ಅಪಘಾತ ಪ್ರಕರಣಗಳು
:
ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಶ್ರೀಮತಿ ಶೈಜಾದಬಿ ಗಂಡ ಮೌಲಾನಸಾಬ ಸೂಗೂರ ಸಾಃ ನರಿಬೊಳ ತಾಃ ಜೇವರಗಿ ರವರು ಮತ್ತು ನಮ್ಮೂರ ಬಸಮ್ಮ ಗಂಡ ಸುಬ್ಬರಾಯ ಕರಕಳ್ಳೀ, ಕಮಲಾಬಾಯಿ ಗಂಡ ಸಿದ್ದಣ್ಣ ರಾಮಾಣೆ, ಶಿವಲೀಲಾ ಗಂಡ ನಾಗಣ್ಣ ಹದನೂರ, ನಾಗರಾಜ ತಂದೆ ವಿಜಯ ನಾಯಕೋಡಿ, ದೇವರಾಜ ತಂದೆ ತಿಪ್ಪಣ್ಣ ಹಡಪದ ನಮ್ಮೂರ ಭೀಮಣ್ಣ ಈತನ ಟಂಟಂ ನಂ ಕೆ.ಎ33-6411 ನೇದ್ದರಲ್ಲಿ ಕುಳಿತುಕೊಂಡು
ಹೋಗುತ್ತಿದ್ದಾಗ ಸಾಯಂಕಾಲ ಚೆನ್ನೂರ ಗ್ರಾಮದ ಹತ್ತಿರ ನರಿಬೋಳ ರೋಡಿನಲ್ಲಿ ಅದೇ ವೇಳೆಗೆ
ಎದುರಿನಿಂದ ಒಂದು ಟ್ರ್ಯಾಕ್ಟರ್ ನಂ ಕೆ.ಎ33ಟಿ8875 ನೇದ್ದರ ಚಾಲಕನು ತನ್ನ
ಟ್ರ್ಯಾಕ್ಟರ್ ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತ್ತಿದ್ದ ಟಂಟಂ ಕ್ಕೆ
ಎದುರುಗಡೆಯಿಂದ ಡಿಕ್ಕಿ ಪಡಿಸಿದನು. ಆಗ ಟಂಟಂ
ಪಲ್ಟಿಯಾಗಿ ರೊಡಿನಲ್ಲಿ ನಾವು ಟಂಟಂ ಸಮೇತ ಬಿದ್ದಿರುತ್ತೆವೆ. ಆಗ ನಾವು ಸಾವಕಾಶವಾಗಿ ಎದ್ದು ನೋಡಲಾಗಿ ನನಗೆ ಎಡಕೈ ಮೋಳಕೈ ಹತ್ತಿರ, ಎರಡು ಕಾಲುಗಳ
ಮೋಳಕಾಲುಗಳಿಗೆ ತರಚಿತ
ರಕ್ತ ಗಾಯವಾಗಿದ್ದು ಮತ್ತು ಎಡಗಾಲಿನ ಹೆಬ್ಬೆರಳಿಗೆ ರಕ್ತ ಗಾಯವಾಗಿದ್ದು, ಶಿವಲಿಲಾ ಇವಳ ತಲೆಗೆ ಮತ್ತು ಬಾಯಿಯ ಹತ್ತಿರ,
ಗದ್ದಕ್ಕೆ, ಎದೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ
ಬಲಗೈ ಮುಂಗೈ ಭಾರಿ ರಕ್ತಗಾಯವಾಗಿ ಮುರಿದಿದ್ದು ಮತ್ತು ದೇವರಾಜ ಈತನಿಗೆ ನೋಡಲಾಗಿ ತಲೆಯಲ್ಲಿ ಮತ್ತು ಎಡಕೈಗೆ ಭಾರಿ ರಕ್ತಗಾಯವಾಗಿದ್ದು
ಉಳಿದವರಿಗೆ ಮತ್ತು ಟಂಟಂ ಚಾಲಕನಿಗೂ ಸಾದಾ ಮತ್ತು ಭಾರಿ
ರಕ್ತಗಾಯ ಮತ್ತು ಗುಪ್ತಪೆಟ್ಟಾಗಿದ್ದು ಇರುತ್ತದೆ. ಟ್ರ್ಯಾಕ್ಟರ್ ಚಾಲಕನು ನಮಗಾದ ಗಾಯ ನೋಡಿ ಟ್ರ್ಯಾಕ್ಟರ್ನ್ನು ಸ್ಥಳದಲ್ಲಿಯೆ ಬಿಟ್ಟು
ಓಡಿ ಹೋಗಿದ್ದು 108 ಅಂಬ್ಯೂಲೇನ್ಸ್ನಲ್ಲಿ
ನಾವೆಲ್ಲರೂ ಸರಕಾರಿ ಆಸ್ಪತ್ರೆ ಜೇವರಗಿಗೆ
ಬಂದು ಉಪಚಾರಕ್ಕೆ ಸೇರಿಕೆಯಾಗಿರುತ್ತೆವೆ. ನಂತರ ನಮ್ಮೂರ ಬಸವರಾಜ ತಂದೆ ಶಿವಣ್ಣ ಹದನೂರ ಈತನು ಹೆಚ್ಚಿನ ಉಪಚಾರ ಕುರಿತು ದೇವರಾಜ, ಶಿವಲೀಲಾ, ನಾಗರಾಜ, ಬಸಮ್ಮ, ಮತ್ತು ಭೀಮಣ್ಣಾ ಇವರಿಗೆ ಅದೆ ಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೋದರು.
ನಂತರ ನನಗೆ ಗೊತ್ತಾಗಿದ್ದೆನೆಂದರೆ ದೇವರಾಜ
ತಂದೆ ತಿಪ್ಪಣ್ಣ ಹಡಪದ ಈತನು ಮತ್ತು ಶಿವಲೀಲಾ ಗಂಡ ನಾಗಣ್ಣ ಹದನೂರ ರಾತ್ರಿ
ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರಿ ಸೋಮಶೇಖರ ತಂದೆ ಗುರುಲಿಂಗಪ್ಪಾ ಸಾ: ಶಿಶುಪಾಲ ಖಾನವಳಿ ಹತ್ತಿರ
ಜಗತ ಕಲಬುರಗಿ ರವರು ದಿನಾಂಕ 20-06-2015 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ
ಬಸವರಾಜ ಇಬ್ಬರೂ ಕೂಡಿಕೊಂಡು ನಡೆದುಕೊಂಡು ಜಗತ ಸರ್ಕಲ ಕಡೆಯಿಂದ ತಿರಂದಾಜ ಸರ್ಕಲ ಕಡೆಗೆ
ಹೋಗುವಾಗ ಕೃಜರ ಜೀಪ ನಂಬರ ಕೆಎ-14 ಎ-7518 ನೇದ್ದರ ಚಾಲಕ ರಾಹುಲ ಇತನು ಕೃಜರ ಜೀಪನ್ನು ಜಗತ
ಸರ್ಕಲ ಪಕ್ಕದಲ್ಲಿರುವ ಡಾ: ಶರಣಗೌಡ ಪಾಟೀಲ ಆಸ್ಪತ್ರೆಯ ಎದುರು ರೋಡ ಮೇಲೆ ಜೀಪ ನಿಲ್ಲಿಸಿದನ್ನು
ಒಮ್ಮಲೆ ನಿಸ್ಕಾಳಿಜತನದಿಂದ ರಿವರ್ಸ ಚಲಾಯಿಸಿಕೊಂಡು ಬಂದು ಕೃಜರ ಜೀಪ ಪಕ್ಕದಲ್ಲಿ ಹೋಗುತ್ತಿದ್ದ
ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗಾಲು ತೊಡೆ ಚೆಪ್ಪಗೆ ಭಾರಿಗುಪ್ತಪೆಟ್ಟುಗೊಳಿಸಿದ್ದು
ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಲು ಗಂಡ ಕಲ್ಲು ರಾಠೋಡ ಸಾ : ದುಧನಿ ಮೇತ್ರೆ
ತಾಂಡಾ ತಾ : ಅಕ್ಕಲಕೋಟ ರವರ ಹೊಲ ಅಫಜಲಪೂರ ತಾಲುಕಿನ ಬಡದಾಳ
ಸಿಮಾಂತರದಲ್ಲಿರುತ್ತದೆ. ಸರ್ವೆ ನಂಬರ 327 ಇರುತ್ತದೆ. ನಮ್ಮ ಹೊಲದ ಬಾಜು ಧ್ಯಾಮು ತಂದೆ ವಾಚು
ರಾಠೋಡ ಇವರ ಹೊಲ ಇರುತ್ತದೆ. ನಮ್ಮ ಹೊಲಕ್ಕೆ ನಿರಾವರಿ ಮಾಡಿದ್ದು ಇರುತ್ತದೆ, ಸದರಿ ನಿರಾವರಿಗೆ ಬೆಕಾಗುವ ಕರೆಂಟನ್ನು ನಮ್ಮ ಬಾಜು ಹೊಲದವನಾದ ದ್ಯಾಮು
ರಾಠೋಡ ಇವನ ಹೊಲದಲ್ಲಿ ಕಂಬ ಹಾಕಿಕೊಂಡು ಬರಬೇಕಾಗುತ್ತದೆ. ಆದರೆ ಸದರಿ ಧ್ಯಾಮು ರಾಠೋಡ ಈತನು ಅವರ
ಹೊಲದಲ್ಲಿ ಕಂಬ ಹಾಕಬೇಡಿ ಅಂತಾ ತಕರಾರು ಮಾಡಿ ಅವರಿಗೂ ನಮಗೂ ಈ ಹಿಂದೆ ಜಗಳ ಆಗಿರುತ್ತದೆ.
ಅಂದಿನಿಂದ ದ್ಯಾಮು ಮತ್ತು ಅವನ ಮಕ್ಕಳು ನಮ್ಮ ಮೇಲೆ ಬಾರಿ ದ್ವೇಷ ಮಾಡಿಕೊಂಡಿರುತ್ತಾರೆ. ದಿನಾಂಕ
19-06-2015 ರಂದು ನಾನು ಮತ್ತು ನಮ್ಮ ನೆಗೆಣಿ ಕಾಶೀಬಾಯಿ ಗಂಡ ಶಿವಾಜಿ ರಾಠೊಡ ಇಬ್ಬರು ಕೂಡಿ
ಬಡದಾಳ ಸಿಮಾಂತರದಲ್ಲಿರುವ ನಮ್ಮ ಹೊಲ ಸ ನಂ 327 ನೇದ್ದಕ್ಕೆ ಹೋಗಿರುತ್ತೆವೆ, ಅಂದಾಜು ಸಾಯಂಕಾಲ 4:00 ಗಂಟೆ ಸುಮಾರಿಗೆ ನಾವಿಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ,
ನಮ್ಮ ಬಾಜು ಹೊಲದವರಾದ 1) ಧ್ಯಾಮು ತದೆ ವಾಚು ರಾಠೋಡ ಮತ್ತು ಅವನ ಮಕ್ಕಳಾದ 2) ಪ್ರಕಾಶ ತಂದೆ ಧ್ಯಾಮು ರಾಠೋಡ
3) ಡಿಗ್ಗು ತಂದೆ ದ್ಯಾಮು ರಾಠೋಡ 4) ಸುನೀಲ ತಂದೆ ಧ್ಯಾಮು ರಾಠೋಡ ಸಾ: ಎಲ್ಲರೂ ದುಧನಿ ಮೇತ್ರಿ
ತಾಂಡಾ ನಂ 1 ಇವರು ನಮ್ಮ ಹೊಲದ ಬಾಂದಾರಿ ಹತ್ತಿರ ಬಂದು ಏನೆ ರಂಡ್ಯಾರೆ ನಮ್ಮ ಹೊಲದಲ್ಲಿಯೆ
ಕರೆಂಟ ಕಂಬ ಹಾಕ್ತಿನಿ ಅಂತಾ ಹೇಳ್ತಿರಿ ಅಂತಾ ನನಗೆ ಮತ್ತು ನನ್ನ ನೇಗೆಣಿ ಕಾಶಿಬಾಯಿ ಇಬ್ಬರಿಗೆ
ಬೈಯುತ್ತಿದ್ದರು. ಆಗ ನಾವಿಬ್ಬರು ಅವರ ಸಮೀಪ ಹೋಗಿ ಯಾಕೆ ಬೈತಿ ಅಂತಾ ಕೇಳಿದಕ್ಕೆ ಧ್ಯಾಮು ಈತನು
ಏನೆ ಬೋಸಡಾ ನನಗೆ ತಿರುಗಿ ಮಾತಾಡ್ತಿ ಅಂತಾ ನನ್ನ ಸೀರೆ ಹಿಡಿದು ಏಳೆದು ಕೈಯಿಂದ ಹೊಡೆದನು,
ಹಾಗೂ ಅವನ ಮಕ್ಕಳು ಈ ರಂಡಿ ಇವತ್ತು ಬಿಡಬ್ಯಾಡ ಅಂತಾ ಹೇಳಿ ಮೂರು ಜನರು ನನಗೆ
ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡಿರುತ್ತಾರೆ, ಹಾಗೂ
ದ್ಯಾಮು ಈತನು ಅಲ್ಲಿಯೆ ಬಿದ್ದ ಒಂದು ಕಲ್ಲು ತಗೆದುಕೊಂಡು ನನ್ನ ಹೊಟ್ಟೆಯ ಮೇಲೆ
ಹೊಡೆದಿರುತ್ತಾನೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ನೆಗೆಣಿ ಕಾಶೀಬಾಯಿ ಇವಳು ಬಿಡಿಸಲು
ಬಂದಾಗ ಅವಳಿಗೂ ಸಹ ನಾಲ್ಕು ಜನರು ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ದತ್ತು ಕುಮಾರ ತಂದೆ ಕಿಶನರಾವ
ಬಾಸುತಕರ ಸಾಃ ಪ್ಲಾಟ ನಂ 23 ಎಸ್‌ವಾಯ್ಹಿ 25 ನವಜೀವನ ನಗರ ಕಲಬುರಗಿ ರವರು ತಮ್ಮ ಹೀರೊ ಹೊಂಡಾ ಪ್ರೋ ಮೊಟಾರ ಸೈಕಲ ನಂ ಕೆಎ 32 ವಾಯ್ಹ್ 2345 ನೇದ್ದು ಖರೀದಿ ಮಾಡಿದ್ದು ಆ ಮೋಟಾರ ಸೈಕಲ್
ನ್ನು ದಿನಾಂಕಃ 19.06.2015 ರಂದು ರಾತ್ರಿ 9.00
ಗಂಟೆಯ ಸುಮಾರಿಗೆ ನಾನು ಮತ್ತು ನ್ನನ ಸ್ನೇಹಿತನಾದ ಸೂರ್ಯಾಕಾಂತ ತಂದೆ ಶಿವಶರಣಪ್ಪ ಬಿರಾಳಕರ
ಇಬ್ಬರು ಕೂಡಿ ಮಾರ್ಕೆಟಕ್ಕೆ ಬಂದು ಪ್ರಕಾಶ ಟಾಕೀಜ ಹತ್ತಿರ ನಿಲ್ಲಿಸಿ ನನ್ನ ಖಾಸಗಿ
ಕೆಲಸದ ನಿಮಿತ್ಯಾವಾಗಿ ನಾವು ಹೋಗಿದ್ದು ಮರಳಿ
10.00 ಗಂಟೆಗೆ ನಾವು ನಿಲ್ಲಿಸಿ ಹೋಗಿರುವ ಜಾಗೆ ಬಂದು ನೋಡಿದ್ದಾಗ ನನ್ನ ಮೋಟಾರ ಸೈಕಿಲ್ ನಂ
ಕೆಎ 32 ವಾಯ್ಹ್ 2345 ನೇದ್ದು ಇರಲ್ಲಿಲ. ನಂತರ
ನಾವು ಗಾಬರಿಯಾಗಿ ನಾನು ಮತ್ತು ಸ್ನೇಹಿತ ಕೂಡಿ
ಎಲ್ಲಾ ಕಡೆ ಹುಡಕಾಡಿದ್ದು ಸಿಕ್ಕಿರುವದಿಲ್ಲ.
ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ
ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 20.06.2015
ರಂದು ಅಂದಾಜು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಪುರುಷನು ಅಶಕ್ತನಾಗಿ ಯಾವುದೋ ಒಂದು
ರೋಗದಿಂದ ಬಳಲಿ ಅಥವಾ ಆಕಸ್ಮಿಕವಾಗಿ ಕೆಳಗೆ ಬಿದ್ದು ಜೇವರಗಿ ಪಟ್ಟಣದ ಹೊರ ವಲಯದ ಸುನ್ನಿ ದಾರು-ಉಲುಮ್ ಶಾಲೆಯ
ಹತ್ತಿರ ಖುಲ್ಲಾ ಜಾಗೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment