ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ:
07/10/2015 ರಂದು ಶ್ರೀ.ಬಂಡಯ್ಯ ತಂದೆ ಬಾಬಯ್ಯ ಮು:ಎಲೆನಾವದಗಿ ತಾ: ಆಳಂದ ಜಿ:ಕಲಬುರಗಿ ಇವರು
ಠಾಣೆಗೆ ಹಾಜರಾಗಿ ದಿನಾಂಕ: 07/10/2015 ರಂದು ಸಾಯಂಕಾಲ 07:30 ಗಂಟೆಗೆ ತಮ್ಮ ಅಕ್ಕ ನಾಗಮ್ಮಳ
ಗಂಡ ಶಿವಯ್ಯ ಸ್ವಾಮಿ ಮು:ಶಕಾಪೂರ ಇವರು ಪೋನ ಮುಖಾಂತರ ತಿಳಿಸಿದೆನೆಂದರೆ ನಮ್ಮ ತಾಯಿ ರಾಚಮ್ಮ
ಗಂಡ ಬಾಬಯ್ಯ ಇವಳು ಎಲೆನಾವದಗಿಯಿಂದ ಆಳಂದಕ್ಕೆ ಬಂದು ಆಳಂದದಿಂದ ನಮ್ಮೂರಾದ ಶಕಾಪೂರಕ್ಕೆ ಬರುವ
ಸಲುವಾಗಿ ಬಸ್ಸಿನಲ್ಲಿ ಕುಳಿತು ನಮ್ಮೂರ ಕ್ರಾಸಿಗೆ ಬಂದು ಇಳಿದು ರೋಡ ದಾಟುವಾಗ ವಾಗ್ದರಗಿ
ಕಡೆಯಿಂದ ಆಳಂದ ಕಡೆಗೆ ಬರುತ್ತಿದ್ದ ಸಿಮೆಂಟ್ ಟ್ಯಾಂಕರ ಲಾರಿ ನಂ: MH:12 LT:0271ರ
ಚಾಲಕ ತನ್ನ ವಾಹನ ಅತೀವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸುತ ಬಂದು ರೋಡ ದಾಟುತ್ತಿದ್ದ ನಮ್ಮ
ತಾಯಿ ರಾಚಮ್ಮಳಿಗೆ ಅಪಘಾತ ಮಾಡಿದ ಪರಿಣಾಮ ಆಕೆಯ
ತಲೆಗೆ ಎಡಭಾಗಕ್ಕೆ ಭಾರಿ ಪೆಟ್ಟಾಗಿದ್ದು ಅಲ್ಲದೆ ರಕ್ತಗಾಯವಾಗಿದ್ದು , ಎಡಗೈ ರಟ್ಟೆ ಮೂರಿದಂತೆ
ಆಗಿರುತ್ತದೆ, ಈ ಘಟನೆ ಸಾಯಂಕಾಲ ಸುಮಾರು 06:40 ಪಿ.ಎಮ್.ಕ್ಕೆ
ಆಗಿರುತ್ತದೆ. ಆಕೆಯನ್ನು ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಆಳಂದಕ್ಕೆ ಒಂದು ವಾಹನದಲ್ಲಿ ನಾನು
ನಿಮ್ಮ ಅಕ್ಕ ನಾಗಮ್ಮ ಹಾಗೂ ಇತರರೂ ಕೂಡಿ ತರುವಾಗ ಅತ್ತೆಯವರಿಗೆ ಆದ ಭಾರಿ ಗಾಯದಿಂದ ಮಾರ್ಗ
ಮಧ್ಯೆ ಮೃತಪಟ್ಟಿರುತ್ತಾಳೆ ಕೊಡಲೇ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾನು ಹಾಗೂ ಊರಿನ ಇತರರು
ಕೂಡಿ ಆಳಂದದ ಸರಕಾರಿ ದವಾಖಾನೆಗೆ ಬಂದು ನಮ್ಮ ತಾಯಿಗೆ ನೋಡಲಾಗಿ ಆಕೆಯ ಮೇಲಕಿಗೆ ಗಾಯಗಳಾಗಿದ್ದು
ಇರುತ್ತದೆ. ಅಪಘಾತ ಮಾಡಿದ ಲಾರಿ ಚಾಲಕ ವಾಹನ ಸಮೇತ ಓಡಿಸಿಕೊಂಡು ಹೋದ ಬಗ್ಗೆ ತಿಳಿಸಿದ್ದು ನನ್ನ
ತಾಯಿ ರೋಡ ದಾಟುವಾಗ ಸಿಮೆಂಟ ಟ್ಯಾಂಕರ ಲಾರಿ ನಂಬರ್ MH:12 LT:0271ರ ಚಾಲಕ ಹಾಯಿಸಿ ಅಪಘಾತ ಮಾಡಿ ವಾಹನ ಸಮೇತ
ಓಡಿಸಿಕೊಂಡು ಹೋಗಿದ್ದು ಅಪಘಾತದಿಂದ ನನ್ನ ತಾಯಿ ಮೃತಪಟ್ಟಿದ್ದು ಚಾಲಕನ ಮೇಲೆ ಕಾನೂನು ಕ್ರಮ
ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕ
07-10-2015 ಶ್ರೀ ಶಿವಯೋಗಿ ತಂದೆ ಫಿರಪ್ಪಾ ತೊಟನಳ್ಳಿ ಇವರು ಠಾಣೆಗೆ ಹಾಜರಾಗಿ ದಿನಾಂಕ05-10-2015 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ನನ್ನ ಮಗ ರಾಜಕುಮಾರನಿಗೆ ನಾಗನಹಳ್ಳಿಯಲ್ಲಿರುವ ಖರ್ಗೆ
ಸಾಹೇಬರ ತೋಟದಲ್ಲಿ ಕೆಲಸ ಮಾಡುವ ಮಹ್ಮದ
ಅಲೀಮ್ ಪಟೇಲ್ ತಂದೆ ಮಹ್ಮದ ಹಕೀಮ್
ಪಟೇಲ್ ಈತನು ಸೇಡಂ ರಿಂಗ ರೋಡದಿಂದ
ಮೋಟಾರ ಸೈಕಲ ಮೇಲೆ ನಾಗನಹಳ್ಳಿ ತೋಟಕ್ಕೆ ಕರೆದುಕೊಂಡು ಹೋಗಿ
ತೋಟವೆಲ್ಲಾ ಸುತ್ತಾಡಿದ ನಂತರ ಅದೇ ಮೋಟಾರ
ಸೈಕಲ ಮೇಲೆ ಸೇಡಂ ರಿಂಗ ಹತ್ತಿರ
ತಂದು ಬಿಟ್ಟಿರುತ್ತಾನೆ ಅಂತಾ ತಿಳಿಸಿದ್ದು ಅಲ್ಲಿಂದ ನನ್ನ
ಮಗ ಎಲ್ಲಿಗೆ ಹೋಗಿರುತ್ತಾನೆ ಗೊತ್ತಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಕಾಣೆಯಾಗಿರುತ್ತಾನೆ ಅಂತಾ ವಗೈರೆಯಾಗಿ ಹೇಳಿಕೆ
ಫಿರ್ಯಾದಿ ನೀಡಿ ತಮ್ಮ ಠಾಣೆ ಗುನ್ನೆ
ನಂ. 128/2015 ಕಲಂ ಮನುಷ್ಯ ಕಾಣೆ ಪ್ರಕರಣ
ದಾಖಲಿಸಿದ್ದು ಇರುತ್ತದೆ ಇಂದು ತಾವು ಮಹ್ಮದ
ಅಲೀಮ್ ಪಟೇಲ್ ತಂದೆ ಮಹ್ಮದ ಹಕೀಮ್
ಪಟೇಲ್ ಈತನನ್ನು ವಿಚಾರಣೆ ಮಾಡುತ್ತಿರುವಾಗ ನಾನು ಕೂಡ
ಠಾಣೆಯಲ್ಲಿ ಹಾಜರಿದ್ದು ನನ್ನ ಮಗ ರಾಜಕುಮಾರ ಈತನಿಗೆ
ಸುಮಾರು ವರ್ಷಗಳಿಂದ ಪರಿಚಯ ಇರುವ ಮಹ್ಮದ
ಅಲೀಮ್ ಈತನು ವಿಚಾರಣೆಯಲ್ಲಿ ಹೇಳಿದ್ದೇನೆಂದರೇ, ತಾನು ಈ ಮೋದಲು ನಾಗನಹಳ್ಳಿ ಸಿಮಾಂತರದಲ್ಲಿರುವ ಖರ್ಗೆಸಾಹೇಬರ ಜಮೀನಿನ
ಎಲ್ಲಾ ಕೆಲಸ ಕಾರ್ಯಗಳನ್ನು ತಾನೇ ನೋಡಿಕೊಳ್ಳುತ್ತಿದ್ದು, ತದನಂತರ ನನ್ನ ಮಗ ರಾಜಕುಮಾರ ಈತನು
ಜಮೀನಿನ ಎಲ್ಲಾ ಕೆಲಸ ಕಾರ್ಯಗಳನ್ನು ಅವನಿಂದ ಬಿಡಿಸಿ
ತಾನೇ ನೋಡಿಕೊಳ್ಳಲಾರಂಬಿದ್ದು ಇದ್ದರಿಂದ ಅವನ ವ್ಯವಹಾರಗಳಲ್ಲಿ ಬಹಳ ಲುಕ್ಸಾನ್ ಆಗಿದ್ದರಿಂದ ಹೇಗಾದರೂ
ಮಾಡಿ ರಾಜಕುಮಾರ ಈತನಿಗೆ ಮುಗಿಸಿದರೆ ಮತ್ತೆ ಮೊದಲಿನಂತೆ ತಾನೇ
ಕೆಲಸ ಕಾರ್ಯಗಳನ್ನು ಮುಂದುವರೆಸಬಹುದು ಅಂತಾ ತಿಳಿದು ತಾನು
ಮತ್ತು ತನ್ನ ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾರ್ಜು ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ
ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ನಾಲ್ಕು ಜನರು ಸೇರಿ ದಿನಾಂಕ: 05-10-2015 ರಂದು ಬೆಳಗ್ಗೆ08:30 ಸುಮಾರಿಗೆ ರಾಜಕುಮಾರನು ಮಹ್ಮದ ಅಲೀಮ್ ಪಟೇಲನಿಗೆ ತಾನು ನಾಗನಹಳ್ಳಿ ತೋಟಕ್ಕೆ ಬರುವುದಾಗಿ ತಿಳಿಸಿದ್ದರಿಂದ ಮಹ್ಮದ ಅಲೀಮ್
ಪಟೇಲನು ನನ್ನ ಮಗ ರಾಜಕುಮಾರನಿಗೆ ದಿನಾಂಕ: 05-10-2015 ರಂದು 10.30 ಎ.ಎಮ ಕ್ಕೆ
ಸೇಡಂ ರಿಂಗ ರೋಡದಿಂದ ಮೋಟಾರ ಸೈಕಲ
ಮೇಲೆ ನಾಗನಳ್ಳಿ ತೋಟಕ್ಕೆ ಕರೆದುಕೊಂಡು ಹೋಗಿ,
ನಾಗನಳ್ಳಿ ತೋಟದಲ್ಲಿ ಈ ಮೊದಲೆ
ಪ್ಲಾನ ಮಾಡಿ ಕುಳಿತಿದ್ದ ಮಹ್ಮದ ಅಲೀಮ್ ಪಟೇಲ್
ಮತ್ತು ಆತನ ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾಜರ್ುನ ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ
ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ಈ ನಾಲ್ಕು ಜನರು
ಸೇರಿ ನನ್ನ ಮಗ ರಾಜಕುಮಾರ ಈತನಿಗೆ ನಾಗನಳ್ಳಿ ತೋಟದ
ತೋಗರಿ ಹೊಲದಲ್ಲಿ ಕಣ್ಣಿಗೆ ಖಾರದ ಪುಡಿ
ಎರಚಿ, ಕುತ್ತಿಗೆ ಒತ್ತಿ
ಕೊಲೆ ಮಾಡಿ, ಶವವನ್ನು ಸಾಯಂಕಾಲದವರೆಗೆ ಹೊಲದಲ್ಲಿಯೇ ಇಟ್ಟು ನಂತರ ಸಾಯಂಕಾಲ
ನನ್ನ ಮಗ ರಾಜಕುಮಾರನ ಶವವನ್ನು ಮಂಜು ಈತನ
ಬೋಲೆರೋ ಜೀಪಿನಲ್ಲಿ ಹಾಕಿಕೊಂಡು ನಾಗನಹಳ್ಳಿ ತೋಟದಿಂದ ಚಿಂಚೋಳ್ಳಿ ತಾಲೂಕಿನ ಚೆನ್ನೂರ
ಗ್ರಾಮದ ಡ್ಯಾಮಿನ ಹತ್ತಿರ ಹೋಗಿ ಟೊಂಕಕ್ಕೆ ದೊಡ್ಡ
ಕಲ್ಲು ಕಟ್ಟಿ ಬ್ರಿಡ್ಜ ಮೇಲಿಂದ ಡ್ಯಾಮಿನಲ್ಲಿ ಬಿಸಾಕಿ
ನಂತರ ಅದೇ ಬೋಲೆರೋ ಜೀಪಿನಲ್ಲಿ ಮರಳಿ ಕಲಬುರಗಿಗೆ ಬಂದಿರುತ್ತಾರೆ ಅಂತಾ
ವಿ ತಿಳಿದು ಬಂದಿರುತ್ತದೆ. ನನ್ನ ಮಗ ರಾಜಕುಮಾರ ಈತನಿಗೆ
ಮಹ್ಮದ ಅಲೀಮ್ ಪಟೇಲ್ ಮತ್ತು ಆತನ
ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾರ್ಜುನ ಯರಗಲ್, ಅಮರ ತಂದೆ ನಾಗಣ್ಣ
ಬಡಿಗೇರ ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ಎಲ್ಲರೂ ಕೂಡಿ ಹಳೇ
ವೈಷ್ಯಮದಿಂದ ಕಣ್ಣಿಗೆ ಖಾರದ ಪುಡಿ ಹಾಕಿ
ಕುತ್ತಿಗೆ ಒತ್ತಿ ಕೊಲೆ ಮಾಡಿ ನಂತರ
ಚೆನ್ನೂರ ಗ್ರಾಮದ ಡ್ಯಾಮಿನಲ್ಲಿ ಟೊಂಕಕ್ಕೆ ದೊಡ್ಡ ಕಲ್ಲು ಕಟ್ಟಿ
ಬಿಸಾಕಿರುತ್ತಾರೆ ಕಾರಣ ಮಹ್ಮದ ಅಲೀಮ್ ಪಟೇಲ್
ಮತ್ತು ಆತನ ಗೆಳೆಯರಾದ ಮಂಜು @ ಧನರಾಜ ತಂದೆ
ಮಲ್ಲಿಕಾರ್ಜುನ ಯರಗಲ್, ಅಮರ ತಂದೆ ನಾಗಣ್ಣ ಬಡಿಗೇರ
ಹಾಗೂ ಕುಮಾರ @ ರಾಜು ತಂದೆ
ಬಸಣ್ಣ ಡಣ್ಣೂರ ಇವರುಗಳು ವಿರುದ್ದ ಸೂಕ್ತ
ಕಾನೂನು ಕ್ರಮ ಜರೂಗಿಸಬೇಕು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾತ್ಮಾ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment