POLICE BHAVAN KALABURAGI

POLICE BHAVAN KALABURAGI

16 August 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ 13-08-2016 ರಂದು ಮುಗಟಾ ಬಸ್ ನಿಲ್ದಾಣದ ಸಮೀಪ ಸೇಡಂ ದಿಂದ ಕಲಬುರಗಿಗೆ ಹೋಗುವ ರಾಜ್ಯ ಹೇದ್ದಾರಿ ರೋಡಿನ ಎಡಭಾಗಕ್ಕೆ ಫಿರ್ಯಾದಿಯ ಗಂಡನಾದ ಬೀರಪ್ಪಾ ಈತನು ತಾಣು ಚಲಾಯಿಸುತ್ತಿದ್ದ ಟಿಪ್ಪರ ನಂ ಕೆಎ-32 ಬಿ-5232 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಟಿಪ್ಪರ ಪಟ್ಲಿ ಆಗಿ ಕ್ಯಾಬಿನಲ್ಲಿ ಸಿಕ್ಕಿ ಹಾಕಿಕೊಂಡು ಭಾಯಿಗೆ ಭಾರಿ ರಕ್ತಗಾಯ, ಕುತ್ತಿಗೆ ಹತ್ತಿರ ರಕ್ತಗಾಯ, ಎಡಗೈ ಮೋಣಗೈ ಹತ್ತಿರ ರಕ್ತಗಾಯ, ತಲೆಯಲ್ಲಿ ಹಾಗೂ ಹಣೆಯ ಮೇಲೆ ಭಾರಿ ಗುಪ್ತಾಗಾಯ, ಹಾಗೂ ಇತರೆ ಕಡೆಗಳಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ನೀಲಮ್ಮ ಗಂಡ ಬೀರಪ್ಪಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೆಲೋಗಿ ಠಾಣೆ : ದಿನಾಂಕ: 15-08-2016 ರಂದು ಮುಂಜಾನೆ ಸಿಂದಗಿಗೆ ಹೋಗಿ ಸಾಯಂಕಾಲ 7-00 ಪಿ.ಎಮ್ ಕ್ಕೆ ನಾನು ಜೇರಟಗಿಗೆ ಬಂದಾಗ ಸ್ವಲ್ಪ ಸಮಯದ ನಂತರ ನನ್ನ ಮಗ ಶಿವಾನಂದ ಸೈಕಲ ಮೋಟಾರ ತಗೆದುಕೊಂಡು ಬಂದನು ನಾನು ಅವನ ಸೈಕಲ ಮೋಟಾರ ಮೇಲೆ ಕುಳಿತು ಕೆನಾಲ ಮೇಲಿನಿಂದ ನಮ್ಮ ಹೊಲಕ್ಕೆ  ಹೋಗಬೇಕೆಂದು ಜೇರಟಗಿ ಬಸ್ಸ ನಿಲ್ದಾಣದಿಂದ ಮೋರಟಗಿ ರೋಡಿನ ಮೇಲೆ ಹೊರಟಾಗ ಮುಂದೆ ಡ್ವಾರ ಹೊಲದ ಹತ್ತಿರ ಇರುವ ಸ್ಪೀಡ ಬ್ರೇಕ ಹತ್ತಿರ ಬಂದಾಗ ನಮ್ಮ ಮುಂದೆ ಒಂದು ಲಾರಿ ಹೋಗುತ್ತಿತ್ತು ಅದರ ಚಾಲಕನು ಸ್ಪಿಡ ಬ್ರೆಕರ ಹತ್ತಿರ ಸಾವಕಾಶ ನಡೆದಾಗ ನನ್ನ ಮಗ ತನ್ನ ಸೈಕಲ ಮೋಟಾರ ಸವಕಾಶ ಮಾಡಿದಾಗ ಹಿಂದಿನಿಂದ ಒಂದು ಬಿಳಿ ಕಾರ ಬಂದಿತ್ತು ಅದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಸೈಕಲ ಮೋಟಾರಕ್ಕೆ ಜೋರಾಗಿ ಡಿಕ್ಕಿ ಹೊಡೆದನು ಆಗ ನನ್ನ ಮಗ ಲಾರಿಯ ಹಿಂದಿನ ಗಾಲಿಯಲ್ಲಿ ಹೋಗಿ ಬಿದ್ದನು, ಆಗ ಅವನ ಎಡಗಾಲ ತೊಡೆಯ ಮೇಲೆ ಹಾಯ್ದು ಹೋಯಿತು, ಆಗ ಅವನಿಗೆ ಬಾರಿ ರಕ್ತಗಾಯವಾಯಿತು, ಅಷ್ಟರಲ್ಲಿ ನಮ್ಮ ಮೈದುನನ ಮಕ್ಕಳಾದ ಸಂತೋಷ ಮತ್ತು ಶಿವಶರಣಪ್ಪ ಅಲ್ಲಿಗೆ ಬಂದರು ಆಗ ಕಾರ ನಂಬರ ನೋಡಲಾಗಿ MH-43 R-8458  ಅಂತಾ ಇರುತ್ತದೆ. ಲಾರಿ ನಂಬರ MH-09  CU-7126  ಇರುತ್ತದೆ. ನಮ್ಮ ಸೈಕಲ ಮೋಟಾರ ನಂಬರ KA-05  ED-4551  ಇದೆ ಅಂತಾ ಹೇಳಿ ಒಂದು ಜೀಪ ತಗರೆಸಿ ನನ್ನ ಮಗನನ್ನು ಅದರಲ್ಲಿ ಹಾಕಿಕೊಂಡು ಬಿಜಾಪೂರ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ಹಾದಿಯಲ್ಲಿ ಮೃತಪಟ್ಟಿರುತ್ತಾನೆ . ಈ ಘಟನೆ ಯಲ್ಲಿ ನನಗೆ ತೆಲೆಗೆ, ಕಾಲಿಗೆ ರಕ್ತಗಾಯಗಳು ಆಗಿರುತ್ತವೆ. ಕಾರ ಚಾಲಕ ಕಾರ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ಕಮಲಾಬಾಯಿ ಗಂಡ ರುದ್ರಪ್ಪ ಸೋಮಜಾಳ ಸಾ|| ಯಾತನೂರ ತಾ|| ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ದಿನಾಂಕ 15-08-2016 ರಂದು ನಮ್ಮ ಟಿಪ್ಪರ ಚಾಲಕ ಮಾಣಿಕ ಪವಾರನು ನನಗೆ ಪೋನ ಮಾಡಿ ಬೆಳಗಿನ ಜಾವ ನಮ್ಮ ಮಾಲಿಕರಾದ ಶರಣಪ್ಪ ಸಾರವಾಡ ರವರು ತಮ್ಮ ಡಿಸೇಲ್ ತೆಗೆದುಕೊಂಡು ಬರುವಾಗ ಬುಲೇರೋ ವಾಹನ ನಂ. ಕೆಎ-28 ಎ-1209 ನೇದ್ದನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ದುಧನಿಯವರ ಧಾಬಾ ಹತ್ತಿರ ನಿಂತ ನಮ್ಮ ಲಾರಿ ನಂ. ಕೆಎ-33 0866 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿರುತ್ತಾರೆ. ಈ ಘಟನೆಯಲ್ಲಿ ಬುಲೇರೋ ವಾಹನದ ಸ್ಟೇರಿಂಗ್ ಮಾಲಿಕರ ಎದೆಗೆ ಗುದ್ದಿ ಭಾರಿ ಒಳಪಟ್ಟು ಆಗಿ ಕಿವಿ ಮತ್ತು ಮೂಗಿನಿಂದ ಭಾರ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿದನು. ನಂತರ ಪಕ್ಕದ ಮನೆಯ ರಾಜು ಸ್ವಾಮಿ ಮತ್ತಿತ್ತರು ಘಟನೆಯ ಸ್ಥಳಕ್ಕೆ ಬಂದು ನನ್ನ ಗಂಡನ ಶವವನ್ನು ನೋಡಿರುತ್ತೆವೆ. ನನ್ನ ಗಂಡನು ತನ್ನ ಬುಲೆರೋ ವಾಹನನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಧುದನಿಯವರ ಧಾಬಾದ ಹತ್ತಿರ ನಿಂತ ನಮ್ಮ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಎದೆಗೆ ಭಾರಿ ಒಳಪೆಟ್ಟಾಗಿ ಕಿವಿ ಮತ್ತು ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ಶ್ರೀಮತಿ ನಿಂಗಮ್ಮ ಸಾರವಾಡ ಸಾ || ಅಪಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ತ್ರಿಶಾಂಕ ಪಾಟೀಲ ತಂದೆ ಹಣಮಂತರಾಯ ಪಾಟೀಲ ಸಾಃ ಮನೆ ನಂ 1165/5/1 ಐವಾನ ಶಾಹಿ ಕಾಲೋನಿ ಸ್ಟೇಷನ ರೋಡ ಕಲಬುರಗಿ ರವರು ದಿನಾಂಕಃ 14.08.2016 ರಂದು ನನ್ನ ಗೆಳೆಯನಾದ ಪ್ರಶಾಂತ ಅಂಕಲಗಿ  ಸಾಃ ಪಿ&ಟಿ ಕಾಲೋನಿ ಕಲಬುರಗಿ ಇತನ ಹುಟ್ಟುಹಬ್ಬ ಇರುವದರಿಂದ ಅವನ  ಅಭಿಮಾನಿಗಳು (ಗೆಳೆಯರು ) ಇರುವದರಿಂದ ಕಲಬುರಗಿ ನಗರದಲ್ಲಿ ಸುಮಾರು ಕಡೆಗಳಲ್ಲಿ ಬೆಳಿಗ್ಗಿನಿಂದಲ್ಲೇ ಹುಟ್ಟು ಹಬ್ಬ ಆಚರಿಸುತ್ತಾ ಬಂದಿದ್ದು ಸಾಯಾಂಕಾಲ ಅಂದಾಜು 9.00 ಗಂಟೆಯ ಸುಮಾರಿಗೆ ಪ್ರಶಾಂತ ಅಂಕಲಗಿಯ  ಅತ್ಮೀಯ ಗೆಳೆಯನಾದ ಶಹಾಬಜಾರ ತಾಂಡದ ರವಿ ರಾಠೋಡ ಇವರು ಸಹ ಪ್ರಶಾಂತ ಇತನಿಗೆ ತಮ್ಮ ಮನೆಗೆ ಕೇಕ್ ಕತ್ತರಿಸುವ ಕುರಿತು ಆಮಂತ್ರಣ ನೀಡಿದ್ದರಿಂದ  ನಾನು ನನ್ನ ಕಾರ ನಂ ಕೆಎ 39-ಎಮ್ 1385 ನೇದ್ದರಲ್ಲಿ  ನನ್ನ ಗೆಳೆಯರಾದ  ವಿರೇಶ, ವಿರೇಶ ಸ್ವಾಮಿ, ಅಭಿಷೇಕ, ಮತ್ತು ಬಸು ಪಾಟೀಲ ಇತನು ತನ್ನ ಸ್ಕಾರ್ಪಿಯೂ ವಾಹನ ನಂ ಕೆಎ32 ಎನ್ 7110 ನೇದ್ದರಲ್ಲಿ  ಬಸು ಪಾಟೀಲ ಮತ್ತು ಅವನ ಗೆಳೆಯರು ಇನ್ನೊಂದು ವಾಹನದಲ್ಲಿ ಪ್ರಶಾಂತ ಮತ್ತು ಅವನ ಗೆಳೆಯರು ಕೂಡಿಕೊಂಡು ವಾಹನದಲ್ಲಿ ಕುಳಿತುಕೊಂಡು ಪಿಲ್ಟರ್ ಬೆಡ್ ಕ್ರಾಸದ ಮುಖಾಂತರ ಶಹಾಬಜಾರ ತಾಂಡಕ್ಕೆ ಹೋಗುವ ಕುರಿತು 9.30 ಗಂಟೆಗೆ ಎಮ್.ಟಿ.ಆರ್ ಇವರ ಮನೆಯ ಎದುರಗಡೆ ರಸ್ತೆಯ ಮೇಲೆ ಬರುತ್ತಿದ್ದಾಗ ಒಮ್ಮೇಲೆ  ಶಹಾಬಜಾರ ತಾಂಡದ  ಅರುಣ @ ಪವನ, ಮಹ್ಮದ ಗೌಸ್, ಸೈನಿಕ, ಪ್ರದೀಪ್ 7 ಸ್ಟಾರ್, ಶರಣು ಅವರಾದಿ ಮತ್ತು ಇತರೆ 15-20 ಜನರು ತಮ್ಮ ಕೈಗಳಲ್ಲಿ ತಲಾವರ, ಮಚ್ಚು, ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ, ನಮ್ಮ ವಾಹನಗಳಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ, ನಾವು  ಕೆಳಗೆ ಇಳಿಯುವಷ್ಟರಲ್ಲೇ ಏನರೋ ರಂಡಿ ಮಕ್ಕಳೆ ನಮ್ಮ ತಾಂಡಕ್ಕೆ ಬರಬೇಡಿರಿ ಅಂತಾ ಹೇಳಿದ್ದರು ಮತ್ತೆ ತಾಂಡಕ್ಕೆ ಬರುತ್ತಿದ್ದರಿ ರಂಡಿ ಮಕ್ಕಳೆ ನಿಮಗೆ ಇಂದು ಜೀವ ಸಹಿತ ಬಿಡುವದಿಲ್ಲ ಬೋಸಡಿ ಮಕ್ಕಳೆ ಅಂತಾ ಅವಾಚ್ಯ ಶಬ್ಧಗಳಿಂದ ಬೈಯುತ್ತಾ  ಸದರಿಯವರೆಲ್ಲರು ನಮ್ಮ ವಾಹನಗಳ ಮೇಲೆ ತಲಾವರ, ಮಚ್ಚು, ಬಡಿಗೆ, ಕಲ್ಲುಗಳಿಂದ ಕಾರು, ಸ್ಕಾರರ್ಪಿಯೂದ ಗ್ಲಾಸಗಳಿಗೆ ಹೊಡೆದು  ಅಂದಾಜು 15000/- ರಿಂದ 20,000/- ರೂಗಳಷ್ಟು  ಲುಕ್ಸ್ ನ ಮಾಡಿದ್ದು ಅಲ್ಲದೆ ಇವರು ಹೊಡೆಯುವದನ್ನು ನೋಡಿ ನಾವು ಗಾಡಿಗಳಿಂದ ಕೆಳೆಗೆ ಇಳಿಯುವಷ್ಟರಲ್ಲೇ ತಮ್ಮ ಕೈಗಳಲ್ಲಿರುವ ತಲಾವರ, ಮಚ್ಚು, ಬಡಿಗೆಗಳಿಂದ ನಮಗೆ ಕೊಲೆ ಮಾಡವ ಉದ್ದೇಶದಿಂದಲ್ಲೇ ಹೊಡೆಯುವದಕ್ಕೆ ಬಂದಾಗ ನಾವುಗಳು ಅವರ ಹೊಡೆಯುವ ಏಟುಗಳಿಂದ ತಪ್ಪಿಸಿಕೊಂಡು ಆ ಕಡೆ ಇ ಕಡೆ ದಿಕ್ಕಾಪಾಲಾಗಿ ನಮ್ಮ ಗಾಡಿಗಳು ಅಲ್ಲೇ ಬಿಟ್ಟು  ಓಡಿ ಹೋಗಿರುತ್ತೇವೆ. ಇಲ್ಲದಿದ್ದರೆ ಅವರು ನಮಗೆ ಹೊಡೆದು ಕೊಲೆ ಮಾಡೆ ಬಿಡುತ್ತಿದ್ದರು. ಸದರಿಯವರು ನಮ್ಮ ಮೇಲೆ ಹಲ್ಲೇ ಮಾಡಲು ಕಾರಣವೇನೆಂದರೆ ಪ್ರಶಾಂತ  ಅಂಕಲಗಿ ಹಾಗೂ ನಮಗೆ ಹೋಡೆದು ಕೊಲೆ ಮಾಡಲು ಬಂದಿರುವ  ಶಹಾಬಜಾರ ತಾಂಡದ  ಅರುಣ @ ಪವಾನ , ಮಹ್ಮದ ಗೌಸ್, ಸೈನಿಕ, ಪ್ರದೀಪ್ 7 ಸ್ಟಾರ್, ಶರಣು ಅವರಾದಿ  ಇವರೊಂದಿಗೆ ಹಳೆಯ ವೈಮನಸು ಇದ್ದು ಅದೆ ವೈಮಸ್ಸಿನಿಂದ ಹುಟ್ಟು ಹಬ್ಬ ಆಚರೆಣೆ ಮಾಡುವ ಕುರಿತು ತಾಂಡಕ್ಕೆ ಬರುತ್ತಿದ್ದಾಗ ಈ ರೀತಿ  ಈ ಮೇಲ್ಕಂಡ ಜನರು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಅನಸೂಬಾಯಿ ಗಂಡ ನಾಗಪ್ಪ ನಡುವಿನಮನಿ ಸಾ|| ಯಾತನೂರ ತಾ-ಜೇವರ್ಗಿ ಜಿ-ಕಲಬುರ್ಗಿ ಇವರ ಮಾವ ಸಾತಪ್ಪನ ಹೆಸರಿನಿಂದ ನಮ್ಮೂರ ಸೀಮಾಂತರ ಸರ್ವೇ ನಂ. 52 ರಲ್ಲಿ 3 ಎಕರೆ 13 ಗುಂಟೆ ಜಮೀನು ಮತ್ತು ಸರ್ವೆ ನಂ. 27  ರಲ್ಲಿ 3 ಎಕರೆ 10 ಗುಂಟೆ ಜಮೀನು ಇರುತ್ತದೆ ಸದರಿ ಜಮೀನುಗಳ ಮೇಲೆ ನನ್ನ ಗಂಡನು ಕೃಷಿಗಾಗಿ ಜೇರಟಗಿಯ ಪಂಜಾಬ ನ್ಯಾಷನಲ್ ಬ್ಯಾಂಕಿನಲ್ಲಿ 1,00,000=00 ರೂಪಾಯಿ ಸಾಲ ಮಾಡಿದ್ದು ಇರುತ್ತದೆ. ಅಲ್ಲದೆ ಹೋಲದ ಕೆಲಸಕ್ಕೆ ಊರಮನೆಯವರ ಹತ್ತಿರ ಕೈಗಡದ ಹಾಗೆ 4,00,000=00 ರೂಪಾಯಿ ಸಾಲ ಮಾಡಿದ್ದು ಇರುತ್ತದೆ. ಹೋದ ವರ್ಷ ಸಕಾಲಕ್ಕೆ ಮಳೆ ಚನ್ನಾಗಿ ಆಗದೆ ಬೆಳೆ ಬೆಳೆಯದೆ ಇದುದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ನನ್ನ ಗಂಡನು ಯಾವಾಗಲು ಚಿಂತೆ ಮಾಡುತ್ತಾ ಇರುತಿದ್ದನು. ದಿನಾಂಕ: 13/08/2016 ರಂದು ರಾತ್ರಿ ನಾನು ನನ್ನ ಗಂಡ ನಾಗಪ್ಪ ನಮ್ಮ ಮಕ್ಕಳು ಎಲ್ಲರೂ ಊಟ ಮಾಡಿ ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದೆವು, ನನ್ನ ಗಂಡನು ರಾತ್ರಿ 9-00 ಗಂಟೆಯ ಸುಮಾರಿಗೆ ಒದ್ದಾಡುತಿದ್ದಾಗ ನಾನು ಎದ್ದು ನೋಡಲಾಗಿ ನನ್ನ ಗಂಡನು ಕ್ರೀಮೀನಾಶಕ ಔಷದಿ ಸೇವನೆ ಮಾಡಿದ್ದನು ಆಗ ನಾನು ಗಾಬರಿಯಾಗಿ ಚಿರಾಡುತಿದ್ದಾಗ ನಮ್ಮ ಸಂಭಂದಿಕಾರ ಭೀಮಣ್ಣ ನಡುವಿನಮನಿ, ಗುಂಡಪ್ಪ ನಡುವಿನಮನಿ ಇವರು ಸಹ ಬಂದರು ನಂತರ ನಾವೆಲ್ಲರೂ ನನ್ನ ಗಂಡ ನಾಗಪ್ಪನಿಗೆ ಉಪಚಾರ ಕುರಿತು ಜೇವರ್ಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಲಬುರ್ಗಿಗೆ ಕರೆದುಕೊಂಡು ಹೋಗುವಾಗ ಫರಹತಾಬಾದ ಹತ್ತಿರ ಮಾರ್ಗ ಮದ್ಯ ನನ್ನ ಗಂಡ ನಾಗಪ್ಪನು ಮೃತ ಪಟ್ಟಿದ್ದು ಇರುತ್ತದೆ. ನನ್ನ ಗಂಡನ ಶವ ನಮ್ಮೂರಲ್ಲಿ ಇರುತ್ತದೆ. ಹೋದ ವರ್ಷ ಸಕಾಲಕ್ಕೆ ಮಳೆ ಆಗದೆ ಇದುದ್ದರಿಂದ ಬೆಳೆ ಚನ್ನಾಗಿ ಬೆಳೆಯದೆ ಇದ್ದುದ್ದರಿಂದ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮಾಡಿದ ಆಲ ಹೇಗೆ ತೀರಿಸಬೇಕು ಅಂತಾ ನನ್ನ ಗಂಡ ನಾಗಪ್ಪನು ಮನಃನೊಂದು ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: