POLICE BHAVAN KALABURAGI

POLICE BHAVAN KALABURAGI

03 March 2016

Kalaburagi District Reported Crime

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಮಲ್ಲಿಕಾರ್ಜುನ ನೂಲಕರ ಸಾ; ಖಾಜಾಕೋಟನೂರ ತಾ;ಜಿ;ಕಲಬುರಗಿ ಇವರ ಮಗಳು ರಾಜಶ್ರೀ ಗಂಡ ದಶರಥ ಚೂರಿ ಇವಳಿಗೆ ಕಾಮಣಿ ಯಾಗಿದ್ದರಿಂದ ಉಪಚಾರ ಕುರಿತು ಕಲಬುರಗಿಯ ಹುಮನಾಬಾದ ರೋಡಿಗೆ ಇರುವ ಮದರ ಥೆರೆಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರಿಂದ ಅವಳಿಗೆ ಮಾತನಾಡಿಸಲು ನಾನು ಮತ್ತು ನನ್ನ ಗಂಡ ಮಲ್ಲಿಕಾರ್ಜುನ ತಂದೆ ಪೀರಪ್ಪಾ ನೂಲಕರ ಇಬ್ಬರು ಕೂಡಿಕೊಂಡು ದಿನಾಂಕ.01-03-2016 ರಂದು ರಾತ್ರಿಗೆ ಖಾಜಾಕೋಟನೂರದಿಂದ ಕಲಬುರಗಿಯ ಮದರ ಥೆರಸಾ ಆಸ್ಪತ್ರೆಗೆ ಬಂದಿದ್ದೇವು , ರಾತ್ರಿ ನನ್ನ ಮಗಳಿಗೆ ಮಾತನಾಡಿ ಎಲ್ಲರೂಕೂಡಿಕೊಂಡು ಊಟ ಮಾಡಿದ ನಂತರ ದಿನಾಂಕ 02-03-2016 ರಂದು 00-30 ಗಂಟೆಯ ಸುಮಾರಿಗೆ ನನ್ನ ಗಂಡ ಮಲ್ಲಿಕಾರ್ಜುನ ನೂಲಕರ ಇವರು ಬೀಡಿ ತರುತ್ತೇನೆ ಅಂತಾ ಹೇಳಿ ಆಸ್ಪತ್ರೆಯಿಂದ ಬೇಲೂರ ಕ್ರಾಸ ಕಡೆಗೆ ಹೋದನು ಆಸ್ಪತ್ರೆಯಲ್ಲಿ ನಾನು ಮತ್ತು ನನ್ನಮಗಳು ರಾಜಶ್ರೀ ಹಾಗೂ ನನ್ನ ಅಳಿಯ ದಶರಥ ಚೂರಿ ಉಳಿದುಕೊಂಡೇವು ರಾತ್ರಿ ಬಹಳಷ್ಟು ಆದರೂ ಕೂಡಾ ವಾಪಸಬರಲಿಲ್ಲಾ ಬರಬಹುದು ಅಂತಾ ನಾವು ಮಲಗಿಕೊಂಡೆವು ಬೆಳಗ್ಗೆ ಎದ್ದಾಗಲು ಆಸ್ಪತ್ರೆಗೆ ಬಂದಿರಲಿಲ್ಲಾ ಮುಂಜಾನೆ 8-00ಗಂಟೆಯ ಸುಮಾರಿಗೆ ಬೇಲೂರ ಕ್ರಾಸ ಸಮೀಪ ಬೀರಬಿಟ್ಟೆ ದಾಲಮಿಲ್ ಎದರುಗಡೆ ಹುಮನಾಬಾದ ರೋಡಿಗೆ ಒಬ್ಬ ವ್ಯಕ್ತಿ ವಾಹನ ಅಪಘಾತವಾಗಿರುತ್ತದೆ ಅಂತಾ ಜನರು ಮಾತಾಡುತ್ತಿದ್ದಾಗ ನಾನು ಗಾಬರಿಗೊಂಡು  ನಾನು ಮತ್ತು ನನ್ನ ಅಳಿಯ ದಶರಥ ಚೂರಿ ಇಬ್ಬರು ಕೂಡಿಕೊಂಡು ಬೇಲೂರ ಕ್ರಾಸ ದಾಟಿ ಬಿರಬಿಟ್ಟೆ ರವರ ದಾಲಮಿಲ್ ಎದರುಗಡೆ ಹುಮನಾಬಾದರೋಡಿಗೆ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅಂಗಾತವಾಗಿ ಬಿದ್ದಿದ್ದು ನೋಡಲು ನನ್ನ ಗಂಡ ಮಲ್ಲಿಕಾರ್ಜುನ ನೂಲಕರ ಇದ್ದನು ಇತನ ತಲೆಯ ಹಿಂದುಗಡೆ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು,ಎಡಗೈರಟ್ಟೆಗೆ ಭಾರಿಗುಪ್ತಪೆಟ್ಟಾಗಿ ಮುರಿದಂತೆ ಆಗಿರುತ್ತದೆ, ಬಲಗೈ ಒಳಕೈಗೆ ,ಎದೆಗೆ  ಗುಪ್ತ ಪೆಟ್ಟು ತರಚಿದಗಾಯಗಳಾಗಿದ್ದು ಎಡಗಾಲು ತೋಡೆಗೆ ಭಾರಿ ಗುಪ್ತ ಪೆಟ್ಟಾಗಿದ್ದು ,ಮೊಳಕಾಲಿಗೆ ತರಚಿದಗಾಯವಾಗಿದ್ದು ಮೃತ ಪಟ್ಟಿದ್ದನು , ನೋಡಲಾಗಿ ಘಟನಾ ಸ್ಥಳದಲ್ಲಿ  ಒಂದು ಮೋಟಾರ ಸೈಕಲ್ ನ ಬಲಗಡ , ಡೋಮ ಹಾಗೂ ಇಂಡಿಕೇಟರ ತುಕಡಿಗಳು ಬಿದ್ದಿದವು , ದಿನಾಂಕ 2-3-2016 ರಂದು 00-30 ಗಂಟೆಯಿಂದ 8-00 ಗಂಟೆಯ ಮದ್ಯದ ಅವಧಿಯಲ್ಲಿ   ಬೇಲೂರ ಕ್ರಾಸ ಹತ್ತಿರ ಬೀರ ಬಿಟ್ಟೆ ದಾಲಮಿಲ್ ಎದರುಗಡೆ ಹುಮನಾಬಾದರೋಡಿಗೆ ನನ್ನ ಗಂಡ ಮಲ್ಲಿಕಾರ್ಜುನ ನೂಲಕರ ಬೀಡಿ ತೆಗೆದುಕೊಂಡು ಬರುಲು ಹೋಗುವಾಗ ಕಲಬುರಗಿ ಕಡೆಯಿಂದ ಯಾವುದೋ ಒಂದುಮೋಟಾರಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನ ದಿಂದ ನಡೆಯಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿ ಹೊಡೆದು ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲನ್ನು ಹಾಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: