POLICE BHAVAN KALABURAGI

POLICE BHAVAN KALABURAGI

08 April 2015

Kalaburagi District Reported Crimes

ಕೊಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಶರಣಬಸಪ್ಪ ತಂ ಶಾಮರಾಯ ಕುಂಬಾರ ಸಾಃ ದುಬೈ ಕಾಲೋನಿ ಸಂಜಯಗಾಂಧಿ ನಗರ ಕಲಬುರಗಿ ಇವರ ಸಂಬಂದಿಕನಾದ ಮಲ್ಲು @ ಮಲ್ಲಿಕಾರ್ಜುನ ಇತನು ನಮ್ಮ ಬಡಾವಣೆಯಲ್ಲಿ ಸ್ವಂತ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ನಮ್ಮ ಬಡಾವಣೆಯಲ್ಲಿರುವ ಚಂದ್ರು ಕೊತಲಿ, ಉಮೇಶ ಕೊತಲಿ ರಮೇಶ ಕೊತಲಿ ಇವರು ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದು ಸದರಿಯವರು ಮಲ್ಲುನ ಗೆಳೆಯರಾಗಿದ್ದು, ಚಂದ್ರ ಕೊತಲಿ ಇತನು ಮಲ್ಲು ಇತನ ಹೆಸರಿನಲ್ಲಿ ಒಂದು ಅಟೊ ಖರಿದಿಸಿ ಕೊಟ್ಟಿದ್ದು ಸದರಿ ಅಟೋವನ್ನು ಮಲ್ಲುಗೆ ನಡೆಯಿಸಿಕೊಂಡು ಬರಲು ಕೊಟ್ಟಿದ್ದು ಇರುತ್ತದೆ.  ಈಗ ಸುಮಾರು ಒಂದು ತಿಂಗಳ ಹಿಂದೆ ಚಂದ್ರು ಇತನು ಮಲ್ಲು ಇತನು ನಡೆಸುತ್ತಿದ್ದ ಅಟೊವನ್ನು ಮಾರಾಟ ಮಾಡಿದ್ದು, ಅದಕ್ಕೆ ಮಲ್ಲು ನನಗೆ ನಡೆಸಲು ಬೇರೆ ಅಟೊ ಕೊಡಿಸು ಅಂತ  ಚಂದ್ರು ಕೊತಲಿ ಇತನಿಗೆ ಪದೇ ಪದೇ ಕೇಳುತ್ತ ಬಂದಿದ್ದು, ಅದಕ್ಕೆ ಚಂದ್ರು ಕೋತಲಿ ಇತನು ಸದ್ಯ ನನ್ನ ಹತ್ತಿರ ಹಣ ಇರುವದಿಲ್ಲ ನಂತರ ಕೊಡಿಸುತ್ತೇನೆ ಅಂತ ಹೇಳುತ್ತ ಬಂದಿದ್ದು ಮಲ್ಲು ಮತ್ತು ಚಂದ್ರು ಕೊತಲಿ ಇದೆ ವಿಷಯವಾಗಿ ಜಗಳ ಮಾಡಿಕೊಂಡಿದ್ದು ದಿನಾಂಕ 07.04.2015 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ಮತ್ತು ಮಲ್ಲು   ಕೂಡಿಕೊಂಡು ರಿಂಗರೋಡ ಹತ್ತಿರ ಇರುವ ಬಾಲಾಜಿ ಹೊಟೇಲ ಹತ್ತಿರ ಇದ್ದಾಗ ಸೈಬಣ್ಣ ಸಗರ ಇತನು ಮಲ್ಲು ಇತನಿಗೆ ಪೋನ ಮಾಡಿ ನಿನ್ನ ಅಟೊದ ವ್ಯವಹಾರ ಮುಗಿಸಿಕೊಡುತ್ತೇವೆ ನೀನು ದುಬೈ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ಬಾ ಅಂತ ಹೇಳಿದ್ದು ಅದರಂತೆ ನಾನು ಮತ್ತು ಮಲ್ಲು ಕೂಡಿಕೊಂಡು ದುಬೈ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ರಾತ್ರಿ 9.30 ಪಿ.ಎಂಕ್ಕೆ ಬಂದಿದ್ದು ಅಲ್ಲಿ ವಿರೇಶ ಸಲಾರೆ, ಸೈಬಣ್ಣ ಸಗರ, ಅಂಬರೇಶ ಕೋಳಕುರ, ಚಂದ್ರುಕೊತಲಿ, ರಮೇಶ ಕೊತಲಿ, ಉಮೇಶ ಕೊತಲಿ ಇವರು ನಿಂತಿದ್ದು ಆಗ ಚಂದ್ರುಕೊತಲಿ ಇತನು ಮಲ್ಲು ಇತನಿಗೆ ನನಗೆ ಪದೇ ಪದೇ ಅಟೊ ಕೊಡಿಸು ಅಂತ ಗುಂಡಾಗಿರಿ ಮಾಡುತ್ತಿ ಸೂಳಿ ಮಗನೆ ನಿನಗೆ ಖಲಾಸ ಮಾಡಿಸುತ್ತೇನೆ ಅಂತ ಬೈಯ್ಯುತ್ತಿದ್ದು ಆಗ ವಿರೇಶ ಇತನು ತನ್ನ ಹತ್ತಿರ ಇದ್ದ ಜಂಬ್ಯಾ ತೆಗೆದುಕೊಂಡು ಮಲ್ಲುನ ಎದೆಯ ಮೇಲೆ, ಬಲಪಕ್ಕೆಗೆ, ಎಡಪಕ್ಕೆಗೆ ಜೋರಾಗಿ ಹೊಡೆದು ಭಾರಿರಕ್ತಗಾಯ ಪಡಿಸಿದ್ದು, ಆಗ ಮಲ್ಲು ಇತನು ಚಿರಾಡುತ್ತ ನೆಲದ ಮೇಲೆ ಬಿದ್ದಿದ್ದು ಅಂಬು ಇತನು ಕಾಲಿನಿಂದ ಮಲ್ಲುನ ಬೆನ್ನಿನ ಮೇಲೆ ಒದ್ದಿದ್ದು ಸದರಿಯವರು ಮಲ್ಲುಗೆ ಹೊಡೆಯುತ್ತಿರುವುದನ್ನು ನೋಡಿ ನಾನು ಅಲ್ಲಿಂದ ಓಡಿ ಬರುತ್ತಿದ್ದು ಅದೇ ವೇಳೆಗೆ ಮಲ್ಲು ಇತನು ಎದ್ದು ನನ್ನ ಹಿಂದೆ ಸ್ವಲ್ಪ ಓಡಿಬಂದು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ನಾನು ಓಡುತ್ತ ಹೋಗಿ ಮಲ್ಲುನ ಮನೆಗೆ ಹೋಗಿ ಅವಳ ಹೆಂಡತಿಗೆ ವಿಷಯ ತಿಳಿಸಿದ್ದು ನಂತರ ನಾನು ಮಲ್ಲುನ ಹೆಂಡತಿ ಭಾಗ್ಯಶ್ರೀ ಮತ್ತು ಮಲ್ಲು ಇತನ ಅಣ್ಣಂದಿರು ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು ಮಲ್ಲುಗೆ ಹೊಡೆದವರು ಅಲ್ಲಿಂದ ಹೋಗಿದ್ದು ನಂತರ ನಾವೆಲ್ಲರು ಕೂಡಿಕೊಂಡು ಮಲ್ಲು ಇತನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದುಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿ ಸದರಿ ಮಲ್ಲು ಇತನು ಮೃತ ಪಟ್ಟಿದ್ದಾನೆ ಅಂತ ತಿಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪಾ ತಂದೆ ಶಂಕರ ಜಮಾದಾರ ಸಾ|| ಬಳೂಂಡಿ ರವರ ಅಣ್ಣ ಸಂತೋಷನು ನಮ್ಮೂರಿನ ಯಲ್ಲಪ್ಪಾ ತಂದೆ ಪುಂಡಲಿಕ ವಾಲೀಕಾರ ಎಂಬಾತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಅಂತಾ ದ್ವೇಶ ಹೊಂದಿ ಕಳೆದ ವರ್ಷ ಸೆಪ್ಟಂಬರ ತಿಂಗಳಲ್ಲಿ ನಮ್ಮ ಅಣ್ಣ ಸಂತೋಷ ಇವನ ಕೊಲೆಯನ್ನು ನಮ್ಮೂರ ಹತ್ತಿರದ ಅಫಜಲಪೂರ ರೋಡಿನ ಮೇಲೆ ಆಗಿರುತ್ತದೆ. ನನ್ನ ಅಣ್ಣ ಸಂತೋಷನ ಕೊಲೆಯನ್ನು ನಮ್ಮೂರಿನ ಯಲ್ಲಪ್ಪಾ ತಂದೆ ಪುಂಡಲಿಕ ವಾಲೀಕಾರ, ಲಕ್ಷ್ಮೀಪುತ್ರ ತಂದೆ ಸುಭಾಶ ಕಟ್ಟಿಮನಿ, ಗಜಾನಂದ @ ಗಜಪ್ಪಾ ತಂದೆ ಯಮನಪ್ಪಾ ಮಂಗಳೂರ, ಸಂಗಪ್ಪಾ ತಂದೆ ಭಾಗಪ್ಪಾ ಕಟ್ಟಿಮನಿ ರವರೆಲ್ಲರು ಸೇರಿಕೊಂಡು ಕೊಲೆ ಮಾಡಿರುತ್ತಾರೆ. ಪೊಲೀಸನವರು ನಮ್ಮ ಅಣ್ಣ ಸಂತೋಷನನ್ನು ಕೊಲೆ ಮಾಡಿದ 4 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಸದ್ಯ ಅವರಲ್ಲಿ ಲಕ್ಷ್ಮೀಪುತ್ರ ಮತ್ತು ಯಲ್ಲಪ್ಪಾ ಜಮಾದಾರ ಇವರು ಜೈಲಿನಲ್ಲಿ ಇರುತ್ತಾರೆ. ಕಳೆದ 2-3 ತಿಂಗಳುಗಳಿಂದ, ನಮ್ಮ ಅಣ್ಣ ಲಕ್ಷ್ಮಣನು ಊರಲ್ಲಿ ಕಳೆದ ವರ್ಷ ನಮ್ಮ ತಮ್ಮ ಸಂತೋಷನ ಕೊಲೆಯನ್ನು ನಮ್ಮ ದೊಡ್ಡಪ್ಪನಾದ ಶ್ರೀಪತಿಯ ಮಗ ಶರಣಬಸಪ್ಪನೆ ಮಾಡಿಸಿದ್ದಾನೆ, ಆ ಮಗನಿಗೆ ನಾವು ನಮ್ಮ ತಮ್ಮನ ಕೊಲೆ ಮಾಡಿದ ಹಾಗೆ ಹೊಡೆದು ಸಾಯಿಸುತ್ತೇವೆ ಅಂತಾ ಅಂದಾಡುತ್ತಾ ತಿರುಗಾಡುತ್ತಿದ್ದ. ಈ ವಿಷಯದಲ್ಲಿ ಶರಣಬಸಪ್ಪನು ನನ್ನ ಅಣ್ಣ ಲಕ್ಷ್ಮಣನ ಮೇಲೆ ವೈರತ್ವ ಬೆಳೆಸಿಕೊಂಡು ಊರಿಗೆ ಬರದೆ ಬೇರೆ ಯಾವ ಊರಲ್ಲಿಯೋ ಇದ್ದುಕೊಂಡು ನಮ್ಮ ಅಣ್ಣ ಲಕ್ಷ್ಮಣನ ಚಲನ ವಲನ ಗಮನಿಸುತ್ತಾ ನಾವು ಊರಲ್ಲಿ ಮನೆ ಕಟ್ಟಿಸುವ ಕೆಲಸ ಮಾಡಿಸುತ್ತಿದ್ದುದ್ದರಿಂದ ಪರಸಿ ಕಲ್ಲುಗಳು ತೆಗೆದಕೊಂಡು ಹೋಗಲು ಇಂದು ದಿನಾಂಕ 07-04-2015 ರಂದು ಮದ್ಯಾಹ್ನ 3;30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಸೋದರ ಮಾವನ ಮಗ ಪರಶುರಾಮ ತಂದೆ ಜಗನ್ನಾಥ ಜಮಾದಾರ ಇಬ್ಬರು ನಮ್ಮ ಮೋಟರ ಸೈಕಲ್ ನಂ ಕೆ.ಎ-32/ಡಬ್ಲೂ-4126 ನೇದ್ದರ ಮೇಲೆ ಮುಂದೆ ಬಂದು ಅಫಜಲಪೂರದಲ್ಲಿ ರಾಜಧಾನಿ ಧಾಬಾದ ಹತ್ತಿರ ಇರುವ ಪರಸಿ ಅಡ್ಡಾದ ಹತ್ತಿರ ನಿಂತುಕೊಂಡೆವು. ನಮ್ಮ ಹಿಂದಿನಿಂದಲೆ ನಮ್ಮ ಅಣ್ಣ ಲಕ್ಷ್ಮಣ ಇವನು ನಮ್ಮೂರಿನ ಒಂದು ಟ್ರ್ಯಾಕ್ಟರನ್ನು ಬಾಡಿಗೆಗೆ ತೆಗೆದುಕೊಂಡು ಪರಸಿ ಅಡ್ಡಾಕ್ಕೆ ಬಂದಿರುತ್ತಾನೆ. ನಂತರ ಟ್ರ್ಯಾಕ್ಟರದಲ್ಲಿ ಪರಸಿ ಕಲ್ಲುಗಳು ಹಾಕಿಸಿದೆವು, ಅಷ್ಟೊತ್ತಿಗೆ ನಮ್ಮೂರಿನ ಶರಣಪ್ಪಾ ತಂದೆ ಖಾಜಪ್ಪಾ ಹೊಸಮನಿ ಎಂಬಾತನು  ತನ್ನ ಮೋಟರ ಸೈಕಲ್ ತೆಗೆದುಕೊಂಡು ನಮ್ಮೂರಿಗೆ ಹೊರಟಿದ್ದನು, ಆಗ ನಾನು ಮತ್ತು ಪರಶುರಾಮ ನಮ್ಮ ಮೋಟರ ಸೈಕಲ ಮೇಲೆ ಮುಂದೆ ಹೊರಟಿದ್ದು, ನಮ್ಮ ಅಣ್ಣ ಲಕ್ಷ್ಮಣನು ನಮ್ಮೂರಿನ ಶರಣಪ್ಪನ ಮೋಟರ ಸೈಕಲ್ ಮೇಲೆ ಹಿಂದೆ ಕುಳಿತು ಬರುತ್ತಿದ್ದನು. ಪರಸಿ ಕಲ್ಲು ತುಂಬಿದ ಟ್ರ್ಯಾಕ್ಟರ್ ಇನ್ನು ಹಿಂದೆ ಇತ್ತು. ಅಫಜಲಪೂರದ ಎ ವನ್ ಧಾಬಾ ದಾಟಿದ ನಂತರ ಬ್ರಿಡ್ಜ ಕೆಲಸ ನಡೆದ ಜಾಗದ ಹತ್ತಿರ ರೋಡಿನ ಮೇಲಿಂದ ನಮ್ಮೂರಿಗೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಂದು ಕಪ್ಪು ಬಣ್ಣದ ಟವೇರಾ ವಾಹನ ಅತೀವೇಗವಾಗಿ ಬಂದು ನಮ್ಮ ಮೋಟರ ಸೈಕಲ್ ದಾಟಿ ಹೋದ ನಂತರ ನಮ್ಮ ಹಿಂದೆ ಬರುತ್ತಿದ್ದ ಶರಣಪ್ಪನ ಮೋಟರ ಸೈಕಲಗೆ ಡಿಕ್ಕಿ ಹೊಡೆಯಿತು. ಆಗ ನಮ್ಮ ಅಣ್ಣ ಲಕ್ಷ್ಮಣನು ಟವೇರಾ ವಾಹನದಲ್ಲಿ ಇದ್ದ ಶರಣಬಸಪ್ಪಾ ಜಮಾದಾರ ಈತನಿಗೆ ನೋಡಿದ ಕೂಡಲೆ ಸದರಿಯವನು ನನ್ನ ಕೊಲೆ ಮಾಡುವ ಸಲುವಾಗಿ ಬಂದಿದ್ದಾನೆ ಅಂತಾ ಖಾತರಿ ಪಡಿಸಿಕೊಂಡು ಓಡಿ ಬಂದು ನನ್ನ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ನನಗೆ ಮೋಟರ ಸೈಕಲ್ ವೇಗವಾಗಿ ಓಡಿಸಿಕೊಂಡು ಸೊನ್ನ ಗ್ರಾಮದ ಕಡೆಗೆ ನಡೆ ಅಂತಾ ಹೇಳಿದ್ದರಿಂದ ನಾನು ನನ್ನ ಸೈಕಲ್ ಮೋಟರನ್ನು ಓಡಿಸಿಕೊಂಡು ಸೊನ್ನ ಕ್ರಾಸ ದಾಟಿ ಸ್ವಲ್ಪ ಮುಂದೆ ಹೋದ ನಂತರ ಸದರಿ ಟವೇರಾ ವಾಹನವನ್ನು ತಿರುಗಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಜೋರಾಗಿ ಹಿಂದಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ, ಆಗ ನಾವು ಮೂರು ಜನರು ರೋಡಿನ ಪಕ್ಕದಲ್ಲಿ ಹೋಗಿ ಸೈಕಲ್ ಮೋಟರ ಸಮೇತ ಬಿದ್ದೇವು. ಆಗ ನನ್ನ ಅಣ್ಣ  ಲಕ್ಷ್ಮಣ ಎದ್ದು ಓಡಿ ಹೋಗುತ್ತಿದ್ದಾಗ ಶರಣಬಸಪ್ಪನು ಬಿಡಬ್ಯಾಡರಿ ಮಗನಿಗೆ ಓಡಿ ಹೋಗುತ್ತಾನೆ ಅಂತಾ ಅಂದಾಗ ಟವೇರಾ ವಾಹನದಲ್ಲಿದ್ದವರೆಲ್ಲರು 1] ಬಾಬು ತಂದೆ ಶಾಮರಾವ ಜಮಾದಾರ, 2] ಶ್ರೀಶೈಲ ತಂದೆ ಬೀಮರಾಯ ಜಮಾದಾರ, 3] ಮಡೆಪ್ಪಾ ತಂದೆ ಭೀಮರಾಯ ಜಮಾದಾರ, 4] ಕುಮ್ಯಾ@ರಾಜಕುಮಾರ ತಂದೆ ಶಾಮರಾಯ ಜಮಾದಾರ, 5] ಸಂಜು ತಂದೆ ವಿಠ್ಠಲ ಜಮಾದಾರ, 6] ಹೊನ್ನಪ್ಪಾ ತಂದೆ ತುಕಾರಾಮ ಜಮಾದಾರ ದುದ್ದಣಗಿ ಹಾಗು ಇನ್ನಿತರರು ನಮ್ಮ ಅಣ್ಣನ್ನು ಸುತ್ತುವರೆದು ಹಿಡಿದುಕೊಂಡಾಗ ಶರಣಬಸಪ್ಪಾ ತಂದೆ ಶ್ರೀಪತಿ ಜಮಾದಾರ ಈತನು ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ತಾವು ತಂದಿರುವ ಕಪ್ಪು ಬಣ್ಣದ ಟವೇರಾ ವಾಹನದಲ್ಲಿಯೆ ಎಲ್ಲರು ಕೂಳಿತುಕೊಂಡು ವಾಹನ ಸಮೇತ ಓಡಿ ಹೋಗಿರುತ್ತಾರೆ. ಸದರಿ ಘಟನೆಯಲ್ಲಿ ನನಗೆ ಬಲಗಣ್ಣಿನ ಹುಬ್ಬಿಗೆ, ಬಲಗೈ ಹಸ್ತಕ್ಕೆ, ಬಲ ಮೊಳಕಾಲಿಗೆ ಪೆಟ್ಟಾಗಿರುತ್ತದೆ. ಪರಶುರಾಮನಿಗೆ ಬಲಗಣ್ಣಿನ ಕೆಳಗೆ ತರಚಿದ ರಕ್ತಗಾಯ ಮತ್ತು ಹಣೆಯ ಮೇಲೆ ಒಳಪೆಟ್ಟಾಗಿ ಬೆನ್ನಿಗು ಹಾಗು ಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 07-04-2015 ರಂದು ಸಾಯಂಕಾಲ ಸ್ಟೇಷನ ಬಜಾರ  ಠಾಣಾ ವ್ಯಾಪ್ತಿಯಲ್ಲಿಯ ಅಂಡರ್ ಬ್ರಿಜ್ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಸ್ಟೇಷನ ಬಜಾರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಅಂಡರ್ ಬ್ರಿಜ್  ಹತ್ತಿರ ರಸ್ತೆಯ ಪಕ್ಕದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ ಗೆ 80/- ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸುತ್ತುವರೆದು ಹಿಡಿದು ಹೆಸರು ವಗೈರೆ ವಿಚಾರಿಸಲು ಆತನು ತನ್ನ ಹೆಸರು ಸಿದ್ದಣ್ಣ ತಂದೆ ಮಲ್ಲಪ್ಪಾ ಹೊನ್ನುರ ಸಾ:ಪಂಚಶೀಲ ನಗರ ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ಜೂಜಾಟಕ್ಕೆ ಬಳಸಿದ ನಗದು ಹಣ 6530/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಅಮಕಿ ಸಂಖ್ಯೆ ಬರೆದ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಸ್ಠಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸರೂಬಾಯಿ ಗಂಡ ಅಪ್ಪಾರಾವ ಇವರ ಮಗಳಾದ ಭಾಗ್ಯಶ್ರೀ ಇವಳಿಗೆ ಆಳಂದ ತಾಲೂಕಿನ ಹೊನ್ನಳ್ಳಿ ಗ್ರಾಮದ ಬಸವರಾಜ ಎಂಬುವನ ಮಗನಾದ ಉದಯ ಕುಮಾರ ಇವನಿಗೆ ಕೊಟ್ಟು ಈಗ ಅಂದಾಜು 2 ವರ್ಷಗಳ ಹಿಂದೆ ಮದುವೆ ಮಾಡಿದ್ದು, ಮದುವೆಯಲ್ಲಿ ಬಂಗಾರ, ಹಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದು, ಮದುವೆಯಾದ ಒಂದು ವರ್ಷದವರೆಗೆ ನನ್ನ ಮಗಳಿಗೆ ಆಕೆಯ ಗಂಡ, ಅತ್ತೆ, ಮಾವ, ಮೈದುನ ಇವರು ಸರಿಯಾಗಿ ನೋಡಿಕೊಂಡು ನಂತರ ನಿಮ್ಮ ಅಪ್ಪ ಪೊಲೀಸ ವೃತ್ತಿಯಲ್ಲಿದ್ದಾನೆ ಇನ್ನೂ 10 ಲಕ್ಷ ರೂಪಾಯಿ ವರದಕ್ಷಣೆ ತರಬೇಕು ಅಂತಾ ಮಾನಸಿಕ ,ದೈಹಿಕ ತೊಂದರೆ ಕೊಡುತ್ತಾ ಬಂದಿದ್ದು,  ಇದರ ಬಗ್ಗೆ ನಾನು ನನ್ನ ಗಂಡ ಅವರಿಗೆ ತಿಳಿ ಹೇಳುತ್ತಾ ಬಂದಿದ್ದು, ಇರುತ್ತದೆ. ದಿನಾಂಕ 06-4-2015 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ಮಗಳಾದ ಭಾಗ್ಯಶ್ರೀ ಇವಳು ನಮ್ಮ ಮನೆಗೆ ಬಂದು ಹೇಳಿದ್ದೇನೆಂದರೆ, ಗಂಡ ,ಅತ್ತೆ , ಮಾವ, ಮೈದುನ ಇವರೆಲ್ಲರೂ ಕೂಡಿಕೊಂಡು ನಿಮ್ಮ ಅಪ್ಪ ಇಲಾಖೆಯಿಂದ ನಿವೃತ್ತಿ ಹೊಂದುತ್ತಿದ್ದಾನೆ ಸರಕಾರದಿಂದ ಹಣ ಬರುತ್ತದೆ ಇನ್ನೂ 10 ಲಕ್ಷ ರೂಪಾಯಿ ವರದಕ್ಷಣೆ ರೂಪದಲ್ಲಿ ಹಣ ತರಬೇಕು ಅಂತಾ ಕಿರಿಕಿರಿ ಮಾಡುತ್ತಿದ್ದು, ಹಣ ತರದೇ ಇದ್ದರೆ ನಿನಗೆ ಹಗ್ಗದಿಂದ ಉರುಲು ಹಾಕಿ ಕೊಲೆ ಮಾಡುತ್ತೇವೆ ಅಂತಾ ತೊಂದರೆ ಕೊಡುತ್ತಿದ್ದಾರೆ ನೀವು ಬಂದು ಸಮಜಾಯಿಸಿ ಹೋಗಿರಿ ಅಂತಾ ಹೇಳಿದಾಗ ನಾನು ನನ್ನ ಗಂಡ ಇಬ್ಬರೂ ಕೂಡಿಕೊಂಡು ಹೋಗಿ  ಮಗಳ ಗಂಡ ಹಾಗೂ ಗಂಡನ ಮನೆಯವರಿಗೆ ಬುದ್ದಿವಾದ ಹೇಳಿ ಬಂದಿದ್ದು ಇರುತ್ತದೆ. ದಿನಾಂಕ 07-04-2015 ರಂದು ಬೆಳಿಗ್ಗೆ ನನ್ನ ಮಗಳ ಗಂಡನಾದ ಉದಯಕುಮಾರ ಇವರು ಮೊಬಾಯಿಲ್ ದಿಂದ ಕರೆ ಮಾಡಿ ನಿಮ್ಮ ಮಗಳು ಉರುಲು ಹಾಕಿಕೊಂಡಿದ್ದಾಳೆ ಅರ್ಜಂಟ್ ಬರ್ರಿ ಅಂತಾ ಹೇಳಿದಾಗ ನಾನು ನನ್ನ ಗಂಡ ,ಓಣಿಯ ಜನರು ಹೋಗಿ ನೋಡಲಾಗಿ ನನ್ನ ಮಗಳಿಗೆ ಅಂಗಾತ ಮಲಗಿಸಿ ಗಂಡ, ಅತ್ತೆ, ಮಾವ, ಮೈದುನ ಕೂಡಿಕೊಂಡು ಬಾಯಿಗೆ ನೀರು ಹಾಕುತ್ತಿದ್ದರೂ ನಾವು ನೋಡಲಾಗಿ ಬೇಹೂಷ ಇದ್ದಳು. ನಾವು ಆಗ ನಮ್ಮ ಮಗಳಿಗೆ ಒಂದು ಆಟೋದಲ್ಲಿ ಹಾಕಿಕೊಂಡು ಕಲಬುರಗಿಯ ಸತ್ಯ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಸಧ್ಯ ನನ್ನ ಮಗಳು ಕೋಮಾ ದಲ್ಲಿರುತ್ತಾಳೆ. ನನ್ನ ಮಗಳಾದ ಭಾಗ್ಯಶ್ರೀ ಇವಳಿಗೆ ಗಂಡ, ಅತ್ತೆ ,ಮಾವ ,ಮೈದುನ ಇವರು ಕೂಡಿಕೊಂಡು ವರದಕ್ಷಣೆ ರೂಪದಲ್ಲಿ 10, ಲಕ್ಷ ರೂಪಾಯಿ ತರಬೇಕು ಅಂತಾ ಮಾನಸಿಕ, ದೈಹಿಕ ಕಿರುಕುಳ ನೀಡಿ ಹಗ್ಗದಿಂದ ಕೊರಳಿಗೆ ಉರುಲು ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಚಂದಪ್ಪ ತಂದೆ ಸಿದ್ರಾಮಪ್ಪ ಸಾ:ಹಂದರಕಿ ಗ್ರಾಮ ಇವರ ಅಕ್ಕಳಾದ ಕಾಂತಮ್ಮ ಅವಳ ಮೊಮ್ಮಗ ಸಂಜುಗೆ ಆಸ್ಪತ್ರೆಗೆ ತೋರಿಸಲು ಮಗ ಲೋಕೇಶನೊಂದಿಗೆ ಕೂಡಿ ಸೇಡಂಕ್ಕೆ ಮೊ.ಸೈ ನಂ-KA32-EC-7453 ನೇದ್ದರ ಮೇಲೆ ಹೋಗಿದ್ದು, ನಂತರ ಲೋಕೇಶ ನನಗೆ ಫೋನ ಮಾಡಿ ತಿಳೀಸಿದ್ದೆನೆಂದರೆ, ಮೋಟಾರು ಸೈಕಲ್ ಮೇಲೆ ಸೇಡಂ-ಹಂದರಕಿ ರೋಡಿನ ಮೇಲೆ ಹೋಗುವಾಗ ಈರಮ್ಮ ಗುಡಿ ಹತ್ತಿರ ಮೊಟಾರು ಸೈಕಲ್ ಸ್ಕಿಡ್ ಆಗಿ ಬಿದ್ದು ತಾಯಿಯ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ನನ್ನ ಮಗ ಸಂಜುಗೂ ಸಹಾ ಪೆಟ್ಟುಗಳಾಗಿದ್ದ ಬಗ್ಗೆ ತಿಳಿಸಿದ್ದರಿಂದ, ನಾನು ತಕ್ಷಣ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಸದರ ಘಟನೆ ಜರುಗಿದ್ದು ನಿಜವಿತ್ತು. ನಾನು ಸದರಿಯವರಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಕಾರಣ ಅಪಘಾತಪಡಿಸಿದ ಲೋಕೇಶ ಇತನ ಮೆಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 April 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 06-04-2015 ರಂದು ರಾತ್ರಿ  ಶ್ರೀ ಎಸ.ಎಸ್. ದೊಡಮನಿ ಪಿ.ಎಸ್.ಐ (ಕಾಸು) ರವರು ಮಾನ್ಯ ಡಿ.ಎಸ್.ಪಿ ಸಾಹೇಬರು ಕರೆಯಸಿದ ಮೇರೆಗೆ ನಾನು ಮತ್ತು ಪಿ.ಸಿ 619  ಕೂಡಿ ಡಿ.ಎಸ್.ಪಿ ಆಫೀಸಿಗೆ ಹೋದಾಗ ಮಾನ್ಯ ಶ್ರೀ ಮಹಾನಿಂಗ ನಂದಗಾವಿ ಡಿ.ಎಸ್.ಪಿ ಉಪ ವಿಭಾಗ ರವರು ನಮಗೆ ತಿಳಿಸಿದ್ದೇನೆಂದರೆ ಐವಾನ್-ಏ-ಶಾಹಿ ಏರಿಯಾದ ಶಿವು ಪಾಟೀಲ ಇವರ ಅಪಾರ್ಟ್‌ಮೆಂಟ್‌ನಲ್ಲಿ ಮೂರನೇ ಅಂತಸ್ತಿನ ನಾಲ್ಕನೇ ಬ್ಲಾಕನಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಮಾನ್ಯ ಶ್ರೀ ಮಹಾನಿಂಗ ನಂದಗಾಂವ ಡಿ.ಎಸ್.ಪಿ ಸಾಹೇಬರು ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ  ನಾನು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಐವಾನ್-ಏ-ಶಾಹಿ ಏರಿಯಾದ ಶಿವು ಪಾಟೀಲ ಇವರ ಅಪಾರ್ಟ್‌ಮೆಂಟ್‌ನಲ್ಲಿ ಮೂರನೇ ಅಂತಸ್ತಿನ ನಾಲ್ಕನೇ ಬ್ಲಾಕನಲ್ಲಿ ಹೋಗಿ ನೋಡಲು ಬಾಗಿಲ ಮರೆಯಲ್ಲಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರ ನೇತೃತ್ವದಲ್ಲಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು 1) ಪ್ರಕಾಶ ತಂದೆ ಪರಮೇಶ್ವರ ಕಡಗಂಚಿ ಸಾ:ಪ್ಲಾಟ್ ನಂ:87 ಜಯ ನಗರ ಕಲಬುರಗಿ 2) ಸಂತೋಷ ತಂದೆ ಸಂಗಪ್ಪ ದುತ್ತರಗಿ ಸಾ:ಮುಕ್ತಂಪೂರ 3) ಸಂಗಮೇಶ ತಂದೆ ಶ್ರೀನಿವಾಸ ಬಿರಾದಾರ  ಸಾ:ಗಂಜ ಬ್ಯಾಂಕ ಕಾಲೋನಿ ಕಲಬುರಗಿ  4) ಅಬ್ದುಲ ರಶೀದ ತಂದೆ ಸತ್ತಾರಮಿಯಾ ಅಬ್ದುಲ ಸಾ:ಅಟೋ ಸ್ಟ್ಯಾಂಡ ಹತ್ತಿರ ಬಸವೇಶ್ವರ ಕಾಲೋನಿ ಕಲಬುರಗಿ  5) ಪ್ರದೀಪ ತಂದೆ ಮದನ ತಿವಾರಿ ಸಾ:ಕಟಗರಪೂರ ಶಹಾಬಜಾರ ಕಲಬುರಗಿ 6) ಸಂಜಯ ತಂದೆ ವಿಠಲ ಚವ್ಹಾಣ ಸಾ:ಸ್ಟೇಡಿಯಂ ಹಿಂದುಗಡೆ ಬ್ಯಾಂಕ ಕಾಲೋನಿ ಕಲಬುರಗಿ  7) ಫೆರೋಜ ತಂದೆ ಮಜೀದಖಾನ ಸಾ:ಜಿಲಾನಾಬಾದ ಕಾಲೋನಿ ಎಮ್.ಎಸ್.ಕೆ ಕಲಬುರಗಿ  8) ಅಹೆಮದ ಖಾನ ತಂದೆ ಬಾಬಾಖಾನ ಸಾ : ಎಕ್ಬಾಲ ಕಾಲೋನಿ ಕಲಬುರಗಿ 9) ಶರಣಬಸಪ್ಪ ತಂದೆ ರವಿ ಶಂಕರ ಪಾಟೀಲ ಸಾ:ಮನೆ ನಂ:3-980/1 ಅತ್ತರ ಕಂಪೌಂಡ ತಿರಂದಾಸ ಟಾಕೀಸ ಹತ್ತಿರ ಕಲಬುರಗಿ 10) ರಮೇಶ ತಂದೆ ರೇವಣಸಿದ್ದಪ್ಪ ಘಂಟಿ ಸಾ:ವಿರೇಂದ್ರ ಪಾಟೀಲ ನಗರ ಜಿ.ಡಿ.ಎ ಲೇಔಟ್ ಕಲಬುರಗಿ 11) ಶರಣಬಸಪ್ಪ ತಂದೆ ಗುಂಡಪ್ಪ ಜಗತ ಸಾ:ಮನೆ ನಂ:8-1479 ಸುಭಾಶ ನಗರ ಶಹಾ ಬಜಾರ ಕಲಬುರಗಿ 12) ವೈಜುನಾಥ ತಂದೆ ಶಿವರಾಯ ಪಾಟೀಲ ಸಾ:ಗಾಜಿಪೂರ ಕಲಬುರಗಿ  ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  72,500/- ರೂ. ಮತ್ತು 52 ಇಸ್ಪೆಟ್ ಎಲೆಗಳು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ತಠಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಮಾಡಿ ತಲೆಮರಿಸಿಕೊಂಡ ಆರೋಪಿತನ ಬಂಧನ :  
ವಿಶ್ವವಿದ್ಯಾಲಯ ಠಾಣೆ : ದಿನಾಂಕ 24/5/2013 ರಂದು ಕಾಳನೂರ ತಾಂಡಾದ ಶ್ರೀ ಟೋಪು ಚಿನ್ನಾ ರಾಠೋಡ, ಆತನ ಹೆಂಡತಿ ಹಾಗು ಮಕ್ಕಳನ್ನು ಅವರ ಸಂಬಂಧಿಕರಾದ ರಾಜಶೇಖರ ಮತ್ತು ವಿಕಾಸ ಇವರು ಶರಣಸಿರಸಗಿ ತಾಂಡಾದ ಹಾಗು ಕಲಬುರಗಿ ನಗರದ ಕೆಲ ಹುಡುಗರನ್ನು ಕರೆದುಕೊಂಡು ಕಾಳನೂರ ತಾಂಡಾಕ್ಕೆ ಹೋಗಿ ಟೋಪ ಚಿನ್ನಾ ರಾಠೋಡ ಇವರ ಮನೆಗೆ ನುಗ್ಗಿ ಗಲಾಟೆ ಮಾಡಿ ಮನೆಯ ಸಾಮಾನುಗಳನ್ನು ಒಡೆದು ಹಾನಿ ಮಾಡಿ, ಮನೆಯವರಿಗೆ ಅಪಹರಿಸಿಕೊಂಡು ಹೋಗಿ ಟೋಪು ಚಿನ್ನಾರಾಠೋಡ ಈತನ ಹೆಂಡತಿಯನ್ನು ಅವರಲ್ಲಿಯ ಒಬ್ಬನು ಮೋಟಾರ ಸೈಕಲ ಮೇಲೆ ಜಭರ ದಸ್ತಿಯಿಂದ ಕೂಸಿಕೊಂಡು ಹೈಕೊರ್ಟ ಹತ್ತಿರದ ಖುಲ್ಲಾ ಜಾಗದಲ್ಲಿ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿ ಅವಳನ್ನು ಶರಣಸಿರಸಗಿ ತಾಂಡಾಕ್ಕೆ ಕರೆದುಕೊಂಡು ಹೋಗಿ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರಿನ ಮೇರೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡುವಂತೆ ಮಾನ್ಯ ಶ್ರೀ ಅಮಿತ್ ಸಿಂಗ್. ಕಖ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಲ್ ಝಂಡೇಕರ್ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ರವರ ನೇತೃತ್ವದಲ್ಲಿ ಅಧಿಕರಿಯವರಾದ  ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ ಕಲಬುರಗಿ, ಶ್ರೀ ರಘು ಎನ್  ಪಿ.ಎಸ್.ಐ ವಿಶ್ವವಿದ್ಯಾಲಯ ಪೊಲೀಸ ಠಾಣೆ ಕಲಬುರಗಿ ಹಾಗು ಸಿಬ್ಬಂದಿಯವರಾದ ಹೆಚ್.ಸಿಗಳಾದ ಶಂಕರ, ಅರ್ಜುನ, ಅರ್ಜುನಸಿಂಗ್, ಸಂತೋಷ, ಮಲ್ಲಿಕಾರ್ಜುನ ಮತ್ತು ಅಶೋಕ ಹಳಿಗೋಧಿ ರವರು ಕೂಡಿಕೊಂಡು ಮಾಹಿತಿ ಸಂಗ್ರಹಿಸಿ ಈ ಪ್ರಕರಣದಲ್ಲಿ ಕಳೆದ 2 ವರ್ಷಗಳಿಂದ ತಲೆ ಮರೆಯಿಸಿಕೊಂಡ ಈ ಕೆಳಕಂಡ ಆರೋಪಿಯನ್ನು ದಿನಾಂಕ 6/4/2015 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಇನ್ನೂಳಿದ ಆರೋಪಿತರ ಪತ್ತೆಗಾಗಿ ಜಾಲ ಬೀಸಿ ಈ ಕೇಳಕಂಡ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. 1) ಅರುಣಕುಮಾರ ತಂದೆ ಶಂಭುಲಿಂಗ ಭರಣಿ ಸಾ : ಶರಣಸಿರಸಗಿ ಮಡ್ಡಿ ತಾ/ಜಿ ಕಲಬುರಗಿ

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:06/04/2015 ರಂದು ಬೆಳಗ್ಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಎಂ.ಎಸ್.ಕೆ.ಮೀಲ್ ಬಡಾವಣೆಯ ಖದೀರ ಚೌಕ ಹತ್ತಿರ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಹ್ಮದಿ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ಮನುಷ್ಯನು ರಸ್ತೆ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ಸಾರ್ವಜನಿಕರಿಗೆ ಕೊಟ್ಟು ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿದ್ದು ಅವನು ತನ್ನ ಹೆಸರು ಗೌಸಮೀಯಾ ತಂದೆ ಮಹೇಬೂಬಸಾಬ ನಾಗೂರ ಸಾ:ರಾಮಚಕ್ಕಿ ಹತ್ತಿರ ಜಿಲಾನಾಬಾದ ಎಂ.ಎಸ್.ಕೆ.ಮೀಲ್ ಕಲಬುರಗಿ ಅಂತಾ ತಿಳಿಸಿದ್ದು ಆತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2135/-ರೂ ಒಂದು ಬಾಲಪೇನ್ ಹಾಗೂ 5 ಮಟಕಾ ನಂಬರ ಬರೆದ ಚೀಟಿಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ನಿಂಗಪ್ಪ ತಂದೆ ಬಸಪ್ಪ ಬಿಜನಳ್ಳಿ ಸಾ:ಮಳಖೇಡ ರವರು ದಿನಾಂಕ: 05-04-15 ರಂದು ಬೆಣ್ಣೂರ(ಬಿ) ಗ್ರಾಮದಲ್ಲಿ ನಾಟಕ ಇದುದ್ದರಿಂದ ನಾಟಕ ನೋಡಿಕೊಂಡು ಬರಲು ನಾನು ಹಾಗೂ ನಮ್ಮ ಓಣಿಯ ದೇವಪ್ಪ ತಂದೆ ರಾಯಪ್ಪ ಇತನೂ ತನಗೆ ಪರಿಚಯದವರಾದ ಶಾಂತಪ್ಪಾ ತಂದೆ ಮಾಣೀಕಪ್ಪ ಮರಗೋಳ ಇತನ ಮೋಟರ ಸೈಕಲ ನಂ.ಕೆಎ-32-ಇಇ-8480 ನೇದ್ದನ್ನು ತೆಗೆದುಕೊಂಡು ಮಾರಿಗೆ ಮಳಖೇಡದಿಂದ ಸದರಿ ಮೋಟರ ಸೈಕಲ ಮೇಲೆ ನಾನು ಹಿಂದೆ ಕುಳಿತಿದ್ದು ಮೋಟರ ಸೈಕಲ ದೇವಪ್ಪ ಇತನೂ ಚಲಾಯಿಸುತ್ತಿದ್ದು ಮುಗುಟಾ ಕ್ರಾಸ ಬಂದಾಗ ನಮ್ಮ ಗ್ರಾಮದ ಮಲ್ಲಪ್ಪ ತಂದೆ ನರಸಪ್ಪಾ ನಾಚವಾರ ಇತನೂ ಸಿಕ್ಕಿದ್ದರಿಂದ ನಾವು ಮೋಟರ ಸೈಕಲ ರೋಡಿನ ಬದಿಗೆ ನಿಲ್ಲಿಸಿ ಮಲ್ಲಪ್ಪನ ಸಂಗಡ ಮಾತನಾಡುತ್ತಾ ನಿಂತಿರುವಾಗ ಅಂದಾಜು 10-30 ಪಿಎಂದ ಸುಮಾರಿಗೆ ಸೇಡಂ ಕಡೆಯಿಂದ ಒಂದು ಕ್ರೂಜರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬದಿಗೆ ಮಾತನಾಡುತ್ತಾ ನಿಂತ ನಮ್ಮ 3 ಜನರಿಗೆ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಬಲಗೈ ಹಸ್ತ ಬೆರಳಿಗೆ,ಹಣೆಗೆ ಭಾರಿ ರಕ್ತಗಾಯವಾಗಿದ್ದು ಬಲ ಮಗ್ಗಲಿಗೆ ಒಳಪೆಟ್ಟಾಗಿದ್ದು,ಎಡಗಾಲು ಮೊಳಕಾಲಿಗೆ ತೆರಚಿದ ಗಾಯವಾಗಿದ್ದು ಆಗ ಮಲ್ಲಪ್ಪನಿಗೆ ನೋಡಲಾಗಿ ಆತನಿಗೂ ಸಹ ಬಲಗೈ ಮುಂಗೈ ಕೆಳಗಡೆ ಅಲ್ಲಲ್ಲಿ ಎಲುಬು ಮುರಿದು ರಕ್ತ ಸೋರುತ್ತಿದ್ದು ಬಲಭುಜಕ್ಕೆ ತೆರಚಿದ ಗಾಯ ಎಡಗಾಲ ಮೊಳಕಾಲಿಗೆ ತೆರಚಿದ ಗಾಯ ಎಡಗೈ ಮೊಳಕೈಗೆ ತೆರಚಿದ ಗಾಯವಾಗಿದ್ದು ನಂತರ ದೇವಪ್ಪ ಇತನಿಗೆ ನೋಡಲಾಗಿ ಆತನ ಬಲಗೈ ಭುಜದ ಹತ್ತಿರ ಸಂಪೂರ್ಣ ಕೈ ಕಡಿದು ಬೇರೆ ಕಡೆ ಬಿದ್ದು ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯ ಹೊಂದಿ ಮೆದುಳು ಹೊರಗೆ ಬಿದ್ದು ನರಳಾಡುತ್ತಿದ್ದು ನಂತರ ಅಲ್ಲೆ ಮುಗುಟಾ ಕ್ರಾಸ ಹತ್ತಿರ ಇದ್ದ ಕೇಲವು ಜನರೂ ಬಂದು ನೋಡಿ 108 ಅಂಬುಲೇನ್ಸಕ್ಕೆ ಫೋನ ಮಾಡಿ ತಿಳಿಸಿದ್ದು ನಂತರ ಅಲ್ಲೆ ನಿಂತಿದ್ದ ಕ್ರೂಜರ ನಂ ನೋಡಲಾಗಿ ಎಂ.ಎಚ-17-ಎನ-1486 ಅಂತ ಇದ್ದು ಸದರಿ ಕ್ರೂಜರ ಚಾಲಕ ಜನರೂ ಬರುವುದನ್ನು ನೋಡಿ ತನ್ನ ವಾಹನ ಸಮೇತ ಅಲ್ಲಿಂದ ಓಡಿ ಹೋದನು. ನಂತರ 108 ಅಂಬುಲೇನ್ಸ ಬರಲಿ ಅಲ್ಲೆ ಇದ್ದ ಕೇಲವು ಜನರು ಅದರಲ್ಲಿ ನಮ್ಮ 3 ಜನರಿಗೆ ಹಾಕಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕಳಿಸಿದ್ದು ಸದರಿ ದೇವಪ್ಪಾ ಇತನೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 05-04-2015 ರಂದು ನಾನು ಬಿದರಚೇಡ ಗ್ರಾಮಕ್ಕೆ ಹೋಗಿದ್ದು  ನನ್ನ ಮಗನು 1ನೇ ತರಗಿತಿಯಲ್ಲಿ ಅಲ್ಲಿಯೇ ಓದುತ್ತಿದ್ದು ಈಗ ಬೆಸಿಗೆ ರಜೆ ಇರುವುದರಿಂದ ನಾನು ನಮ್ಮ ಮಗನಿಗೆ ನಮ್ಮೂರಿಗೆ ಕರೆದುಕೊಂಡು ಹೋಗುವ ಸಲುವಾಗಿ ಇಂದು ಬೆಳಿಗ್ಗೆ ನಾನು ಮತ್ತು ನನ್ನ ಅಳಿಯನಾದ ಸಂತೋಷ ಹಾಗು ನನ್ನ ಮಗ ಪ್ರಜ್ವಲ್ ಕೂಡಿಕೊಂಡು ನನ್ನ ಅಳಿಯನ ಮೋಟಾರು ಸೈಕಲ್ ನಂ ಕೆಎ-32-ಡ್ಬ್ಲೂ-2361 ನ್ನೇದ್ದರ ಮೇಲೆ ಬಿದರಚೇಡ ಗ್ರಾಮದಿಂದ ಸೇಡಂ ಕಡೆಗೆ ಬರುತ್ತಿದ್ದೆವು ನಮ್ಮ ಮೋಟಾರು ಸೈಕಲ್ ಸಂತೋಷ ಇತನು ಲಾಯಿಸುತ್ತಿದ್ದನು. ನಮ್ಮ ಮೋಟಾರು ಸೈಕಲ್ ಮುಧೋಳ ಸೇಡಂ ಮುಖ್ಯ ರಸ್ತೆಯ ಬಟಗೇರಾ(ಕೆ) ಗೇಟ್ ದಾಟಿ ಕಾಗಿಣಾ ನದಿಯ ಬ್ರಿಡ್ಜ್ ಮೇಲೆ  ಮುಖ್ಯ ರಸ್ತೆಯ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಸೇಡಂ ಕಡೆಯಿಂದ ಒಂದು ಮೋಟಾರು ಸೈಕಲ ಚಾಲಕನು ಅತಿವೇಗ ಹಾಗು ನಿಸ್ಕಾಳಜೀತನದಿಂದ ರಸ್ತೆಯ ಬಲಬದಿಗೆ ರಾಂಗ್ ಸೈಡಿನಿಂದ ಚಲಾಯಿಸಿಕೊಂಡು ಬಂದು 09-45 ಎ.ಎಮ್.ದ ಸುಮಾರಿಗೆ ನಮ್ಮ ಮೋಟಾರು ಸೈಕಲಿಗೆ ಮುಖಾಮುಖಿ ಡಿಕ್ಕಿ ಪಡಿಸಿದನು. ಆಗ ನಾವೆಲ್ಲರೂ ಕೆಳಗೆ ಬಿದ್ದೇವು. ಸದರಿ ಅಪಘಾತದಲ್ಲಿ ನನ್ನ ಎರಡು ಕಾಲುಗಳಿಗೆ ತರಚಿದ ಗುಪ್ತ ಗಾಯ, ಮೈಗೆ ಒಳಪೆಟ್ಟು ಆಗಿರುತ್ತದೆ ಮತ್ತು ಮೋಟಾರು ಸೈಕಲ ಮುಂದುಗಡೆ ಕುಳಿತ ನನ್ನ ಮಗನಿಗೆ ನೋಡಲಾಗಿ ಬಲಹಣೆಯ ಹುಬ್ಬಿನ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ನಮ್ಮ ಮೋಟಾರು ಸೈಕಲ ಚಾಲಕ ಸಂತೋಷ ಇತನಿಗೆ ಬಲಗೈಗೆ ಭಾರಿ ಗುಪ್ತ ಗಾಯ ಮುಖಕ್ಕೆ ರಕ್ತ ಗಾಯ ಮತ್ತು ಬಲಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಸದರಿ ಅಪಘಾತ ಪಡಿಸಿದ ಮೋಟಾರು ಸೈಕಲ್ ನಂ ನೋಡಲಾಗಿ ಕೆಎ-32-ಎಲ್- 4402 ನ್ನೇದ್ದು ಇದ್ದು ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ  ಸದಾಶಿವ ಸ್ವಾಮಿ ತೊನಸನ್ನಳ್ಳಿ ಸಾ: ಕುರಕುಂಟಾ ಅಂತ ತಿಳಿಸಿದ್ದು  ಅವನಿಗೆ ಬಲಗಾಲಿಗೆ ಮತ್ತು ಎಡಗೈಗೆ ಭಾರಿ ರಕ್ತಗಾಯವಾಗಿರುತ್ತದೆ . ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರ್ಗಿ ಠಾಣೆ : ದಿನಾಂಕ 22-03-2015 ರಂದು ಮನೆಯ ಮುಂದೆ ರೊಡಿನಲ್ಲಿ ಕು. ಭಾಗಮ್ಮ ಇವಳು ನಡೆದುಕೊಂಡು ಬರುವಾಗ ಮಲ್ಲಿಕಾರ್ಜುನ ತಂದೆ ಯಲ್ಲಣ್ಣ ಇನಾಮದಾರ ಇತನು ತನ್ನ ಮೋಟಾರು ಸೈಕಲ್‌ ನಂ ಕೆ.32,ಎಕ್ಸ್1244 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕು. ಬಾಗಮ್ಮ ಇವಳಿಗೆ ಡಿಕ್ಕಿಪಡಿಸಿ ಗಾಯಪೆಟ್ಟುಗೊಳಿಸಿರುತ್ತಾನೆ, ನಂತರ ಮೊಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ ಅಂತಾ ಶ್ರೀಮತಿ ದೇವಕಿ ಗಂಡ ಹಣಮಂತ ತಳಗೇರಿ ಸಾಃ ನರಿಬೊಳ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.