ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 10/12/16 ರಂದು ರಾತ್ರಿ ತಾವರಗೇರಾ ಕ್ರಾಸ ಸಮೀಪ ಇರುವ
ಹೊಡ್ಡಿನ ಹತ್ತಿರದಲ್ಲಿ ಜಬ್ಬಾರಶಹಾ ಇತನು ತನ್ನ ಆಟೋರಿಕ್ಷಾ ಕೆಎ 32 ಸಿ 7695 ನೇದ್ದರ ಹಿಂದೆ
ತನ್ನ ಹೆಂಡತಿ ಶೈನಾಜಬೇಗಂ, ಮಗ ಆರೀಫಶಹಾ,ಹೆಂಡತಿ ತಮ್ಮಮೋಸಿನಶಹಾ ಇವರಿಗೆ ಕೂಡಿಸಿಕೊಂಡು ತನ್ನ ಸೈಡ
ಹಿಡಿದುಕೊಂಡು ಕಲಬುರಗಿಯಿಂದ ಆಟೋ ನಡೆಸುತ್ತಾ ಮಹಾಗಾಂವ ಕಡೆಗೆ ಹೊರಟಿದ್ದು, ಜಬ್ಬಾರಶಹಾಕ್ಕಿಂತ
ಸ್ವಲ್ಪ ಮುಂದೆ ಮೋಟಾರ ಸೈಕಲ ಕೆಎ 32 ಇಇ 5339 ನೇದ್ದರ ಮೇಲೆ ಉದಯಕುಮಾರ ನಡೆಯಿಸಿಕೊಂಡು
ಹೊರಟಿದ್ದು, ಅದೇ ಸಮಯಕ್ಕೆ ಎದುರುನಿಂದ ಹುಮನಾಬಾದ ರೋಡ ಕಡೆಯಿಂದ ಯಾವುದೋ ಒಬ್ಬ ಲಾರಿ ಚಾಲಕ
ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು
ಉದಯಕುಮಾರನ ಮೋಟಾರ ಸೈಕಲಿಗ ಡಿಕ್ಕಿ ಹೊಡೆದು ಅಪಘಾತಪಡಿಸಿ, ಅದೇ ವೇಗದಲ್ಲಿ ನಡೆಯಿಸಿಕೊಂಡು
ಜಬ್ಬಾರಶಹಾ ಆಟೋಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಲಾರಿ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ನಂತರ
ಕಲಬುರಗಿ ಕಡೆ ಓಡಿಸಿಕೊಂಡು ಹೋಗಿರುತ್ತಾನೆ. ಮೋಸಿನಶಹಾ ಇತನು ಲಾರಿ ನಂಬರ ನೋಡಿರುತ್ತಾನೆ ಅವನು
ಮನೆಗೆ ಹೋಗಿರುತ್ತಾನೆ. ಅವನಿಂದ ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋದ ಲಾರಿ ನಂಬರ ತಿಳಿದುಕೊಂಡು
ನಂತರ ತಿಳಿಸುತ್ತೇನೆ. ಈ ಅಪಘಾತದಿಂದಾಗಿ ಶೈನಾಜಬೇಗಂ,ಆರೀಫ ಶಹಾ, ಉದಯಕುಮಾರ ಇವರಿಗೆ ಹಣೆಗೆ
ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಮೂವರು ಸ್ಥಳದಲ್ಲಿ ಮೃಪಟ್ಟಿರುತ್ತಾರೆ. ಜಬ್ಬಾರಶಹಾ ಇತನಿಗೆ
ಟೊಂಕಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ. ಮೋಸಿನ ಇತನಿಗೆ ಸಣ್ಣಪುಟ್ಟ ಗಾಯಗಳಾಗಿ ರುತ್ತೇವೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಹೀನಾಕೌಸರ ಗಂಡ ಸಾದಿಕ ಅಲಿ ಸಾ;ನೂರಾನಿ ಚೌಕ ಎಂ.ಎಸ್.ಕೆ ಮಿಲ್ ಕಲಬುರಗಿ ಇವರು ದಿನಾಂಕ 21.07.2016
ರಂದು ಸಾದಿಕ ಅಲಿ ಎನ್ನುವವರ ಜೊತೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ನಮ್ಮ ತಂದೆ ತಾಯಿಯವರು 6
ತೊಲೆ ಬಂಗಾರ 10 ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಾನುಗಳೂ ಊಟದ ಕಚುಧ ಮತ್ತು ಕಲ್ಯಾಣ ಮಂಟಪದ ಖರ್ಚು 4 ಲಕ್ಷ ರೂಪಾಯಿ ನಗದು ಹಣ
ಕೊಟ್ಟಿರುತ್ತಾರೆ. ಹೀಗಾಗಿ ಒಟ್ಟು ನನ್ನ
ಮದುವೆಗೊಸ್ಕರ 25 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. ನನ್ನ ಗಂಡ ನನ್ನ ಜೊತೆ ಒಂದು
ರಾತ್ರಿಯೂ ಕೂಡಾ ದಾಂಪತ್ಯ ಜೀವನ ನಡೆಸಲಿಲ್ಲ ಒಂದು ತಿಂಗಳವಾದ ನಂತರ ನನ್ನ ಗಂಡನನ್ನು ದಿನಾಂಕ
20.08.2016 ರಂದು ರಾತ್ರಿ 9 ಗಂಟೆಗೆ ವಿಚಾರಿಸಿದರೆ 5 ಲಕ್ಷ ರೂಪಾಯಿ ವರದಕ್ಷಿಣೆ ಕೊಟ್ಟರೆ ಮಾತ್ರ ನಿನ್ನ ಜೊತೆ ಸಂಬಂದ ಬೆಳೆಸುತ್ತೇನೆ. ನಹಿತೋ ತಲಾಖ ದೇತೆ ಎಂದು
ಹೇಳಿದ ನಂತರ ಈ ವಿಷಯ ಬೇರೊಬ್ಬರಿಗೆ ತಿಳಿಸಿದರೆ ನಾನೇ ನಿನಗೆ ಊಟದಲ್ಲಿ ವಿಷ ಹಾಕಿ
ಸಾಯಿಸುತ್ತೇನೆ ನಂತರ ನೀನೆ ವಿಷ ಕುಡಿದು ಸತ್ತಿದ್ದಾಳೆ ಎಂದು ಹೇಳುತ್ತೇನೆ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲದೇ ನೀನು ಎನಾದರೂ ಎದುರು ಮಾತನಾಡಿದರೆ ನಿನ್ನ ಕೂದಲು ಹಿಡಿದು ನಿನ್ನ ತಲೆ ಗೋಡೆಗೆ
ಹೊಡೆಯುತ್ತೇನೆ ಎಂದು ನನಗೆ ಜೀವದ ಬೆದರಿಕೆ ಹಾಕಿದ್ದಾನೆ. ದಿನಾಂಕ 11.09.2016 ರಂದು 6 ಗಂಟೆಗೆ
ನನ್ನ ಗಂಡನ ಮನೆಯಲ್ಲಿ ಹಾಗೆ ನನ್ನ ಗಂಡನ ಸಹೋದರಿಯರೆಲ್ಲರೂ ಕೂಡಾ ಪಕ್ಕದ ಮನೆಯಲ್ಲೇ ವಾಸ
ಮಾಡುತ್ತಿದ್ದರಿಂದ ನನ್ನ ನಾದಿನಿಯ ಗಂಡ ಸಾದಿಕ ಈತನು ಮದುವೆಯ ಸಮಯದಲ್ಲಿ ಸಾಮಾನು ಸರಿಯಾಗಿ
ಕೊಟ್ಟಿಲ್ಲವೆಂದು ನನ್ನ ನಾದಿನಿ ನಸೀಂ ಬೇಗಂ ಇವಳು ಹೇಳುವದೆನೆಂದರೆ ನನ್ನ ಅಣ್ಣನನ್ನು
ಇನ್ನೊಬ್ಬರ ಜೊತೆ ಮದುವೆ ಮಾಡಿದ್ದರೆ 5 ಲಕ್ಷ ರೂಪಾಯಿ ಕೊಡುತ್ತಿದ್ದರು. ನಿನ್ನ ಜೊತೆ ಸುಮ್ಮನೆ
ಮದುವೆ ಮಾಡಿದಂಗ ಆಗಿದೆ ಎಂದು ಹಿಂಸಿಸುತ್ತಿದ್ದಳು. ನಂತರ ಅಬೇದಾ ಬೇಗಂ ಇವಳು ಬಾರ್ ಬಾರ್ ಮನೆಗೆ
ಬಂದು ನನ್ನ ಅಣ್ಣನಿಗೆ 1 ಲಕ್ಷ ರೂಪಾಯಿ ಶಾಲರಿ ಇದೆ ಮದುವೆಯಲ್ಲಿ 5,00,000/- ರೂಪಾಯಿ ಕೊಟ್ಟರೆ ನಿಮಗೆ ಏನು ತೊಂದರೆ ಆಗುತ್ತಿತ್ತು ಎಂದು
ತೊಂದರೆ ಕೊಡುತ್ತಿದ್ದಳು. ನಾದಿನಿಯ ಗಂಡನಾದ ರಹಮತ ಇತನು ಯಾವ ರೀತಿ ಅವಮಾನಸುತ್ತಿದ್ದ ಎಂದರೆ ಏ
ಲಡಕಿ ಪಸಂದ ನಹಿ ಇಸಕೆ ಲಿಯೆ ಉಸುಕು ಮೂಡ ನಹಿ ಆತೆ ಅಂಥ ಹೇಳುತ್ತಿದ್ದ. ಈ ಎಲ್ಲಾ ವಿಷಯ ನನ್ನ
ಅತ್ತೆಯಾದ ಸಾಬೆರಾ ಬೇಗಂ ಇವರಿಗೆ ಹೇಳಲು ಹೋದರೆ ಇದೆಲ್ಲಾ ನಾನೇ ಹೇಳಿ ಕೊಟ್ಟಿನಿ. ಮೊದಲು ನೀನು
5 ಲಕ್ಷ ರೂ ತಂದು ನಂತರ ನೋಡು ಎಂದು
ಹೇಳಿದ್ದಾಳೆ. ನಂತರ ನನ್ನ ಗಂಡನು ಕಂಪನಿಯ ಕೆಲಸದ ನಿಮಿತ್ಯ 45 ದಿವಸ ನೆದರಲ್ಯಾಂಡಗೆ ಹೋಗಿ ಹೋದ
ತಿಂಗಳ ನವೆಂಬರನಲ್ಲಿ ಮರಳಿ ಬಂದಿದ್ದಾನೆ ಅವನು ಬಂದ ನಂತರ ನಾನು 3 ಬಾರಿ ಪಂಚಾಯತಿಯನ್ನು ದಿನಾಂಕ
01.11.2016 ರಂದು 13,11,2016 ರಂದು ಮತ್ತು ದಿನಾಂಕ 20.11.2016 ರಂದು ಅವರ ಮನೆಯಲ್ಲಿಯೇ 5 ಗಂಟೆಗೆ ಹಿರಿಯರ
ಸಮ್ಮುಖದಲ್ಲಿ ಮಾಡಿಸಿದ್ದೆನೆ. ಇದಕ್ಕೆ ಅವನಾಗಲೀ ಅಥವಾ ಅವನ ಕುಟುಂಬದವರಾಗಲೀ ಕಿಮ್ಮತ್ತು
ಕೊಟ್ಟಿಲ್ಲ ಆದ್ದರಿಂದ ನಾನು ಮತ್ತೇ ನನ್ನ ಕುಟುಂಬಸ್ಥರೊಂದಿಗೆ ಚರ್ಚಿಸಿ ಇಂದು ತಮ್ಮ ಬಳಿಗೆ
ಬಂದು ದೂರು ಕೊಡಲು ವಿಳಂಬವಾಗಿರುತ್ತದೆ, ಹೀಗಾಗಿದ್ದರಿಂದ ನನ್ನ ಜೊತೆ ದಾಪಂತ್ಯ ಜೀವನ ನಡೆಸದ
ಮತ್ತು 5 ಲಕ್ಷ ರೂ ತರುವಂತೆ ಒತ್ತಾಯಿಸುತ್ತಿರುವ ಮತ್ತು ನನಗೆ ಜೀವ ಬೆದರಿಕೆ ಹಕಿದ ನನ್ನ ಗಂಡನ
ಮೇಲೆ ಮತ್ತು ಅದಕ್ಕೆ ಸಹಕರಿಸಿದ ಮತ್ತು ಪ್ರಚೋದಿಸಿದ ನಾದಿನಿಯ ಗಂಡಂದಿರ ಮೇಲೆ ಮತ್ತು ನಾದಿನಿಯರ
ಮೇಲೆ ಮತ್ತು ನನ್ನ ಅತ್ತೆಯ ಮೇಲೆ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೋಡಬೇಕಾಗಿ
ತಮ್ಮಲ್ಲಿ ವಿನಂತಿಸಿಕೊಳ್ಳೂತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment