POLICE BHAVAN KALABURAGI

POLICE BHAVAN KALABURAGI

19 July 2015

Kalaburgai District Reported Crimes

ಕೊಲೆ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 16-072015  ರಿಂದ 18-07-2015 ರ 05:00 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಗ ಮಲ್ಲೇಶಪ್ಪನಿಗೆ ಯಾವುದೋ ಒಂದು ಬಲವಾದ ಉದ್ದೆಶದಿಂದ ಎಲ್ಲಿಯೋ ಅಥವಾ ಅಲ್ಲಿಯೆ ಕೈಯಿಂದ ತೊರಡು ಹಿಸುಕಿ ಅಥವಾ ಕುತ್ತಿಗೆ ಒತ್ತಿ ಕೊಲೆ ಮಾಡಿ ಅವನ ಮೈ ಮೇಲಿನ ಬಟ್ಟೆಗಳನ್ನು ಬಿಚ್ಚಿ ಸಾಕ್ಷಿ ನಾಶಮಾಡುವ ಉದ್ದೇಶದಿಂದ ವೇರ್‌ಹೌಸ್ ಹತ್ತಿರ ರೇವನೂರ ಸಿಮಾಂತರದ ಹೊಲದಲ್ಲಿ ಬಿಸಾಕಿ ಹೋಗಿರುತ್ತಾರೆ ಅಂತಾ  ಶ್ರೀ ಪಿತಾಂಬರಾವ್ ತಂದೆ ನೀಲಕಂಠರಾವ್ ಪಾಟೀಲ್ ಸಾ|| ಮುಡಬೂಳ ತಾ|| ಜಿತ್ತಾಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 18.07.2015 ರಂದು ಜನಿವಾರ ಸಿಮಾಂತರದ ನನ್ನ ಹೋಲದ ಡ್ವಾಣದ ವಿಷಯದಲ್ಲಿ ಆರೋಪಿತರಾದ ಸಿದ್ದಪ್ಪ ತಂದೆ ದೊಡ್ಡಪ್ಪ ಪುಜಾರಿ, ಹುಣಚಪ್ಪ ತಂದೆ ಸಿದ್ದಪ್ಪ ಪುಜಾರಿ, ಮಲಗಂಡಪ್ಪ ತಂದೆ ಬಸವಂತರಾಯ ಆದೋನಿ, ಸಿದ್ದಪ್ಪ ತಂದೆ ಬಸವಂತರಾಯ ಆದೋನಿ,ಮಾರ್ತಂಡಪ್ಪ ತಂದೆ ಶಾಂತಪ್ಪ ಆದೋನಿ, ನಾಗಣ್ಣ ನೇರಡಗಿ, ಗುಂಡಪ್ಪ ದುರ್ಗಪ್ಪ ಗೌಂಡಿ, ಮಲ್ಲಪ್ಪ ತಂದೆ ಬಾಬುರಾಯ ಹನ್ನೂರ ಸಾ|| ಎಲ್ಲರು ಗೌನಳ್ಳಿ, ಭೀಮಣ್ಣ ನಾಟಿಕಾರ್, ರೇವಣಪ್ಪ ನಾಟಿಕಾರ್ ಸಾ|| ಎಲ್ಲರು ಜನಿವಾರ ಎಲ್ಲರು ಸೇರಿಕೊಂಡು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿ ಕೊಡಲಿ ಬಡಿಗೆ ಕಲ್ಲು ಹಿಡಿದುಕೊಂಡು ಬಂದು ನನ್ನ ತಂದೆ ಗುಂಡಪ್ಪನಿಗೆ ಕೊಡಲಿ ಬಡಿಗೆ, ಕಲ್ಲುಗಳಿಂದ ಹೊಡೆದು ಕೊಲೆ ಮಾಡಿ ಹಾಗು ನನ್ನ ತಮ್ಮಂದಿರರಿಗೆ ಹಾಗು ನನ್ನ ದೊಡ್ಡಪ್ಪ ಬಮ್ಮಲಿಂಗಪ್ಪ ಇವರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ಜನಿವಾರ ಸಾ|| ಗೌನಳ್ಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಕಾರ ಯೂನುಸ್ ತಂದೆ ನಿಸಾರ ಅಹ್ಮದ ಖುರೆಷಿ ಸಾ: ಶಿವಪೂರ ಗಲ್ಲಿ ಹುಮನಾಬಾದ ಜಿ: ಬೀದರ ರವರು ದಿನಾಂಕ: 18/07/2015 ರಂದು ರಂಜಾನ ಹಬ್ಬದ ನಿಮಿತ್ಯಾ ತನ್ನ ಗೆಳೆಯ ಮಹ್ಮದ  ಖೀಜರ ಈತನೊಂದಿಗೆ ತನ್ನ ಮೋ.ಸೈಕಲ ನಂ. ಕೆಎ:39, ಕೆ: 1242 ನೇದ್ದರ ಮೇಲೆ ಸಂಬಂಧಿಕರನ್ನು ಭೇಟಿಯಾಗಲು ಹುಮಾನಾಬಾದ ದಿಂದ ಕಲಬುರಗಿಗೆ ಹೊರಟಿದ್ದು ಅದರಂತೆ ತನ್ನ ಗೆಳೆಯಂದಿರಾದ ಅಕ್ಬರ ತಂದೆ ಹರೀಬ ಖುರೇಷಿ ಈತನ ಮಹೇಂದ್ರ ಮೋ.ಸೈಕಲ ನಂ. ಕೆಎ:39, ಎಲ್:4656 ನೇದ್ದ ರ ಮೇಲೆ ಮಹ್ಮದ ಜುಬೇರ ಮತ್ತು ಮಹ್ಮದ ಓವೈಸ್ ಇವರನ್ನ ತನ್ನ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಹೊರಟಿದ್ದು ಮಧ್ಯಾಹ್ನ 2-45 ಗಂಟೆ ಸುಮಾರಿಗೆ ಸದರಿ ಅಕ್ಬರ ಈತನು ತನ್ನ ಮೋ.ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜೀತನ ದಿಂದ ನಡೆಯಿಸಿಕೊಂಡು ಬಂದು ಮಹಾಗಾಂವ ಕ್ರಾಸ ಹತ್ತಿರ ಒಮ್ಮಿಂದೊಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋ.ಸೈಕಲ ಸ್ಕೀಡ್ಡಾಗಿ 3 ಜನರು ಮೋ.ಸೈಕಲ ಸಮೇತ ಕೆಳಗೆ ಬಿದ್ದಿದ್ದರಿಂದ ಅಕ್ಬರ ತೆಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಅತನೊಂದಿಗೆ ಇದ್ದ ಮಹ್ಮದ ಜುಬೇರ ಈತನಿಗೂ ಕೂಡಾ ಭಾರಿ ಗುಪ್ತಗಾಯವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು ಇನ್ನೊಬ್ಬಮಹ್ಮದ ಓವೈಸ್ ಈತನು ಭಾರಿ ರಕ್ತಗಾಯ ಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಂಗಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ: ಕಾವ್ಯಾಶ್ರೀ ಜಿ. ಸಹ ಪ್ರಾದ್ಯಾಪಕರು ದಾವಣಗೇರಿ ಇವರು ದಿನಾಂಕ 17-07-2015 ರಂದು ಕಲಬುರಗಿಗೆ ಬರಲು ದಾವಣಗೇರಿಯಲ್ಲಿ ರಾತ್ರಿ 8 ಗಂಟೆಗೆ ಬಸ್ ನಂ. ಕೆ.ಎ. 32 ಎಫ. 1644ನಲ್ಲಿ ಕುಳಿತು ಹೊರಟಿದ್ದು ದಿನಾಂಕ 18-07-2015 ರ ಬೆಳಗಿನ 5:25 ಗಂಟೆಯ ಸಮಯಕ್ಕೆ ಪರತಾಬಾದ ದಾಟಿ ಕಲಬುರಗಿ ಹತ್ತಿರ ಎಚ್ಚರಗೊಂಡು ನೋಡಲು ನನ್ನ ಸೀಟ ನಂ.15 ರ ಸ್ವೀಪರ್ ಕೋಚ್ ಕೆಳಗಡೆ ನನ್ನ ವ್ಯಾನಿಟಿ ಬ್ಯಾಗದಲ್ಲಿನ ಡಬ್ಬಿಯಲ್ಲಿ ಹಾಕಿದ್ದ ಬಂಗಾರದ ಆಭರಣಗಳು ಮಂಗಳ ಸೂತ್ರ  5 ತೋಲಿ . ಅ.ಕಿ. 1,30,000/- ಬೆಲೆಬಾಳುವದು , ಲಾಕೀಟ ಎರಡುವರೆ ತೋಲಿ ಅ.ಕಿ. 55,000/-ರೂ. ಬೆಲೆಬಾಳುವದು ಹೀಗೆ ಒಟ್ಟು ಎಳುವರೆ ತೋಲಿ ಬಂಗಾರದ ಆಭರಣಗಳು ಅ.ಕಿ. 1,85,000/-ರೂ. ಬೆಲೆಬಾಳುವ ಆಭರಣಗಳು ಕಾಣಲಿಲ್ಲಾ ನನ್ನ ಸೀಟಿನ ಹಿಂದೆ ಒಬ್ಬ ಹುಡುಗ ಸುಮಾರು 20 ರಿಂದ 22 ವಯಸಿನವನಿದ್ದು ಬಿಳಿ ಟೀಶರ್ಟ ನೀಲಿ ಡಾರ್ಕ ಬಣ್ಣದ ಜೀನ್ಸ್ ಪ್ಯಾಂಟ ಧರಸಿದ ಹುಡುಗ ಹಿಂದೆ ಮಲಗಿದ್ದ ಕಂಡಕ್ಟರ್ ಹುಡುಗನಿಗೆ ಏಳು ಲಗೇಜ ಹೋರಗಡೆ ತೆಗೆಯಬೇಕು ಅಂತಾ ಫರತಾಬಾದ ದಾಟಿ ಎಬ್ಬಿಸಿದ ನಾನು ಕಲಬುರಗಿ ಬಸ್ಟಾಂಡ ತಲುಪಿ ನನ್ನ ತಾಯಿಗೆ ಮಾತನಾಡಲು ಬ್ಯಾಗ ತೆಗೆದು ನೋಡಲು ವ್ಯಾನಿಟಿ ಬ್ಯಾಗದಿಂದ ಮೊಬಾಯಿಲ ತೆಗೆಯುವಾಗ ಚಿನ್ನಾಭರಣದ ಬಾಕ್ಸ್ ಮುಚ್ಚಿಟ್ಟಿದ್ದು ತೆರೆದಿದ್ದು ಅದರ ಒಳಗೆ ಬಂಗಾರದ ಆಭರಣ ಇದ್ದಿರಲಿಲ್ಲಾ ಯಾರೋ ನನ್ನ ಬಂಗಾರದ ಆಭರಣಗಳು ಕಳವು ಮಾಡಿರುತ್ತಾರೆ. ನನ್ನ ಹಿಂದುಗಡೆ ಸೀಟಿನ ಮೇಲೆ ಮಲಗಿಕೊಂಡಿರುವ ಹುಡುಗನ ಮೇಲೆ ನನ್ನ ಬಲವಾದ ಸಂಶಯ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶಧೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

18 July 2015

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಸುಮಂಗಲಾ ಗಂಡ ಶರಣಯ್ಯಾ ಹಿರೇಮಠ ಸಾ: ಬನಶಂಕರಿ ನಗರ ಡಾ:ಗಚ್ಚಿನ ಮನೆ ಆಸ್ಪತ್ರೆ ಹಿಂದುಗಡೆ  ಬ್ರಹ್ಮಪೂರ ಕಲಬುರಗಿ ಇವರ ಮಗಳಾದ ಕುಮಾರಿ ಸೌಮ್ಯ ಇವಳು ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಸತ್ಯಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನನ್ನ ಮಗಳು ಎಂದಿನಂತೆ ದಿನಾಲೂ ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಹೋದವಳು ಸಂಜೆಯವರೆಗೆ ಮನೆಗೆ ಬಂದಿರುವುದಿಲ್ಲ ನಾವು ನಮ್ಮ ಬೀಗರು, ನೆಂಟರ ಹತ್ತಿರ  ಹೋಗಿ ವಿಚಾರಿಸಿದರೂ ಸಹೀತ ನನ್ನ ಮಗಳ ಸುಳಿವು ಸಿಗಲಿಲ್ಲ. ಮತ್ತು ನನ್ನ ಮಗಳನ್ನು ಅಪಹರಿಸಿದವರಾದ 1) ರಾಚಯ್ಯಾ ಸ್ವಾಮಿ 2) ಜಗದೇವಿ 3)ಸುಜಾತಾ 4) ಬಸ್ಸಯ್ಯಾ ಇವರುಗಳು ಅಪಹರಣ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 16-072015 ರಂದು ಗುಡ್‌ಲಕ್ ಹೋಟೆಲ್ ಹತ್ತಿರ ದಾನಮ್ಮ ಕಾಲೇಜು ಎದುರು ಜೇವರಗಿ ಸಿಂದಗಿ ರೋಡಿನಲ್ಲಿ  ಮೋಟಾರು ಸೈಕಲ್ ನಂ ಕೆ.ಎ32ಈಡಿ6641 ನೇದ್ದರ ಸವಾರ ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಸೈಡಿನಲ್ಲಿ ನಿಂತಿದ್ದ ನನ್ನ ಮಗ ಶಿವಕುಮಾರ ತಂದೆ ರಾಮಸ್ವಾಮಿ ಬಂಡಿವಡ್ಡರ ಇವನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಪಡಿಸಿ ತನ್ನ ಮೋಟಾರು ಸೈಕಲ್‌ನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ  ಶ್ರೀಮತಿ ಹಣಮವ್ವ ತಂದೆ ರಾಮಸ್ವಾಮಿ ಬಂಡಿವಡ್ಡರ್ ಸಾ|| ಜನತಾ ಕಾಲೋನಿ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತವಾಗಿ ಲೇವಾ ದೇವಿ ವ್ಯವಹಾರ ಮಾಡುತ್ತಿದ್ದ ಅಂಗಡಿಯ ಮೇಲೆ ದಾಳಿ ಮಾಡಿದ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ. ಯಲ್ಲಪ್ಪ ಸುಬೇದಾರ್ ತಹಸೀಲದಾರರು ಜೇವರಗಿ. ಇವರು ದಿನಾಂಕ 17.07.2015 ರಂದು ಮಧ್ಯಾಹ್ನ 03 ಗಂಟೆಗೆ ಜೇವರಗಿ ಪಟ್ಟಣದಲ್ಲಿರುವ ವಿಧ್ಯಾನಗರದ ಶಣ್ಮೂಖ ತಂದೆ ಚಂದ್ರಶೇಖರ ಹಳಿಮನಿ ಸಾ|| ವಿಧ್ಯಾನಗರ ಜೇವರಗಿ ಈತನ ಕೀರಾಣ ಅಂಗಡಿಯಲ್ಲಿ ಸಂಭಂದ ಪಟ್ಟ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಅನಧೀಕೃತವಾಗಿ ಲೇವಾದೇವಿ ವ್ಯವಹಾರ ಮಾಡುತ್ತಿರುವದು ಕಂಡು ಬಂದಿರುವದರಿಂದ ಅವನ ಅಂಗಡಿಯ ಮೇಲೆ ದಾಳಿ ಮಾಡಿ ಲೇವಾದೇವಿ ಪಾಸ್‌ಬುಕ್‌ಗಳನ್ನು ಜಪ್ತಿ ಮಾಡಿದ್ದು ಸದರಿ ಯವನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಜೇವರ್ಗಿ ಠಾಣೆ : ಶ್ರೀ. ಯಲ್ಲಪ್ಪ ಸುಬೇದಾರ್ ತಹಸೀಲದಾರರು ಜೇವರಗಿ. ಇವರು ದಿನಾಂಕ 17.07.2015 ರಂದು ಮಧ್ಯಾಹ್ನ ಜೇವರಗಿ ಪಟ್ಟಣದಲ್ಲಿರುವ ಸಂಗಣ್ಣ ತಂದೆ ಗುರಣ್ಣ ಹೂಗಾರ್ ಸಾ|| ವಿಧ್ಯಾನಗರ ಜೇವರಗಿ ಇವರ  ಮನೆಗೆ ಭೇಟಿ ನಿಡಿದಾಗ ಸದರಿ ಸಂಗಣ್ಣ ಇವರು ತಮ್ಮ ಮನೆಯಲ್ಲಿ ಸಂಭಂದ ಪಟ್ಟ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಅನಧೀಕೃತವಾಗಿ ಲೇವಾದೇವಿ ವ್ಯವಹಾರ ಮಾಡುತ್ತಿರುವದು ಕಂಡು ಬಂದಿರುವದರಿಂದ ಅವನ ಮನೆಯಲ್ಲಿನ ರುಜು ಪಡೆದುಕೊಂಡಿರುವ 2 ಖಾಲಿ ಇ-ಸ್ಟ್ಯಾಂಪ್ ಮತ್ತು ಲೇವಾದೇವಿಗೆ ಸಂಭಂದಿಸಿದ 5 ಮೀಟರ್ ಬಡ್ಡಿ ಪಾಸ್‌ಬುಕ್‌ಗಳನ್ನು ಜಪ್ತಿ ಮಾಡಿದ್ದು ಸದರಿ ಯವನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಪರಶುರಾಮ ತಂದೆ ಗುರಣ್ಣ ಗೋಲ್ಲರ ಸಹಕಾರ ಸಂಘಗಳ ಸಹಾಯಕ ನಿಬಂದಕರು ಕಲಬುರಗಿ ಉಪ ವಿಭಾಗ ಕಲಬುರಗಿಯಲ್ಲಿ ದ್ವೀತಿಯ ದರ್ಜೆ ಸಹಾಯಕ  ಅಂತಾ ಇದ್ದು. ಮಾನ್ಯ ಜಿಲ್ಲಾದಿಕಾರಿಗಳು ಕಲಬುರಗಿ ರವರು ನೊಂದಾಯಿತರಲ್ಲದ ಲೇವಾದೇವಿದಾರರು ಹಣದ ಅವಯವಹಾರ ನಡೆಸದಂತೆ ಹಾಗೂ ಅನದಿಕೃತ ಚಟುವಟಿಕೆಗಳು ನಡೆಯದಂತೆ ತಾಲುಕಾವಾರು ತಂಡ ರಚನೆ ಮಾಡಿ, ಅನದಿಕೃತವಾಗಿ ಹಣದ  ಅವ್ಯವಹಾರ ನಡೆಸುತ್ತಿರುವ ಲೇವಾದೇವಿದಾರರ ಅಂಗಡಿಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿದ್ದು ಮಾನ್ಯ ಜಿಲ್ಲಾದಿಕಾರಿಗಳ ಆದೇಶದ ಮೇರೆಗೆ ಹಾಗೂ ಸಹಕಾರ ಸಂಘಗಳ ಸಹಾಯಕ ನಿಭಂದಕರು ಕಲಬುರಗಿ ರವರ ಆದೇಶದ ಮೇರೆಗೆ ಇಂದು ದಿನಾಂಕ  17-07-2015 ರಂದು ಬೆಳಿಗ್ಗೆ 10:00 ಎ ಎಮ್ ಕ್ಕೆ ಅಫಜಲಪೂರ ಪಟ್ಟಣಕ್ಕೆ ಬಂದು ಅಫಜಲಪೂರದ ಮಾನ್ಯ ಗೌಸುದ್ದಿನ ತಹಸಿಲ್ದಾರ ಸಾಹೇಬರು ಮತ್ತು ಮಾನ್ಯ ಸಂಗಮೇಶ ಪಾಟೀಲ ಸಿ.ಪಿ.ಐ ಸಾಹೇಬರು ಹಾಗೂ ಅಫಜಲಪೂರ ಹಾಗು ಸಿಬ್ಬಂದಿ ಕುಡಿಕೊಂಡು ಅಫಜಲಪೂರ ಪಟ್ಟಣದ ಮಾಹಾಂತೇಶ್ವರ ಅಟೋ ಪೈನಾನ್ಸ ಕ್ಕೆ 12:15 ಪಿ ಎಮ್ ಕ್ಕೆ ಬೇಟ್ಟಿ ನೀಡಿ ಪೈನಾನ್ಸದಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿ, ಸದರಿ ಮಾಹಾಂತೇಶ್ವರ ಪೈನಾನ್ಸ ಲೇವಾದೇವಿ ಪರವಾನೆಯನ್ನು ಪರಿಶೀಲಿಸಿ ನೋಡಲಾಗಿ ಸದರಿ  ಪರವಾನಿಗೆ  ದಿನಾಂಕ 09-02-2011 ರಿಂದ ದಿನಾಂಕ 31-03-2015 ರವರೆಗೆ ಇರುತ್ತದೆ. ಸದರಿ ಮಾಹಾಂತೇಶ್ವರ ಪೈನಾನ್ಸನ ಆಡಳಿತ ಮಂಡಳಿಯವರು ಪರವಾನಿಗೆಯನ್ನು ನವಿಕರಣ ಮಾಡಿಸದೆ ಅನದಿಕೃತವಾಗಿ ಪೈನಾನ್ಸ ನಡೆಸಿ ಲೇವಾದೇವಿ ಮಾಡುತ್ತಿದ್ದರಿಂದ, ಪೈನಾನ್ಸಿಗೆ ಸಂಬಂದಪಟ್ಟ ದಾಖಲಾತಿಗಳನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರಿ ಪರಶುರಾಮ ತಂದೆ ಗುರಣ್ಣ ಗೊಲ್ಲರ (SDA) ARCS office Kalaburagi ರವರು ಮಾನ್ಯ ಜಿಲ್ಲಾದಿಕಾರಿಗಳು ಕಲಬುರಗಿ ರವರು ನೊಂದಾಯಿತರಲ್ಲದ ಲೇವಾದೇವಿದಾರರು ಹಣದ ಅವಯವಹಾರ ನಡೆಸದಂತೆ ಹಾಗೂ ಅನದಿಕೃತ ಚಟುವಟಿಕೆಗಳು ನಡೆಯದಂತೆ ತಾಲುಕಾವಾರು ತಂಡ ರಚನೆ ಮಾಡಿ, ಅನದಿಕೃತವಾಗಿ ಹಣದ  ಅವ್ಯವಹಾರ ನಡೆಸುತ್ತಿರುವ ಲೇವಾದೇವಿದಾರರ ಅಂಗಡಿಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿದ್ದು ಮಾನ್ಯ ಜಿಲ್ಲಾದಿಕಾರಿಗಳ ಆದೇಶದ ಮೇರೆಗೆ ಹಾಗೂ ಸಹಕಾರ ಸಂಘಗಳ ಸಹಾಯಕ ನಿಭಂದಕರು ಕಲಬುರಗಿ ರವರ ಆದೇಶದ ಮೇರೆಗೆ ಇಂದು ದಿನಾಂಕ 17-07-2015 ರಂದು ಬೆಳಿಗ್ಗೆ ಅಫಜಲಪೂರ ಪಟ್ಟಣಕ್ಕೆ ಬಂದು ಅಫಜಲಪೂರದ ಮಾನ್ಯ ಗೌಸುದ್ದಿನ ತಹಸಿಲ್ದಾರ ಸಾಹೇಬರು ಮತ್ತು ಮಾನ್ಯ ಸಂಗಮೇಶ ಪಾಟೀಲ ಸಿ.ಪಿ.ಐ ಸಾಹೇಬರು ಹಾಗೂ ಅಫಜಲಪೂರ ಠಾಣೆಯ ಸಿಬ್ಬಂದಿ  ಕೂಡಿ ತಹಸಿಲ ಕಾರ್ಯಾಲಯದಿಂದ ಹೊರಟು, ಅಫಜಲಪೂರ ಪಟ್ಟಣದ ವೈಭವ ಲಿಜೀಂಗ (ರಿ) ಪೈನಾನ್ಸ ಕ್ಕೆ 3:30 ಪಿ ಎಮ್ ಕ್ಕೆ ಬೇಟ್ಟಿ ನೀಡಿ ಪೈನಾನ್ಸದಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿ, ಸದರಿ ವೈಭವ ಲೀಜಿಂಗ (ರಿ) ಲೇವಾದೇವಿ ಪರವಾನೆಯನ್ನು ಪರಿಶೀಲಿಸಿ ನೋಡಲಾಗಿ ಸದರಿ  ಪರವಾನೆ ದಿನಾಂಕ 09-02-2011 ರಿಂದ ದಿನಾಂಕ 31-03-2015 ರವರೆಗೆ ಇರುತ್ತದೆ. ಸದರಿ ವೈಭವ ಲಿಜೀಂಗ (ರಿ) ಪೈನಾನ್ಸನ ಆಡಳೀತ ಮಂಡಳಿಯವರು ಪರವಾನಿಗೆಯನ್ನು ನವಿಕರಣ ಮಾಡಿಸದೆ ಅನದಿಕೃತವಾಗಿ ಪೈನಾನ್ಸ ನಡೆಸಿ ಲೇವಾದೇವಿ ಮಾಡುತ್ತಿದ್ದರಿಂದ, ಪೈನಾನ್ಸಿಗೆ ಸಂಬಂದಪಟ್ಟ ದಾಖಲಾತಿಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

17 July 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ  16-07-2015 ರಂದು ಸಾಯಂಕಾಲ ಮುದಬಾಳ ಕ್ರಾಸ್ ಹತ್ತಿರ ಜೇವರಗಿ ಶಹಪಾರು ರೋಡಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.33ಎಫ್140 ನೇದ್ದರ ಚಾಲಕನು ತನ್ನ ಬಸ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.33ಎಫ್201 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಎರಡು ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಾದಾ ಮತ್ತು ಭಾರಿ ಗಾಯಪಡಿಸಿರುತ್ತಾರೆ ಅಂತಾ ಶ್ರೀ ಬಾಲಪ್ಪ ತಂದೆ ಗುಂಡಪ್ಪ ಪಟ್ಟೆದಾರ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ಸುರಪುರ ಡಿಪೋ ಸಾ : ಹೆಗ್ಗಣಿ ತಾ : ಸುರಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿ ಲೇವಾ ದೇವಿ ವ್ಯವಹಾರ ಮಾಡುತ್ತಿದ್ದ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ: 16/07/2015 ರಂದ ಮುಂಜಾನೆ  ಬೆಳಮಗಿ ತಾಂಡದ ಕಾಂತು ಪವಾರ ಎಂಬ ವ್ಯಕ್ತಿಯು ಬೆಳಮಗಿ ಗ್ರಾಮದ ರೈತರಿಗೆ, ಸಾರ್ವಜನಿಕರಿಗೆ ಸಾಲ ರೂಪದಲ್ಲಿ ಹಣವನ್ನು ಕೊಟ್ಟು ಮೀಟರ್ ಬಡ್ಡಿ ರೂಪದಲ್ಲಿ ಹಣವಸೂಲಿ ಮಾಡುತ್ತಿದ್ದ ಬಗ್ಗೆ ಮತ್ತು ಸದರಿವನು ಇಂದು ಮೀಟರ್ ಬಡ್ಡಿ ವಸೂಲಿಗಾಗಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಬಾಂಡ ಸಮೇತವಾಗಿ ನಿಂತಿರುವ ಬಗ್ಗೆ ಖಚಿತವಾದ ಬಾತ್ಮಿ ಮೇರೆಗೆ ಪಿ ಎಸ್ ಐ ನರೋಣಾ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಬಂದ ಸ್ಥಳವಾದ ಬೆಳಮಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ, ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಒಂದು ಕೈಚೀಲ ಹಿಡಿದುಕೊಂಡು ನಿಂತಿದ್ದು ನಾನು ಮತ್ತು ಸಿಬ್ಬಂದಿವರು ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ  ಮಾಡಿ ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕಾಂತು ತಂ ದೇವಲು ಪವಾರ ಸಾ:ಬೆಳಮಗಿ ತಾಂಡ ನಂ 1 ಅಂತಾ ತಿಳಿಸಿದನು ಅವನ ಹತ್ತಿರ ಇರುವ ಬ್ಯಾಗನ್ನು ಚೆಕ್ ಮಾಡಲಾಗಿ ಬ್ಯಾಗಿನಲ್ಲಿ ಒಂದು ಪ್ಲಾಸ್ಟೀಕ್ ಚೀಲದಲ್ಲಿ ನೂರು ರೂಪಾಯಿ ಬೆಲೆಯ ಒಂದು ಬಾಂಡ ಪೇಪರ್ ಇದ್ದು ಇದರ ಮೇಲೆ ಸಿದ್ಧಾರೂಡ ಮುರಡ, ರಾಜಕುಮಾರ ಮುರಡ ಇಬ್ಬರು ಸಾ:ಬೆಳಮಗಿ ಇವರಿಗೆ ಕಾಂತು ಈತನು ದಿನಾಂಕ: 30/03/2009 ರಂದು 5,50,000/- ರೂಪಾಯಿಗಳನ್ನು ಶೇಕಡಾ 3% ರಂತೆ ಬಡ್ಡಿ ಠರಾವು ಮಾಡಿ ಸಾಲಕೊಟ್ಟಿರುವ ಬಗ್ಗೆ ವಿಷಯವನ್ನು ನಮೂದಿಸಿದ್ದು ಮತ್ತು  ಸದರಿ ಬಾಂಡ್ ಮೇಲೆ ಹಣ ಪಡೆದವರ ರುಜು ಹಾಗೂ ಸಾಕ್ಷಿಧಾರರ ರುಜು ಸಹ ಇರುತ್ತದೆ. ನಂತರ ನಾನು ಸದರಿ ವ್ಯಕ್ತಿಯನ್ನು ವಿಚಾರಿಸಲಾಗಿ ಬಡ್ಡಿ ವ್ಯವಾಹರ ಮಾಡಲು ತನ್ನ ಹತ್ತಿರ ಸರ್ಕಾರದಿಂದಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಯವರಿಂದಾಗಲಿ ಯಾವುದೇ ಪರವಾನಿಗೆ ಪಡೆದಿರುವುದಿಲ್ಲ ಕಾನೂನು ಭಾಹಿರವಾಗಿ ಅನಾಧಿಕೃತವಾಗಿ ಜನರಿಗೆ / ರೈತರಿಗೆ ಹಣವನ್ನು ಸಾಲವಾಗಿ ಕೊಟ್ಟು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳ ಬಡ್ಡಿದರಕಿಂತಲು ಹೆಚ್ಚಿನ ಬಡ್ಡಿಧರ ಅಂದರೆ ಶೇಕಡಾ 3% ರಂತೆ ಮೀಟರ್ ಬಡ್ಡಿ ರೂಪದಲ್ಲಿ ಹಣ ವಸೂಲಿ ಮಾಡುತ್ತೇನೆ ಮತ್ತು ದಿನಾಂಕ: 30/03/2009 ರಿಂದ ಇಲ್ಲಿಯವರೆಗೆ ಸಿದ್ಧಾರೂಡ ಹಾಗೂ ರಾಜಕುಮಾರ ಇವರಿಂದ ಮೀಟರ್ ಬಡ್ಡಿ ರೂಪದಲ್ಲಿ ಹಣವನ್ನು ವಸೂಲಿಮಾಡಿರುತ್ತೇನೆಂದು ತಿಳಿಸಿದನು. ಸದರಿಯವನನ್ನು ವಶಕ್ಕೆ ತಗೆದುಕೊಂಡು ಮರಳಿ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

ರಾಘವೇಂದ್ರ ನಗರ ಠಾಣೆ : ಶ್ರೀ ಟಿ.ಫೈರೋಜ ಸಹಕಾರ ಸಂಘಗಳ ಉಪ-ನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು ಕಲಬುರಗಿ ರವರು ಇತ್ತೀಚಿಗೆ ಫೈನಾನ್ಸದಾರರು ಹಾಗೂ ಬಡ್ಡಿ ವ್ಯವಹಾರದಾರರು ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಸಾಲದ ರೂಪದಲ್ಲಿ ಹಣ ಕೊಟ್ಟು ಮೀಟರ ಬಡ್ಡಿ ರೂಪದಲ್ಲಿ ಹಣ ವಸೂಲು ಮಾಡಿತ್ತಿದ್ದು ಈ ಬಗ್ಗೆ ಅನೇಕ ಪ್ರಕರಣಗಳು ಘಟಿಸುತ್ತಿರುವದರಿಂದ ನಾನು ನನ್ನ ಮೇಲಾಧಿಕಾರಿಯವರ ಆದೇಶದಂತೆ ಇಂತಹ ಮೀಟರ್‌ ಬಡ್ಡಿ ನಡೆಸುತ್ತಿರುವ ಜನರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ದಿನಾಂಕ: 16-07-2015 ರಂದು ಮಧ್ಯಾನ 2 ಗಂಟೆ ಸುಮಾರಿಗೆ ಜೆ.ಆರ್‌ ನಗರ ಬಡಾವಣೆಯಲ್ಲಿರುವ ಶ್ರೀ ನಂದಿ ಬಸವೇಶ್ವರ ಫೈನಾನ್ಸನಲ್ಲಿ ಜನರಿಗೆ ಸಾಲ ಬಡ್ಡಿಯಿಂದ ಕೊಟ್ಟು ಅವರಿಂದ ಅನೇಕ ಬ್ಲ್ಯಾಂಕ್‌ ಚಕಗಳು ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು  ನಾನು ರಾಘವೇಂದ್ರ ನಗರ ಪೊಲೀಸ ಠಾಣೆಗೆ ಭೇಟಿ ನೀಡಿ ರಾಘವೇಂದ್ರ ನಗರ ಪೊಲೀಸ ಠಾಣೆಯ ಪಿ.ಎಸ್‌.ಐ ಶ್ರೀ ಡಬ್ಲೂ. ಹೆಚ್‌. ಕೊತ್ವಾಲ್‌ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲೇವಾದೇವಿ ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ಸದರಿ ಲೇವಾದೇವಿ ಸಂಸ್ಥೆಯ ಪಾಲುದಾರ ಸಿದ್ದಪ್ಪಾ ಪಾಟೀಲ ಮತ್ತು ರಾಜೇಂದ್ರ ಪಾಟೀಲ ಇವರು ಹಾಜರಿದ್ದು ಅವರ ಮುಂದೆ ಟೇಬಲ ಮೇಲೆ ನೋಡಲು ಸಾರ್ವಜನಿಕರಿಗೆ ಸಾಲದ ರೂಪದಲ್ಲಿ ಹಣ ಕೊಟ್ಟಿರುವ ಬಗ್ಗೆ ಎಮ್‌.ಎಸ್‌‌.ಶ್ರೀ ನಂದಿ ಬಸವೇಶ್ವರ ಫೈನಾನ್ಸ ಕಾರ್ಪೋರೇಶನ (ರಿ) ಪ್ಲಾಟ.ನಂ.20 ಶಾಪ ನಂ.02 ಜೆ.ಆರ್‌ ನಗರ ಖಾದ್ರಿಚೌಕ ಅಂತಾ ಬರೆದಿದ್ದು ಅದರ ಮೇಲೆ ತೇಜೆರಾವ ಶಾಂತಪ್ಪಾ ಇವರಿಗೆ ಹಣ ಕೊಟ್ಟಿರುವ ಬಗ್ಗೆ ನಮೂದುಮಾಡಿ ಸಹಿ ಪಡೆದುಕೊಂಡಿದ್ದು ಮತ್ತು PRONOTE ಅಂತಾ ಒಂದು ಖಾಲಿ ರಸೀದಿ ಮೇಲೆ ಸಹಿ ಪಡೆದಿದ್ದು ಅಲ್ಲದೆ ಅದೆ ಹೆಸರಿನ ಪ್ರಾಮಿಸರಿ ನೋಟ ಅದರ ಮೇಲೆ ಕೂಡ ಏನು ಬರೆಯದೆ ಸಹಿ ಪಡೆದುಕೊಂಡಿದ್ದು ಇರುತ್ತದೆ. ಮತ್ತು ಕಾರ್ಪೋರೇಶನ ಬ್ಯಾಂಕಿನ ಚಕ್‌.ನಂ.394252, 394253,  AXIS BANK LTD ಚಕ್‌ ನಂ.027290, ಸ್ಟೇಟ್‌‌ ಬ್ಯಾಂಕ ಆಫ್‌ ಹೈದ್ರಾಬಾದ ಚಕ್‌.ನಂ.475179, ಕೆ.ಜಿ.ಬಿ ಬ್ಯಾಂಕ ಚಕ್‌.ನಂ.659126, 167387 ಮತ್ತು 659127 ಸ್ಟೇಟ್‌‌ ಬ್ಯಾಂಕ ಆಫ ಇಂಡಿಯಾ ಚಕ್‌ ನಂ.858414, ಗಣೇಶ ಕೋ.ಆಪರೇಟಿವ್‌ ಬ್ಯಾಂಕ ಚಕ್‌ ನಂ.608126, ಛತ್ರಪತಿ ಶಿವಾಜಿ ಬ್ಯಾಂಕ್‌ ಚಕ ನಂ.044045, 044044 ಎಸ್‌.ಡಿ.ಎಫ್‌‌.ಸಿ ಬ್ಯಾಂಕ್‌ ಚಕ.ನಂ.438120, 438119, ವಿಶ್ವೇಶ್ವರಯ್ಯಾ ಕೋ.ಆಪರೇಟಿವ ಬ್ಯಾಂಕ ಚಕ ನಂ.003536, 107172, ವಿಜಯ ಬ್ಯಾಂಕ ಚಕ.ನಂ.865024 ಬ್ಯಾಂಕ ಆಫ ಬರೋಡಾ ಚಕ.ನಂ.074317, ಬಸವೇಶ್ವರ ಸಹಕಾರ ಬ್ಯಾಂಕ ಚಕ.ನಂ.0020770 ಇವುಗಳು ಇದ್ದು ಅವುಗಳ ಮೇಲೆ ಸಾಲ ಪಡೆದವರ ಸಹಿ ಪಡೆದುಕೊಂಡಿರುತ್ತಾರೆ. ಚಕಗಳು ಖಾಲಿ ಇರುತ್ತವೆ. ಸದರಿಯವರು ಸಾಲಗಾರರಿಗೆ ಸಾಲಕೊಟ್ಟು ಸಹಿ ಮಾಡಿದ ಬ್ಲ್ಯಾಂಕ್‌ ಚಕ್‌ಗಳನ್ನು ಪಡೆದುಕೊಂಡು ಮೋಸ ಮಾಡುತ್ತಿದ್ದು ಸದರಿ ಚಕ್‌ಗಳನ್ನು ನಾನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಮರಳಿ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀಮಂತ ತಂದೆ ಬಸಣ್ಣಾ ಕೊಲ್ಹಾರ ರವರ ತಮ್ಮನಾದ ಶ್ರೀಶೈಲ ತಂದೆ ಬಸಣ್ಣಾ ಕೊಲ್ಹಾರ ಇವನು ಸುಮಾರು  5-6 ತಿಂಗಳಿಂದ  ತಲೆ ಸರಿಯಾಗಿ ಇರಲಿಲ್ಲಾ ಅವನಿಗೆ ಧಾರವಾಡ ಆಸ್ಪತ್ರೆಯಲ್ಲಿ ಉಪಚಾರ ಮಾಡಿದ್ದು ಅವನಿಗೆ ಆರಾಮವಾಗಿರಲಿಲ್ಲಾ ಅಂದಿನಿಂದಅವನು ಒಂದು ತಹರ ಮಾನಸಿಕನಾಗಿ ತಿರುಗಾಡುತ್ತಿದ್ದು ದಿನಾಂಕ:14/7/2015 ರಂದು ನಾನು ಧಾರವಾಡಕ್ಕೆಅವನ ಸಲುವಾಗಿ ಔಷದ ತರಲು ಹೊಗಿದ್ದೆ ನನ್ನ ತಮ್ಮ ಅಂದು ಮನೆಯಲ್ಲಿ ಇದ್ದನು  ನಂತರ ನನ್ನ ಹೆಂಡತಿ ಮತ್ತು  ಅವನ  ಹೆಂಡತಿ ಹೊಲಕ್ಕೆ  ಹೊಗಿದ್ದು ಅವನು ಮನೆಯಲ್ಲಿ ಒಬ್ಬನೆ ಇದ್ದಾಗ  2ಪಿ.ಎಂ.ಕ್ಕೆ  ಮೈ ಮೇಲೆ ಸಿಮೆ ಎಣ್ಣಿ ಸುರಿದುಕೊಂಡು  ಮೈಗೆಬೆಂಕಿ ಹಚ್ಚಿಕೊಂಡಿದ್ದು ಆಗ ನಮ್ಮ ಮನೆಯ ಬಾಜು ಇರುವಶಬ್ಬಿರ ಮೈನಾಳ ನೋಡಿ ಬಾಗಿಲು ತೆರೆದು ನನಗೆ  2-30 ಪಿ.ಎಂಕ್ಕೆ  ಫೊನಮಾಡಿ  ಹೇಳಿದರು  ನಂತ್ರ ನನ್ನ ಹೆಂಡತಿ ಮತ್ತು ನಮ್ಮ ತಮ್ಮನ ಹೆಂಡತಿ ನಿರ್ಮಲಾ ಇವರಿಗೆ ಫೋನಮಾಡಿ ಹೇಳಿದ್ದು ನಂತ್ರ  ಅವರು ಮನೆಗೆ ಬಂದಾಗ ನನ್ನ ತಮ್ಮನನ್ನು ಜೀಪಿನಲ್ಲಿ ಹಾಕಿಕೊಂಡು  ಜೇವರ್ಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ನಂತರkಕಲಬುರ್ಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ನನ್ನ  ತಮ್ಮ ಶ್ರೀಶೈಲ ಇತನನ್ನು ನನ್ನ ಮಗ ಅಮೊಗಸಿದ್ದ ಮತ್ತು ಸಿದ್ದುಕೊಲ್ಹಾರ ಇವನು ತಂದು ಸೇರಿಕೆ ಮಡಿದರು ನನ್ನ ತಮ್ಮ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತತಾ ಇಂದು ದಿನಾಂಕ;16/7/2015ರಂದು ಬೆಳಿಗ್ಗೆ 4-30  ಎ.ಎಂ.ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಕೊಳದಪ್ಪಾ ತಂದೆ ಬಸಪ್ಪಾ ಬಾರಕೇರ ಉ:ಕೆ.ಎಸ್‌.ಆರ್‌.ಟಿ.ಸಿ ಡಿಪೋ.ನಂ.03  ವಿದ್ಯಾನಗರ ಕಲಬುರಗಿ ಸಾ:ಮರೋಳ ತಾ:ಹುನಗುಂದ ಜಿ:ಬಾಗಲಕೋಟ ಹಾ:ವ: ವಿದ್ಯಾನಗರ ಕಲಬುರಗಿ ಇವರು ದಿನಾಂಕ: 15-03-2015 ಶರಣಬಸವೇಶ್ವರ ಜಾತ್ರೆಯಲ್ಲಿ ಶರಣಬಸವೇಶ್ವರ ಗುಡಿಯ ಆವರಣದ ಒಳಗೆ ತನ್ನ ದ್ವಿಚಕ್ರ ವಾಹನ ಸುಜುಕಿ ಕೆಎ-28 ಎಲ್‌‌-0434 ನೇದ್ದನ್ನು ನಿಲ್ಲಿಸಿ ದೇವರ ದರ್ಶನ ಪಡೆದುಕೊಂಡು ಮರಳಿ ನಾನು ನನ್ನ ಮೋಟರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಇರಲಿಲ್ಲ. ಆಗ ನಾನು ಜಾತ್ರಾ ವಿಶೇಷ ಹೊರ ಪೊಲೀಸ ಠಾಣೆಗೆ ಹೋಗಿ ನನ್ನ ವಾಹನ ಕಾಣಿಯಾದ ಬಗ್ಗೆ ತಿಳಿಸಿರುತ್ತೇನೆ. ಸದರಿ ವಾಹನವನ್ನು ಇಲ್ಲಿಯವರೆಗೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲಾ ಕಾರಣ ಮಾನ್ಯರು ನನ್ನ ಸುಜುಕಿ ಮೋಟಾರ ಸೈಕಲ ನಂ.ಕೆಎ-28 ಎಲ್‌‌-0434 ಅ.ಕಿ.15000/-ರೂ ನೇದ್ದನ್ನು ಪತ್ತೆ ಮಾಡಿಕೊಡಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಮಹ್ಮದ ವಾಸೀಮ್ ತಂದೆ ಮಹ್ಮದ ಇಸಾಮೋದ್ದಿನ್ ಸಾಃಜಾಮಿಯಾ ಮಜೀದ ಹತ್ತೀರ ಮೋಮಿನಪೂರ ,ಮಹಾಗಾಂವ  ಕಲಬುರಗಿ ರವರು ದಿನಾಂಕಃ 09.07.2015 ರಂದು ನನ್ನ ಕೆಲಸ ಇದ್ದ ಪ್ರಯುಕ್ತ ಸಾಯಂಕಾಲ 4.00 ಗಂಟೆ ಸುಮಾರಿಗೆ ಚೈನಾ ಕಾಂಪ್ಲೇಕ್ಸ್ ಮುಂದೆ ನನ್ನ ಹೋಂಡಾ ಶೈನ್ ಮೊಟಾರ ಸೈಕಲ ನಂ ಕೆಎ 32  ವಿ0744 ನೇದ್ದನ್ನು ನಿಲ್ಲಿಸಿ ಸೈಡ್ ಲಾಕ್ ಮಾಡಿ ಹೊಗಿದ್ದು ನಂತರ ರಾತ್ತಿ 8.00ಗಂಟೆ ಸುಮಾರಿಗೆ ಬಂದು ನೋಡಿದಾಗ ನಾನು ನಿಲ್ಲಿಸಿದ ಜಾಗೆಗೆ  ಹೋಗಿ ನೋಡಲಾಗಿ ಮೋಟಾರ ಸೈಕಿಲ್‌‌  ಇರಲ್ಲಿಲ ನಂತರ ಸುತ್ತು-ಮುತ್ತಿನ ಜನರಿಗೆ ವಿಚಾರಿಸಿದ್ದು ಯಾವುದೇ ಉಪಯುಕ್ತ ಮಾಹಿತಿ ಸಿಕ್ಕಿರುವದಿಲ್ಲ. ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅದರ ಅಂಜು ಕಿಮ್ಮತ್ತು 40,000/- ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.