POLICE BHAVAN KALABURAGI

POLICE BHAVAN KALABURAGI

01 February 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ವಿಜಯಕುಮಾರ ತಂದೆ ದೇವಿಂದ್ರಪ್ಪ  ಸಾ : ಸಂಜಿವ ನಗರ ನೇಹರು ಗಂಜ್ ಕಲಬುರಗಿ ರವರು  ದಿನಾಂಕ 31.01.2015 ರಂದು ದಿನಾಂಕ 31.01.2015 ರಂದು ಬೆಳಗ್ಗೆ ರವರು ಮತ್ತು ರಾಜಕುಮಾರ, ಬಸವಂತಪ್ಪ ಎಲ್ಲರು ಕೂಡಿಕೊಂಡು ಸಾತಲಿಂಗಪ್ಪ ಈತನು ನಡೆಸುವ ಮಿನಿ ಲಾರಿ ನಂ ಕೆ.ಎ32ಬಿ1879 ನೇದ್ದರಲ್ಲಿ ಕುಳಿತುಕೊಂಡು ನಂದ್ಯಾಳ ಗ್ರಾಮದಿಂದ ಕಲಬುರಗಿಗೆ ಜೇವರ್ಗಿ ಮುಖಾಂತರ ಹೋಗುತ್ತಿದ್ದಾಗ ಜೇವರ್ಗಿ ಬಸ್ ಡಿಪೊ ದಾಟಿ ರೋಡಿನಲ್ಲಿ ಚಾಲಕನು ತನ್ನ ಮಿನಿ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ರೋಡಿನಲ್ಲಿ ಕಟ್ ಹೋಡೆದು ರೋಡಿನ ಎಡ ಸೈಡಿನಲ್ಲಿ ಪಲ್ಟಿ ಮಾಡಿದ್ದರಿಂದ ನಮಗೆ ಭಾರಿ ಮತ್ತು ಸಾದಾ ಗಾಯಗಳು ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಳಖೇಡ ಠಾಣೆ : ಶ್ರೀ ಶೇಖ ಮೊಹಿದುರ ತಂದೆ ಶೇಖ ಮಿಟ್ಟು ಸಾ:ಚಾಂದಪಾರಾ ಗ್ರಾಮ ಪೋಸ್ಟ:ವಿಕಬನ್ನಾ ಜಿ:ಮಲಮಾಲ್ದಾ ವೆಸ್ಟಬೆಂಗಾಲ ರಾಜ್ಯ ಹಾ.ವ:ಓರಿಯಂಟ ಫ್ಯಾಕ್ಟರಿ ಕ್ಯಾಂಪಸ್ ಚಿತ್ತಾಪುರ ನಾವು ಓರಿಯಂಟ ಫ್ಯಾಕ್ಟರಿಗೆ ಕರೆಂಟ ಪೂರೈಕೆ ಕುರಿತು ಕೆ.ವಿ.ಎಲೆಕ್ಟ್ರಿಕಲ ಖಾಸಗಿ ಕಾಂಟ್ರಾಕಟರ ಒಂದರಲ್ಲಿ 4 ತಿಂಗಳಿಂದ ಕೆಲಸ ಮಾಡಿಕೊಂಡು ಓರಿಯಂಟ ಕಂಪನಿಯಲ್ಲಿಯೇ ಶೆಡ್ ಹಾಕಿಕೊಂಡು ಇರುತ್ತೇವೆ. ನಮ್ಮ ಗ್ಯಾಂಗನಲ್ಲಿ ವಡಿವೇಲ್ ಅಂತಾ ಸುಪರವೈಸರ ಇದ್ದು ಅವರ ಕೈಕೆಳಗೆ 1) ನಾನು ಅಲ್ಲದೇ 2) ಸೀಲು 3) ಶೇಕ್ ಬೈಸಿರುಲ್ 4) ನಸೀಮ 5) ಸನಾವುಲ್ 6) ಶೇಖ ಜುಲು 7)ಸಿರಾಜುಲ್ 8) ಕಾಲು 9) ಬಾರಿಕ್ 10) ಸಾರಿಕ 11) ಅತೀಫುಲ್ 12) ಸಾರಜನ್ 13) ತಾಜುಲ್ 14) ಅಸರುಲ್ 15) ಬಿಲಾಲ ಎಲ್ಲರೂ ಕೂಡಿಕೊಂಡು ಇಂದು ದಿನಾಂಕ 30-1-2015 ರಂದು ಬೆಳಿಗ್ಗೆ ಸೇಡಂಕ್ಕೆ ಬಂದು ಕೆಪಿಟಿಸಿಎಲ್ ಗ್ರಿಡನಲ್ಲಿ ಮಧ್ಯಾನದವರೆಗೆ ಕೆಲಸ ಮಾಡಿ ನಂತರ ಸಾಯಂಕಾಲ 4-30 ಗಂಟೆ ಸುಮಾರಿಗೆ ಸೇಡಂದಿಂದ ನಮ್ಮ ಕಂಪನಿಯ ಶೆಡ್‌ಗೆ ಹೋಗಲು ನಮ್ಮ ಕೆ.ವಿ.ಎಲೆಕ್ಟ್ರಿಕಲ್ ಹೊಸಪೇಟೆ ರವರ ಪಿಕಪ್ ಗಾಡಿ ನಂಬರ ಕೆಎ-35 ಬಿ-1571 ನೇದ್ದರಲ್ಲಿ ಎಲ್ಲರೂ ಕುಳಿತುಕೊಂಡು ಅಲ್ಲದೇ ನಮ್ಮ ಕೆಲಸದ ಸಾಮಾನುಗಳನ್ನು ಗಾಡಿಯಲ್ಲಿ ಹಾಕಿಕೊಂಡು ಸೇಡಂದಿಂದ ಹೊರಟೆವು. ನಮ್ಮ ಪಿಕಪ್ ಗಾಡಿಯ ಚಾಲಕನು ಈಗ್ಗೆ ಹೊಸದಾಗಿ ಬಂದು ಮೂರು ದಿವಸಗಳಾಗಿದ್ದು ಅವನಿಗೆ ನಮಗೆ ಪರಿಚಯವಿರುವದಿಲ್ಲ. ಅವನ ಹೆಸರು ಕೂಡಾ ಗೊತ್ತಿರುವದಿಲ್ಲ. ಸದರಿ ಚಾಲಕನು ತನ್ನ ಹತೋಟಿಯಲ್ಲಿದ್ದ ಪಿಕಪ ಗಾಡಿಯನ್ನು ಅತೀ ವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಿದ್ದು ಕಂಡು ಸದರಿಯವನಿಗೆ ನಿಧಾನವಾಗಿ ಗಾಡಿ ನಡೆಸಹತ್ತಿದ್ದನು. 5-00 ಪಿ.ಎಮ.ಕ್ಕೆ ಮಳಖೇಡ ಗ್ರಾಮ ದಾಟಿದ ನಂತರ ಮಳಖೇಡ ಚಿತ್ತಾಪುರ ರೋಡಿನ ಮೊದಲನೆ ಬ್ರಿಜ್ ದಾಟಿದ ಬಳಿಕ ಇನ್ನೊಂದು ಬ್ರಿಜ್ ಸಮೀಪ ಒಮ್ಮೆಲೆ ಬಲಗಡೆ ಕಟ್ ಮಾಡಿದಾಗ ನಮ್ಮ ಪಿಕಪ್ ವಾಹನವು ಅತೀ ವೇಗದಲ್ಲಿ ಇರುವದರಿಂದ ಒಮ್ಮೆಲೆ ಎಡಮಗ್ಗಲಾಗಿ ನಮ್ಮ ಜೀಪ ರೋಡಿನಲ್ಲಿ ಬಿದ್ದಾಗ ನಾವೆಲ್ಲರೂ ರೋಡಿ ಮೇಲೆ ಬಿದ್ದಿದ್ದು ನಮ್ಮ ಪಿಕಪ್ ವಾಹನದಲ್ಲಿದ್ದ ಸಾಮಾನುಗಳು ಸಹ ನಮ್ಮಗಳ ಮೇಲೆ ಬಿದ್ದವು. ಅಲ್ಲದೇ ವೈರ ರೋಪ ನಮ್ಮ ಪಿಕಪ್ ಗಾಡಿಯ ಗಾಲಿಗಳಿಗೆ ಸಿಲುಕಿ ವಾಹನ ಚಾಲ್ತಿಯಲ್ಲಿದ್ದುದರಿಂದ ಅದರ ಗಾಲಿಗಳಿಗೆ ಸುತ್ತಿಕೊಂಡಿದ್ದು ಇರುತ್ತದೆ. ಆಗ ನಮ್ಮೆಲ್ಲರಿಗೆ ಸಾದಾ ಹಾಗು ಭಾರಿ ರಕ್ತಗಾಯ ಹಾಗು ಒಳಪೆಟ್ಟುಗಳಾಗಿದ್ದು ನನಗೆ ಬಲಗಾಲ ಮೊಳಕಾಲಿಗೆ ಒಳಪೆಟ್ಟಾಗಿದ್ದು ಬೆನ್ನಿಗೆ ರಕ್ತಗಾಯವಾಗಿದ್ದು ಇರುತ್ತದೆ. ನನ್ನ ತಮ್ಮನಾದ ಸೀಲು ಈತನಿಗೆ ಬಲಮೊಳಕಾಲಿಗೆ ಬಲಗೈ ಮೊಳಕೈಗೆ ತರಚಿದ ರಕ್ತಗಾಯವಾಗಿರುತ್ತದೆ. ಅಲ್ಲದೇ ನಮ್ಮ ಜೊತೆಗೆ ಪಿಕಪ್ ವಾಹನದಲ್ಲಿದ್ದ ಶೇಖ ಬೈಸಿರುಲ್ ತಂದೆ ಶೇಖ ನಬೀರುದ್ದಿನ ಈತನ ಮೇಲೆ ನಮ್ಮ ವಾಹನದಲ್ಲಿ ಕಬ್ಬಿಣದ ಭಾರಿ ಸಾಮಾನುಗಳು ಬಿದ್ದು ತಲೆಗೆ ಭಾರಿ ರಕ್ತಗಾಯ ಮತ್ತು ಮೈಯಲ್ಲಿ ಭಾರಿ ಗುಪ್ತ ಪೆಟ್ಟು ಹಾಗು ಎಡಗಾಲು ತೊಡೆಯ ಮೂಳೆ ಮುರಿದಂತೆ ಕಾಣುತ್ತಿದ್ದು ಆಗ ಎಲ್ಲರಿಗೆ ಒಂದು 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ಹೋಗುತ್ತಿರುವಾಗ ಮಳಖೇಡ ಹತ್ತಿರ ಶೇಖ ಬಶೀರುಲ್ ಈತನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸತೀಶ ತಂದೆ ಮಾಣಿಕಪ್ಪಾ ಕೊಳ್ಳಿ, ಸಾಃ ಹಪ್ತ ಗುಂಬಜ ದರ್ಗಾ ರೋಡ ಕಲಬುರಗಿ, ರವರು ದಿನಾಂಕ 30-01-2015 ರಂದು ಬಸವೇಶ್ವರ ಕಾಲೂನಿ 4 ನೇ ಕ್ರಾಸ ಹತ್ತಿರ ಬೇಕರಿ ಎದರುಗಡೆ ರೋಡಿನ ಪಕ್ಕದಲ್ಲಿ ತನ್ನ 5 ವರ್ಷದ ಮಗಳಾದ ದಿವ್ಯಾ ಇವಳೊಂದಿಗೆ ನಿಂತಾಗ ಒಂದು ಬಿಳಿ ಕಾರ ನಂ. ಕೆ.ಎ 23 ಎಮ್. 6742 ನೇದ್ದರ ಚಾಲಕ ತನ್ನ ಕಾರನ್ನು ಭಾಕರ ಫಂಕ್ಷನ್ ಹಾಲ ರಿಂಗ ರೋಡ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗಳಾದ ದಿವ್ಯಾ ವಃ 5 ವರ್ಷ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿ ಮಗಳಿಗೆ ತಲೆಗೆ ಪೆಟ್ಟಾಗಿ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಹ್ಮದಗೌಸ ತಂದೆ ಮಹ್ಮದ ಮೈನೋದ್ದೀನ ಸಾ: ಬಹಾದ್ದೂರಪೂರಾ ಜುಪಾರಾ ಹೈದ್ರಾಬಾದ ತೆಲಂಗಾಣ ರಾಜ್ಯ   ರವರು ದಿನಾಂಕ 30-01-2015 ರಂದು ರಾತ್ರಿ ಕಲಬುರಗಿ ರೇಲ್ವೆ ಸ್ಟೇಶನದಿಂದ ಅಟೋರಿಕ್ಷಾ ನಂಬರ ಕೆಎ-32 ಎ-9016 ನೇದ್ದರಲ್ಲಿ ನಾನು ಮತ್ತು ನಮ್ಮ ಓಣಿಯ ಮಹ್ಮದ ಅಯುಬ ಹಾಗು ಅವರ ಹೆಂಡತಿಯಾದ ಪರೀವನಿನ ಬೇಗಂ ಮತ್ತು ಅವರ ಮಗ ರೆಹಾನ ರವರು ಕುಳಿತು  ಶ್ರೀ ಖಾಜಾ ಬಂದೇನವಾಜ ದರ್ಗಾಕ್ಕೆ ಹೋಗುವಾಗ ರೇಲ್ವೆ ಸ್ಟೇಶನ ಎದುರುಗಡೆ ಬರುವ ಸಿಟಿ ಬಸ ನಿಲ್ದಾಣದ ಎದುರಿನ ರೋಡ ಮೇಲೆ ಹಿಂದಿನಿಂದ ಕಾರ ನಂಬರ ಕೆಎ-32 ಎಮ್-5472 ರ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದರಿಂದ ಅಟೋರಿಕ್ಷಾ ವಾಹನವು ಪಲ್ಟಿಯಾಗಿ ಕೆಳಗೆ ಬಿದ್ದಿದರಿಂದ್ದ ನನಗೆ ಎಡಗಾಲು ಹಿಮ್ಮಡಿಗೆ ಭಾರಿರಕ್ತಗಾಯ, ಎಡಗಾಲು ಹೆಬ್ಬರಳಿಗೆ ರಕ್ತಗಾಯ ಹಾಗು ಮಹ್ಮದ ಅಯುಬ ಇವರಿಗೆ ಎಡಗೈ ಹಸ್ತದ ಹಿಂದುಗಡೆ ರಕ್ತಗಾಯಗೊಳಿಸಿ ಕಾರ ಚಾಲಕ ತನ್ನ ಕಾರನ್ನು ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ  ಮರೆಪ್ಪ ತಂದೆ ಸಿದ್ರಾಮ ಜೀರ ಸಾ : ಬೀರಾಳ ಬಿ ತಾ : ಜೇವರ್ಗೀ  ರವರು ದಿನಾಂಕ 27.01.2015 ರಂದು 10:00 ಗಂಟೆಗೆ ನಮ್ಮ ಓಣಿಯ ಅಂಬೇಡ್ಕರ್ ಕಟ್ಟೆಯ ಹತ್ತಿರ ಮರೆಪ್ಪ ತಂದೆ ಭೀಮರಾಯ ಬೊಂಬಾಯಿ ಮತ್ತು ಸಂಗಡ 26 ಜನರು ಗುಂಪು ಕಟ್ಟಿಕೊಂಡು ಬಂದವರೆ ನನಗೆ ಏ ಬೋಸಡಿ ಮಕ್ಕಳೆ ಮಕ್ಕಳೆ ಈ ಜಾಗದಲ್ಲಿ ನಾವು ಯಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡುತ್ತೆವೆ ಯಾರಾದರು ಬಂದರೆ ಒಂದು ಕೈ ನೋಡಯೆ ಬಿಡುತ್ತೆವೆ ಅಂತ ನಮಗೆ ಅವಾಚ್ಯ ಶಬ್ದಗಳಿಂದ ಬೈಯ ಹತ್ತಿದರು ನಾನು ಅವರಿಗೆ ಈ ಜಾಗದಲ್ಲಿ ಬ್ಯಾಡ ಬೇರೆ ಕಡೆಗೆ ಕಟ್ಟಿಕೊಳ್ಳಿರಿ ಅಂತ ಅಂದಾಗ ಮರೆಪ್ಪ ಬೊಂಬಾಯಿ ಈತನು ನನಗೆ ಅಂಗಿ ಹಿಡಿದು ಜಗ್ಗಾಡಿ ಹೊಡೆದಿರುತ್ತಾನೆ. ನನ್ನ ಜೋತೆಯಲ್ಲಿದ್ದವರಿಗು ಹೊಡೆಯಲು ಬಂದಿರುತ್ತಾರೆ. ಅವರೆಲ್ಲರು ಈ ಜಾಗದಲ್ಲಿ ನಾವು ಯಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡುತ್ತೆವೆ ಯಾರಾದರು ಕೇಳಿದೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ²æÃ ಮೀರಾಸಾಬ ತಂದೆ ರಾಜಾಸಾಬ ಬೂದಿಹಾಳ ಸಾ :| ಉಡಚಾಣ ರವರು ದಿನಾಂಕ 27-01-2015 ರಂದು ನಮ್ಮೂರ ನೀಲಪ್ಪ ನಾಯ್ಕೋಡಿ ರವರ ಹೋಟೆಲ ಮುಂದೆ ಹೋಗುತ್ತಿದ್ದಾಗ ನಮ್ಮ ತಮ್ಮ ನಬೀಸಾಬ ಮತ್ತು ಅವನ ಮಕ್ಕಳಾದ ಸೈಯದಸಾಬ, ಖಾನಮಾಬಿ ಗಂಡ ಹುಸೇನಸಾಬ ಜಮಾದಾರ, ಮಮ್ತಾಜಬಿ ಗಂಡ ಶರಿಫೋದ್ದಿನ ಮರತೂರ ಹಾಗು ಸೋಸೆ ರೇಷ್ಮಾ ಗಂಡ ಮಹಿಬೂಬಸಾಬ ಬೂದಿಹಾಳ ರವರೆಲ್ಲರು ಅಕ್ರಮಕೂಟ ರಚಿಸಿಕೊಂಡು ನನ್ನ ಎದುರುಗಡೆ ಬಂದು ನನಗೆ ತಡೆದು ನಿಲ್ಲಿಸಿ ಅವರಲ್ಲಿ ನಬೀಸಾಬ ಇವನು ನನಗೆ ಏನೋ ಸೂಳಿ ಮಗನಾ ನಮ್ಮ ಪಾಲಿಗೆ ಬಂದ 16 ಗುಂಟೆ ಜಮೀನು ನಿನಗೆ ಬಿಟ್ಟು ಕೊಡಬೇಕಾ, ಇವತ್ತ ನಿನಗ ಜೀವ ಸಹಿತ ಬಿಡಲ್ಲಾ ಮಗನಾ ಅಂತಾ ಅಂದು ಕೈ ಯಿಂದ ಕಪಾಳ ಮೇಲೆ ಹೊಡೆದನು.  ಸೈಯದಸಾಬ ಇವನು ತನ್ನ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದನು, ಖಾನಮಾಬಿ ಇವಳು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಲಗಾಲ ಪಿಂಡ್ರಿಯ ಮೇಲೆ ಹೊಡೆದು ತರಚಿದ ರಕ್ತಗಾಯ ಪಡಿಸಿದಳು, ಮಮ್ತಾಜಬಿ ಇವಳು ತನ್ನ ಕೈಯಿಂದ ನನ್ನ ತಲೆಯ ಹಿಂದೆ ಹೊಡೆದು ಗುಪ್ತ ಪೆಟ್ಟು ಪಡಿಸಿದಳು, ರೇಷ್ಮಾ ಇವಳು ಈ ಮುದುಕನ ಸೊಕ್ಕ ಬಹಳ ಇದೆ ಹೊಡೆದು ಖಲಾಸ ಮಾಡರಿ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಶಾಂತಮ್ಮ ಗಂಡ ಸದಾನಂದ ಮುಕುಡಿ, ಸಾ:ಹಂದರಕಿ ಗ್ರಾಮ, ತಾ:ಸೇಡಂ ಇವರು  ನಮ್ಮೂರಿನ ಸದಾನಂದ ಮುಕಡಿ ಇತನೊಂದಿಗೆ  ಪ್ರೀತಿಸಿ 15 ವರ್ಷಗಳ ಹಿಂದೆ ಮೊತಕಪಲ್ಲಿ ಭೀಮಸೇನ ಗುಡಿಯಲ್ಲಿ ಲಗ್ನ ಮಾಡಿಕೊಂಡಿದ್ದು ಇರುತ್ತದೆ.  ಮದುವೆಯಾಗಿ 10 ವರ್ಷಗಳವರೆಗೆ ನಾವಿಬ್ಬರು ಸುಖಸಂಸಾರ ನಡೆಸಿದೇವು, ನಮಗೆ ಇಬ್ಬರು ಮಕ್ಕಳಿರುತ್ತಾರೆ. ಈಗ ನಾಲ್ಕೈದು ವರ್ಷಗಳಿಂದ ನನಗೆ ನನ್ನ ಗಂಡ ಮಾನಸೀಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದು  ದಿನಾಂಕ:19-06-2014 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ನನ್ನ ಗಂಡನಾದ ಸದಾನಂದ ತಂದೆ ತಿಪ್ಪಣ್ಣ ಮುಕುಡಿ ಇವರಿಗೆ ಉಪಚಾರದ ಕುರಿತು ಸೇಡಂ ದವಾಖಾಗೆ ನಾನು ಹಾಗೂ ನನ್ನ ಮೈದುನನಾದ ಅನೀಲ್ ಕುಮಾರ ಇಬ್ಬರೂ ಕೂಡಿಕೊಂಡು ನಮ್ಮೂರ ಡ್ರೈವರ್ ಆಯುಶ ಕಲಾಲ ಇತನ ಜೀಪಿನಲ್ಲಿ ಕರೆದುಕೊಂಡು ಸೇಡಂ ದವಾಖಾನಿಗೆ ಹೊರಟಿದ್ದೇವು ಮಾರ್ಗ ಮಧ್ಯೆದಲ್ಲಿ ಕಲಕಂಬಾ ಗೇಟ್ ಹತ್ತಿರ ನನ್ನ ಗಂಡನು ನನಗೆ ರಂಡಿ ಭೋಸಡಿ ನೀ ಯಾಕ ನನ್ನ ಹಿಂದೆ ಬರುತ್ತಿದ್ದಿ ಅಂತ ಜಗಳ ತೆಗೆದನು ಆಗ ನಾನು ಗಂಡ ಇದ್ದಿದ್ದಿ ಅಂತ ಬರತಾ ಇದ್ದೀನಿ ಅಂತ ಅಂದೇನು. ಆಗ ನನ್ನ ಮೈದುನನಾದ ಅನೀಲಕುಮಾರ ತಂದೆ ತಿಪ್ಪಣ್ಣ ಮುಕಡಿ ಇತನು ನನ್ನ ಅಣ್ಣನಿಗೆ ಎದುರು ಮಾತಾಡ್ತಿ ರಂಡಿ ಅಂತ ಬೈದು, ನನಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದಾಗ ನಾನು ಬೇಹೋಷ ಆಗಿದ್ದು, ನಂತರ ಸೇಡಂಕ್ಕೆ ಬಂದಾಗ ನನಗೆ ಪ್ರಜ್ಞೆ ಬಂದಿದ್ದು ಆಗ ನಾನು ನೀರು-ನೀರು ಅಂತ ಚೀರಾಡಿದ್ದು, ಅದನ್ನು ಕೇಳಿ ನನ್ನ ಗಂಡ ಹಾಗೂ ಮೈದುನ ಇಬ್ಬರೂ ಕೂಡಿ ನನಗೆ ಅಲ್ಲೂರು ಗ್ರಾಮದ ನಮ್ಮ ಕಾಕನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟರು. ನಂತರ ನನ್ನ ಗಂಡ ಸದಾನಂದ ಇತನು ಕರೆಯಲು ಬಂದಾಗ ನಾನು ಆತನೊಂದಿಗೆ ಪುನಃ ಗಂಡನ ಮನೆಗೆ ಬಂದು ಉಳಿದೇನು. ನಾನು ಊರಲ್ಲಿ ಯಾರಿಗಾದರು ಮಾತಾಡಿದರೆ ಅವರಿಗೇಕೆ ಮಾತಾಡುತ್ತಿ ಅಂತ ನನ್ನ ಮೇಲೆ ಸಂಶಯ ಪಟ್ಟು ನನ್ನ ಗಂಡ ನನಗೆ ಮಾನಸೀಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 January 2015

Kalburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 29-01-15 ರಂದು ಬೆಳಿಗ್ಗೆ ಶ್ರೀ ವೇದಮೂರ್ತಿ ತಂದೆ ಶರಣಯ್ಯ ಮಠ  ಸಾ: ನಾಗನಹಳ್ಳಿ ತಾ:ಜಿ: ಕಲಬುರಗಿ ಇವರ ಹೆಂಡತಿ ಪಾರ್ವತಿ ಇವಳು ತನ್ನ ಅಕ್ಕನ ಮನೆಯಾದ ಜಂಬಗಾ (ಬಿ) ಗ್ರಾಮದಲ್ಲಿ  ಕಾರ್ಯಕ್ರಮ ಇದ್ದ ಪ್ರಯುಕ್ತ ತನ್ನ ಮಗನೊಂದಿಗೆ ಬಜಾಜ ಪಲ್ಸರ ಕೆಎ 32 ಯು 8291 ನೇದ್ದರ ಹಿಂದೆ ಕುಳಿತುಕೊಂಡು ಜಂಬಗಾ (ಬಿ) ಗ್ರಾಮಕ್ಕೆ ಹೋಗಿ ಮರಳಿ, ಅದೇ ಮೋಟಾರ ಸೈಕಲ ಹೊರಟಿದ್ದು, ಮಧ್ಯಾಹ್ನ 4-30 ಗಂಟೆ ಸುಮಾರಿಗೆ ಮಾಹಾದೇವ ಇತನು ತನ್ನ ವಶದಲ್ಲಿದ್ದ ಬಜಾಜ ಪಲ್ಸರಮೋಟಾರ ಸೈಕಲ ಕೆಎ 32 ಯು 8291 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಮದ ಚಲಾಯಿಸಿ, ಹಿಂದೆ ಕುಳಿತ ತನ್ನ ಹೆಂಡತಿ ಪಾರ್ವತಿಯನ್ನು ಲೆಕ್ಕಿಸದೇ ಮತ್ತು ಯಾವುದೇ ರೀತಿಯಿಂದ ನೋಡದೇ ತನ್ನ ಮೋಟಾರ ಸೈಕಲ ಚಲಾಯಿಸಿದ್ದರಿಂದ ಹಿಂದೆ ಕುಳಿತ ತನ್ನ ಹೆಂಡತಿ ಸೀರೆ ಸೆರಗವು ಮೊಟಾರ ಸೈಕಲದ ಹಿಂದಿನ ಚಕ್ರದಲ್ಲಿ ಸಿಲುಕಿ ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ತಲೆ ಹಾಗೂ ಇತರೇ ಭಾಗದಲ್ಲಿ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಮತ್ತು ಮಗ ಮಾಹಾದೇವನಿಗೂ ಸಹಾ ಗಾಯಾಗಳು ಆಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 12/12/2014 ರಂದು ಜೇವರ್ಗಿ(ಕೆ) ಸಿಮೆಯಲ್ಲಿರುವ ಫಿರ್ಯಾದಿ ಹೊಲ ಸರ್ವೆ ನಂ- 63/1, 63/2 ನೇದ್ದರಲ್ಲಿ ಬಾಬುರಾವ ತಂದೆ ಸಿದ್ರಾಮಪ್ಪ ಚಿಂಚೋಳಿ, ಪ್ರಕಾಶ ತಂದೆ ಶಾಮರಾವ ಚಿಂಚೋಳಿ ಮತ್ತು ಬಸವರಾಜ ತಂದೆ ಶಾಮರಾವ ಚಿಂಚೋಳಿ ಸಾ : ಎಲ್ಲರು ಜೇವರ್ಗಿ (ಕೆ)   ರವರು  ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ ಸೂರ್ಯಪಾನ ಬೆಳೆಯನ್ನು ಅಂದಾಜು 10 ಚೀಲದಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಶಾಮರಾವ ತಂದೆ ಸಿದ್ರಾಮಪ್ಪಾ ಚಿಒಂಚೋಳಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಬಸವರಾಜ ತಂದೆ ಲಕ್ಷ್ಮಣ ಮದಗುಣಕಿ ಸಾ; ಝಳಕಿ (ಕೆ) ರವರು ದಿನಾಂಕ 28/01/2015 ರಂದು ರಾತ್ರಿ ನಾನು ಮತ್ತು ನನ್ನ ಚಿಕ್ಕಪ್ಪ ಶ್ರೀಶೈಲ ತಂದೆ ಗುರುಶಾಂತಪ್ಪಾ ಮದಗುಣಕಿ ನಮ್ಮ ಹೊಲದಲ್ಲಿನ ಕಡಲೆಯನ್ನು ಕಿತ್ತಿ ಲಕ್ಷ್ಮಿದೇವರ ಪಟ್ಟಿಯಲ್ಲಿ ತಂದು ಬಡೆಯುತ್ತಾ ಇದ್ದಾಗ ನನ್ನ ದೊಡ್ಡಪ್ಪನ ಮಗನಾದ 1) ಭೊಗೇಶ ತಂದೆ ಶಿವಶರಣಪ್ಪ ಮದಗುಣಕಿ 2) ಶಿವಶರಣಪ್ಪ ತಂದೆ ಗುರುಶಾಂತಪ್ಪ ಮದಗುಣಕಿ 3) ಮಹಾದೇವಿ ಗಂಡ ಶಿವಶರಣಪ್ಪ ಮದಗುಣಕಿ 4) ಈರಣ್ಣಾ ತಂದೆ ಶಿವಶರಣಪ್ಪ ಮದಗುಣಕಿ ಇವರೆಲ್ಲರೂ ಬಂದು ನನಗೆ ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ನನಗೆ ಮತ್ತು ಬಿಡಿಸಲು ಬಂದ ನನ್ನ ಚಿಕ್ಕಪ್ಪ ಶ್ರೀಶೈಲ ಇವರಿಗೆ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ನಮ್ಮ ಹೊಲದಲ್ಲಿನ ನೀರಿನ ವಿಷಯದಲ್ಲಿ ವಿನ: ಕಾರಣ ತೊಂದರೆ ಕೊಡುತ್ತಿದ್ದಾರೆ ಇವರಿಗೆ ಖಲಾಸ ಮಾಡಬೇಕು ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಕ್ಕಳಿಗೆ ಚುಡಾಯಿಸಿದ ಪ್ರಕರಣ :
ಜೇವರ್ಗಿ ಠಾಣೆ : ಕುಮಾರಿ ವಿಜಯಲಕ್ಷ್ಮಿ ತಂದೆ ಸೋಮಣ್ಣ ಕುಳಗೇರಿ ಸಾ: ಬಿರಾಳ ಬಿ ಗ್ರಾಮ ತಾ : ಜೇವರ್ಗಿ ಇವರು ಈಗ 3-4 ತಿಂಗಳಿಂದ ನಮ್ಮೂರ 1) ಸಿದ್ರಾಮ ತಂದೆ ಹಣಮಂತ ಜೀರ  2) ಮಹೇಶ ತಂದೆ ಭೀಮಣ್ಣ ಗಯನವರ್ 3) ಭಾಗಪ್ಪ ತಂದೆ ಸಿದ್ದಪ್ಪ ಹೊನ್ನಾಳ  4) ಮಾನಪ್ಪ ತಂದೆ ತಿಪ್ಪಣ್ಣ ಮಾಚಾ ಸಾ|| ಎಲ್ಲರು ಬಿರಾಳ ಬಿ ಗ್ರಾಮ ಇವರೇಲ್ಲರು ಕೂಡಿಕೊಂಡು ಪ್ರತಿ ದೀನ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಶಹಾಪುರ ಇಬ್ಬರು ಕುಡಿಕೊಂಡು ಪ್ರತಿ ದಿನ ಶಾಲೆಗೆ ಮತ್ತು ಬಟ್ಟೆ ತೊಳೆಯಲು ಮತ್ತು ಇನ್ನಿತರೆ ಕಡೆಗೆ ಹೋಗಿ ಬರುವಾಗ ಆರೋಪಿತರೆಲ್ಲರು ಕೂಡಿಕೊಂಡು ಚುಡಾಯಿಸುವದು, ಅಶ್ಲೀಲ ಶಬ್ದಗಳಿಂದ ಕರೆಯುವದು, ಮತ್ತು ಒಬ್ಬರಿಗೊಬ್ಬರು ತಮ್ಮ ಮೇಲೆ ಬೈದಂತೆ ನಮಗೆ ಕರೆಯುವದು ಮಾಡುತ್ತಿದ್ದು ಅಲ್ಲದೆ ಇನ್ನಿತರೆ ರೀತಿಯಿಂದ ಚುಡಾಯಿಸುವದು ಮಾಡುತ್ತ ಬಂದಿದ್ದಲ್ಲದೆ ದಿನಾಂಕ 26.01.2015 ರಂದು ಮಧ್ಯಾಹ್ನ 01:30 ಗಂಟೆಯ ಸುಮಾರಿಗೆ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಹಾಗು ವೈನಿ ರೇಣುಕಾ ಎಲ್ಲರು ಕೂಡಿಕೊಂಡು ಊರ ಹೋರಗೆ ಇರುವ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಆರೋಪಿತರೆಲ್ಲರು ಕೂಡಿಕೊಂಡು ನಮ್ಮಲ್ಲಿಗೆ ಬಂದು ನನಗೆ ಮತ್ತು ನನ್ನ ಗೇಳತಿಗೆ ಫೀಗರು ಐಶ್ವರ್ಯ ಅಮೂಲ್ಯಅಂತ ಚುರಾಯಿಸಿದ್ದು ಮತ್ತು ನಮಗೆ ನಮ್ಮ ಜೋಡಿ ಬರ್ತಿರಾ ಅಂತ ಚುಡಾಯಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :

ಕಮಲಾಪೂರ ಠಾಣೆ : ಶ್ರೀಮತಿ ಮನೀಷಾ ಗಂಡ ದಿನೇಶ ಪವಾರ ಸಾ: ಮರಮಂಚಿ ತಾಂಡಾ  ತಾ:ಜಿ: ಕಲಬುರಗಿ ಇವರನ್ನು ಸುಮಾರು  5 ವರ್ಷಗಳ ಹಿಂದೆ ನನಗೆ  ನಮ್ಮ  ತಂದೆ-ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ಮರಮಂಚಿ  ತಾಂಡಾದಲ್ಲಿ  ಶ್ರೀ. ದಿನೇಶ  ತಂದೆ ಗೋಪಾಲ  ಪವಾರ  ಸಾ: ಮರಮಂಚಿ  ತಾಂಡಾ  ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು,  ಮದುವೆ ಸಮಯದಲ್ಲಿ ನನ್ನ  ಗಂಡನಿಗೆ ನನ್ನ  ತಂದೆ  ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ನಾಲ್ಕುವರೆ ತೋಲೆ ಬಂಗಾರ  ಮತ್ತು  51000/-  ರೂಪಾಯಿ  ನಗದು ಹಣವನ್ನು  ವರದಕ್ಷಿಣೆ  ರೂಪದಲ್ಲಿ  ಕೊಟ್ಟಿರುತ್ತಾರೆ. ಮದುವೆಯಾಗಿ  ಸ್ವಲ್ಪ ದಿವಸಗಳ ಕಾಲ  ಚೆನ್ನಾಗಿ ನೋಡಿಕೊಂಡಿದ್ದು ನಂತರ ತವರು ಮನೆಯಿಂದ  ಇನ್ನಷ್ಟು ವರದಕ್ಷಿಣೆ  ಹಣ  ತರುವಂತೆ  ನನ್ನ ಗಂಡ ದಿನೇಶ  , ಅತ್ತೆ ಸೋನಾಬಾಯಿ ನಾದಿನಿ, ಇನ್ನು ಹಾಗೂ ರಮಾಬಾಯಿ  ಭಾವಂದಿರುರಾದ  ಹಣಮಂತ  ಮತ್ತು ಶ್ರೀಮಂತ [ ಆರೋಪಿತರು ] ಮಾನಸಿಕವಾಗಿ ಮತ್ತು  ದೈಹಿಕವಾಗಿ  ಕಿರುಕುಳ ಕೊಡುತ್ತಿದ್ದರು  ನಾನು  ಸಹಿಸಿಕೊಂಢು ಬಂದಿದ್ದು, ಮುಂಬೈದಲ್ಲಿ  ನನ್ನ  ಗಂಡ  ಮನೆ  ಕಟ್ಟುವಾಗ ನನಗೆ  ಒತ್ತಾಯ ಮಾಡಿಸಿ ನನ್ನ  ತಂದೆಯಿಂದ ಮತ್ತೆ   60, 000/- ರೂಫಾಯಿ ತರಿಸಿಕೊಟ್ಟಿರುತ್ತೇವೆ. ಅಲ್ಲದೇ  ನನಗೆ  ಐದು  ವರ್ಷಗಳಿಂದ  ಮಕ್ಕಳಾಗದೇ  ಇರುವುದರಿಂದ ನನ್ನ ಅತ್ತೆ  ನನ್ನ  ಗಂಡನಿಗೆ  ಬೇರೆ  ಮದುವೆ ಮಾಡಲು ಯತ್ನಿಸುತ್ತಿದ್ದು, ನೀನು ನಮ್ಮ  ಮನೆಯಲ್ಲಿ  ಇರಬೇಕಾದರೆ ನಿನ್ನ  ತವರು ಮನೆಯಿಂದ ಇನ್ನೂ 2 ಲಕ್ಷ ಹಣ  ತಂದು  ಕೊಡು ಇಲ್ಲದಿದ್ದರೆ ನಮ್ಮ  ಮನೆ ಬಿಟ್ಟು  ಹೋಗು  ಅಂತಾ ದೈಹಿಕ  ಮತ್ತು  ಮಾನಸಿಕ ಕಿರುಕುಳ  ನೀಡುತ್ತಿದ್ದಾರೆ. ದಿನಾಂಕ: 12/01/2015 ರಂದು  ರಾತ್ರಿ  01-30  ಗಂಟೆಯ  ಸುಮಾರಿಗೆ  ನಾನು ಮರಮಂಚಿಯ   ನನ್ನ ಗಂಡನ  ಮನೆಯಲ್ಲಿದ್ದಾಗ  ನನ್ನ ಗಂಡ ದಿನೇಶ  ಈತನು  ಕುಡಿದು ಬಂದು ನನಗೆ  ಉಸಿರುಗಟ್ಟಿಸಿ ಕೊಲೆ ಮಾಡಲು  ಪ್ರಯತ್ನ ಪಟ್ಟಿದ್ದು,ಆಗ  ನಾನು  ಆತನಿಂದ  ಬಿಡಿಸಿಕೊಂಡಿರುತ್ತೇನೆ. ವಿಷಯವನ್ನು ನಾನು ನನ್ನ ತಂದೆ-ತಾಯಿಗೆ  ಫೋನಿನಲ್ಲಿ  ತಿಳಿಸಿರುತ್ತೇನೆ. ನಂತರ  ದಿನಾಂಕ: 20-01-2015 ರಂದು ಮತ್ತೆ  ನನ್ನ  ಗಂಡ , ಅತ್ತೆ ಕೂಡಿಕೊಂಢು ನನಗೆ  ತವರು  ಮನೆಗೆ  ಹೋಗು ಅಂತಾ  ಹೇಳಿ   ನನಗೆ ಮನೆಯಿಂದ ಹೊರಗೆ  ಹಾಕಿರುತ್ತಾರೆ. ನನಗೆ  ಮೇಲೆ  ತಿಳಿಸಿದ ಜನರು  ದಿನಾಲು  ಮಕ್ಕಳಾಗಿಲ್ಲವೆಂದು  ಹಿಯಾಳಿಸುತ್ತಾ  ತವರು ಮನೆಯಿಂದ  ಇನ್ನಷ್ಟು  ಹಣ  ತೆಗೆದುಕೊಂಡು  ಬಾ  ಅಂತಾ  ಹೇಳಿ ನನಗೆ ದೈಹಿಕವಾಗಿ  ಮತ್ತು  ಮಾನಸಿಕವಾಗಿ  ಕಿರುಕುಳ  ನೀಡುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.