ಮಾಡಬೂಳ
ಠಾಣೆ : ದಿನಾಂಕ-07/09/2015 ರಂದು 3 ಪಿ.ಎಮ್ ಕ್ಕೆ ಚಂದ್ರಶೇಖರ
ತಿಗಡಿ ಪಿ.ಎಸ್.ಐ. ಮಾಡಬೂಳ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಇಬ್ಬರೂ ಆರೋಪಿ ಹಾಗೂ ಮುದ್ದೆ
ಮಾಲನೊಂದಿಗೆ ಜ್ಷಾಪನ ಪತ್ರ ನೀಡಿದರ ಸಾರಾಂಶವೆನೆಂದರೆ, ದಿನಾಂಕ:-07/09/2015 ರಂದು 12-15 ಪಿ.ಎಮ್. ಕ್ಕೆ ಠಾಣೆಯಲ್ಲಿದ್ದಾಗ ನನಗೆ ಫೋನ ಮುಖಾಂತರ ಖಚಿತ ಬಾತ್ಮಿ ಬಂದಿದ್ದೇನೆಂದರೆ
ಕೋರವಾರ ಗ್ರಾಮದ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಇಬ್ಬರೂ ವ್ಯಕ್ತಿಗಳು ನಿಂತುಕೊಂಡು ಹೋಗಿ
ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಅಂತ ಮಟಕಾ ನಂಬರ ಚೀಟಿ ಬರೆಯಿಸಿಕೊಳ್ಳುತ್ತಿದ್ದಾರೆ ಅಂತ
ಬಾತ್ಮೀ ಬಂದ ಮೇರೆಗೆ ಠಾಣೆ ಸಿಬ್ಬಂದಿ ಜನರಾದ ಹೆಚ್.ಸಿ-89 ಮಹಾದೇವ, ಹೆಚ್.ಸಿ-183 ರಾಮು ಹಾಗೂ ಪಿ.ಸಿ. 462 ಹುಸೇನ ರವರನ್ನು ಕರೆದು ವಿಷಯ
ತಿಳಿಸಿ ಪಂಚರಾದ 1] ರವಿ ತಂದೆ ಹೀರು ಪವಾರ
ವಯ:-34 ವರ್ಷ ಜಾ:ಲಂಬಾಣಿ
ಉ:ಕೂಲಿ ಕೆಲಸ ಸಾ: ಮಾಡಬೂಳ ತಾಂಡಾ 2] ಧರ್ಮ ತಂದೆ ಚಿಂಗೂ ಪವಾರ ವಯ:37 ವರ್ಷ ಜಾ:ಲಂಬಾಣಿ ಉ:ಕೂಲಿ ಕೆಲಸ ಸಾ: ಮಾಡಬೂಳ ತಾಂಡಾ ರವರನ್ನು ಬರ ಮಾಡಿಕೊಂಡು ವಿಷಯ
ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿದ್ದರಿಂದ ಸದರಿ ಇಬ್ಬರು ಪಂಚರ ಸಮೇತ
ಠಾಣೆಯ ಜೀಪ ನಂ ಕೆಎ-32 ಜಿ-311 ನೇದ್ದರಲ್ಲಿ ಕುಳಿತು 12-30 ಪಿ.ಎಮ್.ಕ್ಕೆ ಹೊರಟು 1 ಪಿ.ಎಮ್ ಕ್ಕೆ ಕೋರವಾರ ಗ್ರಾಮದ
ಹತ್ತಿರ ಹೋಗಿ ಬಸ್ ನಿಲ್ದಾಣ ಹತ್ತಿರ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಬಸ ನಿಲ್ದಾಣ ರೋಡಿನ
ಎದುರಿನ ರೋಡಿನ ಮೇಲೆ ಇಬ್ಬರೂ ಒಂದು ಮೋಟಾರ ಸೈಕಲ ಹಚ್ಚಿ ಅದರ ಮೇಲೆ ಒಬ್ಬ ಕುಳಿತು ಇನ್ನೋಬ್ಬನು
ಪಕ್ಕದಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಒಂದು ರೂಪಾಯಿಗೆ 80/- ರೂಪಾಯಿಗಳು ಬರುತ್ತವೆ ಮಟಕಾ
ನಂಬರ ಹಚ್ಚಿರಿ ಅದು ದೈವಲಿಲೆ ಆಟ ಅಂತ ಕರೆದು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿ ಅವರಿಂದ ಹಣ
ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 1 ಪಿ.ಎಮ್.ಕ್ಕೆ ನಾನು ಹಾಗೂ
ಸಿಬ್ಬಂದಿ ಜನರೂ ಪಂಚರ ಸಮಕ್ಷಮ ದಾಳಿಮಾಡಿ ಸದರಿ ಇಬ್ಬರೂ ವ್ಯಕ್ತಿಗಳನ್ನು ಹಿಡಿದು ವಿಚಾರಿಸಲಾಗಿ
ಅವರು ತಮ್ಮ ಹೆಸರು 1] ಬಸವರಾಜ ತಂದೆ ಶಂಕರೆಪ್ಪಾ ಕಂಟೋಳ್ಳಿ ವಯ:35 ವರ್ಷ ಜಾ: ಲಿಂಗಾಯತ ಉ: ಖಾಸಗಿ
ಕೆಲಸ ಸಾ: ಬೂಲೆವಾಡ ತಾ:ಜಿ: ಕಲಬುರಗಿ ಅಂತ ತಿಳಿಸಿದನು. ಸದರಿಯವನಿಗೆ ಅಂಗ ಶೋಧನೆ ಮಾಡಲಾಗಿ
ಸದರಿಯವನ ಹತ್ತಿರ 3800/-ರೂ ಹಾಗೂ ಮಟಕಾ ನಂಬರ ಬರೆದ 2 ಚೀಟಿ ಹಾಗೂ ಒಂದು ಸ್ಯಾಮಸಾಂಗ್ ಕಂಪನಿ ಮೋಬೈಲ್ ಅಂದಾಜು ಕಿಮ್ಮತ್ತು 800/- ರೂ 2] ಶ್ಯಾಮರಾವ ತಂದೆ ಶಿವಶರಣಪ್ಪಾ
ಕಂಟಿ ವ: 65 ವರ್ಷ ಜಾ: ಲಿಂಗಾಯತ
ಉ: ಬಟ್ಟಿ ಅಂಗಡಿ ಸಾ: ಕೋರವಾರ ಅಂತಾ ತಿಳಿಸಿದರು. ಸದರಿಯವನಿಗೆ ಅಂಗ ಶೋಧನೆ ಮಾಡಲಾಗಿ ಸದರಿಯವರ
ಹತ್ತಿರ 700/- ರೂ ನಗದು ಹಣ, ಹಾಗೂ ಒಂದು ಮಟಕಾ ನಂಬರಗಳು ಬರೆದ
ಚೀಟಿ ಮತ್ತು ಒಂದು ಬಾಲ ಪೆನ್, ಒಂದು ಸ್ಯಾಮಸಾಂಗ್ ಕಂಪನಿ ಮೋಬೈಲ್ ಅಂದಾಜು ಕಿಮ್ಮತ್ತು 500/- ರೂ ದೊರೆತ್ತಿದ್ದು. ಸದರಿಯವರಿಗೆ
ಸಾರ್ವಜನಿಕರಿಂದ ಪಡೆದ ಹಣವನ್ನು ಹಾಗೂ ಮಟಕಾ ನಂಬರಗಳನ್ನು ಯಾರಿಗೆ ಕೊಡುತ್ತಿರಿ ಅಂತಾ
ವಿಚಾರಿಸಲಾಗಿ ಸದರಿ ಇಬ್ಬರೂ ದಿನಾಲು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಹಾಗೂ ಹಣ
ಸಂಗ್ರಹಿಸಿದ್ದನ್ನು ಮಲ್ಲಿಕಾಜರ್ುನ ಒಳಕಿಂಡಿ ಸಾ: ಅಶೋಕನಗರ ಇವರಿಗೆ ಕೊಡುತ್ತೇವೆ ಅಂತಾ
ತಿಳಿಸಿದರು. ಸದರಿಯವರ ಹತ್ತಿರ 1] ಒಂದು ಬಾಲ ಪೆನ್ 2] ಮೂರು ಮಟಕಾ ನಂಬರಗಳು ಬರೆದ ಚೀಟಿ 3] ನಗದ ಹಣ 4500/-ರೂ ಹಾಗೂ 4] ಮಟಕಾ ಬರೆದುಕೊಳ್ಳಲು ಉಪಯೋಗಿಸುತ್ತಿರುವ ಒಂದು ಬಜಾಜ ಕಂಪನಿಯ ಮೋ.ಸೈಕಲ ನಂಬರ ಕೆಎ-32 ಎಲ್-1425 ಅಂದಾಜು ಕಿಮ್ಮತ್ತು 10.000 ರೂ 5] ಎರಡು ಮೋಬೈಲ್ ಸ್ಯಾಮಸಾಂಗ್
ಕಂಪನಿ ಅಂದಾಜ ಕಿಮ್ಮತ್ತು 1300/-ರೂ ದೊರೆತ್ತಿದ್ದು. ಹೀಗೆ ಒಟ್ಟು 15.800/- ರೂ ಬೆಲೆವುಳ್ಳಗಳನ್ನು ಗುನ್ನೆ
ಸ್ಥದಲ್ಲಿಯೆ 1-15 ಪಿ.ಎಮ್. ದಿಂದ 2-15 ಪಿ.ಎಮ್.ದ ವರೆಗೆ ಪಂಚರ ಸಮಕ್ಷಮ ಜಪ್ತ ಪಂಚನಾಮೆ ಮಾಡಿಕೊಂಡು ಸದರಿಯವುಗಳಿಗೆ ಪಂಚರ ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಮುದ್ದೆ ಮಾಲು ಹಾಗೂ
ಆರೋಪಿತರೊಂದಿಗೆ ಮರಳಿ ಠಾಣೆಗೆ 3 ಪಿ.ಎಮ್.ಕ್ಕೆ ಬಂದು ಹಾಜರ ಇದ್ದ ಎಸ್.ಹೆಚ್.ಓ ರವರರಾದ ಹೆಚ್.ಸಿ-466 ರಾಮಚಂದ್ರ ರವರಿಗೆ ಮುಂದಿನ
ಕ್ರಮ ಕುರಿತು ಜ್ಞಾಪನಾ ಪತ್ರ ನೀಡಿದರ ಸಾರಾಂಶದ ಮೇಲಿಂದ ಗುನ್ನೆ ನಂ, 116/2015 ಕಲಂ
78 [3] ಕೆಪಿ ಆಕ್ಟ್ ಸಂಗಡ 420 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
POLICE BHAVAN KALABURAGI
08 September 2015
07 September 2015
Kalaburagi District Reported Crimes.
ಅಶೋಕ ನಗರ ಠಾಣೆ
: ದಿನಾಂಕ 06/09/2015 ರಂದು ಸಂಜೆ 5-30 ಪಿಎಂಕ್ಕೆ ಶ್ರೀ.
ಡಿ.ವೆಂಕಟರಾವ ತಂದೆ ಕೊಪ್ರೇಶರಾವ ದೇಸಾಯಿ ಸಾ: ವಡಗೇರಾ ತಾ: ಶಾಹಪೂರ ಹಾ.ವ: ಪ್ಲಾಟ ನಂ. 133 “ಶ್ರೀ ಕೃಷ್ಣ ನಿವಾಸ” ಎನ್.ಜಿ.ಒ ಕಾಲೋನಿ ಜೇವರ್ಗಿ ರಸ್ತೆ ಕಲಬುರಗಿ ರವರು ಠಾಣೆಗೆ
ಬಂದು ಲಿಖಿತ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಅಜ್ಜನವರ ವಾರ್ಷಿಕ ಶೃದ್ದದ
ಪ್ರಯುಕ್ತ ದಿನಾಂಕ 04/09/2015 ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೆಲ್ಲರೂ
ಯಾದಗೀರಗೆ ಹೊಗಿರುತ್ತಾರೆ. ದಿನಾಂಕ 06/09/2015 ರಂದು ಬೆಳಿಗ್ಗೆ ವೇಳೆಗೆ ನಮ್ಮ ಮನೆಯ ಮಾಲಿಕರಾದ ರಂಗನಾಥ ಬೊರ್ಗಿಕರ ರವರು ದೂರವಾಣಿ ಮೂಲಕ ಮನೆಗಳ್ಳತನವಾದ ವಿಷಯವನ್ನು ತಿಳಿಸಿದ ಮೇಲೆ ನಮ್ಮ ತಂದೆ
ತಾಯಿಯವರು ಶ್ರದ್ಧಕರ್ಮದಲ್ಲಿ ಇರಬೇಕಾಗಿದ್ದರಿಂದ ನಾನು ಒಬ್ಬನೇ ಕಲಬುರಗಿಗೆ ಬಂದು ನೊಡಲು ಮನೆ
ಬಾಗಿಲು ಕೊಂಡಿ ಹಾಗು ಬೀಗ ಮುರಿದಿತ್ತು ನಂತರ
ಒಳಗಡೆ ಹೊಗಿ ನೊಡಲು ಬೇಡರೂಮಿನಲ್ಲಿದ್ದ ಅಲಮಾರ
ತೆರೆದಿದ್ದು ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿದ್ದವು. ದೇವರಮನೆಯಲ್ಲಿ ಪೂಜಾ ಹಾಗು ಸಹ
ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿದ್ದವು. ದಿನಾಂಕ 05-06/09/2015 ರ ರಾತ್ರಿ ವೇಳೆಯಲ್ಲಿ
ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲಿನ ಬೀಗ ಹಾಗು ಕೊಂಡಿ ಮುರಿದು ಅತಿಕ್ರಮ ಪ್ರವೇಶ ಮಾಡಿ ಈ ಕೆಳಗೆ ನಮೂದಿಸಿದ ಬೆಳ್ಳಿ
ಬಂಗಾರದ ವಸ್ತುಗಳು ಹಾಗು ನಗದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ. 1)ಬೆಳ್ಳಿಯ ತಾಟು ಸಣ್ಣದ್ದು-1 2) ಬೆಳ್ಳಿಯ ತಾಟು ದೊಡ್ಡದ್ದು-1 3)ಬೆಳ್ಳಿಯ
ಬಟ್ಟಲುಗಳು-6, 4)ಬೆಳ್ಳಿಯ ಲೋಟಗಳು-17, 5) ಬೆಳ್ಳಿಯ ಆರತಿ ತಟ್ಟೆ-1, 6)ಬೆಳ್ಳಿಯ ಅತ್ತರದಾನ-1, 7)ಬೆಳ್ಳಿಯ ಅರ್ಘ್ಯ ಪಾತ್ರೆ-1, 8)ಬೆಳ್ಳಿಯ ನಿಲಾಂಜನ ಒಂದು ಜೊತೆ-2 9) ಚಿನ್ನದ ತುಳಸಿ
ಮಾಂಗಲ್ಯ-1 10) ಚಿನ್ನದ ನಕಲೇಸ 6 ಗ್ರಾಂ, 11) ಚಿನ್ನದ ಕಿವಿ ಬೆಂಡೊಲಿ ಒಂದು ಜೊತೆ 12) ನಗದು ಹಣ 5000/- ರೂ. ಹೀಗೆ ಒಟ್ಟು 2 ಕೆ.ಜಿ ಬೆಳ್ಳಿಯ ಪೂಜಾ ಹಾಗು
ಸಹಸಾಮಗ್ರಿಗಳು ಮತ್ತು 10 ಗ್ರಾಂ ಬಂಗಾರದ ಆಭರಣದ ಸಾಮಾನುಗಳು ಜೊತೆಗೆ ನಗದು ಸೇರಿದಂತೆ ಅಂದಾಜು
90,000/- ರೂ ಮೊತ್ತದ ಸಾಮಗ್ರಿಗಳು ಕಳ್ಳತನವಾಗಿದ್ದು ನಾವು ತಮಗೆ ಪತ್ತೆ ಹಚ್ಚಿಕೊಡಬೇಕೇಂದು ಅರ್ಜಿಯ
ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
05 September 2015
Kalaburagi District Reported Crimes.
ಚೌಕ ಠಾಣೆ : ದಿನಾಂಕ:
04.09.2015 ರಂದು ರಾತ್ರಿ 07-00 ಗಂಟೆಗೆ ಶ್ರೀ. ಶ್ರೀಶೈಲ ತಂದೆ ಚಂದ್ರಶೇಖರ ಮಚ್ಚೆಟ್ಟಿ ವಯ; 20 ವರ್ಷ ಜಾ:ಲಿಂಗಾಯತ ಉ: ಬಂಡಿ ಹೋಟೇಲ ಕೆಲಸ ಸಾ: ಮನೆ ನಂ: 1543/7, ದೇವಣಿ ಶಾಲೆಯ ಹತ್ತಿರ ಭವಾನಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾತಿ ತಮ್ಮದೊಂದು ಲಿಖಿತ
ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ನಾನು ಮತ್ತು ನನ್ನ ತಂದೆ ಚಂದ್ರಶೇಖರ ಮತ್ತು ಅಣ್ಣ ಸಚಿನ ಕೂಡಿಕೊಂಡು ನಮ್ಮ ಕುಟುಂಬದ
ನಿರ್ವಹಣೆ ಕುರಿತು ದಿನಾಲು ಮನೆಯಲ್ಲಿ ಇಡ್ಲಿ,ವಡಾ, ದೋಸಾ, ಆಲೂಭಾತ, ಚಟ್ನಿ , ಸಾಂಬಾರಗಳನ್ನು ತಯಾರಿಸಿಕೊಂಡು ನಮ್ಮ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಕಲಬುರಗಿಯ
ಹುಮನಾಬಾದ ರಿಂಗ್ ರೋಡಿನ ಹತ್ತಿರ ಇರುವ ಟಾಟಾ ಶೋ ರೂಮಿನ ಎದುರಿನ ರಸ್ತೆಯ ಪಕ್ಕದಲ್ಲಿ ಹೋಗಿ
ಅಲ್ಲಿ ಪುರಿಯನ್ನು ಕರೆದು ಬಂಡಿ ಹೋಟೇಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ.ಹೀಗಿದ್ದು
ದಿನಾಂಕ: 02.09.2015 ರಂದು ಬೆಳೆಗ್ಗೆ ಎಂದಿನಂತೆ ನಾನು ಮತ್ತು ನನ್ನ ಅಣ್ಣ ಸಚಿನ ಕೂಡಿಕೊಂಡು
ನಮ್ಮ ಮನೆಯಲ್ಲಿ ಇಡ್ಲಿ ,ವಡಾ, ದೋಸಾ, ಆಲೂಭಾತ, ಚಟ್ನಿ ಮತ್ತು ಸಾಂಬಾರ ಹೀಗೆ ಆಹಾರ ಪದಾರ್ಥಗಳನ್ನು
ತಯಾರಿಸಿಕೊಂಡು ನಮ್ಮ ತಳ್ಳುವ ಬಂಡಿಯಲ್ಲಿ ಇಟ್ಟುಕೊಂಡು ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ
ಟಾ.ಟಾ ಶೋ ರೂಮ್ ಹತ್ತಿರ ಹೋಗಿ ಪುರಿಗಳನ್ನು ಕರೆಯುತ್ತಾ ಬಂಡಿ ಹೋಟೇಲ್ ವ್ಯಾಪಾರ ಮಾಡುತ್ತಿದ್ದು, ಬೆಳೆಗ್ಗೆ 09-15 ಗಂಟೆಯ
ಸುಮಾರಿಗೆ ನಾನು ಪುರಿಗಳನ್ನು ಕರೆಯುತ್ತಿದ್ದಾಗ ನನ್ನ ಅಣ್ಣ ಸಚಿನ ಇವರು ಬಂಡಿ ಹೋಟೇಲದಲ್ಲಿ
ಗಿರಾಕಿಗಳಿಗೆ ಟಿಫಿನ್ ಹಾಕಿ ಕೊಡುತ್ತಿದ್ದಾಗ ಶ್ರೀ. ಮಾರುತಿ ಮಾನ್ಪಡೆ, ಕಾರ್ಮಿಕ ಮುಖಂಡರು
ಕಲಬುರಗಿ ಮತ್ತು ಅವರ ಸಂಗಡ ಇನ್ನೊಬ್ಬರೂ ನನ್ನ ಬಂಡಿ ಹೋಟೇಲಕ್ಕೆ ಬಂದು ಏ ಸೂಳೆ ಮಗನೆ, ಇವತ್ತು ಭಾರತ ಬಂದ್
ಮುಷ್ಕರ ಇದೇ ಅಂತಾ ಗೊತ್ತಿದ್ದರೂ ನೀನು ನಿನ್ನ ಹೋಟೇಲ್ ತೆರೆದು ಹೇಗೆ ವ್ಯಾಪಾರ ಮಾಡುತ್ತಿದ್ದೀ
ಈಗ ತಕ್ಷಣ ನಿನ್ನ ಬಂಡಿ ಹೋಟೇಲ್ ಮುಚ್ಚು ಮಗನೇ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದು, ಆಗ ನಾನು ಅವರಿಗೆ ಭಾರತ
ಬಂದ್ ಇರುವುದು ನನಗೆ ಗೊತ್ತಿಲ್ಲ, ಹುಮನಾಬಾದ ರಿಂಗ್ ರೋಡದಲ್ಲಿ ಎಲ್ಲಾ ಹೋಟೇಲಗಳು ತೆರೆದು
ವ್ಯಾಪಾರ ಮಾಡುತ್ತಿರುವಂತೆ ನಾನೂ ಸಹ ಹೋಟೇಲ್ ವ್ಯಾಪಾರ ಮಾಡುತ್ತಿದ್ದೇನೆ. ಬಂದ ಇರುವ ಸಮಯದಲ್ಲಿ
ಯಾರೂ ಒತ್ತಾಯಪೂರ್ವಕವಾಗಿ ಅಂಗಡಿ ಬಂದ ಮಾಡಿಸಬಾರದು ಅಂತಾ ನನಗೂ ಸಹ ಗೊತ್ತಿದೆ, ಈಗ
ತಾವು ಬಂದು ಹೋಟೇಲ್ ಮುಚ್ಚು ಅಂತಾ ಹೇಳುತ್ತಿದ್ದೀರಿ, ನಾನು ನನ್ನ ಹೋಟೇಲ್ ಮುಚ್ಚುತ್ತೇನೆ ಅಂತಾ
ಹೇಳುತ್ತಿದ್ದಾಗ, ಮಾರುತಿ ಮಾನ್ಪಡೆ ರವರು ನನಗೆ ಕಾನೂನು ಹೇಳುತ್ತಿ ಮಗನೆ ಅಂತಾ ತಮ್ಮ ಕೈಯಿಂದ ನನ್ನ ಎಡ
ಕಪಾಳದ ಕಿವಿಯ ಮೇಲೆ ಜೋರಾಗಿ ಹೊಡೆದು ಗುಪ್ತಗಾಯ ಪಡಿಸಿದರು. ಆಗ ಅವರ ಜೋತೆಯಲ್ಲಿದ್ದ
ಇನ್ನೊಬ್ಬರು ಹುಮನಾಬಾದ್ ರಿಂಗ್ ರೋಡಿನ ಹತ್ತಿರ ಒತ್ತಾಯಪೂರ್ವಕವಾಗಿ ಅಂಗಡಿ – ಹೋಟೇಲ್ ಗಳನ್ನು ಬಂದ್
ಮಾಡಿಸುತ್ತಿರುವ ತಮ್ಮ ಸಂಗಡಿಗರನ್ನು ಕೂಗಿ ಕರೆದಿದ್ದು, ಅವರುಗಳೆಲ್ಲ ಬಂದವರೇ ನಾನು ನನ್ನ ಬಂಡಿ ಹೋಟೇಲ್
ಮುಚ್ಚುತ್ತೇನೆ ಅಂತಾ ಎಷ್ಟು ಹೇಳಿದರೂ ಕೇಳದೇ ನನ್ನ ಬಂಡಿಯಲ್ಲಿದ್ದ ಇಡ್ಲಿ,ವಡಾ, ಪುರಿ, ದೋಸಾ, ಆಲೂಭಾತ, ಚಟ್ನಿ , ಸಾಂಬಾರಗಳನ್ನು ನೆಲಕ್ಕೆ ಚೆಲ್ಲಾಡಿ ಗಿರಾಕಿಗಳಿಗೆ ಕುಳಿತುಕೊಳ್ಳಲು ಇಟ್ಟಿದ್ದ ಪ್ಲಾಸ್ಟೀಕ್ ಕುರ್ಚಿ, ಸ್ಟೂಲಗಳನ್ನು ಮುರಿದು ಹಾಳು ಮಾಡಿದ್ದು , ಇದರಿಂದ ನನಗೆ ಆಹಾರ
ಪದಾರ್ಥ ಮತ್ತು ಟೇಬಲ್ ಕುರ್ಚಿ ಕೂಡಿಕೊಂಡು
ಅಂದಾಜು 10,000=00 ರೂಪಾಯಿಯಷ್ಟು ನಷ್ಟ ಮಾಡಿರುತ್ತಾರೆ. ಅಷ್ಟರಲ್ಲಿ ನನ್ನ ಬಂಡಿ ಹೋಟೇಲದಲ್ಲಿ ಟಿಫಿನ್
ಮಾಡಲು ಬಂದಿದ್ದ ರಾಜು ಜೈನ್ ಮತ್ತು ಅಲ್ಲಿಯೇ
ಗಿರಾಕಿಗಳಿಗೆ ಟಿಫಿನ್ ಕೊಡುತ್ತಿದ್ದ ನನ್ನ ಅಣ್ಣ ಸಚಿನ
ಮಚ್ಚೇಟ್ಟಿ ಕೂಡಿ ಜಗಳ ಬಿಡಿಸುತ್ತಿದ್ದಾಗ ಶ್ರೀ,. ಮಾರುತಿ ಮಾನ್ಪಡೆ ಮತ್ತು ಅವರ ಸಂಗಡಿಗರು
ಕೂಡಿಕೊಂಡು ನೀನು ಈ ಘಟನೆ ಬಗ್ಗೆ ಪೊಲೀಸ್ ಕೇಸ್
ಮಾಡಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ. ಈ
ಘಟನೆ ದಿನಾಂಕ: 02.09.2015 ರಂದು ಬೆಳೆಗ್ಗೆ 09-15
ಗಂಟೆ ಸುಮಾರಿಗೆ ಜರುಗಿರುತ್ತದೆ. ಅಂದು ನಾನು ಮನೆಯಲ್ಲಿಯೇ ನನ್ನ ನೋವಿಗೆ ಉಪಚಾರ
ಪಡೆದುಕೊಂಡಿರುತ್ತೇನೆ. ಈ ಘಟನೆ ಜರುಗಿದಾಗ ನನ್ನ ತಂದೆಯವರು ಮನೆಯಲ್ಲಿ ಇಲ್ಲದೇ ಇದ್ದಿದ್ದರಿಂದ
ಅವರಿಗೆ ವಿಚಾರಿಸಿ ದೂರು ಕೊಡಲು ಯೋಚಿಸಿದ್ದು, ಇಂದು ದಿನಾಂಕ: 04.09.2015 ರಂದು ತಡವಾಗಿ ನನ್ನ
ತಂದೆಯವರು ಸೋಲಾಪುರದಿಂದ ಮನೆಗೆ ಬಂದಿದ್ದು ಅವರಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಅಲ್ಲದೇ ನನಗೆ
ಎಡಗಡೆ ಕಿವಿಯು ಅತಿಯಾಗಿ ನೋಯುತ್ತಿದ್ದರಿಂದ ನಾನು ಉಪಚಾರ ಕುರಿತು ನನ್ನ ತಂದೆಯೊಂದಿಗೆ ಜಿಲ್ಲಾ
ಸರ್ಕಾರಿ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ಉಪಚಾರ ಪಡೆದಿರುತ್ತೇನೆ. ಕಾರಣ ದಿನಾಂಕ:
02.09.2015 ರಂದು ಬೆಳೆಗ್ಗೆ 09-15 ಗಂಟೆಯ ಸುಮಾರಿಗೆ ಭಾರತ್ ಬಂದ್ ಮುಷ್ಕರ ಇರುವ ಸಮಯದಲ್ಲಿ
ಶ್ರೀ, ಮಾರುತಿ ಮಾನ್ಪಡೆ ಕಾರ್ಮಿಕ ಮುಖಂಡರು, ಕಲಬುರಗಿ ಮತ್ತು ಅವರ ಸಂಗಡಿಗರೂ ಕೂಡಿಕೊಂಡು ಹುಮನಾಬಾದ
ರಿಂಗ್ ರೋಡಿನ ಟಾಟಾ ಶೋ ರೂಮ್ ಎದುರಿನ ನನ್ನ ಬಂಡಿ ಹೋಟೇಲಕ್ಕೆ ಬಂದು ನನಗೆ ಒತ್ತಾಯಪೂರ್ವಕವಾಗಿ
ಬಂಡಿ ಹೋಟೇಲ್ ಬಂದ ಮಾಡುವಂತೆ ಒತ್ತಾಯಿಸುತ್ತಾ ಬಂಡಿಯಲ್ಲಿದ್ದ ಆಹಾರ ಪದಾರ್ಥಗಳನ್ನು ನೆಲಕ್ಕೆ
ಚೆಲ್ಲಿ ಮತ್ತು ಪ್ಲಾಸ್ಟೀಕ್ ಕುರ್ಚಿ, ಸ್ಟೂಲಗಳನ್ನು ಮುರಿದು ಹಾನಿ ಮಾಡಿ ನನಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದವರ ವಿರುದ್ದ
ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ವಗೈರೆ ಇದ್ದ
ಫಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆ ಗುನ್ನೆ ನಂ: 146/2015 ಕಲಂ
323.427. 504.506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
Subscribe to:
Posts (Atom)