ಕಳವು ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ ಶಿವರಾಜ ತಂದೆ ಚಿದಂಬರರಾವ್ ಪಾಟೀಲ್ ಸಾ; ಪ್ಲಾಟ
ನಂ 139 ಮಹಾಲಕ್ಷ್ಮಿ ಲೇಔಟ ಗಂಜ ಕಲಬುರಗಿ ಇವರ ತಾಯಿಯವರ ಹೆಸರಿನಲ್ಲೊಂದು ಶರಣಬಸವೇಶ್ವರ ಪಲ್ಸಸ್ ಎಂಬ
ದಾಲಮಿಲ ಇದ್ದು ಅದರ ನಿಗರಾಣೀ ಸಂಪೂರ್ಣವಾಗಿ ನಾನೇ ನೋಡಿಕೊಂಡಿರುತ್ತೇನೆ. ಹಿಗಿದ್ದು ದಿನಾಂಕ: 22/07/2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ದಾಲಮಿಲದ ಕೆಲಸ ಮುಗಿಸಿಕೊಂಡು ದಾಲಮಿಲದ
ಶೇಟರ ಗೇಟ ಕೀಲಿಹಾಕಿಕೊಂಡು ಮನೆಗೆ ಹೋಗಿರುತ್ತೇನೆ ನಂತರ ಎಂದಿನಂತೆ ದಿನಾಂಕ: 23/07/2016 ರಂದು
ಬೆಳಿಗ್ಗೆ 9-00 ಗಂಟೆಗೆ ದಾಲಮಿಲಗೆ ಬಂದು ಶೇಟರ ತೆಗೆದು ಒಳಗೆ ಬಂದು ನೋಡಲು ದಾಲಮಿಲದ ಗೋಡೆಯ
ವೆಂಟಿಲೇಟರ ಮುರಿದು ಪತ್ರ ಸ್ವಲ್ಪ ಎತ್ತಿದ್ದು ಕಂಡು ಬಂದು ಗಾಬರಿಯಿಂದ ದಾಲಮಿಲದಲ್ಲಿ ನೋಡಲು
ದಾಲಮಿಲದಲ್ಲಿಟ್ಟಿದ್ದ 50 ಕೆಜಿ ತೂಕದ 16 ತೊಗರಿ ಬೆಳೆ ಚೀಲಗಳು ಕಾಣಿಸಲಿಲ್ಲ. ಹೊರಗಡೆ
ವೆಂಟಿಲೇಟರ ಕೆಳಗಡೆ ಹೋಗಿ ನೋಡಲು ತೊಗರಿ ಬೆಳೆ ದಾಣೀ ಬಿದ್ದಿದ್ದು ಕಂಡು ಬಂದಿತು. ಯಾರೋ ಕಳ್ಳರು
ನಮ್ಮ ದಾಲಮಿಲದ ವೆಂಟಿಲೇಟರ ಮುರಿದು ದಾಲಮಿಲದಲ್ಲಿದ್ದ 50 ಕೆಜಿಯ 16 ಚೀಲ ತೊಗರಿ ಬೆಳೆ ಅ.ಕಿ=
100000/-ರೂ ಕಿಮ್ಮತ್ತಿನದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 28/07/2016 ರಂದು ಬೆಳಿಗ್ಗೆ ಮೃತ ಪ್ರಶಾಂತ ತಂದೆ ಬಸವರಾಜ ಇನತು ತನ್ನ
ಸೈಕಲ್ ಮೇಲೆ ಕೆಲಸಕ್ಕೆ ಹೋಗುವ ಕುರಿತು ಆರ್.ಎಸ್.ಕಾಲೋನಿಯ ಕ್ರಾಸ ಹತ್ತಿರ ಇರುವ ಯಮಹಾ ಶೊರೂಮ್
ಎರುರಗಡೆ ಮೇನ ರೋಡಿನ ಮೇಲೆ ರೋಡ ಬದಿಯಿಂದ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ
ಹುಮನಾಬಾದ ರೋಡ ಕಡೆಯಿಂದ ಕೆ.ಎಸ್.ಆರ್.ಟಿಸಿ ಬಸ್ ನಂ ಕೆಎ-32 ಎಪ್-1688 ನೇದ್ದರ ಚಾಲಕ ಸಿರಾಜುದ್ದೀನ್
ತಂದೆ ಸೈಯದ್ ಹುಸೇನ್ ಡಿಪೊ ನಂ 3 ಕಲಬುರಗಿ ಸಾ: ನರೋಣಾ ಗ್ರಾಮ ತನ್ನ ಬಸನ್ನು ಅತೀವೇಗದಿಂದ
ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಸೈಕಲ್ ಮೇಲೆ ಹೊರಟ ಪ್ರಶಾಂತ ಇತನಿಗೆ ಡಿಕ್ಕಿ
ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಪ್ರಶಾಂತ ಇತನು ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ಆತನಿಗೆ
ತಲೆಗೆ ಬಾರಿ ಗುಪ್ತಗಾಯ, ಬಲಗೈ ಮುಂಗೈ
ಮೇಲೆ ಎಡಭುಜದ ಮೇಲೆ ಬಲಮೊಳಕಾಲ ಮೇಲೆ ಮಗ್ಗಲು ಬಲಮೊಳಕಾಲ ಕೆಳಗೆ ಎದೆಗೆ ಮತ್ತು ಬಲ ಹೊಟ್ಟೆಯ
ಮೇಲೆ ಅಲ್ಲಲ್ಲಿ ಕಂದು ಗಟ್ಟಿದ ಭಾರಿ ಗುಪ್ತ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಬಸವರಾಜ ತಂದೆ ಮಾಣಿಕಪ್ಪ ರಾಯಪಳ್ಳಿ ಸಾ :
ಶಿವಾಜಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment