ನರೋಣಾ ಠಾಣೆ : ದಿನಾಂಕ 09/09/2015 ರಂದು
1430 ಗಂಟೆಗೆ ಫಿರ್ಯಾದಿದಾರರಾದ ಇಮಾಮಸಾಬ ತಂದೆ ಲಾಲಮಹ್ಮದ ಶೇಖ ವಯ; 37 ವರ್ಷ ಉ: ಟಂ ಟಂ ಚಾಲಕ
ಜಾ: ಮುಸ್ಲಿಂ ಸಾ: ನೇಲ್ಲೂರ ತಾ:ಆಳಂದ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರು ಪಡಿಸಿದ್ದು
ಈ ದೂರಿನ ಸಾರಂಶವೇನಂದರೆ ನಾನು ನನ್ನ ಹೆಂಡತಿ
ಮಕ್ಕಳೊಂದಿಗೆ ಟಂ ಟಂ ನಡೆಯಿಸಿಕೊಂಡು ಉಪ ಜೀವನ ಮಾಡುತ್ತಿದ್ದೇನೆ. ನಾನು ದಿನಾಲೂ ನನ್ನ ಟಂ ಟಂ
ನಂ ಕೆ ಎ 32 ಬಿ 7182 ನೇದ್ದರಲ್ಲಿ ನಮ್ಮೂರಿನ ರೈತರ ತರಕಾರಿಯನ್ನು ಬಾಡಿಗೆ ರೂಪದಲ್ಲಿ
ಗುಲಬರ್ಗಾದ ಕಣ್ಣಿ ಮಾರ್ಕಟಗೆ ತೆಗೆದುಕೊಂಡು ಹೋಗುತ್ತೇನೆ.ನನ್ನ ಹೆಂಡತಿ ಮೂರು ದಿವಸಗಳ ಹಿಂದೆ
ಅವರ ತವರೂರಾದ ಕಲಬುರಗಿಗೆ ಹೋಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 08/09/2015 ರಂದು ರಾತ್ರಿ
8-00 ಗಂಟೆಗೆ ನನ್ನ ಮನೆಗೆ ಬೀಗ ಹಾಕಿಕೊಂಡು ನಮ್ಮ ಗ್ರಾಮದ ಮಲ್ಲಿನಾಥ ತಂದೆ ಬಸವಣಪ್ಪ ಧನಶ್ರೀ.
ಇವರ ತರಕಾರಿಯನ್ನು ನನ್ನ ಟಂ ಟಂ ನಲ್ಲಿ ಹಾಕಿಕೊಂಡು
ನಮ್ಮೂರಿನಿಂದ ಹೊರಟು ಕಲಬುರಗಿ ಕಣ್ಣಿ ಮಾರ್ಕೆಟಕ್ಕೆ 9-00 ಗಂಟೆಗೆ ಹೋಗಿ ತರಕಾರಿಯನ್ನು ಇಳಿಸಿ ಅಲ್ಲಿಯೇ ಮಲಗಿಕೊಂಡೇನು
ಬೆಳಿಗ್ಗಿನ ಜಾವ 5-00 ಗಂಟೆಗೆ ನನ್ನ ತಮ್ಮನಾದ ಲಾಯಕ ಅಲಿ ಇತನು ನನ್ನ ಮೋಬೈಲಗೆ ಪೋನ ಮಾಡಿ
ತಿಳಿಸಿದ್ದೆನಂದರೆ ನಿನ್ನ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಯಾರೋ ಕಳ್ಳರು ಮುರಿದು ಒಳಗೆ
ಹೋಗಿ ಮನೆಯ ಬೆಡರೂಮಿನಲ್ಲಿದ್ದ ಕಬ್ಬಿಣದ ಅಲ್ಮಾರಿಯಲ್ಲಿಯ ಬಟ್ಟೆ, ಸಾಮಾನುಗಳನ್ನು
ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತೇವೆ ಅಂತಾ
ತಿಳಿಸಿದನು. ನಾನು ಗಾಬರಿಯಿಂದ ನಮ್ಮೂರಿಗೆ ಬಂದು ನನ್ನ ಮನೆಗೆ ಬಂದು ನೋಡಲಾಗಿ ನಾನು ರಾತ್ರಿ
ಮನೆಯ ಮುಖ್ಯೆ ಬಾಗಿಲಿಗೆ ಹಾಕಿ ಹೋಗಿದ ಕೀಲಿಯನ್ನು ಮುರಿದ್ದು ಬಾಗಿಲು ತೆರೆದಿದ್ದು ನಾನು
ಒಳಗೆ ಹೋಗಿ ನೋಡಲಾಗಿ ಬೆಡರೂಮ್ ಕೋಣೆಯ ಬಾಗಿಲು ಕೀಲಿ ಮುರಿದಿದ್ದು ಒಳಗಡೆ ಇದ್ದ ಕಬ್ಬೀಣದ
ಅಲ್ಮಾರಿ ಸಹ ತೆರೆದಿದ್ದು ಅದರಲ್ಲಿ ಇಟ್ಟಿದ್ದ ಬಟ್ಟೆ ಹಾಗೂ ಇತರ ಸಾಮಾನುಗಳು ಚಲ್ಲಾಪಿಲ್ಲಿಯಾಗಿ
ಬಿದಿದ್ದು ನಾನು ಚಕ್ಕ್ ಮಾಡಿ ನೋಡಲಾಗಿ ನಮ್ಮ ತಾಯಿಯ ಒಂದು ತೊಲಿಯ ಬಂಗಾರದ ಬೋರಮಳ ಸರ ಅದರ ಅ:ಕಿ 15,000 ರುಪಾಯಿ ಹಾಗೂ ನನ್ನ ಮನೆಯ
ಖರ್ಚಿಗಾಗಿ ಇಟ್ಟಿದ್ದ ನಗದು ಹಣ 14,000
ರೂಪಾಯಿಗಳು ಕಳುವಾಗಿದ್ದವು . ನಂತರ ಮುಂಜಾನೆ 8-00 ಗಂಟೆಯ ಸುಮಾರಿಗೆ ನನಗೆ
ಗೊತ್ತಾಗಿದ್ದೆನಂದರೆ ನಮ್ಮ ಮನೆಯಂತೆ ನಮ್ಮೂರಿನ ಈ ಕೆಳಗೆ ನಮೂದಿಸಿರುವ ಜನರ ಮನೆಗಳು ಸಹ ಅದೆ
ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಕಳ್ಳವು ಮಾಡಿರುತ್ತಾರೆ.1] ಇಸ್ಮಾಯಿಲ್
ತಂದೆ ಮಕ್ತುಮ ಸಾಬ ಶೇಖ ಸಾ: ನೇಲ್ಲೂರ ಇವರು ತಮ್ಮ ಮನೆಯ ಅಲ್ಮಾರಿಯಲ್ಲಿ ಇಟ್ಟಿರುವ ಒಂದು ತೊಲೆಯ
ಬಂಗಾರದ ಬೋರಮಳ ಸರ ಅ:ಕಿ;15,000 , ಒಂದು ತೋಲೆ ಬಂಗಾರದ ಜೀರಾಮಣಿ ಸರ ಅ:ಕಿ;15000 ಒಂದು ತೋಲೆಯ
ಬಂಗಾರದ ನೆಕ್ಲೇಸ್ ಮತ್ತು ನಗದು ಹಣ 35000
ರೂಪಾಯಿ 2] ಮಾಳಪ್ಪ ತಂದೆ ಮಲ್ಕಪ್ಪ ಸಿಂಗೆ ಸಾ:
ನೇಲ್ಲೂರ ಇವರು ತಮ್ಮ ಮನೆಯಲ್ಲಿದ್ದ ಒಂದು
ಬಂಗಾರದ ಅರ್ಧ ತೊಲಿ ಜಿರಾಮಣಿ ಸರ ಅ:ಕಿ;7,500 ರೂಪಾಯಿ ನಗದು ಹಣ 10,000 ರೂಪಾಯಿ 3] ಶ್ರೀಶೈಲ್
ತಂದೆ ಗುಂಡೆರಾವ ಖೇಮದಿ ಸಾ: ನೇಲ್ಲೂರ ಇವರು
ತಮ್ಮ ಮನೆಯಲ್ಲಿಟ್ಟಿದ ನಗದು ಹಣ 10,000 ರೂಪಾಯಿ 4] ಲಕ್ಷ್ಮಿಪುತ್ರ ತಂದೆ ಬಸವರಾಜ ಬಿರೆದಾರ
ಸಾ: ನೇಲ್ಲೂರ ಇವರು ತಮ್ಮ ಮನೆಯ ಅಲ್ಮಾರಿಯಲ್ಲಿಟ್ಟಿದ್ದ ಒಂದು ತೊಲೆಯ ಬಂಗಾರ ಬೋರಮಳ ಸರ
ಅ;ಕಿ;15,000 ರೂ , ಮೂರು ತೊಲೆಯ ಬೆಳ್ಳಿಯ ಸಣ್ಣು ಮಕ್ಕಳ
ಉಡದಾರ, ಹಾಲುಗಡಗಾ ಅದರ ಅ;ಕಿ ; 1000 ರೂ ಮತ್ತು ನಗದು ಹಣ 25,000 ಈ ರೀತಿಯಾಗಿ ಯಾರೋ ಕಳ್ಳರು
ದಿನಾಂಕ 08/09/2015 ರ ರಾತ್ರಿ 11-00 ಗಂಟೆಯಿಂದ ದಿನಾಂಕ 09/09/2015 ರ ನಸುಕಿನ ಜಾವ 4-00
ಗಂಟೆಯ ಮಧ್ಯಾವದಿಯಲ್ಲಿ ನಮ್ಮ ಮನೆಗಳ ಬಾಗಿಲಿನ
ಬೀಗಗಳು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ ಈ ಮೇಲೆ ನಮೂದಿಸಿದಂತೆ ಒಟ್ಟು ಐದುವರೆ ತೊಲೆಯ ಬಂಗಾರದ
ಆಭರಣಗಳು ಮತ್ತು ಮೂರು ತೊಲೆಯ ಬೆಳ್ಳಿಯ ಆಭರಣಗಳು
ಇವುಗಳ ಒಟ್ಟು ಅ;ಕಿ;83,500 ರೂಪಾಯಿಗಳು ಹಾಗೂ ಒಟ್ಟು ನಗದು ಹಣ 94,000 ರೂಪಾಯಿಗಳು ನೇದ್ದವುಗಳನ್ನು ಕಳವು ಮಾಡಿಕೊಂಡು
ಹೋಗಿರುತ್ತಾರೆ. ಕಳವು ಮಾಡಿದವರ ಮೇಲೆ ಕ್ರಮ ಜರುಗಿಸಿ ನಮ್ಮ ನಮ್ಮ ಆಭರಣಗಳನ್ನು ಪತ್ತೆ ಮಾಡಿಕೊಡಲು
ವಿನಂತಿ .ಅಂತಾ ನೀಡಿರುವ ದೂರಿನ ಸಾರಂಶ ಮೇಲಿಂದ ನಾನು ಶಿವಶಂಕರ ಸಾಹು ಪಿ ಎಸ್ ಐ ನರೋಣಾ ಪೊಲೀಸ
ಠಾಣೆ ಅಪರಾಧ ಸಂ 110/2015 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment