ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ರೋಹಿದಾಸ ತಂದೆ ಕಬೀರದಾಸ ಉ-ಸಹಶಿಕ್ಷಕರು ಔರಾದ(ಬಿ) ಪ್ರೌಢ ಶಾಲೆ ಸಾ:ಆಲಗೂಡ ತಾ:ಬಸವಕಲ್ಯಾಣ ಇವರು ದಿನಾಂಕ:14/06/2015 ರಂದು ರಾತ್ರಿ ನಾನು ಬಾಡಿಗೆಯಿಂದ ವಾಸವಾಗಿರುವ ಶ್ರೀ ದೇವಿಂದ್ರಪ್ಪ ಇವರ ಮನೆಯ ಮುಂದೆ ನನ್ನ ಮೋಟಾರ ಸೈಕಲ್ ಹಿರೋ ಹೊಂಡಾ ಪ್ಯಾಷನ್ ಪ್ಲಸ್ ಮೋಟಾರ ಸೈಕಲ್ ನಂ:ಕೆಎ-36-ಆರ-9787 ನೇದ್ದನ್ನು ನಿಲ್ಲಿಸಿದ್ದು ದಿನಾಂಕ:15-06-2015 ರಂದು ಬೆಳಿಗ್ಗೆ 05-00 ಗಂಟೆಗೆ ನೋಡಲಾಗಿ ಸದ್ರಿ ನನ್ನ ಮೋಟಾರ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೋಟಾರ ಸೈಕಲ್ ಜೆಸ್ಸಿ ನಂ:MBLHA10EL8G46292, ಇಂಜಿನ್ ನಂ:HA10EV8GD75695 ಅ.ಕಿ. 25,000/- ರೂ ಆಗಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 9-7-2015 ರಂದು ಮುಂಜಾನೆ ಮನೆಯಲ್ಲಿ ಇದ್ದಾಗ ನನಗೆ ಪರಿಚಯದ
ಬಸವರಾಜ ತಂಧೆ ಮಲ್ಕನಗೌಡ ಭರ್ಮಶೆಟ್ಟಿ ಈತನು ಪೋನ ಮಾಡಿ ತಿಳಿಸಿದೆನೆಂದರೆ ನಿಮ್ಮ ದೊಡ್ಡಪ್ಪ
ಮಲಕಣ್ಣ ಈತನಿಗೆ ಜೇವಗರಗಿ ಪಟ್ಟಣದ ಅಂಬೆಡ್ಕಕರ್ ಮೂರ್ತಿ ಹತ್ತಿರ ರಸ್ತೆ ಅಪಘಾತವಾಗಿರುತ್ತದೆ
ನಾನು ಅವನಿಗೆ ಒಂದು ಖಾಸಗಿ ಆಟೋದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ತಂದು ಸೇರಿಕೆ
ಮಾಡಿರುತ್ತೇನೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಗೆಳಯ ಮಲ್ಲು ತಂದೆ ಭಿಮರಾಯ ಚೆಟ್ರಿಕಿ ಇಬ್ಬರು ಕೂಡಿಕೊಂಡು ಸರಕಾರಿ
ಆಸ್ಪತ್ರೆ ಜೇವಗರಗಿ ಬಂದು ನೋಡಲಾಗಿ ಆಸ್ಪತ್ರೆಯಲ್ಲಿ ನಮ್ಮ ದೊಡ್ಡಪ್ಪ ಮಲ್ಕಣ್ಣ ತಂದೆ ಧರೆಪ್ಪ
ಸೋಮಜಾ ಈತನು ಉಪಚಾರ ಪಡೆಯುತ್ತಿದ್ದು ಅವನ ತಲೆಗೆ ಭಾರಿ ಗುಪ್ತ ಗಾಯ, ಬಲಕೀವಿಗೆ ರಕ್ತಗಾಯ, ಬಲಹಣಿಯ ಮೇಲೆ ಸ್ವಲ್ಪ ತರಚಿದ
ರಕ್ತಗಾಯ ಮತ್ತು ಎರಡು ಕಾಲುಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದವು ನಂತರ ಅಲ್ಲಿಯೇ ಇದ್ದ
ಬಸವರಾಜನಿಗೆ ಕೇಳಲಾಗಿ ಅವನು ಹೇಳಿದೆನೆಂದೆರೆ ನನ್ನದೊಂದು ಖಾಸಗಿ ಕೆಲಸ ಇದ್ದ ಪ್ರಯುಕ್ತ ಇಂದು
ಮುಂಜಾನೆ 9-00 ಗಂಟೆ ಸುಮಾರಿಗೆ
ಜೇವರಗಿ ಪಟ್ಟಣದ
ಅಂಬೇಡ್ಕರ್ ಮೂರ್ತಿ ಹತ್ತಿರ ರೋಡಿನ ಪಕ್ಕದಲ್ಲಿ
ನಡೆದುಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಸಿಂದಗಿ ಕ್ರಾಸ್ ಕಡೆಯಿಂದ ಒಬ್ಬ ಮೋಟಾರ ಸೈಕಲ
ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ರೋಡಿನ ಸೈಡಿನಲ್ಲಿ
ನಡೆದುಕೊಂಡು ಹೋಗುತ್ತಿದ್ದ ನಿಮ್ಮ ದೊಡ್ಡಪ್ಪನಿಗೆ ಡಿಕ್ಕಿ ಪಡೆಸಿದನು ಆಗ್ ನಿಮ್ಮ ದೊಡ್ಡಪ್ಪ
ಮಲಕಣ್ಣ ಈತನು ರೋಡಿನ ಮೇಲೆ ಬಿದ್ದನು ಆಗ್ ನಾನು ಅವನಿಗೆ ಎಬ್ಬಿಸಿ ನೋಡಲಾಗಿ ತಲೆಗೆ, ಬಲಕೀವಿಗೆ, ಬಲಹಣಿಗೆ, ಎರಡು ಕಾಲುಗಳಿಗೆ ರಕ್ತ ಮತ್ತು
ಗುಪ್ತ ಗಾಯಗಳಾಗಿದ್ದವು. ಅವನಿಗೆ ಮಾತನಾಡಿಸಿದರು ಅವನು ಮಾತನಾಡಲಿಲ್ಲಾ ಡಿಕ್ಕಿ ಪಡೆಸಿದ ಮೋಟಾರ
ಸೈಕಲ ಸವಾರನು ತನ್ನ ವಾಹನವನ್ನು ಅಲ್ಲಿಯೇ ರೋಡಿನ ಪಕ್ಕದಲ್ಲಿ ನಿಲ್ಲಿಸಿ ನಮ್ಮ ಹತ್ತಿರ ಬಂದಾಗ
ನಾನು ಅವನಿಗೆ ಹೆಸರು ಕೇಳಲು ಅವನು ನಿಮ್ಮ ದೊಡ್ಡಪ್ಪನಿಗೆ ಆದ ಗಾಯವನ್ನು ನೋಡಿ ತನ್ನ ಮೋಟಾರ
ಸೈಕಲ ಅಲ್ಲಿಯೇ ಸ್ಥಳದಲ್ಲಿ ಬಿಟ್ಟು ಓಡಿ ಹೋದನು ನಂತರ ಡಿಕ್ಕಿ ಪಡೆಸಿದ ಮೋಟಾರ ಸೈಕಲ ನಂ
ನೋಡಲಾಗಿ ಎಮ್ ಹೆಚ್. 14-ಇಎಪ್-472 ನೇದ್ದು ಇತ್ತು. ನಂತರ ನಾನು ಅಲ್ಲಿಯೇ ರೋಡಿನಲ್ಲಿ
ಬರುತ್ತಿದ್ದ ಒಂದು ಆಟೋ ರೀಕ್ಷಾಕ್ಕೆ ಕೈ ಮಾಡಿ ನಿಲ್ಲಿಸಿ ಆ ವಾಹನದಲ್ಲಿ ಹಾಕಿಕೊಂಡು ಉಪಚಾರ
ಕುರಿತು ಸರಕಾರಿ ಆಸ್ಪತ್ರೆ ಜೇವರಗಿ ಗೆ ತಂದು ಸೇರಿಕೆ ಮಾಡಿರುತ್ತೇನೆ ಅಂತಾ ತಿಳಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಠಾಬಾಯಿ ಗಂಡ ರವೀಂದ್ರ ಕುಮಾರ ಪೂಜಾರಿ ಸಾ:ಬಡಾ ರೋಜಾ ಧನಗರಗಲ್ಲಿ ಕಲಬುರಗಿ ರವರ ಗಂಡ
ಅರಣ್ಯ ಇಲಾಖೆಯಲ್ಲಿ ಆರ್.ಎಫ್.ಓ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದು ನಿವೃತ್ತಿ ಸೌಲಭ್ಯ 25 ಲಕ್ಷ ರೂಪಾಯಿಗಳು ಬಂದಿದ್ದು ಇದನ್ನು ಮನಗಂಡು ಬಸವರಾಜ ಬಿರಾದಾರ ನಮ್ಮ ಫೈನಾನ್ಸನಲ್ಲಿ ಹಣ ತೊಡಗಿಸಿರಿ 2 ರಂತೆ ಪ್ರತಿ ತಿಂಗಳ ಬಡ್ಡಿ ಕೊಡುತ್ತೇನೆ ಅಂತಾ ನಂಬಿಸಿ 15 ಲಕ್ಷ ರೂಪಾಯಿ ದಿನಾಂಕ:25/09/2014 ರಂದು ಮೇ//ಆಕಾಶ ಗೋಲ್ಡ್ ಫೈನಾನ್ಸ್ & ಲಿಜಿಂಗ್ ಕಾರ್ಪೋರೇಶನ ಫೈನಾನ್ಸ್‌ನಲ್ಲಿ ಹಣ ಜಮೇ
ಇಟ್ಟಿದ್ದು ಪಾವತಿ ಸಂಖ್ಯೆ 83 ನೀಡಿರುತ್ತಾರೆ. ಮರು ಸಂದಾಯ ದಿನಾಂಕ:25/09/2015 ರಂದು 1 ವರ್ಷದ ಅವಧಿಗೆ ಹಣ ಇಟ್ಟಿರುತ್ತೇನೆ. ಪ್ರತಿ ತಿಂಗಳ 30 ಸಾವಿರ ರೂಪಾಯಿಯಂತೆ 5 ತಿಂಗಳ ಬಡ್ಡಿ ಹಣ ಕೊಟ್ಟಿರುತ್ತಾರೆ. ಈ ವರ್ಷ ಮೇ
ತಿಂಗಳಲ್ಲಿ ಫೈನಾನ್ಸ್ ಮ್ಯಾನೇಜರ ಬಸವರಾಜ ಭೇಟಿ ಮಾಡಿ ಹಣ ಕೇಳಿದ್ದಕ್ಕೆ ನಾನು ಸಧ್ಯ ಕಷ್ಟದಲ್ಲಿದ್ದೇನೆ ಸ್ವಲ್ಪ ದಿವಸ ತಡಿರಿ ನಿಮ್ಮ ಹಣ ಕೊಡುತ್ತೇನೆ ಅಂತಾ ಅಂದಿದ್ದಕ್ಕೆ ಮರಳಿ
ಬಂದಿದ್ದು ಪುನಹ ದಿನಾಂಕ:08/06/2015 ರಂದು ಹಣ ಕೇಳಲು ಹೋದಾಗ ಬಸವರಾಜ ಬಿರಾದಾರ ಇವರಿಗೆ ಸಂಬಂಧಿಸಿದ ಎಲ್ಲಾ
ಫೈನಾನ್ಸಗಳು ಮುಚ್ಚಿದ್ದು
ವಿಚಾರಿಸಲಾಗಿ ಸದರಿ
ಫೈನಾನ್ಸ್ ನವರು ಗ್ರಾಹಕರ
ಹಣವನ್ನು ಲಪಟಾಯಿಸಿ
ಮರಳಿ ಕೊಡಬಾರದೆಂಬ ಉದ್ದೇಶದಿಂದ ಓಡಿ ಹೋಗಿರುತ್ತಾರೆ ಅಂತಾ ತಿಳಿಯಿತು
ಅಲ್ಲಿ ಸಾಕಷ್ಟು ಜನರು ಫೈನಾನ್ಸ್ ನಲ್ಲಿ ಹಣ ಹೂಡಿದವರು ಅಲ್ಲಿಗೆ ಬಂದಿದ್ದು ವಿಚಾರಿಸಲು ನಮ್ಮಂತೆ
ಅಲೆದಾಡುತ್ತಿದ್ದರು. ಸದರಿ ಫೈನಾನ್ಸ್ ನಲ್ಲಿ ಮೊಮ್ಮಗಳು ಕನ್ಯಾಕುಮಾರಿ ಹೆಸರಿಗೆ 10 ಲಕ್ಷ ರೂಪಾಯಿ ಬಿ.ಸಿ ಕೂಡಾ ಹಾಕಿದ್ದು ಇನ್ನೂ 3 ತಿಂಗಳು ಕಂತು ಕಟ್ಟುವದು ಮಾತ್ರ ಬಾಕಿ ಇದ್ದು ಆ ಬಿ.ಸಿ ಹಣ ಕೂಡಾ ತೆಗೆದುಕೊಂಡು
ಹೋಗಿರುತ್ತಾರೆ. ಇದಕ್ಕೆ ಯಾವುದೆ ದಾಖಲಾತಿಗಳು ನಮಗೆ ನೀಡಿರುವದಿಲ್ಲಾ.
ಮೇ// ಆಕಾಶ ಗೋಲ್ಡ್ ಫೈನಾನ್ಸ್ ಮತ್ತು ಲೀಜಿಂಗ್ ಕಾರ್ಪೋರೇಶನ ಶಟ್ಟಿ ಕಾಂಪ್ಲೇಕ್ಸ್ ಆಳಂದ ರಸ್ತೆ ಕಲಬುರಗಿ ಎಂ.ಡಿ ಬಸವರಾಜ
ತಂದೆ ಶಿವರಾಯ ಬಿರಾದಾರ ಸಾ:ಜೆ.ಆರ್ ನಗರ ಕಲಬುರಗಿ ಮತ್ತು
ಪೈನಾನ್ಸ್ ಪಾಲುದಾರರಾದ ಅಪರಾಧಿಕ ಒಳಸಂಚು ಮಾಡಿ ಮೇಲ್ಕಂಡ ಹೆಸರಿನ ಫೈನಾನ್ಸ ವ್ಯವಹಾರ ಮಾಡಿ ನನಗೆ ಮತ್ತು ಇತರೆ ಗ್ರಾಹಕರಿಗೆ ಬಡ್ಡಿ ಕೊಡುವದಾಗಿ ಮತ್ತು ಹಣ ದ್ವೀಗುಣ ಕೊಡುವದಾಗಿ ನಂಬಿಸಿ
ನಮ್ಮಿಂದ 15 ಲಕ್ಷ ರೂಪಾಯಿ ಜಮಾ ಇಟ್ಟುಕೊಂಡು (ಎಫ್.ಡಿ) ಹಣ ವಾಪಸ ಕೊಡದೆ ಮೋಸ ಹಾಗೂ ಅಪರಾಧಿಕ
ನಂಬಿಕೆ ದ್ರೋಹ ಬಗೆದು ತಲೆ
ಮರೆಸಿಕೊಂಡು ಓಡಿ
ಹೋಗಿರುತ್ತಾನೆ. 1)ಬಸವರಾಜ ತಂದೆ ಶಿವರಾಯ ಬಿರಾದಾರ 2)ಶ್ರೀಮತಿ ಶರಣಮ್ಮಾ ಗಂಡ ಬಸವರಾಜ ಬಿರಾದಾರ 3)ಬಸವರಾಜ ಇವರ ಅಳಿಯನಾದ ರಾಜೇಂದ್ರ 4)ಫೈನಾನ್ಸ್ ಮ್ಯಾನೇಜರ್ ಚಂದ್ರು ಮತ್ತು ಪಾಲುದಾರರು ಎಲ್ಲರೂ ಸಾ:ಕಲಬುರಗಿ ಇವರ ಮೇಲೆ ಕಾನೂನು
ರಿತ್ಯ ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment