ಮುಂಜಾಗೃತಾ ಕ್ರಮ:
ಜೇವರ್ಗಿ ಪೊಲೀಸ್ ಠಾಣೆ: ಆಂದೊಲಾ ಗ್ರಾಮದಲ್ಲಿ ಮೈಹಿಮೂದ ಹುಸೇನ ಮುಲ್ಲಾ ಇತನಿಗೂ ಮತ್ತು ಬಸವರಾಜ ತಂದೆ ಶರಣಪ್ಪ ಹಡಪದ ಇತನಿಗೂ ಮನೆಯ ಗೊಡೆಯ ವಿಷಯದಲ್ಲಿ ತಕರಾರು ಆಗಿ ಆಗಾಗ ಎರಡೊ ಕಡೆಯ ಜನರು ಜಗಳ ಮಾಡಿಕೊಳ್ಳುತ್ತಾ ಗ್ರಾಮದಲ್ಲಿ
ಮತ್ತೆ ಮತ್ತೆ ಜಗಳ ಮಾಡಿಕೊಳ್ಳುತ್ತಾ ಗ್ರಾಮದಲ್ಲಿ ಅಶಾಂತಿ ವಾತವರಣನ್ನುಂಟುಮಾಡುತ್ತಿದ್ದು ಕಾರಣ1]ಮೈಹಿಮುದ್ ಹುಸೇನ ತಂದೆ ಅಬ್ದುಲ್ ರಹೇಮನ ಮುಲ್ಲಾ 2] ಬಾಬಾ @ ಬಾಬು ತಂದೆ ಸೈಯದ್ ಹುಸೇನಸಾಬ ಘಲಪಾಡ 3] ರೀಯಾಜ ತಂದೆ ಮಹ್ಮದ್ ಹುಸೇನ ಸಾ|| ಎಲ್ಲರು ಆಂದೋಲಾ ಮತ್ತು 1] ಬಸವರಾಜ ತಂದೆ
ಶರಣಪ್ಪ ಹಡಪದ 2] ದೇವಿಂದ್ರಪ್ಪ ತಂದೆ ಶರಣಪ್ಪ ಹಡಪದ 3] ಮಲ್ಲಪ್ಪ ತಂದೆ ಶ್ಯಾಮರಾವ ಹಡಪದ ಸಾಃ ಎಲ್ಲರೂ ಆಂದೊಲಾ ಈ ಎರಡೊ ಪಾರ್ಟಿ ಜನರು ಆಂದೊಲಾ ಗ್ರಾಮದಲ್ಲಿ ಮನೆಯ ಜಾಗದ ವಿಷಯದಲ್ಲಿ ಮತ್ತು ಮೈಹಿಮೂದ್ ಹುಸೇನ ಇತನು ರೂಮ ಕಟ್ಟಿದ ವಿಷಯದಲ್ಲಿನ ವೈಮನಸ್ಸಿನಿಂದ ಯಾವುದೇ ಸಮಯದಲ್ಲಿ ಒಬ್ಬರಿಗೊಬ್ಬರು ಜಗಳ ತಂಟೆ ತಕರಾರು ಮಾಡಿಕೊಂಡು ಆಸ್ತಿ ಮತ್ತು ಪ್ರಾಣ ಹಾನಿ ಮಾಡಿಕೊಳುವ ಸಂಭವ ಕಂಡು ಬಂದ ಕಾರಣ ಮತ್ತು ಹಾಗೆಯೇ ಬಿಟ್ಟಲ್ಲಿ ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಭಂಗವನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಪಾರ್ಟಿ ಜನರ ವಿರುದ್ದ ಮುಂಜಾಗೃತಾ ಕ್ರಮವಾಗಿ ಅವರ ವಿರುದ್ದ ಕಲಂ 107
ಸಿ.ಆರ್.ಪಿ.ಸಿ ನೇದ್ದರ ಆಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 07/05/2015 ರಂದು ಶ್ರೀ ಶಂಕರ ತಂದೆ ಪಂಡಿತ ಧರ್ಮಣ್ಣವರ ಪಿಡಿಓ ಗ್ರಾಮ ಪಂಚಾಯತ ಗೌರ(ಬಿ) ಇವರು ಠಾಣೆಗೆ
ಹಾಜರಾಗಿ ಈಗ 06 ತಿಂಗಳಿಂದ ಗೌರ (ಬಿ) ಗ್ರಾಮ ಪಂಚಾಯತಿಯಲ್ಲಿ ಪಿ.ಡಿ.ಓ ಅಂತಾ ಕೆಲಸ ಮಾಡುತ್ತಿದ್ದು. ಗೌರ
(ಬಿ) ಗ್ರಾಮದ ಶಿವಪ್ಪ ಹುಚ್ಚಪ್ಪ ಆಲಮೇಲ, ಬಸು ಚಂದ್ರಶಾ ಅಂಗಡಿ ಇವರುಗಳು ಪಂಚಾಯತಿಗೆ ಬಂದು ನನಗೆ
ಎಲ್ಲಾ ಸರ್ಕಾರಿ ಕೆಲಸಗಳಿಗೆ, ಕೆಲಸ ಮಾಡದಂತೆ ತಕರಾರು ಮಾಡುವುದು ಹಾಗೂ ಪಂಚಾಯತಿಗೆ ಬಂದು ನಾನು ಹೇಳಿದ ಕೆಲಸ ನೀನು
ಮಾಡಬೇಕು ಅಂತಾ ಹೇದರಿಸುತ್ತಾ ಬೈಯುವುದು ಮಾಡುತ್ತಾ ನನ್ನ ಮೇಲೆ ದ್ವೇಷ ಮಾಡಿಕೊಂಡು ನನಗೆ
ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡೆ ತಡೆ ಮಾಡುತ್ತಾ ಬಂದಿದ್ದು. ದಿನಾಂಕ 06-05-2015 ರಂದು ನಾನು ಗ್ರಾಮ ಪಂಚಾಯತ
ಚುನಾವಣೆಯ ಸಲುವಾಗಿ ಸರ್ಕಾರಿ ಕೆಲಸದ ಮೇಲೆ ಅಫಜಲಪೂರ ತಾಲೂಕ ಪಂಚಾಯತ ಕಾರ್ಯಾಲಯಕ್ಕೆ
ಹೋಗುತ್ತಿದ್ದಾಗ, ಅಫಜಲಪೂರ ಪಟ್ಟಣದ ಲಿಂಗದಳ್ಳಿ ಮೋ/ಸೈ ಶೋ ರೂಮ ಮುಂದೆ ಗೌರ (ಬಿ) ಗ್ರಾಮದ ಶಿವಪ್ಪ ಹುಚ್ಚಪ್ಪ
ಆಲಮೇಲ, ಬಸು ಚಂದ್ರಶಾ ಅಂಗಡಿ ಇವರುಗಳು ತಮ್ಮ ಜೋತೆಗೆ ಇನ್ನು 2-3 ಜನ ಅಫರಿಚತರನ್ನು ಕರೆದುಕೊಂಡು
ಬಂದು ನನಗೆ ತಡೆದು ನಾವು ಹೇಳಿದ ಕೆಲಸ ಮಾಡುತ್ತಿಲ್ಲಾ ಅಂತಾ ಅಂದು, ಅವಾಚ್ಯ ಶಬ್ದಗಳಿಂದ ಬೈದು, ನನಗೆ ತಾಲುಕ ಪಂಚಾಯತ
ಕಾರ್ಯಾಲಯಕ್ಕೆ ಹೊಗದಂತೆ ನಿಲ್ಲಿಸಿ, ಶಿವಪ್ಪ ಈತನು ನನಗೆ ತನ್ನ ಚಪ್ಪಲಿಯಿಂದ ಹೊಡೆದನು, ಹಾಗೂ ಬಸು ಈತನು ಸಹ ಚಪ್ಪಲಿಯಿಂದ ಹೊಡೆದನು. ಹಾಗೂ ಉಳಿದ
2-3 ಜನರು ಸಹ ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಅಲ್ಲಿಯೇ ಇದ್ದ ಪೀರಸಾಬ ಜಾಗೀರದಾರ, ಶ್ರೀಕಾಂತ ನಿಂಬರ್ಗಿ, ನಿಂಗನಗೌಡ ಪಾಟೀಲ, ರಮೇಶ ರಾಠೋಡ, ಬಸವರಾಜ ಕಾಚಾಪೂರ, ಗುಲಮ ಪಟೇಲ ಇವರು ನನಗೆ
ಹೊಡೆಯುವುದನ್ನು ಬಿಡಿಸಿದ್ದು. ನನಗೆ ಸರ್ಕಾರಿ ಕೆಲಸಕ್ಕೆ ಅಡೆ ತಡೆ ಮಾಡಿ, ಅವಾಚ್ಯವಾಗಿ ಬೈದು, ಕೈಯಿಂದ ಹಾಗೂ ಚಪ್ಪಲಿಗಳಿಂದ
ಹೊಡೆದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment