POLICE BHAVAN KALABURAGI

POLICE BHAVAN KALABURAGI

21 June 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಶ್ರೀಮತಿ ಶೈಜಾದಬಿ ಗಂಡ ಮೌಲಾನಸಾಬ ಸೂಗೂರ ಸಾಃ ನರಿಬೊಳ ತಾಃ ಜೇವರಗಿ ರವರು ಮತ್ತು ನಮ್ಮೂರ ಬಸಮ್ಮ ಗಂಡ ಸುಬ್ಬರಾಯ ಕರಕಳ್ಳೀ, ಕಮಲಾಬಾಯಿ ಗಂಡ ಸಿದ್ದಣ್ಣ ರಾಮಾಣೆ, ಶಿವಲೀಲಾ ಗಂಡ ನಾಗಣ್ಣ ಹದನೂರ, ನಾಗರಾಜ ತಂದೆ ವಿಜಯ ನಾಯಕೋಡಿ, ದೇವರಾಜ ತಂದೆ ತಿಪ್ಪಣ್ಣ ಹಡಪದ ನಮ್ಮೂರ ಭೀಮಣ್ಣ ಈತನ ಟಂಟಂ ನಂ ಕೆ.ಎ33-6411 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಸಾಯಂಕಾಲ ಚೆನ್ನೂರ ಗ್ರಾಮದ ಹತ್ತಿರ ನರಿಬೋಳ ರೋಡಿನಲ್ಲಿ ಅದೇ ವೇಳೆಗೆ ಎದುರಿನಿಂದ ಒಂದು ಟ್ರ್ಯಾಕ್ಟರ್ ನಂ ಕೆ.ಎ33ಟಿ8875 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತ್ತಿದ್ದ ಟಂಟಂ ಕ್ಕೆ ಎದುರುಗಡೆಯಿಂದ ಡಿಕ್ಕಿ ಪಡಿಸಿದನು. ಆಗ ಟಂಟಂ ಪಲ್ಟಿಯಾಗಿ ರೊಡಿನಲ್ಲಿ ನಾವು ಟಂಟಂ ಸಮೇತ ಬಿದ್ದಿರುತ್ತೆವೆ. ಆಗ ನಾವು ಸಾವಕಾಶವಾಗಿ ಎದ್ದು ನೋಡಲಾಗಿ ನನಗೆ ಎಡಕೈ ಮೋಳಕೈ ಹತ್ತಿರ, ಎರಡು ಕಾಲುಗಳ ಮೋಳಕಾಲುಗಳಿಗೆ ತರಚಿತ ರಕ್ತ ಗಾಯವಾಗಿದ್ದು ಮತ್ತು ಎಡಗಾಲಿನ ಹೆಬ್ಬೆರಳಿಗೆ ರಕ್ತ ಗಾಯವಾಗಿದ್ದು, ಶಿವಲಿಲಾ ಇವಳ ತಲೆಗೆ ಮತ್ತು ಬಾಯಿಯ ಹತ್ತಿರ, ಗದ್ದಕ್ಕೆ, ಎದೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಬಲಗೈ ಮುಂಗೈ ಭಾರಿ ರಕ್ತಗಾಯವಾಗಿ ಮುರಿದಿದ್ದು ಮತ್ತು ದೇವರಾಜ ಈತನಿಗೆ ನೋಡಲಾಗಿ ತಲೆಯಲ್ಲಿ ಮತ್ತು ಎಡಕೈಗೆ ಭಾರಿ ರಕ್ತಗಾಯವಾಗಿದ್ದು ಉಳಿದವರಿಗೆ ಮತ್ತು ಟಂಟಂ ಚಾಲಕನಿಗೂ ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತಪೆಟ್ಟಾಗಿದ್ದು ಇರುತ್ತದೆ. ಟ್ರ್ಯಾಕ್ಟರ್ ಚಾಲಕನು ನಮಗಾದ ಗಾಯ ನೋಡಿ ಟ್ರ್ಯಾಕ್ಟರ್ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು 108 ಅಂಬ್ಯೂಲೇನ್ಸ್ನಲ್ಲಿ ನಾವೆಲ್ಲರೂ ಸರಕಾರಿ ಆಸ್ಪತ್ರೆ ಜೇವರಗಿಗೆ ಬಂದು ಉಪಚಾರಕ್ಕೆ ಸೇರಿಕೆಯಾಗಿರುತ್ತೆವೆ. ನಂತರ ನಮ್ಮೂರ ಬಸವರಾಜ ತಂದೆ ಶಿವಣ್ಣ ಹದನೂರ ಈತನು ಹೆಚ್ಚಿನ ಉಪಚಾರ ಕುರಿತು ದೇವರಾಜ, ಶಿವಲೀಲಾ, ನಾಗರಾಜ, ಬಸಮ್ಮ, ಮತ್ತು ಭೀಮಣ್ಣಾ ಇವರಿಗೆ ಅದೆ ಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೋದರು. ನಂತರ ನನಗೆ ಗೊತ್ತಾಗಿದ್ದೆನೆಂದರೆ ದೇವರಾಜ ತಂದೆ ತಿಪ್ಪಣ್ಣ ಹಡಪದ ಈತನು ಮತ್ತು ಶಿವಲೀಲಾ ಗಂಡ ನಾಗಣ್ಣ ಹದನೂರ ರಾತ್ರಿ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರಿ ಸೋಮಶೇಖರ ತಂದೆ ಗುರುಲಿಂಗಪ್ಪಾ ಸಾ: ಶಿಶುಪಾಲ ಖಾನವಳಿ ಹತ್ತಿರ ಜಗತ  ಕಲಬುರಗಿ ರವರು ದಿನಾಂಕ 20-06-2015 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಬಸವರಾಜ ಇಬ್ಬರೂ ಕೂಡಿಕೊಂಡು ನಡೆದುಕೊಂಡು ಜಗತ ಸರ್ಕಲ ಕಡೆಯಿಂದ ತಿರಂದಾಜ ಸರ್ಕಲ ಕಡೆಗೆ ಹೋಗುವಾಗ ಕೃಜರ ಜೀಪ ನಂಬರ ಕೆಎ-14 ಎ-7518 ನೇದ್ದರ ಚಾಲಕ ರಾಹುಲ ಇತನು ಕೃಜರ ಜೀಪನ್ನು ಜಗತ ಸರ್ಕಲ ಪಕ್ಕದಲ್ಲಿರುವ ಡಾ: ಶರಣಗೌಡ ಪಾಟೀಲ ಆಸ್ಪತ್ರೆಯ ಎದುರು ರೋಡ ಮೇಲೆ ಜೀಪ ನಿಲ್ಲಿಸಿದನ್ನು ಒಮ್ಮಲೆ ನಿಸ್ಕಾಳಿಜತನದಿಂದ ರಿವರ್ಸ ಚಲಾಯಿಸಿಕೊಂಡು ಬಂದು ಕೃಜರ ಜೀಪ ಪಕ್ಕದಲ್ಲಿ ಹೋಗುತ್ತಿದ್ದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗಾಲು ತೊಡೆ ಚೆಪ್ಪಗೆ ಭಾರಿಗುಪ್ತಪೆಟ್ಟುಗೊಳಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಲು ಗಂಡ ಕಲ್ಲು ರಾಠೋಡ ಸಾ : ದುಧನಿ ಮೇತ್ರೆ ತಾಂಡಾ  ತಾ : ಅಕ್ಕಲಕೋಟ  ರವರ ಹೊಲ ಅಫಜಲಪೂರ ತಾಲುಕಿನ ಬಡದಾಳ ಸಿಮಾಂತರದಲ್ಲಿರುತ್ತದೆ. ಸರ್ವೆ ನಂಬರ 327 ಇರುತ್ತದೆ. ನಮ್ಮ ಹೊಲದ ಬಾಜು ಧ್ಯಾಮು ತಂದೆ ವಾಚು ರಾಠೋಡ ಇವರ ಹೊಲ ಇರುತ್ತದೆ. ನಮ್ಮ ಹೊಲಕ್ಕೆ ನಿರಾವರಿ ಮಾಡಿದ್ದು ಇರುತ್ತದೆ, ಸದರಿ ನಿರಾವರಿಗೆ ಬೆಕಾಗುವ ಕರೆಂಟನ್ನು ನಮ್ಮ ಬಾಜು ಹೊಲದವನಾದ ದ್ಯಾಮು ರಾಠೋಡ ಇವನ ಹೊಲದಲ್ಲಿ ಕಂಬ ಹಾಕಿಕೊಂಡು ಬರಬೇಕಾಗುತ್ತದೆ. ಆದರೆ ಸದರಿ ಧ್ಯಾಮು ರಾಠೋಡ ಈತನು ಅವರ ಹೊಲದಲ್ಲಿ ಕಂಬ ಹಾಕಬೇಡಿ ಅಂತಾ ತಕರಾರು ಮಾಡಿ ಅವರಿಗೂ ನಮಗೂ ಈ ಹಿಂದೆ ಜಗಳ ಆಗಿರುತ್ತದೆ. ಅಂದಿನಿಂದ ದ್ಯಾಮು ಮತ್ತು ಅವನ ಮಕ್ಕಳು ನಮ್ಮ ಮೇಲೆ ಬಾರಿ ದ್ವೇಷ ಮಾಡಿಕೊಂಡಿರುತ್ತಾರೆ. ದಿನಾಂಕ 19-06-2015 ರಂದು ನಾನು ಮತ್ತು ನಮ್ಮ ನೆಗೆಣಿ ಕಾಶೀಬಾಯಿ ಗಂಡ ಶಿವಾಜಿ ರಾಠೊಡ ಇಬ್ಬರು ಕೂಡಿ ಬಡದಾಳ ಸಿಮಾಂತರದಲ್ಲಿರುವ ನಮ್ಮ ಹೊಲ ಸ ನಂ 327 ನೇದ್ದಕ್ಕೆ ಹೋಗಿರುತ್ತೆವೆ, ಅಂದಾಜು ಸಾಯಂಕಾಲ 4:00 ಗಂಟೆ ಸುಮಾರಿಗೆ ನಾವಿಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ನಮ್ಮ ಬಾಜು ಹೊಲದವರಾದ 1) ಧ್ಯಾಮು ತದೆ ವಾಚು ರಾಠೋಡ  ಮತ್ತು ಅವನ ಮಕ್ಕಳಾದ 2) ಪ್ರಕಾಶ ತಂದೆ ಧ್ಯಾಮು ರಾಠೋಡ 3) ಡಿಗ್ಗು ತಂದೆ ದ್ಯಾಮು ರಾಠೋಡ 4) ಸುನೀಲ ತಂದೆ ಧ್ಯಾಮು ರಾಠೋಡ ಸಾ: ಎಲ್ಲರೂ ದುಧನಿ ಮೇತ್ರಿ ತಾಂಡಾ ನಂ 1 ಇವರು ನಮ್ಮ ಹೊಲದ ಬಾಂದಾರಿ ಹತ್ತಿರ ಬಂದು ಏನೆ ರಂಡ್ಯಾರೆ ನಮ್ಮ ಹೊಲದಲ್ಲಿಯೆ ಕರೆಂಟ ಕಂಬ ಹಾಕ್ತಿನಿ ಅಂತಾ ಹೇಳ್ತಿರಿ ಅಂತಾ ನನಗೆ ಮತ್ತು ನನ್ನ ನೇಗೆಣಿ ಕಾಶಿಬಾಯಿ ಇಬ್ಬರಿಗೆ ಬೈಯುತ್ತಿದ್ದರು. ಆಗ ನಾವಿಬ್ಬರು ಅವರ ಸಮೀಪ ಹೋಗಿ ಯಾಕೆ ಬೈತಿ ಅಂತಾ ಕೇಳಿದಕ್ಕೆ ಧ್ಯಾಮು ಈತನು ಏನೆ ಬೋಸಡಾ ನನಗೆ ತಿರುಗಿ ಮಾತಾಡ್ತಿ ಅಂತಾ ನನ್ನ ಸೀರೆ ಹಿಡಿದು ಏಳೆದು ಕೈಯಿಂದ ಹೊಡೆದನು, ಹಾಗೂ ಅವನ ಮಕ್ಕಳು ಈ ರಂಡಿ ಇವತ್ತು ಬಿಡಬ್ಯಾಡ ಅಂತಾ ಹೇಳಿ ಮೂರು ಜನರು ನನಗೆ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ, ಹಾಗೂ ದ್ಯಾಮು ಈತನು ಅಲ್ಲಿಯೆ ಬಿದ್ದ ಒಂದು ಕಲ್ಲು ತಗೆದುಕೊಂಡು ನನ್ನ ಹೊಟ್ಟೆಯ ಮೇಲೆ ಹೊಡೆದಿರುತ್ತಾನೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ನೆಗೆಣಿ ಕಾಶೀಬಾಯಿ ಇವಳು ಬಿಡಿಸಲು ಬಂದಾಗ ಅವಳಿಗೂ ಸಹ ನಾಲ್ಕು ಜನರು ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ದತ್ತು ಕುಮಾರ ತಂದೆ ಕಿಶನರಾವ ಬಾಸುತಕರ ಸಾಃ ಪ್ಲಾಟ ನಂ 23 ಎಸ್‌ವಾಯ್ಹಿ 25 ನವಜೀವನ ನಗರ ಕಲಬುರಗಿ ರವರು ತಮ್ಮ  ಹೀರೊ ಹೊಂಡಾ ಪ್ರೋ ಮೊಟಾರ ಸೈಕಲ ನಂ ಕೆಎ 32  ವಾಯ್ಹ್‌ 2345 ನೇದ್ದು ಖರೀದಿ ಮಾಡಿದ್ದು ಆ ಮೋಟಾರ ಸೈಕಲ್ ನ್ನು  ದಿನಾಂಕಃ 19.06.2015 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ಮತ್ತು ನ್ನನ ಸ್ನೇಹಿತನಾದ ಸೂರ್ಯಾಕಾಂತ  ತಂದೆ ಶಿವಶರಣಪ್ಪ  ಬಿರಾಳಕರ  ಇಬ್ಬರು ಕೂಡಿ ಮಾರ್ಕೆಟಕ್ಕೆ ಬಂದು ಪ್ರಕಾಶ ಟಾಕೀಜ ಹತ್ತಿರ ನಿಲ್ಲಿಸಿ ನನ್ನ ಖಾಸಗಿ ಕೆಲಸದ ನಿಮಿತ್ಯಾವಾಗಿ ನಾವು ಹೋಗಿದ್ದು  ಮರಳಿ 10.00 ಗಂಟೆಗೆ ನಾವು ನಿಲ್ಲಿಸಿ ಹೋಗಿರುವ ಜಾಗೆ ಬಂದು ನೋಡಿದ್ದಾಗ ನನ್ನ ಮೋಟಾರ ಸೈಕಿಲ್‌ ನಂ ಕೆಎ 32  ವಾಯ್ಹ್‌ 2345 ನೇದ್ದು ಇರಲ್ಲಿಲ. ನಂತರ ನಾವು ಗಾಬರಿಯಾಗಿ ನಾನು ಮತ್ತು ಸ್ನೇಹಿತ  ಕೂಡಿ ಎಲ್ಲಾ ಕಡೆ ಹುಡಕಾಡಿದ್ದು ಸಿಕ್ಕಿರುವದಿಲ್ಲ.  ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಅಂದಾಜು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಪುರುಷನು ಅಶಕ್ತನಾಗಿ ಯಾವುದೋ ಒಂದು ರೋಗದಿಂದ ಬಳಲಿ ಅಥವಾ ಆಕಸ್ಮಿಕವಾಗಿ ಕೆಳಗೆ ಬಿದ್ದು ಜೇವರಗಿ ಪಟ್ಟಣದ ಹೊರ ವಲಯದ ಸುನ್ನಿ ದಾರು-ಉಲುಮ್ ಶಾಲೆಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 June 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 19-06-2015 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿ.ಪಿ.ಐ ಸಾಹೇಬರಾದ ಸಂಗಮೇಶ ಪಾಟೀಲ ಹಾಗೂ ಪಿ.ಎಸ್.ಐ. ಅಫಜಲಪೂರ  ಮತ್ತು ನಮ್ಮ ಸಿಬ್ಬಂದಿ ಹಾಗು ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪ  ದೂರು ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಧರೆಪ್ಪ ತಂದೆ ಶ್ರೀಕಾಂತ ಡಾಂಗೆ ಸಾ: ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿ ವ್ಯಕ್ತಿ ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಮಹಾರಾಷ್ಟ್ರದ ದುಧನಿ, ಅಕ್ಕಲಕೋಟ ಪಟ್ಟಣಗಳಿಗೆ ಹೋಗಿ, ಬಸ್ ನಿಲ್ದಾಣಗಳಲ್ಲಿ ತಿರುಗಾಡಿ ಮಟಕಾ ತಗೆದುಕೊಳ್ಳುವ ಬಗ್ಗೆ ಕೇಳಿ ಅವರಿಗೆ ಮಟಕಾ ಬರೆದುಕೊಂಡ ನಂಬರಗಳನ್ನು ಹಾಗೂ ಹಣವನ್ನು ಕೊಟ್ಟು ಬರುತ್ತೆನೆ. ಸದರಿಯವರ ಹೆಸರು ವಿಳಾಸದ ಬಗ್ಗೆ ನನಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿರುತ್ತಾನೆ. ನಂತರ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ, ಒಂದು ಮೋಬೈಲ ಪೋನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 18.06.2015 23:00 ಗಂಟೆಯಿಂದ ದಿನಾಂಕ 19.06.2015 ರ ೦೦:೦೦ ಮಧ್ಯದ ಅವಧಿಯಲ್ಲಿ ನನ್ನ ಮಗ ಪವನಕುಮಾರ ಈತನು  ಮೋಟಾರು ಸೈಕಲ್ ನಂ ಕೆ.ಎ32ಎಸ್6699 ನೇದ್ದರ ಮೇಲೆ ದೇವಿಂದ್ರಪ್ಪ ಚಾಕರೆ ಈತನಿಗೆ ಕೂಡಿಸಿಕೊ0ಡು ಕಲಬುರಗಿಯಿಂದ ಗೋಗಿ ಕೆ ಕಡೆಗೆ ಜೇವರಗಿ ಪಟ್ಟಣದ ಬೂತಪುರ ಕಲ್ಯಾಣ ಮಂಟಪದ ಎದುರು ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ರೋಡಿನ ಸೈಡಿನಿಂದ ಹೋಗುತ್ತಿದ್ದ ವೇಳೆಗೆ ಶಹಾಪುರ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಎದುರುಗಡೆಯಿಂದ ಡಿಕ್ಕಿ ಪಡೆಸಿ ಅವರಿಗೆ ಭಾರಿ ರಕ್ತ ಗಾಯಗೊಳಿಸಿ ನನ್ನ ಮಗ ಪವನಕುಮಾರ ಈತನು ಸ್ಥಳದಲ್ಲಿಯೆ ಮೃತಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ  ಶ್ರೀಮತಿ ಮಾಪಮ್ಮ ಗಂಡ ರಮೇಶ ನಾಮಾನವರ ಸಾ|| ಮುರಡಿ ತಾ|| ಆಳಂದ  ರವರು ಸಲ್ಲಿಸಿದ  ದೂರು  ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ : ಶ್ರೀ ಅಮರನಾಥ ತಂದೆ ಬಾಬುರಾವ ದುಲಂಗೆ ಸಾ:ರವರಿವಾರ ಪೇಟ ಶೇಳ್ಳಗಿ ಸೊಲ್ಲಾಪುರ ಮತ್ತು ಹೆಂಡತಿ ಮಿನಾಕ್ಷಿ ಕೂಡಿ ದಿನಾಂಕ: 16-06-2015 ರಂದು ಮದ್ಯಾನ ಸೊಲ್ಲಾಪುರದಿಂದ ನಮ್ಮ ಮನೇಯ ದೇವರ ಊರಾದ ಸಾವಳೇಶ್ವರಕ್ಕೆ ಹೊಗಿ ಬರುವದಕ್ಕಾಗಿ ಮೋಟರ ಸೈಕಲ ನಂ ಎಮ್ ಹೆಚ್, 13 ,ಯು 7374 ಹೊಂಡಾ ಶೈನ ಮೇಲೆ ಕುಳಿತು ಅಕ್ಕಲಕೊಟ ಮಾರ್ಗವಾಗಿ ಸಾವಳೆಶ್ವರ ಕ್ಕೆ ಬರುವಾಗ ನಾವು ಸಾಯಂಕಾಲ ಹಾಸು ದಾಬಾದ ಹತ್ತಿರದಲ್ಲಿ ರಸ್ತೇಯ ಮೇಲೆ ನಾವೂ ಹೊಗುವಾಗ ನಮ್ಮ ಎದುರಿನಿಂದ ಮೋಟರ ಸೈಕಲ್ ನಂ ಎಮ್ ಹೆಚ್ 25 6845 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದನು ಆಗ ನಾನು ಮತ್ತು ನನ್ನ ಹೆಂಡತಿ ಮಿನಾಕ್ಷಿ ಇಬ್ಬರು ನಮ್ಮ ಮೋಟರ ಸೈಕಲ ಮೇಲಿಂದ ಹಾರಿ ಕೆಳಗೆ ಬಿದ್ದೆವೂ. ಆಗ ನಾನು ನೋಡಲಾಗಿ ನನ್ನ ಎಡಗಾಲಿನ ಮೊಳಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತ ಬರುತಿದ್ದು ಅಲ್ಲದೆ ಎರಡು ಹಸ್ತಕ್ಕೆ ಮತ್ತು ಬಲಗೈ ಮುಂಗೈಗೆ ಸಹ ಗಾಯಗಳಾಗಿ ರಕ್ತ ಬರುತಿತ್ತು ಆಗ ನನ್ನ ಹೆಂಡತಿಗೆ ನೊಡಲಾಗಿ ಆಕೇಯ ಬಲ ಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತ ಗಾಯವಾಗಿದ್ದು ಮತ್ತು ಬಲಗಾಲಿನ ಪಾದದ ಮೇಲಿನ ಕಾಲು ಸಹ ಮುರಿದಿದ್ದು ಅಲ್ಲದೆ ಎಡಗಾಲು ಮೊಳಕಾಲಿಗೆ ರಕ್ತ ಗಾಯ ವಾಗಿದ್ದು ಮತ್ತು ಎಡಗೈ ಮುಂಗೈ ಮತ್ತು ಎಡ ಗಲ್ಲ, ಗದ್ದಕ್ಕೆ ಸಹ ಬಡಿದು ತೇರಚಿದ ಹಾಗು ರಕ್ತ ಗಾಯ ವಾಗಿ ನನ್ನ ಹೆಂಡತಿ ಚಿರಾಡುತಿದ್ದನ್ನು ನೊಡಿ ಅಲ್ಲಿಯೆ ದಾಬಾದಲಲ್ಲಿದ್ದ ಎರಡು ಮೂರು ಜನರು ಒಡಿ ಬಂದು ನಮಗೆ ನೀರು ಕುಡಿಸಿ ರಸ್ತೇಯಲ್ಲಿ ಹೊಗುತಿದ್ದ ಒಂದು ಖಾಸಗಿ ಜೀಪಿನಲ್ಲಿ ನನಗೆ ಮತ್ತು ನನ್ನ ಹೆಂಡತಿಗಹೆ ಕುಡಿಸಿ ಉಪಚಾರಕ್ಕಾಗಿ ನಮಗೆ ಸೊಲ್ಲಾಪುರಕ್ಕೆ ಕಳುಹಿಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 June 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 16.06.2015 ರಂದು ಸಾಯಂಕಾಲ ನಾನು ಮತ್ತು ನಮ್ಮೂರ ಸಂಗೀತಾ ಗಂಡ ನೀಲು ರಾಠೋಡ, ಬಾಬು ತಂದೆ ಬೋಜು ನಾಯಕ ರಾಠೋಡ ,ರೇಣುಕಾ ಗಂಡ ಭೀಮು ರಾಠೋಡ ಎಲ್ಲರು ಕುಳಿತುಕೊಂಡು ಆರೋಪಿತನು ನಡೆಸುತ್ತಿದ್ದ ಟಂಟಂ ನಂ ಕೆ.ಎ33-9983 ನೇದ್ದರಲ್ಲಿ ಕೂಳಿತುಕೊಂಡು ಹೋಗುತ್ತಿದ್ದಾಗ ಸಂಗಮೇಶ ಬಿರಾದಾರ ಸಾ|| ಅವರಾದ್ ಇವರ ಹೊಲದ ಹತ್ತಿರ ಜೇವರಗಿ ಶಹಾಪುರ ಮೇನ್‌ ರೋಡ್‌ ಮೇಲೆ ಹೋಗುತ್ತಿದ್ದಾಗ ನಾವು ಕುಳಿತ ಟಂಟಂ ಚಾಲಕನು ಮುಂದೆ ಹೋಗುತ್ತಿದ್ದ ಬಸ್‌ಗೆ ಕಟ್ ಹೋಡೆಯಲು ಹೋಗಿ ಟಂಟಂ ಅನ್ನು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟಂಟಂ ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಗಳಾಗಿರುತ್ತವೆ ಅಂತಾ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 17.06.2015 ರಂದು ರಸ್ತೆ ಅಪಘಾತದಲ್ಲಿ ಭಾರಿ ಗಾಯಪೆಟ್ಟು ಹೊಂದಿದ ನಮ್ಮ ತಂದೆ ಬಾಬು ನಾಯಕ್ ರಾಠೋಡ ಈತನಿಗೆ ಹೆಚ್ಚಿನ ಉಪಚಾರ ಕುರಿತು ಅಂಬ್ಯೂಲೇನ್ಸ ಮೂಲಕ ಕಲಬುರಗಿ ಯುನೈಟೇಡ್ ಆಸ್ಪತ್ರೆಯಿಂದ ಸೋಲಾಪುರಕ್ಕೆ ಜೇವರಗಿ ಮಾರ್ಗವಾಗಿ ಹೋಗುತ್ತಿದ್ದಾಗ ಫರತಾಹಾಬಾದ್ ಸಮೀಪ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಕುಮಾರಿ ಫಿರಮ್ಮಾ ತಂದೆ ರಾಮಣ್ಣ ನಗದಿ ಇವಳು ದಿನಾಂಕ 15/06/2015 ರಂದು 6.00 ಎಎಮ್ ಕ್ಕೆ ಶಿವಪೂರ ಗ್ರಾಮದ ತನ್ನ ಮನೆಯಲ್ಲಿ ಅಡುಗೆ ಮಾಡಲು ಸ್ಟೋ ಹಚ್ಚಿದಾಗ ಸ್ಟೋ ಬ್ಲಾಸ್ಟಾಗಿ ಬೆಂಕಿ ಫಿರಮ್ಮಾ ಇವಳಿಗೆ ತಾಗಿ ಫಿರಮ್ಮಾಳ ಮೈಗೆ ಬೆಂಕಿ ಹತ್ತಿ ಸುಟ್ಟು ಗಂಭೀರವಾಗಿ ಗಾಯಗೊಂಡು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ  ಇಂದು ದಿನಾಂಕ 18/06/2015 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಸದರಿ ಘಟನೆ ಆಕಸ್ಮಿಕವಾಗಿ ಜರೂಗಿದ್ದು ಇರುತ್ತದೆ ಅಂತಾ ಶ್ರೀ ರಾಮಣ್ಣಾ ತಂದೆ ಶರಣಪ್ಪಾ ನಗದಿ ಸಾ: ಶಿವಪೂರ ತಾ : ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ವೆಂಕಟಯ್ಯ ಅಲ್ಲಾಪೂರೆ ಸಾ|| ಮುಧೋಳ ಗ್ರಾಮ ಇವರ ಗಂಡ ಸುಮಾರು 04 ವರ್ಷಗಳ  ಹಿಂದೆ ತೀರಿಕೊಂಡಿರುತ್ತಾರೆ ನನ್ನ ಇಬ್ಬರು ಗಂಡು ಮಕ್ಕಳಾಧ ಶ್ರಿನಿವಾಸ ಮತ್ತು ಶ್ರಿಕಾಂತ ಇವರು ಬೀದರ ಜಿಲ್ಲೆಯಲ್ಲಿ ನೌಕರಿ ಮಾಡುತ್ತಾರೆ ಮುಧೋಳಗ್ರಾಮದಲ್ಲಿ ನಾನು ಒಬ್ಬಳೆ ಇರುತ್ತೆನೆ ನಮ್ಮ ಮನೆ ದೊಡ್ಡ ವಟ್ಟಾರದ ಮನೆ ಇದ್ದು ನಾನು ಎರಡು  ಕೊಣೆಯಲ್ಲಿದ್ದು ಉಳಿದ ಮನೆಗಳ ಬಾಡಿಗೆಗೆ ಕೊಟ್ಟಿರುತ್ತೆನೆ, ನಿನ್ನೆ ದಿನಾಂಕ 17-06-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಾನು ಒಂದು ಕೊಣೆಯ ಹೊರಗಿನಿಂದ ಬಾಗಿಲು ಕೀಲಿ ಹಾಕಿ ಇನ್ನೊಂದು ಕೊಣೆಗೆ ಹೋಗಿ ಮಲಗಿ ಕೊಂಡಿರುತ್ತೆನೆ ಇಂದು ದಿನಾಂಕ 18-06-2015 ರಂದು ಮುಂಜಾನೆ 06 ಗಂಟೆಯ ಸುಮಾರಿಗೆ ನಾನು  ಮನೆ ಕಸ ಗೂಡಿಸುವ  ಸಲುವಾಗಿ ನಾನು ಮಲಗಿರುವ ಕೊಣೆಯಿಂದ ಎದ್ದು ಇನ್ನೊಂದು ಕೊಣೆಯ ಹತ್ತಿರ ಬಂದು ನೋಡಲಾಗಿ ಅದಕ್ಕೆ ಹೊರಗಿನಿಂದ ಬಾಗಿಲು ತೆರೆದಿತ್ತು ಮತ್ತು ಅದಕ್ಕೆ ಹಾಕಿರುವ  ಕೀಲಿ  ಮುರಿದು ಅಲ್ಲಿಯೇ ಬಿದ್ದತ್ತು ನಾನು ಗಾಬರಿಯಾಗಿ ಮನೆಯ ಒಳಗಡೆ ಹೋಗಿ ನೋಡಲಾಗಿ  ಆ ಮನೆಯಲ್ಲಿದ ಆಲಮರಿ ತೆರೆದಿತ್ತು  ಅದರಲ್ಲಿದ್ದ ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ದೇವರ ಕೊಣೆಯಲ್ಲಿ ನೋಡಲಾಗಿ ಒಂದು ಡಬ್ಬಿಯಲ್ಲಿ ಇಟ್ಟಿದ 1] ಎರಡು ಬಂಗಾರ ಚೈನು ಒಂದೊಂದು ಎರಡುವರೆ ತೊಲ ಒಟ್ಟು  05 ತೊಲ ಅ,ಕಿ 1,25,000=00 ಸಾವಿರ ರೂಪಾಯಿಗಳು  2] ಒಂದು ಬೆಳ್ಳಿಯ ತಂಬಿಗೆ ಅಂದಾಜು 500 ಗ್ರಾಮ ಅದರ  ಅ.ಕಿ  18,000 = ಸಾವಿರ ರೂಪಾಯಿಗಳು  3] ದೇವರ ಗಲ್ಲಾ ದಲ್ಲಿದ್ದ ಅಂದಾಜ 300= 00 ಮುನ್ನೂರು  ರೂಪಾಯಿಗಳು ಇರಲ್ಲಿಲ್ಲಾ  ಹೀಗೆ ಒಟ್ಟು 1,43,300.= 00 ರೂಪಾಯಿ ಮೌಲ್ಯದ  ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.