POLICE BHAVAN KALABURAGI

POLICE BHAVAN KALABURAGI

11 May 2015

KALABURAGI DISTRICT REPORTED CRIMES.

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧಣ :
ಸ್ಟೇಷನ ಬಜಾರ ಠಾಣೆ : ದಿನಾಂಕ 09-05-2015  ರಂದು ಸ್ಟೇಷನ ಏರಿಯಾದ ಕನಕ ಲಾಡ್ಜ ಪಕ್ಕದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ ರಾಜಶೇಖರ ಹಳಿಗೋಧಿ ಪಿ.ಐ ಸ್ಟೇಷನ ಬಜಾರ  ಕಲಬುರಗಿ ಮತ್ತು ಎಸ್.ಎಸ್. ದೊಡ್ಡಮನಿ ಪಿ.ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕನಕ ಲಾಡ್ಜ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1. ಸಿದ್ದುಗೌಡ ತಂದೆ ಭೀಮರೆಡ್ಡಿ ಗೌಡ ಸಾಃ ಅಳ್ಳೋಳ್ಳಿ ತಾಃ ಚಿತ್ತಾಪೂರ 2. ಸದಾನಂದ ತಂದೆ ಶೇಖಣ್ಣ ಟೆಂಗಳಿ ಸಾಃ ಅಳ್ಳೋಳ್ಳಿ ತಾಃ ಚಿತ್ತಾಪೂರ ಕಲಬುರಗಿ  3. ಬಸವರಾಜ ತಂದೆ ಅಯ್ಯಣ್ಣ ಬೆಳಗೇರಿ ಸಾಃ ಅಳ್ಳೋಳ್ಳಿ ತಾಃ ಚಿತ್ತಾಪೂರ ಕಲಬುರಗಿ ಮತ್ತು ಇನ್ನೂ ಇಬ್ಬರೂ ಓಡಿ ಹೋಗಿದ್ದು ಅವರ ಹೆಸರು ವಿಚಾರಿಸಲು 1. ನಾಗರಾಜ ತಂದೆ ಬಾಬು ಸಂಗ್ಮಾ ಸಾಃ ನಾಲ್ವಾರ ತಾಃ ಚಿತ್ತಾಪೂರ, 2. ರವಿ ತಂದೆ ಮಲ್ಲಪ್ಪಾ ಮಡ್ಡಿ ಸಾಃ ಅಳ್ಳೊಳ್ಳಿ ತಾಃ ಚಿತ್ತಾಪೂರ ಅಂತಾ ಗೊತ್ತಾಯಿತು ಸದರಿ ಮೂರು ಜನರಿಂದ ಹತ್ತಿರ ಇದ್ದ ಹಣ ಮತ್ತು ನೆಲದ ಮೇಲೆ ಬಿದ್ದ ಹಣ ಹೀಗೆ ಒಟ್ಟು. 11.150/- ರೂ. ಮತ್ತು 52 ಇಸ್ಪೆಟ್ ಎಲೆಗಳನ್ನು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರೆಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 10-05-2015 ರಂದು ದ್ಯಾವಪನಗರ ಮತ್ತು ಭೂಂಯಾರ ಬ್ರಿಡ್ಜ ಮದ್ಯ ಇರುವ ಬೋರಟಿ ಮುತ್ಯಾನ ಹೊಲದಲ್ಲಿ ಕೆಲಸ ಮಾಡಲು ಶ್ರೀ ಬಾಗಣ್ಣಾ ತಂದೆ ಈರಣ್ಣಾ ಕಲ್ಲೂರ ಸಾ|| ಸೊನ್ನ ಮತ್ತು ದೇವಿಂದ್ರ ರವರು ಕೂಡಿ ಜೇ.ಸಿ.ಬಿ ತೆಗೆದುಕೊಂಡು ಹೋಗಿದ್ದು, ಬೋರಟಿ ಮುತ್ಯಾನ ಹೊಲದ ಹತ್ತಿ ರಸ್ತೆಯ ಮೇಲೆ ಇದ್ದಾಗ ಅಲ್ಲೆ ರಸ್ತೆಯ ಮೇಲೆ 3 ಜನರು ಸರಾಯಿ ಕುಡಿದ ಅಮಲಿನಲ್ಲಿ ನಿಂತಿದ್ದು, ಅವರು ನಮ್ಮ ಜೇ.ಸಿ.ಬಿ ಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿದರು, ಅವರಿಗೆ ನೋಡಲಾಗಿ ಅವರಲ್ಲಿ ಒಬ್ಬನು ಭೂಂಯಾರ ಗ್ರಾಮದ ಹುಚ್ಚಪ್ಪಾ ತಳವಾರ ಅನ್ನುವನಿದ್ದು ಅವನ ಕೈಯಲ್ಲಿ ಒಂದು ಕೊಡ್ಲಿ ಇತ್ತು, ಅವನೊಂದಿಗೆ ಇನ್ನು ಇಬ್ಬರು ಇದ್ದರು. ಅವರ ಹೆಸರುಗಳು ಗೊತ್ತಿರುವುದಿಲ್ಲಾ. ಸದರಿ ಹುಚ್ಚಪ್ಪಾ ಇವನು ನಮಗೆ ಏ ಸೂಳಿ ಮಕ್ಕಳ್ಯಾ ಜೇ.ಸಿ.ಬಿ ತಗೊಂಡು ಎಲ್ಲಿಗಿ ಹೋಗತಾ ಇದಿರಾ ಅಂತಾ ಅಂದನು, ಆಗ ನಾನು ಸರಿಯಾಗಿ ಮಾತಾಡು ಯಾಕ ಸುಮನೆ ಬೈತಿ ಅಂತಾ ಕೇಳಿದಾಗ ಹುಚ್ಚಪ್ಪಾ ಇವನು ಏನೋ ಸೂಳಿ ಮನಗಾ ನನಗೆ ಎದುರು ಮಾತಾಡತಿಯಾ ಇವತ್ತ ನೀನು ಸತ್ತಿ ಮಗನಾ ಅಂತಾ ಅಂದು ತನ್ನ ಕೈಯಲ್ಲಿದ್ದ ಕೊಡ್ಲಿ ತುಂಬಿನೀಂದ ನನ್ನ ಎಡ ಕಪಾಳ ಮೇಲೆ ಜೋರಾಗಿ ಹೊಡೆದಿದ್ದರಿಂದ ರಕ್ತಗಾಯವಾಗಿ ಭಾರಿ ಒಳಪೆಟ್ಟಾಗಿರುತ್ತದೆ. ನಂತರ ಸದರಿ ಕೊಡ್ಲಿ ಕಾವಿನಿಂದ ನನ್ನ ಬಲಮೊಳಕೈ ಹತ್ತಿರ ಹೊಡೆದು ಭಾರಿ ಒಳಪೆಟ್ಟು ಪಡಿಸಿರುತ್ತಾನೆ. ಆಗ ಅಲ್ಲಿ ಅಷ್ಟರಲ್ಲಿ ಒಂದು ಮೋಟರ ಸೈಕಲ ಬಂದಿದ್ದು ಅದನ್ನು ನೋಡಿ ಸದರಿ ಮೂರು ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 10-05-2015 ರಂದು ಶ್ರೀ ಹಯ್ಯಾಳಸಿದ್ದ ತಂದೆ ಶರಣಪ್ಪಾ ಬಾದನಳ್ಳಿ ಸಾ|| ಮಂಗಳೂರ ಗ್ರಾಮ ರವರ ಅಣ್ಣತಮ್ಮಕಿಯವರಾದ ಯಲ್ಲಪ್ಪಾ ಬಾದನಳ್ಳಿ ರವರ ಹೊಲದ ಮದ್ಯ ಬಾಂದಾರಿ ಹತ್ತಿರ ಟ್ರ್ಯಾಕ್ಟರದಿಂದ ಗಳ್ಯಾ ಹೊಡೆಯುತ್ತಿದ್ದಾಗ, ಅಲ್ಲೇ ಹೊಲದಲ್ಲಿದ್ದ ಯಲ್ಲಪ್ಪಾ ಬಾದನಳ್ಳಿ ಮತ್ತು ಅವರ ತಮ್ಮ ಪುಂಡಪ್ಪಾ ಬಾದನಳ್ಳಿ ರವರು ನನ್ನ ಹತ್ತಿರ ಬಂದು ಯಲ್ಲಪ್ಪಾ ಇವನು ನನಗೆ ಏ ಸೂಳಿ ಮಗನಾ ಹಯ್ಯಾಳ್ಯಾ ನಮ್ಮ ಸೀಮ್ಯಾಗ ಯಾಕ ಗಳ್ಯಾ ಹೊಡಿತಾ ಇದ್ದಿಯಾ ಕಣ್ಣ ಕಾಣಲ್ಲೇನೋ ಮಗನಾ ಅಂತಾ ಅಂದನು, ಆಗ ನಾನು ಅವರಿಗೆ ನಮ್ಮ ಹೊಲದಲ್ಲೆ ಗಳ್ಯಾ ಹೊಡಿತಾ ಇದ್ದಿನಿ, ನಿಮಗ ಕಣ್ಣ ಕಾಣಲ್ಲೇನೋ ಅಂತಾ ಅಂದಾಗ ಯಲ್ಲಪ್ಪಾ ಇವನು ನನ್ನ ಎದೆಯ ಮೇಲಿನ ಬನಿಯಾನ ಹಿಡಿದು ನನಗೆ ಹೋಗದಂತೆ ತಡೆದುನಿಲ್ಲಿಸಿ ತನ್ನ ಕೈಯಿಂದ ಮುಷ್ಟಿ ಮಾಡಿ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಮಾಡಿದನು, ನಂತರ ಅದೇ ಕೈಯಿಂದ ನನ್ನ ಎಡಗಣ್ಣಿನ ಮೇಲೆ ಹೊಡದನು, ಆಗ ಪುಂಡಪ್ಪಾ ಇವನು ಈ ಸೂಳಿ ಮಗನಿಗಿ ಇವತ್ತು ಹೊಡೆದು ಖಲಾಸ ಮಾಡು ಅಂತಾ ಅಂದು ಕಾಲಿಲೆ ನನ್ನ ಬೇನ್ನಿನ  ಮೇಲೆ ಒದ್ದು ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಶಿವಾನಂದ ತಂದೆ ಬಸಣ್ಣ ದೋತರೆ ಸಾ: ಮಾಡಿಯಾಳ ಇವರು ದಿನಾಂಕ 09/05/2015 ರಂದು ತನ್ನ ದೋಡಮ್ಮಳಾದ ಭೀಮಾಬಾಯಿ ಮತ್ತು ಚನ್ನಮ್ಮ ಇವರ ನಡುವೆ ಕುಳ್ಳು ಹಚ್ಚುವ ಸಂಬಂಧ ಬಾಯಿ ಮಾತಿನ ಜಗಳವಾಗಿದ್ದು ಇದನ್ನು ಕೇಳಲು ಅಂತಾ ಫೀರ್ಯಾದಿಯು ಅವರ ಮನೆಗೆ ಹೋದಾಗ ಚನ್ನಮ್ಮಳ ಮಕ್ಕಳಾದ  ಬಸವರಾಜ ಮತ್ತು ವಿಶ್ವನಾಥ ಇಬ್ಬರು ಸೇರಿ ಫೀರ್ಯಾದಿಗೆ ತಡೆದು ಅವಾಚ್ಯ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಭಾರಿ ರಕ್ತಗಾಯ  ಪಡೆಸಿದ್ದಲ್ಲದೇ ಜೀವ ಭಯ ಪಡೆಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ನಾಗರಾಜ ತಂದೆ ಭೀಮಾಶಂಕರ ಪಂಚುರ ಸಾಃಮಾಣಿಕೇಶ್ವರ ಕಾಲೋನಿ ಕಲಬುರಗಿ  ರವರು ಶಟ್ಟಿ ಟಾಕೀಜ ನಿಂದ ಹೊರಗೆ ರೋಡಿಗೆ ಬರಲು ಒಬ್ಬನು ತನ್ನ ಮೋಟಾರ ಸೈಕಲ ಮೇಲೆ ಅತೀವೇಗ ದಿಂದ ಬಂದು ನಮಗೆ ಡಿಕ್ಕಿ ಪಡಿಸುತ್ತಾನೆ ಅಂತಾ ಎಂಬಂತೆ ಬಂದು ನಿಲ್ಲಿಸಿದ ಅದಕ್ಕೆ ನಾನು ಹಾಸಿಯಪ್ಪ ಹೀಗೆಕೆ ನಡೆಸುತ್ತಿದ್ದ ಅಂತಾ ಅಂದಿದಕ್ಕೆ ಏ ಬೋಸಡಿ ಮಗನೆ ನೀನು ಹೇಗೆ ನಡೆಯಬೇಕು ಅಂತಾ ತಿಳಕೊ ಅಂತಾ ಅಂದನು ಅದಕ್ಕೆ ಬೈ ಬೇಡ ಅಂತಾ ಅನ್ನಲು ಅದಕ್ಕೆ ಅವನು ನಾನು ಯಾರೊ ಗೊತ್ತೆ ನಾನು ಹೀರಾನ  ತಮ್ಮ ಇದ್ದಿನಿ ಅಂತಾ ಯಾರಿಗೊ ಫೋನ ಮಾಡಿದ ಆಗ ಒಂದೆ ಮೋಟಾರ ಸೈಕಲ ಮೇಲೆ ಇಬ್ಬರು ಬಂದರು ಅವರು ಬಂದವರೆ ಮೋಟಾರ ಸೈಕಲ ಹಚ್ಚಿ ಇಬ್ಬರು ಕೈಮುಷ್ಠಿ ಮಾಡಿ ನನ್ನ ಮಾರಿ ಮೇಲೆ , ಹೊಟ್ಟೆಯ ಮೇಲೆ ಹೊಡೆ ಹತ್ತಿದರು ಆಗ ಹೀರಾನ ತಮ್ಮ ಅಲ್ಲಿಯೇ ಬಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ ಬಾಯಿಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ ಮತ್ತು ನೆಲ್ಲಕೆ ಹಾಕಿ ಕಾಲಿನಿಂದ ವದ್ದು ಕೈಯಿಂದ ಹೊಡೆದು ಅವರವರ ಮೋಟಾರ ಸೈಕಲ ಮೇಲೆ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿಶ್ವನಾಥರೆಡ್ಡಿ ತಂದೆ ಸಿದ್ದಣ್ಣಗೌಡ ಪಾಟೀಲ್‌ ಸಾ.:  ದರಿಯಾಪುರ ಕೋಟನೂರ ಕಲಬುರಗಿ ರವರು ದಿನಾಂಕ:24/03/2015 ರಂದು ಬೆಳಗ್ಗೆ 11.00 ಗಂಟೆ ಸುಮಾರಿಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವರ ದರ್ಶನ ಕುರಿತು ಹೋಗಿ ಗುಡಿಯ ಆವರಣದಲ್ಲಿ ತನ್ನ ಟಿವಿಎಸ್ ಸ್ಕೂಟಿ ನಂ ಕೆಎ-32 ಎಲ್‌‌-3052 ನೇದ್ದನ್ನು ನಿಲ್ಲಿಸಿ ನಾನು ದೇವರ ದರ್ಶನಮಾಡಿ ಮರಳಿ 11.30 ಗಂಟೆಗೆ ನನ್ನ ಮೋಟಾರ ಸೈಕಲ ಹತ್ತಿರ ಬಂದಿದ್ದು ಅಲ್ಲಿ ನನ್ನ ಮೋಟಾರ ಸೈಕಲ ಇರಲಿಲ್ಲ ಅಂದಿನಿಂದ ನನ್ನ ಮೋಟಾರ ಸೈಕಲ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಾರದ ಕಾರಣ ನನ್ನ ಟಿ.ವಿ.ಎಸ್‌‌ ಸ್ಕೂಟಿ ಮೋಟಾರ ಸೈಕಲ ನಂ.ಕೆಎ-32 ಎಲ್‌‌-3052  ಅ.ಕಿ. 10,000/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

09 May 2015

KALABURAGI DISTRICT REPORTED CRIMES

ಅಪಘಾತ ಪ್ರಕರಣ
ಜೇವರ್ಗಿ ಪೊಲೀಸ ಠಾಣೆ: 08.05.2015 ರಂದು ಶ್ರೀ ಭಾಗಯ್ಯ ತಂದೆ ಜಾನಯ್ಯ ಗುತ್ತೆದಾರ ಸಾ: ಕಟ್ಟಿ ಸಂಗಾವಿ ರವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 08.05.2015 ಸಾಯಂಕಾಲ ತಾನು ಮತ್ತು ನನ್ನ ಗೆಳೆಯ ಸಿದ್ದಪ್ಪ @ ಸಿದ್ದು ತಂದೆ ಈರಪ್ಪ ಕುಂಬಾರ ಸಾ:ಕಟ್ಟಿ ಸಂಗಾವಿ ಇಬ್ಬರೊ  ಟಂಟಂ ವಾಹನ ನಂ ಕೆ.ಎ32ಸಿ1867 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಕಟ್ಟಿ ಸಂಗಾವಿ ಬ್ರಿಡ್ಜ ಹತ್ತಿರ ಟಂಟಂ ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನಿಂದೆ ಟಂಟಂ ಅನ್ನು ಚಲಾಯಿಸುತ್ತಾ ಒಮ್ಮೆಲೆ ಬ್ರೇಕ್ ಹಾಕಿ ಟಂಟಂ ಅನ್ನು ರೋಡಿನ ಬಲಸೈಡಿಗೆ ಪಲ್ಟಿ ಮಾಡಿದ್ದರಿಂದ ಸಿದ್ದಪ್ಪನಿಗೆ ಭಾರಿ ರಕ್ತ ಗಾಯವಾಗಿ ಸಿದ್ದಪ್ಪನು ಸ್ಥಳದಲ್ಲಿಯೆ ಮೃತಪಟ್ಟಿದ್ದು ನನಗೊ ಸಹ ಸಣ್ಣ-ಪುಟ್ಟ ಗಾಯಗಳಾಗಿದ್ದು ಟಂಟಂ ಚಾಲಕನು ಟಂಟಂ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಸದರಿ ಟಂಟಂ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಫಜಲಪೂರ ಠಾಣೆ:-  ಶ್ರೀ ಬಾನು ಸಾ: ಕೋಡಿಗನೂರ ಇರವರು ದಿ: 04-05-2015 ರಂದು ಮಣೂರ ಗ್ರಾಮದ ಯಲ್ಲಮ್ಮಾ ದೇವಿ ಜಾತ್ರೆಗೆ ಕುದರಿಯ ಮೇಲೆ ಬಂದಿದ್ದು. ಜಾತ್ರೆ ಮುಗಿಸಿಕೊಂಡು ಮರಳಿ ಕೋಡಿಗನೂರ ಗ್ರಾಮಕ್ಕೆ ಕುದರಿಯ ಮೇಲೆ ಹೋಗುತ್ತಿರುವಾಗ ರಾತ್ರಿ 8;30 ಗಂಟೆ ಸುಮಾರಿಗೆ ಮಣೂರ ಕೂಡಿಗನೂರ ರಸ್ತೆಯಲ್ಲಿರುವ ಐಯಮ್ಮಾ ದೇವಿ ಗುಡಿಯ ಸಮೀಪ ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ನಂ ಕೆ.ಎ-32/ಟಿ-6447 ಚಾಲಕನು ಅತೀವೆಗವಾಗಿ ಮತ್ತು ನಿಸ್ಕಾಳಜಿತನದಿಂದ  ಚಲಾಯಿಸಿಕೊಂಡು ಬಂದು ನನ್ನ ಎದುರುಗಡೆಯಿಂದ ಅಪಘಾತ ಪಡಿಸಿದ್ದು ನನ್ನ ಬಲಗಾಲ ಮೊಳಕಾಳ ಕೆಳಗಿನ ಭಾಗದ ಮೇಲೆ ಆಗಿ ಭಾರಿ ರಕ್ತಗಾಯಪಡಿಸಿದ್ದು. ಟ್ರ್ಯಾಕ್ಟರ್ ಚಾಲಕನು ಅಪಘತಪಡಿಸಿ ಟ್ರ್ಯಾಕ್ಟರ್ ನಿಲ್ಲಿಸದೆ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಟ್ರ್ಯಾಕ್ಟರ್ ಚಾಲಕನ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಕಮಲಾಪೂರ ಪೊಲೀಸ ಠಾಣೆದಿನಾಂಕ:08-05-2015 ರಂದು ಶ್ರೀ ದೇವರಾಜ ತಂದೆ ಕಾಳಿದಾಸ ದುರ್ವೆ ಸಾ; ಜೀವಣಗಿ ಇವರು ಠಾಣೆಗೆ ಹಾಜರಾಗಿ ನಾನು ದೆಹಲಿಯಲ್ಲಿ ವಾಸವಾಗಿದ್ದು ಅಲ್ಲಿಯೇ ಜ್ಯೋತಿಷ್ಯ ಹೇಳಿಕೊಂಡು ಉಪ-ಜೀವಿಸುತ್ತೆನೆ ಜೀವಣಗಿ ಗ್ರಾಮದಲ್ಲಿ ನನ್ನ ಸ್ವಂತ ಮನೆಯಿದ್ದುನಾನು ಆಗಾಗ ನನ್ನ ಪರಿವಾರದೊಂದಿಗೆ ನನ್ನ ಮನೆಗೆ ಬಂದು ಹೋಗುತ್ತಿರುತ್ತೇನೆ. ದಿನಾಂಕ:29-04-2015 ರಂದು ಜೀವಣಗಿ ಗ್ರಾಮ ಹಾಗೂ ಚಿತ್ತಾಪೂರ ಪಟ್ಟಣದಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಗಳು ಇದ್ದ ಪ್ರಯುಕ್ತ ನಾನು ದಿಲ್ಲಿಯಿಂದ ಜೀವಣಗಿ ಗ್ರಾಮಕ್ಕೆ ಬಂದಿರುತ್ತೇನೆ, ನಾನು ಜೀವಣಗಿ ಗ್ರಾಮಕ್ಕೆ ಬರುವಾಗ ನನ್ನ ಮನೆ ದುರಸ್ಥಿ ಮಾಡುವ ಸಲುವಾಗಿ ಹಾಗೂ ಇತರೆ ಕೆಲಸಕ್ಕೆಂದು 1,50,000/- ನಗದು ಹಣ  ಬಂಗಾರ ಹಾಗೂ ಇತರೆ ದಾಖಲಾತಿ ಹಾಗೂ ಸಾಮಾನುಗಳನ್ನು ತೆಗೆದುಕೊಂಡು ಬಂದಿದ್ದು. ದಿ: 29-04-2015 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಹಣ ಮೋಬಾಯಿಲಗಳು ಮತ್ತು ಇತರೆ ಸಾಮಾನುಗಳನ್ನು ಕೆಂಪು ಬಣ್ಣದ ವಿ.ಐ.ಪಿ ಸುಟಕೇಸನಲ್ಲಿ ಇಟ್ಟು ಸೂಟಕೇಸಗೆ ಮತ್ತು ಮನೆಗೆ ಕೀಲಿ ಹಾಕಿಕೊಂಡು ಊರಲ್ಲಿ ತಿರುಗಾಡಿ ರಾತ್ರಿ 10-00 ಗಂಟೆಯ ಸೂಮಾರಿಗೆ ವಾಪಸ್ಸ ಮನೆಗೆ ಬಂದಾಗ ಮನೆಯ ಕೀಲಿಯನ್ನು ಯಾರೋ ರಾಡನಿಂದ ಮುರಿದು ಹಣ ಮೋಬಾಯಿಲ ಮತ್ತು ಇನ್ನಿತರೆ ದಾಖಲಾತಿಗಳು ಇಟ್ಟಿದ್ದ ಸೂಕೇಸ ಕಿಲಿ ಮುರಿದು ಸೂಟಕೇಸನಲ್ಲಿದ್ದ 1) ಹೆಚ.ಟಿ.ಸಿ ಕಂಪನಿಯ ಮೋಬಾಯಿಲ 2) ನೋಕಿಯಾ ಕಂಪನಿಯ ಮೋಬಾಯಿಲ 3) 4 ತೋಲೆಯ ಬಂಗಾರದ ಸಣ್ಣ ಲಾಕಿಟಗಳು 4) ಐಡೆಂಟಿಟಿ ಕಾರ್ಡ 5) ಪ್ಯಾನ ಕಾರ್ಡ 6) ಡ್ರೈವಿಂಗ ಲೈಸೆನ್ಸ  7) ಹೆಲ್ತ ಇನ್ಸೂರೆನ್ಸ ಕಾರ್ಡ 8) ಸಿಂಡಿಕೇಟ ಬ್ಯಾಂಕ ಎ.ಟಿ.ಎಮ ಕಾರ್ಡ 9) ಡೆಲ್ಲಿ ಮೇಟ್ರೋ ಕಾರ್ಡ 10) ಆಧಾರ ಕಾರ್ಡ ಹಾಗೂ ನಗದು ಹಣ 65-0000 ರೂ ಹಾಗೂ ಇತರೆ ದಾಖಲಾತಿಗಳು ಸೇರಿ ಒಟ್ಟು 157,300-00 ರೂಪಾಯಿ ಕಿಮ್ಮತ್ತಿನ ಹಣ ಮತ್ತು ಬಂಗಾರದ ಸಾಮಾನುಗಳು ಹಾಗೂ ಮೋಬಾಯಿಲಗಳು ಯಾರೋ ಕಳ್ಳರು ದಿನಾಂಕ:29-04-2015 ರಂದು ರಾತ್ರಿ 09-00 ಪಿ.ಎಮನಿಂದ 10-00 ಪಿ.ಎಮದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ್ ಠಾಣೆ :
ಪೊಲೀಸ್ ಪ್ರಕಟಣೆ 

 ಇಂದು ದಿನಾಂಕ. 08.05.2015 ರಂದು 13.00 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ಉಷಾ ಗಂಡ ರವಿತೇಜ ಸಾ|| ಹುಣಸಿಗಟ್ಟ ತಾ|| ಜಿ|| ತುಮಕೂರ ಹಾ||ವ|| ಮಾಮ ಅಪಾರ್ಟಮೆಂಟ ರಾಜಿವ್‌ ಗಾಂದಿ ಫಾರ್ಮಸಿ ಕಾಲೇಜ ಹತ್ತಿರ ಹಳೇ ಜೇವರ್ಗಿ ರಸ್ತೆ  ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ; 24/04/2015 ರಂದು ನಾನು ನನಗೆ ಆರಾಮವಿರಲಾರದಕ್ಕೆ ನನ್ನ ತವರು ಮನೆ ಮತ್ತಿಗಟ್ಟಾ ಗ್ರಾಮಕ್ಕೆ ಹೋಗಿದ್ದು ದಿನಾಂಕ. 25/04/2015 ರಂದು ಮುಂಜಾನೆ ನನ್ನ ಗಂಡ ರವಿತೇಜ ಇವರು ಬೆಳಿಗ್ಗೆ ಫೋನ ಮಾಡಿದ್ದು ನಂತರ ಅಂದು ಮದ್ಯಾಹ್ನ 3.00 ಗಂಟೆ ನಂತರ ಅವರ ಮೊಬೈಲ ಸ್ವಿಚ್ಚ ಆಫ ಮಾಡಿದ್ದು ನಂತರ ದಿನಾಂಕ. 30/04/2015 ರಂದು ಬೆಳಿಗ್ಗೆ ಗುಲಬರ್ಗಾಕ್ಕೆ ಬಂದು ನೋಡಲು ಮನೆಯ ಬಾಗಿಲು ಕೀಲಿ ಹಾಕಿದ್ದು ನಂತರ ನಾನು ನನ್ನ ಗಂಡ ಕೆಲಸ ಮಾಡುತ್ತಿದ್ದ ಮೊಹನ ಲಾಡ್ಜ ಮತ್ತು ಹೊಟೇಲಕ್ಕೆ ಬಂದು ವಿಚಾರಿಸಲು ಚಾವಿಯು ಹೊಟೇಲನಲ್ಲಿ ಬಿಟ್ಟು ಹೋಗಿದ್ದು ಚಾವಿ ತಗೆದುಕೊಂಡು ಹೋಗಿ ಮನೆ ತೆರೆದು ನೋಡಲು ಸಾಮಾನುಗಳೆಲ್ಲಾ ಇದ್ದು ತಮ್ಮ ಬಟ್ಟೆಗಳು ತಗೆದುಕೊಂಡು ಹೋಗಿದ್ದು ನಾವು ಅಂದಿನಿಂದ ಅಲ್ಲಲ್ಲಿ ಹುಡುಕಾಡಿ ವಿಚಾರಿಸಲು ಸಿಕ್ಕಿರುವುದಿಲ್ಲಾ ಕಾಣೆಯಾಗಿರತ್ತಾನೆಅವರು ಅಂದು  ಮೈಮೇಲೆ ಇದ್ದ ಬಟ್ಟೆಗಳು ನನಗೆ ಗೊತ್ತಿರುವುದಿಲ್ಲ. ಎತ್ತರ ಅಂದಾಜು 6’ ಎತ್ತರ ಇದ್ದು,  ಕಪ್ಪು ಬಣ್ಣಯಿದ್ದು  ದೃಢವಾದ ಮೈಕಟ್ಟು ಇರುತ್ತದೆತಲೆಯ ಮೇಲೆ ಕಪ್ಪು ಬಣ್ಣದ ಕೂದಲುಕನ್ನಡಹಿಂದಿ, ಮರಾಠಿ ಭಾಷೆಯಲ್ಲಿ  ಮಾತನಾಡುತ್ತಾನೆಹಣೆಯ ಮೇಲೆ ಉಬ್ಬು ಇರುತ್ತದೆ. ಕಾರಣ ಮಾನ್ಯರು ನನ್ನ ಗಂಡನನ್ನು ಪತ್ತೆ ಹಚ್ಚಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

08 May 2015

KALABURAGI DIST REPORTED CRIMES

ಮುಂಜಾಗೃತಾ ಕ್ರಮ:
ಜೇವರ್ಗಿ ಪೊಲೀಸ್ ಠಾಣೆ: ಆಂದೊಲಾ ಗ್ರಾಮದಲ್ಲಿ ಮೈಹಿಮೂದ ಹುಸೇನ ಮುಲ್ಲಾ  ಇತನಿಗೂ ಮತ್ತು ಬಸವರಾಜ ತಂದೆ ಶರಣಪ್ಪ ಹಡಪದ ಇತನಿಗೂ ಮನೆಯ ಗೊಡೆಯ ವಿಷಯದಲ್ಲಿ ತಕರಾರು  ಆಗಿ ಆಗಾಗ ಎರಡೊ ಕಡೆಯ ಜನರು ಜಗಳ ಮಾಡಿಕೊಳ್ಳುತ್ತಾ ಗ್ರಾಮದಲ್ಲಿ ಮತ್ತೆ ಮತ್ತೆ ಜಗಳ ಮಾಡಿಕೊಳ್ಳುತ್ತಾ ಗ್ರಾಮದಲ್ಲಿ ಅಶಾಂತಿ ವಾತವರಣನ್ನುಂಟುಮಾಡುತ್ತಿದ್ದು ಕಾರಣ1]ಮೈಹಿಮುದ್ ಹುಸೇನ ತಂದೆ ಅಬ್ದುಲ್ ರಹೇಮನ ಮುಲ್ಲಾ 2] ಬಾಬಾ @ ಬಾಬು ತಂದೆ ಸೈಯದ್  ಹುಸೇನಸಾಬ ಘಲಪಾಡ 3] ರೀಯಾಜ ತಂದೆ ಮಹ್ಮದ್ ಹುಸೇನ ಸಾ|| ಎಲ್ಲರು ಆಂದೋಲಾ ಮತ್ತು 1] ಬಸವರಾಜ ತಂದೆ  ಶರಣಪ್ಪ ಹಡಪದ 2] ದೇವಿಂದ್ರಪ್ಪ ತಂದೆ ಶರಣಪ್ಪ ಹಡಪದ 3] ಮಲ್ಲಪ್ಪ ತಂದೆ ಶ್ಯಾಮರಾವ ಹಡಪದ ಸಾಃ ಎಲ್ಲರೂ ಆಂದೊಲಾ ಈ ಎರಡೊ ಪಾರ್ಟಿ ಜನರು ಆಂದೊಲಾ ಗ್ರಾಮದಲ್ಲಿ ಮನೆಯ ಜಾಗದ ವಿಷಯದಲ್ಲಿ ಮತ್ತು ಮೈಹಿಮೂದ್ ಹುಸೇನ ಇತನು ರೂಮ ಕಟ್ಟಿದ ವಿಷಯದಲ್ಲಿನ ವೈಮನಸ್ಸಿನಿಂದ ಯಾವುದೇ ಸಮಯದಲ್ಲಿ ಒಬ್ಬರಿಗೊಬ್ಬರು ಜಗಳ ತಂಟೆ ತಕರಾರು ಮಾಡಿಕೊಂಡು ಆಸ್ತಿ ಮತ್ತು ಪ್ರಾಣ ಹಾನಿ ಮಾಡಿಕೊಳುವ ಸಂಭವ ಕಂಡು ಬಂದ ಕಾರಣ ಮತ್ತು ಹಾಗೆಯೇ ಬಿಟ್ಟಲ್ಲಿ ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಭಂಗವನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಪಾರ್ಟಿ ಜನರ ವಿರುದ್ದ ಮುಂಜಾಗೃತಾ ಕ್ರಮವಾಗಿ ಅವರ ವಿರುದ್ದ ಕಲಂ 107 ಸಿ.ಆರ್.ಪಿ.ಸಿ ನೇದ್ದರ ಆಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 07/05/2015 ರಂದು ಶ್ರೀ ಶಂಕರ ತಂದೆ ಪಂಡಿತ ಧರ್ಮಣ್ಣವರ ಪಿಡಿಓ ಗ್ರಾಮ ಪಂಚಾಯತ ಗೌರ(ಬಿ) ಇವರು ಠಾಣೆಗೆ ಹಾಜರಾಗಿ ಈಗ 06 ತಿಂಗಳಿಂದ ಗೌರ (ಬಿ) ಗ್ರಾಮ ಪಂಚಾಯತಿಯಲ್ಲಿ ಪಿ.ಡಿ.ಓ ಅಂತಾ ಕೆಲಸ ಮಾಡುತ್ತಿದ್ದು. ಗೌರ (ಬಿ) ಗ್ರಾಮದ ಶಿವಪ್ಪ ಹುಚ್ಚಪ್ಪ ಆಲಮೇಲ, ಬಸು ಚಂದ್ರಶಾ ಅಂಗಡಿ ಇವರುಗಳು ಪಂಚಾಯತಿಗೆ ಬಂದು ನನಗೆ ಎಲ್ಲಾ ಸರ್ಕಾರಿ ಕೆಲಸಗಳಿಗೆ, ಕೆಲಸ ಮಾಡದಂತೆ ತಕರಾರು ಮಾಡುವುದು ಹಾಗೂ ಪಂಚಾಯತಿಗೆ ಬಂದು ನಾನು ಹೇಳಿದ ಕೆಲಸ ನೀನು ಮಾಡಬೇಕು ಅಂತಾ ಹೇದರಿಸುತ್ತಾ ಬೈಯುವುದು ಮಾಡುತ್ತಾ ನನ್ನ ಮೇಲೆ ದ್ವೇಷ ಮಾಡಿಕೊಂಡು ನನಗೆ ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡೆ ತಡೆ ಮಾಡುತ್ತಾ ಬಂದಿದ್ದು. ದಿನಾಂಕ 06-05-2015 ರಂದು ನಾನು ಗ್ರಾಮ ಪಂಚಾಯತ ಚುನಾವಣೆಯ ಸಲುವಾಗಿ ಸರ್ಕಾರಿ ಕೆಲಸದ ಮೇಲೆ ಅಫಜಲಪೂರ ತಾಲೂಕ ಪಂಚಾಯತ ಕಾರ್ಯಾಲಯಕ್ಕೆ ಹೋಗುತ್ತಿದ್ದಾಗ, ಅಫಜಲಪೂರ ಪಟ್ಟಣದ ಲಿಂಗದಳ್ಳಿ ಮೋ/ಸೈ ಶೋ ರೂಮ ಮುಂದೆ ಗೌರ (ಬಿ) ಗ್ರಾಮದ ಶಿವಪ್ಪ ಹುಚ್ಚಪ್ಪ ಆಲಮೇಲ, ಬಸು ಚಂದ್ರಶಾ ಅಂಗಡಿ ಇವರುಗಳು ತಮ್ಮ ಜೋತೆಗೆ ಇನ್ನು 2-3 ಜನ ಅಫರಿಚತರನ್ನು ಕರೆದುಕೊಂಡು ಬಂದು ನನಗೆ ತಡೆದು ನಾವು ಹೇಳಿದ ಕೆಲಸ ಮಾಡುತ್ತಿಲ್ಲಾ ಅಂತಾ ಅಂದು, ಅವಾಚ್ಯ ಶಬ್ದಗಳಿಂದ ಬೈದು, ನನಗೆ ತಾಲುಕ ಪಂಚಾಯತ ಕಾರ್ಯಾಲಯಕ್ಕೆ ಹೊಗದಂತೆ ನಿಲ್ಲಿಸಿ, ಶಿವಪ್ಪ ಈತನು ನನಗೆ ತನ್ನ ಚಪ್ಪಲಿಯಿಂದ ಹೊಡೆದನು, ಹಾಗೂ ಬಸು ಈತನು ಸಹ ಚಪ್ಪಲಿಯಿಂದ ಹೊಡೆದನು. ಹಾಗೂ ಉಳಿದ 2-3 ಜನರು ಸಹ ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಅಲ್ಲಿಯೇ ಇದ್ದ ಪೀರಸಾಬ ಜಾಗೀರದಾರ, ಶ್ರೀಕಾಂತ ನಿಂಬರ್ಗಿ, ನಿಂಗನಗೌಡ ಪಾಟೀಲ, ರಮೇಶ ರಾಠೋಡ, ಬಸವರಾಜ ಕಾಚಾಪೂರ, ಗುಲಮ ಪಟೇಲ ಇವರು ನನಗೆ ಹೊಡೆಯುವುದನ್ನು ಬಿಡಿಸಿದ್ದು. ನನಗೆ ಸರ್ಕಾರಿ ಕೆಲಸಕ್ಕೆ ಅಡೆ ತಡೆ ಮಾಡಿ, ಅವಾಚ್ಯವಾಗಿ ಬೈದು, ಕೈಯಿಂದ ಹಾಗೂ ಚಪ್ಪಲಿಗಳಿಂದ ಹೊಡೆದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.