POLICE BHAVAN KALABURAGI

POLICE BHAVAN KALABURAGI

07 March 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀಮತಿ ರುಕ್ಕಮ್ಮಾ ಗಂಡ  ಶಿವಶರಣಪ್ಪ ಡಾಂಗೆ ಮು:ಕಪನೂರ  ತಾ:ಜಿ: ಕಲಬುರಗಿ ರವರ ಗಂಡನಾದ ಶಿವಶರಣಪ್ಪ ಇವರು ಪಿ.ಡಬ್ಲ್ಯೂ.ಡಿ. ಇಲಾಖೆಯಲ್ಲಿ ನಿವೃತ್ತ ನೌಕರರು ಇದ್ದು  ದಿನಾಂಕ 05/03/16ರಂದು ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಶಿವಶರಣಪ್ಪ ಇಬ್ಬರು ಕೂಡಿ ಕಲಬುರಗಿ ನಗರದ ಸಂಗಮೇಶ್ವ ಕಾಲೋನಿಯಲ್ಲಿ ಇರುವ ಎಸ್.ಬಿ.ಎಚ. ಬ್ಯಾಂಕಿ ಹೋಗಿ ನನ್ನ ಗಂಡನು ನಿವೃತ್ತಿ ಪಿಂಚನಿ ಹಣವನ್ನು ತೆಗೆದುಕೊಂಡು ಮನೆಗೆ ಮರಳಿ ಬರುವ ಕುರಿತು ಸುಪರ ಮಾರ್ಕೆಟ ವರೆಗೂ ಆಟೋದಲ್ಲಿ ಬಂದು ಅಲ್ಲಿಂದ ಸುಪರ ಮಾರ್ಕೆಟನಿಂದ  ನಗರ ಸಾರಿಗೆ ಬಸನಲ್ಲಿ ಕುಳಿತುಕೊಂಡಿದ್ದು, ಸದರ ಬಸನಲ್ಲಿ ನನ್ನ ಮೈದನನ ಮಗನಾದ ಮಲ್ಲಿಕಾರ್ಜುನ ಇವರು ಸಹ ಕುಳಿತುಕೊಂಡಿದ್ದರು.ನಾವೆಲ್ಲರೂ  ಹುಮನಾಬಾದ ರಿಂಗ ರೋಡನಲ್ಲಿ  ರೋಡಿನ ಬದಿಯಿಂದ ನಡೆದುಕೊಂಡು ನನ್ನ ಗಂಡ ಸ್ವಲ್ಪ ಮುಂದೆ ಹೊರಟಿದ್ದು, ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ಸ್ವಲ್ಪ ಹಿಂದೆ ಹೊರಟಿದ್ದೇವು. ಆಗ ಅದೇ ವೇಳೆಗೆ ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು  ಬಂದವನೇ ನಡೆದುಕೊಂಡು ಹೋಗುತ್ತಿದ್ದ ನನ್ನ ಗಂಡನಿಗೆ ಜೋರಾಗಿ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ ಇದರಿಂದ ನನ್ನ ಗಂಡನು ರೋಡಿನ ಮೇಲೆ ಬಿದ್ದನು. ಟಿಪ್ಪರ ಚಾಲಕನು ಅದೇ ವೇಗದಲ್ಲಿ ಹೋಗಿ ಅಲ್ಲಿಯೇ ಹೊರಟಿದ್ದ ಕೆ.ಎಸ್.ಅರ್.ಟಿ.ಸಿ.ಬ ಸ್ಸ ನಂಬರ ಕೆಎ 32 ಎಫ 1662 ನೇದ್ದಕ್ಕೆ  ಹಿಂದೆಡಿಕ್ಕಿ ಕೊಟ್ಟು ಅದೇ ವೇಗದಲ್ಲಿ ಎದುರುಗಡೆ  ಬರುತ್ತಿದ್ದ ಆಟೋ ನಂಬರ ಕೆಎ 32 ಬಿ 8841 ನೇದ್ದಕ್ಕೆ ಅಪಘಾತಪಡಿಸಿ ಟಿಪ್ಪರನ್ನು ಸ್ವಲ್ಪ ಮುಂದೆ ನಿಲ್ಲಿಸಿ ಚಾಲಕನು ಅಲ್ಲಿಂದ ಓಡಿ ಹೋದನು. ಈ ಅಪಘಾತದಿಂದ ನನ್ನ ಗಂಡ ಶಿವಶರಣಪ್ಪ ಇವರಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಮತ್ತು ಬಾಯಿಂದ ರಕ್ತ ಸ್ರಾವವಾಗಿದ್ದು,. ಎಡಗೈ ರಟ್ಟಿಗೆ ಭಾರಿ ಗುಪ್ತಗಾಯವಾಗಿ ಮುರಿದಂತೆ ಆಗಿದ್ದು ಎಡ ಮೆಲಕಿನ ಹತ್ತಿರ ಗುಪ್ತಗಾಯವಾಗಿರುತ್ತದೆ.  ಬಸ್ಸನಲ್ಲಿ ಕುಳಿತವರಿಗೆ ಕೂಡಾ ಗಾಯಗಳು ಆಗಿದ್ದು, ಗಾಯಾಳುದಾರರು ಅವರ ಹೆಸರು ವಿಳಾಸ ಗೊತ್ತಿಲ್ಲಾ ಆಟೋ ಚಾಲಕನಿಗೆ ಯಾವುದೇ ರೀತಿಯ ಗಾಯಗಳು ಆಗಿರಲಿಲ್ಲಾ ಅಪಘಾತಪಡಿಸಿದ ಟಿಪ್ಪರ ನಂಬರ ಕೇಳಿ ತಿಳಿದುಕೊಳ್ಳಲಾಗಿ  ಅದರ ನಂಬರ ಜಿಎ 03 ಕೆ 6344 ಅಂತಾ  ಇರುತ್ತದೆ. ಚಾಲಕನ ಹೆಸರು ವಗೈರೇ  ಗೊತ್ತಿರುವುದಿಲ್ಲಾ ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ನಂತರ ನನ್ನ ಗಂಡ ಶಿವಶರಣಪ್ಪ ಇವರಿಗೆ ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ನನ್ನ ಗಂಡನಿಗೆ ಆಟೋದಲ್ಲಿ ತರುವಾಗ ಮಾರ್ಗ ಮಧ್ಯದಲ್ಲಿ  ಅಂದರೆ ಕಲಬುರಗಿ ನಗರದ ಮಿಜಗುರಿ ಹತ್ತಿರ ಇಂದು ದಿನಾಂಕ 05-03-16 ರಂದು 4-00  ಪಿ.ಎಂ. ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ 06.03.2016 ರಂದು ಬೆಳ್ಳಿಗ್ಗೆ 8 ಗಂಟೆಯ ಸುಮಾರಿಗೆ ನಮ್ಮ ತಂದೆ ಹೊಲಕ್ಕೆ ಹೋಗಿ ಸಾಯಂಕಾಲ 6 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು ಸಾಯಂಕಾಲ 7 ಗಂಟೆಯ ಸುಮಾರಿಗೆ ನಾನು ತಿರುಗಾಡುತ್ತಾ ನಮ್ಮ ಗ್ರಾಮದ ಮುಂದೆ ಇರುವ ಬಸ್ಸ ನಿಲ್ದಾಣ ಹತ್ತಿರ ಹೊಗಿದ್ದು ಅಲ್ಲಿ ನಮ್ಮ ಗ್ರಾಮದ ಮಹಾದೇವ ಹತ್ತಿ, ಸಂಗಮೇಶ ಕಿಣಗಿ ಮತ್ತು ಮಲ್ಲಿಕಾರ್ಜುನ ಹಲಚೇರಿ ಕೂಡಿಕೊಂಡು ಮಾತನಾಡುತ್ತಾ ನಿಂತಿದ್ದು ನಾನು ಹೋಗಿ ಸದರಿಯವರ ಸಂಗಡ ಮಾತನಾಡುತ್ತಾ ಬಸ್ಸ ನಿಲ್ದಾಣ ಹತ್ತಿರ ನಿಂತ್ತಿದ್ದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ನಮ್ಮ ತಂದೆಯಾದ ಅಂಬಾರಾವ ಇವರು ಮಲ ವಿಸರ್ಜನೆ ಕುರಿತು ನಾವು ನಿಂತ ಸ್ಥಳದಿಂದ ಸೊಂತ ಗ್ರಾಮದ ಕಡೆಗೆ ಹೋಗುವ ರಸ್ತೆಯ ಕಡೆಗೆ ಅಂದಾಜ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ಮಲ ವಿಸರ್ಜನೆ ಮಾಡಲು ಕೂಡಬೇಕು ಎನ್ನುವಷ್ಠರಲ್ಲಿ ಮರಗುತ್ತಿ ಕ್ರಾಸ ದಿಂದ ಬರುವ ರಸ್ತೆಯಿಂದ ಒಂದು ಬುಲೇರೊ ಜೀಪ ಚಾಲಕನು ತನ್ನ ಜೀಪವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ನಮ್ಮ ಮುಂದಿನಿಂದ ಹೋಗಿ ಮಲ ವಿಸರ್ಜನೆ ಕುರಿತು ಹೊದ ನಮ್ಮ ತಂದೆಗೆ ಅದೇ ವೇಗದಲ್ಲಿ ಗುದ್ದಿ ಅಪಘಾತ ಪಡಿಸಿ ಸ್ವಲ್ಪ ದೂರ ನಮ್ಮ ತಂದೆಗೆ ಎಳೆದುಕೊಂಡು ಹೋಗಿ ಮುಂದೆ ರಸ್ತೆ ತಗ್ಗಿನಲ್ಲಿ ಜೀಪ ಪಲ್ಟಿ ಮಾಡಿದ್ದು ಸದರಿ ಅಪಘಾತವನ್ನು ನೋಡಿ ನಾನು, ಮಹಾದೇವ, ಸಂಗಮೇಶ ಹಾಗೂ ಮಲ್ಲಿಕಾರ್ಜುನ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ನಮ್ಮ ತಂದೆ ಸ್ಥಳದಲ್ಲಿ ಮೃತ ಪಟ್ಟಿದ್ದು ನಾನು ನಮ್ಮ ತಂದೆಯ ಎಡಗಾಲ ಪಾದದ ಮೇಲೆ ಮಳಕಾಲ ಕೇಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು ಎಡಭಾಗದ ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಎಡಗಲ್ಲದ ಮೇಲೆ, ಎಡಗಣ್ಣಿನ ಹತ್ತಿರ ಎಡಭಾಗದ ತಲೆಗೆ ರಕ್ತಗಾಯ, ಗುಪ್ತಗಾಯವಾಗಿದ್ದು ಎಡಗಾಲ ಪಾದದ ಮೇಲೆ ತೆರಚಿದ ಗಾಯವಾಗಿದ್ದು ಮತ್ತು ನಮ್ಮ ತಂದೆಯ ಗುಪ್ತಾಂಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನಮ್ಮ ತಂದೆಗೆ ಅಪಘಾತ ಪಡಿಸಿದ ಬುಲೇರೊ ಜೀಪ ನಂಬರ ನೋಡಲು ಅದರ ನಂ ಕೆಎ 32 ಎನ್ 7823 ಅಂತಾ ಇದ್ದು ಅದರ ಚಾಲಕನಿಗೆ ನೋಡಲು  ಸದರಿ ಜೀಪ ಚಾಲಕ ಸೊಂತ ಗ್ರಾಮದ ವೀರಶಟ್ಟಿ ತಂದೆ ರಂಗರಾವ ಪಾಟೀಲ ಇರುತ್ತಾರೆ ಅಂತಾ ಶ್ರೀ ಗುಂಡಪ್ಪ ತಂದೆ ಅಂಬರಾಯ ಚಿಂದೆ ಸಾ: ಮರಗುತ್ತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ನೆಲೋಗಿ ಠಾಣೆ : ಶ್ರೀಮತಿ ಕಾಶಿಬಾಯಿ ಗಂಡ ಸಿದ್ದಪ್ಪ ಶಂಬೇವಾಡ ಸಾ: ದೇವರನಾದಗಿ ತಾ: ಸಿಂದಗಿ ಇವರು ಮಗ ಬಸವರಾಜನು ನಮ್ಮೂರ ಗೊಪಾಲ ದೊಡ್ಡಮನಿ ಇವರ ಮಗನ ಮದುವೇ ನಿಶ್ಚಯ ಕಾರಣ ನಿಮಿತ್ಯ ಸೋನ್ನ ಗ್ರಾಮಕ್ಕೆ ಹೊಗಿ ಬರುತ್ತೇನೆ ಅಂತ ಅಮೊಗಿ ತಳಕೇರಿ ಇತನ ಸೈಕಲ ಮೊಟರ ಮೇಲೆ ಹೊದರು ಮದ್ಯಾನ್ಹ 1-30 ಗಂಟೆ ಸುಮಾರಿಗೆ ನಮ್ಮೂರಿನ ಪಕ್ಕದ ಗ್ರಾಮದ ಸಿದ್ದಪ್ಪ ದಾನೆನವರ ನಮಗೆ ಫೊನ ಮಾಡಿ ತಿಳಿಸಿದೆನಂದರೆ ನಾನು ಸಂತೋಷ ಲಂಬಾಣಿ ಇಬ್ಬರು ಕೂಡಿ ಒಂದು ಸೈಕಲ ಮೊಟರ ಮೇಲೆ ಸೊನ್ನ ಗ್ರಾಮಕ್ಕೆ ಹೊಗುತ್ತಿದ್ದೇವು ನಮ್ಮಂತೆ ಬಸವರಾಜ ಮತ್ತು ಅಮೊಗಿ ತಳಕೇರಿ ಇಬ್ಬರು ಕೂಡಿ ಸೈಕಲ ಮೊಟರ ಇಂಜಿನ ನಂ JEZWFL16002 ನೇದ್ದರ ಮೇಲೆ ಸೊನ್ನ ಕಡೆಗೆ ಹಿಪ್ಪರಗಿ ಎಸ್.ಎನ್  ಕ್ರಾಸ್ ದಾಟಿ ಹೊಗುತ್ತಿರುವಾಗ ಅದೆ ಸಮಯಕ್ಕೆ ಜೇವರ್ಗಿ ಕಡೆಯಿಂದ ಒಂದು ಲಾರಿ ನಂಬರ  AP-16 TY-0159 ನೇದ್ದರ ಚಾಲಕನು ತನ್ನ ಲಾರಿಯನ್ನು ಅತವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಹೊರಟಿದ್ದ ಅಮೊಗಿ ನಡೆಸಿಕೊಂಡು ಹೊರಟಿದ್ದ ಸೈಕಲ್ ಮೊಟರಕ್ಕೆ ಡಿಕ್ಕಿ ಪಡೆಸಿದ್ದರಿಂದ ನಿನ್ನ ಮಗ ಬಸವರಾಜನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲಲ್ಲಿಯೆ ಮೃತ ಪಟ್ಟಿದ್ದು ಸೈಕಲ ಮೊಟರ ನಡೆಸುತ್ತಿದ್ದ ಅಮೊಗಿ ಇವನ ಬಲಗೈಗೆ ಭಾರಿ ರಕ್ತಗಾಯವಾಗಿದೆ ಅಂತ ತಿಳಿಸಿದ್ದಾಗ ನಾನು ಹಾಗೂ ಇತರರು ಸ್ಥಳಕ್ಕೆ ಬಂದು ನೊಡಲಾಗಿ ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೆ ಮೃತಪಟ್ಟಿದು ಲಾರಿ ಚಾಲಕನು ಲಾರಿ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 March 2016

Kalaburagi District Reported Crimes

ಅಪ್ರಾಪ್ತ ವಯಸ್ಸಿ ಮಗುವಿನ ಮೇಲೆ ಅತ್ಯಾಚಾರ ಪ್ರಕರಣ :.
ಮಹಿಳಾ ಠಾಣೆ : ದಿನಾಂಕ 03-03-2016 ರಂದು 5-00 ಪಿ.ಎಮ್ ಸುಮಾರಿಗೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನನ್ನ ಮಗಳು ಅಳುತ್ತಾ ನನ್ನ ಹತ್ತಿರ ಬಂದು ನನಗೆ ಹೊಟ್ಟೆ ಬೇನೆ ಆಗುತ್ತಿದೆ ಅಂತಾ ಹೇಳುತ್ತಿದ್ದಳು. ಆಗ ನಾನು ಅವಳಿಗೆ ಏನಾಗಿದೆ ಅಂತಾ ನನ್ನ ತೊಡೆಯ ಮೇಲೆ ಕೂಡಿಸಿಕೊಳ್ಳಲು ಅವಳು ನನಗೆ ಕೂಡಲು ಬರುತ್ತಿಲ್ಲ ಅಂತಾ ಹೇಳಿದಳು. ಆಗ ನಾನು ಏನಾಗಿದೆ ಅಂತಾ ಕೇಳಿದಾಗ ಕಿರಾಣಿ ಅಂಗಡಿಯ ಶಿವಕಾಂತ ಮಾಮ ಇತನು ನನಗೆ ತಿನ್ನಲು ಚುಡುವಾ ಕೊಟ್ಟು ತನ್ನ ಅಂಗಡಿಗೆ ಕರೆದುಕೊಂಡು ಹೋಗಿ 2 ರೂಪಾಯಿ ಕೊಟ್ಟು ತನ್ನ ಅಂಗಡಿಯ ಬಾಗಿಲು ಮುಚ್ಚಿಕೊಂಡು ನನ್ನ ಚಡ್ಡಿ ಕಳೆದು ಶಿವಕಾಂತ ಮಾಮ ಏನೋ ಮಾಡಿದ್ದಾನೆ ಅಂತಾ ಹೇಳಿದಳು. ನನ್ನ ಚಡ್ಡಿ ಕಳೆದು ಗುಪ್ತಾಂಗ ನೋಡಿದ್ದಾಗ ಸ್ವಲ್ಪ ಬಾವು ಬಂದಿದ್ದು, ಅವಳ ಚಡ್ಡಿ ತುಂಬ ವೀರ್ಯದಿಂದ ಹಸಿಯಾಗಿತ್ತು. ನಾನು ಶಿವಕಾಂತ ಇತನ ಹತ್ತಿರ ಹೋಗಿ ನನ್ನ ಮಗಳಿಗೆ ಏನು ಮಾಡಿದ್ದೀಯಾ ನಿನಗೆ ಸ್ವಲ್ಪವಾದರೂ ಮಾನ ಮರ್ಯಾದೆ ನಾಚಿಕೆ ಇದೆಯಾ ಅಂತಾ ಕೇಳುತ್ತಿದ್ದಾಗ ಆಗ ನೀನು ಸುಮ್ಮನೆ ಬಾಯಿ ಮಾಡಬೇಡ ಎಲ್ಲರೂ ನೋಡುತ್ತಿದ್ದಾರೆ ನನ್ನಿಂದ ತಪ್ಪಾಗಿದೆ ನಿನ್ನ ಕಾಲು ಬಿಳುತ್ತೇನೆ ಅಂತಾ ಹೇಳಿದನು. ಇಂದು ಸಾಯಂಕಾಲದ 4-00ಪಿ.ಎಮ್ ದಿಂದ 5-00 ಪಿ.ಎಮ್ ದ ಮಧ್ಯದ ಅವಧಿಯಲ್ಲಿ ನನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ನಂಬಿಸಿ ದೈಹಿಕ ಸಂಭೋಗ ಮಾಡಿ ಬಲತ್ಕರಿಸಿದ ಶಿವಕಾಂತ ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗದಗಯ್ಯ ತಂದೆ ಚನ್ನಬಸಯ್ಯ ಹಿರೇಮಠ ಸಾ|| ಕರಜಗಿ  ಇವರು ಒಕ್ಕಲುತನದ ಕೆಲಸದ ಸಂಭಂದ ನಮ್ಮೂರಿನ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ ಹಾಗೂ ಅವನ ತಮ್ಮ ಪುಂಡಪ್ಪ ತಂದೆ ಭೀಮಶಾ ಲಾಳಸಂಗಿ ಇವರ ಹತ್ತಿರ ಸಾಲ ಪಡೆದುಕೊಂಡು ಮರಳಿ ವಾಪಸ ಕೊಟ್ಟಿರುತ್ತೇನೆ, ನಾನು ಹಣ ವಾಪಸ ಕೊಟ್ಟರು ಸಿದ್ದಪ್ಪ ಲಾಳಸಂಗಿ ಮತ್ತು ಅವನ ತಮ್ಮ ಪುಂಡಪ್ಪ ಲಾಳಸಂಗಿ ಇವರು ನನಗೆ ಇನ್ನು ಹಣ ಕೊಡಬೇಕು ಎಂದು ಪೀಡಿಸುತ್ತಿದ್ದರಿಂದ ನಾನು ಅವರ ಮೇಲೆ ತಮ್ಮ ಠಾಣೆಯಲ್ಲಿ ಕೇಸು ಮಾಡಿರುತ್ತೇನೆ. ನಾನು ಕೇಸು ಮಾಡಿದ ಸಂಭಂದ ಪುಂಡಪ್ಪ ಲಾಳಸಂಗಿ ಈತನು ನನಗೆ ಏನೊ ಸೂಳೆ ಮಗನೆ ನಮ್ಮ ಮೇಲೆ ಕೇಸು ಮಾಡಿದಿ ಅಂತಾ ಅಂದಿನಿಂದ ನನ್ನ ಮೇಲೆ ಹಲ್ಲು ಮಸೆಯುತ್ತಿರುತ್ತಾನೆ. ಹಾಗೂ ನಮ್ಮ ಹೊಲದ ಬಾಜು ಹೊಲದವನಾದ ನಮ್ಮ  ಚಿಕ್ಕಪ್ಪನಾದ ಕೈಲಾಸಯ್ಯ ಈತನ ಹೊಲದಲ್ಲಿ ಜೀತಕ್ಕೆ ಇದ್ದ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದ ಹಣಮಂತ ಹಿರೋಳ್ಳಿ ಈತನು ನನಗೆ ಬೇದರಿಕೆ ಹಾಕುತ್ತಿದ್ದ ಪುಂಡಪ್ಪ ಲಾಳಸಂಗಿ ಇಬ್ಬರು ಗೇಳೆಯರಿದ್ದು, ನಾನು ಒಬ್ಬನೆ ಹೊಲಕ್ಕೆ ಹೋದಾಗ ಹಣಮಂತ ಹಿರೋಳ್ಳಿ ಈತನು ಪುಂಡಪ್ಪನಿಗೆ ಪೋನ ಮಾಡಿ ಹೊಲಕ್ಕೆ ಕರೆಸುತ್ತಿದ್ದನು, ಆಗ ಪುಂಡಪ್ಪನು ನಾನು ಇದ್ದಲ್ಲಿಗೆ ಬಂದು ನನ್ನ ಜೋತೆಗೆ ಜಗಳ ಮಾಡಿ ಹೋಗುತ್ತಿದ್ದನು, ದಿನಾಂಕ 01-03-2016 ರಂದು ನಾನು ಕರಜಗಿ ಸೀಮಾಂತರದಲ್ಲಿರುವ ನಮ್ಮ ತಾಯಿಯಾದ ಮಾದೇವಿ ಇವರ ಹೆಸರಿನಲ್ಲಿರುವ ನಮ್ಮ ಹೊಲ ಸ ನಂ 246 ನೇದ್ದರಲ್ಲಿ ನೀರು ಬೀಡುವ ಸಂಭಂದ ಬೆಳಗಿನಜಾವ 04:00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ನೀರು ಬಿಡುತ್ತಿರುತ್ತೇನೆ. ಆಗ ಬಾಜು ಹೊಲದಲ್ಲಿದ್ದ ಹಣಮಂತ ಹಿರೋಳ್ಳಿ ಈತನು ನಾನು ನೀರು ಬಿಡುವುದನ್ನು ನೋಡಿ ನನಗೆ ಕೆಳಿಸುವಂತೆಯೆ ನನ್ನ ಜೋತೆಗೆ ಜಗಳ ಮಾಡುತ್ತಿದ್ದ ಪುಂಡಪ್ಪ ಲಾಳಸಂಗಿ ಈತನಿಗೆ ಪೋನ ಮಾಡಿ ಗದಗಯ್ಯ ಅವನ ಹೊಲದಲ್ಲಿ ಇದ್ದಾನೆ ನೀನು ಬೇಗ ಬಾ ಅಂತಾ ತಿಳಿಸಿದನು, ಆದರು ಸಹ ನಾನು ಈಗ್ಯಾಕ ಬರುತ್ತಾನೆ ಅಂತಾ ತಿಳಿದುಕೊಂಡು ನಾನು ನನ್ನ ಪಾಡಿಗೆ ಹೊಲದಲ್ಲಿ ನೀರು ಬಿಡುತ್ತಿದ್ದೇನು, ಅಂದಾಜು ಬೆಳಗಿನಜಾವ 05::00 ಗಂಟೆ ಸುಮಾರಿಗೆ ನಾನು ನೀರು ಬಿಡುತ್ತಿದ್ದಾಗ ಸದರಿ ಪುಂಡಪ್ಪ ತಂದೆ ಭೀಮಶಾ ಲಾಳಸಂಗಿ ಈತನು ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನ್ನ ಹತ್ತಿರ ಬಂದು ಏನೊ ಸೂಳೆ ಮಗನೆ ಏಷ್ಟು ದಿನ ತಪ್ಪಿಸಿಕೊಳ್ಳುತ್ತಿ, ನಿನ್ನದು ಏಷ್ಟು ತಿಂಡಿ ಇರಬೇಕು ನಮ್ಮ ಮೇಲೆಯ ಕೇಸು ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಏಳೆದಾಡಿ ನನಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡಿದನು. ಆಗ ನಾನು ಕೆಳಗೆ ಬಿದ್ದಾಗ ನನ್ನ ಮೇಲೆ ಕುಳಿತು ಹೊಟ್ಟೆಗೆ ಮುಷ್ಟಿ ಮಾಡಿ ಗುದ್ದುತ್ತಿದ್ದನು. ಆಗ ನಾನು ಚಿರಾಡುತ್ತಿದ್ದಾಗ ನನ್ನಂತೆ ಬಾಜು ಹೊಲದವರು ಬಂದು ಬಿಡಿಸಿದ್ದು ಆಗ ಸದರಿ ಪುಂಡಪ್ಪ ಈತನು ಮಗನೆ ಇವರು ಬಂದು ಬಿಡಿಸಿದ್ದಕ್ಕೆ ನೀನು ಉಳಿದುಕೊಂಡಿದಿ ಮುಂದೆ ನಿನ್ನ ಜಿವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಜೀವ ಬೇದರಿಕೆ ಹಾಕಿ ಹೊಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 March 2016

Kalaburagi District Reported Crime

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಮಲ್ಲಿಕಾರ್ಜುನ ನೂಲಕರ ಸಾ; ಖಾಜಾಕೋಟನೂರ ತಾ;ಜಿ;ಕಲಬುರಗಿ ಇವರ ಮಗಳು ರಾಜಶ್ರೀ ಗಂಡ ದಶರಥ ಚೂರಿ ಇವಳಿಗೆ ಕಾಮಣಿ ಯಾಗಿದ್ದರಿಂದ ಉಪಚಾರ ಕುರಿತು ಕಲಬುರಗಿಯ ಹುಮನಾಬಾದ ರೋಡಿಗೆ ಇರುವ ಮದರ ಥೆರೆಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರಿಂದ ಅವಳಿಗೆ ಮಾತನಾಡಿಸಲು ನಾನು ಮತ್ತು ನನ್ನ ಗಂಡ ಮಲ್ಲಿಕಾರ್ಜುನ ತಂದೆ ಪೀರಪ್ಪಾ ನೂಲಕರ ಇಬ್ಬರು ಕೂಡಿಕೊಂಡು ದಿನಾಂಕ.01-03-2016 ರಂದು ರಾತ್ರಿಗೆ ಖಾಜಾಕೋಟನೂರದಿಂದ ಕಲಬುರಗಿಯ ಮದರ ಥೆರಸಾ ಆಸ್ಪತ್ರೆಗೆ ಬಂದಿದ್ದೇವು , ರಾತ್ರಿ ನನ್ನ ಮಗಳಿಗೆ ಮಾತನಾಡಿ ಎಲ್ಲರೂಕೂಡಿಕೊಂಡು ಊಟ ಮಾಡಿದ ನಂತರ ದಿನಾಂಕ 02-03-2016 ರಂದು 00-30 ಗಂಟೆಯ ಸುಮಾರಿಗೆ ನನ್ನ ಗಂಡ ಮಲ್ಲಿಕಾರ್ಜುನ ನೂಲಕರ ಇವರು ಬೀಡಿ ತರುತ್ತೇನೆ ಅಂತಾ ಹೇಳಿ ಆಸ್ಪತ್ರೆಯಿಂದ ಬೇಲೂರ ಕ್ರಾಸ ಕಡೆಗೆ ಹೋದನು ಆಸ್ಪತ್ರೆಯಲ್ಲಿ ನಾನು ಮತ್ತು ನನ್ನಮಗಳು ರಾಜಶ್ರೀ ಹಾಗೂ ನನ್ನ ಅಳಿಯ ದಶರಥ ಚೂರಿ ಉಳಿದುಕೊಂಡೇವು ರಾತ್ರಿ ಬಹಳಷ್ಟು ಆದರೂ ಕೂಡಾ ವಾಪಸಬರಲಿಲ್ಲಾ ಬರಬಹುದು ಅಂತಾ ನಾವು ಮಲಗಿಕೊಂಡೆವು ಬೆಳಗ್ಗೆ ಎದ್ದಾಗಲು ಆಸ್ಪತ್ರೆಗೆ ಬಂದಿರಲಿಲ್ಲಾ ಮುಂಜಾನೆ 8-00ಗಂಟೆಯ ಸುಮಾರಿಗೆ ಬೇಲೂರ ಕ್ರಾಸ ಸಮೀಪ ಬೀರಬಿಟ್ಟೆ ದಾಲಮಿಲ್ ಎದರುಗಡೆ ಹುಮನಾಬಾದ ರೋಡಿಗೆ ಒಬ್ಬ ವ್ಯಕ್ತಿ ವಾಹನ ಅಪಘಾತವಾಗಿರುತ್ತದೆ ಅಂತಾ ಜನರು ಮಾತಾಡುತ್ತಿದ್ದಾಗ ನಾನು ಗಾಬರಿಗೊಂಡು  ನಾನು ಮತ್ತು ನನ್ನ ಅಳಿಯ ದಶರಥ ಚೂರಿ ಇಬ್ಬರು ಕೂಡಿಕೊಂಡು ಬೇಲೂರ ಕ್ರಾಸ ದಾಟಿ ಬಿರಬಿಟ್ಟೆ ರವರ ದಾಲಮಿಲ್ ಎದರುಗಡೆ ಹುಮನಾಬಾದರೋಡಿಗೆ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅಂಗಾತವಾಗಿ ಬಿದ್ದಿದ್ದು ನೋಡಲು ನನ್ನ ಗಂಡ ಮಲ್ಲಿಕಾರ್ಜುನ ನೂಲಕರ ಇದ್ದನು ಇತನ ತಲೆಯ ಹಿಂದುಗಡೆ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು,ಎಡಗೈರಟ್ಟೆಗೆ ಭಾರಿಗುಪ್ತಪೆಟ್ಟಾಗಿ ಮುರಿದಂತೆ ಆಗಿರುತ್ತದೆ, ಬಲಗೈ ಒಳಕೈಗೆ ,ಎದೆಗೆ  ಗುಪ್ತ ಪೆಟ್ಟು ತರಚಿದಗಾಯಗಳಾಗಿದ್ದು ಎಡಗಾಲು ತೋಡೆಗೆ ಭಾರಿ ಗುಪ್ತ ಪೆಟ್ಟಾಗಿದ್ದು ,ಮೊಳಕಾಲಿಗೆ ತರಚಿದಗಾಯವಾಗಿದ್ದು ಮೃತ ಪಟ್ಟಿದ್ದನು , ನೋಡಲಾಗಿ ಘಟನಾ ಸ್ಥಳದಲ್ಲಿ  ಒಂದು ಮೋಟಾರ ಸೈಕಲ್ ನ ಬಲಗಡ , ಡೋಮ ಹಾಗೂ ಇಂಡಿಕೇಟರ ತುಕಡಿಗಳು ಬಿದ್ದಿದವು , ದಿನಾಂಕ 2-3-2016 ರಂದು 00-30 ಗಂಟೆಯಿಂದ 8-00 ಗಂಟೆಯ ಮದ್ಯದ ಅವಧಿಯಲ್ಲಿ   ಬೇಲೂರ ಕ್ರಾಸ ಹತ್ತಿರ ಬೀರ ಬಿಟ್ಟೆ ದಾಲಮಿಲ್ ಎದರುಗಡೆ ಹುಮನಾಬಾದರೋಡಿಗೆ ನನ್ನ ಗಂಡ ಮಲ್ಲಿಕಾರ್ಜುನ ನೂಲಕರ ಬೀಡಿ ತೆಗೆದುಕೊಂಡು ಬರುಲು ಹೋಗುವಾಗ ಕಲಬುರಗಿ ಕಡೆಯಿಂದ ಯಾವುದೋ ಒಂದುಮೋಟಾರಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನ ದಿಂದ ನಡೆಯಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿ ಹೊಡೆದು ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲನ್ನು ಹಾಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.