POLICE BHAVAN KALABURAGI

POLICE BHAVAN KALABURAGI

13 July 2015

Kalaburagi District Reported Crimes

ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 12-072015 ರಂದು ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದದನ್ನು  ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ ಒಟ್ಟು  4800/- ರೂ ಕಿಮ್ಮತ್ತಿ ಮಧ್ಯ ತುಂಬಿದ ಬಾಟಲಿಗಳಿರುವ ಎರಡು ರಟ್ಟಿನ ಬಾಕ್ಷ್‌ ಜಪ್ತಿ ಮಾಡಿಕೊಂಡು ಆರೋಪಿ ಕರಣಪ್ಪ ತಂದೆ ವೀರಣ್ಣ ಅಂಗಡಿ ಸಾ|| ಆಂದೋಲಾ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 03-07-2014 ರಂದು ಶ್ರೀ ಬಸವರಾಜಯ್ಯ ತಂದೆ ಶಿವಶರಣಯ್ಯ ಸ್ಥಾವರಮಠ್ ಸಾ : ಬಿರಾಳ ಬಿ  ರವರು ತಮ್ಮ ಮನೆಯ ಪಕ್ಕದಲ್ಲಿ ಹಾಕಿದ್ದ ಕಲ್ಲುಗಳನ್ನು ಶಿವಪುತ್ರಪ್ಪ ತಂದೆ ಕರಣಪ್ಪ ಆಂದೋಲಾ ತೆಗೆದುಕೊಂಡು ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಫಿರ್ಯಾದಿಯ ತಾಯಿ ಇವಳು ಕಲ್ಲುಗಳು ನಮ್ಮವು ಇದ್ದು ಏಕೆ ತೆಗೆದುಕೊಂಡು ಹೋಗುತ್ತಿದ್ದಿ ಅಂತ ಅವನ ಮುಂದೆ ಹೋಗಿ ಕೇಳಿದಾಗ ಆರೋಪಿತನು ಫಿರ್ಯಾದಿಯ ತಾಯಿಗೆ ಕೂದಲು ಹೀಡಿದು ಎಳೆದಾಡಿ ನೂಕಿಸಿಕೊಟ್ಟಾಗ ಅವಳು ಕಲ್ಲಿನ ಮೇಲೆ ಬಿದ್ದು ಬಲಗಾಲಿನ ತೊಡೆಗೆ ಗುಪ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ತಯ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನಾಗಮ್ಮಾ ಗಂಡ ಶ್ರೀಮಂತ ಕೆರಮಗಿ ಸಾ:ಅಷ್ಟಗಾ ತಾ:ಜಿ:ಕಲಬುರಗಿ ಇವರ ಗಂಡನಾದ ಶ್ರೀಮಂತನಿಗೆ ಅರ್ಜುನ ಆಲಗೂಡ, ಶ್ತೀಮಂತ ಅಂಬೋಡಿ, ರಾಜಕುಮಾರ ಬೆನಕನಳ್ಳಿ ಇವರುಗಳು ಕೈಗಡಾ ಮತ್ತು ಸಾಲದಂತೆ ಹಣ ಕೊಟ್ಟು ಸದರಿಯವರು ದಿನಾಲು ತಮ್ಮ ಹಣ ಮರಳಿ ಕೊಡು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಅವರ ತಾಪತಾಳಲಾರದೇ ದಿನಾಂಕ:-10/07/2015 ರಂದು ಬೆಳಿಗ್ಗೆ 09:30 ಗಂಟೆಯಿಂದ 11:30 ಗಂಟೆಯ ಮದ್ಯದ ಅವದಿಯಲ್ಲಿ ಕಲ್ಲಹಂಗರಗಾ-ಅಷ್ಟಗಾ ಗ್ರಾಮದ ಸಿಮಾಂತರ ಶರಣಬಸಪ್ಪ ಮತ್ತು ಅಂಬಾರಾಯ ಇವರ ಹೋಲದ ಮದ್ಯದ ನಾಲಿಯಲ್ಲಿ ಇದ್ದ ಬೇವಿನ ಗಿಡಕ್ಕೆ    ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ  ಸಲ್ಲಿಸದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ. ಮಂಜುನಾಥ ತಂದೆ ಯಮನೂರಪ್ಪ ಜಂತಕಲ್ ಸಾ:ಹೊಸಕೇರಿ. ತಾ:ಗಂಗಾವತಿ, ಜಿಲ್ಲಾ:ಕೊಪ್ಪಳ. ಅಳಿಯ, ಮುರಳಿಧರ ತಂದೆ ಯಲ್ಲಪ್ಪ ಗೊರಬಾಳ ಮಳಖೇಡದ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಇಂಜಿನಿಯರ್ ಅಂತ ಕೆಲಸ ಮಾಡಿಕೊಂಡಿದ್ದ. ದಿನಾಂಕ 12-07-2015 ರಂದು ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ನನ್ನ ಅಳಿಯನೊಂದಿಗೆ ಕೆಲಸ ಮಾಡುವ ರಾಹುಲ್ ಇವರು ಫೋನ ಮಾಡಿ ನನಗೆ ತಿಳಿಸಿದ್ದೇನೆಂದರೆ, ನಿಮ್ಮ ಅಳಿಯ ಮುರಳಿಧರ ಹಾಗೂ ಆತನ ಗೆಳೆಯ ‘ಶ್ರವಣಕುಮಾರ’ ಇಬ್ಬರೂ ಕೂಡಿ ಮೋಟಾರು ಸೈಕಲ್ ನಂ-KA-32-EE-3943 ನೇದ್ದರ ಮೇಲೆ ಸೇಡಂಕ್ಕೆ ಹೋಗಿ ಮರಳಿ ಮಳಖೇಡಕ್ಕೆ ರಾಜ್ಯ ಹೆದ್ದಾರಿ-10 ರ ಮೇಲೆ ಬರುವಾಗ, ಶೆಟ್ಟಿ ಹೂಡಾ ಗ್ರಾಮದ ಹತ್ತಿರ ಇರುವ ‘ದಾನಮ್ಮ ಗುಡಿ’ಯ ಹತ್ತಿರ ಮುಖ್ಯ ರಸ್ತೆಯ ಮೇಲೆ ಅಪಘಾತವಾಗಿ, ಭಾರಿ ರಕ್ತಗಾಯದಿಂದ ಅವರಿಬ್ಬರೂ ಸ್ಥಳದಲ್ಲಿಯೆ ಮರಣಹೊಂದಿರುತ್ತಾರೆ.ಅಂತ ತಿಳಿಸಿದಾಗ ನಾನು   ಇಂದು ಸೇಡಂ ಸರಕಾರಿ ಆಸ್ಪತ್ರೆ ಬಂದು ನೋಡಲು ನನ್ನ ಅಳಿಯನ ಶವ ಗುರುತಿಸಿದ್ದು ಅವನಿಗೆ ಬಲಹಣೆಗೆ, ಕಣ್ಣಿನ ಕೆಳಗೆ, ರಕ್ತಗಾಯ ಹಾಗೂ ತಲೆಯ ಹಿಂದೆ, ಬಲಕಪಗಂಡಕ್ಕೆ ಭಾರಿ ರಕ್ತಗಾಯ ಹಾಗೂ  ಬಲಗಾಳ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು ಇರುತ್ತದೆ. ಮೃತ ಶ್ರವಣಕುಮಾರ ತಂದೆ ಬಸವರಾಜ ಹೂಗಾರ ಇತನಿಗೆ ನೋಡಲು ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಂತೆ ಕಾಣುತ್ತದೆ ಮತ್ತು ಬಾಯಿಗೆ ರಕ್ತಗಾಯವಾಗಿ ಹಲ್ಲು ಮುರಿದಂತೆ ಕಾಣುತ್ತದೆ ಮತ್ತು ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಇಬ್ಬರು ಮೇತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 12-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರಗಳಲ್ಲಿ  ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಕಾಂತ ಸಿಹೆಚ್ ಸಿ-449 ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ ಹತ್ತಿರ ಇದ್ದಾಗ ಎದುರು ಗಡಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿದ್ದವು, ಸದರಿ ಎರಡು ವಾಹನದ ಚಾಲಕರು ನಮ್ಮನ್ನು ನೋಡಿ ತಮ್ಮ ಟಿಪ್ಪರ ಹಾಗೂ ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಟಿಪ್ಪರ ಹಾಗೂ ಟ್ರಾಕ್ಟರ ಚಕ್ಕ ಮಾಡಲು ಸದರಿ ಅವುಗಳಲ್ಲಿ  ಮರಳು ಇತ್ತು, ಮತ್ತು ಸದರಿ ಟಿಪ್ಪರ ನಂ ನೋಡಲಾಗಿ ಕೆಎ-20 ಎಬಿ-9959 ಅಂತ ಇದ್ದು ಮತ್ತು  ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ WXCA40906089195 ಇಂಜಿನ ನಂ 43.3008/STA00398 ಅಂತಾ ಇದ್ದವು, ಸದರಿ ಟಿಪ್ಪರ ಹಾಗೂ ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 8,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟಿಪ್ಪರ ಹಾಗೂ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ. 

12 July 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರಿ ಮಲ್ಲಪ್ಪ ತಂದೆ ಶರಣಪ್ಪ ಚಿಕ್ಕಮಣೂರ ಸಾ||ಮಣೂರ ರವರ  ಅಣ್ಣ ಸತ್ಯಪ್ಪ @ ಶಿವರಾಯ ಮೃತ ಪಟ್ಟಿರುತ್ತಾನೆ. ನಮ್ಮ ಎರಡನೆ ಅಕ್ಕ ಪಾರ್ವತಿ ಇವಳಿಗೆ ಅಕ್ಕಲಕೋಟ ತಾಲೂಕಿನ ಮೋಸಲಗಿ ಗ್ರಾಮದ ಹಣಮಂತ ಕೋಳಿ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಆಕೆಗೆ ಗಂಡ ಮತ್ತು ಮಕ್ಕಳು ಮೃತ ಪಟ್ಟಿದ್ದರಿಂದ ಸುಮಾರು 30 ವರ್ಷಗಳ ಹಿಂದೆ ನಮ್ಮ ಅಕ್ಕ ಪಾರ್ವತಿ ನಮ್ಮೂರಿಗೆ ಬಂದು ನಮ್ಮ ಮನೆಯಲ್ಲಿ ಉಳಿದುಕೊಂಡಿರುತ್ತಾಳೆ. ನಮ್ಮ ಹಿರಿಯರ ಆಸ್ತಿ 12 ಎಕರೆ ಬಾಬಾನಗರ ಹತ್ತಿರ ಇರುತ್ತದೆ. ನನ್ನ ಅಣ್ಣ ಸತ್ಯಪ್ಪ @ ಶಿವರಾಯ  ಮತ್ತು ನನ್ನ ತಮ್ಮ ಶರಣಪ್ಪ @ ಬಸವರಾಜ ಇವರು ಸರ್ಕಾರಿ ಕೆಲಸದಲ್ಲಿ ಇದ್ದುದರಿಂದ ತಮ್ಮ ಪಾಲಿಗೆ ಬಂದಿರುವ ಜಮೀನಿನಲ್ಲಿ ಇಬ್ಬರು ಒಂದೊಂದು ಎಕರೆ ನಮ್ಮ ಅಕ್ಕ ಬದುಕಿರುವ ವರೆಗೆ ಅವಳ ಉಪ ಜೀವನಕ್ಕಾಗಿ ಕೊಟ್ಟಿರುತ್ತಾರೆ. ಅವಳ ಹೆಸರಿನಲ್ಲಿ ಜಮೀನಿಗೆ ಸಂಭಂದಿಸಿದಂತೆ ಯಾವುದೆ ದಾಖಲಾತಿಗಳು ಅವಳ ಹೆಸರಿನಲ್ಲಿ ಇರುವುದಿಲ್ಲ. ನಮ್ಮೇಲ್ಲರ ಜಮೀನು ನೋಡಿಕೊಳ್ಳಲು ನಮ್ಮ ಅಕ್ಕ ಹೊಲದಲ್ಲಿರುವ ಮೆಟಗಿಯಲ್ಲಿ ವಾಸವಾಗಿರುತ್ತಾಳೆ. ನಾನು ನನ್ನ ಹೆಂಡತಿ ಮಕ್ಕಳು ಮಣೂರ ಗ್ರಾಮದಲ್ಲಿರುವ ನಮ್ಮ ಮನೆಯಲ್ಲಿ ವಾಸವಾಗಿರುತ್ತೇವೆ. ಸತ್ಯಪ್ಪ @ ಶಿವರಾಯ ಮತ್ತು ಅವನ ಹೆಂಡತಿ ಇಬ್ಬರು ಮೃತ ಪಟ್ಟಿದ್ದರಿಂದ ಅವರ ಮಗ ಮಹೇಶನಿಗೆ ಸಾವಳಗಿ ಸರ್ಕಾರಿ ಶಾಲೆಯ ಪ್ಯೂನ ಅಂತಾ ನೌಕರಿ ಇದ್ದುದರಿಂದ ಅವನು ಸಾವಳಗಿ ಗ್ರಾಮದಲ್ಲಿ ವಾಸವಾಗಿರುತ್ತಾನೆ. ನನ್ನ ಪಾಲಿಗೆ ಬಂದಿರುವ ಜಮೀನಿನಲ್ಲಿ ಕಬ್ಬು ಬೆಳೆದಿದ್ದು ದಿನಾಲು ಹೊಲಕ್ಕೆ ಹೋಗಿ ಹೊಲದಲ್ಲಿನ ಕೆಲಸ ಮುಗಿಸಿಕೊಂಡು ಸಾಯಂಕಾಲ ಮನೆಗೆ ಬರುತ್ತೇನೆ. ದಿನಾಂಕ 10-07-2015 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿ ಕಬ್ಬಿನ ಬೇಳೆಗೆ ನೀರು ಉಣಿಸಿ ಸಾಯಂಕಾಲ 7:00 ಗಂಟೆ ಸುಮಾರಿಗೆ ಹೊಲದಲ್ಲಿ ವಾಸವಾಗಿರುವ ನಮ್ಮ ಅಕ್ಕ ಪಾರ್ವತಿಗೆ ಮಾತಾಡಿಸಿ ಮನೆಗೆ ಬಂದಿರುತ್ತೇನೆ. ಇಂದು ದಿನಾಂಕ 11-07-2015 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋದಾಗ ನಮ್ಮ ಅಕ್ಕ ಪಾರ್ವತಿ ಇವಳು ನಮ್ಮ ಹೊಲಕ್ಕೆ ಹೊಂದಿಕೊಂಡಿರುವ ಮತ್ತು ಹೊಲದಲ್ಲಿನ ಮೇಟಗಿಯ ಮುಂದೆ ಪಾರ್ವತಿ ಗಂಡ ಮಾಹಾದೇವ ಚಿಕ್ಕಮಣೂರ ರವರ ಹೊಲದಲ್ಲಿ ಕೊಲೆಯಾಗಿ ಬಿದ್ದಿದ್ದಳು. ನನ್ನ ಅಕ್ಕ ಪಾರ್ವತಿಯ ಏಡ ಗಣ್ಣಿನ ಕೆಳಭಾಗದಲ್ಲಿ ಮತ್ತು ಏಡಗಣ್ಣಿನ ಗುಡ್ಡೆಯ ಪಕ್ಕದಲ್ಲಿ ಮೂಗಿನ ಹತ್ತಿರ ಯಾವುದೋ ಚೂಪಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ನನ್ನ ಅಕ್ಕ ಪಾರ್ವತಿಗೆ ಆಗದವರು ಯಾರೋ ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ದಿನಾಂಕ 10-07-2015 ರ ಸಾಯಂಕಾಲ 7:00 ಗಂಟೆಯಿಂದ ದಿನಾಂಕ 11-07-2015 ರಂದು ಮದ್ಯಾಹ್ನ 2:00 ಮದ್ಯದ ಅವದಿಯಲ್ಲಿ ಕೊಲೆ ಮಾಡಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಚನ್ನಮಲ್ಲಪ್ಪ ಸಿನ್ನೂರ ಸಾ: ಅಫಜಲಪೂರ ಇವರು ಅಫಜಲಪೂರ ಪಟ್ಟಣದಲ್ಲಿರುವ  ಕಣ್ಣಿ ಯವರ ವರ್ಕ ಶಾಪ್ ನಲ್ಲಿ ಲೇತ್ ಮಸೀನ್ ಆಪರೇಟರ ಅಂತ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತೇನೆ ನನಗೆ ಮೂರು ಜನ ಗಂಡು ಮಕ್ಕಳಿದ್ದುಇದರಲ್ಲಿ  ಸಂಗಮೇಶನು ಅಫಜಲಪೂರ ಪಟ್ಟಣದಲ್ಲಿ ಬಸ್ ನಿಲ್ದಾಣದ ಸಮೀಪ ಮೋಬೈಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾನೆ. ನನ್ನ ಮಗ ಸಂಗಮೇಶನಿಗೆ ಪ್ರವೀಣ ತಂದೆ ಕುಪ್ಪಣ್ಣ ಭೂತಿ, ನಾಗೇಶ @ ನಾಗಯ್ಯ ತಂದೆ ವಿವೇಕಾನಂದ ಗವಿಮಠ, ಸಂಗಮೇಶ ತಂದೆ ಶಿವಶರಣಪ್ಪ ಅಳ್ಳಗಿ ಅಂತ ಗೆಳೆಯರು ಇರುತ್ತಾರೆ. ದಿನಾಂಕ 10-07-2015 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿಬಾಯಿ ಹಾಗೂ ಮಕ್ಕಳಾದ ಕಿರಣ ಮತ್ತು ಸಂತೋಷ ರವರೆಲ್ಲರು ಮನೆಯಲ್ಲಿದ್ದಾಗ ಸಂಗಮೇಶನು ಹೊರಗೆ ಹೋಗಿ ಬರುತ್ತೇನೆ ಅಂತ ಹೇಳಿ ಅವನ ಮೋಟಾರ ಸೈಕಲ ನಂ ಕೆಎ- ಕೆಎ-32 ಇಜಿ-0596 ನೇದ್ದನ್ನು ತಗೆದುಕೊಂಡು ಮನೆಯಿಂದ ಹೋಗಿರುತ್ತಾನೆ. ಸಂಗಮೇಶನು ಬಹಳ ಹೊತ್ತಾದರೂ ಮರಳಿ ಮನೆಗೆ ಬರಲಿಲ್ಲಾ. ಆಗ ನಾನು  ಸಂಗಮೇಶನನ್ನು ಹುಡುಕುತ್ತಾ ಹೋದಾಗ ನನ್ನ ಮಗನ ಮತ್ತೋಬ್ಬ ಗೆಳೆಯನಾದ ಶಿವಕುಮಾರ ತಂದೆ  ಮಲ್ಲಿಕಾರ್ಜುನ ಅಚಲೇರಿ ಎಂಬಾತನು ಸಿಕ್ಕಿದ್ದು ನಾನು ಅವನಿಗೆ ನನ್ನ ಮಗ ಸಂಗಮೇಶನ ಬಗ್ಗೆ  ವಿಚಾರಿಸಿದಾಗ ಈಗ ಸ್ವಲ್ಪ ಸಮಯದ ಹಿಂದೆ ಪ್ರವೀಣ ಭೂತಿ, ನಾಗೇಶ @ ನಾಗಯ್ಯ ಗವಿಮಠ, ಸಂಗಮೇಶ ಅಳ್ಳಗಿ ಇವರು ಬಂದು ಸಂಗಮೇಶನೊಂದಿಗೆ  ಹಣದ ವಿಚಾರದಲ್ಲಿ ಬಾಯಿ ಮಾತಿನ ಜಗಳ ಮಾಡಿ  ತಕರಾರು ಮಾಡಿಕೊಂಡು ನಿನಗೆ ಕೊಡಬೇಕಾದ 25,000/- ರೂ ಹಣ ಈಗಲೇ ಕೊಟ್ಟು ಬಿಡುತ್ತೇವೆ ನಮ್ಮೊಂದಿಗೆ ನಡೆ ಅಂತ ಕರೆದುಕೊಂಡು ಹೋಗಿರುತ್ತಾರೆ ಅಂತ ತಿಳಿಸಿದನು. ಗೆಳೆಯರೊಂದಿಗೆ ಹೋಗಿದ್ದಾನೆ ನಂತರ ಮನೆಗೆ ಬರಬಹುದೆಂದು ತಿಳಿದುಕೊಂಡು ಮನೆಗೆ ಹೋಗಿ ಮಲಗಿಕೊಂಡೆನು .       ಬೆಳಿಗ್ಗೆ ಅಂದಾಜ 10 ಗಂಟೆಯಾದರೂ ನನ್ನ ಮಗ ಸಂಗಮೇಶನು ಮನೆಗೆ ಬರಲಿಲ್ಲ. ಅಂಗಡಿ ತೆರೆಯುವ ಸಮಯವಾದರು ಏಕೆ ಮನೆಗೆ ಬರಲಿಲ್ಲಾ ಅಂತ ಹುಡುಕಾಡುತ್ತಾ ಬಜಾರನಲ್ಲಿ ಬಂದಾಗ ಬಸವರಾಜ ಕೊರಳ್ಳಿ ರವರ ಹೊಲದಲ್ಲಿ ಒಬ್ಬ ಹುಡುಗನ ಕೊಲೆಯಾದ ಶವ ಬಿದ್ದಿದೆ ಅಂತ ಜನರು ಮಾತಾಡುವದನ್ನು  ಕೇಳಿ ನಾನು ಮತ್ತು ನನ್ನ ಅಣ್ಣನ ಮಗನಾದ ಈರಣ್ಣ ಸಿನ್ನೂರ ಇಬ್ಬರು ಬಸವರಾಜ ಕೊರಳ್ಳಿರವರ ಹೊಲಕ್ಕೆ ಹೋದಾಗ ಸದರಿಯವರ ಹೊಲದ ಹತ್ತಿರದ ಬಾಂದಾರಿಯಲ್ಲಿ ನನ್ನ ಮಗನ ಮೋಟಾರ ಸೈಕಲ ನಂ ಕೆಎ- ಕೆಎ-32 ಇಜಿ-0596 ನೇದ್ದು ಬಿದ್ದಿದ್ದು ಮೋಟಾರ ಸೈಕಲ್ ಬಿದ್ದ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಹೋಗಿ ನೋಡಿದಾಗ ನನ್ನ ಮಗ ಸಂಗಮೇಶನು ಕೊಲೆಯಾಗಿ ಬಿದ್ದಿದನು. ನನ್ನ ಮಗನ ಬಾಯಿ ಕೆಳಭಾಗದಲ್ಲಿ ಗದ್ದಕ್ಕೆ , ಹೊಟ್ಟೆಗೆ , ಎದೆಗೆ, ಬೇನ್ನಿಗೆ ತಲವಾರ ಮತ್ತು ಮಚ್ಚನಿಂದ ಹೊಡೆದು ಭಾರಿ ರಕ್ತಗಾಯಗಳು ಪಡಿಸಿ ಕೊಲೆ  ಮಾಡಿರುತ್ತಾರೆ.  ನಂತರ  ಶಿವಕುಮಾರ ಅಚಲೇರಿ ಎಂಬಾತನಿಂದ ಗೊತ್ತಾಗಿದ್ದೇನೆಂದರೆ ಈಗ ಸುಮಾರು ಎರಡು ತಿಂಗಳ ಹಿಂದೆ ಪ್ರವೀಣ ಬೂತಿ ಮತ್ತು ಸಂಗಮೇಶ ಅಳ್ಳಗಿ ರವರು ನಿಮ್ಮ ಮಗ ಸಂಗಮೇಶನಿಂದ 25,000/- ರೂಪಾಯಿ ತಗೆದುಕೊಂಡಿದ್ದು ಆ ಹಣ ಕೊಡುವಂತೆ ಕೇಳಿದ್ದರಿಂದ ಅವರು ಈಗ ನಮ್ಮ ಹತ್ತಿರ ಹಣ ಇಲ್ಲ ನಮಗೆ ಅನೂಕುಲ ಆದಾಗ ಕೊಡುತ್ತೇವೆ ಅಂತ ಹೇಳಿದರು ನಿನ್ನೆ ದಿವಸ ರಾತ್ರಿ 10 ಗಂಟೆ ಸುಮಾರಿಗೆ ಪ್ರವೀಣ ಬೂತಿ, ಸಂಗಮೇಶ ಅಳ್ಳಗಿ ಮತ್ತು ನಾಗೇಶ @ ನಾಗಯ್ಯ ಗವಿಮಠ ರವರು ಬಂದು ಹಣ ಕೊಡುತ್ತೇವೆ ನಡೆ ಅಂತ ಸಂಗಮೇಶನಿಗೆ ತಮ್ಮೊಂದಿಗೆ ಕರೆದುಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ್ದು ನನ್ನ ಮಗ ಸಂಗಮೇಶನು ತಾನು ಕೊಟ್ಟಿದ್ದ ಹಣ ಮರಳಿ ಕೊಡು ಅಂತ ಕೇಳಿದಕ್ಕೆ ಪ್ರವೀಣ ಬೂತಿ, ಸಂಗಮೇಶ ಅಳ್ಳಗಿ ಮತ್ತು ನಾಗೇಶ @ ನಾಗಯ್ಯ ಗವಿಮಠ ರವರೆಲ್ಲರು ನನ್ನ ಮಗನನ್ನು ಹಣ ಕೊಡುತ್ತೇವೆ ಅಂತ ಹೇಳಿ ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿ ದಿನಾಂಕ 10/07/2015 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 11/07/2015 ರ ಬೆಳಗಿನ 10-00 ಗಂಟೆಯ ಮದ್ಯದ ಅವಧಿಯಲ್ಲಿ  ಬಸವರಾಜ ಕೊರಳ್ಳಿ ರವರ ಹೊಲದಲ್ಲಿ ತಲವಾರ ಮತ್ತು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 11.07.2015 ರಂದು ಮದ್ಯಾನ ಜೇವರಗಿ ತಾಲೂಕಿನ ಕೊಳಕೂರ ಗ್ರಾಮದ ಹತ್ತಿರ ಬೀಮಾ ನದಿಯ ದಂಡೆಯಲ್ಲಿ ಟ್ರ್ಯಾಕ್ಟರಗಳ ಮುಖಾಂತರ ಮರಳು (ಉಸುಕು) ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ ಎಸ್.ಎಸ್ ಹೂಲ್ಲೂರ ಸಿಪಿಐ ಜೇವರಗಿ ವೃತ್ತ ಮತ್ತು ಶ್ರೀ ಪಂಡಿತ ವಿ ಸಗರ ಪಿಎಸ್ಐ ಜೇವರಗಿ ಠಾಣೆಯ ರವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಮಾಡುವ ಕಾಲಕ್ಕೆ ಹಾಜರಿದ್ದು ಸಹಕರಿಸಲು ಕೋರಿಕೊಂಡು ಸದರಿಯವರು ಹಾಗು ಪಂಚರೊರು ಮತ್ತು ಸಿಬ್ಬಂದಿಯೊಂದಿಗೆ  ಕೊಳಕೂರ ಗ್ರಾಮದ ಹತ್ತಿರ ಬೀಮಾ ನದಿಯ ದಡದಲ್ಲಿ ಹೋಗಿ ಜೀಪನ್ನು ಗೀಡಗಂಟಿಗಳ ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಭೀಮಾ ನದಿಯ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಗೀಡಗಳ ಮರೆಯಾಗಿ ನಿಂತು ನೋಡಲು, ಭೀಮಾ ನದಿ ದಂಡೆಯಿಂದ ಟ್ರ್ಯಾಕ್ಟರಗಳಲ್ಲಿ 7 ಜನರು ನದಿಯಲ್ಲಿಂದ ಉಸುಕು (ಮರಳು) ನ್ನು ಕಳ್ಳತನದಿಂದ ತುಂಬುತ್ತಿದ್ದರು ಅದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.00 ಗಂಟೆಗೆ ಅವರ ಮೇಲೆ ನಾವು ಏಕ ಕಾಲಕ್ಕೆ ಅವರ ಮೇಲೆ ದಾಳಿ ಮಾಡಿ ಇಬ್ಬರಿಗೆ ಹಿಡಿದುಕೊಂಡೆವು ಅವರಲ್ಲಿಯ 5 ಜನರು ಓಡಿ ಹೋದರು. ಬೆನ್ನು ಹತ್ತಿ ಹಿಡಿಯಲು ಪ್ರಯತ್ನ ಮಾಡಿದರು ಅವರು ಸಿಕ್ಕಿರುವದಿಲ್ಲಾ. ಸಿಕ್ಕವರಿಗೆ ಹೆಸರು ಕೇಳಲು 1] ಅಂಬಾರಾಯ ತಂದೆ ಹೊನ್ನಣ್ಣಾ ಹೊನಕೇರಿ ನಾನು ಟ್ರ್ಯಾಕ್ಟರ್ ನಂ ಕೆ.ಎ. 32-ಟಿಎ-5897 ನೇದ್ದರ ಚಾಲಕ ಅಂತಾ ತಿಳಿಸಿದನು, ಮತ್ತೊಬ್ಬನು 2] ಮರೆಪ್ಪ ತಂದೆ ಭೀಮಾಶಂಕರ ಜಡಿ ಸಾಃ ಕೊಳಕೂರ ನಾನು ನನ್ನ ಟ್ರ್ಯಾಕ್ಟರಗಳಲ್ಲಿ ಭೀಮಾ ನದಿಯಿಂದ ಉಸುಕು ತುಂಬಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದೆನೆ ಅಂತಾ ಹೇಳಿದನು  ಓಡಿ ಹೋದವರ ಹೆಸರು ವಿಳಾಸ ಅವರಿಗೆ ಕೇಳಲು ಅಂಬಾರಾಯ ಹೊನ್ನಕೇರಿ ಇವನು ಹೆಳಿದ್ದನೆಂದರೆ ಓಡಿ ಹೊದವರಲ್ಲಿ 3] ಬಾಬುರಾಯ ಕೂಡಿ ಸಾಃ ಕೊಳಕೂರ ಇತನು ತನ್ನ ಎಲ್ & ಟಿ ಟ್ರ್ಯಾಕ್ಟರ್  4] ಅಬ್ಬಾಸಲಿ ಮಾವನೂರ ಸಾಃ ಕೊಳಕೂರ, ಇತನು ತನ್ನ ಮಹಿಂದ್ರಾ ಕಂಪನಿ ಟ್ರ್ಯಾಕ್ಟರ್ 5] ಶಿವಶರಣಪ್ಪ ಯಡ್ರಾಮಿ ಸಾಃ ಕೊಳಕೂರ ಇತನು ತನ್ನ ಎಲ್ & ಟಿ. ಟ್ರ್ಯಾಕ್ಟರ್  ತಮ್ಮ ತಮ್ಮ ಟ್ರ್ಯಾಕ್ಟರಗಳು ತೆಗೆದುಕೊಂಡು ಓಡಿಹೊಗಿರುತ್ತಾರೆ ಅಂತಾ ತಿಳಿಸಿದನು.  ಮತ್ತು ಮರೆಪ್ಪ ಜಡಿ ಇತನು ಓಡಿ ಹೊದವರಲ್ಲಿ ನನ್ನ ಟ್ರ್ಯಾಕ್ಟರಗಳ ಡ್ರೈವರಗಳಾದ 6] ನಾಗಪ್ಪ ಶಿವಣಗಿ ಸಾಃ ಗೌನಳ್ಳಿ, ಟ್ರ್ಯಾಕ್ಟರ್ ನಂ ಕೆ.ಎ.32-ಟಿ.ಎ-1355 ನೇದ್ದರ ಚಾಲಕ 7] ಬಾಗಪ್ಪ ತಂದೆ ಹಣಮಂತ ನೂಲಿನವರ್ ಟ್ರ್ಯಾಕ್ಟರ್ ನಂಬರ ಕೆ.ಎ. 32- 6763 ನೇದ್ದರ ಚಾಲಕ ಅಂತಾ ತಿಳಿಸಿದನು, ನಂತರ ಸ್ಥಳದಲ್ಲಿದ್ದ ಟ್ರ್ಯಾಕ್ಟರಗಳನ್ನು ಪರಶೀಲಿಸಲು 1] ಟ್ರ್ಯಾಕ್ಟರ್ ನಂಬರ ಕೆ.ಎ.-32-ಟಿಎ-5897 ಅದರ ಇಂಜೀನ ನಂಬರ ಪಿ ವೈ 30290346328 ನೇದ್ದು ಇದ್ದು ಅದರ ಅ.ಕಿ 1,00,000/ 2] ಟ್ರ್ಯಾಕ್ಟರ್ ನಂಬರ ಕೆ..-32-ಟಿ-6763 ಟ್ರಾಯಲಿ ನಂ ಕೆ.ಎ.32-ಟಿ-3964 ನೇದ್ದು ಖಾಲಿ ಇರುತ್ತದೆ ಟ್ರ್ಯಾಕ್ಟರ್ ಅ.ಕಿ 1,00,000/- 3] ಟ್ರ್ಯಾಕ್ಟರ್ ನಂಬರ ಕೆ.ಎ.-32-ಟಿಎ-1355 ನೇದ್ದರಲ್ಲಿ ಒಂದು ಬ್ರಾಸ್ ಉಸುಕು ಇದ್ದು ಉಸುಕಿನ ಅ.ಕಿ. 1000/- ಆಗುತ್ತಿದ್ದು ಟ್ರ್ಯಾಕ್ಟರ್ ಅ.ಕಿ 1,00,000/- ನೇದ್ದು ಇದ್ದವು ವಶದಲ್ಲಿದ್ದವರಿಗೆ ಇಲ್ಲಿನ ಉಸುಕು ತುಂಬಲು ನಿಮ್ಮ ಹತ್ತಿರ ಏನಾದರು ಪರವಾನಿಗೆ ಪತ್ರ ವಗೈರೆ ಇದೆ ಅಂತ ಕೇಳಲು ಅವರು ನಮ್ಮ ಹತ್ತಿರ ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಕಳುವಿನಿಂದ ಈ ಟ್ರ್ಯಾಕ್ಟರಗಳಲ್ಲಿ ಉಸುಕು ( ಮರಳು ) ತುಂಬುತಿರುವ ಬಗ್ಗೆ ಒಪ್ಪಿಕೊಂಡರು ಸದರಿಯವರು ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪತ್ರ ವಗೈರೆ ಪಡೆದುಕೊಳ್ಳದೇ ಮೇಲೆ ನಮೂದಿಸಿದ ಟ್ರ್ಯಾಕ್ಟರ್ ಗಳಲ್ಲಿ  ಮರುಳು (ಉಸುಕು) ಕಳ್ಳತನದಿಂದ ಸಾಗಿಸಿ ಸಂಬಂಧ ಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ಮೋಸ ಮಾಡುತಿರುವದು ಕಂಡು ಬಂದಿದ್ದರಿಂದ ಮೇಲೆ ನಮೂದಿಸಿದ ಟ್ರ್ಯಾಕ್ಟರಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ ಅಂತಾ ಕಲ್ಲಪ್ಪಗೌಡ ತಂದೆ ಗೊಲ್ಲಾಳಪ್ಪಗೌಡ ಮಾಲಿಪಾಟೀಲ ಕೋಳಕೂರ ಗ್ರಾಮ ಲೆಖಪಾಲಕ  ಸಾ : ಕುಕನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಲಾಗಿದೆ, 

11 July 2015

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ರೋಹಿದಾಸ ತಂದೆ ಕಬೀರದಾಸ ಉ-ಸಹಶಿಕ್ಷಕರು ಔರಾದ(ಬಿ) ಪ್ರೌಢ ಶಾಲೆ ಸಾ:ಆಲಗೂಡ ತಾ:ಬಸವಕಲ್ಯಾಣ ಇವರು ದಿನಾಂಕ:14/06/2015 ರಂದು ರಾತ್ರಿ ನಾನು ಬಾಡಿಗೆಯಿಂದ ವಾಸವಾಗಿರುವ ಶ್ರೀ ದೇವಿಂದ್ರಪ್ಪ ಇವರ ಮನೆಯ ಮುಂದೆ ನನ್ನ ಮೋಟಾರ ಸೈಕಲ್ ಹಿರೋ ಹೊಂಡಾ ಪ್ಯಾಷನ್ ಪ್ಲಸ್ ಮೋಟಾರ ಸೈಕಲ್ ನಂ:ಕೆಎ-36-ಆರ-9787 ನೇದ್ದನ್ನು ನಿಲ್ಲಿಸಿದ್ದು ದಿನಾಂಕ:15-06-2015 ರಂದು ಬೆಳಿಗ್ಗೆ 05-00 ಗಂಟೆಗೆ ನೋಡಲಾಗಿ ಸದ್ರಿ ನನ್ನ ಮೋಟಾರ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೋಟಾರ ಸೈಕಲ್ ಜೆಸ್ಸಿ ನಂ:MBLHA10EL8G46292, ಇಂಜಿನ್ ನಂ:HA10EV8GD75695 ಅ.ಕಿ. 25,000/- ರೂ ಆಗಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 9-7-2015 ರಂದು ಮುಂಜಾನೆ ಮನೆಯಲ್ಲಿ ಇದ್ದಾಗ ನನಗೆ ಪರಿಚಯದ ಬಸವರಾಜ ತಂಧೆ ಮಲ್ಕನಗೌಡ ಭರ್ಮಶೆಟ್ಟಿ ಈತನು ಪೋನ ಮಾಡಿ ತಿಳಿಸಿದೆನೆಂದರೆ ನಿಮ್ಮ ದೊಡ್ಡಪ್ಪ ಮಲಕಣ್ಣ ಈತನಿಗೆ ಜೇವಗರಗಿ ಪಟ್ಟಣದ ಅಂಬೆಡ್ಕಕರ್ ಮೂರ್ತಿ ಹತ್ತಿರ ರಸ್ತೆ ಅಪಘಾತವಾಗಿರುತ್ತದೆ ನಾನು ಅವನಿಗೆ ಒಂದು ಖಾಸಗಿ ಆಟೋದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತೇನೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಗೆಳಯ ಮಲ್ಲು ತಂದೆ ಭಿಮರಾಯ ಚೆಟ್ರಿಕಿ  ಇಬ್ಬರು ಕೂಡಿಕೊಂಡು ಸರಕಾರಿ ಆಸ್ಪತ್ರೆ ಜೇವಗರಗಿ ಬಂದು ನೋಡಲಾಗಿ ಆಸ್ಪತ್ರೆಯಲ್ಲಿ ನಮ್ಮ ದೊಡ್ಡಪ್ಪ ಮಲ್ಕಣ್ಣ ತಂದೆ ಧರೆಪ್ಪ ಸೋಮಜಾ ಈತನು ಉಪಚಾರ ಪಡೆಯುತ್ತಿದ್ದು ಅವನ ತಲೆಗೆ ಭಾರಿ ಗುಪ್ತ ಗಾಯ, ಬಲಕೀವಿಗೆ ರಕ್ತಗಾಯ, ಬಲಹಣಿಯ ಮೇಲೆ ಸ್ವಲ್ಪ ತರಚಿದ ರಕ್ತಗಾಯ ಮತ್ತು ಎರಡು ಕಾಲುಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದವು ನಂತರ ಅಲ್ಲಿಯೇ ಇದ್ದ ಬಸವರಾಜನಿಗೆ ಕೇಳಲಾಗಿ ಅವನು ಹೇಳಿದೆನೆಂದೆರೆ ನನ್ನದೊಂದು ಖಾಸಗಿ ಕೆಲಸ ಇದ್ದ ಪ್ರಯುಕ್ತ ಇಂದು ಮುಂಜಾನೆ 9-00 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಅಂಬೇಡ್ಕರ್ ಮೂರ್ತಿ ಹತ್ತಿರ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಸಿಂದಗಿ ಕ್ರಾಸ್ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ರೋಡಿನ ಸೈಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿಮ್ಮ ದೊಡ್ಡಪ್ಪನಿಗೆ ಡಿಕ್ಕಿ ಪಡೆಸಿದನು ಆಗ್ ನಿಮ್ಮ ದೊಡ್ಡಪ್ಪ ಮಲಕಣ್ಣ ಈತನು ರೋಡಿನ ಮೇಲೆ ಬಿದ್ದನು ಆಗ್ ನಾನು ಅವನಿಗೆ ಎಬ್ಬಿಸಿ ನೋಡಲಾಗಿ ತಲೆಗೆ, ಬಲಕೀವಿಗೆ, ಬಲಹಣಿಗೆ, ಎರಡು ಕಾಲುಗಳಿಗೆ ರಕ್ತ ಮತ್ತು ಗುಪ್ತ ಗಾಯಗಳಾಗಿದ್ದವು. ಅವನಿಗೆ ಮಾತನಾಡಿಸಿದರು ಅವನು ಮಾತನಾಡಲಿಲ್ಲಾ ಡಿಕ್ಕಿ ಪಡೆಸಿದ ಮೋಟಾರ ಸೈಕಲ ಸವಾರನು ತನ್ನ ವಾಹನವನ್ನು ಅಲ್ಲಿಯೇ ರೋಡಿನ ಪಕ್ಕದಲ್ಲಿ ನಿಲ್ಲಿಸಿ ನಮ್ಮ ಹತ್ತಿರ ಬಂದಾಗ ನಾನು ಅವನಿಗೆ ಹೆಸರು ಕೇಳಲು ಅವನು ನಿಮ್ಮ ದೊಡ್ಡಪ್ಪನಿಗೆ ಆದ ಗಾಯವನ್ನು ನೋಡಿ ತನ್ನ ಮೋಟಾರ ಸೈಕಲ ಅಲ್ಲಿಯೇ ಸ್ಥಳದಲ್ಲಿ ಬಿಟ್ಟು ಓಡಿ ಹೋದನು ನಂತರ ಡಿಕ್ಕಿ ಪಡೆಸಿದ ಮೋಟಾರ ಸೈಕಲ ನಂ ನೋಡಲಾಗಿ ಎಮ್ ಹೆಚ್. 14-ಇಎಪ್-472 ನೇದ್ದು ಇತ್ತು. ನಂತರ ನಾನು  ಅಲ್ಲಿಯೇ ರೋಡಿನಲ್ಲಿ ಬರುತ್ತಿದ್ದ ಒಂದು ಆಟೋ ರೀಕ್ಷಾಕ್ಕೆ ಕೈ ಮಾಡಿ ನಿಲ್ಲಿಸಿ ಆ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿ ಗೆ ತಂದು ಸೇರಿಕೆ ಮಾಡಿರುತ್ತೇನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಠಾಬಾಯಿ ಗಂಡ ರವೀಂದ್ರ ಕುಮಾರ ಪೂಜಾರಿ ಸಾ:ಬಡಾ ರೋಜಾ ಧನಗರಗಲ್ಲಿ ಕಲಬುರಗಿ ರವರ ಗಂಡ ಅರಣ್ಯ ಇಲಾಖೆಯಲ್ಲಿ ಆರ್‌.ಎಫ್‌‌.ಓ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದು ನಿವೃತ್ತಿ ಸೌಲಭ್ಯ 25 ಲಕ್ಷ ರೂಪಾಯಿಗಳು ಬಂದಿದ್ದು ಇದನ್ನು ಮನಗಂಡು ಬಸವರಾಜ ಬಿರಾದಾರ ನಮ್ಮ ಫೈನಾನ್ಸನಲ್ಲಿ ಹಣ ತೊಡಗಿಸಿರಿ 2 ರಂತೆ ಪ್ರತಿ ತಿಂಗಳ ಬಡ್ಡಿ ಕೊಡುತ್ತೇನೆ ಅಂತಾ ನಂಬಿಸಿ 15 ಲಕ್ಷ ರೂಪಾಯಿ ದಿನಾಂಕ:25/09/2014 ರಂದು ಮೇ//ಆಕಾಶ ಗೋಲ್ಡ್‌ ಫೈನಾನ್ಸ್‌‌ & ಲಿಜಿಂಗ್‌ ಕಾರ್ಪೋರೇಶನ ಫೈನಾನ್ಸ್‌‌ನಲ್ಲಿ ಹಣ ಜಮೇ ಇಟ್ಟಿದ್ದು ಪಾವತಿ ಸಂಖ್ಯೆ 83 ನೀಡಿರುತ್ತಾರೆ. ಮರು ಸಂದಾಯ ದಿನಾಂಕ:25/09/2015 ರಂದು 1 ವರ್ಷದ ಅವಧಿಗೆ ಹಣ ಇಟ್ಟಿರುತ್ತೇನೆ. ಪ್ರತಿ ತಿಂಗಳ 30 ಸಾವಿರ ರೂಪಾಯಿಯಂತೆ  5 ತಿಂಗಳ ಬಡ್ಡಿ ಹಣ ಕೊಟ್ಟಿರುತ್ತಾರೆ. ಈ ವರ್ಷ ಮೇ ತಿಂಗಳಲ್ಲಿ ಫೈನಾನ್ಸ್‌ ಮ್ಯಾನೇಜರ ಬಸವರಾಜ ಭೇಟಿ ಮಾಡಿ ಹಣ ಕೇಳಿದ್ದಕ್ಕೆ ನಾನು ಸಧ್ಯ ಕಷ್ಟದಲ್ಲಿದ್ದೇನೆ ಸ್ವಲ್ಪ ದಿವಸ ತಡಿರಿ ನಿಮ್ಮ ಹಣ ಕೊಡುತ್ತೇನೆ ಅಂತಾ ಅಂದಿದ್ದಕ್ಕೆ ಮರಳಿ ಬಂದಿದ್ದು ಪುನಹ ದಿನಾಂಕ:08/06/2015 ರಂದು ಹಣ ಕೇಳಲು ಹೋದಾಗ ಬಸವರಾಜ ಬಿರಾದಾರ ಇವರಿಗೆ ಸಂಬಂಧಿಸಿದ ಎಲ್ಲಾ ಫೈನಾನ್ಸಗಳು ಮುಚ್ಚಿದ್ದು ವಿಚಾರಿಸಲಾಗಿ ಸದರಿ ಫೈನಾನ್ಸ್‌ ನವರು ಗ್ರಾಹಕರ ಹಣವನ್ನು ಲಪಟಾಯಿಸಿ ಮರಳಿ ಕೊಡಬಾರದೆಂಬ ಉದ್ದೇಶದಿಂದ ಓಡಿ ಹೋಗಿರುತ್ತಾರೆ ಅಂತಾ ತಿಳಿಯಿತು ಅಲ್ಲಿ ಸಾಕಷ್ಟು ಜನರು ಫೈನಾನ್ಸ್‌‌ ನಲ್ಲಿ ಹಣ ಹೂಡಿದವರು ಅಲ್ಲಿಗೆ ಬಂದಿದ್ದು ವಿಚಾರಿಸಲು ನಮ್ಮಂತೆ ಅಲೆದಾಡುತ್ತಿದ್ದರು. ಸದರಿ ಫೈನಾನ್ಸ್ ನಲ್ಲಿ ಮೊಮ್ಮಗಳು ಕನ್ಯಾಕುಮಾರಿ ಹೆಸರಿಗೆ 10 ಲಕ್ಷ ರೂಪಾಯಿ ಬಿ.ಸಿ ಕೂಡಾ ಹಾಕಿದ್ದು ಇನ್ನೂ 3 ತಿಂಗಳು ಕಂತು ಕಟ್ಟುವದು ಮಾತ್ರ ಬಾಕಿ ಇದ್ದು ಆ ಬಿ.ಸಿ ಹಣ ಕೂಡಾ ತೆಗೆದುಕೊಂಡು ಹೋಗಿರುತ್ತಾರೆ. ಇದಕ್ಕೆ ಯಾವುದೆ ದಾಖಲಾತಿಗಳು ನಮಗೆ ನೀಡಿರುವದಿಲ್ಲಾ. ಮೇ// ಆಕಾಶ ಗೋಲ್ಡ್‌ ಫೈನಾನ್ಸ್‌‌ ಮತ್ತು ಲೀಜಿಂಗ್‌ ಕಾರ್ಪೋರೇಶನ ಶಟ್ಟಿ ಕಾಂಪ್ಲೇಕ್ಸ್‌‌ ಆಳಂದ ರಸ್ತೆ ಕಲಬುರಗಿ ಎಂ.ಡಿ ಬಸವರಾಜ ತಂದೆ ಶಿವರಾಯ ಬಿರಾದಾರ ಸಾ:ಜೆ.ಆರ್‌ ನಗರ ಕಲಬುರಗಿ ಮತ್ತು ಪೈನಾನ್ಸ್‌‌ ಪಾಲುದಾರರಾದ ಅಪರಾಧಿಕ ಒಳಸಂಚು ಮಾಡಿ ಮೇಲ್ಕಂಡ ಹೆಸರಿನ ಫೈನಾನ್ಸ ವ್ಯವಹಾರ ಮಾಡಿ ನನಗೆ ಮತ್ತು ಇತರೆ ಗ್ರಾಹಕರಿಗೆ ಬಡ್ಡಿ ಕೊಡುವದಾಗಿ ಮತ್ತು ಹಣ ದ್ವೀಗುಣ ಕೊಡುವದಾಗಿ ನಂಬಿಸಿ ನಮ್ಮಿಂದ 15 ಲಕ್ಷ ರೂಪಾಯಿ ಜಮಾ ಇಟ್ಟುಕೊಂಡು (ಎಫ್‌.ಡಿ) ಹಣ ವಾಪಸ ಕೊಡದೆ ಮೋಸ ಹಾಗೂ ಅಪರಾಧಿಕ ನಂಬಿಕೆ ದ್ರೋಹ ಬಗೆದು ತಲೆ ಮರೆಸಿಕೊಂಡು ಓಡಿ ಹೋಗಿರುತ್ತಾನೆ. 1)ಬಸವರಾಜ ತಂದೆ ಶಿವರಾಯ ಬಿರಾದಾರ 2)ಶ್ರೀಮತಿ ಶರಣಮ್ಮಾ ಗಂಡ ಬಸವರಾಜ ಬಿರಾದಾರ 3)ಬಸವರಾಜ ಇವರ ಅಳಿಯನಾದ ರಾಜೇಂದ್ರ 4)ಫೈನಾನ್ಸ್‌‌ ಮ್ಯಾನೇಜರ್‌ ಚಂದ್ರು ಮತ್ತು ಪಾಲುದಾರರು ಎಲ್ಲರೂ ಸಾ:ಕಲಬುರಗಿ ಇವರ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.