POLICE BHAVAN KALABURAGI

POLICE BHAVAN KALABURAGI

03 August 2016

Kalaburagi District Reported Crimes

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ನಂದುಕುಮಾರ ತಂದೆ ರಂಗಣ್ಣ ಗುತ್ತೆದಾರ ಸಾ: ಶಾಸ್ತ್ರಿ ನಗರ ಎಸ್.ಬಿ.ಎಚ್ ಬ್ಯಾಂಕ ಹತ್ತಿರ ಜೇವರ್ಗಿ ಹಾ.ವ: ಮನೆ ನಂ. 1/889/26/ಎಫ್/7, ಪ್ಲಾಟ ನಂ. 268 ರಾಜಶೇಖರ ಯರಗೋಳ ರವರ ಮನೆಯಲ್ಲಿ ಬಾಡಿಗೆ ವಾಸ ಮಾಹಾವೀರ ನಗರ ಕಲಬುರಗಿ ಇವರು ದಿನಾಂಕ 30/07/2016 ರಂದು ತಮ್ಮ ಮನೆ ಕೀಲಿ ಹಾಕಿಕೊಂಡು ತುಳಜಾಪೂರ ಮತ್ತು ಪಂಢರಾಪೂರಕ್ಕೆ ಹೋಗಿದ್ದು ದಿನಾಂಕ 01/08/2016 ರಂದು ನಮ್ಮ ಮನೆಯ ಮಾಲಿಕರಾದ ರಾಜಶೇಖರ ಯರಗೋಳ ಇವರು ಪೋನ ಮಾಡಿ ಮನೆಯ ಬಾಗಿಲ ಕೀಲಿ ಮುರಿದಿದೆ ಅಂತಾ ತಿಳಿಸಿದರು. ನಾವು 2 ಪಿ.ಎಂ.ಕ್ಕೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರಿದಿದ್ದು ಒಳಗಡೆ ಹೋಗಿ ಪರಿಶೀಲಿಸಿ ನೋಡಲಾಗಿ ಮನೆಯಲ್ಲಿಯ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದು ಬಟ್ಟೆಯ ಬ್ಯಾಗನಲ್ಲಿ ಇಟ್ಟಿದ್ದ  ಬಂಗಾರದ ಆಭರಣಗಳು  ಒಟ್ಟು 75.5 ಗ್ರಾಂ ಬಂಗಾರ ಅ.ಕಿ. 1,90,000/- ರೂ ನೇದ್ದವುಗಳನ್ನು  ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಘಾತ ಪ್ರಕರಣಗಳು :
ಮುಧೋಳ ಠಾಣೆ : ದಿನಾಂಕ: 02.08.2016 ರಂದು ಬೆಳಗ್ಗೆ ನನ್ನ ಮಗ ಅನಂತಪ್ಪ ಇತನು ರಿಬ್ಬನಪಲ್ಲಿಯ ಸುರೇಂದ್ರ ರೆಡ್ಡಿ ಇವರ ಕವಳಿ ಗದ್ದೆ ಹೊಲದಲ್ಲಿ ಸಾಗುವಳಿ ಮಾಡಲು ಟ್ಯಾಕ್ಟರ ತೆಗೆದುಕೊಂಡು ಹೋಗಿದ್ದು, ಸದರಿ ಟ್ಯಾಕ್ಟರದಲ್ಲಿ ಡಿಜೆಲ ಮುಗಿದ್ದರಿಂದ ಇಂದು ದಿನಾಂಕ: 02.08.2016 ರಂದು ಮಧ್ಯಾಹ್ನ 1230 ಗಂಟೆ ಸುಮಾರಿಗೆ ನನ್ನ ಮಗ ರಿಬ್ಬನಪಲ್ಲಿ ಗ್ರಾಮದ ಹೊಲದಿಂದ  ರಿಬ್ಬನಪಲ್ಲಿ ಗೇಟ ಹತ್ತಿರ ರಸ್ತೆಯ ಪಕ್ಕದಲ್ಲಿರುವ ನಮ್ಮ ಹೋಟೆಲಕ್ಕೆ ಡಿಜೆಲ್ ತರುವದಕ್ಕೆ ನನ್ನ ಹತ್ತಿರ ಹಣ ತೆಗೆದುಕೊಂಡು ಹೋಗುವದಕ್ಕೆ ತನ್ನ ಮೊಟಕ ಸೈಕಲ ನಂ ಟಿಎಸ್-07-ಈಪಿ-3911 ನೇದ್ದರ ಮೇಲೆ ರಿಬ್ಬನಪಲ್ಲಿ ಗೇಟ ಹತ್ತಿರ ರಸ್ತೆಯ ಎಡಬದಿಯಿಂದ ಬುರುತ್ತಿದ್ದಾಗ ಹಿಂದುಗಡೆಯಿಂದ ಅಂದರೆ ಕೊಡಂಗಲ ಕಡೆಯಿಂದ ಸೇಡಂ ಕಡೆಗೆ ಬರುತ್ತಿದ್ದ ಒಂದು ಡಿಸಿಎಮ್ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜೀತನಿಂದ ನಡೆಯಿಸಿಕೊಂಡು ಬಂದು ರಸ್ತೆ ಎಡಬದಿಯಿಂದ ಬರುತ್ತಿದ್ದ ನನ್ನ ಮಗನ ಮೊಟರ ಸೈಕಲಗೆ ಹಿಂದುಗಡೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದು ಆಗ ನನ್ನ ಮಗ ಮೊಟಾರ ಸೈಕಲ ಮೇಲಿಂದ ಕೆಳಗೆ ರಸ್ತೆಯ ಮೇಲೆ ಬಿದ್ದು ತೆಲೆಗೆ ಭಾರಿ ಗಾಯವಾಗಿ ಒದ್ದಾಡುತ್ತಿದ್ದಾಗ ಇದನ್ನು ನೋಡಿ ನಾನು ಹಾಗು ನಮ್ಮ ಹೋಟಲದಲ್ಲಿದ್ದ ನನ್ನ ಮಗಳಾದ ಸಾವಿತ್ರ ಗಂಡ ದಸ್ತಪ್ಪ ಉಪ್ಪಾರ ಸಾ: ಪರಸಾಪೂರ ತಾ: ಕೊಡಂಗಲ್ ಓಡುತ್ತಾ ಬಂದು ಕೆಳಗೆ ರಸ್ತೆಯಲ್ಲಿ ಬಿದ್ದ ನನ್ನ ಮಗನಾದ ಅನಂತಪ್ಪ ಇತನಿಗೆ ಏಬ್ಬಸಿ ನೋಡಲಾಗಿ ಇತನ ತಲೆಗೆ ಹಿಂದುಗಡೆ ಭಾರಿ ರಕ್ತಗಾಯವಾಗಿ ತಲೆಯಿಂದ ಮೇದುಳು ಹೊರಗೆ ಬಂದು ನನ್ನ ಮಗನು ಅಲ್ಲೆ ಸ್ಥಳದಲ್ಲೆ ಮೃತ ಪಟ್ಟಿದ್ದು ಸದರಿ ಡಿ.ಸಿ.ಎಂ ವಾಹನ ಚಾಲಕನು ಅಪಘಾತ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗುತ್ತಿದ್ದಾಗ ಅಲ್ಲಿದ್ದ ಬಸವಂತ ತಂದೆ ಬಾಲಪ್ಪ ಗುಲಬರ್ಗಾ ಮತ್ತು ಮಲ್ಲೇಶ ತಂದೆ ಮಾಣಿಕಪ್ಪ ಮಡೇಪಲ್ಲಿ ಇವರು ಸದರಿ ಡಿಸಿಎಂ ವಾಹನ ಹಿಡಿಯುವದಕ್ಕೆ ಮೊಟಾರ ಸೈಕಲನ್ನು ತೆಗೆದುಕೊಂಡು ಹಿಂದೆ ಬೆನ್ನು ಹತ್ತಿದ್ದಾಗ ಸದರಿ ಡಿಸಿಎಮ್ ವಾಹನ ಚಾಲಕನು ಸ್ವಲ್ಪ ಮುಂದೆ ಹೋಗಿ ಡಿಸಿಎಮ್ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಸದರಿ ಡಿಸಿಎಮ್ ವಾಹನ ನಂಬರ ನೋಡಲಾಗಿ ಅದರ ನಂಬರ ಎಮ್.ಹೆಚ 13-ಎಎಕ್ಸ-4737 ಅಂತಾ ಇದ್ದು ಸದರಿ ವಾಹನದ ಚಾಲಕನ ಹೆಸರು ಗೋತ್ತಿರುವದಿಲ್ಲಾ. ಆತನಿಗೆ ನೋಡಿದರೆ ಗುರುತಿಸುತ್ತೇನೆ.  ಅಂತಾ ಶ್ರೀಮತಿ ಲಕ್ಷ್ಮಮ್ಮ ಗಂಡ ದಿ|| ಪಾಪಣ್ಣಾ ಪರಸಾಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 01-08-16  ರಂದು ಮೃತ ಲಕ್ಷ್ಮೀಕಾಂತ ಇತನು ಹಿರೋ ಸ್ಪೆಂಡರ ಪ್ರೋ KA 33 R 3837 ಮೇಲೆ ಒಬ್ಬನೇ ಕುಳಿತುಕೊಂಡು ಸ್ಟೇಷನ ಗಾಣಗಾಪೂರಕ್ಕೆ ಹೋಗಿ ಅಲ್ಲಿಂದ ಸ್ವಗ್ರಾಮವಾದ ಕೋಗನೂರಕ್ಕೆ ಹೋಗಿ ತನ್ನ ತಂದೆ, ತಾಯಿಗೆ ಭೇಟ್ಟಿಯಾಗಿ ವಾಪಸ್ಸು ಕಲಬುರಗಿ ಕಡೆ ಹೊರಟಿದ್ದು ರಾತ್ರಿ 09-00  ಗಂಟೆ ಸುಮಾರಿಗೆ ಆಳಂದ ರೋಡಿನ ಕೆರಿಭೋಸಗಾ ಸೀಮಾಂತರದಲ್ಲಿ ಎಸ್.ಕೆ. ದಾಲ ಮಿಲ್ಲ್  ಹತ್ತಿರ ಬಂದಾಗ ಯಾವುದೋ ನಾಲ್ಕು ಚಕ್ರಗಳ ವಾಹನ ಚಾಲಕ ಕಲಬುರಗಿ ಕಡೆಯಿಂದ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು ನಿನ್ನ ಗಂಡನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ, ಭಾರಿ ರಕ್ತಗಾಯಪಡಿಸಿ ಹಾಗೇ ವಾಹನ ಓಡಿಸಿಕೊಂಡು ಹೋಗಿದ್ದರಿಂದ ನಿನ್ನ ಗಂಡನ ತಲೆ ಹಿಂದೆ ಮತ್ತು ಎಡ ಭುಜದ ಮೇಲೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಟ್ಟಿರುತ್ತಾನೆ. ಎಂದು ಅತ್ತೆ ಸುಮಿತ್ರಾಬಾಯಿ, ಮಾವ ಪೀರಪ್ಪ ಸಂಬಂಧಿ  ಹಣಮಂತ, ಮಾಲೀಕ ಶಿವಾಜಿ ಅವರ ಮಗ ಸಾಗರ ಇವರಿಂದ ಕೇಳಿ ಗೊತ್ತಾಗಿರುತ್ತದೆ, ಕಾರಣ ನನ್ನ ಗಂಡ ಲಕ್ಷ್ಮೀಕಾಂತ ತಂದೆ ಪೀರಪ್ಪ ಆಸಿಂಗಳ ಇತನಿಗೆ ಅಪಘಾತಪಡಿಸಿದ ಹಾಗೇ ಓಡಿಸಿಕೊಂಡು ಹೋದ ಯಾವುದೋ ನಾಲ್ಕು ಚಕ್ರ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀಮತಿ ಅಶ್ವೀನಿ ಗಂಡ ಲಕ್ಷ್ಮಿಕಾಂತ ಅಸಿಂಗಳ ಸಾ : ಕೊಗನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀ.ಸಿದ್ರಾಮಪ್ಪಾ ತಂದೆ ಚೆನ್ನಬಸಪ್ಪಾ ಕೋರೆ ಮು: ಮಮದಾಪೂರ ತಾ: ಆಳಂದರವರ ಹೆಸರಿನಲ್ಲಿ ಸರ್ವೆ ನಂ: 11 ರಲ್ಲಿ 4 ಎಕರೆ 30 ಗುಂಟೆ ಜಮೀನು ಇರುತ್ತದೆ. ನನ್ನ ಎರಡನೇ ಮಗನಾದ ಧರ್ಮರಾಜ ಇತನು ಹೊಲ-ಮನೆಯ ಜವಾಬ್ದಾರಿ ಅವನೇ ನೋಡಿಕೊಳ್ಳುತ್ತಾ ಬಂದಿರುತ್ತಾನೆ. ಸದರಿ ಜಮೀನಿನ ಮೇಲೆ ಪ್ರಗತಿ ಕೃಷ್ಣಾ ಬ್ಯಾಂಕ ತಡಕಲದಲ್ಲಿ 1,00,000/- (ಒಂದು ಲಕ್ಷ) ರೂಪಾಯಿ, V.S.S. ಬ್ಯಾಂಕ ಹಳ್ಳಿ ಸಲಗರದಲ್ಲಿ 10,000/- (ಹತ್ತು ಸಾವಿರ) ರೂಪಾಯಿ ಹಾಗೂ ಕೈಗಡವಾಗಿ 4,00,000/- (ನಾಲ್ಕು ಲಕ್ಷ) ರೂಪಾಯಿ ಸಾಲ ತಗೆದಿದ್ದು ಕಳೆದ ವರ್ಷ ಬರಗಾಲ ಬಿದ್ದು ಮಳೆ ಬೆಳೆ ಆಗದಿದ್ದರಿಂದ ಹೊಲಗಳಿಗೆ ಗೊಬ್ಬರ , ಬೀಜ ಹಾಗೂ ಹೊಲ ಕಡಿದು ಹಾಕಿಕೊಂಡು ಮಾಲಕರಿಗೆ ದುಡ್ಡು ಕೊಟ್ಟು ನನ್ನ ಮಗನಿಗೆ 04-05 ಲಕ್ಷ ರೂಪಾಯಿ  ಸಾಲವಾಗಿದ್ದು  ಅದನ್ನು ತಿರಿಸುವುದು ಹೇಗೆ ಅಂತಾ ಚಿಂತಿಸುತ್ತಾ ಮನೆಯಲ್ಲಿ ಒಬ್ಬನೆ ಒಬ್ಬಂಟಿಗನಾಗಿ ಇರುತ್ತಾ ಕುಡುತ್ತಿದ್ದು ನಾನು ಹಾಗೂ ನನ್ನ ಹೆಂಡತಿ ಅಂಬವ್ವಾ ಹಾಗು ನನ್ನ ಸೊಸೆ ಜಯಶ್ರೀ ಎಲ್ಲರೂ ಕೂಡಿ ಧೈರ್ಯ ಹೇಳುತ್ತಾ ಹೇಗಾದರೂ ಮಾಡಿ ಸಾಲ ತಿರಿಸಿದರಾಯಿತು ಚಿಂತಿಸ ಬೇಡ ಅಂತಾ ಹೇಳುತ್ತಾ ಬಂದಿದ್ದು ದಿನಾಂಕ:02/08/2016 ರಂದು ಮನೆಯಿಂದ ಹಗ್ಗ ತಗೆದುಕೊಂಡು ಹೊಲಕ್ಕೆ ಹೋಗಿ ಹುಲ್ಲು ತರುತ್ತೇನೆ ಅಂತಾ ಹೋದವನು ಸುಮಾರು ಹೊತ್ತು ಮನೆಗೆ ಬರದೇ ಇದ್ದರಿಂದ ನಾನು ಹೊಲಕ್ಕೆ 08:00 ಗಂಟೆಗೆ ಹೋದಾಗ ನಮ್ಮ ಹೊಲದ ಹುಣಸೆ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಜೊತ್ತು ಬಿದ್ದಿರುವುದನ್ನು ನೋಡಿ ಗಾಬರಿಗೊಂಡು ಚೀರಾಡುತ್ತಿದ್ದಾಗ ಅಲ್ಲೆ ಇದ್ದ ಪ್ರಶಾಂತ ತಂದೆ   ಮಲ್ಲಪ್ಪಾ ಕಾಪಸೆ, ಬಸೀರ ತಂದೆ ದಸ್ತಗೀರ ಸಿದ್ದಿಕಿ , ಪ್ರಕಾಶ ತಂದೆ ಕಲ್ಲಪ್ಪಾ ಕಾಪಸೆ ಕೂಡಿಕೊಂಡು ಜೀವಂತ ಇರುವುದನ್ನು ನೋಡಿ ಮರದಿಂದ ಇಳಿಸಿ ಕುತ್ತಿಗೆಯ ಹಗ್ಗ ಬಿಚ್ಚಿದ್ದಾಗ ಇನ್ನೂ ಜೀವಂತ ಇರುವುದನ್ನು ಕಂಡು ಆಸ್ಪತ್ರೆಗೆ ತಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 July 2016

Kalaburagi District Reported Crimes

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಸಾತಮ್ಮ ಗಂಡ ದುಂಡಪ್ಪ ಕ್ಲಲೂರ ಸಾ|| ತಾ|| ಜೇವರಗಿ ಇವರಿಗೆ ಶರಣಪ್ಪ, ಸಿದ್ದಪ್ಪ, ಅನಸೂಬಾಯಿ, ಲಕ್ಷ್ಮೀಬಾಯಿ ಅಂತಾ 4 ಜನ ಮಕ್ಕಳಿರುತ್ತಾರೆ,ನನ್ನ ಮಗಳು ಲಕ್ಷ್ಮೀಬಾಯಿ ಇವಳಿಗೆ ಮನ್ನಾಪೂರದ ಶಿವರಾಯ ಬಿರೆದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಲಕ್ಷ್ಮೀಬಾಯಿ ಇವಳ ಗಂಡನ ಮನೆಯವರು ಬಾರಿ ಬಡವರಿರುತ್ತಾರೆ, ಆದ್ದರಿಂದ ನನ್ನ ಮಗ ಶರಣಪ್ಪನು 4 ಎಕರೆ ಜಮೀನು ನನ್ನ ಮಗಳು ಲಕ್ಷ್ಮೀಬಾಯಿ ಇವಳ ಹೆಸರಿನಿಂದ ಮಾಡಿಸಿದ್ದು ಇರುತ್ತದೆ.ನನ್ನ ಉಪಜೀವನಕ್ಕಾಗಿ ನನ್ನ ಹೆಸರಿನಿಂದ 5 ಎಕರೆ ಜಮೀನು ಮಾಡಿದ್ದು ಇರುತ್ತದೆ. ಉಳಿದ 11 ಎಕರೆ ಜಮೀನಿನಲ್ಲಿ ನನ್ನ ಮಗ ಶರಣಪ್ಪ ಮತ್ತು ಸಿದ್ದಪ್ಪ ಹಂಚಿಕೊಂಡಿದ್ದು ಇರುತ್ತದೆ. ಆದರೆ ನನ್ನ ಮಗ ಶರಣಪ್ಪನ ಹೆಂಡತಿ ಈರಮ್ಮ ಮತ್ತು ಮಕ್ಕಳಾದ ಪ್ರಭು, ದುಂಡಪ್ಪ ಇವರು ನಮಗೆ ಕೇಳದೆ ಲಕ್ಷ್ಮೀಬಾಯಿಗೆ ಯಾಕೆ ಆಸ್ತಿಯಲ್ಲಿ ಪಾಲು ಕೊಟ್ಟಿದ್ದಿ ಅಂತಾ ನನ್ನೊಂದಿಗೆ ಹಾಗೂ ನನ್ನ ಮಗ ಶರಣಪ್ಪನೊಂದಿಗೆ ಜಗಳ ತಗೆಯುತ್ತಾ ಬಂದಿದ್ದು ಇರುತ್ತದೆ. 3-4 ದಿನಗಳ ಹಿಂದೆ ನನ್ನ ಮಗ ಶರಣಪ್ಪನು ಹೊಲ ಬಿತ್ತಿಸಿ ಬರುತ್ತೇನೆ ಅಂತಾ ಹೇಳಿ ಬಳ್ಳೂಂಡಗಿಗೆ ಹೋಗಿದ್ದನು. ದಿನಾಂಕ: 28-07-2016 ರಂದು ರಾತ್ರಿ 8-00 ಗಂಟೆಗೆ ಒಂದು ಟಂಟಂದಲ್ಲಿ ನನ್ನ ಮಗ ಶರಣಪ್ಪನಿಗೆ ತಂದು ಮನ್ನಾಪೂರದಲ್ಲಿರುವ ನಮ್ಮ ಮನೆಯ ಹತ್ತಿರ ಬಿಟ್ಟು ಹೋಗಿದ್ದು, ನನ್ನ ಮಗನ ಮೈ ತುಂಬೆಲ್ಲಾ ಕಂದು ಗಟ್ಟಿದ ಗಾಯಗಳಾಗಿದ್ದು  ನಾನು ಮತ್ತು ನನ್ನ ಮಗಳು ಲಕ್ಷ್ಮೀಬಾಯಿ, ನನ್ನ ಅಳಿಯ ಶಿವರಾಜ ಎಲ್ಲರೂ ಕೂಡಿ ಶರಣಪ್ಪನಿಗೆ ವಿಚಾರಿಸಲಾಗಿ ದಿನಾಂಕ: 27-07-2016 ರಂದು ರಾತ್ರಿ 6-00 ಪಿ,ಎಮ್ ಸುಮಾರಿಗೆ ನನ್ನ ಹೆಂಡತಿ ಈರಮ್ಮ ಮಕ್ಕಳಾದ ಪ್ರಭು ಮತ್ತು ದುಂಡಪ್ಪ  ಇವರೆಲ್ಲರೂ ಕೂಡಿ ನನಗೆ ಕೈ ಕಾಲು ಕಟ್ಟು ನಮ್ಮ ಮನೆಯಲ್ಲಿ ಹಾಕಿ ಕಲ್ಲಿನಿಂದ ಮೈ ಕೈಗೆ ಹೊಟ್ಟೆಗೆ ಹೊಡೆದಿದ್ದು ಆಗ ನನ್ನ ತಮ್ಮ ಸಿದ್ದಣ್ಣ ಹಾಗೂ ಇತರರೂ ಕೂಡಿ ಜಗಳ ಬಿಡಿಸಿದ್ದು ಇರುತ್ತದೆ ಅಂತಾ ತಿಳಿಸಿದಾಗ ನಾವು ಗಾಬರಿಯಾಗಿ ನೋಡಲಾಗಿ ಶರಣಪ್ಪನ ಮೈ ಕೈಗೆ ಹೊಟ್ಟೆಗೆ ಕಂದುಗಟ್ಟಿದ ಗಾಯಗಳಾಗಿದ್ದವು. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ದಿನಾಂಕ: 29-07-2016 ರಂದು ನಾನು ನನ್ನ ಮಗಳು ಲಕ್ಷ್ಮೀಬಾಯಿ ಮತ್ತು ನನ್ನ ಮಗ ಶರಣಪ್ಪ ಎಲ್ಲರೂ ಕೂಡಿ ಮನ್ನಾಪೂರದಿಂದ ನೆಲೋಗಿಗೆ ಪೊಲೀಸ ಕೇಸ ಕೊಡಲು ಬಂದಿದ್ದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆ ನೆಲೋಗಿಯಲ್ಲಿ ತೋರಿಸುತ್ತಿದ್ದಾಗ ನನ್ನ ಮಗ ಶರಣಪ್ಪ ಕಲ್ಲಿನಿಂದ ಹೊಟ್ಟೆಗೆ ಹೊಡೆದಿದ್ದರ ಗಾಯಗಳ ಬಾದೆಯಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚುಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 29/07/2016 ರಂದು ರಾತ್ರಿ ಗ್ರಾಮಿಣ ಪೊಲೀಸ  ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಆಳಂದ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಕೇರಿ ಭೋಸಗಾ ಕ್ರಾಸನಲ್ಲಿ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಗಿನ 05:30 ಗಂಟೆಗೆ ಸುಮಾರಿಗೆ ಹುಮನಾಬಾದ ರಿಂಗ ರೋಡದಿಂದ ಮಾನ್ಯ ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗ ರೋಡದಿಂದ  ಆಳಂದ ಚೆಕ್ಕಪೊಸ್ಟ ಮುಖಾಂತರವಾಗಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಕೇರಿ ಭೋಸಗಾ ಕ್ರಾಸನಲ್ಲಿ ಇರುವ ಬಸಸ್ಟಾಂಡದ ದಕ್ಷಿಣ ದಿಕ್ಕಿನ ಗೋಡೆಯ ಮರೆಯಲ್ಲಿ ನಿಂತು ಸಾರ್ವಜನಿಕ ಕಂಬದ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ ಬಸಸ್ಟಾಂಡದಿಂದ ಸ್ವಲ್ಪ ದೂರದಲ್ಲಿ ಒಂದು ಮಹೇಂದ್ರಾ ಜೀಪ್ ಮತ್ತು ಒಂದು ಮೋಟಾರ ಸೈಕಲ್ ನಿಲ್ಲಿಸಿದ್ದು ಬಸಸ್ಟಾಂಡ ಗೋಡೆಯ ಮರೆಯಲ್ಲಿ 13 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು 05 ಜನರು ಸಿಕ್ಕಿ ಬಿದಿದ್ದು, ಉಳಿದ 08 ಜನರು ನಮ್ಮನ್ನು ನೋಡಿ ತಮ್ಮ ಕೈಯಲ್ಲಿದ್ದ ಬಡಿಗೆ ಮತ್ತು ಚಾಕುಗಳನ್ನು ಹಾಗು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಕಮಲಾಕರ್ ತಂದೆ ಜೈಬೀಮ್ ಖಂಡೇಕರ್ ಸಾ:ಮಾಡ್ಯಾಳ ತಾ:ಆಳಂದ 2) ಹಣಮಂತ ಭಗವಂತ ಸಂಗೋಳಗಿ ಸಾ:ಮಾಡ್ಯಾಳ ತಾ:ಆಳಂದ 3) ಯಲ್ಲಾಲಿಂಗ ತಂದೆ ಪೀರಪ್ಪಾ ಕೌವಲಗಿ ಸಾ:ಮಾಡ್ಯಾಳ ತಾ:ಆಳಂದ.4) ರವಿಕುಮಾರ ತಂದೆ ಕರಬಸಪ್ಪ ಮೇಲಿನಕೇರಿ ಸಾ:ಯಳವಂತಗಿ (ಕೆ) ಗ್ರಾಮ 5)  ಮಂಜುನಾಥ ತಂದೆ ಮಲ್ಲಿಕಾಜುನ ಜಮಾದಾರ ಸಾ:ಸಿದ್ದಾರೂಡ ಕಾಲೋನಿ ಕಪನೂರ ಅಂತಾ ತಿಳಿಸಿದರು ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಕಮಲಾಕರ್ ಖಂಡೇಕರ್ ಇತನು ಓಡಿ ಹೋದವರ ಹೆಸರು 6) ಗುಂಡಪ್ಪ ತಂದೆ ಸಿದ್ರಾಮಪ್ಪಾ ತುಕ್ಕಾಣಿ ಸಾ:ಮಾಡ್ಯಾಳ. 7) ರವಿಕುಮಾರ ತಂದೆ ಸಿದ್ರಾಮ ಗಾಯಕವಾಡ ಸಾ:ಮಡ್ಯಾಳ 8) ಹಣಮಂತ ತಂದೆ ಮಲ್ಲಿಕಾರ್ಜುನ ಕಾಳನೂರ ಸಾ:ಉಪಳಾಂವ ತಾ:ಜಿ:ಕಲಬುರಗಿ  9) ಲೋಕೇಶ ತಂದೆ ಭಗವಂತ ಕೊಂಬಿನ್ ಸಾ:ಮಾಡ್ಯಾಳ ತಾ:ಆಳಂದ 10) ರಾಜು ತಂದೆ ಹೂವಣ್ಣಾ ಗೌಡಗಿ ಸಾ:ಮಾಡ್ಯಾಳ 11) ಅಶೋಕ ತಂದೆ ಬೀಮಶ್ಯಾ ಒಡ್ಡರ್ ಸಾ:ಮಾಡ್ಯಾಳ ತಾ:ಆಳಂದ 12) ಶಶಿಕಾಂತ ತಂದೆ ಬಸಣ್ಣಾ ಹುಣಸಿ ಹಡಗಿಲ ಸಾ:ಮ್ಯಾಡಾಳ ತಾ:ಆಳಂದ 13) ಸಿದ್ದಪ್ಪ ತಂದೆ ಗುರುಲಿಂಗಪ್ಪ ಸಿಗರಾಣಿ ಸಾ:ಮಾಡ್ಯಾಳ ತಾ:ಆಳಂದ ಅಂತಾ ತಿಳಿಸಿದ್ದು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 05 ಜನರು ಗುಂಡಪ್ಪನ ಜೀಪ ನಂ ಕೆಎ-23 ಎಂ-3368 ರಲ್ಲಿ ಮತ್ತು ಇನ್ನು 03 ಜನರು ಒಂದು ಮೋಟಾರ ಸೈಕಲ್ ನಂ ಕೆಎ-37 ಎಲ್-8801 ನೇದ್ದರ ಮೇಲೆ ಕುಳಿತುಕೊಂಡು ಕೇರಿ ಭೋಸಗಾ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಸಸ್ಟಾಂಡದ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಜೀಪು & ಮೋಟಾರ ಸೈಕಲನ ಮೇಲೆ ಓಡಿ ಹೋಗಲು ತಂದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ಒಪ್ಪಿಕೊಂಡಿದ್ದು 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 08 ದಸ್ತಿಗಳು ಮತ್ತು 03 ಖಾರದ ಪುಡಿ, 03 ಚಾಕುಗಳು 02 ಬಡಿಗೆ ಮತ್ತು ಕಮಲಾಕರ್ ಇತನ ಕೈಯಲ್ಲಿದ್ದ ಒಂದು ಬಡಿಗೆ, ಮತ್ತು ಹಣಮಂತ ಇತನ ಕೈಯಲ್ಲಿದ್ದ ಒಂದು  ಚಾಕುಯಲ್ಲಾಲಿಂಗ ಇತನ ಕೈಯಲ್ಲಿದ್ದ ಒಂದು 20 ಪೀಟಿನ ಹಗ್ಗಾ, ರವಿಕುಮಾರ ಇತನ ಕೈಯಲ್ಲಿದ್ದ ಒಂದು ಚಾಕು, ಮಂಜುನಾಥ ಇತನ ಕೈಯಲ್ಲಿ ಒಂದು ಬಡಿಗೆ ದೊರೆತ್ತಿದ್ದು ಅವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:29/07/2016 ರಂದು ಸಾಯಂಕಾಲ  ಠಾಣಾ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಯುವಕರು ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಟೆಯುತ್ತಾ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ  ಖಚಿತ ಮಾಹೀತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಮಕ್ಕಾ ಮಜೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಯುವಕರು ರಸ್ತೆಯ ಪಕ್ಕದಲ್ಲಿ ನಿಂತ್ತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಒಂದು ಮಟಕಾ ನಂಬರ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಾ ಇನ್ನೊಂದು ಚೀಟಿ ತಮ್ಮಹತ್ತಿರ ಇಟ್ಟುಕೊಳ್ಳುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಒಬ್ಬನಿಗೆ ಹಿಡಿದಿದ್ದು ಇನ್ನೊಬ್ಬನು ಓಡಿ ಹೋದನು ಸಿಕ್ಕಿಬಿದ್ದವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜಲೀಲ ತಂದೆ ಉಸ್ಮಾನ್‌ ಸಾಬ ವಾಂಜಲಖೇಡ ಸಾ:ಮದೀನಾ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 4390=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಅವುಗಳನ್ನು ವಶಪಡಿಸಿಕೊಂಡು  ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲು ಆತನ ಹೆಸರು ಹಸನಶೇಖ ತಂದೆ ರುಕ್ಮೋದ್ದಿನ ಶೇಖ ಸಾ:ದೀಲದಾರ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಅಂತಾ ತಿಳಿಸಿದ್ದು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

29 July 2016

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವರಾಜ ತಂದೆ ಚಿದಂಬರರಾವ್ ಪಾಟೀಲ್ ಸಾ; ಪ್ಲಾಟ ನಂ 139 ಮಹಾಲಕ್ಷ್ಮಿ ಲೇಔಟ ಗಂಜ  ಕಲಬುರಗಿ  ಇವರ ತಾಯಿಯವರ ಹೆಸರಿನಲ್ಲೊಂದು ಶರಣಬಸವೇಶ್ವರ ಪಲ್ಸಸ್ ಎಂಬ ದಾಲಮಿಲ ಇದ್ದು ಅದರ ನಿಗರಾಣೀ ಸಂಪೂರ್ಣವಾಗಿ ನಾನೇ ನೋಡಿಕೊಂಡಿರುತ್ತೇನೆ. ಹಿಗಿದ್ದು ದಿನಾಂಕ: 22/07/2016 ರಂದು ರಾತ್ರಿ 9-00 ಗಂಟೆ  ಸುಮಾರಿಗೆ ದಾಲಮಿಲದ ಕೆಲಸ ಮುಗಿಸಿಕೊಂಡು ದಾಲಮಿಲದ ಶೇಟರ ಗೇಟ ಕೀಲಿಹಾಕಿಕೊಂಡು ಮನೆಗೆ ಹೋಗಿರುತ್ತೇನೆ ನಂತರ ಎಂದಿನಂತೆ ದಿನಾಂಕ: 23/07/2016 ರಂದು ಬೆಳಿಗ್ಗೆ 9-00 ಗಂಟೆಗೆ ದಾಲಮಿಲಗೆ ಬಂದು ಶೇಟರ ತೆಗೆದು ಒಳಗೆ ಬಂದು ನೋಡಲು ದಾಲಮಿಲದ ಗೋಡೆಯ ವೆಂಟಿಲೇಟರ ಮುರಿದು ಪತ್ರ ಸ್ವಲ್ಪ ಎತ್ತಿದ್ದು ಕಂಡು ಬಂದು ಗಾಬರಿಯಿಂದ ದಾಲಮಿಲದಲ್ಲಿ ನೋಡಲು ದಾಲಮಿಲದಲ್ಲಿಟ್ಟಿದ್ದ 50 ಕೆಜಿ ತೂಕದ 16 ತೊಗರಿ ಬೆಳೆ ಚೀಲಗಳು ಕಾಣಿಸಲಿಲ್ಲ. ಹೊರಗಡೆ ವೆಂಟಿಲೇಟರ ಕೆಳಗಡೆ ಹೋಗಿ ನೋಡಲು ತೊಗರಿ ಬೆಳೆ ದಾಣೀ ಬಿದ್ದಿದ್ದು ಕಂಡು ಬಂದಿತು. ಯಾರೋ ಕಳ್ಳರು ನಮ್ಮ ದಾಲಮಿಲದ ವೆಂಟಿಲೇಟರ ಮುರಿದು ದಾಲಮಿಲದಲ್ಲಿದ್ದ 50 ಕೆಜಿಯ 16 ಚೀಲ ತೊಗರಿ ಬೆಳೆ ಅ.ಕಿ= 100000/-ರೂ ಕಿಮ್ಮತ್ತಿನದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 28/07/2016 ರಂದು ಬೆಳಿಗ್ಗೆ ಮೃತ ಪ್ರಶಾಂತ ತಂದೆ ಬಸವರಾಜ ಇನತು ತನ್ನ ಸೈಕಲ್ ಮೇಲೆ ಕೆಲಸಕ್ಕೆ ಹೋಗುವ ಕುರಿತು ಆರ್.ಎಸ್.ಕಾಲೋನಿಯ ಕ್ರಾಸ ಹತ್ತಿರ ಇರುವ ಯಮಹಾ ಶೊರೂಮ್ ಎರುರಗಡೆ ಮೇನ ರೋಡಿನ ಮೇಲೆ ರೋಡ ಬದಿಯಿಂದ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಹುಮನಾಬಾದ ರೋಡ ಕಡೆಯಿಂದ ಕೆ.ಎಸ್.ಆರ್.ಟಿಸಿ ಬಸ್ ನಂ ಕೆಎ-32 ಎಪ್-1688 ನೇದ್ದರ ಚಾಲಕ ಸಿರಾಜುದ್ದೀನ್ ತಂದೆ ಸೈಯದ್ ಹುಸೇನ್ ಡಿಪೊ ನಂ 3 ಕಲಬುರಗಿ ಸಾ: ನರೋಣಾ ಗ್ರಾಮ ತನ್ನ ಬಸನ್ನು ಅತೀವೇಗದಿಂದ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಸೈಕಲ್ ಮೇಲೆ ಹೊರಟ ಪ್ರಶಾಂತ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಪ್ರಶಾಂತ ಇತನು ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ಆತನಿಗೆ ತಲೆಗೆ ಬಾರಿ ಗುಪ್ತಗಾಯ, ಬಲಗೈ ಮುಂಗೈ ಮೇಲೆ ಎಡಭುಜದ ಮೇಲೆ ಬಲಮೊಳಕಾಲ ಮೇಲೆ ಮಗ್ಗಲು ಬಲಮೊಳಕಾಲ ಕೆಳಗೆ ಎದೆಗೆ ಮತ್ತು ಬಲ ಹೊಟ್ಟೆಯ ಮೇಲೆ ಅಲ್ಲಲ್ಲಿ ಕಂದು ಗಟ್ಟಿದ ಭಾರಿ ಗುಪ್ತ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಅಂತಾ  ಶ್ರೀ ಬಸವರಾಜ ತಂದೆ ಮಾಣಿಕಪ್ಪ ರಾಯಪಳ್ಳಿ ಸಾ : ಶಿವಾಜಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.