POLICE BHAVAN KALABURAGI

POLICE BHAVAN KALABURAGI

18 August 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ  ಠಾಣೆ :- ದಿನಾಂಕ 17-08-2016 ರಂದು ಶ್ರೀ ದೇಸಣ್ಣ ತಂದೆ ಬಸವಣ್ಣಪ್ಪ ಕುಂಬಾರ ಸಾ:ಬನ್ನೂರ ರವರಿಗೆ ಲಾರಿ ಚಾಲಕನಾದ ನಾಗಮೂರ್ತಿ ಈತನು ಹುಮನಾಬಾದದಲ್ಲಿರುವ ಲೈಟಿನ ಕಂಬಗಳನ್ನು ತೆಗೆದುಕೊಂಡು ಬರುವ ಕುರಿತು ತನ್ನ ಜೊತೆ ಆತನ ಲಾರಿ ಕೆಎ 32 ಬಿ 1692 ನೇದ್ದರಲ್ಲಿ ಕಲಬುರಗಿಯಿಂದ ಹುಮನಾಬಾದ ಕಡೆಗೆ ಹೋಗುವಾಗ ಲಾರಿ ಚಾಲಕ ನಾಗಮೂರ್ತಿ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಕಮಲಾಪೂರ ಸಿಮಾಂತರದ ಚಿಂದಿ ಬಸವಣ್ಣ ಏರಿನಲ್ಲಿ ರಸ್ತೆ ಬದಿಯ ಗಿಡೆಕ್ಕೆ ಅಪಘಾತ ಪಡಿಸಿದ್ದು. ಅಪಘಾತದಿಂದ ಲಾರಿ ಮುಂದಿನ ಭಾಗ ಡ್ಯಾಮೇಜ ಆಗಿ ಸಂಪೂರ್ಣ ಗಿಡದಲ್ಲಿ ಸಿಕ್ಕು ಹಾಕಿಕೊಂಡಿದ್ದು. ಲಾರಿಯ ರೇಡಿಯಟರ ನೀರು ದೇಸಣ್ಣನ ಟೊಂಕಕ್ಕೆ ಎರಡು ಕಾಲುಗಳ ತೊಡೆಯ ಮೇಲೆ ಮತ್ತು ಗುಪ್ತಾಂಗದ ಮೇಲೆ ಬಿದ್ದು ಬೊಬ್ಬೆಗಳು ಬಂದಿದ್ದು ಲಾರಿ ಚಾಲಕ ನಾಗಮೂರ್ತಿಯ ಎರಡು ಕಾಲುಗಳು ಗಿಡದ ಬಡ್ಡೆ ಮತ್ತು ಲಾರಿ ಇಂಜನ ನಡುವೆ ಸಿಲುಕಿ ಆತನ ತಲೆಗೆ ಮತ್ತು ದೇಹದ ಇತರ ಬಾಗದಲ್ಲಿ ರಕ್ತಗಾಯ, ಗುಪ್ತಗಾಯವಾಗಿದ್ದು ರಸ್ತೆಯ ಮೇಲೆ ಹೊಗುತ್ತಿದ್ದ ವಾಹನ ಸವಾರರು ಮತ್ತು ಅಲ್ಲೆ ಹೊಲದಲ್ಲಿ ಕೇಲಸ ಮಾಡುವವರು ಅಪಘಾತವಾಗಿದ್ದನ್ನು ನೊಡಿ ಬಂದು ನನಗೆ ಹೊರಗೆ ತೆಗೆದು ನೋಡಲಾಗಿ ನಾಗಮೂರ್ತಿ ಮೃತ ಪಟ್ಟಿದ್ದು.ಲಾರಿ ಚಾಲಕ ನಾಗಮೂರ್ತಿ ಇತನು ಲಾರಿ ನಂ ಕೆಎ 32 ಬಿ 1692 ನೇದ್ದು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಬಂದು ರಸ್ತೆಯ ಪಕ್ಕದಲ್ಲಿರುವ ಗಿಡಕ್ಕೆ ಹಾಯಿಸಿ ಅಪಘಾತ ಪಡಿಸಿ ನನಗೆ ದು:ಖಾಪತ ಗೊಳಸಿದ್ದು ಮತ್ತು ಆತನು ಮೃತ ಪಟ್ಟಿದ್ದು ಇರುತ್ತದೆ. ಸದರಿಯವನ ವಿರುಧ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಹಲ್ಲೆ ಪ್ರಕರಣ:
ನೆಲೋಗಿ  ಪೊಲೀಸ್ ಠಾಣೆ: ದಿನಾಂಕ 16-08-2016ರಂದು ಶ್ರೀ ಚನ್ನಪ್ಪಾ ತಂದೆ ಬೀಮಣ್ಣಾ ಬಾಸಗಿ ಸಾಃ ಮೊಗನಇಟಗಾ ತಾ|| ಜೇವರಗಿ   ರವರು ಶರಣಪ್ಪಾ ರವರೊಂದಿಗೆ ತಮ್ಮ ಹೊಲದಲ್ಲಿರುವಾಗ ತಮ್ಮ ಹೊಲದ ಬಾಂದಾರಿಗೆ ಹೊಂದಿ ಹಣಮಂತ ಇವರ ಹೊಲ ಇದ್ದು, ನಮ್ಮ ಒಂದು ಎತ್ತು ಅವರ ಮೆಣಸಿನ ಗಿಡದಲ್ಲಿ ಹಾಯ್ದಿದ್ದು, ಆಗ ಹಣಮಂತ ಮತ್ತು ಅವನ  ಮಕ್ಕಳಾದ ಸಿದ್ದಪ್ಪ ಭಾಸಗಿ, ಭೀರಪ್ಪ ಇವರು ಅಲ್ಲಿಗೆ ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ  ಕೊಲೆ ಮಾಡುವ ಉದ್ದೇಶದಿಂದ ಭೀರಪ್ಪನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಲೆಗೆ ಮೇಲೆ ಹೊಡೆದನು. ಆಗ ನಮ್ಮ ಅಣ್ಣ ಶರಣಪ್ಪನು ಬಿಡಿಸಲು ಬಂದಾದ ಅವನಿಗೆ ಸಿದ್ದಪ್ಪನು ಬಡಿಗೆಯಿಂದ ಹೊಡೆದನು. ಹಣಮಂತನು ಇವರಿಗೆ ಬಿಡಬೇಡಿ ಹೊಡೆದು ಖಲಾಸ ಮಾಡಿ ಎಂದು ಹೊಡೆಯುತ್ತಿರುವಾಗ ನಾವೆಲ್ಲರೂ ಚೀರಾಡುವದನ್ನು ನೋಡಿ ರಸ್ತೆಯಲ್ಲಿ ಹೋಗುತ್ತಿದ್ದ ಲಕ್ಷ್ಮಣ, ಶರಣಪ್ಪ ಮ್ಯಾಕೇರಿ ಇವರು ಬಂದು ಜಗಳ ಬಿಡಿಸಿ ನಮಗೆ ಜೀಪಿನಲ್ಲಿ ಹಾಕಿಕೊಂಡು ಚಿಕಿತ್ಸೆ ಕೊಡಿಸಿದ್ದು. ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಕೊಡಲಿ, ಬಡಿಗೆಯಿಂದ ಹೊಡೆದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ ಠಾಣೆ :ದಿನಾಂಕ 17/08/2016 ರಂದು ಶ್ರೀಮತಿ ಸೀನಾಬಾಯಿ ಗಂಡ ಚಂದ್ರಕಾಂತ ಚವ್ಹಾಣ ಸಾ: ಖಣದಾಳ ತಾಂಡಾ ಇವರು ಠಾಣೆಗೆ ಹಾಜರಾಗಿ ತನ್ನ ಗಂಡ ಚಂದ್ರಕಾಂತ ಇವರು ಈಗ ಸುಮಾರು ಒಂದು ವರ್ಷದ ಹಿಂದೆ ತಮ್ಮ ತಾಂಡಾದ ಶ್ರಿಕಾಂತ ತಂದೆ ಶಂಕರ  ಪವಾರ ಇವರ ಹತ್ತೀರ 5000/- ರೂ ಸಾಲ ಪಡೆದುಕೊಂಡಿದ್ದು . ಈ ಪಡೆದುಕೊಂಡಿರುವ ಸಾಲ ಮರಳಿ ಕೊಟ್ಟಿದ್ದು ಆದರೆ ಸದರಿ ಶ್ರೀಕಾಂತ ಇತನು ಇದರ ಬಡ್ಡಿ ಹಣ ಕೋಡು ಅಂತ ಆಗಾಗ ನಮ್ಮ ಮನೆಗೆ ಬಂದು ನನ್ನ ಗಂಡನ ಜೋತೆಗೆ ತಕರಾರು ಮಾಡುತ್ತಾ ಬಂದಿದ್ದು ನನ್ನ ಗಂಡ ದಿನಾಂಕ 16/8/2016 ರಂದು  ಕೂಲಿಕೆಲಸಕ್ಕೆ ಹೋಗಿದ್ದಾಗ ಶ್ರೀಕಾಂತನು ಆತನ  ಅಣ್ಣ ಹೀರು ಮತ್ತು ಹೀರುನ ಮಗ ಕಿರಣ ನೊಂದಿಗೆ ನಮ್ಮ ಮನೆಗೆ ಬಂದು ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಕೊಡಬೇಕಾದ ಬಡ್ಡಿ ಹಣ ಕೋಡುತ್ತಿಲ್ಲಾ ಎನ್ನುತ್ತಾ ಶ್ರಿಕಾಂತ ಇತನು ನನಗೆ ಕೈಹಿಡಿದು ಎಳೆದಾಡಿ  ಕೆಳಗೆ ಕೆಡವಿದ್ದು ಆಗ ಕಿರಣನು  ಕೈಯಿಂದ ಬೆನ್ನಲ್ಲಿ ಹೊಡೆದಿರುತ್ತಾನೆ ಹೀರು ಇತನು ಇನ್ನು ಹೊಡಿರಿ ಎನ್ನುತ್ತಾ ಅಲ್ಲಿಯೆ ನಿಂತು ಪ್ರಚೊದನೆ ನೀಡಿರುತ್ತಾನೆ . ಎಂಧು ಸಲ್ಲಿಸಿದ ದೂರು ಸಾರಾಂಶದ ಮೆಲಿಂದ ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಾಕಾ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ: 16/08/2016 ರಂದು ಹೊನ್ನಕಿರಣಗಿ ಗ್ರಾಮದ ಕೋಣಿನ ರವರ ಬಿಲ್ಡಿಂಗದ ಹತ್ತಿರ ಒಬ್ಬ ಮನುಷ್ಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ  ಭಾತ್ಮಿ ಬಂದ ಮೇರೆಗೆ ಸಿಪಿಐ ಎಮ್‌‌, ಬಿನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಫರಹತಾಬಾದ ಪೊಲೀಸ್ ಠಾಣೆ ರವರು ಇಬ್ಬರು ಪಂಚರಾದ 1) ಶ್ರೀ ಭಗವಂತ್ರಾಯ ತಂದೆ ಅಣ್ಣಪ್ಪಾ ಸಾತನೂರ ಸಾ: ಹೊನ್ನಕಿರಣಗಿ 2) ಶ್ರೀ ಪ್ರಶಾಂತ ತಂದೆ ಬಸವರಾಜ ಕಾಡಾದಿ ಸಾ: ಹೊನ್ನಿಕಿರಣಗಿ ರವರೊಂದಿಗೆ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ -159 ನಾಗೇಂದ್ರ , ಪ್ರಭು ಸಿಪಿಸಿ 366 ರವರನ್ನು ಕರೆದುಕೊಂಡು ಭಾತ್ಮಿ ಇದ್ದ ಸ್ಥಳದ ಹತ್ತಿರ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ   ಮೇಲೆ ಒಬ್ಬ ಮನುಷ್ಯನು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂ.ಗೆ 80 ರೂ ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರದುಕೊಳ್ಳುತ್ತಿರುವುದನ್ನು ನೋಡಿ ಪಂಚರ ಸಮಕ್ಷಮದಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ವಿಚಾರಿಸಲಾಗಿ ತನ್ನ ಹೆಸರು ರಾಜಶೇಖರ  ತಂದೆ ಶರಣಯ್ಯ ಹಿರೇಮಠ ಸಾ: ಹೊನ್ನಕಿರಣಗಿ ಅಂತಾ ತಿಳಿಸಿದ್ದು, ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ 1) ಎರಡು ಮಟಕಾ ಚೀಟಿ ಅ:ಕಿ: 00=00 ರೂ, 2) ಒಂದು ಬಾಲ್‌ ಪೆನ್‌ ಅ:ಕಿ: 00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 260/- ರೂ.ಗಳು 4) ಒಂದು ಶ್ಯಾಮಸಂಗ ಮೋಬೈಲ ಅ,ಕಿ 300/- ರೂ ಕಿಮ್ಮತ್ತಿನವು ಸಿಕ್ಕವು. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಾಕಾ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ   : ದಿನಾಂಕ: 16/08/2016 ರಂದು ಹೊನ್ನಕಿರಣಗಿ ಗ್ರಾಮದಲ್ಲಿ  ಮಟಾಕ ದಾಳಿ ಮಾಡಿ ಆರೋಪಿತನೊಂದಿಗೆ ಠಾಣೆಗೆ ಮರಳಿ ಬರುತ್ತಿರುವಾಗ ಅದೇ ಗ್ರಾಮದ ದೇವಮ್ಮ ಗುಡಿಯ ಹತ್ತಿರ  ಇನ್ನೊಬ್ಬ ಮನುಷ್ಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ  ಭಾತ್ಮಿ ಬಂದ ಮೇರೆಗೆ ಸಿಪಿಐ ಎಮ್‌‌, ಬಿನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಫರಹತಾಬಾದ ಪೊಲೀಸ್ ಠಾಣೆ ರವರು ಇಬ್ಬರು ಪಂಚರಾದ 1) ಶ್ರೀ ಭಗವಂತ್ರಾಯ ತಂದೆ ಅಣ್ಣಪ್ಪಾ ಸಾತನೂರ ಸಾ: ಹೊನ್ನಕಿರಣಗಿ 2) ಶ್ರೀ ಪ್ರಶಾಂತ ತಂದೆ ಬಸವರಾಜ ಕಾಡಾದಿ ಸಾ: ಹೊನ್ನಿಕಿರಣಗಿ ರವರೊಂದಿಗೆ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ -159 ನಾಗೇಂದ್ರ , ಪ್ರಭು ಸಿಪಿಸಿ 366 ರವರನ್ನು ಕರೆದುಕೊಂಡು ಭಾತ್ಮಿ ಇದ್ದ ಸ್ಥಳದ ಹತ್ತಿರ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ   ಮೇಲೆ ಒಬ್ಬ ಮನುಷ್ಯನು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂ.ಗೆ 80 ರೂ ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರದುಕೊಳ್ಳುತ್ತಿರುವುದನ್ನು ನೋಡಿ ಪಂಚರ ಸಮಕ್ಷಮದಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ವಿಚಾರಿಸಲಾಗಿ ತನ್ನ ಹೆಸರು ಹೆಸರು ಸಂತೋಷ  ತಂದೆ ಪ್ರಭು ಬೂಸಾಬೋ ಸಾ: ಹೊನ್ನಕಿರಣಗಿ ಅಂತಾ ತಿಳಿಸಿದ್ದು, ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ 1) ಎರಡು ಮಟಕಾ ಚೀಟಿ ಅ:ಕಿ: 00=00 ರೂ, 2) ಒಂದು ಬಾಲ್‌ ಪೆನ್‌ ಅ:ಕಿ: 00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 710/- ರೂ.ಗಳು 4) ಒಂದು ಶ್ಯಾಮಸಂಗ ಮೋಬೈಲ ಅ,ಕಿ 300/-ರೂ ಕಿಮ್ಮತ್ತಿನವು ಸಿಕ್ಕವು. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

16 August 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ 13-08-2016 ರಂದು ಮುಗಟಾ ಬಸ್ ನಿಲ್ದಾಣದ ಸಮೀಪ ಸೇಡಂ ದಿಂದ ಕಲಬುರಗಿಗೆ ಹೋಗುವ ರಾಜ್ಯ ಹೇದ್ದಾರಿ ರೋಡಿನ ಎಡಭಾಗಕ್ಕೆ ಫಿರ್ಯಾದಿಯ ಗಂಡನಾದ ಬೀರಪ್ಪಾ ಈತನು ತಾಣು ಚಲಾಯಿಸುತ್ತಿದ್ದ ಟಿಪ್ಪರ ನಂ ಕೆಎ-32 ಬಿ-5232 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಟಿಪ್ಪರ ಪಟ್ಲಿ ಆಗಿ ಕ್ಯಾಬಿನಲ್ಲಿ ಸಿಕ್ಕಿ ಹಾಕಿಕೊಂಡು ಭಾಯಿಗೆ ಭಾರಿ ರಕ್ತಗಾಯ, ಕುತ್ತಿಗೆ ಹತ್ತಿರ ರಕ್ತಗಾಯ, ಎಡಗೈ ಮೋಣಗೈ ಹತ್ತಿರ ರಕ್ತಗಾಯ, ತಲೆಯಲ್ಲಿ ಹಾಗೂ ಹಣೆಯ ಮೇಲೆ ಭಾರಿ ಗುಪ್ತಾಗಾಯ, ಹಾಗೂ ಇತರೆ ಕಡೆಗಳಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ನೀಲಮ್ಮ ಗಂಡ ಬೀರಪ್ಪಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೆಲೋಗಿ ಠಾಣೆ : ದಿನಾಂಕ: 15-08-2016 ರಂದು ಮುಂಜಾನೆ ಸಿಂದಗಿಗೆ ಹೋಗಿ ಸಾಯಂಕಾಲ 7-00 ಪಿ.ಎಮ್ ಕ್ಕೆ ನಾನು ಜೇರಟಗಿಗೆ ಬಂದಾಗ ಸ್ವಲ್ಪ ಸಮಯದ ನಂತರ ನನ್ನ ಮಗ ಶಿವಾನಂದ ಸೈಕಲ ಮೋಟಾರ ತಗೆದುಕೊಂಡು ಬಂದನು ನಾನು ಅವನ ಸೈಕಲ ಮೋಟಾರ ಮೇಲೆ ಕುಳಿತು ಕೆನಾಲ ಮೇಲಿನಿಂದ ನಮ್ಮ ಹೊಲಕ್ಕೆ  ಹೋಗಬೇಕೆಂದು ಜೇರಟಗಿ ಬಸ್ಸ ನಿಲ್ದಾಣದಿಂದ ಮೋರಟಗಿ ರೋಡಿನ ಮೇಲೆ ಹೊರಟಾಗ ಮುಂದೆ ಡ್ವಾರ ಹೊಲದ ಹತ್ತಿರ ಇರುವ ಸ್ಪೀಡ ಬ್ರೇಕ ಹತ್ತಿರ ಬಂದಾಗ ನಮ್ಮ ಮುಂದೆ ಒಂದು ಲಾರಿ ಹೋಗುತ್ತಿತ್ತು ಅದರ ಚಾಲಕನು ಸ್ಪಿಡ ಬ್ರೆಕರ ಹತ್ತಿರ ಸಾವಕಾಶ ನಡೆದಾಗ ನನ್ನ ಮಗ ತನ್ನ ಸೈಕಲ ಮೋಟಾರ ಸವಕಾಶ ಮಾಡಿದಾಗ ಹಿಂದಿನಿಂದ ಒಂದು ಬಿಳಿ ಕಾರ ಬಂದಿತ್ತು ಅದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಸೈಕಲ ಮೋಟಾರಕ್ಕೆ ಜೋರಾಗಿ ಡಿಕ್ಕಿ ಹೊಡೆದನು ಆಗ ನನ್ನ ಮಗ ಲಾರಿಯ ಹಿಂದಿನ ಗಾಲಿಯಲ್ಲಿ ಹೋಗಿ ಬಿದ್ದನು, ಆಗ ಅವನ ಎಡಗಾಲ ತೊಡೆಯ ಮೇಲೆ ಹಾಯ್ದು ಹೋಯಿತು, ಆಗ ಅವನಿಗೆ ಬಾರಿ ರಕ್ತಗಾಯವಾಯಿತು, ಅಷ್ಟರಲ್ಲಿ ನಮ್ಮ ಮೈದುನನ ಮಕ್ಕಳಾದ ಸಂತೋಷ ಮತ್ತು ಶಿವಶರಣಪ್ಪ ಅಲ್ಲಿಗೆ ಬಂದರು ಆಗ ಕಾರ ನಂಬರ ನೋಡಲಾಗಿ MH-43 R-8458  ಅಂತಾ ಇರುತ್ತದೆ. ಲಾರಿ ನಂಬರ MH-09  CU-7126  ಇರುತ್ತದೆ. ನಮ್ಮ ಸೈಕಲ ಮೋಟಾರ ನಂಬರ KA-05  ED-4551  ಇದೆ ಅಂತಾ ಹೇಳಿ ಒಂದು ಜೀಪ ತಗರೆಸಿ ನನ್ನ ಮಗನನ್ನು ಅದರಲ್ಲಿ ಹಾಕಿಕೊಂಡು ಬಿಜಾಪೂರ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ಹಾದಿಯಲ್ಲಿ ಮೃತಪಟ್ಟಿರುತ್ತಾನೆ . ಈ ಘಟನೆ ಯಲ್ಲಿ ನನಗೆ ತೆಲೆಗೆ, ಕಾಲಿಗೆ ರಕ್ತಗಾಯಗಳು ಆಗಿರುತ್ತವೆ. ಕಾರ ಚಾಲಕ ಕಾರ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ಕಮಲಾಬಾಯಿ ಗಂಡ ರುದ್ರಪ್ಪ ಸೋಮಜಾಳ ಸಾ|| ಯಾತನೂರ ತಾ|| ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ದಿನಾಂಕ 15-08-2016 ರಂದು ನಮ್ಮ ಟಿಪ್ಪರ ಚಾಲಕ ಮಾಣಿಕ ಪವಾರನು ನನಗೆ ಪೋನ ಮಾಡಿ ಬೆಳಗಿನ ಜಾವ ನಮ್ಮ ಮಾಲಿಕರಾದ ಶರಣಪ್ಪ ಸಾರವಾಡ ರವರು ತಮ್ಮ ಡಿಸೇಲ್ ತೆಗೆದುಕೊಂಡು ಬರುವಾಗ ಬುಲೇರೋ ವಾಹನ ನಂ. ಕೆಎ-28 ಎ-1209 ನೇದ್ದನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ದುಧನಿಯವರ ಧಾಬಾ ಹತ್ತಿರ ನಿಂತ ನಮ್ಮ ಲಾರಿ ನಂ. ಕೆಎ-33 ಎ0866 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿರುತ್ತಾರೆ. ಈ ಘಟನೆಯಲ್ಲಿ ಬುಲೇರೋ ವಾಹನದ ಸ್ಟೇರಿಂಗ್ ಮಾಲಿಕರ ಎದೆಗೆ ಗುದ್ದಿ ಭಾರಿ ಒಳಪಟ್ಟು ಆಗಿ ಕಿವಿ ಮತ್ತು ಮೂಗಿನಿಂದ ಭಾರ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿದನು. ನಂತರ ಪಕ್ಕದ ಮನೆಯ ರಾಜು ಸ್ವಾಮಿ ಮತ್ತಿತ್ತರು ಘಟನೆಯ ಸ್ಥಳಕ್ಕೆ ಬಂದು ನನ್ನ ಗಂಡನ ಶವವನ್ನು ನೋಡಿರುತ್ತೆವೆ. ನನ್ನ ಗಂಡನು ತನ್ನ ಬುಲೆರೋ ವಾಹನನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಧುದನಿಯವರ ಧಾಬಾದ ಹತ್ತಿರ ನಿಂತ ನಮ್ಮ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಎದೆಗೆ ಭಾರಿ ಒಳಪೆಟ್ಟಾಗಿ ಕಿವಿ ಮತ್ತು ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ಶ್ರೀಮತಿ ನಿಂಗಮ್ಮ ಸಾರವಾಡ ಸಾ || ಅಪಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ತ್ರಿಶಾಂಕ ಪಾಟೀಲ ತಂದೆ ಹಣಮಂತರಾಯ ಪಾಟೀಲ ಸಾಃ ಮನೆ ನಂ 1165/5/1 ಐವಾನ ಶಾಹಿ ಕಾಲೋನಿ ಸ್ಟೇಷನ ರೋಡ ಕಲಬುರಗಿ ರವರು ದಿನಾಂಕಃ 14.08.2016 ರಂದು ನನ್ನ ಗೆಳೆಯನಾದ ಪ್ರಶಾಂತ ಅಂಕಲಗಿ  ಸಾಃ ಪಿ&ಟಿ ಕಾಲೋನಿ ಕಲಬುರಗಿ ಇತನ ಹುಟ್ಟುಹಬ್ಬ ಇರುವದರಿಂದ ಅವನ  ಅಭಿಮಾನಿಗಳು (ಗೆಳೆಯರು ) ಇರುವದರಿಂದ ಕಲಬುರಗಿ ನಗರದಲ್ಲಿ ಸುಮಾರು ಕಡೆಗಳಲ್ಲಿ ಬೆಳಿಗ್ಗಿನಿಂದಲ್ಲೇ ಹುಟ್ಟು ಹಬ್ಬ ಆಚರಿಸುತ್ತಾ ಬಂದಿದ್ದು ಸಾಯಾಂಕಾಲ ಅಂದಾಜು 9.00 ಗಂಟೆಯ ಸುಮಾರಿಗೆ ಪ್ರಶಾಂತ ಅಂಕಲಗಿಯ  ಅತ್ಮೀಯ ಗೆಳೆಯನಾದ ಶಹಾಬಜಾರ ತಾಂಡದ ರವಿ ರಾಠೋಡ ಇವರು ಸಹ ಪ್ರಶಾಂತ ಇತನಿಗೆ ತಮ್ಮ ಮನೆಗೆ ಕೇಕ್ ಕತ್ತರಿಸುವ ಕುರಿತು ಆಮಂತ್ರಣ ನೀಡಿದ್ದರಿಂದ  ನಾನು ನನ್ನ ಕಾರ ನಂ ಕೆಎ 39-ಎಮ್ 1385 ನೇದ್ದರಲ್ಲಿ  ನನ್ನ ಗೆಳೆಯರಾದ  ವಿರೇಶ, ವಿರೇಶ ಸ್ವಾಮಿ, ಅಭಿಷೇಕ, ಮತ್ತು ಬಸು ಪಾಟೀಲ ಇತನು ತನ್ನ ಸ್ಕಾರ್ಪಿಯೂ ವಾಹನ ನಂ ಕೆಎ32 ಎನ್ 7110 ನೇದ್ದರಲ್ಲಿ  ಬಸು ಪಾಟೀಲ ಮತ್ತು ಅವನ ಗೆಳೆಯರು ಇನ್ನೊಂದು ವಾಹನದಲ್ಲಿ ಪ್ರಶಾಂತ ಮತ್ತು ಅವನ ಗೆಳೆಯರು ಕೂಡಿಕೊಂಡು ವಾಹನದಲ್ಲಿ ಕುಳಿತುಕೊಂಡು ಪಿಲ್ಟರ್ ಬೆಡ್ ಕ್ರಾಸದ ಮುಖಾಂತರ ಶಹಾಬಜಾರ ತಾಂಡಕ್ಕೆ ಹೋಗುವ ಕುರಿತು 9.30 ಗಂಟೆಗೆ ಎಮ್.ಟಿ.ಆರ್ ಇವರ ಮನೆಯ ಎದುರಗಡೆ ರಸ್ತೆಯ ಮೇಲೆ ಬರುತ್ತಿದ್ದಾಗ ಒಮ್ಮೇಲೆ  ಶಹಾಬಜಾರ ತಾಂಡದ  ಅರುಣ @ ಪವನ, ಮಹ್ಮದ ಗೌಸ್, ಸೈನಿಕ, ಪ್ರದೀಪ್ 7 ಸ್ಟಾರ್, ಶರಣು ಅವರಾದಿ ಮತ್ತು ಇತರೆ 15-20 ಜನರು ತಮ್ಮ ಕೈಗಳಲ್ಲಿ ತಲಾವರ, ಮಚ್ಚು, ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ, ನಮ್ಮ ವಾಹನಗಳಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ, ನಾವು  ಕೆಳಗೆ ಇಳಿಯುವಷ್ಟರಲ್ಲೇ ಏನರೋ ರಂಡಿ ಮಕ್ಕಳೆ ನಮ್ಮ ತಾಂಡಕ್ಕೆ ಬರಬೇಡಿರಿ ಅಂತಾ ಹೇಳಿದ್ದರು ಮತ್ತೆ ತಾಂಡಕ್ಕೆ ಬರುತ್ತಿದ್ದರಿ ರಂಡಿ ಮಕ್ಕಳೆ ನಿಮಗೆ ಇಂದು ಜೀವ ಸಹಿತ ಬಿಡುವದಿಲ್ಲ ಬೋಸಡಿ ಮಕ್ಕಳೆ ಅಂತಾ ಅವಾಚ್ಯ ಶಬ್ಧಗಳಿಂದ ಬೈಯುತ್ತಾ  ಸದರಿಯವರೆಲ್ಲರು ನಮ್ಮ ವಾಹನಗಳ ಮೇಲೆ ತಲಾವರ, ಮಚ್ಚು, ಬಡಿಗೆ, ಕಲ್ಲುಗಳಿಂದ ಕಾರು, ಸ್ಕಾರರ್ಪಿಯೂದ ಗ್ಲಾಸಗಳಿಗೆ ಹೊಡೆದು  ಅಂದಾಜು 15000/- ರಿಂದ 20,000/- ರೂಗಳಷ್ಟು  ಲುಕ್ಸ್ ನ ಮಾಡಿದ್ದು ಅಲ್ಲದೆ ಇವರು ಹೊಡೆಯುವದನ್ನು ನೋಡಿ ನಾವು ಗಾಡಿಗಳಿಂದ ಕೆಳೆಗೆ ಇಳಿಯುವಷ್ಟರಲ್ಲೇ ತಮ್ಮ ಕೈಗಳಲ್ಲಿರುವ ತಲಾವರ, ಮಚ್ಚು, ಬಡಿಗೆಗಳಿಂದ ನಮಗೆ ಕೊಲೆ ಮಾಡವ ಉದ್ದೇಶದಿಂದಲ್ಲೇ ಹೊಡೆಯುವದಕ್ಕೆ ಬಂದಾಗ ನಾವುಗಳು ಅವರ ಹೊಡೆಯುವ ಏಟುಗಳಿಂದ ತಪ್ಪಿಸಿಕೊಂಡು ಆ ಕಡೆ ಇ ಕಡೆ ದಿಕ್ಕಾಪಾಲಾಗಿ ನಮ್ಮ ಗಾಡಿಗಳು ಅಲ್ಲೇ ಬಿಟ್ಟು  ಓಡಿ ಹೋಗಿರುತ್ತೇವೆ. ಇಲ್ಲದಿದ್ದರೆ ಅವರು ನಮಗೆ ಹೊಡೆದು ಕೊಲೆ ಮಾಡೆ ಬಿಡುತ್ತಿದ್ದರು. ಸದರಿಯವರು ನಮ್ಮ ಮೇಲೆ ಹಲ್ಲೇ ಮಾಡಲು ಕಾರಣವೇನೆಂದರೆ ಪ್ರಶಾಂತ  ಅಂಕಲಗಿ ಹಾಗೂ ನಮಗೆ ಹೋಡೆದು ಕೊಲೆ ಮಾಡಲು ಬಂದಿರುವ  ಶಹಾಬಜಾರ ತಾಂಡದ  ಅರುಣ @ ಪವಾನ , ಮಹ್ಮದ ಗೌಸ್, ಸೈನಿಕ, ಪ್ರದೀಪ್ 7 ಸ್ಟಾರ್, ಶರಣು ಅವರಾದಿ  ಇವರೊಂದಿಗೆ ಹಳೆಯ ವೈಮನಸು ಇದ್ದು ಅದೆ ವೈಮಸ್ಸಿನಿಂದ ಹುಟ್ಟು ಹಬ್ಬ ಆಚರೆಣೆ ಮಾಡುವ ಕುರಿತು ತಾಂಡಕ್ಕೆ ಬರುತ್ತಿದ್ದಾಗ ಈ ರೀತಿ  ಈ ಮೇಲ್ಕಂಡ ಜನರು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಅನಸೂಬಾಯಿ ಗಂಡ ನಾಗಪ್ಪ ನಡುವಿನಮನಿ ಸಾ|| ಯಾತನೂರ ತಾ-ಜೇವರ್ಗಿ ಜಿ-ಕಲಬುರ್ಗಿ ಇವರ ಮಾವ ಸಾತಪ್ಪನ ಹೆಸರಿನಿಂದ ನಮ್ಮೂರ ಸೀಮಾಂತರ ಸರ್ವೇ ನಂ. 52 ರಲ್ಲಿ 3 ಎಕರೆ 13 ಗುಂಟೆ ಜಮೀನು ಮತ್ತು ಸರ್ವೆ ನಂ. 27  ರಲ್ಲಿ 3 ಎಕರೆ 10 ಗುಂಟೆ ಜಮೀನು ಇರುತ್ತದೆ ಸದರಿ ಜಮೀನುಗಳ ಮೇಲೆ ನನ್ನ ಗಂಡನು ಕೃಷಿಗಾಗಿ ಜೇರಟಗಿಯ ಪಂಜಾಬ ನ್ಯಾಷನಲ್ ಬ್ಯಾಂಕಿನಲ್ಲಿ 1,00,000=00 ರೂಪಾಯಿ ಸಾಲ ಮಾಡಿದ್ದು ಇರುತ್ತದೆ. ಅಲ್ಲದೆ ಹೋಲದ ಕೆಲಸಕ್ಕೆ ಊರಮನೆಯವರ ಹತ್ತಿರ ಕೈಗಡದ ಹಾಗೆ 4,00,000=00 ರೂಪಾಯಿ ಸಾಲ ಮಾಡಿದ್ದು ಇರುತ್ತದೆ. ಹೋದ ವರ್ಷ ಸಕಾಲಕ್ಕೆ ಮಳೆ ಚನ್ನಾಗಿ ಆಗದೆ ಬೆಳೆ ಬೆಳೆಯದೆ ಇದುದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ನನ್ನ ಗಂಡನು ಯಾವಾಗಲು ಚಿಂತೆ ಮಾಡುತ್ತಾ ಇರುತಿದ್ದನು. ದಿನಾಂಕ: 13/08/2016 ರಂದು ರಾತ್ರಿ ನಾನು ನನ್ನ ಗಂಡ ನಾಗಪ್ಪ ನಮ್ಮ ಮಕ್ಕಳು ಎಲ್ಲರೂ ಊಟ ಮಾಡಿ ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದೆವು, ನನ್ನ ಗಂಡನು ರಾತ್ರಿ 9-00 ಗಂಟೆಯ ಸುಮಾರಿಗೆ ಒದ್ದಾಡುತಿದ್ದಾಗ ನಾನು ಎದ್ದು ನೋಡಲಾಗಿ ನನ್ನ ಗಂಡನು ಕ್ರೀಮೀನಾಶಕ ಔಷದಿ ಸೇವನೆ ಮಾಡಿದ್ದನು ಆಗ ನಾನು ಗಾಬರಿಯಾಗಿ ಚಿರಾಡುತಿದ್ದಾಗ ನಮ್ಮ ಸಂಭಂದಿಕಾರ ಭೀಮಣ್ಣ ನಡುವಿನಮನಿ, ಗುಂಡಪ್ಪ ನಡುವಿನಮನಿ ಇವರು ಸಹ ಬಂದರು ನಂತರ ನಾವೆಲ್ಲರೂ ನನ್ನ ಗಂಡ ನಾಗಪ್ಪನಿಗೆ ಉಪಚಾರ ಕುರಿತು ಜೇವರ್ಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಲಬುರ್ಗಿಗೆ ಕರೆದುಕೊಂಡು ಹೋಗುವಾಗ ಫರಹತಾಬಾದ ಹತ್ತಿರ ಮಾರ್ಗ ಮದ್ಯ ನನ್ನ ಗಂಡ ನಾಗಪ್ಪನು ಮೃತ ಪಟ್ಟಿದ್ದು ಇರುತ್ತದೆ. ನನ್ನ ಗಂಡನ ಶವ ನಮ್ಮೂರಲ್ಲಿ ಇರುತ್ತದೆ. ಹೋದ ವರ್ಷ ಸಕಾಲಕ್ಕೆ ಮಳೆ ಆಗದೆ ಇದುದ್ದರಿಂದ ಬೆಳೆ ಚನ್ನಾಗಿ ಬೆಳೆಯದೆ ಇದ್ದುದ್ದರಿಂದ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮಾಡಿದ ಆಲ ಹೇಗೆ ತೀರಿಸಬೇಕು ಅಂತಾ ನನ್ನ ಗಂಡ ನಾಗಪ್ಪನು ಮನಃನೊಂದು ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

14 August 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ 13-08-2016 ರಂದು ಕಾಳಮಂದರಗಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ 1) ಮಾಣಿಕಪ್ಪ ತಂದೆ ಅಂದಪ್ಪ ಬಿರಾದಾರ. 2) ರಾಘವೇಂದ್ರ ತಂದೆ ಬಸವಣ್ಣಪ್ಪ ಬಿರಾದಾರ 3) ಶಂಕ್ರಪ್ಪ ತಂದೆ ಮಲ್ಲಪ್ಪ ಸಿವರಾಮಗೋಳ 4) ಶಂಕ್ರಪ್ಪ ತಂದೆ ಸಿದ್ದಪ್ಪ ಕಶಟ್ಟಿ 5) ಚಂದ್ರಕಾಂತ ತಂದೆ ಶಿವಲಿಂಗಪ್ಪ ಗಂಟೊಳ್ಳಿ 6) ಖಾಸಿಂ ಅಲಿ ತಂದೆ ಇಸ್ಮಾಯಿಲ್ ಸಾಬ ಮುಲ್ಲಾ 7) ಅಂಬಾರಾಯ ತಂದೆ ನಿಂಗಪ್ಪ ಕಲಾಮೂತರ ಸಾ:ಎಲ್ಲರು ಕಾಳಮಂದರಗಿ ಇವರನ್ನು ವಶಕ್ಕೆ ಪಡೆದುಕೊಂಡಿದ್ದು ಸದರಿಂದ ಜೂಜಾಟಕ್ಕೆ ತೊಂಡಗಿಸಿದ ನಗದು ಹಣ 3440/- ರೂ ಮತ್ತು 52 ಇಸ್ಪೇಟ ಎಲೆಗಳುನ್ನು ವಶಪಡಿಸಿಕೊಂಡು  ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ವಾಣಿಜ್ಯ ಬಳಕೆಗೆ  ಗೃಹ ಬಳಕೆಯ  ಸಿಲೆಂಡರ ಉಪಯೋಗಿಸುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ಕಲಬುರಗಿ ನಗರದ ಜಿಲಾನಾಬಾದ ಎಂ.ಎಸ್‌‌.ಕೆ ಮೀಲ್‌ ಪ್ರದೇಶದ ಖದೀರ ಚೌಕ ಹತ್ತಿರ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರು ಕಲಬುರಗಿರವರು ಸ್ಥಳದ ತನಿಖೆಗಾಗಿ ಹೋದಾಗ ಅಲ್ಲಿರುವ ಗ್ರ್ಯಾಂಡ ಮುಸ್ತಪಾ ಹೊಟೇಲದಲ್ಲಿ ಗೃಹ ಬಳಕೆಯ 2 ಅಡುಗಿ ಅನೀಲ ಎಲ್‌.ಪಿ.ಜಿ ಸಿಲಿಂಡರಗಳನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸುತ್ತಿರುವದನ್ನು ಪತ್ತೆ ಹಚ್ಚಿ ಸದರಿ ಸಿಲಿಂಡರಗಳನ್ನು ಜಪ್ತಿ ಮಾಡಲು ಸೂಚಿಸಿದಂತೆ ಇಂದು ದಿನಾಂಕ:13/06/2016 ರಂದು ಸಾಯಂಕಾಲ 6.30 ಗಂಟೆಗೆ ಸದರಿ ಹೊಟೇಲ ಮೇಲೆ ದಾಳಿ ನಡೆಯಿಸಿ ಅಲ್ಲಿ ಉಪಯೋಗಿಸುತ್ತಿದ್ದ 2 ಗೃಹಬಳಕೆಯ ಹೆಚ್‌‌.ಪಿ ಕಂಪನಿಯ ತುಂಬಿದ ಸಿಲಿಂಡರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಅವುಗಳ ಅ.ಕಿ.4800/-ರೂ ಆಗಿರುತ್ತದೆ ಈ ಬಗ್ಗೆ ನಡೆಸಿದ ಜಪ್ತಿ ಪಂಚನಾಮೆ ಹಾಗೂ 2 ಹೆಚ್‌‌.ಪಿ ಕಂಪನಿಯ ತುಂಬಿದ ಸಿಲಿಂಡರಗಳನ್ನು ಈ ಪತ್ರದೊಂದಿಗೆ ತಮ್ಮಲ್ಲಿ ಸಲ್ಲಿಸುತ್ತಾ ಸದರಿ ಹೊಟೇಲ ಮಾಲಿಕನಾದ ಮಹ್ಮದ ಫಿರೋಜ ತಂದೆ ಇಕ್ಬಾಲಮೀಯಾ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಇವರ ವಿರುದ್ದ ಅವಶ್ಯಕ ವಸ್ತುಗಳ ಕಾಯ್ದೆ 1955 ಅಡಿಯಲ್ಲಿ ಜಾರಿಯಾಗಿರುವ ಲಿಕ್ವಿಪೈಡ ಪೆಟ್ರೋಲಿಯಂ ಗ್ಯಾಸ ಸಪ್ಲೇ & ಕಂಟ್ರೋಲ್‌ ಆದೇಶ 2000 ಪ್ರಕಾರ ಕ್ರಮ ಕೈಕೊಳ್ಳಲು ಕೊರಲಾಗಿದೆ. ಅಂತಾ ಶ್ರೀ ಅಲ್ಲಾಬಕಶ ಆಹಾರ ನಿರೀಕ್ಷಕರು ಸಹಾಯಕ ನಿರ್ದೇಶಕರ ಕಾರ್ಯಾಲಯ ಆಹಾರ,ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ ಮೀನಿ ವಿಧಾನ ಸೌದ ಕಲಬುರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ: 13-08-2016 ರಂದು ನಮ್ಮ ತಂದೆಯವರು ಬೆಳಗ್ಗೆ 08:00 ಗಂಟೆ ಸುಮಾರಿಗೆ ಖಾಸಗಿ ಕೆಲಸದ ನಿಮಿತ್ಯ ಆಳಂದಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ನಂತರ 12:30 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಗುರುರಾಜ ಸಿದ್ದಲಿಂಗಪ್ಪಾ ಮುನ್ನೋಳಿ ಇವರು ಪೋನ್ ಮಾಡಿ ವಿಷಯ ತಿಳಿಸಿದೆನೆಂದರೆ ನಾನು ನಮ್ಮ ಗ್ರಾಮದಿಂದ ಆಳಂದ ಕಡೆಗೆ ಬರುವಾಗ ಆಳಂದ-ಖಜೂರಿ ರಸ್ತೆಯ ನಾರಾಯಣ ಭಟ್ಟ ಮು|| ಆಳಂದರವರ ಹೊಲದ ಸಮೀಪ ಬಂದಾಗ ಆಳಂದ ಕಡೆಯಿಂದ ತುಳಸಿರಾಮ ಪಾಂಡ್ರೆ ಇತನು ತನ್ನ ಮೋಟರ್ ಸೈಕಲ ನಂ: MH:14 CA-5309 ನೇದ್ದರ ಮೇಲೆ ಬರುವಾಗ ಅವನ ಎದುರುಗಡೆಯಿಂದ ಅಂದರೆ ಖಜೂರಿ ಕಡೆಯಿಂದ ಜೀಪ್ ನಂ: MH:13 N:3642 ನೇದ್ದರ ಚಾಲಕನು ಅತೀ ವೇಗದಿಂದ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸುತ್ತಾ ಬಂದು ಮೋಟರ್ ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಮೋಟರ್ ಸೈಕಲ ಮೇಲೆ ಇದ್ದ ತುಳಸಿರಾಮನು ನೆಲಕ್ಕೆ ಬಿದ್ದಾಗ ನಾನು ಹೋಗಿ ನೋಡಲು ಆತನ ಕಿವಿ,ಬಾಯಿ ಎಡಹುಬ್ಬಿಗೆ ಗಾಯ ಹೊಂದಿ ಬಲಗೈ ಅಂಗೈ ಮೇಲ್ಬಾಗದಲ್ಲಿ ಬಲಗಾಲ ಮೊಳಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಮಾಂಸಹೊರಬಂದತೆ ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರ ಮೇರೆಗೆ ಹೋಗಿ ನೋಡಲು ಘಟನೆ ನಿಜವಿರುತ್ತದೆ. ಕಾರಣ ನಮ್ಮ ತಂದೆಯವರಿಗೆ ಡಿಕ್ಕಿಪಡಿಸಿ ಭಾರಿಗಾಯಗೊಳಿಸಿ ಸ್ಥಳದಲ್ಲೇ ಸಾವಿಗೆ ಕಾರಣನಾದ ಜೀಪ್ ನಂ: MH:13 N:3642 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವಾಜಿ ತಂದೆ ತುಳಸಿರಾಮ ಪಾಂಡ್ರೆ ಮು:ಕಿಣ್ಣಿಸುಲ್ತಾನ ತಾ:ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಸುಶೀಲಾಬಾಯಿ ಗಂಡ ಮಲ್ಲಣ್ಣ ಕುಂಬಾರ ಸಾ: ಕುಂಬಾರಗಲ್ಲಿ ಬ್ರಹ್ಮಪೂರ ಕಲಬುರಗಿ ರವರ ತವರು ಮನೆಗೆ ಕವಲಗಾ (ಕೆ) ಇದ್ದು ನಮ್ಮ ತಂದೆ ಶರಣಪ್ಪ ಕುಂಬಾರ ಇವರಿಗೆ ನಾವು ನಾಲ್ಕು ಜನ ಹೆಣ್ಣೂ ಮಕ್ಕಳು 1) ನಾನು 2) ಬಸಮ್ಮ 3) ಮಾಣಿಕಮ್ಮ @ ಮಹಾನಂದಾ 4) ನಾಗಮ್ಮ ಇದ್ದು. ಒಬ್ಬ ತಮ್ಮ ಸೋಮಲಿಂಗಯಿದ್ದು ನಮ್ಮ ತಂದೆಯವರಿಗೆ 12 ಎಕರೆ ಜಮೀನು ಇದ್ದು. ಕವಲಗಾ (ಕೆ) ಗ್ರಾಮದಲ್ಲಿ 3 ಎಕರೆ ಮತ್ತು 1 ಎಕರೆ ಹೊಲವಿದ್ದು. ಕವಲಗಾ (ಬಿ) ಗ್ರಾಮದಲ್ಲಿ ನಾಲ್ಕು ಎಕರೆ ಹೊಲವಿದ್ದು. ನಮ್ಮ ತಂದೆಯವರು ಜೀವಿಂತವಿದ್ದಾಗ ಕವಲಗಾ (ಬಿ) ಗ್ರಾಮದಲ್ಲಿರುವ 4 ಎಕರೆ ಜಮೀನು ನಾವು ನಾಲ್ಕು ಜನ ಅಕ್ಕಂದಿಯರಿಗೆ ತಲಾ ಒಂದು ಎಕರೆಯಂತೆ ಸರ್ವೇ ನಂ 201/3 ರಲ್ಲಿಯ 4 ಎಕರೆ ಜಮೀನು ದಿನಾಂಕ 12/10/12 ರಂದು ವಿಲ್ ಡೆಡ್‌ ಮಾಡಿ ಕೊಟ್ಟಿದ್ದು ಎಲ್ಲಾ ದಾಖಲಾತಿಗಳು ನಮ್ಮ ಹೆಸರಿನಲ್ಲಿ ಆಗಿದ್ದು ಪಹಣೆ ಪತ್ರಿಕೆ ಕೂಡಾ ನಾಲ್ಕು ಜನ ಹೆಣ್ಣೂ ಮಕ್ಕಳ ಹೆಸರಿನಲ್ಲಿದ್ದು. ಸದರ ನಾಲ್ಕು ಎಕರೆ ಜಮೀನು ನಮ್ಮ ತಂಗಿಯರು ತಿಳಿಸಿದಂತೆ ನಾನೇ ನೋಡಿಕೊಳ್ಳುತ್ತಾ ಬಂದಿರುತ್ತೇನೆ. ಈ ವರ್ಷ ಸದರಿ ಜಮೀನಿನಲ್ಲಿ ತೋಗರಿ ಬೆಳೆ ಇರುತ್ತದೆ. ನಮ್ಮ ತಮ್ಮ ಸೋಮಲಿಂಗ ಮತ್ತು ಅವನ ಹೆಂಡತಿ ನಾಗಮ್ಮ ಇವರು ಸದರಿ ನಾಲ್ಕು ಎಕರೆ ಹೊಲ ನಮ್ಮದಿದೆ ನಮ್ಮ ತಂದೆಗೆ ಮೋಸ ಮಾಡಿ ನೀವು ಹೆಸರಿಗೆ ಮಾಡಿಕೊಂಡಿರುತ್ತೀರಿ ಎಂದು ಆಗಾಗ ಜಗಳ ತೆಗೆಯುವದು ಬೈಯುವದು ತಕರಾರು ಮಾಡಿ ನಮ್ಮ ಮೇಲೆ ವೈಮನಸ್ಸು ಹೊಂದಿರುತ್ತಾರೆ.  ದಿನಾಂಕ: 12/08/16 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಆಳು ಮಗ ಶರಣಬಸು ತಂದೆ ಅಪ್ಪಾಸಾಬ ಇತನಿಂದ ತೋಗರೆ ಬೆಳೆಯಲ್ಲಿ ಎಡೆ ಹೊಡಸುತ್ತಿದ್ದಾಗ ಸದರಿ ಹೊಲದಲ್ಲಿ ನಮ್ಮ ಅತ್ತಿಗೆ ನಾಗಮ್ಮ ತಮ್ಮ ಸೋಮಲಿಂಗ ಅತಿಕ್ರಮ ಪ್ರವೇಶ ಮಾಡಿ ಸೂಳೇ ಮಗಳೇ ಯಾರಪ್ಪನ ಹೊಲ ಅಂತಾ ಎಡೆ ಹೊಡೆಸುತ್ತಿದ್ದಿ ಎಂದು ಅವ್ಯಾಚ್ಛವಾಗಿ ಬೈದು ಈ ಹೊಲದಲ್ಲಿಂದ ಕಡೆಗೆ ಹೋದರೆ ಸರಿ ಇಲ್ಲದಿದ್ದರೆ ನಿನಗೆ ಜೀವ ಸಹಿತ ಇಡುವುದಿಲ್ಲಾ ಅಂತಾ ಅಂದಾಗ ನಾಗಮ್ಮ ಇವಳು ಈ ರಂಡಿದು ಬಹಳ ಆಗಿದೆ ಬಿಡ ಬೇಡ್ರಿ ಅಂತಾ ಕೈ ಮುಷ್ಣಿ ಮಾಡಿ ಹೊಟ್ಟೆಗೆ ಹೊಡೆಯುವಾಗ ನನಗೆ ಸೋಮಲಿಂಗನು ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೀರೆ ಹಿಡಿದು ಎಳೆದಾಡಿ ಸೀರೆ ಹರಿದಿರುತ್ತಾನೆ ಈ ಎಲ್ಲಾ ಘಟನೆ ನೋಡಿ ಎಡೆ ಹೊಡೆಯಲು ಬಂದ ಶರಣಬಸು ಈತನು ಬಿಡಿಸಿರುತ್ತಾನೆ. ಸದರಿಯವನು ಬಿಡಿಸುವಾಗ ಇನ್ನೂ ಮುಂದೆ ಈ ಹೊಲದಲ್ಲಿ ಕಾಲು ಇಟ್ಟರೇ ನಿನಗೆ ಖಲ್ಲಾಸ ಬಿಡುತ್ತೇನ ಎಂದು ಜೀವದ ಭಯ ಹಾಕಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಮಹಾದೇವಪ್ಪಾ ತಂದೆ ಐಯ್ಯಪ್ಪಾ ಪುಜಾರಿ ಸಾ : ಕವಲಗಾ (ಬಿ) ತಾ : ಜಿ : ಕಲಬುರಗಿ ಇವರ ಮಗನಾದ ಲಗಮಣ್ಣ ಇತನು ದಿನಾಂಕ 13/08/2016 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನೀರು ತರಲೆಂದು ನಮ್ಮೂರಿನ ಗ್ರಾಮ ಪಂಚಾಯತ ಭಾವಿಗೆ ಹೋಗಿದ್ದು ಬಹಳ ಸಮಯ ಕಳೆದರೂ ಮರಳಿ  ಬಾರದ ಕಾರಣ ನನ್ನ ಹಿರಿಯ ಮಗನಾದ   ಮೋನಪ್ಪಾ ಮತ್ತು ನಾನು ಸದರಿ ಭಾವಿಗೆ ಹೋಗಿ ನೋಡಲಾಗಿ ನನ್ನ ಮಗ ಲಗಮಣ್ಣನು ಒಂದು ನೀರಿನ ಡಬ್ಬಿ  ತುಂಬಿ ಭಾವಿಯ ಹತ್ತೀರ ಇಟ್ಟಿದ್ದು  ಇನ್ನೊಂದು ಡಬ್ಬಿ ಭಾವಿಯ ನೀರಿನಲ್ಲಿ ತೇಲಾಡುತ್ತಿದ್ದು ನಮಗೆ ಸಂಶಯ ಬಂದು ಈ ವಿಷಯ ನಮ್ಮೂರಿನಲ್ಲಿ ತಿಳಿಸಿದ್ದು ನಮ್ಮೂರಿನ ಚನ್ನಪ್ಪಾ ತಂದೆ ಶಿವಶರಣಪ್ಪಾ ಪರೀಟ ಹಾಗೂ ಇತರರು ಭಾವಿಯ ನೀರಿನಲ್ಲಿ  ಪಾತಾಳಗಡ್ಡಿ  ಹಾಕಿ ನನ್ನ ಮಗನ ಶವ ಪತ್ತೆ ಮಾಡಿರುತ್ತಾರೆ .ನನ್ನ ಮಗ ಲಗಮಣ್ಣನು ನಮ್ಮೂರಿನ ಗ್ರಾಮ ಪಂಚಾಯತಿಗೆ ಸೇರಿದ ಭಾವಿಗೆ ನೀರು ತರಲು ಹೋಗಿ ಆಕಸ್ಮೀಕವಾಗಿ ಕಾಲು ಜಾರಿ ನೀರಿನಲ್ಲಿ  ಬಿದಿದ್ದು  ಈಜು ಬಾರದೆ ಇರುದರಿಂದ ಉಸಿರು ಗಟ್ಟಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.