನು ತನ್ನ ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ನೇದ್ದರ ಮೇಲೆ, ಹಾಗು ಮೋಟಾರ ಸೈಕಲ್ ಬಿಟ್ಟು ಓಡಿ ಹೋದ ಗುರಲಿಂಗಪ್ಪಾ @ ಗುರನಾಥ ಇತನ ಮೋಟಾರ ಸೈಕಲ್ ನಂ ಕೆಎ-32 ಇಸಿ-7366 ನೇದ್ದರ ಮೇಲೆ
ಕುಳಿತುಕೊಂಡು ಭೀಮಳ್ಳಿ ಕ್ರಾಸ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಸಸ್ಟಾಂಡದ
ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ
ನಿಲ್ಲಿಸಿ ತಲವಾರ ಮತ್ತು ಖಂಚರ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ
ಮಾಡಿಕೊಂಡು ನಾವು ತಂದಿದ್ದ ಮೋಟಾರ ಸೈಕಲಗಳ ಮತ್ತು ಆಟೋದಲ್ಲಿ ಓಡಿ ಹೋಗಲು ತಂದು ನಿಲ್ಲಿಸಿ
ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮಗೆ ಹಿಡಿದುಕೊಂಡಿರುವಿರಿ ಅಂತಾ
ತಿಳಿಸಿದರು ಆಗ ನಾನು ಪಂಚರ ಸಮಕ್ಷಮದಲ್ಲಿ ಕೇಸಿನ ಪುರಾವೆಗೋಸ್ಕರ ಮೊದಲು 2 ಜನರು ಮುಖಕ್ಕೆ
ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 3 ದಸ್ತಿಗಳು ಮತ್ತು 2 ಖಾರದ ಪುಡಿ, 3 ತಲವಾರಗಳು ಹಾಗು 20 ಪೀಟಿನ ಹಗ್ಗಾ, ದೊರೆತ್ತಿದ್ದ್ದು ಅವುಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಪಂಚರ ಸಮಕ್ಷಮದಲ್ಲಿ
ಒಂದು ಸಣ್ಣ ಪ್ಲಾಸ್ಟೀಕ್ ಚೀಲದಲ್ಲಿ ಹಾಕಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು
ವಶಕ್ಕೆ ತೆಗೆದುಕೊಂಡು. ಮತ್ತು ದೂರದಲ್ಲಿ ಕೃತ್ಯಕ್ಕೆ ಉಪಯೋಗಿಸಲು ತಂದು ನಿಲ್ಲಿಸಿದ ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ಅಕಿ-25,000/-ರೂ 2) ಆಟೋ ನಂ ಕೆಎ-32 ಸಿ-6816 ಅಕಿ-40,000/-ರೂ ಮತ್ತು 3) ಮೋಟಾರ ಸೈಕಲ್ ನಂ ಕೆಎ-32 ಇಸಿ-7366
ಅಕಿ-25,000/-ರೂ ನೇದ್ದವುಗಳನ್ನು ಕೂಡಾ
ಜಪ್ತಿ ಮಾಡಿಕೊಂಡು ಸದರಿ ಈ ಮೇಲ್ಕಂಡ 5 ಜನರು ದರೋಡೆ ಮಾಡಲು ಪ್ರಯತ್ನದಲ್ಲಿ ನಿರತರಾಗಿದ್ದು
ಖಚಿತಪಟ್ಟಿದ್ದರಿಂದ್ದ ಸಿಕ್ಕಿ ಬಿದ್ದ 2 ಜನರನ್ನು ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಗ್ರಾಮೀಣ
ಠಾಣೆಗೆ ತೆಗೆದುಕೊಂಡು ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ
ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 09-12-2016 ರಂದು ಬೆಳಗ್ಗೆ ರಾಘವೇಂದ್ರ
ನಗರ ರಾಣಾ ವ್ಯಾಪ್ತಿಯ ಗ್ರೀನ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು
ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿ ಬಗ್ಗೆ ಖಚೀತ ಮಾಹೀತಿ ಮೇರೆಗೆ ಶ್ರೀ ಸಂಜೀವಕುಮಾರ ಡಿ ಪಿ.ಎಸ್.ಐ ರಾಘವೇಂದ್ರ ನಗರ ಪೊಲೀಸ
ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮದೀನಾ ಕಾಲೋನಿಯ ಗ್ರೀನ ಸರ್ಕಲ ಹತ್ತಿರ ಸ್ವಲ್ಪ
ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು
ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ
ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ
ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ತನ್ನ ಹತ್ತಿರ
ಇಟ್ಟುಕೊಂಡು ಇನ್ನೊಂದು ಚೀಟಿ
ಸಾರ್ವಜನಿಕರಿಗೆ ಕೊಡುತ್ತಾ ನಂಬಿಸಿ ಮೋಸ ಮಾಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ
ಇಟ್ಟುಕೊಳ್ಳುತ್ತಿದ್ದನು ಇದನ್ನು ನೋಡಿ ನಾನು ಖಚಿತ ಪಡಿಸಿಕೊಂಡು ದಾಳಿ
ಮಾಡಿ ಹಿಡಿದು ಆತನ ಹೆಸರು ವಿಳಾಸ
ವಿಚಾರಿಸಲು ಅವನು ತನ್ನ ಹೆಸರು ಹಸನ ತಂದೆ
ರುಕ್ಮೋದ್ದಿನ ಶೇಖ ಸಾ|| ದಿಲ್ಲದಾರ ಕಾಲೋನಿ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ
ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1870=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಕ್ಕೆ
ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 09-12-2016 ರಂದು ಮಧ್ಯಹ್ನ ರಾಘವೇಂದ್ರ
ನಗರ ರಾಣಾ ವ್ಯಾಪ್ತಿಯ ಜೀಲಾನಾಬಾದ ಬಡಾವಣೆಯ ಪಪೂಲರ ಎಗ್ಗಪಾಯಿಂಟ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ
ಪಡೆಯುತ್ತಾ ಮಟಕಾ ನಡೆಸುತ್ತಿ ಬಗ್ಗೆ ಖಚೀತ ಮಾಹೀತಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಡಿ ಪಿ.ಎಸ್.ಐ ರಾಘವೇಂದ್ರ ನಗರ ಪೊಲೀಸ
ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೀಲಾನಬಾದ ಬಡಾವಣೆಯ ಪಪೂಲರ ಎಗ್ಗ ಪಾಯಿಂಟ ಅಂಗಡಿ ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ
ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ
ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90
ರೂ
ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು
ಮಟಕಾ ನಂಬರ ಚೀಟಿ ಬರೆದು ಒಂದು
ಚೀಟಿ ಸಾರ್ವಜಕರಿಗೆ ಕೊಟ್ಟು ಇನ್ನೊಂದು ಚೀಟಿ
ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಇದನ್ನು ನೋಡಿ ನಾನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಇಸ್ಮಾಯಿಲ ತಂದೆ ಮೈನೋದ್ದಿನ ಶೇಖ ಸಾ|| ಮದೀನಾ ಕಾಲೋನಿ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ
ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ
ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1510=00 ರೂ ಮತ್ತು 8 ಮಟಕಾ ನಂಬರ ಬರೆದ ಚೀಟಿಗಳು
ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಕ್ಕೆ
ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ
ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 09.12.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಬೂಟ್ನಾಳ
ರೋಡಿಗೆ ಇರುವ ಪೀರಸಾಬ ದರ್ಗ ಪಕ್ಕದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ
ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ
ಪ್ರದೀಪ. ಎಸ್. ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ.ಎಮ್
ಇಂಗಳೇಶ್ವರ ಸಿಪಿಐ ಸಾಹೇಬರ ನೆತ್ರತ್ವದಲ್ಲಿ ದರ್ಗದ ಗೊಡೆಯ ಮರೆಯಾಗಿ ನಿಂತು ನೋಡಲು ಸದರಿ ದರ್ಗಾದ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗೆಯಲ್ಲಿ ಕಲವು ಜನರು
ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ
ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಹುಸೇನ ತಂದೆ ಚಾಂದಪಾಶಾ ಯಳವಾರ ಸಾ:
ಖಾಜಾಕಾಲೂನಿ 2) ಬಾಬಾ ತಂದೆ ಮಹಿಬೂಬ
ಹರಕಾರ ಸಾ: ಲಕ್ಕಪ್ಪ ಲೇಔಟ ಜೇವರಗಿ. 3) ದೇವು ತಂದೆ ಶರಣಪ್ಪ ತಳವಾರ ಸಾ: ಖಾಜಾಕಾಲೂನಿ ಜೇವರಗಿ 4)
ಅಶೋಕ ತಂದೆ ಹಣಮಂತ ಶಹಾಬಾದಿ ಸಾ: ಖಾಜಾಕಾಲೂನಿ ಜೇವರಗಿ ಅಂತಾ ತಿಳಿಸಿದ್ದು ಸದರಿಯವರಿಂದ
ಜೂಜಾಟಕ್ಕೆ ಬಳಸಿದ ನಗದು ಹಣ 1440=00ರೂ 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು
ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ 09.12.2016 ರಂದು
ಮದ್ಯಾಹ್ನ ಜೇವರಗಿ ಪಟ್ಟಣದ ರದ್ದೆವಾಡಗಿ
ಪೆಟ್ರೋಲ ಪಂಪ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ
ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ
ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ್.ಎಮ್
ಇಂಗಳೇಶ್ವರ ಸಿಪಿಐ ಸಾಹೇಬರ ನೇತ್ತ್ವದಲ್ಲಿ ಮದ್ಯಾಹ್ನ ಬಾತ್ಮಿ ಇದ್ದ ಸ್ಥಳದ ಸಮೀಪ ಹೋಗಿ
ರದ್ದೆವಾಡಗಿ ಪೆಟ್ರೋಲ ಪಂಪ ಗೊಡೆಯ ಮರೆಯಾಗಿ ನಿಂತು ನೋಡಲು ಸದರಿ ಪೆಟ್ರೋಲ ಪಂಪ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗೆಯಲ್ಲಿ ಕಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ
ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ
1) ಮಡಿವಾಳ ತಂದೆ ಕಲ್ಯಾಣಪ್ಪ ಜವಳಿ ಸಾ: ಜಗತ ಕಲಬುರಗಿ 2) ಪವನಕುಮಾರ ತಂದೆ ಧರ್ಮಣ್ಣ ಹೊಲಸೂರ ಸಾ:
ಸ್ವಾಮಿವಿವೇಕನಂದ ಕಾಲೂನಿ ಕಲಬುರಗಿ 3) ಖಾಜಾಹುಸೇನು ತಂದೆ ದಸ್ತಗಿರಸಾಬ ಧಖ್ನಿ ಸಾ: ಜನತಾ
ಕಾಲೂನಿ ಜೇವರಗಿ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ
ಜೂಜಾಟಕ್ಕೆ ಬಳಸಿದ ನಗದು ಹಣ 7240=00ರೂ 52
ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ :
ಶ್ರೀ ಮಹಮ್ಮದ ಸಲೀಮ ತಂದೆ ಮೈನೊದ್ದಿನ ಶೇಖ ಸಾ;ಪಟ್ಟಣ ತಾ;ಜಿ;ಕಲಬುರಗಿ ಇವರ ಅಜ್ಜ ಮಹಬೂಬ ಶೇಖ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು
ಅವರಲ್ಲಿ ಮೈನೊದ್ದಿನ ಶೇಖ ಮತ್ತು ಇನ್ನೊಬ್ಬ
ಅಬ್ದುಲರಹೀಮ ಅಂತಾ ಇಬ್ಬರು ಮಕ್ಕಳಿದ್ದು
ಅವರಲ್ಲಿ ಮೈನೋದ್ದಿನ ಶೇಖ ಹಿರಿಯವರಿದ್ದು ಇವರು ನನ್ನ ತಂದೆಯಾಗಿರುತ್ತಾರೆ. ಇನ್ನೋಬ್ಬ ಅಬ್ದುಲ ರಹೀಮ ಅಂತಾ ಇರುತ್ತಾರೆ. ನಮ್ಮ
ಅಜ್ಜನವರು ಹಿರಿಯವರ ಆಸ್ತಿಯಲ್ಲಿ ಪಟ್ಟಣ ಜಮೀನ
ಸರ್ವೆ ನಂ. 244 ನೆದ್ದರಲ್ಲಿ 14 ಎಕರೆ ಜಮೀನಿನಲ್ಲಿ ಇಬ್ಬರಿಗೂ ತಲಾ 7 ಎಕರೆ ಜಮೀನು ಹಂಚಿಕೊಟ್ಟಿರುತ್ತಾರೆ . ಇನ್ನೊಂದು
ಜಮೀನ ಸರ್ವೆ ನಂ.246 ನೆದ್ದರಲ್ಲಿ 6 ಎಕರೆ 22 ಗುಂಟೆ ಜಮೀನ ಇದ್ದು ಇದನ್ನು ನಮ್ಮ ಅಜ್ಜ ಮಹೇಬೂಬ ಶೇಖ ಇವರು ಇಟ್ಟುಕೊಂಡಿದ್ದು ಅವರು ತೀರಿದ
ನಂತರ ಇಬ್ಬರು ಮಕ್ಕಳಿಗೆ ಸಮನಾಗಿ ಹಚ್ಚಿಕೊಳ್ಳುವದಾಗಿ ಮಾತು ಆಗಿರುತ್ತದೆ. ಕಳೆದ 3 ತಿಂಗಳ
ಹಿಂದೆ ನಮ್ಮ ಅಜ್ಜ ಮಹೇಬೂಬ ಶೇಖ ಇವರು ತೀರಿಕೊಂಡಿದ್ದು
ಈಗ ಅವರ ಹೊಲದಲ್ಲಿ ತೋಗರಿ ಬೆಳೆ ಇರುತ್ತದೆ. ನಮ್ಮ ಚಿಕ್ಕಪ್ಪ ಅಬ್ದುಲ ರಹಿಮ ಇವರ ಮಗ
ಮಹಮ್ಮದ ಖಾಲಿದ ಇತನು ಆಗಾ ಹೊಲಕ್ಕೆ ಬಂದು ನಮ್ಮ ಅಜ್ಜ ಮಹೇಬೂಬ ಶೇಖ ಇತನು ಸದರಿ 6 ಎಕರೆ ಜಮೀನು
ನನಗೆ ಕೊಟ್ಟಿರುತ್ತಾನೆ ನಿಮಗೆ ಕೊಡುವದಿಲ್ಲಾ
ಅಂತಾ ನಮ್ಮೊಂದಿಗೆ ತಕರಾರು ಮಾಡಿದ್ದು ಅಲ್ಲದೆ ಹಿಸ್ಸಾ ಕೇಳಿದವರಿಗೆ ಜೀವ ಸಹಿತ ಬಿಡುವದಿಲ್ಲಾ
ಅಂತಾ ಜೀವ ಬೆದರಿಕೆ ಹಾಕಿ ಹೋಗಿದ್ದನು ದಿನಾಂಕ. 9-12-2016 ರಂದು 9-00 ಎ.ಎಂ.ಕ್ಕೆ. ನನ್ನ ಅಜ್ಜನ ಹೊಲಕ್ಕೆ ನಮ್ಮ ಚಿಕ್ಕಪ್ಪಾ ಅಬ್ದು ಲ್
ರಹೀಮ ಇತನ ಮಗ ಮಹಮ್ಮದ ಖಾಲೀದ ಇತನು ಬಂದು ನಮ್ಮ ಅಜ್ಜನ ಜಮೀನನಲ್ಲಿ ಹಿಸ್ಸಾ ಕೇಳುತ್ತಾರೆ ಅಂತಾ ತಿಳಿದು ನನ್ನ ತಂದೆಯನ್ನು
ಕೊಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ ತಂದಿದ್ದ
ಒಂದು ಹಾಕಿ ಸ್ಟೀಕ್ ಬಡಿಗೆ
ತೆಗೆದುಕೊಂಡು ಬಂದು ಜಗಳ ತೆಗೆದು
ಅವಾಚ್ಯ ಶಬ್ದಗಳಿಂದ ಬೈಯ್ದು , ನನ್ನ ತಂದೆಯ
ತಲೆಗೆ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 07-12-2016 ರಂದು ಗುಂಡು ತಂದೆ ಶರಣಪ್ಪಾ ರಾಠೋಡ ಈತನು
ತನ್ನ ಮೋಬೈಲ ಎಲ್ಲಿಯೋ ಕಳೆದುಕೊಂಡಿದ್ದು ಅದನ್ನು ಕುಮಾರಿ ಮಹಾದೇವಿ ತಂದೆ ಕಾಶೀನಾಥ ರಾಠೋಡ ಸಾ:
ಹಡ ಗಿಲ ಹಾರುತಿ ತಾಂಡಾ (ಬಿ) ತಾ:ಜಿ: ಕಲಬುರಗಿ ರವರು ಕಳವು ಮಾಡಿತ್ತಾರೆ ಅಂತಾ 08-12-2016 ರಂದು 10
ಎಎಮಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಜಗಳ ತಗೆದು ಅವ್ಯಾಚ್ಛವಾಗಿ ಬೈಯುತ್ತಿದ್ದಾಗ ಜಗಳ
ಬಿಡಿಸಲುಬಂದ ಫಿರ್ಯಾದಿಗೆ ಅವ್ಯಾಚ್ಛ ವಾಗಿ ಬೈದು ಕಲ್ಲಿನಿಂದ ತಲೆಗೆ ಹೋಡೆದು ರಕ್ತಗಾಯ ಮಾಡಿ
ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ನಸೀರೋದ್ದಿನ್
ತಂದೆ ಮೌಲಾಸಾಬ ಮುಜಾವರ ಸಾ: ರಾಚಣ್ಣಾ ವಾಘ್ದರಗಿ ಇವರು ಈಗ ಸುಮಾರು 15 ದಿವಸಗಳಿಂದ ಕೇಂದ್ರಿಯ ವಿಶ್ವವಿದ್ಯಾಲಯ ಕಡಗಂಚಿಯಲ್ಲಿ
ನಾನು ಗೌಂಡಿ ಕೆಲಸ ಮಾಡುತ್ತಾ ಬಂದಿದ್ದೇನೆ ನನ್ನಂತೆ ನಮ್ಮ ಗ್ರಾಮದ ಸಂತೋಷ ತಂದೆ ತಿಪ್ಪಣ್ಣ
ಕಾಂಬಳೆ ಇವರು ಕೂಡಾ ಗೌಂಡಿ ಕೆಲಸ ಮಾಡುತ್ತಿದ್ದು ದಿನಾಂಕ:- 08-12-2016 ರಂದು ಬೆಳಿಗ್ಗೆ ನಾನು ಈಗ ಸುಮಾರು 1 ತಿಂಗಳ ಹಿಂದೆ ಹೊಂಡಾ ಕಂಪನಿಯ ಮೋಟಾರ ಸೈಕಲ್ ಖರೀದಿ
ಮಾಡಿದ್ದು ಅದರ ನಂ. ಬಂದಿರುವುದಿಲ್ಲ ಟೆಂಪುರ್ವರಿ ನಂ. ಕೆಎ32 ಟಿಪಿ 26663 ಇರುತ್ತದೆ ಅದನ್ನು ಕಡಗಂಚಿಯ ಕೇಂದ್ರಿಯ
ವಿಶ್ವವಿದ್ಯಾಲಯದಲ್ಲಿ ಗೌಂಡಿ ಕೆಲಸ ನಡೆದಿದ್ದು ಕಾರಣ ನನ್ನ ಮೊಟಾರ ಸೈಕಲ್ ನ್ನು ತೆಗೆದುಕೊಂಡು
ಹೋಗುತ್ತಿದ್ದು ನನ್ನಂತೆ ನಮ್ಮ ಗ್ರಾಮದ ಸಂತೋಷ ಕಾಂಬಳೆ ಈತ ಕೂಡಾ ತನ್ನ ಮೊಟಾರ ಸೈಕಲ್ ಮೇಲೆ
ನನ್ನ ಹಿಂದೆ ಬರುತ್ತಿದ್ದು ಮುಂದೆ ಕಡಗಂಚಿಗೆ ಬಂದಾಗ ನಾನು ಹಾಗೂ ನನ್ನ ಹಿಂದೆ ಬರುತ್ತಿದ್ದ
ನನ್ನ ಗೆಳೆಯ ಸಂತೋಷ ಕಾಂಬಳೆ ಇಬ್ಬರು ಕೂಡಿ ಕಡಗಂಚಿ ಬಸ್ ನಿಲ್ದಾಣದ ಎದುರುಗಡೆ ಒಂದು
ಹೊಟೇಲ್ನಲ್ಲಿ ಚಹಾ ಕೂಡಿದು ಮತ್ತೆ ಅಲ್ಲಿಂದ ನನ್ನ ಮೊಟಾರ ಸೈಕಲ್ ಮೇಲೆ ಕೇಂದ್ರಿಯ
ವಿಶ್ವವಿದ್ಯಾಲಯದ ಕಡೆಗೆ ಹೋಗುತ್ತಿದ್ದು ಹಿಂದೆ ನನ್ನ ಗೆಳೆಯ ಸಂತೋಷ ಕಾಂಬಳೆ ಈತನು ಕೂಡಾ
ಬರುತ್ತಿದ್ದು ಮುಂದೆ ಕಡಗಂಚಿ ಪೆಟ್ರೋಲ್ ಬಂಕ್ ಕ್ರಾಸಿನ ಹತ್ತಿರ ಜಂಪಿನಲ್ಲಿ ನಾನು ನಿಧಾನವಾಗಿ
ನನ್ನ ಮೊಟಾರ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ನನ್ನ ಎದುರುಗಡೆಯಿಂದ ಅಂದರೆ ಕಲಬುರಗಿ
ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸವಾರನು ತನ್ನ ಬಸ್ಸನ್ನು ಅತೀವೇಗ ದಿಂದ ಹಾಗೂ ಅಲಕ್ಷತನದಿಂದ
ನನ್ನ ಮೊಟಾರ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದು ಅದರಿಂದ ನಾನು ನನ್ನ ಮೊಟಾರ ಸೈಕಲ್ ಸಮೇತ
ಕೆಳಗೆ ಬಿದ್ದಿದ್ದು ಅದನ್ನು ನೋಡಿ ನನ್ನ ಹಿಂದೆ ಬರುತ್ತಿದ್ದ ನನ್ನ ಗೆಳೆಯ ಸಂತೋಷ ಕಾಂಬಳೆ
ಇದನ್ನು ನೋಡಿ ನನಗೆ ಎಬ್ಬಿಸಿದ್ದು ನನಗೆ ಅಪಘಾತದಿಂದ ಬಲಗಾಲ ತೊಡೆಯ ಮೇಲೆ ತರಚಿದ ಗಾಯ ಹಾಗೂ
ಬಲಗಾಲ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ಬಲ ಮುಂಗೈಗೆ ಗುಪ್ತಗಾಯವಾಗಿರುತ್ತದೆ, ನಂತರ ಅಪಘಾತ ಪಡಿಸಿದ ಬಸ್ಸ್ ಚಾಲಕನು ಸ್ವಲ್ಪ ಮುಂದಕ್ಕೆ ಹೋಗಿ ತನ್ನ ಬಸ್ಸನ್ನು ನಿಲ್ಲಿಸಿದ್ದು ಇರುತ್ತದೆ. ಸದರಿ ಕೆ.ಎಸ್.ಆರ್.ಟಿ.ಸಿ
ಬಸ್ಸ್ ನೋಡಲಾಗಿ ಅದರ ನಂ. ಕೆಎ32 ಎಫ್-1702 ಇದ್ದು ಅದರ ಚಾಲಕನು ಜನರು ಸೇರುವುದನ್ನು ಕಂಡು ಬಸ್ಸ್
ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to:
Posts (Atom)