POLICE BHAVAN KALABURAGI

POLICE BHAVAN KALABURAGI

20 July 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಜೇವರಗಿ ಶಹಾಪುರ ಮೇನ್‌ ರೋಡ ಚಿಗರಳ್ಳಿ ಕ್ರಾಸ್ ಗುಂಪಾದ ಹತ್ತಿರ ರೋಡಿನಲ್ಲಿ ಶ್ರೀ ಸಿದ್ರಾಮಪ್ಪ ತಂದೆ ಅಡಿವೆಪ್ಪ ಪುಜಾರಿ ಸಾ : ಬೀಳವಾರ. ಹಾ:: ಕಲಬುರಗಿ ರವರ ಮಗನಾದ ಚಂದ್ರಶೇಖರ ಪುಜಾರಿ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ಈಜಿ1281 ನೇದ್ದನ್ನು ನಡೆಸಿಕೊಂಡು ಜೇವರಗಿ ಕಡೆಯಿಂದ ಬೀಳವಾರ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದುರುನಿಂದ ಅಂದರೆ ಶಹಾಪುರ ಕಡೆಯಿಂದ ಒಂದು TATA Ace ನಂ ಕೆ.ಎ32ಬಿ0487 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಚಂದ್ರಶೇಖರ ಈತನು ಕೇಳಗೆ ಬಿಳಿಸಿ ಭಾರಿ ರಕ್ತಗಾಯ ಗೊಳೀಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಗಾಯಾಳು ಚಂದ್ರಶೇಖರ ಈತನಿಗೆ ಇದೇ ದಿವಸ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಅವನಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 19.07.2015 ರಂದು ಮಧ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀ ಸಂಜುಕುಮಾರ ತಂದೆ ಸಿದ್ದಣ್ಣಾ ಮಲಘಾಣ ಸಾ:ಸಾವತಖೇಡ ಇವರ  ಅಣ್ಣನಾದ ಅಶೋಕ ಈಗ 2 ವರ್ಷಗಳಿಂದ ಕಲ್ಲೂರ ರೋಡ ಹತ್ತಿರ ಇರುವ ಚಟ್ಟಿ ನಾಡ ಸಿಮೆಂಟ ಕಂಪನಿಯ ಲಾರಿ ನಂ.ಕೆಎ-01-ಎಬಿ-6948 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡುತ್ತಿದ್ದು ಆತನ ಸಂಗಡ ತಾನು ಕ್ಲೀನರ ಅಂತ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ: 18/07/2015 ರಂದು 5 ಪಿಎಂಕ್ಕೆ ಚಟ್ಟಿ ನಾಡಾ ಸಿಮೆಂಟ ಇಳಿಸಿ ಬರಲು ನಾನು ನಮ್ಮ ಅಣ್ಣ ಅಶೋಕ ಹೊರಟು 8-45 ಪಿಎಂ ಸುಮಾರಿಗೆ ಹೊಸ ಹೆಬ್ಬಾಳ ಹತ್ತಿರ ಬಂದು ನಮ್ಮ ಅಣ್ಣ ಲಾರಿ ನಿಲ್ಲಿಸಿ ತನಗೆ ಸ್ವಲ್ಪ ಚಕರ ಬರುತ್ತಿದೆ ಅಂತ ತಿಳಿಸಿದನು. ಆಗ ನಾನು ನಮ್ಮ ಅಣ್ಣನಿಗೆ ಇಲ್ಲೇ ಮಲಗೋಣ ಅಂತ ತಿಳಿಸಿದಾಗ ಇಲ್ಲಾ ಇನ್ನು 10-15 ನಿಮಿಷದಲ್ಲಿ ನಮ್ಮ ಊರಿಗೆ ಹೋಗುತ್ತೇವೆ ಅಂತಾ  ಅಲ್ಲೆ ಬಾಬು ಹೊಟೇಲದಲ್ಲಿ ನೀರು ಕುಡಿದು ಲಾರಿ ಚಾಲು ಮಾಡಿದನು. ಆಗ ನಾನು ನಮ್ಮ ಅಣ್ಣನಿಗೆ ನಿದಾನವಾಗಿ ಚಲಾಯಿಸು ಅಂತ ಹೇಳಿ ನನ್ನ ಸೈಡಿಗೆ ಕುಳಿತ್ತೇನು. ಹೆಬ್ಬಾಳದಿಂದ ಹೊರಟು 1/2 ಕಿ,ಮೀ ದೂರ ನಮ್ಮ ಗ್ರಾಮದ ಕಡೆ ಹೋಗುತ್ತಿರುವಾಗ ನಮ್ಮ ಅಣ್ಣ ಸದರಿ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ನಡೆಯಿಸಿ ಅಪಘಾತ ಪಡಿಸಿ ರೋಡಿನ ಬಲ ಬದಿಯ ಮುಂದಿನ ಭಾಗ ಹಾಗೂ ಚಾಲಕನ ಸೀಟು ಒಂದಕ್ಕೊಂದು ಹತ್ತಿ ಅದರ ನಡುವೆ ನಮ್ಮ ಅಣ್ಣ ಸಿಕ್ಕಿ ಬಿದ್ದು ನನಗೆ ಹೊರಗೆ ತಗೆ ಅಂತ ಅನ್ನುತ್ತಿದನು. ನಾನು ನಮ್ಮ ಅಣ್ಣನಿಗೆ ಹೊರಗೆ ತೆಗೆಯಲು ಎಷ್ಟು ಪ್ರಯತ್ನ ಮಾಡಿದರು ಬರದೆ ಇದುದ್ದರಿಂದ ನಮ್ಮ ಸಂಬಂದಿಯಾದ ಸೂರ್ಯಕಾಂತ ತಂದೆ ಈರಣ್ಣಾ ನಾಟಿಕಾರ ಇತನಿಗೆ ಬರಲು ಫೋನ ಮಾಡಿ ತಿಳಿಸಿದಾಗ ಸೂರ್ಯಕಾಂತ ಹಾಗೂ ಆತನ ಗೆಳೆಯ ಹಣಮಂತ ತಂದೆ ಬಸವರಾಜ ತೇಲಿ ಸಾ: ಚಿಂಚೋಳಿ ಇಬ್ಬರೂ ಬಂದು ನೋಡಿ ಅವರು ತೆಗೆಯಲು ಪ್ರಯತ್ನ ಮಾಡಿದರು ಆಗಲಾರದ ಕಾರಣ ಇಬ್ಬರೂ ಹೆಬ್ಬಳಕ್ಕೆ ಹೋಗಿ ವೆಲ್ಡಿಂಗ್ ಮಶೀನ ತೆಗೆದುಕೊಂಡು ಬಂದು ಇಡಿ ರಾತ್ರಿ ವೆಲ್ಡಿಂಗ್ ಮಶೀನ ಸಹಾಯದಿಂದ ಕಬ್ಬಿಣ ಕಟ್ ಮಾಡಿ ಅದರಲ್ಲಿ ಸಿಕ್ಕಿ ಬಿದ್ದ ನಮ್ಮ ಅಣ್ಣನಿಗೆ ಹೊರಗೆ ತೆಗೆದಾಗ ನಮ್ಮ ಅಣ್ಣ ಇನ್ನು ಮಾತನಾಡುತ್ತಿದ್ದು ಅವನಿಗೆ ಕೆಳ ಹೊಟ್ಟೆಗೆ ಗುಪ್ತಗಾಯ ಆಗಿದ್ದು  ಅವನಿಗೆ ಇಂದು ದಿನಾಂಕ: 19/07/15 ರಂದು ಬೆಳಿಗ್ಗೆ 8-30 ಎಎಂಕ್ಕೆ ಉಪಚಾರ ಕುರಿತು 108 ಅಂಬುಲೇನ್ಸಕ್ಕೆ ಕರೆಸಿ ಅದರಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ಯುವಾಗ ಮಾರ್ಗ ಮಧ್ಯದಲ್ಲಿ ನಮ್ಮ ಅಣ್ಣ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ 19.07.2015 ರಂದು ಸಾಯಂಕಾಲ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಪಿ.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿ ಹತ್ತಿರ ಇರುವ ಮುಳ್ಳಿನ ಕಂಟಿಯ ಮರೆಯಲ್ಲಿ  ನಿಂತು ನೋಡಲು ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ರವಿ ತಂದೆ ಬಸವಣಪ್ಪ ಭುಜುಕರ್ ಸಾಃ ಶೇಖ ರೋಜಾ ಕಲಬುರಗಿ 2) ಇಮಾಮಾ ತಂದೆ ಮಹಿಬೂಬಸಾಬ ಮೂಜಾವರ ಸಾಃ ಮಡಕಿ ಗ್ರಾಮ ತಾಃ ಆಳಂದ ಹಾಃವಃ ಮುಲ್ಲಗಳ ಮಜ್ಜಿದ ಹತ್ತಿರ ಶೇಖ ರೋಜಾ  ಕಲಬುರಗಿ 3) ಅಯ್ಯಾಣ್ಣಾ ತಂದೆ ಮಲಕ್ಕಪ್ಪ ಪಾಟೀಲ ಸಾಃ ಹನುಮಾನ ಗುಡಿ ಹತ್ತಿರ ಶೇಖ ರೋಜಾ ಕಲಬುರಗಿ 4) ರಾಣಪ್ಪ ತಂದೆ ಮಲ್ಲಿಕಾರ್ಜುನ ಭಾವೆ ಸಾಃ ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1670/- ರೂ ಮತ್ತು 52 ಇಸ್ಪೀಟ ಎಲೆಗಳು ಮತ್ತು ಮೊಬೈಲ ಪೂನಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ವಿದ್ಯಾಧರ ತಂದೆ ಚಂದ್ರಶ್ಯಾ ಪೂಜಾರಿ ಮು: ಹಳ್ಳಿ ಸಲಗರ ತಾ: ಆಳಂದ ಇವರು ತಮ್ಮ ಗ್ರಾಮದ ಮಹಮ್ಮದ್ ಶರಪೋದ್ದಿನ್ ತೆಲಕುಣಿ ಇವರ ಲಾರಿ ನಂ:ಎಮ್.ಎ:09 ಹೆಚ್.ಎಫ್:4507 ನೇದ್ದರ ಮೇಲೆ 02-03 ವರ್ಷಗಳಿಂದ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ದಿನಾಂಕ: 17/07/2015 ರಂದು ಬೇಳಗ್ಗೆ ಲಾತೂರಕ್ಕೆ ಹೋಗಿ ನಾನು ಚಲಾಯಿಸುವ ಲಾರಿಯಲ್ಲಿ 50 ಕೆ.ಜಿ.ಯ 40 ಸೇಂಗಾದ ಬೀಜದ ಪಾಕೀಟ್ ಗಳು ಹಾಗೂ ಕಬ್ಬಿಣದ ಸಾಮಾನುಗಳನ್ನು ಹಾಗೂ 01 ಹೊಸ ತಾಡಪತ್ರಿ ಹಾಗೂ 02 ಹಳೆಯ ತಾಡಪತ್ರೆಯಿಂದ ಮುಚ್ಚಿಕೊಂಡು ಅಲ್ಲಿಂದ ಸಾಯಂಕಾಲ ಬಿಟ್ಟು ಉಮರ್ಗಾ ಮಾರ್ಗವಾಗಿ ಆಳಂದಕ್ಕೆ ಬರುವಾಗ ರಾತ್ರಿ 11:00 ಗಂಟೆ ಸುಮಾರಿಗೆ ಸಾಲೇಗಾಂವ ಕ್ರಾಸ್ ದಾಟಿ ಚಿತಲಿ ಚಡೌನದಲ್ಲಿ ಲಾರಿ ನಿಧಾನವಾಗಿ ಹೋಗುವಾಗ ಲಾರಿಯ ಹಿಂದುಗಡೆ ಸಪ್ಪಳವಾಗಿದ್ದು  ನಂತರ ತೆಲಕುಣಿ ಹತ್ತಿರ ಲಾರಿ ನಿಲ್ಲಿಸಿ ನೋಡಲಾಗಿ ಸದರಿ ಲಾರಿಯ ಮೇಲೆ ಮುಚ್ಚಿದ ತಾಡ ಪತ್ರಿ ಹರಿದಿದ್ದು ಅದರಲ್ಲಿದ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೀಟ್ ಹಾಗೂ 01 ಹೊಸ ತಾಡಪತ್ರಿ ಇರಲಿಲ್ಲಾ. ಸದರಿ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೇಟಿನ ಅ.ಕೀ.12000/-ರೂ ಹಾಗೂ 01 ಹೊಸ ತಾಡಪತ್ರಿಯ ಅ.ಕೀ.3000/-ರೂ ಹೀಗೆ ಒಟ್ಟು 15,000/-ರೂ ಕಿಮ್ಮತಿನ ಮಾಲನ್ನು ಚಿತಲಿ ಚಡೌನ ಹತ್ತಿರ ಲಾರಿ ನಿಧಾನವಾಗಿ ಹೋಗುವಾಗ ಯಾರೋ ಕಳ್ಳರು ರಾತ್ರಿ 11:00 ಗಂಟೆಯಿಂದ 11:30 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 19-07-2015 ರಂದು ಶಿವಪೂರ ಬನ್ನಟ್ಟಿ  ಗ್ರಾಮದ ಕಡೆಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ  ಮರಳು ತುಂಬಿಕೊಂಡು ಹೊಗುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ  ಹತ್ತಿರ ಇದ್ದಾಗ  ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿ ತನ್ನ  ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋಗಿದ್ದು. ನಂತರ  ಪಂಚರ ಸಮಕ್ಷಮ ಟ್ರಾಕ್ಟರ  ಚಕ್ಕ ಮಾಡಲು, 1) JOHN DEERE ಕಂಪನಿಯದ್ದು ಇದ್ದು ಅದರ  ನಂ ಕೆಎ-28 ಟಿಬಿ 0713 ಟ್ರೈಲಿ ನಂ ಕೆಎ-28 ಟಿಎ-3255 ಅಂತ ಇದ್ದು , ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

19 July 2015

Kalaburgai District Reported Crimes

ಕೊಲೆ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 16-072015  ರಿಂದ 18-07-2015 ರ 05:00 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಗ ಮಲ್ಲೇಶಪ್ಪನಿಗೆ ಯಾವುದೋ ಒಂದು ಬಲವಾದ ಉದ್ದೆಶದಿಂದ ಎಲ್ಲಿಯೋ ಅಥವಾ ಅಲ್ಲಿಯೆ ಕೈಯಿಂದ ತೊರಡು ಹಿಸುಕಿ ಅಥವಾ ಕುತ್ತಿಗೆ ಒತ್ತಿ ಕೊಲೆ ಮಾಡಿ ಅವನ ಮೈ ಮೇಲಿನ ಬಟ್ಟೆಗಳನ್ನು ಬಿಚ್ಚಿ ಸಾಕ್ಷಿ ನಾಶಮಾಡುವ ಉದ್ದೇಶದಿಂದ ವೇರ್‌ಹೌಸ್ ಹತ್ತಿರ ರೇವನೂರ ಸಿಮಾಂತರದ ಹೊಲದಲ್ಲಿ ಬಿಸಾಕಿ ಹೋಗಿರುತ್ತಾರೆ ಅಂತಾ  ಶ್ರೀ ಪಿತಾಂಬರಾವ್ ತಂದೆ ನೀಲಕಂಠರಾವ್ ಪಾಟೀಲ್ ಸಾ|| ಮುಡಬೂಳ ತಾ|| ಜಿತ್ತಾಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 18.07.2015 ರಂದು ಜನಿವಾರ ಸಿಮಾಂತರದ ನನ್ನ ಹೋಲದ ಡ್ವಾಣದ ವಿಷಯದಲ್ಲಿ ಆರೋಪಿತರಾದ ಸಿದ್ದಪ್ಪ ತಂದೆ ದೊಡ್ಡಪ್ಪ ಪುಜಾರಿ, ಹುಣಚಪ್ಪ ತಂದೆ ಸಿದ್ದಪ್ಪ ಪುಜಾರಿ, ಮಲಗಂಡಪ್ಪ ತಂದೆ ಬಸವಂತರಾಯ ಆದೋನಿ, ಸಿದ್ದಪ್ಪ ತಂದೆ ಬಸವಂತರಾಯ ಆದೋನಿ,ಮಾರ್ತಂಡಪ್ಪ ತಂದೆ ಶಾಂತಪ್ಪ ಆದೋನಿ, ನಾಗಣ್ಣ ನೇರಡಗಿ, ಗುಂಡಪ್ಪ ದುರ್ಗಪ್ಪ ಗೌಂಡಿ, ಮಲ್ಲಪ್ಪ ತಂದೆ ಬಾಬುರಾಯ ಹನ್ನೂರ ಸಾ|| ಎಲ್ಲರು ಗೌನಳ್ಳಿ, ಭೀಮಣ್ಣ ನಾಟಿಕಾರ್, ರೇವಣಪ್ಪ ನಾಟಿಕಾರ್ ಸಾ|| ಎಲ್ಲರು ಜನಿವಾರ ಎಲ್ಲರು ಸೇರಿಕೊಂಡು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿ ಕೊಡಲಿ ಬಡಿಗೆ ಕಲ್ಲು ಹಿಡಿದುಕೊಂಡು ಬಂದು ನನ್ನ ತಂದೆ ಗುಂಡಪ್ಪನಿಗೆ ಕೊಡಲಿ ಬಡಿಗೆ, ಕಲ್ಲುಗಳಿಂದ ಹೊಡೆದು ಕೊಲೆ ಮಾಡಿ ಹಾಗು ನನ್ನ ತಮ್ಮಂದಿರರಿಗೆ ಹಾಗು ನನ್ನ ದೊಡ್ಡಪ್ಪ ಬಮ್ಮಲಿಂಗಪ್ಪ ಇವರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ಜನಿವಾರ ಸಾ|| ಗೌನಳ್ಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಕಾರ ಯೂನುಸ್ ತಂದೆ ನಿಸಾರ ಅಹ್ಮದ ಖುರೆಷಿ ಸಾ: ಶಿವಪೂರ ಗಲ್ಲಿ ಹುಮನಾಬಾದ ಜಿ: ಬೀದರ ರವರು ದಿನಾಂಕ: 18/07/2015 ರಂದು ರಂಜಾನ ಹಬ್ಬದ ನಿಮಿತ್ಯಾ ತನ್ನ ಗೆಳೆಯ ಮಹ್ಮದ  ಖೀಜರ ಈತನೊಂದಿಗೆ ತನ್ನ ಮೋ.ಸೈಕಲ ನಂ. ಕೆಎ:39, ಕೆ: 1242 ನೇದ್ದರ ಮೇಲೆ ಸಂಬಂಧಿಕರನ್ನು ಭೇಟಿಯಾಗಲು ಹುಮಾನಾಬಾದ ದಿಂದ ಕಲಬುರಗಿಗೆ ಹೊರಟಿದ್ದು ಅದರಂತೆ ತನ್ನ ಗೆಳೆಯಂದಿರಾದ ಅಕ್ಬರ ತಂದೆ ಹರೀಬ ಖುರೇಷಿ ಈತನ ಮಹೇಂದ್ರ ಮೋ.ಸೈಕಲ ನಂ. ಕೆಎ:39, ಎಲ್:4656 ನೇದ್ದ ರ ಮೇಲೆ ಮಹ್ಮದ ಜುಬೇರ ಮತ್ತು ಮಹ್ಮದ ಓವೈಸ್ ಇವರನ್ನ ತನ್ನ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಹೊರಟಿದ್ದು ಮಧ್ಯಾಹ್ನ 2-45 ಗಂಟೆ ಸುಮಾರಿಗೆ ಸದರಿ ಅಕ್ಬರ ಈತನು ತನ್ನ ಮೋ.ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜೀತನ ದಿಂದ ನಡೆಯಿಸಿಕೊಂಡು ಬಂದು ಮಹಾಗಾಂವ ಕ್ರಾಸ ಹತ್ತಿರ ಒಮ್ಮಿಂದೊಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋ.ಸೈಕಲ ಸ್ಕೀಡ್ಡಾಗಿ 3 ಜನರು ಮೋ.ಸೈಕಲ ಸಮೇತ ಕೆಳಗೆ ಬಿದ್ದಿದ್ದರಿಂದ ಅಕ್ಬರ ತೆಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಅತನೊಂದಿಗೆ ಇದ್ದ ಮಹ್ಮದ ಜುಬೇರ ಈತನಿಗೂ ಕೂಡಾ ಭಾರಿ ಗುಪ್ತಗಾಯವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು ಇನ್ನೊಬ್ಬಮಹ್ಮದ ಓವೈಸ್ ಈತನು ಭಾರಿ ರಕ್ತಗಾಯ ಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಂಗಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ: ಕಾವ್ಯಾಶ್ರೀ ಜಿ. ಸಹ ಪ್ರಾದ್ಯಾಪಕರು ದಾವಣಗೇರಿ ಇವರು ದಿನಾಂಕ 17-07-2015 ರಂದು ಕಲಬುರಗಿಗೆ ಬರಲು ದಾವಣಗೇರಿಯಲ್ಲಿ ರಾತ್ರಿ 8 ಗಂಟೆಗೆ ಬಸ್ ನಂ. ಕೆ.ಎ. 32 ಎಫ. 1644ನಲ್ಲಿ ಕುಳಿತು ಹೊರಟಿದ್ದು ದಿನಾಂಕ 18-07-2015 ರ ಬೆಳಗಿನ 5:25 ಗಂಟೆಯ ಸಮಯಕ್ಕೆ ಪರತಾಬಾದ ದಾಟಿ ಕಲಬುರಗಿ ಹತ್ತಿರ ಎಚ್ಚರಗೊಂಡು ನೋಡಲು ನನ್ನ ಸೀಟ ನಂ.15 ರ ಸ್ವೀಪರ್ ಕೋಚ್ ಕೆಳಗಡೆ ನನ್ನ ವ್ಯಾನಿಟಿ ಬ್ಯಾಗದಲ್ಲಿನ ಡಬ್ಬಿಯಲ್ಲಿ ಹಾಕಿದ್ದ ಬಂಗಾರದ ಆಭರಣಗಳು ಮಂಗಳ ಸೂತ್ರ  5 ತೋಲಿ . ಅ.ಕಿ. 1,30,000/- ಬೆಲೆಬಾಳುವದು , ಲಾಕೀಟ ಎರಡುವರೆ ತೋಲಿ ಅ.ಕಿ. 55,000/-ರೂ. ಬೆಲೆಬಾಳುವದು ಹೀಗೆ ಒಟ್ಟು ಎಳುವರೆ ತೋಲಿ ಬಂಗಾರದ ಆಭರಣಗಳು ಅ.ಕಿ. 1,85,000/-ರೂ. ಬೆಲೆಬಾಳುವ ಆಭರಣಗಳು ಕಾಣಲಿಲ್ಲಾ ನನ್ನ ಸೀಟಿನ ಹಿಂದೆ ಒಬ್ಬ ಹುಡುಗ ಸುಮಾರು 20 ರಿಂದ 22 ವಯಸಿನವನಿದ್ದು ಬಿಳಿ ಟೀಶರ್ಟ ನೀಲಿ ಡಾರ್ಕ ಬಣ್ಣದ ಜೀನ್ಸ್ ಪ್ಯಾಂಟ ಧರಸಿದ ಹುಡುಗ ಹಿಂದೆ ಮಲಗಿದ್ದ ಕಂಡಕ್ಟರ್ ಹುಡುಗನಿಗೆ ಏಳು ಲಗೇಜ ಹೋರಗಡೆ ತೆಗೆಯಬೇಕು ಅಂತಾ ಫರತಾಬಾದ ದಾಟಿ ಎಬ್ಬಿಸಿದ ನಾನು ಕಲಬುರಗಿ ಬಸ್ಟಾಂಡ ತಲುಪಿ ನನ್ನ ತಾಯಿಗೆ ಮಾತನಾಡಲು ಬ್ಯಾಗ ತೆಗೆದು ನೋಡಲು ವ್ಯಾನಿಟಿ ಬ್ಯಾಗದಿಂದ ಮೊಬಾಯಿಲ ತೆಗೆಯುವಾಗ ಚಿನ್ನಾಭರಣದ ಬಾಕ್ಸ್ ಮುಚ್ಚಿಟ್ಟಿದ್ದು ತೆರೆದಿದ್ದು ಅದರ ಒಳಗೆ ಬಂಗಾರದ ಆಭರಣ ಇದ್ದಿರಲಿಲ್ಲಾ ಯಾರೋ ನನ್ನ ಬಂಗಾರದ ಆಭರಣಗಳು ಕಳವು ಮಾಡಿರುತ್ತಾರೆ. ನನ್ನ ಹಿಂದುಗಡೆ ಸೀಟಿನ ಮೇಲೆ ಮಲಗಿಕೊಂಡಿರುವ ಹುಡುಗನ ಮೇಲೆ ನನ್ನ ಬಲವಾದ ಸಂಶಯ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶಧೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

18 July 2015

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಸುಮಂಗಲಾ ಗಂಡ ಶರಣಯ್ಯಾ ಹಿರೇಮಠ ಸಾ: ಬನಶಂಕರಿ ನಗರ ಡಾ:ಗಚ್ಚಿನ ಮನೆ ಆಸ್ಪತ್ರೆ ಹಿಂದುಗಡೆ  ಬ್ರಹ್ಮಪೂರ ಕಲಬುರಗಿ ಇವರ ಮಗಳಾದ ಕುಮಾರಿ ಸೌಮ್ಯ ಇವಳು ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಸತ್ಯಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನನ್ನ ಮಗಳು ಎಂದಿನಂತೆ ದಿನಾಲೂ ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಹೋದವಳು ಸಂಜೆಯವರೆಗೆ ಮನೆಗೆ ಬಂದಿರುವುದಿಲ್ಲ ನಾವು ನಮ್ಮ ಬೀಗರು, ನೆಂಟರ ಹತ್ತಿರ  ಹೋಗಿ ವಿಚಾರಿಸಿದರೂ ಸಹೀತ ನನ್ನ ಮಗಳ ಸುಳಿವು ಸಿಗಲಿಲ್ಲ. ಮತ್ತು ನನ್ನ ಮಗಳನ್ನು ಅಪಹರಿಸಿದವರಾದ 1) ರಾಚಯ್ಯಾ ಸ್ವಾಮಿ 2) ಜಗದೇವಿ 3)ಸುಜಾತಾ 4) ಬಸ್ಸಯ್ಯಾ ಇವರುಗಳು ಅಪಹರಣ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 16-072015 ರಂದು ಗುಡ್‌ಲಕ್ ಹೋಟೆಲ್ ಹತ್ತಿರ ದಾನಮ್ಮ ಕಾಲೇಜು ಎದುರು ಜೇವರಗಿ ಸಿಂದಗಿ ರೋಡಿನಲ್ಲಿ  ಮೋಟಾರು ಸೈಕಲ್ ನಂ ಕೆ.ಎ32ಈಡಿ6641 ನೇದ್ದರ ಸವಾರ ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಸೈಡಿನಲ್ಲಿ ನಿಂತಿದ್ದ ನನ್ನ ಮಗ ಶಿವಕುಮಾರ ತಂದೆ ರಾಮಸ್ವಾಮಿ ಬಂಡಿವಡ್ಡರ ಇವನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಪಡಿಸಿ ತನ್ನ ಮೋಟಾರು ಸೈಕಲ್‌ನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ  ಶ್ರೀಮತಿ ಹಣಮವ್ವ ತಂದೆ ರಾಮಸ್ವಾಮಿ ಬಂಡಿವಡ್ಡರ್ ಸಾ|| ಜನತಾ ಕಾಲೋನಿ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತವಾಗಿ ಲೇವಾ ದೇವಿ ವ್ಯವಹಾರ ಮಾಡುತ್ತಿದ್ದ ಅಂಗಡಿಯ ಮೇಲೆ ದಾಳಿ ಮಾಡಿದ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ. ಯಲ್ಲಪ್ಪ ಸುಬೇದಾರ್ ತಹಸೀಲದಾರರು ಜೇವರಗಿ. ಇವರು ದಿನಾಂಕ 17.07.2015 ರಂದು ಮಧ್ಯಾಹ್ನ 03 ಗಂಟೆಗೆ ಜೇವರಗಿ ಪಟ್ಟಣದಲ್ಲಿರುವ ವಿಧ್ಯಾನಗರದ ಶಣ್ಮೂಖ ತಂದೆ ಚಂದ್ರಶೇಖರ ಹಳಿಮನಿ ಸಾ|| ವಿಧ್ಯಾನಗರ ಜೇವರಗಿ ಈತನ ಕೀರಾಣ ಅಂಗಡಿಯಲ್ಲಿ ಸಂಭಂದ ಪಟ್ಟ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಅನಧೀಕೃತವಾಗಿ ಲೇವಾದೇವಿ ವ್ಯವಹಾರ ಮಾಡುತ್ತಿರುವದು ಕಂಡು ಬಂದಿರುವದರಿಂದ ಅವನ ಅಂಗಡಿಯ ಮೇಲೆ ದಾಳಿ ಮಾಡಿ ಲೇವಾದೇವಿ ಪಾಸ್‌ಬುಕ್‌ಗಳನ್ನು ಜಪ್ತಿ ಮಾಡಿದ್ದು ಸದರಿ ಯವನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಜೇವರ್ಗಿ ಠಾಣೆ : ಶ್ರೀ. ಯಲ್ಲಪ್ಪ ಸುಬೇದಾರ್ ತಹಸೀಲದಾರರು ಜೇವರಗಿ. ಇವರು ದಿನಾಂಕ 17.07.2015 ರಂದು ಮಧ್ಯಾಹ್ನ ಜೇವರಗಿ ಪಟ್ಟಣದಲ್ಲಿರುವ ಸಂಗಣ್ಣ ತಂದೆ ಗುರಣ್ಣ ಹೂಗಾರ್ ಸಾ|| ವಿಧ್ಯಾನಗರ ಜೇವರಗಿ ಇವರ  ಮನೆಗೆ ಭೇಟಿ ನಿಡಿದಾಗ ಸದರಿ ಸಂಗಣ್ಣ ಇವರು ತಮ್ಮ ಮನೆಯಲ್ಲಿ ಸಂಭಂದ ಪಟ್ಟ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಅನಧೀಕೃತವಾಗಿ ಲೇವಾದೇವಿ ವ್ಯವಹಾರ ಮಾಡುತ್ತಿರುವದು ಕಂಡು ಬಂದಿರುವದರಿಂದ ಅವನ ಮನೆಯಲ್ಲಿನ ರುಜು ಪಡೆದುಕೊಂಡಿರುವ 2 ಖಾಲಿ ಇ-ಸ್ಟ್ಯಾಂಪ್ ಮತ್ತು ಲೇವಾದೇವಿಗೆ ಸಂಭಂದಿಸಿದ 5 ಮೀಟರ್ ಬಡ್ಡಿ ಪಾಸ್‌ಬುಕ್‌ಗಳನ್ನು ಜಪ್ತಿ ಮಾಡಿದ್ದು ಸದರಿ ಯವನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಪರಶುರಾಮ ತಂದೆ ಗುರಣ್ಣ ಗೋಲ್ಲರ ಸಹಕಾರ ಸಂಘಗಳ ಸಹಾಯಕ ನಿಬಂದಕರು ಕಲಬುರಗಿ ಉಪ ವಿಭಾಗ ಕಲಬುರಗಿಯಲ್ಲಿ ದ್ವೀತಿಯ ದರ್ಜೆ ಸಹಾಯಕ  ಅಂತಾ ಇದ್ದು. ಮಾನ್ಯ ಜಿಲ್ಲಾದಿಕಾರಿಗಳು ಕಲಬುರಗಿ ರವರು ನೊಂದಾಯಿತರಲ್ಲದ ಲೇವಾದೇವಿದಾರರು ಹಣದ ಅವಯವಹಾರ ನಡೆಸದಂತೆ ಹಾಗೂ ಅನದಿಕೃತ ಚಟುವಟಿಕೆಗಳು ನಡೆಯದಂತೆ ತಾಲುಕಾವಾರು ತಂಡ ರಚನೆ ಮಾಡಿ, ಅನದಿಕೃತವಾಗಿ ಹಣದ  ಅವ್ಯವಹಾರ ನಡೆಸುತ್ತಿರುವ ಲೇವಾದೇವಿದಾರರ ಅಂಗಡಿಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿದ್ದು ಮಾನ್ಯ ಜಿಲ್ಲಾದಿಕಾರಿಗಳ ಆದೇಶದ ಮೇರೆಗೆ ಹಾಗೂ ಸಹಕಾರ ಸಂಘಗಳ ಸಹಾಯಕ ನಿಭಂದಕರು ಕಲಬುರಗಿ ರವರ ಆದೇಶದ ಮೇರೆಗೆ ಇಂದು ದಿನಾಂಕ  17-07-2015 ರಂದು ಬೆಳಿಗ್ಗೆ 10:00 ಎ ಎಮ್ ಕ್ಕೆ ಅಫಜಲಪೂರ ಪಟ್ಟಣಕ್ಕೆ ಬಂದು ಅಫಜಲಪೂರದ ಮಾನ್ಯ ಗೌಸುದ್ದಿನ ತಹಸಿಲ್ದಾರ ಸಾಹೇಬರು ಮತ್ತು ಮಾನ್ಯ ಸಂಗಮೇಶ ಪಾಟೀಲ ಸಿ.ಪಿ.ಐ ಸಾಹೇಬರು ಹಾಗೂ ಅಫಜಲಪೂರ ಹಾಗು ಸಿಬ್ಬಂದಿ ಕುಡಿಕೊಂಡು ಅಫಜಲಪೂರ ಪಟ್ಟಣದ ಮಾಹಾಂತೇಶ್ವರ ಅಟೋ ಪೈನಾನ್ಸ ಕ್ಕೆ 12:15 ಪಿ ಎಮ್ ಕ್ಕೆ ಬೇಟ್ಟಿ ನೀಡಿ ಪೈನಾನ್ಸದಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿ, ಸದರಿ ಮಾಹಾಂತೇಶ್ವರ ಪೈನಾನ್ಸ ಲೇವಾದೇವಿ ಪರವಾನೆಯನ್ನು ಪರಿಶೀಲಿಸಿ ನೋಡಲಾಗಿ ಸದರಿ  ಪರವಾನಿಗೆ  ದಿನಾಂಕ 09-02-2011 ರಿಂದ ದಿನಾಂಕ 31-03-2015 ರವರೆಗೆ ಇರುತ್ತದೆ. ಸದರಿ ಮಾಹಾಂತೇಶ್ವರ ಪೈನಾನ್ಸನ ಆಡಳಿತ ಮಂಡಳಿಯವರು ಪರವಾನಿಗೆಯನ್ನು ನವಿಕರಣ ಮಾಡಿಸದೆ ಅನದಿಕೃತವಾಗಿ ಪೈನಾನ್ಸ ನಡೆಸಿ ಲೇವಾದೇವಿ ಮಾಡುತ್ತಿದ್ದರಿಂದ, ಪೈನಾನ್ಸಿಗೆ ಸಂಬಂದಪಟ್ಟ ದಾಖಲಾತಿಗಳನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರಿ ಪರಶುರಾಮ ತಂದೆ ಗುರಣ್ಣ ಗೊಲ್ಲರ (SDA) ARCS office Kalaburagi ರವರು ಮಾನ್ಯ ಜಿಲ್ಲಾದಿಕಾರಿಗಳು ಕಲಬುರಗಿ ರವರು ನೊಂದಾಯಿತರಲ್ಲದ ಲೇವಾದೇವಿದಾರರು ಹಣದ ಅವಯವಹಾರ ನಡೆಸದಂತೆ ಹಾಗೂ ಅನದಿಕೃತ ಚಟುವಟಿಕೆಗಳು ನಡೆಯದಂತೆ ತಾಲುಕಾವಾರು ತಂಡ ರಚನೆ ಮಾಡಿ, ಅನದಿಕೃತವಾಗಿ ಹಣದ  ಅವ್ಯವಹಾರ ನಡೆಸುತ್ತಿರುವ ಲೇವಾದೇವಿದಾರರ ಅಂಗಡಿಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿದ್ದು ಮಾನ್ಯ ಜಿಲ್ಲಾದಿಕಾರಿಗಳ ಆದೇಶದ ಮೇರೆಗೆ ಹಾಗೂ ಸಹಕಾರ ಸಂಘಗಳ ಸಹಾಯಕ ನಿಭಂದಕರು ಕಲಬುರಗಿ ರವರ ಆದೇಶದ ಮೇರೆಗೆ ಇಂದು ದಿನಾಂಕ 17-07-2015 ರಂದು ಬೆಳಿಗ್ಗೆ ಅಫಜಲಪೂರ ಪಟ್ಟಣಕ್ಕೆ ಬಂದು ಅಫಜಲಪೂರದ ಮಾನ್ಯ ಗೌಸುದ್ದಿನ ತಹಸಿಲ್ದಾರ ಸಾಹೇಬರು ಮತ್ತು ಮಾನ್ಯ ಸಂಗಮೇಶ ಪಾಟೀಲ ಸಿ.ಪಿ.ಐ ಸಾಹೇಬರು ಹಾಗೂ ಅಫಜಲಪೂರ ಠಾಣೆಯ ಸಿಬ್ಬಂದಿ  ಕೂಡಿ ತಹಸಿಲ ಕಾರ್ಯಾಲಯದಿಂದ ಹೊರಟು, ಅಫಜಲಪೂರ ಪಟ್ಟಣದ ವೈಭವ ಲಿಜೀಂಗ (ರಿ) ಪೈನಾನ್ಸ ಕ್ಕೆ 3:30 ಪಿ ಎಮ್ ಕ್ಕೆ ಬೇಟ್ಟಿ ನೀಡಿ ಪೈನಾನ್ಸದಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿ, ಸದರಿ ವೈಭವ ಲೀಜಿಂಗ (ರಿ) ಲೇವಾದೇವಿ ಪರವಾನೆಯನ್ನು ಪರಿಶೀಲಿಸಿ ನೋಡಲಾಗಿ ಸದರಿ  ಪರವಾನೆ ದಿನಾಂಕ 09-02-2011 ರಿಂದ ದಿನಾಂಕ 31-03-2015 ರವರೆಗೆ ಇರುತ್ತದೆ. ಸದರಿ ವೈಭವ ಲಿಜೀಂಗ (ರಿ) ಪೈನಾನ್ಸನ ಆಡಳೀತ ಮಂಡಳಿಯವರು ಪರವಾನಿಗೆಯನ್ನು ನವಿಕರಣ ಮಾಡಿಸದೆ ಅನದಿಕೃತವಾಗಿ ಪೈನಾನ್ಸ ನಡೆಸಿ ಲೇವಾದೇವಿ ಮಾಡುತ್ತಿದ್ದರಿಂದ, ಪೈನಾನ್ಸಿಗೆ ಸಂಬಂದಪಟ್ಟ ದಾಖಲಾತಿಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.