POLICE BHAVAN KALABURAGI

POLICE BHAVAN KALABURAGI

10 September 2015

Kalaburagi District Reported Crimes.

ನರೋಣಾ  ಠಾಣೆ : ದಿನಾಂಕ 09/09/2015 ರಂದು 1430 ಗಂಟೆಗೆ ಫಿರ್ಯಾದಿದಾರರಾದ ಇಮಾಮಸಾಬ ತಂದೆ ಲಾಲಮಹ್ಮದ ಶೇಖ ವಯ; 37 ವರ್ಷ ಉ: ಟಂ ಟಂ ಚಾಲಕ ಜಾ: ಮುಸ್ಲಿಂ ಸಾ: ನೇಲ್ಲೂರ ತಾ:ಆಳಂದ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರು ಪಡಿಸಿದ್ದು ಈ ದೂರಿನ ಸಾರಂಶವೇನಂದರೆ  ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಟಂ ಟಂ ನಡೆಯಿಸಿಕೊಂಡು ಉಪ ಜೀವನ ಮಾಡುತ್ತಿದ್ದೇನೆ. ನಾನು ದಿನಾಲೂ ನನ್ನ ಟಂ ಟಂ ನಂ ಕೆ ಎ 32 ಬಿ 7182 ನೇದ್ದರಲ್ಲಿ ನಮ್ಮೂರಿನ ರೈತರ ತರಕಾರಿಯನ್ನು ಬಾಡಿಗೆ ರೂಪದಲ್ಲಿ ಗುಲಬರ್ಗಾದ ಕಣ್ಣಿ ಮಾರ್ಕಟಗೆ ತೆಗೆದುಕೊಂಡು ಹೋಗುತ್ತೇನೆ.ನನ್ನ ಹೆಂಡತಿ ಮೂರು ದಿವಸಗಳ ಹಿಂದೆ ಅವರ ತವರೂರಾದ ಕಲಬುರಗಿಗೆ ಹೋಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 08/09/2015 ರಂದು ರಾತ್ರಿ 8-00 ಗಂಟೆಗೆ ನನ್ನ ಮನೆಗೆ ಬೀಗ ಹಾಕಿಕೊಂಡು ನಮ್ಮ ಗ್ರಾಮದ ಮಲ್ಲಿನಾಥ ತಂದೆ ಬಸವಣಪ್ಪ ಧನಶ್ರೀ. ಇವರ ತರಕಾರಿಯನ್ನು ನನ್ನ ಟಂ ಟಂ ನಲ್ಲಿ ಹಾಕಿಕೊಂಡು  ನಮ್ಮೂರಿನಿಂದ ಹೊರಟು ಕಲಬುರಗಿ ಕಣ್ಣಿ ಮಾರ್ಕೆಟಕ್ಕೆ 9-00 ಗಂಟೆಗೆ  ಹೋಗಿ ತರಕಾರಿಯನ್ನು ಇಳಿಸಿ ಅಲ್ಲಿಯೇ ಮಲಗಿಕೊಂಡೇನು ಬೆಳಿಗ್ಗಿನ ಜಾವ 5-00 ಗಂಟೆಗೆ ನನ್ನ ತಮ್ಮನಾದ ಲಾಯಕ ಅಲಿ ಇತನು ನನ್ನ ಮೋಬೈಲಗೆ ಪೋನ ಮಾಡಿ ತಿಳಿಸಿದ್ದೆನಂದರೆ ನಿನ್ನ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಯಾರೋ ಕಳ್ಳರು ಮುರಿದು ಒಳಗೆ ಹೋಗಿ ಮನೆಯ ಬೆಡರೂಮಿನಲ್ಲಿದ್ದ ಕಬ್ಬಿಣದ ಅಲ್ಮಾರಿಯಲ್ಲಿಯ ಬಟ್ಟೆ, ಸಾಮಾನುಗಳನ್ನು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತೇವೆ   ಅಂತಾ ತಿಳಿಸಿದನು. ನಾನು ಗಾಬರಿಯಿಂದ ನಮ್ಮೂರಿಗೆ ಬಂದು ನನ್ನ ಮನೆಗೆ ಬಂದು ನೋಡಲಾಗಿ ನಾನು ರಾತ್ರಿ ಮನೆಯ ಮುಖ್ಯೆ ಬಾಗಿಲಿಗೆ  ಹಾಕಿ ಹೋಗಿದ  ಕೀಲಿಯನ್ನು ಮುರಿದ್ದು ಬಾಗಿಲು ತೆರೆದಿದ್ದು ನಾನು ಒಳಗೆ ಹೋಗಿ ನೋಡಲಾಗಿ ಬೆಡರೂಮ್ ಕೋಣೆಯ ಬಾಗಿಲು ಕೀಲಿ ಮುರಿದಿದ್ದು ಒಳಗಡೆ ಇದ್ದ ಕಬ್ಬೀಣದ ಅಲ್ಮಾರಿ ಸಹ ತೆರೆದಿದ್ದು ಅದರಲ್ಲಿ ಇಟ್ಟಿದ್ದ ಬಟ್ಟೆ ಹಾಗೂ ಇತರ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದು ನಾನು ಚಕ್ಕ್ ಮಾಡಿ ನೋಡಲಾಗಿ ನಮ್ಮ ತಾಯಿಯ ಒಂದು ತೊಲಿಯ ಬಂಗಾರದ ಬೋರಮಳ ಸರ  ಅದರ ಅ:ಕಿ 15,000 ರುಪಾಯಿ ಹಾಗೂ ನನ್ನ ಮನೆಯ ಖರ್ಚಿಗಾಗಿ ಇಟ್ಟಿದ್ದ ನಗದು ಹಣ  14,000 ರೂಪಾಯಿಗಳು ಕಳುವಾಗಿದ್ದವು . ನಂತರ ಮುಂಜಾನೆ 8-00 ಗಂಟೆಯ ಸುಮಾರಿಗೆ ನನಗೆ ಗೊತ್ತಾಗಿದ್ದೆನಂದರೆ ನಮ್ಮ ಮನೆಯಂತೆ ನಮ್ಮೂರಿನ ಈ ಕೆಳಗೆ ನಮೂದಿಸಿರುವ ಜನರ ಮನೆಗಳು ಸಹ ಅದೆ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಕಳ್ಳವು ಮಾಡಿರುತ್ತಾರೆ.1] ಇಸ್ಮಾಯಿಲ್ ತಂದೆ ಮಕ್ತುಮ ಸಾಬ ಶೇಖ ಸಾ: ನೇಲ್ಲೂರ ಇವರು ತಮ್ಮ ಮನೆಯ ಅಲ್ಮಾರಿಯಲ್ಲಿ ಇಟ್ಟಿರುವ ಒಂದು ತೊಲೆಯ ಬಂಗಾರದ ಬೋರಮಳ ಸರ ಅ:ಕಿ;15,000 , ಒಂದು ತೋಲೆ ಬಂಗಾರದ ಜೀರಾಮಣಿ ಸರ ಅ:ಕಿ;15000 ಒಂದು ತೋಲೆಯ ಬಂಗಾರದ ನೆಕ್ಲೇಸ್ ಮತ್ತು  ನಗದು ಹಣ 35000 ರೂಪಾಯಿ 2] ಮಾಳಪ್ಪ ತಂದೆ ಮಲ್ಕಪ್ಪ ಸಿಂಗೆ  ಸಾ: ನೇಲ್ಲೂರ  ಇವರು ತಮ್ಮ ಮನೆಯಲ್ಲಿದ್ದ ಒಂದು ಬಂಗಾರದ ಅರ್ಧ ತೊಲಿ ಜಿರಾಮಣಿ ಸರ ಅ:ಕಿ;7,500 ರೂಪಾಯಿ ನಗದು ಹಣ 10,000 ರೂಪಾಯಿ 3] ಶ್ರೀಶೈಲ್ ತಂದೆ ಗುಂಡೆರಾವ ಖೇಮದಿ ಸಾ: ನೇಲ್ಲೂರ  ಇವರು ತಮ್ಮ ಮನೆಯಲ್ಲಿಟ್ಟಿದ ನಗದು ಹಣ 10,000 ರೂಪಾಯಿ 4] ಲಕ್ಷ್ಮಿಪುತ್ರ ತಂದೆ ಬಸವರಾಜ ಬಿರೆದಾರ ಸಾ: ನೇಲ್ಲೂರ ಇವರು ತಮ್ಮ ಮನೆಯ ಅಲ್ಮಾರಿಯಲ್ಲಿಟ್ಟಿದ್ದ ಒಂದು ತೊಲೆಯ ಬಂಗಾರ ಬೋರಮಳ ಸರ ಅ;ಕಿ;15,000 ರೂ , ಮೂರು ತೊಲೆಯ ಬೆಳ್ಳಿಯ ಸಣ್ಣು ಮಕ್ಕಳ  ಉಡದಾರ, ಹಾಲುಗಡಗಾ ಅದರ ಅ;ಕಿ ; 1000 ರೂ ಮತ್ತು ನಗದು ಹಣ 25,000 ಈ ರೀತಿಯಾಗಿ ಯಾರೋ ಕಳ್ಳರು ದಿನಾಂಕ 08/09/2015 ರ ರಾತ್ರಿ 11-00 ಗಂಟೆಯಿಂದ ದಿನಾಂಕ 09/09/2015 ರ ನಸುಕಿನ ಜಾವ 4-00 ಗಂಟೆಯ ಮಧ್ಯಾವದಿಯಲ್ಲಿ ನಮ್ಮ ಮನೆಗಳ ಬಾಗಿಲಿನ  ಬೀಗಗಳು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ  ಈ ಮೇಲೆ ನಮೂದಿಸಿದಂತೆ ಒಟ್ಟು ಐದುವರೆ ತೊಲೆಯ ಬಂಗಾರದ ಆಭರಣಗಳು ಮತ್ತು ಮೂರು ತೊಲೆಯ ಬೆಳ್ಳಿಯ ಆಭರಣಗಳು  ಇವುಗಳ ಒಟ್ಟು ಅ;ಕಿ;83,500 ರೂಪಾಯಿಗಳು ಹಾಗೂ ಒಟ್ಟು ನಗದು ಹಣ  94,000 ರೂಪಾಯಿಗಳು ನೇದ್ದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿದವರ ಮೇಲೆ ಕ್ರಮ ಜರುಗಿಸಿ ನಮ್ಮ ನಮ್ಮ ಆಭರಣಗಳನ್ನು ಪತ್ತೆ ಮಾಡಿಕೊಡಲು ವಿನಂತಿ .ಅಂತಾ ನೀಡಿರುವ ದೂರಿನ ಸಾರಂಶ ಮೇಲಿಂದ ನಾನು ಶಿವಶಂಕರ ಸಾಹು ಪಿ ಎಸ್ ಐ ನರೋಣಾ ಪೊಲೀಸ ಠಾಣೆ ಅಪರಾಧ ಸಂ 110/2015 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

09 September 2015

Kalaburagi District Reported Crimes.

ಗ್ರಾಮೀಣ ಠಾಣೆ : ದಿನಾಂಕ: 08/09/2015 ರಂದು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ಮೃತ ಸೈಯ್ಯದ ತಾಜ ಈತನು ಹಿರೊಹೊಂಡಾ ಸ್ಪ್ಲೇಂಡರ್ ಮೋ.ಸೈ ನಂಃ ಕೆಎ 32 ಡಬ್ಲ್ಯೂ 7996 ನೇದ್ದು ಚಲಾಯಿಸುತ್ತಿದ್ದು, ಅವನ ಹಿಂದೆ ಸೈಯ್ಯದ ಇಸ್ಮಾಯಿಲ್ ಈತನು ಕುಳಿತು ಕಲಬುರಿಗೆ ಬರುವಾಗ ಹುಮ್ನಾಬಾದ ಕಲಬುರಗಿ ರೋಡಿನ ಅವರಾದ ಸಮೀಪ ಇರುವ ಆಲಗೂಡ ಕ್ರಾಸ್ ಹತ್ತಿರ ಹಿಂದಿನಿಂದ ಒಂದು ಕ್ವಾಲೀಸ್ ವಾಹನ ಸಂಖ್ಯೇ ಎಪಿ 12 ಪಿ 1415 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಸೈಯ್ಯದ ತಾಜ & ಸೈಯ್ಯದ ಇಸ್ಮಾಯಿಲ್ ಇವರಿಗೆ ಭಾರಿ ಗಾಯಗಳಾಗಿ ಮೃತ ಪಟ್ಟಿರುತ್ತಾರೆ. ಅಪಘಾತವಾದ ನಂತರ ಚಾಲಕ ಓಡಿ ಹೋಗಿರುತ್ತಾನೆ ಅಂತಾ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ. 

08 September 2015

Kalaburagi District Reported Crimes.

ಮಾಡಬೂಳ ಠಾಣೆ : ದಿನಾಂಕ-07/09/2015 ರಂದು 3 ಪಿ.ಎಮ್‌ ಕ್ಕೆ ಚಂದ್ರಶೇಖರ ತಿಗಡಿ ಪಿ.ಎಸ್.ಐ. ಮಾಡಬೂಳ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಇಬ್ಬರೂ ಆರೋಪಿ ಹಾಗೂ ಮುದ್ದೆ ಮಾಲನೊಂದಿಗೆ ಜ್ಷಾಪನ ಪತ್ರ ನೀಡಿದರ ಸಾರಾಂಶವೆನೆಂದರೆ, ದಿನಾಂಕ:-07/09/2015 ರಂದು 12-15 ಪಿ.ಎಮ್. ಕ್ಕೆ ಠಾಣೆಯಲ್ಲಿದ್ದಾಗ ನನಗೆ ಫೋನ ಮುಖಾಂತರ ಖಚಿತ ಬಾತ್ಮಿ ಬಂದಿದ್ದೇನೆಂದರೆ ಕೋರವಾರ ಗ್ರಾಮದ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಇಬ್ಬರೂ ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಅಂತ ಮಟಕಾ ನಂಬರ ಚೀಟಿ ಬರೆಯಿಸಿಕೊಳ್ಳುತ್ತಿದ್ದಾರೆ ಅಂತ ಬಾತ್ಮೀ ಬಂದ ಮೇರೆಗೆ ಠಾಣೆ ಸಿಬ್ಬಂದಿ ಜನರಾದ ಹೆಚ್.ಸಿ-89 ಮಹಾದೇವ, ಹೆಚ್.ಸಿ-183 ರಾಮು ಹಾಗೂ ಪಿ.ಸಿ. 462 ಹುಸೇನ ರವರನ್ನು ಕರೆದು ವಿಷಯ ತಿಳಿಸಿ ಪಂಚರಾದ 1] ರವಿ ತಂದೆ ಹೀರು ಪವಾರ ವಯ:-34 ವರ್ಷ ಜಾ:ಲಂಬಾಣಿ ಉ:ಕೂಲಿ ಕೆಲಸ ಸಾ: ಮಾಡಬೂಳ ತಾಂಡಾ 2] ಧರ್ಮ ತಂದೆ ಚಿಂಗೂ ಪವಾರ ವಯ:37 ವರ್ಷ ಜಾ:ಲಂಬಾಣಿ ಉ:ಕೂಲಿ ಕೆಲಸ ಸಾ: ಮಾಡಬೂಳ ತಾಂಡಾ ರವರನ್ನು ಬರ ಮಾಡಿಕೊಂಡು ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿದ್ದರಿಂದ ಸದರಿ ಇಬ್ಬರು ಪಂಚರ ಸಮೇತ ಠಾಣೆಯ ಜೀಪ ನಂ ಕೆಎ-32 ಜಿ-311 ನೇದ್ದರಲ್ಲಿ ಕುಳಿತು 12-30 ಪಿ.ಎಮ್.ಕ್ಕೆ ಹೊರಟು 1 ಪಿ.ಎಮ್ ಕ್ಕೆ ಕೋರವಾರ ಗ್ರಾಮದ ಹತ್ತಿರ ಹೋಗಿ ಬಸ್ ನಿಲ್ದಾಣ ಹತ್ತಿರ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಬಸ ನಿಲ್ದಾಣ ರೋಡಿನ ಎದುರಿನ ರೋಡಿನ ಮೇಲೆ ಇಬ್ಬರೂ ಒಂದು ಮೋಟಾರ ಸೈಕಲ ಹಚ್ಚಿ ಅದರ ಮೇಲೆ ಒಬ್ಬ ಕುಳಿತು ಇನ್ನೋಬ್ಬನು ಪಕ್ಕದಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಒಂದು ರೂಪಾಯಿಗೆ 80/- ರೂಪಾಯಿಗಳು ಬರುತ್ತವೆ ಮಟಕಾ ನಂಬರ ಹಚ್ಚಿರಿ ಅದು ದೈವಲಿಲೆ ಆಟ ಅಂತ ಕರೆದು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 1 ಪಿ.ಎಮ್.ಕ್ಕೆ ನಾನು ಹಾಗೂ ಸಿಬ್ಬಂದಿ ಜನರೂ ಪಂಚರ ಸಮಕ್ಷಮ ದಾಳಿಮಾಡಿ ಸದರಿ ಇಬ್ಬರೂ ವ್ಯಕ್ತಿಗಳನ್ನು ಹಿಡಿದು ವಿಚಾರಿಸಲಾಗಿ ಅವರು ತಮ್ಮ ಹೆಸರು 1] ಬಸವರಾಜ ತಂದೆ ಶಂಕರೆಪ್ಪಾ ಕಂಟೋಳ್ಳಿ  ವಯ:35 ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ: ಬೂಲೆವಾಡ ತಾ:ಜಿ: ಕಲಬುರಗಿ ಅಂತ ತಿಳಿಸಿದನು. ಸದರಿಯವನಿಗೆ ಅಂಗ ಶೋಧನೆ ಮಾಡಲಾಗಿ ಸದರಿಯವನ ಹತ್ತಿರ 3800/-ರೂ ಹಾಗೂ ಮಟಕಾ ನಂಬರ ಬರೆದ 2 ಚೀಟಿ ಹಾಗೂ ಒಂದು ಸ್ಯಾಮಸಾಂಗ್ ಕಂಪನಿ ಮೋಬೈಲ್ ಅಂದಾಜು ಕಿಮ್ಮತ್ತು 800/- ರೂ 2] ಶ್ಯಾಮರಾವ ತಂದೆ ಶಿವಶರಣಪ್ಪಾ ಕಂಟಿ ವ: 65 ವರ್ಷ ಜಾ: ಲಿಂಗಾಯತ ಉ: ಬಟ್ಟಿ ಅಂಗಡಿ ಸಾ: ಕೋರವಾರ ಅಂತಾ ತಿಳಿಸಿದರು. ಸದರಿಯವನಿಗೆ ಅಂಗ ಶೋಧನೆ ಮಾಡಲಾಗಿ ಸದರಿಯವರ ಹತ್ತಿರ 700/- ರೂ ನಗದು ಹಣ, ಹಾಗೂ ಒಂದು ಮಟಕಾ ನಂಬರಗಳು ಬರೆದ ಚೀಟಿ ಮತ್ತು ಒಂದು ಬಾಲ ಪೆನ್, ಒಂದು ಸ್ಯಾಮಸಾಂಗ್ ಕಂಪನಿ ಮೋಬೈಲ್ ಅಂದಾಜು ಕಿಮ್ಮತ್ತು 500/- ರೂ ದೊರೆತ್ತಿದ್ದು. ಸದರಿಯವರಿಗೆ ಸಾರ್ವಜನಿಕರಿಂದ ಪಡೆದ ಹಣವನ್ನು ಹಾಗೂ ಮಟಕಾ ನಂಬರಗಳನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ ಸದರಿ ಇಬ್ಬರೂ ದಿನಾಲು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಹಾಗೂ ಹಣ ಸಂಗ್ರಹಿಸಿದ್ದನ್ನು ಮಲ್ಲಿಕಾಜರ್ುನ ಒಳಕಿಂಡಿ ಸಾ: ಅಶೋಕನಗರ ಇವರಿಗೆ ಕೊಡುತ್ತೇವೆ ಅಂತಾ ತಿಳಿಸಿದರು. ಸದರಿಯವರ ಹತ್ತಿರ 1] ಒಂದು ಬಾಲ ಪೆನ್ 2] ಮೂರು ಮಟಕಾ ನಂಬರಗಳು ಬರೆದ ಚೀಟಿ 3] ನಗದ ಹಣ 4500/-ರೂ ಹಾಗೂ 4] ಮಟಕಾ ಬರೆದುಕೊಳ್ಳಲು ಉಪಯೋಗಿಸುತ್ತಿರುವ ಒಂದು ಬಜಾಜ ಕಂಪನಿಯ ಮೋ.ಸೈಕಲ ನಂಬರ ಕೆಎ-32 ಎಲ್-1425 ಅಂದಾಜು ಕಿಮ್ಮತ್ತು 10.000 ರೂ 5] ಎರಡು ಮೋಬೈಲ್ ಸ್ಯಾಮಸಾಂಗ್ ಕಂಪನಿ ಅಂದಾಜ ಕಿಮ್ಮತ್ತು 1300/-ರೂ ದೊರೆತ್ತಿದ್ದು. ಹೀಗೆ ಒಟ್ಟು 15.800/- ರೂ ಬೆಲೆವುಳ್ಳಗಳನ್ನು ಗುನ್ನೆ ಸ್ಥದಲ್ಲಿಯೆ 1-15 ಪಿ.ಎಮ್. ದಿಂದ  2-15 ಪಿ.ಎಮ್.ದ ವರೆಗೆ ಪಂಚರ ಸಮಕ್ಷಮ ಜಪ್ತ ಪಂಚನಾಮೆ ಮಾಡಿಕೊಂಡು  ಸದರಿಯವುಗಳಿಗೆ ಪಂಚರ ಸಹಿ ಮಾಡಿದ  ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಮುದ್ದೆ ಮಾಲು ಹಾಗೂ ಆರೋಪಿತರೊಂದಿಗೆ ಮರಳಿ ಠಾಣೆಗೆ 3 ಪಿ.ಎಮ್.ಕ್ಕೆ ಬಂದು ಹಾಜರ ಇದ್ದ ಎಸ್.ಹೆಚ್.ಓ ರವರರಾದ ಹೆಚ್.ಸಿ-466 ರಾಮಚಂದ್ರ ರವರಿಗೆ ಮುಂದಿನ ಕ್ರಮ ಕುರಿತು ಜ್ಞಾಪನಾ ಪತ್ರ ನೀಡಿದರ ಸಾರಾಂಶದ ಮೇಲಿಂದ ಗುನ್ನೆ ನಂ, 116/2015 ಕಲಂ 78 [3] ಕೆಪಿ ಆಕ್ಟ್ ಸಂಗಡ 420 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.