POLICE BHAVAN KALABURAGI

POLICE BHAVAN KALABURAGI

19 January 2015

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ  ರವರೊಂದಿಗೆ 1) ಜಗದೇವಪ್ಪ ತಂದೆ ಹುಚ್ಚಪ್ಪ ನಾಟಿಕಾರ 2) ಶಿವಪ್ಪ ತಂದೆ ಹುಚ್ಚಪ್ಪ ನಾಟಿಕಾರ 3) ಶಾಂತಾಬಾಯಿ ಗಂಡ ಹುಚ್ಚಪ್ಪ ನಾಟಿಕಾರ 4) ಚಂದಮ್ಮ ತಂದೆ ಹುಚ್ಚಪ್ಪ ನಾಟಿಕಾರ 5) ಯಲ್ಲಮ್ಮ ತಂದೆ ಹುಚ್ಚಪ್ಪ ನಾಟಿಕಾರ 6) ಹುಚ್ಚಪ್ಪ ತಂದೆ ಶಿವಪ್ಪ ನಾಟಿಕಾರ ಸಾ|| ಎಲ್ಲರೂ ಹಳ್ಯಾಳ ಇವರುಗಳು ಮನೆಯ ಜಾಗದ ವಿಚಾರವಾಗಿ ನನ್ನ ಮೇಲೆ ಮತ್ತು ನಮ್ಮ ಸಮಜಾದ ನೀಲಮ್ಮ ಗಂಡ ಜಗದೇವಪ್ಪ ನಾಟಿಕಾರ || 50 ವರ್ಷ, ಖಾಜಮ್ಮ ಗಂಡ ಮಲ್ಲಿಕಾರ್ಜುನ ನಾಟಿಕಾರ || 28 ವರ್ಷ ಮೂರು ಜನರು ಮೇಲೆ ದ್ವೇಷ ಮಾಡಿಕೊಂಡು, ಅದೆ ದ್ವೇಷದಿಂದ ನಮ್ಮನ್ನು ಕೊಲೆ ಮಾಡಬೆಕೆಂದು ಎಲ್ಲರು ಅಕ್ರಮವಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಬಂದು ಎಲ್ಲರು ಏಕೊದ್ದೇಶದಿಂದ ನಮ್ಮನ್ನು ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಗಳಿಂದ ಹಾಗೂ ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದು, ಮತ್ತು ಖಾಜಮ್ಮ ಇವಳ ಹೊಟ್ಟೆಗೆ ಆಪ್ರೇಷನ್ ಆದ ಜಾಗಕ್ಕೆ ಕಾಲಿನಿಂದ ಒದ್ದು ಬಾರಿ ಗುಪ್ತಗಾಯವನ್ನು  ಪಡಿಸಿ ಹಾಗೂ ಸೀರೆ ಹಿಡಿದು ಏಳೆದಾಡಿ ಮಾನಹಾನಿ ಮಾಡಿದ ಮತ್ತು ಟಾಟಾ ಎಸಿ ವಾಹನವನ್ನು ನನ್ನ ಮೇಲೆ ಹಾಯಿಸಲು ಬಂದು ಕೊಲೆ ಮಾಡಲು ಪ್ರಯತ್ನಸಿರುತ್ತಾರೆ ಅಂತಾ ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ ಸಾ|| ಹಳ್ಯಾಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 17/01/2015 ರಂದು ಮದ್ಯಾಹ್ನ ಶ್ರೀ ಮಂಜುನಾಥ ಕಾಶರಣವರ ಮತ್ತು ಮೃತ ದತ್ತು ತಂದೆ ಮಾರುತಿ ಮಾನೆ ಇಬ್ಬರು ಕೂಡಿಕೊಂಡು ತಮ್ಮ ಮೊ.ಸೈ ನಂ ಕೆಎ 32 ಇಜಿ 9975 ನೇದ್ದರ ಮೇಲೆ ಸೈಟ್ ನೋಡಿಕೊಂಡು ಕೆರಿಭೋಸಗಾ ಗ್ರಾಮದಿಂದ ಗುಲಬರ್ಗಾ ಕ್ಕೆ ಬರುತ್ತಿರುವಾಗ ಮೋ.ಸೈ ಅನ್ನು ದತ್ತು ತಂದೆ ಮಾರುತಿ ನಡೆಸುತ್ತಿದ್ದು ಅವನ ಹಿಂದೆ ಫಿರ್ಯಾದಿ ಕುಳಿತಿದ್ದು ಆಳಂದ ರೋಡಿನ ವಿಶ್ವರಾಧ್ಯ ಗುಡಿಯ ಎದರುಗಡೆ ಮೋ.ಸೈ ಮೇಲೆ ಬರುತ್ತಿರುವಾಗ ವಿಶ್ವರಾಧ್ಯ ಗುಡಿ ಪೆಟ್ರೋಲ್ ಪಂಪ್ ನಿಂದ ಒಂದು ಕ್ರೋಜರ್ ಜೀಪ್ ನಂಬರ್ ಕೆಎ 37 ಎಂ 1275 ನೇದ್ದರ ಚಾಲಕ ತನ್ನ ಕ್ರೋಜರ್ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಸದರ ಮೋ.ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ದತ್ತು ತಂದೆ ಮಾರುತಿ ಮಾನೆ ಈತನಿಗೆ ತಲೆಗೆ ಎದೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಫಿರ್ಯಾದಿ ಮಂಜುನಾಥ ಕಾಶಣ್ಣವರ ತನಿಗೆ ಬಲಗಾಲು ಮುಖಕ್ಕೆ ಭಾರಿ ಪೆಟ್ಟಾಗಿದ್ದು ಅಲ್ಲದೇ ಕ್ರೋಜರ್ ದಲ್ಲಿದ್ದ ಶ್ರೀಮಂತ ತಂದೆ ನಿಂಗಪ್ಪ ಉದನೂರಕರ್ ಈತನಿಗೆ ತಲೆಯ ಹಿಂದುಗಡೆ ಬಲಗಾಲಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀಮತಿ ಶಾರದಾಬಾಯಿ ಗಂಡ ಶರಣಪ್ಪ ಮಡಿವಾಳ ಇವರು  ಮನೆಯಿಂದ ಸಂಡಾಸಕ್ಕೆ ಕಲಬುರಗಿ ಹುಮ್ನಾಬಾದ ರೋಡಿನ ಅವರಾದ (ಬಿ) ಗ್ರಾಮದ ಹತ್ತೀರ ಇರುವ ಮಲ್ಲಣ್ಣಗೌಡ ಇವರ ಹೊಲದ ಹತ್ತೀರ ಹೋಗುವಾಗ ಹಿಂದಿನಿಂದ ಕೆ,ಎಸ್,ಆರ್,ಟಿ ಸಿ ಬಸ್ ನಂ: ಕೆಎ-32-ಎಫ್-1689 ನೇದ್ದರ ಚಾಲಕನು ಹಿಂದಿನಿಂದ ತನ್ನ ಬಸ್ ಅನ್ನು ಅತಿ ವೇಗ & ನಿಸ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಎಡ & ಬಲ ಪಕ್ಕೆಗೆ ಹಾಗೂ ಎಡಭುಜಕ್ಕೆ , ಎರಡು ಮೊಳಕಾಲಿಗೆ  ಭಾರಿ ಒಳಪೇಟ್ಟು ಮತ್ತು ರಕ್ತಗಾಯವಾಗಿ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಆರಾಮವಾಗದ ಕಾರಣ ದಿನಾಂಕ: 15/12/2014 ರಂದು ಮನೆಗೆ ಕರೆದುಕೊಂಡು ಒಯ್ದಿದ್ದು ಅಪಘಾತದಲ್ಲಿ ಆದ ಗಾಯದ ಬಾಧೆಯಿಂದ ಇಂದು ದಿನಾಂಕ: 17/01/2015 ರಂದು ಬೆಳಿಗ್ಗೆ ಮೃತ ಪಟ್ಟಿರುತ್ತಾಳೆ ಅಂತಾ  ಶ್ರೀಮತಿ ಗುಂಡಮ್ಮ ಗಂಡ ಚಂದ್ರಶ್ಯಾ ಮಡಿವಾಳ ಸಾ|| ಅವರಾದ (ಬಿ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

18 January 2015

Kalaburagi District Reported Crimes

ಕೊಲೆ ಪ್ರಕರಣ :
ಮಳಖೇಡ ಠಾಣೆ : ದಿನಾಂಕ  17.01.2015 ರಂದು ರಾತ್ರಿ 10-00 ಪಿ.ಎಂ ಸಮಯಕ್ಕೆ ಆದಿತ್ಯ ನಗರ ಮಳಖೇಡ ಕಾಲೋನಿಯ ಸೆಕುರಿಟಿ ಸುಪರವೈಸರ್ ಆದ ಗಜಾನಂದ ಇವರು ಶ್ರೀ ಎಮ್.ವಿ. ರಮಣಮೂರ್ತಿ ರವರಿಗೆ  ಪೋನ ಮಾಡಿ ತಿಳಿಸಿದೆನೆಂದರೆ, ನಮ್ಮ ಕಾಲೋನಿಯ ಸಿ ಬ್ಲಾಕನಲ್ಲಿ ಶೆಡ್ ಬಾಗಿಲು ಮುಂದೆ ಯಾರೋ ಒಬ್ಬನು ಸತ್ತು ಬಿದಿದ್ದಾನೆ. ಅವನ ಮುಖಕ್ಕೆ ತಲೆಗೆ ಭಾರಿ ಗಾಯಗಳಾಗಿದ್ದು  ಮುಖದ ತುಂಬಾರಕ್ತ ಆಗಿದೆ ಅವನ ಪಕ್ಕದಲ್ಲಿ ಒಂದು ಕಬ್ಬಿಣದ ಪೈಪ್ ಬಿದಿದ್ದೆ ಅಂತಾ ಹೇಳಿದನು. ಆಗ ನಾನು ನಮ್ಮ ಕಾಲೋನಿಗೆ ಹೋಗಿ ಅಲ್ಲಿ ಇದ್ದ ಸೆಕುರಿಟಿ ಸುಪರವೈಸರ ಗಜಾನಂದ ಈತನ ಸಂಗಡ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಶಡ್ ನಂ C-4/12 ನೇದ್ದರ ಬಾಗಿಲು ಮುಂದೆ ನೋಡಲಾಗಿ ಒಬ್ಬನು ಗಂಡು ಮನುಷ್ಯನು ಸತ್ತು ಬಿದಿದ್ದನು. ಅವನ ಮುಖಕ್ಕೆ ತಲೆಗೆ ಭಾರಿ ರಕ್ತಗಾಯಗಳಾಗಿದ್ದವು. ಅವನ ಪಕ್ಕದಲ್ಲಿ ಒಂದು ಕಬ್ಬಿಣದ ಪೈಪ ಬಿದಿದ್ದು ಸದರಿಯವನು ಅಪರಿಚಿತನಾಗಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ಅವನು ಸುಮಾರು 35-40 ವರ್ಷದವನಾಗಿರುತ್ತಾನೆ. ಸದರಿಯವನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಕಬ್ಬಿಣದ ಪೈಪನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ಕಂಡು ಬರುತ್ತದೆ. ಸದರಿಯವನಿಗೆ ದಿ: 17-01-2015 ರಂದು ರಾತ್ರಿ 08:00 ಪಿ.ಎಂ ದಿಂದ ರಾತ್ರಿ 09-30 ಪಿ.ಎಂ ಗಂಟೆಯ ಮಧ್ಯದ ಅವಧಿಯಲ್ಲಿ ಕೊಲೆ ಮಾಡಿರಬಹುದು. ಅಂತಾ  ಶ್ರೀ ಎಮ್.ವಿ. ರಮಣಮೂರ್ತಿ ತಂದೆ  ಭರತರಾವ ಸಾ: ವಕ್ಕಾಲಂಕಾವಾರಿ ಸ್ಟ್ರೀಟ ವಿಕಾಸ ರೆಸಿಡೆನ್ಸಿ ಬಿಸಯಡ್ ಕಸಪಾ ಹೈಸ್ಕೂಲ ವಿಜಯನಗರಂ (ಎಪಿ) ಹಾವ: HR 2/4 ಆದಿತ್ಯಾನಗರ ಮಳಖೇಡ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 12, 13-01-15 ರಂದು ರಾತ್ರಿ  12-30 ಗಂಟೆ ಸುಮಾರಿಗೆ ನನ್ನ ಕೊನೆಯ ಮಗಳಾದ ನಂದಿನಿ ಏಕೇ ಮಾಡುತ್ತೇನೆ ಎಂದು ಹೇಳಿ ಮನೆಯಿಂದ ಹೊರೆಗೆ ಇರುವ ಬಾತರೂಮಿಗೆ ಹೋಗಿದ್ದು ,  ಸ್ವಲ್ಪ ಸಮಯದಲ್ಲಿ ನನ್ನ ಹೆಂಡತಿ ಮಗಳು ಬರದ ಕಾರಣ ಹೊರೆಗೆ ಬಂದು ನೋಡಲು ಮಗಳು ಕಾಣಿಸಿದ ಕಾರಣ ನನ್ನ ಹೆಂಡತಿ ರಾತ್ರಿ 1-30 ಗಂಟೆ ಸುಮಾರಿಗೆ ಪೋನ ಮಾಡಿ ವಿಷಯ ತಿಳಿಸಿದಳು. ಮುಂಬೈಗೆ ಹೋಗಿ ಕೆಲಸ ಮುಗಿಸಿಕೊಂಡು ದಿನಾಂಕ 14-01-15 ರಂದು ಬೆಳಿಗ್ಗೆ 11-30 ಗಂಟೆಗೆ ಬಂದು ಕಲಬುರಗಿಗೆ  ಬಂದು ನನ್ನ ಮಗಳಾದ ನಂದಿನಿ ಇವಳನ್ನು  ರೇಲ್ವೆ ಸ್ಟೇಷನ,  ಬಸಸ್ಟ್ಯಾಂಡ ಕಲಬುರಗಿ ನಗರದಲ್ಲಿ ಹುಡುಕಾಡಲೂ ಸಿಕ್ಕಿರುವುದಿಲ್ಲಾ. ದಿನಾಂಕ 17-01-15 ರಂದು ಬೆಳಿಗ್ಗೆ  ನಮ್ಮ ಓಣಿಯಲ್ಲಿ ಓಣಿಯ ಜನರು ನನ್ನ ಮಗಳಾದ ನಂದಿನಿ ಇವಳಿಗೆ ಓಣಿಯ ಶೇಖರ ತಂದೆ ಹಣಮಂತ ಕ್ಷತ್ರಿ ಇತನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ  ಅಂತಾ ಶ್ರೀ ಶರಣಬಸಪ್ಪ ತಂದೆ ನಂದಕುಮಾರ ಸಾತಖೇಡ ಸಾ:ಆಳಂದ ಚೆಕ್ಕ ಪೋಸ್ಟ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ: 17-01-2015 ರಂದು ಬೆಳಿಗ್ಗೆ 6-00 ಗಂಟೆಯಿಂದ 7-00 ಗಂಟೆ ಮಧ್ಯದ ಅವಧಿಯಲ್ಲಿ ಕಲಬುರಗಿ ಹುಮನಾಬಾದ ಮಾರ್ಗ ಮಧ್ಯದಲ್ಲಿರುವ ಕುರಿಕೋಟಾ ಸೇತುವೆ ಹತ್ತಿರ ಯಾವುದೋ ಒಬ್ಬ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಗಂಡನಾದ ರಾಮಲು ತಂದೆ ಸಾಬಣ್ಣಾ ಪೆಂಡಗೊಂಡ ಸಾ: ರುದ್ರಸಮುದ್ರಂ ತಾ:ಮಕ್ತಲ್ ಜಿ: ಮಹಿಬೂಬ ನಗರ ತೆಲಂಗಾಣ ರಾಜ್ಯ ಈತನಿಗೆ ಡಿಕ್ಕಿ ಹೊಡೆದ ಸದರಿ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾರೆ. ಫಿರ್ಯಾದಿಯ ಗಂಡ ರಾಮಲು ಈತನಿಗೆ ಭಾರಿ ರಕ್ತಗಾಯ ವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ಶ್ರೀಮತಿ ರೇಣಮ್ಮಾ ಗಂಡ ರಾಮಲು ಪೆಡಗೊಂಡ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂಔ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 January 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ  15-01-2015 ರಂದು ಸಾಯಂಕಾಲ     ಭೀರಪ್ಪ @ ಲಕ್ಷ್ಮಣ ತಂದೆ ಬಸವಂತ್ರಾಯ ನಾದ ಈತನು ನನ್ನ ಗಂಡ ಗುರಪ್ಪ ಬಾದನಳ್ಳಿ ಈತನಿಗೆ ಸರಾಯಿ ಕುಡಿಸುತ್ತಿದ್ದಾನೆ ಅಂತಾ ಗುರಪ್ಪನ ಮನೆಯವರಿಗೆ ಹೇಳಿದಕ್ಕೆ, ನನ್ನ ಗಂಡ ಭೀರಪ್ಪ @ ಲಕ್ಷ್ಮಣ ಈತನಿಗೆ ಗುರಪ್ಪ ಬಾದನಳ್ಳಿ ಇವರ ಮನೆಯವರಿಗೆ ನಾನೆ ಸರಾಯಿ ಕುಡಿಸುತ್ತಿದ್ದಾನೆ ಅಂತಾ ಯಾಕೆ ಹೇಳಿದಿ ಅಂತಾ ಕೇಳಿದಕ್ಕೆ ಬೀರಪ್ಪ @ ಲಕ್ಷ್ಮಣ ಇವನು ನನ್ನ ಗಂಡನ ಮೇಲೆ ತಿರ್ವ ದ್ವೇಷ ಸಾದಿಸುತ್ತಾ ನನ್ನ ಗಂಡನಿಗೆ ನಮ್ಮ ಗ್ರಾಮದ ಹೊಸ ಊರಿನ ಲಕ್ಷ್ಮೀ ಗುಡಿಯ ಹಿಂದೆ ಇರುವ ಮಲ್ಲಣ್ಣ ಪೂಜಾರಿ ಇವರ ಅಂಗಡಿಯ ಮುಂದೆ ರಾತ್ರಿ 9:30 ಗಂಟೆ ಸುಮಾರಿಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಹೊಂಚುಹಾಕಿ ಕಾದು ಕುಳಿತು ಜೆಂಬೆದಿಂದ ನನ್ನ ಗಂಡನ ಏದೆಗೆ ಚುಚ್ಚಿ ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ, ಕಾರಣ ಭೀರಪ್ಪ @ ಲಕ್ಷ್ಮಣ ತಂದೆ ಬಸವಂತ್ರಾಯ ನಾದ ಸಾ : ಮಂಗಳೂರ ಇವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಶ್ರೀಮತಿ ಅನುಸುಬಾಯಿ ಗಂಡ ಸಿದ್ದಲಿಂಗಯ್ಯಾ ಮಠ ಸಾ ಮಂಗಳೂರು ತಾ ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 28/12/2014 ರಂದು ಬೆಳಿಗ್ಗೆ ಶ್ರೀ ಮಹಮ್ಮದ ಹಸನ ತಂದೆ ವಸಿವುಲ್ಲಾ ರಹೇಮಾನ ಸಾ : ವಿದ್ಯಾ ನಗರ ಕಲಬುರಗಿ ರವರು ತನ್ನ ಮೋ/ಸೈಕಲ್ ನಂ; ಕೆಎ 39 ಹೆಚ್. 4514 ನೆದ್ದರ ಮೇಲೆ ಹಿಂದೆ ತನ್ನ ತಾಯಿಯಾದ ರಿಯಾಜವುನ್ನಿಸ ಇವರಿಗೆ ಕೂಡಿಸಿಕೊಂಡು ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ರೋಡ ಕಡೆಗೆ ಚಲಾಯಿಸಿಕೊಂಡು  ಹೋಗುತ್ತಿದ್ದಾಗ ಕೆ.ಬಿ.ಎನ್.ಆಸ್ಪತ್ರೆಯ ಎದುರಿನ ಎನ್.ಇ.ಕೆ.ಆರ್.ಟಿ.ಸಿ ಕಾರ್ಯಾಲಯ ಎದುರಿನ ರೋಡ ಮೇಲೆ ಎದುರುಗಡೆಯಿಂದ ರಾಂಗ ಸೈಡ ಮೂಲಕ ಕಾರ ನಂ; ಕೆಎ 32 ಎಮ್ 9300 ರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿರುವ ಮೋ/ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಯ ಎಡಗಣ್ಣಿನ ಹತ್ತಿರ ತಕ್ತಗಾಯ ,ಎಡಗಡೆ ಹಣೆಗೆ ಗುಪ್ತಗಾಯ ,ಬಾಯಿಗೆ ಪೆಟ್ಟು ಬಿದ್ದು ತುಟಿಗೆ ರಕ್ತಗಾಗಯ, ಮುಗಿನ ಕೆಳಗೆ ರಕ್ತಗಾಯ, ಗದ್ದಕ್ಕೆ ರಕ್ತಗಾಯವಾಗಿತ್ತು. ಫಿರ್ಯಾದಿ ತಾಯಿಗೆ ತಲೆಗೆ ಭಾರಿ ಗುಪ್ತ ಪೆಟ್ಟು ಮಾಡಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ದಿನಾಂಕ 15-01-2015 ರಂದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಗಂಗಾಮಾಯಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಭಾರಿಪೆಟ್ಟು ಬಿದ್ದಿದ್ದರಿಂದ ನಿಧಾವನಾಗಿ ಗುಣಮುಖರಾಗುತಾರೆ ಅಂತಾ ತಿಳಿಸಿದರಿಂದ್ದ ಫಿರ್ಯಾದಿ ತನ್ನ ತಾಯಿಗೆ ಕಲಬುರಗಿಯಲ್ಲಿ ತೋರಿಸಬೇಕು ಅಂತಾ ದಿನಾಂಕ 15-01-2015 ರಂದು ಒಂದು ಅಂಬುನೇನ್ಸ ವಾಹನದಲ್ಲಿ ಹಾಕಿಕೊಂಡು ಸೊಲಾಪೂರದಿಂದ ಕಲಬುರಗಿಗೆ ಬರುವಾಗ ಮಾರ್ಗ ಮದ್ಯದಲ್ಲಿ ರಾತ್ರಿ 02-30 ಎ.ಎಮ್. ಕ್ಕೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 15.01.2015 ರಂದು 04.45 ಪಿಎಮ್ ಕ್ಕೆ ಮುಸ್ಲಿಂ ಚೌಕ ಹತ್ತಿರ  ಇರುವ ಮೇಡಿಪ್ಲಸ ಮೇಡಿಕಲ ಎದುರು  ರಸ್ತೆ ಮೇಲೆ ಶ್ರೀ ಮಹ್ಮದ ಮಶಾಖ ತಂದೆ ಮಹ್ಮದ ಖಾಸಿಮ ಸಾ : ಮಹಿಬುಬನಗರ  ಕಲಬುರಗಿ. ರವರು ತನ್ನ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನಾದ ಮಹ್ಮದ ಹಾಜಿ ತಂದೆ ಗುಲಾಂ ಖುರೇಶಿ ಇತನು ತನ್ನ ಮೋಟಾರ ಸೈಕಲ ನಂ ಕೆ ಎ 32. ಇಇ 2805 ನೇದ್ದನ್ನು ಡಂಕಾ ಕ್ರಾಸ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫೀರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡೆಸಿ ಅಪಘಾತ ಪಡಿಸಿದ್ದು ತಲೆಗೆ, ಕಪಾಳಕ್ಕೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.