ಕೊಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಶರಣಬಸಪ್ಪ ತಂ ಶಾಮರಾಯ ಕುಂಬಾರ ಸಾಃ ದುಬೈ ಕಾಲೋನಿ
ಸಂಜಯಗಾಂಧಿ ನಗರ ಕಲಬುರಗಿ ಇವರ ಸಂಬಂದಿಕನಾದ ಮಲ್ಲು @ ಮಲ್ಲಿಕಾರ್ಜುನ ಇತನು ನಮ್ಮ ಬಡಾವಣೆಯಲ್ಲಿ ಸ್ವಂತ ಮನೆ
ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ನಮ್ಮ ಬಡಾವಣೆಯಲ್ಲಿರುವ ಚಂದ್ರು ಕೊತಲಿ, ಉಮೇಶ ಕೊತಲಿ ರಮೇಶ ಕೊತಲಿ ಇವರು
ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದು ಸದರಿಯವರು ಮಲ್ಲುನ ಗೆಳೆಯರಾಗಿದ್ದು, ಚಂದ್ರ ಕೊತಲಿ ಇತನು ಮಲ್ಲು ಇತನ
ಹೆಸರಿನಲ್ಲಿ ಒಂದು ಅಟೊ ಖರಿದಿಸಿ ಕೊಟ್ಟಿದ್ದು ಸದರಿ ಅಟೋವನ್ನು ಮಲ್ಲುಗೆ ನಡೆಯಿಸಿಕೊಂಡು ಬರಲು
ಕೊಟ್ಟಿದ್ದು ಇರುತ್ತದೆ. ಈಗ ಸುಮಾರು ಒಂದು
ತಿಂಗಳ ಹಿಂದೆ ಚಂದ್ರು ಇತನು ಮಲ್ಲು ಇತನು ನಡೆಸುತ್ತಿದ್ದ ಅಟೊವನ್ನು ಮಾರಾಟ ಮಾಡಿದ್ದು, ಅದಕ್ಕೆ ಮಲ್ಲು ನನಗೆ ನಡೆಸಲು
ಬೇರೆ ಅಟೊ ಕೊಡಿಸು ಅಂತ ಚಂದ್ರು ಕೊತಲಿ ಇತನಿಗೆ
ಪದೇ ಪದೇ ಕೇಳುತ್ತ ಬಂದಿದ್ದು, ಅದಕ್ಕೆ ಚಂದ್ರು ಕೋತಲಿ ಇತನು ಸದ್ಯ ನನ್ನ ಹತ್ತಿರ ಹಣ ಇರುವದಿಲ್ಲ ನಂತರ ಕೊಡಿಸುತ್ತೇನೆ
ಅಂತ ಹೇಳುತ್ತ ಬಂದಿದ್ದು ಮಲ್ಲು ಮತ್ತು ಚಂದ್ರು ಕೊತಲಿ ಇದೆ ವಿಷಯವಾಗಿ ಜಗಳ ಮಾಡಿಕೊಂಡಿದ್ದು ದಿನಾಂಕ
07.04.2015 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ಮತ್ತು ಮಲ್ಲು ಕೂಡಿಕೊಂಡು ರಿಂಗರೋಡ ಹತ್ತಿರ ಇರುವ ಬಾಲಾಜಿ ಹೊಟೇಲ
ಹತ್ತಿರ ಇದ್ದಾಗ ಸೈಬಣ್ಣ ಸಗರ ಇತನು ಮಲ್ಲು ಇತನಿಗೆ ಪೋನ ಮಾಡಿ ನಿನ್ನ ಅಟೊದ ವ್ಯವಹಾರ
ಮುಗಿಸಿಕೊಡುತ್ತೇವೆ ನೀನು ದುಬೈ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ಬಾ ಅಂತ ಹೇಳಿದ್ದು ಅದರಂತೆ
ನಾನು ಮತ್ತು ಮಲ್ಲು ಕೂಡಿಕೊಂಡು ದುಬೈ ಕಾಲೋನಿಯ ಸರಕಾರಿ ಶಾಲೆಯ ಹತ್ತಿರ ರಾತ್ರಿ 9.30
ಪಿ.ಎಂಕ್ಕೆ ಬಂದಿದ್ದು ಅಲ್ಲಿ ವಿರೇಶ ಸಲಾರೆ, ಸೈಬಣ್ಣ ಸಗರ, ಅಂಬರೇಶ ಕೋಳಕುರ, ಚಂದ್ರುಕೊತಲಿ, ರಮೇಶ ಕೊತಲಿ, ಉಮೇಶ ಕೊತಲಿ ಇವರು ನಿಂತಿದ್ದು
ಆಗ ಚಂದ್ರುಕೊತಲಿ ಇತನು ಮಲ್ಲು ಇತನಿಗೆ ನನಗೆ ಪದೇ ಪದೇ ಅಟೊ ಕೊಡಿಸು ಅಂತ ಗುಂಡಾಗಿರಿ ಮಾಡುತ್ತಿ
ಸೂಳಿ ಮಗನೆ ನಿನಗೆ ಖಲಾಸ ಮಾಡಿಸುತ್ತೇನೆ ಅಂತ ಬೈಯ್ಯುತ್ತಿದ್ದು ಆಗ ವಿರೇಶ ಇತನು ತನ್ನ ಹತ್ತಿರ
ಇದ್ದ ಜಂಬ್ಯಾ ತೆಗೆದುಕೊಂಡು ಮಲ್ಲುನ ಎದೆಯ ಮೇಲೆ, ಬಲಪಕ್ಕೆಗೆ, ಎಡಪಕ್ಕೆಗೆ ಜೋರಾಗಿ ಹೊಡೆದು ಭಾರಿರಕ್ತಗಾಯ ಪಡಿಸಿದ್ದು, ಆಗ ಮಲ್ಲು ಇತನು ಚಿರಾಡುತ್ತ
ನೆಲದ ಮೇಲೆ ಬಿದ್ದಿದ್ದು ಅಂಬು ಇತನು ಕಾಲಿನಿಂದ ಮಲ್ಲುನ ಬೆನ್ನಿನ ಮೇಲೆ ಒದ್ದಿದ್ದು ಸದರಿಯವರು
ಮಲ್ಲುಗೆ ಹೊಡೆಯುತ್ತಿರುವುದನ್ನು ನೋಡಿ ನಾನು ಅಲ್ಲಿಂದ ಓಡಿ ಬರುತ್ತಿದ್ದು ಅದೇ ವೇಳೆಗೆ ಮಲ್ಲು
ಇತನು ಎದ್ದು ನನ್ನ ಹಿಂದೆ ಸ್ವಲ್ಪ ಓಡಿಬಂದು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ನಾನು ಓಡುತ್ತ
ಹೋಗಿ ಮಲ್ಲುನ ಮನೆಗೆ ಹೋಗಿ ಅವಳ ಹೆಂಡತಿಗೆ ವಿಷಯ ತಿಳಿಸಿದ್ದು ನಂತರ ನಾನು ಮಲ್ಲುನ ಹೆಂಡತಿ
ಭಾಗ್ಯಶ್ರೀ ಮತ್ತು ಮಲ್ಲು ಇತನ ಅಣ್ಣಂದಿರು ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು ಮಲ್ಲುಗೆ
ಹೊಡೆದವರು ಅಲ್ಲಿಂದ ಹೋಗಿದ್ದು ನಂತರ ನಾವೆಲ್ಲರು ಕೂಡಿಕೊಂಡು ಮಲ್ಲು ಇತನಿಗೆ ಉಪಚಾರ ಕುರಿತು
ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿ ಸದರಿ ಮಲ್ಲು ಇತನು ಮೃತ ಪಟ್ಟಿದ್ದಾನೆ ಅಂತ
ತಿಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪಾ ತಂದೆ ಶಂಕರ ಜಮಾದಾರ ಸಾ|| ಬಳೂಂಡಿ ರವರ ಅಣ್ಣ
ಸಂತೋಷನು ನಮ್ಮೂರಿನ ಯಲ್ಲಪ್ಪಾ ತಂದೆ ಪುಂಡಲಿಕ ವಾಲೀಕಾರ ಎಂಬಾತನ ಹೆಂಡತಿಯೊಂದಿಗೆ ಅನೈತಿಕ
ಸಂಬಂಧ ಹೊಂದಿದ್ದಾನೆ ಅಂತಾ ದ್ವೇಶ ಹೊಂದಿ ಕಳೆದ ವರ್ಷ ಸೆಪ್ಟಂಬರ ತಿಂಗಳಲ್ಲಿ ನಮ್ಮ ಅಣ್ಣ ಸಂತೋಷ
ಇವನ ಕೊಲೆಯನ್ನು ನಮ್ಮೂರ ಹತ್ತಿರದ ಅಫಜಲಪೂರ ರೋಡಿನ ಮೇಲೆ ಆಗಿರುತ್ತದೆ. ನನ್ನ ಅಣ್ಣ ಸಂತೋಷನ
ಕೊಲೆಯನ್ನು ನಮ್ಮೂರಿನ ಯಲ್ಲಪ್ಪಾ ತಂದೆ ಪುಂಡಲಿಕ ವಾಲೀಕಾರ, ಲಕ್ಷ್ಮೀಪುತ್ರ ತಂದೆ ಸುಭಾಶ ಕಟ್ಟಿಮನಿ, ಗಜಾನಂದ @ ಗಜಪ್ಪಾ ತಂದೆ ಯಮನಪ್ಪಾ
ಮಂಗಳೂರ, ಸಂಗಪ್ಪಾ ತಂದೆ ಭಾಗಪ್ಪಾ ಕಟ್ಟಿಮನಿ ರವರೆಲ್ಲರು ಸೇರಿಕೊಂಡು ಕೊಲೆ ಮಾಡಿರುತ್ತಾರೆ.
ಪೊಲೀಸನವರು ನಮ್ಮ ಅಣ್ಣ ಸಂತೋಷನನ್ನು ಕೊಲೆ ಮಾಡಿದ 4 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಸದ್ಯ ಅವರಲ್ಲಿ
ಲಕ್ಷ್ಮೀಪುತ್ರ ಮತ್ತು ಯಲ್ಲಪ್ಪಾ ಜಮಾದಾರ ಇವರು ಜೈಲಿನಲ್ಲಿ ಇರುತ್ತಾರೆ. ಕಳೆದ 2-3
ತಿಂಗಳುಗಳಿಂದ, ನಮ್ಮ ಅಣ್ಣ ಲಕ್ಷ್ಮಣನು ಊರಲ್ಲಿ ಕಳೆದ ವರ್ಷ ನಮ್ಮ ತಮ್ಮ ಸಂತೋಷನ ಕೊಲೆಯನ್ನು ನಮ್ಮ
ದೊಡ್ಡಪ್ಪನಾದ ಶ್ರೀಪತಿಯ ಮಗ ಶರಣಬಸಪ್ಪನೆ ಮಾಡಿಸಿದ್ದಾನೆ, ಆ ಮಗನಿಗೆ ನಾವು ನಮ್ಮ ತಮ್ಮನ ಕೊಲೆ ಮಾಡಿದ ಹಾಗೆ
ಹೊಡೆದು ಸಾಯಿಸುತ್ತೇವೆ ಅಂತಾ ಅಂದಾಡುತ್ತಾ ತಿರುಗಾಡುತ್ತಿದ್ದ. ಈ ವಿಷಯದಲ್ಲಿ ಶರಣಬಸಪ್ಪನು
ನನ್ನ ಅಣ್ಣ ಲಕ್ಷ್ಮಣನ ಮೇಲೆ ವೈರತ್ವ ಬೆಳೆಸಿಕೊಂಡು ಊರಿಗೆ ಬರದೆ ಬೇರೆ ಯಾವ ಊರಲ್ಲಿಯೋ ಇದ್ದುಕೊಂಡು
ನಮ್ಮ ಅಣ್ಣ ಲಕ್ಷ್ಮಣನ ಚಲನ ವಲನ ಗಮನಿಸುತ್ತಾ ನಾವು ಊರಲ್ಲಿ ಮನೆ ಕಟ್ಟಿಸುವ ಕೆಲಸ
ಮಾಡಿಸುತ್ತಿದ್ದುದ್ದರಿಂದ ಪರಸಿ ಕಲ್ಲುಗಳು ತೆಗೆದಕೊಂಡು ಹೋಗಲು ಇಂದು ದಿನಾಂಕ 07-04-2015
ರಂದು ಮದ್ಯಾಹ್ನ 3;30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಸೋದರ ಮಾವನ ಮಗ ಪರಶುರಾಮ ತಂದೆ ಜಗನ್ನಾಥ ಜಮಾದಾರ
ಇಬ್ಬರು ನಮ್ಮ ಮೋಟರ ಸೈಕಲ್ ನಂ ಕೆ.ಎ-32/ಡಬ್ಲೂ-4126 ನೇದ್ದರ ಮೇಲೆ ಮುಂದೆ ಬಂದು
ಅಫಜಲಪೂರದಲ್ಲಿ ರಾಜಧಾನಿ ಧಾಬಾದ ಹತ್ತಿರ ಇರುವ ಪರಸಿ ಅಡ್ಡಾದ ಹತ್ತಿರ ನಿಂತುಕೊಂಡೆವು. ನಮ್ಮ
ಹಿಂದಿನಿಂದಲೆ ನಮ್ಮ ಅಣ್ಣ ಲಕ್ಷ್ಮಣ ಇವನು ನಮ್ಮೂರಿನ ಒಂದು ಟ್ರ್ಯಾಕ್ಟರನ್ನು ಬಾಡಿಗೆಗೆ
ತೆಗೆದುಕೊಂಡು ಪರಸಿ ಅಡ್ಡಾಕ್ಕೆ ಬಂದಿರುತ್ತಾನೆ. ನಂತರ ಟ್ರ್ಯಾಕ್ಟರದಲ್ಲಿ ಪರಸಿ ಕಲ್ಲುಗಳು
ಹಾಕಿಸಿದೆವು, ಅಷ್ಟೊತ್ತಿಗೆ ನಮ್ಮೂರಿನ ಶರಣಪ್ಪಾ ತಂದೆ ಖಾಜಪ್ಪಾ ಹೊಸಮನಿ ಎಂಬಾತನು ತನ್ನ ಮೋಟರ ಸೈಕಲ್ ತೆಗೆದುಕೊಂಡು ನಮ್ಮೂರಿಗೆ
ಹೊರಟಿದ್ದನು, ಆಗ ನಾನು ಮತ್ತು ಪರಶುರಾಮ ನಮ್ಮ ಮೋಟರ ಸೈಕಲ ಮೇಲೆ ಮುಂದೆ ಹೊರಟಿದ್ದು, ನಮ್ಮ ಅಣ್ಣ ಲಕ್ಷ್ಮಣನು
ನಮ್ಮೂರಿನ ಶರಣಪ್ಪನ ಮೋಟರ ಸೈಕಲ್ ಮೇಲೆ ಹಿಂದೆ ಕುಳಿತು ಬರುತ್ತಿದ್ದನು. ಪರಸಿ ಕಲ್ಲು ತುಂಬಿದ
ಟ್ರ್ಯಾಕ್ಟರ್ ಇನ್ನು ಹಿಂದೆ ಇತ್ತು. ಅಫಜಲಪೂರದ ಎ ವನ್ ಧಾಬಾ ದಾಟಿದ ನಂತರ ಬ್ರಿಡ್ಜ ಕೆಲಸ ನಡೆದ
ಜಾಗದ ಹತ್ತಿರ ರೋಡಿನ ಮೇಲಿಂದ ನಮ್ಮೂರಿಗೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಂದು ಕಪ್ಪು ಬಣ್ಣದ ಟವೇರಾ ವಾಹನ ಅತೀವೇಗವಾಗಿ
ಬಂದು ನಮ್ಮ ಮೋಟರ ಸೈಕಲ್ ದಾಟಿ ಹೋದ ನಂತರ ನಮ್ಮ ಹಿಂದೆ ಬರುತ್ತಿದ್ದ ಶರಣಪ್ಪನ ಮೋಟರ ಸೈಕಲಗೆ
ಡಿಕ್ಕಿ ಹೊಡೆಯಿತು. ಆಗ ನಮ್ಮ ಅಣ್ಣ ಲಕ್ಷ್ಮಣನು ಟವೇರಾ ವಾಹನದಲ್ಲಿ ಇದ್ದ ಶರಣಬಸಪ್ಪಾ ಜಮಾದಾರ
ಈತನಿಗೆ ನೋಡಿದ ಕೂಡಲೆ ಸದರಿಯವನು ನನ್ನ ಕೊಲೆ ಮಾಡುವ ಸಲುವಾಗಿ ಬಂದಿದ್ದಾನೆ ಅಂತಾ ಖಾತರಿ
ಪಡಿಸಿಕೊಂಡು ಓಡಿ ಬಂದು ನನ್ನ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ನನಗೆ ಮೋಟರ ಸೈಕಲ್ ವೇಗವಾಗಿ
ಓಡಿಸಿಕೊಂಡು ಸೊನ್ನ ಗ್ರಾಮದ ಕಡೆಗೆ ನಡೆ ಅಂತಾ ಹೇಳಿದ್ದರಿಂದ ನಾನು ನನ್ನ ಸೈಕಲ್ ಮೋಟರನ್ನು
ಓಡಿಸಿಕೊಂಡು ಸೊನ್ನ ಕ್ರಾಸ ದಾಟಿ ಸ್ವಲ್ಪ ಮುಂದೆ ಹೋದ ನಂತರ ಸದರಿ ಟವೇರಾ ವಾಹನವನ್ನು
ತಿರುಗಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಜೋರಾಗಿ ಹಿಂದಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು
ಪ್ರಯತ್ನಿಸಿರುತ್ತಾರೆ, ಆಗ ನಾವು ಮೂರು ಜನರು ರೋಡಿನ ಪಕ್ಕದಲ್ಲಿ ಹೋಗಿ ಸೈಕಲ್ ಮೋಟರ ಸಮೇತ ಬಿದ್ದೇವು. ಆಗ ನನ್ನ
ಅಣ್ಣ ಲಕ್ಷ್ಮಣ ಎದ್ದು ಓಡಿ ಹೋಗುತ್ತಿದ್ದಾಗ
ಶರಣಬಸಪ್ಪನು ಬಿಡಬ್ಯಾಡರಿ ಮಗನಿಗೆ ಓಡಿ ಹೋಗುತ್ತಾನೆ ಅಂತಾ ಅಂದಾಗ ಟವೇರಾ
ವಾಹನದಲ್ಲಿದ್ದವರೆಲ್ಲರು 1] ಬಾಬು ತಂದೆ ಶಾಮರಾವ ಜಮಾದಾರ, 2] ಶ್ರೀಶೈಲ ತಂದೆ ಬೀಮರಾಯ ಜಮಾದಾರ, 3] ಮಡೆಪ್ಪಾ ತಂದೆ ಭೀಮರಾಯ ಜಮಾದಾರ, 4] ಕುಮ್ಯಾ@ರಾಜಕುಮಾರ ತಂದೆ ಶಾಮರಾಯ ಜಮಾದಾರ, 5] ಸಂಜು ತಂದೆ ವಿಠ್ಠಲ
ಜಮಾದಾರ, 6] ಹೊನ್ನಪ್ಪಾ ತಂದೆ ತುಕಾರಾಮ ಜಮಾದಾರ ದುದ್ದಣಗಿ ಹಾಗು ಇನ್ನಿತರರು ನಮ್ಮ ಅಣ್ಣನ್ನು
ಸುತ್ತುವರೆದು ಹಿಡಿದುಕೊಂಡಾಗ ಶರಣಬಸಪ್ಪಾ ತಂದೆ ಶ್ರೀಪತಿ ಜಮಾದಾರ ಈತನು ತಲೆಗೆ ಪಿಸ್ತೂಲಿನಿಂದ
ಗುಂಡು ಹಾರಿಸಿ ಕೊಲೆ ಮಾಡಿ ತಾವು ತಂದಿರುವ ಕಪ್ಪು ಬಣ್ಣದ ಟವೇರಾ ವಾಹನದಲ್ಲಿಯೆ ಎಲ್ಲರು
ಕೂಳಿತುಕೊಂಡು ವಾಹನ ಸಮೇತ ಓಡಿ ಹೋಗಿರುತ್ತಾರೆ. ಸದರಿ ಘಟನೆಯಲ್ಲಿ ನನಗೆ ಬಲಗಣ್ಣಿನ ಹುಬ್ಬಿಗೆ, ಬಲಗೈ ಹಸ್ತಕ್ಕೆ, ಬಲ ಮೊಳಕಾಲಿಗೆ
ಪೆಟ್ಟಾಗಿರುತ್ತದೆ. ಪರಶುರಾಮನಿಗೆ ಬಲಗಣ್ಣಿನ ಕೆಳಗೆ ತರಚಿದ ರಕ್ತಗಾಯ ಮತ್ತು ಹಣೆಯ ಮೇಲೆ
ಒಳಪೆಟ್ಟಾಗಿ ಬೆನ್ನಿಗು ಹಾಗು ಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ
ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 07-04-2015 ರಂದು ಸಾಯಂಕಾಲ ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯಲ್ಲಿಯ ಅಂಡರ್ ಬ್ರಿಜ್ ಹತ್ತಿರ ರಸ್ತೆಯ
ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ.
ಸ್ಟೇಷನ ಬಜಾರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಂಡರ್ ಬ್ರಿಜ್ ಹತ್ತಿರ ರಸ್ತೆಯ ಪಕ್ಕದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಹೋಗಿ ಬರುವ
ಸಾರ್ವಜನಿಕರಿಂದ 1 ರೂ ಗೆ 80/- ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು
ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸುತ್ತುವರೆದು ಹಿಡಿದು ಹೆಸರು ವಗೈರೆ ವಿಚಾರಿಸಲು ಆತನು ತನ್ನ ಹೆಸರು ಸಿದ್ದಣ್ಣ ತಂದೆ
ಮಲ್ಲಪ್ಪಾ ಹೊನ್ನುರ ಸಾ:ಪಂಚಶೀಲ ನಗರ ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ಜೂಜಾಟಕ್ಕೆ ಬಳಸಿದ ನಗದು ಹಣ 6530/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಅಮಕಿ ಸಂಖ್ಯೆ ಬರೆದ ಚೀಟಿ ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡು ಸದರಿಯವನೊಂದಿಗೆ ಸ್ಠಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡ ಕೊಲೆ ಮಾಡಲು
ಪ್ರಯತ್ನಿಸಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸರೂಬಾಯಿ ಗಂಡ ಅಪ್ಪಾರಾವ ಇವರ ಮಗಳಾದ ಭಾಗ್ಯಶ್ರೀ ಇವಳಿಗೆ
ಆಳಂದ ತಾಲೂಕಿನ ಹೊನ್ನಳ್ಳಿ ಗ್ರಾಮದ ಬಸವರಾಜ ಎಂಬುವನ ಮಗನಾದ ಉದಯ ಕುಮಾರ ಇವನಿಗೆ ಕೊಟ್ಟು ಈಗ
ಅಂದಾಜು 2 ವರ್ಷಗಳ ಹಿಂದೆ ಮದುವೆ ಮಾಡಿದ್ದು, ಮದುವೆಯಲ್ಲಿ ಬಂಗಾರ, ಹಣ ಕೊಟ್ಟು ಅದ್ದೂರಿಯಾಗಿ
ಮದುವೆ ಮಾಡಿದ್ದು, ಮದುವೆಯಾದ ಒಂದು ವರ್ಷದವರೆಗೆ ನನ್ನ ಮಗಳಿಗೆ ಆಕೆಯ ಗಂಡ, ಅತ್ತೆ, ಮಾವ,
ಮೈದುನ ಇವರು ಸರಿಯಾಗಿ ನೋಡಿಕೊಂಡು ನಂತರ ನಿಮ್ಮ ಅಪ್ಪ ಪೊಲೀಸ ವೃತ್ತಿಯಲ್ಲಿದ್ದಾನೆ ಇನ್ನೂ 10
ಲಕ್ಷ ರೂಪಾಯಿ ವರದಕ್ಷಣೆ ತರಬೇಕು ಅಂತಾ ಮಾನಸಿಕ ,ದೈಹಿಕ ತೊಂದರೆ ಕೊಡುತ್ತಾ ಬಂದಿದ್ದು, ಇದರ ಬಗ್ಗೆ ನಾನು ನನ್ನ ಗಂಡ ಅವರಿಗೆ ತಿಳಿ ಹೇಳುತ್ತಾ
ಬಂದಿದ್ದು, ಇರುತ್ತದೆ. ದಿನಾಂಕ 06-4-2015 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ಮಗಳಾದ
ಭಾಗ್ಯಶ್ರೀ ಇವಳು ನಮ್ಮ ಮನೆಗೆ ಬಂದು ಹೇಳಿದ್ದೇನೆಂದರೆ, ಗಂಡ ,ಅತ್ತೆ , ಮಾವ, ಮೈದುನ
ಇವರೆಲ್ಲರೂ ಕೂಡಿಕೊಂಡು ನಿಮ್ಮ ಅಪ್ಪ ಇಲಾಖೆಯಿಂದ ನಿವೃತ್ತಿ ಹೊಂದುತ್ತಿದ್ದಾನೆ ಸರಕಾರದಿಂದ ಹಣ
ಬರುತ್ತದೆ ಇನ್ನೂ 10 ಲಕ್ಷ ರೂಪಾಯಿ ವರದಕ್ಷಣೆ ರೂಪದಲ್ಲಿ ಹಣ ತರಬೇಕು ಅಂತಾ ಕಿರಿಕಿರಿ
ಮಾಡುತ್ತಿದ್ದು, ಹಣ ತರದೇ ಇದ್ದರೆ ನಿನಗೆ ಹಗ್ಗದಿಂದ ಉರುಲು ಹಾಕಿ ಕೊಲೆ ಮಾಡುತ್ತೇವೆ ಅಂತಾ
ತೊಂದರೆ ಕೊಡುತ್ತಿದ್ದಾರೆ ನೀವು ಬಂದು ಸಮಜಾಯಿಸಿ ಹೋಗಿರಿ ಅಂತಾ ಹೇಳಿದಾಗ ನಾನು ನನ್ನ ಗಂಡ ಇಬ್ಬರೂ
ಕೂಡಿಕೊಂಡು ಹೋಗಿ ಮಗಳ ಗಂಡ ಹಾಗೂ ಗಂಡನ
ಮನೆಯವರಿಗೆ ಬುದ್ದಿವಾದ ಹೇಳಿ ಬಂದಿದ್ದು ಇರುತ್ತದೆ. ದಿನಾಂಕ 07-04-2015 ರಂದು ಬೆಳಿಗ್ಗೆ ನನ್ನ
ಮಗಳ ಗಂಡನಾದ ಉದಯಕುಮಾರ ಇವರು ಮೊಬಾಯಿಲ್ ದಿಂದ ಕರೆ ಮಾಡಿ ನಿಮ್ಮ ಮಗಳು ಉರುಲು
ಹಾಕಿಕೊಂಡಿದ್ದಾಳೆ ಅರ್ಜಂಟ್ ಬರ್ರಿ ಅಂತಾ ಹೇಳಿದಾಗ ನಾನು ನನ್ನ ಗಂಡ ,ಓಣಿಯ ಜನರು ಹೋಗಿ
ನೋಡಲಾಗಿ ನನ್ನ ಮಗಳಿಗೆ ಅಂಗಾತ ಮಲಗಿಸಿ ಗಂಡ, ಅತ್ತೆ, ಮಾವ, ಮೈದುನ ಕೂಡಿಕೊಂಡು ಬಾಯಿಗೆ ನೀರು
ಹಾಕುತ್ತಿದ್ದರೂ ನಾವು ನೋಡಲಾಗಿ ಬೇಹೂಷ ಇದ್ದಳು. ನಾವು ಆಗ ನಮ್ಮ ಮಗಳಿಗೆ ಒಂದು ಆಟೋದಲ್ಲಿ
ಹಾಕಿಕೊಂಡು ಕಲಬುರಗಿಯ ಸತ್ಯ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಸಧ್ಯ ನನ್ನ ಮಗಳು
ಕೋಮಾ ದಲ್ಲಿರುತ್ತಾಳೆ. ನನ್ನ ಮಗಳಾದ ಭಾಗ್ಯಶ್ರೀ ಇವಳಿಗೆ ಗಂಡ, ಅತ್ತೆ ,ಮಾವ ,ಮೈದುನ ಇವರು
ಕೂಡಿಕೊಂಡು ವರದಕ್ಷಣೆ ರೂಪದಲ್ಲಿ 10, ಲಕ್ಷ ರೂಪಾಯಿ ತರಬೇಕು ಅಂತಾ ಮಾನಸಿಕ, ದೈಹಿಕ ಕಿರುಕುಳ
ನೀಡಿ ಹಗ್ಗದಿಂದ ಕೊರಳಿಗೆ ಉರುಲು ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ
:
ಸೇಡಂ ಠಾಣೆ : ಶ್ರೀ ಚಂದಪ್ಪ ತಂದೆ ಸಿದ್ರಾಮಪ್ಪ ಸಾ:ಹಂದರಕಿ
ಗ್ರಾಮ ಇವರ ಅಕ್ಕಳಾದ ಕಾಂತಮ್ಮ ಅವಳ ಮೊಮ್ಮಗ ಸಂಜುಗೆ ಆಸ್ಪತ್ರೆಗೆ ತೋರಿಸಲು ಮಗ ಲೋಕೇಶನೊಂದಿಗೆ
ಕೂಡಿ ಸೇಡಂಕ್ಕೆ ಮೊ.ಸೈ ನಂ-KA32-EC-7453 ನೇದ್ದರ ಮೇಲೆ ಹೋಗಿದ್ದು, ನಂತರ ಲೋಕೇಶ ನನಗೆ ಫೋನ
ಮಾಡಿ ತಿಳೀಸಿದ್ದೆನೆಂದರೆ, ಮೋಟಾರು ಸೈಕಲ್ ಮೇಲೆ ಸೇಡಂ-ಹಂದರಕಿ ರೋಡಿನ ಮೇಲೆ ಹೋಗುವಾಗ ಈರಮ್ಮ ಗುಡಿ ಹತ್ತಿರ ಮೊಟಾರು
ಸೈಕಲ್ ಸ್ಕಿಡ್ ಆಗಿ ಬಿದ್ದು ತಾಯಿಯ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು
ನನ್ನ ಮಗ ಸಂಜುಗೂ ಸಹಾ ಪೆಟ್ಟುಗಳಾಗಿದ್ದ ಬಗ್ಗೆ ತಿಳಿಸಿದ್ದರಿಂದ, ನಾನು ತಕ್ಷಣ ಅಪಘಾತವಾದ
ಸ್ಥಳಕ್ಕೆ ಹೋಗಿ ನೋಡಲಾಗಿ ಸದರ ಘಟನೆ ಜರುಗಿದ್ದು ನಿಜವಿತ್ತು. ನಾನು ಸದರಿಯವರಿಗೆ ಖಾಸಗಿ
ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಕಾರಣ ಅಪಘಾತಪಡಿಸಿದ ಲೋಕೇಶ ಇತನ
ಮೆಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment