POLICE BHAVAN KALABURAGI

POLICE BHAVAN KALABURAGI

19 May 2016

Kalaburagi District Reported Crimes

ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಬಸವರಾಜ ತಂದೆ ಹಣಮಂತಪ್ಪಾ ಗೌರಾಗೋಳ ಸಾ; ರೇವಣಸಿದ್ದೇಶ್ವರ ಕಾಲೋನಿ ಆಳಂದ ರವರು  ದಿನಾಂಕ: 11/04/2016 ರಂದು ರಾತ್ರಿ 10-00 ಗಂಟೆಗೆ ನಮ್ಮ ಆಗ್ರೊ ಬಂದ ಮಾಡಿಕೊಂಡು ಮನೆಗೆ ಬಂದು ಊಟ ಮಾಡಿಕೊಂಡು ಮನೆಯಲ್ಲಿ ಮಲಗಿ ಕೊಂಡಿದ್ದು ದಿನಾಂಕ: 12/04/2016 ರಂದು ಬೆಳಗ್ಗೆ 6-00 ಗಂಟೆಗೆ ಎದ್ದು ನೋಡಲು ಬಾಗಿಲು ಖುಲ್ಲಾ ಇದ್ದು ಬಾಗಿಲ ಕೊಂಡಿ ಮುರಿದಿದ್ದು ಹೊರಗೆ ಬಂದು ನೋಡಲು ಬಾಡಿಗೆ ಕೊಟ್ಟಿದ್ದ ಕೋಣೆಯ ಕೀಲಿ ಸಹ ಮುರಿದಿದ್ದು ನೋಡಿ ನಾನು ಗಾಬರಿ ಬಿದ್ದು ನಮ್ಮ ಡಿಸ್ಟ್ರುಬಿಟರ್‌ಗೆ ಕೊಡಬೇಕು ಅಂತಾ ನನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟಿದ್ದ 23,800/- ರೂ ಬಂದು ನೋಡಲು ಅದರಲ್ಲಿ ಕಾಣಲಿಲ್ಲ. ದಿನಾಂಕ: 12/04/2016 ರಂದು ರಾತ್ರಿ 01-00 ಎಎಮ್ ದಿಂದ ಬೆಳಗಿನ ಜಾವ 5-00 ಎಎಮ್‌ ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಒಳಗಿನ ಕೊಂಡಿ ಮುರಿದು ಮನೆಯ ಒಳಗೆ ಬಂದು ಮನೆಯಲ್ಲಿ ಹ್ಯಾಂಗರಗೆ ಸಿಗಿಸಿದ್ದ ಪಾಂಟಿನ ಜೇಬಿನಲ್ಲಿದ್ದ 23,800/- ರೂ ಕಳ್ಳತನ ಮಾಡಿಕೊಂಢು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಜಗದೀಶ ತಂದೆ ಗಂಗಪ್ಪ ಹಂದಿಗನೂರ ಸಾ: ಮಳ್ಳಿ ಗ್ರಾಮ ತಾ: ಜೇವರಗಿ ಇವರು ಸುಮಾರು 2 ವರ್ಷಗಳಿಂದ ನಮ್ಮ ಮನೆಯಲ್ಲಿ ಪಾಲುಗಾರಿಕೆ ವಿಷಯದಲ್ಲಿ ನಮಗು ಹಾಗು ನಮ್ಮ ಅಣ್ಣಂದಿರಾದ ಬಸವರಾಜ, ಸುರೇಶ, ಮಡಿವಾಳ ರವರ ಮದ್ಯ ಆಗಾಗ ತಂಟೆ ತಕರಾರು ಆಗುತ್ತಾ ಬಂದಿದ್ದು ಸುಮಾರು ದಿನಗಳಿಂದ ನನಗೆ ಪಾಲು ಕೊಡುವುದು ಬರುತ್ತದೆ ಅಂತಾ ನಮ್ಮ ಅಣ್ಣಂದಿರು ಊರು ಬಿಟ್ಟು ಹೋಗಿರುತ್ತಾರೆ. ಈಗ 3 ದಿವಸಗಳಿಂದ ನನ್ನ ಅಣ್ಣ ಮಡಿವಾಳಪ್ಪ ಈತನು ಊರಿಗೆ ಬಂದಿದ್ದು ನಿನ್ನೆ ರಾತ್ರಿ 9-00 ಗಂಟೆ ಸುಮಾರಿಗೆ ನನಗೆ ನನ್ನ ಅಣ್ಣನಾದ ಮಡಿವಾಳಪ್ಪ ಈತನು ಫೊನ ಮಾಡಿ ನಿನ್ನ ಹತ್ತಿರ ದಮ್ಮ ಇದ್ದರೆ ಉರಗೆ ಬಂದು ಪಾಲು ತೆಗೆದುಕೊಂಡು ಹೋಗು ನನ್ನ ಹಿಂದೆ ಬಹಳಷ್ಟು ಜನರಿದ್ದಾರೆ ನಿನು ಬಂದರೆ ನಿನಗೆ ಖಲಾಸ ಮಾಡೆ ಬಿಡುತ್ತೇವೆ ಅಂತಾ ಅಂದನು. ಆಗ ನಾನು ಹಾಗೆ ಮಾತಾಡುತ್ತಾನೆ ಅಂತಾ ಸುಮ್ಮನಿದ್ದೇನು. ನಮ್ಮ ಅಣ್ಣ ಬಸವರಾಜ ಈತನು ಸಿಮೇ ಎಣ್ಣೆ ವಿತರಕರು ಇದ್ದು, ಅವರು ಉರಲ್ಲಿ ಇರದೆ ಇದ್ದುದ್ದರಿಂದ ನಾನೆ ಸಿಮೆ ಎಣ್ಣೆ ವಿತರಣೆ ಮಾಡುತ್ತೇನೆ.  ದಿನಾಂಕ 17-05-2016 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ನಾನು ಸಿಮೆ ಎಣ್ಣೆ ಬರುತ್ತದೆ ಅಂತಾ ತಿಳಿದು ನಾನು ನಮ್ಮೂರಿಗೆ ಹೋಗಿ ನಮ್ಮ ಮನೆಯ ಮುಂದೆ ಇದ್ದಾಗ, ನಮ್ಮ ಅಣ್ಣ ಮಡಿವಾಳಪ್ಪ ಮತ್ತು ಅವನೊಂದಿಗೆ ನಮ್ಮೂರ ರೇವಣಸಿದ್ದ ತಂದೆ ಮಲ್ಲಪ್ಪ ಹರಿಜನ, ಶಿವು ತಂದೆ ಮಲ್ಲಪ್ಪ ಹರಿಜನ, ಶ್ರೀಶೈಲ ಹರಿಜನ, ಮಲ್ಲಪ್ಪ ಹರಿಜನ ಹಾಗು ಇತರೆ 10 ಜನರು ಕೂಡಿಕೊಂಡು ನನ್ನ ಹತ್ತಿರ ಬಂದು ಅವರಲ್ಲಿ ರೇವಣಸಿದ್ದ ಈತನು ನನಗೆ ನಿಮ್ಮ ಅಣ್ಣ ಮಡಿವಾಳಪ್ಪನಿಗೆ ಅಂಜಿಸಿ ಪಾಲ ಕೇಳತಿಯಾ ಮಗನಾ ಅಂತಾ ಅಂದು ಅಲ್ಲೆ ಬಿದ್ದ ಕಲ್ಲಿನಿಂದ ಬೆನ್ನಿನ ಮೇಲೆ ಹೊಡೆದನು, ಅಲ್ಲದೆ ಶಿವು ಈತನು ಕಲ್ಲಿನಿಂದ ನನ್ನ ಮುಖದ ಮೇಲೆ, ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ, ಶ್ರೀಶೈಲ ಈತನು ತನ್ನ ಟೊಂಕಿನಲ್ಲಿದ್ದ ಬೆಲ್ಟಿನಿಂದ ನನ್ನ ಮೈ ಕೈಗೆ ಹೊಡೆದು ನನ್ನ ಹತ್ತಿರ ಇದ್ದ ಸೂನಿ ಮೂಬೈಲ ತೆಗೆದುಕೊಂಡನು, ಅಲ್ಲದೆ ಮಲ್ಲಪ್ಪ ಹರಿಜನ ಈತನು ನನ್ನ ಕೊರಳಲ್ಲಿಯ ಎರಡು ತೊಲಿ ಬಂಗಾರದ ಚೈನ ಕಿತ್ತಿಕೊಂಡಿರುತ್ತಾನೆ. ನಮ್ಮ ಅಣ್ಣ ಮಡಿವಾಳಪ್ಪ ಈತನು ಕೊಲೆ ಮಾಡುವ ಉದ್ದೇಶದಿಂದ ನನ್ನ ತೊಡ್ಡನ್ನು ಹಿಚಿಕಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 17-052016 ರಂದು ಶ್ರೀ ಬರಗಾಲಿ ತಂದೆ ಧರ್ಮಣ್ಣ ಶಿರೂರ, ಸಾ|| ಹಿತ್ತಲಶಿರೂರ.  ರವರ ತಂದೆಯವರಾದ ಧರ್ಮಣ್ಣ ತಂದೆ ಮಾಳಪ್ಪ ಶಿರೂರ ಇವರು ತಮ್ಮ ಮನೆಯ ಮುಂದೆ ರೋಡಿನ ಮೇಲೆ ನೀರು ತರುವಾಗ ಗೈಬಿಸಾಬ ದರ್ಗಾದ ಕಡೆಯಿಂದ ಕೆನಾಲ ರೋಡಿನ ಮೇಲೆ ಟಿಪ್ಪರ ನಂ. ಕೆ.ಎ 28, ಬಿ 0492 ನೇದ್ದರ ಚಾಲಕನಾದ ಚಂದ್ರು ತಂದೆ ಶಾವಿರಪ್ಪ ಪೂಜಾರಿ ಸಾ|| ಸಾತಖೇಡ, ತಾ|| ಜೇವರ್ಗಿ ಇತನು ಟಿಪ್ಪರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ತನ್ನ ತಂದೆಗೆ ಡಿಕ್ಕಿಪಡಿಸಿ ಅಪಘಾತಪಡಿಸಿ ನಿಲ್ಲದೆ ಹೋಗಿದ್ದು ಅಪಘಾತದಲ್ಲಿ ತಂದೆಯ ಎಡಗಾಲಿಗೆ ತೊಡೆಯಿಂದ ಮೊಳಕಾಲವರೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಬಾಬು ತಂದೆ ಮೌಲಾಸಾ ಗುಳೇಕರ ಸಾ|| ಭೂಸನೂರ, ಹಾ|||| ಹಿಂಗೆ ವಠಾರ, ತಾ|| ಬೋರ, ಜಿ|| ಪುಣೆ, ರಾಜ್ಯ || ಮಹಾರಾಷ್ಟ್ರ. ರವರು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರ ರಾಜ್ಯದ ಹಿಂಗೆ ವಠಾರದಲ್ಲಿ ಸರ್ಜಿರಾವ ತಂದೆ ಗಣಪತರಾವ ಹಿಂಗೆ ಇವರ ಹತ್ತಿರ ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಹೆಂಡತಿಯಾದ ಹುಸೇನಬಿ ಇವಳೊಂದಿಗೆ ವಾಸಿಸುತ್ತಿದ್ದೇನೆ, ನಮ್ಮಿಬ್ಬರಿಗೆ 4 ಜನ ಹೆಣ್ಣು ಮಕ್ಕಳು ಇದ್ದು ಹಿರಿಯ ಮಗಳಾದ ಕು|| ಮದೀನಾ ತಂದೆ ಬಾಬು ಗುಳೇಕರ ವ|| 14 ವರ್ಷ, ಇವಳು ಹಡಲಗಿ ಗ್ರಾಮದ ಉರ್ದು ಸರ್ಕಾರಿ ಶಾಲೆಯಲ್ಲಿ 8 ತರಗತಿಯಲ್ಲಿ ಓದುತ್ತಿದ್ದು ವಾಸಕ್ಕಾಗಿ ನನ್ನ ಹೆಂಡತಿಯ ತವರು ಮನೆಯಾದ ಯಳಸಂಗಿ ಗ್ರಾಮದಲ್ಲಿ ನನ್ನ ಅತ್ತೆಯಾದ ಮಾಲನಬಿ ಮತ್ತು ಮಾವ ವಜೀರಸಾಬ ಇವರೊಂದಿಗೆ ವಾಸಿಸುತ್ತಿದ್ದಾಳೆ. ದಿನಾಲೂ ಶಾಲೆಗೆ ಖಾಸಗಿ ವಾಹನಗಳಲ್ಲಿ ಹೋಗಿ ಬಂದು ಮಾಡುತ್ತಿದ್ದಳು. ನಾನು ದಿನಾಂಕ 13/05/2016 ರಂದು ಹಿಂಗೆ ವಠಾರದಿಂದ ಭೂಸನೂರ ಗ್ರಾಮಕ್ಕೆ ಬಂದು ನನ್ನ ಮನೆಯ ಜಾಗೆಯ ಕೆಲಸ ಮುಗಿಸಿಕೊಂಡು ಯಳಸಂಗಿ ಗ್ರಾಮಕ್ಕೆ ಹೋದಾಗ ನನ್ನ ಅತ್ತೆ ಮತ್ತು ಮಾವಂದಿರು ನನಗೆ ತಿಳಿಸಿದ್ದೇನೆಂದರೆ ನಿನ್ನೆ ದಿನಾಂಕ 12/05/2016  ರಂದು ಬೆಳಿಗ್ಗೆ 1000 ಗಂಟೆಗೆ ಮದಿನಾ ಇವಳು ತಾನು ಭೂಸನೂರ ಗ್ರಾಮಕ್ಕೆ ಹೋಗಿ ಬರುವದಾಗಿ ಹೇಳಿ ಹೊಗಿದ್ದಾಳೆ ಅಂತ ತಿಳಿಸಿದ ಮೇರೆಗೆ ನಾನು ಭೂಸನೂರ ಗ್ರಾಮದಿಂದಲೇ ಬಂದಿದ್ದು ಅವಳು ಅಲ್ಲಿ ಇಲ್ಲ ಅಂತ ತಿಳಿಸಿರುತ್ತೇನೆ. ಅಲ್ಲದೆ ಈ ವಿಚಾರ ತಿಳಿದುಕೊಂಡು ನಾನು ನನ್ನ ಅತ್ತೆ, ಮಾವ, ಅಳಿಯನಾದ ಇಲಾಯಿ ಎಲ್ಲರೂ ಸೇರಿ ಗಾಬರಿಗೊಂಡು ಆಳಂದ, ಕಲಬುರಗಿ, ನಿಂಬರ್ಗಾ, ಸ್ಟೇಶನ ಗಾಣಗಾಪೂರಗಳಲ್ಲಿ ಇರುವ ನಮ್ಮ ಸಂಭಂಧಿಕರಲ್ಲಿ ಖುದ್ದಾಗಿ ಹೋಗಿ ವಿಚಾರಿಸಲಾಗಿ ನನ್ನ ಮಗಳು ಅಲ್ಲಿಗೆ ಹೋಗಿರುವದಿಲ್ಲ ತಿಳಿದಿರುತ್ತದೆ. ಹೀಗಾಗಿ ನಾನು. ನನ್ನ ಅಪ್ರಾಪ್ತ ವಯಸ್ಕ ಮಗಳಿಗೆ ಯಾರೋ ಯಾವುದೊ ದುರುದ್ದೇಶದಿಂದ ಯಾವುದೊ ಆಮೀಶ ತೋರಿಸಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

17 May 2016

Kalaburagi District Reported Crimes

ಕಿರುಕಳ ನೀಡಿದ್ದಕ್ಕೆ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಹಣಮಂತರಾಯ ಕಾಮನ ಇವರ ಮಗಳಾದ ಅರ್ಚನಾ ಇವಳಿಗೆ ಕಲಬುರಗಿಯ ಕೆ.ಹೆಚ್.,ಬಿ ಕಾಲೋನಿಯಲ್ಲಿ ವಾಸವಾಗಿರುವ ತನ್ನ ಅಕ್ಕನ ಮಗನಾದ ಸಂಜೀವಕುಮಾರ ಈತನೊಂದಿಗೆ ಈಗ ಒಂದು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಕೇಲವು ದಿನಗಳ ವರೆಗೆ ಅರ್ಚನಾ ಇವಳಿಗೆ ಆಕೆಯ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದು, ತದನಂತರ ಆಕೆಯ ಗಂಡ, ಅತ್ತೆ, ಭಾವ, ನಾದಿನಿ ಇವರು ಅರ್ಚನಾ ಇವಳಿಗೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ನೀನು ನೋಡಲಿಕೆ ಸರಿಯಾಗಿಲ್ಲ. ನೀನು ಸತ್ತರೆ ಸಂಜಿಕುಮಾರ ಈತನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಮತ್ತೆ  ಹೆಚ್ಚಿನ ವರದಕ್ಷಿಣೆ ಸಿಗುತ್ತದೆ ಅಂತಾ ಮಾನಸಿಕವಾಗಿ ಕಿರುಕುಳ ನೀಡಿದ್ದು, ಈ ವಿಷಯವನ್ನು ಅರ್ಚನಾ ಇವಳು ತನ್ನ ತಂದೆಗೆ ಪೋನಿನಲ್ಲಿ ಹೇಳುತ್ತಿದ್ದಳು. ಫಿರ್ಯಾದಿದಾರರ ಮಗಳಾದ ಅರ್ಚನಾ ಇವಳು ತನ್ನ ಗಂಡ ಸಂಜೀವಕುಮಾರ, ಅತ್ತೆ ಶಿವಕಾಂತಮ್ಮ, ಭಾವ ರಾಜಕುಮಾರ, ನಾದಿನಿ ಶೀಲಾ ಇವರು ಕೊಡುವ ಕಿರುಕುಳ ತಾಳಲಾರದೆ ದಿನಾಂಕ 15/05/2016 ರಂದು 5.00 ಪಿ.ಎಮ ದಿಂದ 7.00 ಪಿ.ಎಮದ ಅವಧಿಯಲ್ಲಿ  ತನ್ನ ಗಂಡನ ಮನೆಯ ಹಾಲ್ ನಲ್ಲಿರುವ ಸಿಲ್ಲಿಂಗ್ ಪ್ಯಾನಿಗೆ ಓಡಣಿಯಿಂದ ನೇಣು ಹಾಕಿಕೊಂಡುಯ ಮೃತಪಟ್ಟಿರುತ್ತಾಳೆ. ಕಾರಣ ಅರ್ಚನಾ ಇವಳ ಸಾವಿಗೆ ಕಾರಣರಾದ ಸಂಜೀವಕುಮಾರ, ಶಿವಕಾಂತಮ್ಮ, ರಾಜಕುಮಾರ, ಶೀಲಾ ಇವರುಗಳ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸುವರ್ಣ ಗಂಡ ಸುರೇಶ ಮ್ಯಾಗೇರಿ ಸಾ :  ಹರನೂರ ಜೇವರಗಿ ರವರನ್ನು ಸುರೇಶ ತಂದೆ ಚಂದಪ್ಪ ಮ್ಯಾಗೇರಿ ಸಾಃ ಹರನೂರ ಇತನ್ನೊಂದಿಗೆ ಸುಮಾರು 5 ವರ್ಷಗಳ ಹಿಂದೆ ನನ್ನ ಮದುವೆಯಾಗಿದ್ದು  ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ಹರನೂರ ಗ್ರಾಮದಲ್ಲಿ ವಾಸವಾಗಿದ್ದೆನು. ಮದುವೆಯಾದ 6 ತಿಂಗಳವರೆಗೆ ನಾನು ಮತ್ತು ನನ್ನ ಗಂಡ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದು ಸಂಸಾರ ಮಾಡಿಕೊಂಡು ಬಂದಿರುತ್ತೆವೆ. ನಂತರ ನನ್ನ ಗಂಡ ಮತ್ತು ಮಾವಂದಿರು ನನಗೆ ನೀನು ಸರಿಯಾಗಿ ಇರುವುದಿಲ್ಲಾ ನಿನಗೆ ಅಡುಗೆ ಮಾಡಲು, ಹೊಲ ಮನೆ ಕೆಲಸ ಮಾಡಲು ಬರುವುದಿಲ್ಲಾ ಮತ್ತು ನೀನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ನನಗೆ ಅವಾಚ್ಯವಾಗಿ ಬೈಯುವುದು ಹೊಡೆಯುವುದು ಬಡೆಯುವುದು ಮಾಡಿ ನನಗೆ ಮಾನಸೀಕ ಮತ್ತು ದೈಹಿಕ ಕಿರಕುಳ ಕೊಡುತ್ತಿದ್ದಾಗ ನಾನು ನನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ನನ್ನ ತಂದೆ ತಾಯಿಯವರು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಬುದ್ದಿವಾದ ಹೇಳಿರುತ್ತಾರೆ. ಆದರೂ ಸಹ ಅವರು ನನಗೆ ಅವರು ತೊಂದರೆ ಕೊಡುತ್ತಿದ್ದರು ಅದಕ್ಕೆ ನಾನು ಈಗ 4 ವರ್ಷದ ಹಿಂದೆ ನನ್ನ ತವರು ಮನೆಗೆ ಹೋಗಿ ನನ್ನ ತಂದೆ ತಾಯಿಯವರ ಹತ್ತಿರ ವಾಸವಾಗಿದ್ದೆನು. ಇಷ್ಟು ದಿನವಾದರೂ ಅವರು ನನಗೆ ಕರೆಯಲು ಬಂದಿರುವುದಿಲ್ಲಾ. ನಾನು ಮನೆಯ ಮರ್ಯಾದೆಗೆ ಅಂಜಿ ಸುಮ್ಮನಿದ್ದೆನು. ದಿನಾಂಕ 05.05.2016 ರಂದು ಮುಂಜಾನೆ 9.00 ಗಂಟೆಯ ಸುಮಾರಿಗೆ  ನನ್ನ ತಂದೆ ಶಿವಮಾನೇಪ್ಪ ಮತ್ತು ಅಣ್ಣ ಯಮನಪ್ಪ ಹಾಗೂ ನನ್ನ ಚಿಕ್ಕ ಅತ್ತಿ ಮಲ್ಲಮ್ಮ ಅಮಲೇಹಾಳಹಾಗೂ ಸಾಹೇಬಗೌಡ  ಪೂಜಾರಿ ಇವರೆಲ್ಲರೂ ಕೂಡಿಕೊಂಡು ನನಗೆ ನನ್ನ ಗಂಡನ ಮನೆಗೆ ಬಿಡಲು ಕರೆದುಕೊಂಡು ಹರನೂರಕ್ಕೆ ಬಂದು ನಮ್ಮ ಮನೆಯ ಎದುರು ನಿಂತಾಗ  ನನ್ನ ಗಂಡ 1. ಸುರೇಶ ತಂದೆ ಚಂದಪ್ಪ ಮ್ಯಾಗೇರಿ, ಮಾವ 2. ಚಂದಪ್ಪ ತಂದೆ ಭೀಮಪ್ಪ ಮ್ಯಾಗೇರಿ, ಬಾವಂದಿರಾದ 3. ಬಸಪ್ಪ ತಂದೆ ಚಂದಪ್ಪ ಮ್ಯಾಗೇರಿ, 4. ಯಮನಪ್ಪ ತಂದೆ ಚಂದಪ್ಪ ಮ್ಯಾಗೇರಿ, 5. ಮಲ್ಕಪ್ಪ ತಂದೆ ಚಂದಪ್ಪ ಮ್ಯಾಗೇರಿ, ಮತ್ತು ನನ್ನ ಚಿಕ್ಕ ಮಾವನಾದ 6. ಸಕ್ರೇಪ್ಪ ತಂದೆ ಭೀಮಪ್ಪ ಮ್ಯಾಗೇರಿ ಹಾಗೂ ನನ್ನ ಗಂಡನ ಎರಡನೆ ಅಣತಮ್ಮಕೀಯ 7. ತಿಪ್ಪಣ್ಣಾ ತಂದೆ ಪೀರಪ್ಪ ಮ್ಯಾಗೇರಿಸಾಃ ಎಲ್ಲರೂ ಹರನೂರ ಇವರೆಲ್ಲರೂ ಕೂಡಿಕೊಂಡು ಬಂದು ನಮಗೆ ಅವಾಚ್ಯವಾಗಿ ಬೈಯಹತ್ತಿದ್ದರು. ಆಗ ನಾನು ಅವರಿಗೆ ನನಗೆ ಗಂಡನ ಮನೆಗೆ ಬಿಡಲು ಬಂದಿರುತ್ತಾರೆ ಯಾಕೆ? ಬೈಯುತ್ತಿದ್ದಿರಿ ಅಂತಾ ನಾನು ಕೇಳಿದಾಗ  ನನ್ನ ಗಂಡ ಸುರೇಶನು ಏ ಬೊಸಡಿ ಇಷ್ಟು ದಿನ ತವರು ಮನೆಯಲ್ಲಿ ಇದ್ದು ಇವತ್ತು ಗಂಡನ ನೇನಪು ಬಂದದೇನು. ಅಂತಾ ಅವಾಚ್ಯವಾಗಿ ಬೈಯ್ದು ಕಾಲಿನಿಂದ ನನ್ನ ಸೊಂಟದ ಮೇಲೆ ಒದ್ದಿರುತ್ತಾನೆ, ನನ್ನ ಮಾವನು ಈ ಬೊಸಡಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ಮತ್ತೆ ನಮಗೆ ಎದುರು ಮಾತಾಡುತ್ತಾಳ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ, ನನ್ನ ಬಾವಂದಿರು ಮತ್ತು ಸಕ್ರೇಪ್ಪ ಹಾಗೂ ತಿಪ್ಪಣ್ಣ ಇವರು ನಮ್ಮೆಲ್ಲರಿಗೆ ಈ ಬೊಸಡಿ ಮಕ್ಕಳು ಎಲ್ಲರೂ ಕೂಡಿ ಬಂದಾರ ಒಂದು ಕೈ ನೊಡಿಯೇ ಬಿಡೊಣ ಅಂತಾ ಬೇದರಿಕೆ ಹಾಕಿರುತ್ತಾರೆ. ಮತ್ತು ನನ್ನ ಗಂಡನು ನನಗೆ ಏ ಬೊಸಡಿ ಇನ್ನೊಮ್ಮೆ ನನ್ನ ಮನೆಗೆ ಬಂದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ 16-05-2016 ರಂದು ದೇವಲಗಾಣಗಾಪೂರದ ಚಕ್ಲೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 04  ಜನರು ದುಂಡಾಗಿ ಕುಳಿತು ಹಣ ಪಟಕ್ಕೆ ಹಚ್ಚಿ ಇಸ್ಪೇಟ ಎಲೆಗಳಿಂದ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ದೇವಲ ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ 4 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸು ವಿಳಾಸ ವಿಚಾರಿಸಲು 1) ಧರ್ಮಣ್ಣ ತಂದೆ ರಾಜಾರಾಮ ಸಿದ್ನಾಳ 2) ಬಾಬು ತಂದೆ ವಿಠ್ಠಲ್ ಕಟ್ಟಮನಿ 3) ಅಮರೇಷ ತಂದೆ ಲಕ್ಷ್ಮಣ ಕಾಳೆ, 4) ನಾಗು ತಂದೆ ಸುಬಾಸ ಕಟ್ಟಿಮನಿ,ಸಾ|| ಎಲ್ಲರು ದೇವಲಗಾಣಗಾಪೂರ  ಇವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 980=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ದೇವಲ ಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  

16 May 2016

KALABURAGI DISTRICT POLICE PRESS NOTE

ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ  ಅಣ್ಣ  ತಂಗಿಯನ್ನು ದರೋಡೆ ಮಾಡಿದ ಕುಖ್ಯಾತ ದರೋಡೆಕೊರರ ಬಂಧನ,ಒಂದು ನಾಡ ಪಿಸ್ತೋಲ, ನಗದು ಹಣ, ಇನೋವಾ ಕಾರ ಹಾಗು ಇತರೆ ವಸ್ತುಗಳ ಜಪ್ತಿ


ಕಲಬುರಗಿ ಜೇವರಗಿ ರಾಷ್ಟ್ರಿಯ ಹೆದ್ದಾರಿ 218 ರ ಸರಡಗಿ(ಬಿ) ಕ್ರಾಸ ಹತ್ತಿರ ದಿನಾಂಕ 11-05-2016 ರಂದು ಬೆಳಗಿನ ಜಾವ 5-30 ಗಂಟೆಯ ಸುಮಾರಿಗೆ ಶ್ರೀ ಅನೀಲ ತಂದೆ ಬಾಬು ರಾಠೋಡ ರವರು ಮೊಟಾರ ಸೈಕಲ ಮೇಲೆ ತನ್ನ ತಂಗಿ ಮಂಜುಳಾಳೋಂದಿಗೆ ಗುಡೂರ ಗ್ರಾಮದಿಂದ ಮಹಾರಾಷ್ಟ್ರದ ಪನವೇಲ್ ಗೆ ಹೋಗುತ್ತಿರುವಾಗ ಸರಡಗಿ (ಬಿ) ಗ್ರಾಮದ ಕ್ರಾಸ ಹತ್ತಿರದ  ಪೆಟ್ರೋಲ ಪಂಪನಲ್ಲಿ ಪೆಟ್ರೋಲ ಹಾಕಿಸಿಕೊಳ್ಳುತ್ತಿರುವಾಗ ಅದೇ ವೇಳೆಗೆ ಒಂದು ಸಿಲ್ವರ ಬಣ್ಣದ ಇನೋವಾ ಕಾರು ಕೂಡಾ ಇಂಧನ ಹಾಕಿಸಿಕೊಳ್ಳಲು ಬಂದಿದ್ದು ಅವರು ಕೂಡಾ  ಇಂಧನ ಹಾಕಿಕೊಂಡಿದ್ದು ಇರುತ್ತದೆ. ಅನೀಲ ತಂದೆ ಬಾಬು ರಾಠೋಡರವರು ತಮ್ಮ ಮೊಟಾರ ಸೈಕಲಗೆ ಪೆಟ್ರೋಲ ಹಾಕಿಸಿಕೊಂಡು ಕಲಬುರಗಿ ಕಡೆಗೆ ಬರುತ್ತಿರುವಾಗ ಅದೇ ವೇಳೆಗೆ ಹಿಂದಿನಿಂದ ಪೆಟ್ರೋಲ ಪಂಪದಲ್ಲಿ ಇಂಧನ ಹಾಕಿಸಿಕೊಂಡವರು ಬಂದವರೆ ಅನೀಲ ರಾಠೋಡರವರ ಮೊಟಾರ ಸೈಕಲಗೆ ಅಡ್ಡಗಟ್ಟಿ ನಿಲ್ಲಿಸಿ ಕಾರಿನಿಂದ 5 ಜನರು ಇಳಿದು ಹೊಡೆಬಡೆ ಮಾಡಿ  ಅವರನ್ನು ಕಾರಿನಲ್ಲಿ ಕೂಡಿಸಿಕೊಂಡು ಅವರಲ್ಲಿ ಒಬ್ಬ ಮೊಟಾರ ಸೈಕಲ ತೆಗೆದುಕೊಂಡು ಹೋದನು. ಕಾರಿನಲ್ಲಿ ಫಿರ್ಯಾದಿ ಹಾಗು ಆತನ ತಂಗಿಯನ್ನು ಹೊಡೆಬಡೆ ಮಾಡಿ ಅವರಲ್ಲಿದ್ದ 7500/- ರೂ ನಗದು ಹಣ, ಎರಡು ಸಾಮಸಂಗ ಮೊಬೈಲ ಪೊನ ಕಿತ್ತುಕೊಂಡು ಅವರನ್ನು ವಿಜಯಪುರ ಜಿಲ್ಲೆಯ ಸಿಂಧಗಿ ಸಮೀಪ ಬಿಟ್ಟು ಓಡಿ ಹೋದ ಬಗ್ಗೆ  ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

            ಈ ದರೋಡೆ ಪ್ರಕರಣವನ್ನು ಪತ್ತೆ ಮಾಡುವ ಕುರಿತು ಮಾನ್ಯ ಶ್ರೀ ಅಮಿತ್ ಸಿಂಗ್.IPS, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ ಹಾಗು ಶ್ರೀ ವಿಜಯ ಅಂಚಿ ಡಿ.ಎಸ್.ಪಿ ಗ್ರಾಮಿಣ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಸ್. ಹುಲ್ಲೂರ ಡಿ.ಎಸ್.ಪಿ,  ಡಿ.ಸಿ.ಆರ್.ಬಿ ಘಟಕ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ,  ತಂಡದಲ್ಲಿದ್ದ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ, ಕಲಬುರಗಿ, ಲಕ್ಷ್ಮಿ ಪ್ರಸಾದ IPS,  ಎ.ಎಸ್.ಪಿ ಫರಹತಾಬಾದ ಪೊಲೀಸ ಠಾಣೆ ಶ್ರೀ ರಾಘವೇಂದ್ರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ, ಶ್ರೀ ನಾಗಭೂಷಣ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿಯವರು ಪ್ರಕರಣd ಆರೋಪಿತರನ್ನು ಪತ್ತೆ ಹಚ್ಚಿ , ಈ ಕೇಳಕಂಡ ಆರೋಪಿತರನ್ನು ಇಂದು ದಿನಾಂಕ 16/5/2016 ರಂದು ದಸ್ತಗಿರಿ ಮಾಡಿ, ಆರೋಪಿತರಿಂದ ಒಂದು ನಾಡ ಪಿಸ್ತ್ತೂಲ, ಒಂದು ಇನೋವಾ ಕಾರ, ಫಿಯಾದಿಯ ಮೊಟಾರ ಸೈಕಲ, ಒಂದು ಚಾಕು, ನಗದು ಹಣ ಹಾಗು ಮೊಬೈಲ ಪೊನಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ.
 ದಸ್ತಗಿರಿ ಮಾಡಿದ ಆರೋಪಿತರ ಹೆಸರು ಮತ್ತು ವಿಳಾಸ
1) ಖಯೂಮ ಪಟೇಲ ತಂದೆ ಮಹಿಬೂಬ ಪಟೇಲ ವಃ 24 ವರ್ಷ ಜಾಃ ಮುಸ್ಲಿಂ ಉಃ ವ್ಯಾಪಾರ ಸಾ:ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
2) ಮಹ್ಮದ ಪಟೇಲ ತಂದೆ ಇಮಾಮ ಪಟೇಲ ಮಾಲಿಪಾಟೀಲ ವಃ 21 ವರ್ಷ ಉಃ ಕಾರ ಚಾಲಕ ಸಾ: ಕಾಸರ ಭೋಸಗಾ ತಾ: ಜೇವರಗಿ ಜಿಲ್ಲಾ: ಕಲಬುರಗಿ
3) ಮಹಿಬೂಬ ತಂದೆ ಗಫರಸಾಬ ವಃ 22 ವರ್ಷ ಜಾಃ ಮುಸ್ಲಿಂ ಉಃ ಸೆಂಟ್ರಿಂಗ್ ಕೆಲಸ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
4) ಬಾಬಾ ಪಟೇಲ ತಂದೆ ಸಾಹೇಬ ಪಟೇಲ ವಃ 21 ವರ್ಷ ಉಃ ಟಿಪ್ಪರ ಕ್ಲೀನರ್ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
5) ನಜೀರ ಪಟೇಲ ತಂದೆ ಸುಲ್ತಾನ ಪಟೇಲ ವಃ 23 ವರ್ಷ ಜಾಃ ಮುಸ್ಲಿಂ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ

            ಒಟ್ಟು 5 ಜನ ಆರೋಪಿತರಿಂದ ನಗದು ಹಣ, ಕೃತ್ಯಕ್ಕೆ ಬಳಿಸಿದ ಒಂದು ನಾಡ ಪಿಸ್ತೋಲ, ಇನೋವಾ ಕಾರ, ಫಿರ್ಯಾದಿಯ ಮೊಟಾರ ಸೈಕಲ ಹಾಗು ಮೊಬೈಲ ಪೊನಗಳನ್ನು ಜಪ್ತು ಪಡಿಸಿಕೊಂಡು. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಆರೋಪಿ ಮತ್ತು ದರೊಡೆಮಾಡಿದ ಮಾಲು ಪತ್ತೆ ಮಾಡಿ ಪ್ರಕರಣ ಭೇದಿಸಿದ  ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ