POLICE BHAVAN KALABURAGI

POLICE BHAVAN KALABURAGI

10 October 2015

KALABURAGI DISTRICT REPORTED CRIMES.

ಮಹಿಳಾ ಪೊಲೀಸ ಠಾಣೆ : ಇಂದು ದಿನಾಂಕ 09/10/2015 ರಂದು  10 ಎ.ಎಂ ಕ್ಕೆ ಕೋರ್ಟ ಮ.ಪಿ.ಸಿ 741 ಸುಜಾತಾ ರವರು ಮಾನ್ಯ ನ್ಯಾಯಲಯದಿಂದ ಖಾಸಗಿ ದೂರು ಪಿ.ಸಿ ಸಂಖ್ಯೆ 959/2015 ದಿನಾಂಕ 29.09.2015 ನೇದ್ದು ತಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರಳ ಮದುವೆಯು ಆರೋಪಿ ನಂ 1 ಇತನೊಂದಿಗೆ ದಿನಾಂಕ 10.10.2014 ರಂದು ಪ್ಯಾರಾಡೈಸ್ ಫಂಕ್ಷನ್ ಹಾಲದಲ್ಲಿ ಸಂಪ್ರದಾಯದಂತೆ ಮದುವೆ ಆಗಿದ್ದು ಮದುವೆ ಆದ ನಂತರ ಪಿರ್ಯಾದಿಯು ಆರೋಪಿತರ ಮನೆಗೆ ಹೋಗಿದ್ದು ಮದುವೆ ಆದ ನಂತರ ಆರೋಪಿತರು   ಪಿರ್ಯಾದಿಯೊಂದಿಗೆ ಸುಮಾರು 6 ತಿಂಗಳವರೆಗೆ ಚೆನ್ನಾಗಿದ್ದು ನಂತರ ಮನೆಯ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ತೆಗೆಯುವುದು ಅಡುಗೆ ಮಾಡಲು ಬರುವದಿಲ್ಲ ಅಂತಾ ಎಲ್ಲರೂ ಕೂಡಿ ತವರು ಮನೆಯಿಂದ 1 ಲಕ್ಷ ರೂಪಾಯಿ ಮತ್ತು 5 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿರುತ್ತಾರೆ ಪಿರ್ಯಾದಿಯು ದಿನಾಂಕ 20.07.2015 ರಂದು ತನ್ನ ತಂದೆಯ ಮನೆಯಲ್ಲಿ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದು ಇರುತ್ತದೆ, ದಿನಾಂಕ 07.09.2015 ರಂದು ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರಳಿಗೆ ಎ  ರಂಡಿ ಎಲ್ಲಿಯವರೆಗೆ ನಿನ್ನ ತವರು ಮನ್ಯಾಗ ಇರುತ್ತಿ ಇರು ನನಗೆ ಡೈವರ್ಸ್ ಕೊಡು ಇಲ್ಲ 1 ಲಕ್ಷ ರೂಪಾಯಿ ಕೊಡು ಅಂದರೆ ನಿನಗೆ ಕರೆದುಕೊಂಡು ಹೋಗುತ್ತೇನೆ. ನನ್ನ ಮದುವೆಯಲ್ಲಿ ನೀವು ವರದಕ್ಷಿಣೆ ಕೂಡಾ ಬಹಳ ಕೊಟ್ಟಿಲ್ಲ ನಿಮ್ಮಪ್ಪ ಬೋಸಡಿ ಅಂತಾ ಪಿರ್ಯಾದಿ ಆರೋಪಿ ನಂ 1 & 2 ನೇದ್ದವರು ಬೈದಿರುತ್ತಾರೆ, ಮತ್ತು ಆರೋಪಿ ನಂ 3 ರಿಂದ 7 ನೇದವರು ಕೂಡ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಅಂತಾ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ ಆರೋಪಿತರ ಹೆಸರು: ) ಮುಕ್ತಾರ ಅಹ್ಮದ 2) ಮೆಹರುನಿಸಾ 3) ಅಕ್ರಮಂ ಪಾಷಾ 4) ಮಕಬೂಲ್ ಪಾಷಾ 5) ಅನ್ವರ ಪಾಷಾ 6) ಶಾಹಿದಾ ಬೇಗಂ 7_) ಸಹೆರಾ ಬಾನು  ಸಾ: ಎಲ್ಲರೂ ಮನೆ ನಂ 11-41/11 ಗಾಲಿಬ ಕಾಲೋನಿ ಎಂ.ಎಸ್ ಕೆ. ಮಿಲ್ ಏರಿಯಾ ಕಲಬುರಗಿ

09 October 2015

KALABURAGI DISTRICT POLICE REPORTED CRIMES .

ಜೇವರ್ಗಿ ಪೊಲೀಸ ಠಾಣೆ : ದಿನಾಂಕ 08.10.2015 ರಂದು ಮುಂಜಾನೆ 06:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರ ಅರ್ಜಿ ಹಾಜರುಪಡಿಸಿದ್ದು ಸಾರಾಂಶವೇನೆಂದರೆ ದಿನಾಂಕ 07.10.2015 ರಂದು ರಾತ್ರಿ 08:00 ಗಂಟೆಗೆ ಚಿಗರಳ್ಳಿ ಕ್ರಾಸ್ ಸಮೀಪ ದರ್ಗಾ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ನಾನು ಮತ್ತು ನಮ್ಮ ದೊಡ್ಡಮ್ಮನ ಮಗನಾದ ಲೋಕೇಶ ತಂದೆ ವಸಂತ ಲೋಕೆಕರ್ ವಯಾ|| 23 ವರ್ಷ ಈತನೊಂದಿಗೆ ನಡೆದುಕೊಂಡು ಚಿಗರಳ್ಳಿ ಕ್ರಾಸ್ ದಿಂದ ದರ್ಗಾ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಜೇವರಗಿ ಕಡೆಯಿಂದ ಕಾರ್ ನಂ ಕೆ.ಎ32ಎಮ್4506 ನೇದ್ದರ ಚಾಲಕ ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಲೋಕೆಶನಿಗೆ ಡಿಕ್ಕಿ ಪಡಿಸಿದ್ದರಿಂದ ಲೋಕೇಶನಿಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತನದ ನಂತರ ಕಾರ್‌ ಚಾಲಕನು ತನ್ನ ಕಾರ್‌ ನೊಂದಿಗೆ ಓಡಿ ಹೋಗಿದ್ದು ಕಾರಣ ಸದರಿ ಕಾರ್‌ಮತ್ತು ಚಾಲಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿಅಂತ ವಗೈರೆ ಫಿರ್ಯಾದಿ  ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತೆದೆ. 

08 October 2015

KALABURAGI DISTRICT REPORTED CRIMES

ಅಪಘಾ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ: 07/10/2015 ರಂದು ಶ್ರೀ.ಬಂಡಯ್ಯ ತಂದೆ ಬಾಬಯ್ಯ ಮು:ಎಲೆನಾವದಗಿ ತಾ: ಆಳಂದ ಜಿ:ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ: 07/10/2015 ರಂದು ಸಾಯಂಕಾಲ 07:30 ಗಂಟೆಗೆ ತಮ್ಮ ಅಕ್ಕ ನಾಗಮ್ಮಳ ಗಂಡ ಶಿವಯ್ಯ ಸ್ವಾಮಿ ಮು:ಶಕಾಪೂರ ಇವರು ಪೋನ ಮುಖಾಂತರ ತಿಳಿಸಿದೆನೆಂದರೆ ನಮ್ಮ ತಾಯಿ ರಾಚಮ್ಮ ಗಂಡ ಬಾಬಯ್ಯ ಇವಳು ಎಲೆನಾವದಗಿಯಿಂದ ಆಳಂದಕ್ಕೆ ಬಂದು ಆಳಂದದಿಂದ ನಮ್ಮೂರಾದ ಶಕಾಪೂರಕ್ಕೆ ಬರುವ ಸಲುವಾಗಿ ಬಸ್ಸಿನಲ್ಲಿ ಕುಳಿತು ನಮ್ಮೂರ ಕ್ರಾಸಿಗೆ ಬಂದು ಇಳಿದು ರೋಡ ದಾಟುವಾಗ ವಾಗ್ದರಗಿ ಕಡೆಯಿಂದ ಆಳಂದ ಕಡೆಗೆ ಬರುತ್ತಿದ್ದ ಸಿಮೆಂಟ್ ಟ್ಯಾಂಕರ ಲಾರಿ ನಂ: MH:12 LT:0271ರ ಚಾಲಕ ತನ್ನ ವಾಹನ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸುತ ಬಂದು ರೋಡ ದಾಟುತ್ತಿದ್ದ ನಮ್ಮ ತಾಯಿ  ರಾಚಮ್ಮಳಿಗೆ ಅಪಘಾತ ಮಾಡಿದ ಪರಿಣಾಮ ಆಕೆಯ ತಲೆಗೆ ಎಡಭಾಗಕ್ಕೆ ಭಾರಿ ಪೆಟ್ಟಾಗಿದ್ದು ಅಲ್ಲದೆ ರಕ್ತಗಾಯವಾಗಿದ್ದು , ಎಡಗೈ ರಟ್ಟೆ ಮೂರಿದಂತೆ ಆಗಿರುತ್ತದೆ, ಈ ಘಟನೆ ಸಾಯಂಕಾಲ ಸುಮಾರು 06:40 ಪಿ.ಎಮ್.ಕ್ಕೆ ಆಗಿರುತ್ತದೆ. ಆಕೆಯನ್ನು ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಆಳಂದಕ್ಕೆ ಒಂದು ವಾಹನದಲ್ಲಿ ನಾನು ನಿಮ್ಮ ಅಕ್ಕ ನಾಗಮ್ಮ ಹಾಗೂ ಇತರರೂ ಕೂಡಿ ತರುವಾಗ ಅತ್ತೆಯವರಿಗೆ ಆದ ಭಾರಿ ಗಾಯದಿಂದ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾಳೆ ಕೊಡಲೇ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾನು ಹಾಗೂ ಊರಿನ ಇತರರು ಕೂಡಿ ಆಳಂದದ ಸರಕಾರಿ ದವಾಖಾನೆಗೆ ಬಂದು ನಮ್ಮ ತಾಯಿಗೆ ನೋಡಲಾಗಿ ಆಕೆಯ ಮೇಲಕಿಗೆ ಗಾಯಗಳಾಗಿದ್ದು ಇರುತ್ತದೆ. ಅಪಘಾತ ಮಾಡಿದ ಲಾರಿ ಚಾಲಕ ವಾಹನ ಸಮೇತ ಓಡಿಸಿಕೊಂಡು ಹೋದ ಬಗ್ಗೆ ತಿಳಿಸಿದ್ದು ನನ್ನ ತಾಯಿ ರೋಡ ದಾಟುವಾಗ ಸಿಮೆಂಟ ಟ್ಯಾಂಕರ ಲಾರಿ ನಂಬರ್ MH:12 LT:0271ರ ಚಾಲಕ ಹಾಯಿಸಿ ಅಪಘಾತ ಮಾಡಿ ವಾಹನ ಸಮೇತ ಓಡಿಸಿಕೊಂಡು ಹೋಗಿದ್ದು ಅಪಘಾತದಿಂದ ನನ್ನ ತಾಯಿ ಮೃತಪಟ್ಟಿದ್ದು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕ 07-10-2015 ಶ್ರೀ ಶಿವಯೋಗಿ ತಂದೆ ಫಿರಪ್ಪಾ ತೊಟನಳ್ಳಿ ಇವರು ಠಾಣೆಗೆ ಹಾಜರಾಗಿ ದಿನಾಂಕ05-10-2015  ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ನನ್ನ ಮಗ ರಾಜಕುಮಾರನಿಗೆ ನಾಗನಹಳ್ಳಿಯಲ್ಲಿರುವ ಖರ್ಗೆ ಸಾಹೇಬರ ತೋಟದಲ್ಲಿ ಕೆಲಸ ಮಾಡುವ ಮಹ್ಮದ ಅಲೀಮ್ ಪಟೇಲ್ ತಂದೆ ಮಹ್ಮದ ಹಕೀಮ್ ಪಟೇಲ್ ಈತನು ಸೇಡಂ ರಿಂಗ ರೋಡದಿಂದ ಮೋಟಾರ ಸೈಕಲ ಮೇಲೆ ನಾಗನಹಳ್ಳಿ ತೋಟಕ್ಕೆ ಕರೆದುಕೊಂಡು ಹೋಗಿ ತೋಟವೆಲ್ಲಾ ಸುತ್ತಾಡಿದ ನಂತರ ಅದೇ ಮೋಟಾರ ಸೈಕಲ ಮೇಲೆ ಸೇಡಂ ರಿಂಗ ಹತ್ತಿರ ತಂದು ಬಿಟ್ಟಿರುತ್ತಾನೆ ಅಂತಾ ತಿಳಿಸಿದ್ದು ಅಲ್ಲಿಂದ ನನ್ನ ಮಗ ಎಲ್ಲಿಗೆ ಹೋಗಿರುತ್ತಾನೆ ಗೊತ್ತಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಕಾಣೆಯಾಗಿರುತ್ತಾನೆ ಅಂತಾ ವಗೈರೆಯಾಗಿ ಹೇಳಿಕೆ ಫಿರ್ಯಾದಿ ನೀಡಿ ತಮ್ಮ ಠಾಣೆ ಗುನ್ನೆ ನಂ. 128/2015 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಿಸಿದ್ದು ಇರುತ್ತದೆ ಇಂದು ತಾವು ಮಹ್ಮದ ಅಲೀಮ್ ಪಟೇಲ್ ತಂದೆ ಮಹ್ಮದ ಹಕೀಮ್ ಪಟೇಲ್ ಈತನನ್ನು ವಿಚಾರಣೆ ಮಾಡುತ್ತಿರುವಾಗ ನಾನು ಕೂಡ ಠಾಣೆಯಲ್ಲಿ ಹಾಜರಿದ್ದು ನನ್ನ ಮಗ ರಾಜಕುಮಾರ ಈತನಿಗೆ ಸುಮಾರು ವರ್ಷಗಳಿಂದ ಪರಿಚಯ ಇರುವ ಮಹ್ಮದ ಅಲೀಮ್ ಈತನು ವಿಚಾರಣೆಯಲ್ಲಿ ಹೇಳಿದ್ದೇನೆಂದರೇ, ತಾನು ಮೋದಲು ನಾಗನಹಳ್ಳಿ ಸಿಮಾಂತರದಲ್ಲಿರುವ ಖರ್ಗೆಸಾಹೇಬರ ಜಮೀನಿನ ಎಲ್ಲಾ ಕೆಲಸ ಕಾರ್ಯಗಳನ್ನು ತಾನೇ ನೋಡಿಕೊಳ್ಳುತ್ತಿದ್ದು, ತದನಂತರ ನನ್ನ ಮಗ ರಾಜಕುಮಾರ ಈತನು ಜಮೀನಿನ ಎಲ್ಲಾ ಕೆಲಸ ಕಾರ್ಯಗಳನ್ನು ಅವನಿಂದ ಬಿಡಿಸಿ ತಾನೇ ನೋಡಿಕೊಳ್ಳಲಾರಂಬಿದ್ದು ಇದ್ದರಿಂದ ಅವನ ವ್ಯವಹಾರಗಳಲ್ಲಿ ಬಹಳ ಲುಕ್ಸಾನ್ ಆಗಿದ್ದರಿಂದ ಹೇಗಾದರೂ ಮಾಡಿ ರಾಜಕುಮಾರ ಈತನಿಗೆ ಮುಗಿಸಿದರೆ ಮತ್ತೆ ಮೊದಲಿನಂತೆ ತಾನೇ ಕೆಲಸ ಕಾರ್ಯಗಳನ್ನು ಮುಂದುವರೆಸಬಹುದು ಅಂತಾ ತಿಳಿದು ತಾನು ಮತ್ತು ತನ್ನ ಗೆಳೆಯರಾದ ಮಂಜು @ ಧನರಾಜ ತಂದೆ ಮಲ್ಲಿಕಾರ್ಜು ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ ಹಾಗೂ ಕುಮಾರ @ ರಾಜು ತಂದೆ ಬಸಣ್ಣ ಡಣ್ಣೂರ ನಾಲ್ಕು ಜನರು ಸೇರಿ ದಿನಾಂಕ: 05-10-2015 ರಂದು ಬೆಳಗ್ಗೆ08:30 ಸುಮಾರಿಗೆ ರಾಜಕುಮಾರನು  ಮಹ್ಮದ ಅಲೀಮ್ ಪಟೇಲನಿಗೆ  ತಾನು ನಾಗನಹಳ್ಳಿ ತೋಟಕ್ಕೆ ಬರುವುದಾಗಿ ತಿಳಿಸಿದ್ದರಿಂದ ಮಹ್ಮದ ಅಲೀಮ್ ಪಟೇಲನು ನನ್ನ ಮಗ ರಾಜಕುಮಾರನಿಗೆ ದಿನಾಂಕ: 05-10-2015 ರಂದು 10.30 .ಎಮ ಕ್ಕೆ ಸೇಡಂ ರಿಂಗ ರೋಡದಿಂದ ಮೋಟಾರ ಸೈಕಲ ಮೇಲೆ ನಾಗನಳ್ಳಿ ತೋಟಕ್ಕೆ ಕರೆದುಕೊಂಡು ಹೋಗಿ, ನಾಗನಳ್ಳಿ ತೋಟದಲ್ಲಿ ಮೊದಲೆ ಪ್ಲಾನ ಮಾಡಿ ಕುಳಿತಿದ್ದ ಮಹ್ಮದ ಅಲೀಮ್ ಪಟೇಲ್ ಮತ್ತು ಆತನ ಗೆಳೆಯರಾದ ಮಂಜು @ ಧನರಾಜ ತಂದೆ ಮಲ್ಲಿಕಾಜರ್ುನ ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ ಹಾಗೂ ಕುಮಾರ @ ರಾಜು ತಂದೆ ಬಸಣ್ಣ ಡಣ್ಣೂರ ನಾಲ್ಕು ಜನರು ಸೇರಿ ನನ್ನ ಮಗ ರಾಜಕುಮಾರ ಈತನಿಗೆ ನಾಗನಳ್ಳಿ ತೋಟದ ತೋಗರಿ ಹೊಲದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ, ಕುತ್ತಿಗೆ ಒತ್ತಿ ಕೊಲೆ ಮಾಡಿ, ಶವವನ್ನು ಸಾಯಂಕಾಲದವರೆಗೆ ಹೊಲದಲ್ಲಿಯೇ ಇಟ್ಟು ನಂತರ ಸಾಯಂಕಾಲ ನನ್ನ ಮಗ ರಾಜಕುಮಾರನ ಶವವನ್ನು ಮಂಜು ಈತನ ಬೋಲೆರೋ ಜೀಪಿನಲ್ಲಿ ಹಾಕಿಕೊಂಡು ನಾಗನಹಳ್ಳಿ ತೋಟದಿಂದ ಚಿಂಚೋಳ್ಳಿ ತಾಲೂಕಿನ ಚೆನ್ನೂರ ಗ್ರಾಮದ ಡ್ಯಾಮಿನ ಹತ್ತಿರ ಹೋಗಿ ಟೊಂಕಕ್ಕೆ ದೊಡ್ಡ ಕಲ್ಲು ಕಟ್ಟಿ ಬ್ರಿಡ್ಜ ಮೇಲಿಂದ ಡ್ಯಾಮಿನಲ್ಲಿ ಬಿಸಾಕಿ ನಂತರ ಅದೇ ಬೋಲೆರೋ ಜೀಪಿನಲ್ಲಿ ಮರಳಿ ಕಲಬುರಗಿಗೆ ಬಂದಿರುತ್ತಾರೆ ಅಂತಾ ವಿ ತಿಳಿದು ಬಂದಿರುತ್ತದೆ. ನನ್ನ ಮಗ ರಾಜಕುಮಾರ ಈತನಿಗೆ ಮಹ್ಮದ ಅಲೀಮ್ ಪಟೇಲ್ ಮತ್ತು ಆತನ ಗೆಳೆಯರಾದ ಮಂಜು @ ಧನರಾಜ ತಂದೆ ಮಲ್ಲಿಕಾರ್ಜುನ  ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ ಹಾಗೂ ಕುಮಾರ @ ರಾಜು ತಂದೆ ಬಸಣ್ಣ ಡಣ್ಣೂರ ಎಲ್ಲರೂ ಕೂಡಿ ಹಳೇ ವೈಷ್ಯಮದಿಂದ ಕಣ್ಣಿಗೆ ಖಾರದ ಪುಡಿ ಹಾಕಿ ಕುತ್ತಿಗೆ ಒತ್ತಿ ಕೊಲೆ ಮಾಡಿ ನಂತರ ಚೆನ್ನೂರ ಗ್ರಾಮದ ಡ್ಯಾಮಿನಲ್ಲಿ ಟೊಂಕಕ್ಕೆ ದೊಡ್ಡ ಕಲ್ಲು ಕಟ್ಟಿ ಬಿಸಾಕಿರುತ್ತಾರೆ ಕಾರಣ ಮಹ್ಮದ ಅಲೀಮ್ ಪಟೇಲ್ ಮತ್ತು ಆತನ ಗೆಳೆಯರಾದ ಮಂಜು @ ಧನರಾಜ ತಂದೆ ಮಲ್ಲಿಕಾರ್ಜುನ ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ ಹಾಗೂ ಕುಮಾರ @ ರಾಜು ತಂದೆ ಬಸಣ್ಣ ಡಣ್ಣೂರ ಇವರುಗಳು ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾತ್ಮಾ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.