ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ ರವರೊಂದಿಗೆ 1) ಜಗದೇವಪ್ಪ ತಂದೆ ಹುಚ್ಚಪ್ಪ ನಾಟಿಕಾರ 2) ಶಿವಪ್ಪ ತಂದೆ ಹುಚ್ಚಪ್ಪ ನಾಟಿಕಾರ 3) ಶಾಂತಾಬಾಯಿ ಗಂಡ ಹುಚ್ಚಪ್ಪ ನಾಟಿಕಾರ 4) ಚಂದಮ್ಮ ತಂದೆ ಹುಚ್ಚಪ್ಪ ನಾಟಿಕಾರ 5) ಯಲ್ಲಮ್ಮ ತಂದೆ ಹುಚ್ಚಪ್ಪ ನಾಟಿಕಾರ 6) ಹುಚ್ಚಪ್ಪ ತಂದೆ ಶಿವಪ್ಪ ನಾಟಿಕಾರ ಸಾ|| ಎಲ್ಲರೂ ಹಳ್ಯಾಳ ಇವರುಗಳು ಮನೆಯ ಜಾಗದ ವಿಚಾರವಾಗಿ ನನ್ನ ಮೇಲೆ ಮತ್ತು ನಮ್ಮ ಸಮಜಾದ ನೀಲಮ್ಮ ಗಂಡ ಜಗದೇವಪ್ಪ ನಾಟಿಕಾರ ವ|| 50 ವರ್ಷ, ಖಾಜಮ್ಮ ಗಂಡ ಮಲ್ಲಿಕಾರ್ಜುನ ನಾಟಿಕಾರ ವ|| 28 ವರ್ಷ ಮೂರು ಜನರು ಮೇಲೆ ದ್ವೇಷ ಮಾಡಿಕೊಂಡು, ಅದೆ ದ್ವೇಷದಿಂದ ನಮ್ಮನ್ನು ಕೊಲೆ ಮಾಡಬೆಕೆಂದು ಎಲ್ಲರು ಅಕ್ರಮವಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಬಂದು ಎಲ್ಲರು ಏಕೊದ್ದೇಶದಿಂದ ನಮ್ಮನ್ನು ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಗಳಿಂದ ಹಾಗೂ ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದು, ಮತ್ತು ಖಾಜಮ್ಮ ಇವಳ ಹೊಟ್ಟೆಗೆ ಆಪ್ರೇಷನ್ ಆದ ಜಾಗಕ್ಕೆ ಕಾಲಿನಿಂದ ಒದ್ದು ಬಾರಿ ಗುಪ್ತಗಾಯವನ್ನು ಪಡಿಸಿ ಹಾಗೂ ಸೀರೆ ಹಿಡಿದು ಏಳೆದಾಡಿ ಮಾನಹಾನಿ ಮಾಡಿದ ಮತ್ತು ಟಾಟಾ ಎಸಿ ವಾಹನವನ್ನು ನನ್ನ ಮೇಲೆ ಹಾಯಿಸಲು ಬಂದು ಕೊಲೆ ಮಾಡಲು ಪ್ರಯತ್ನಸಿರುತ್ತಾರೆ ಅಂತಾ ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ ಸಾ|| ಹಳ್ಯಾಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 17/01/2015 ರಂದು ಮದ್ಯಾಹ್ನ ಶ್ರೀ ಮಂಜುನಾಥ ಕಾಶರಣವರ ಮತ್ತು ಮೃತ ದತ್ತು ತಂದೆ ಮಾರುತಿ ಮಾನೆ ಇಬ್ಬರು
ಕೂಡಿಕೊಂಡು ತಮ್ಮ ಮೊ.ಸೈ ನಂ ಕೆಎ 32 ಇಜಿ 9975 ನೇದ್ದರ ಮೇಲೆ ಸೈಟ್ ನೋಡಿಕೊಂಡು ಕೆರಿಭೋಸಗಾ ಗ್ರಾಮದಿಂದ
ಗುಲಬರ್ಗಾ ಕ್ಕೆ ಬರುತ್ತಿರುವಾಗ ಮೋ.ಸೈ ಅನ್ನು ದತ್ತು ತಂದೆ
ಮಾರುತಿ ನಡೆಸುತ್ತಿದ್ದು ಅವನ ಹಿಂದೆ ಫಿರ್ಯಾದಿ ಕುಳಿತಿದ್ದು ಆಳಂದ ರೋಡಿನ ವಿಶ್ವರಾಧ್ಯ ಗುಡಿಯ ಎದರುಗಡೆ
ಮೋ.ಸೈ ಮೇಲೆ ಬರುತ್ತಿರುವಾಗ ವಿಶ್ವರಾಧ್ಯ ಗುಡಿ ಪೆಟ್ರೋಲ್ ಪಂಪ್ ನಿಂದ ಒಂದು ಕ್ರೋಜರ್ ಜೀಪ್ ನಂಬರ್ ಕೆಎ 37 ಎಂ 1275 ನೇದ್ದರ ಚಾಲಕ ತನ್ನ ಕ್ರೋಜರ್
ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಸದರ ಮೋ.ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ
ದತ್ತು ತಂದೆ ಮಾರುತಿ ಮಾನೆ ಈತನಿಗೆ ತಲೆಗೆ ಎದೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು
ಫಿರ್ಯಾದಿ ಮಂಜುನಾಥ ಕಾಶಣ್ಣವರ ಇತನಿಗೆ ಬಲಗಾಲು ಮುಖಕ್ಕೆ ಭಾರಿ ಪೆಟ್ಟಾಗಿದ್ದು ಅಲ್ಲದೇ ಕ್ರೋಜರ್ ದಲ್ಲಿದ್ದ ಶ್ರೀಮಂತ ತಂದೆ
ನಿಂಗಪ್ಪ ಉದನೂರಕರ್ ಈತನಿಗೆ ತಲೆಯ ಹಿಂದುಗಡೆ ಬಲಗಾಲಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಶಾರದಾಬಾಯಿ ಗಂಡ ಶರಣಪ್ಪ ಮಡಿವಾಳ ಇವರು ಮನೆಯಿಂದ ಸಂಡಾಸಕ್ಕೆ ಕಲಬುರಗಿ
ಹುಮ್ನಾಬಾದ ರೋಡಿನ ಅವರಾದ (ಬಿ) ಗ್ರಾಮದ ಹತ್ತೀರ ಇರುವ ಮಲ್ಲಣ್ಣಗೌಡ ಇವರ ಹೊಲದ ಹತ್ತೀರ ಹೋಗುವಾಗ ಹಿಂದಿನಿಂದ ಕೆ,ಎಸ್,ಆರ್,ಟಿ ಸಿ ಬಸ್ ನಂ:
ಕೆಎ-32-ಎಫ್-1689 ನೇದ್ದರ ಚಾಲಕನು ಹಿಂದಿನಿಂದ ತನ್ನ ಬಸ್ ಅನ್ನು ಅತಿ ವೇಗ & ನಿಸ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಎಡ
& ಬಲ ಪಕ್ಕೆಗೆ ಹಾಗೂ ಎಡಭುಜಕ್ಕೆ , ಎರಡು
ಮೊಳಕಾಲಿಗೆ ಭಾರಿ ಒಳಪೇಟ್ಟು
ಮತ್ತು ರಕ್ತಗಾಯವಾಗಿ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಆರಾಮವಾಗದ ಕಾರಣ
ದಿನಾಂಕ: 15/12/2014 ರಂದು ಮನೆಗೆ ಕರೆದುಕೊಂಡು ಒಯ್ದಿದ್ದು ಅಪಘಾತದಲ್ಲಿ
ಆದ ಗಾಯದ ಬಾಧೆಯಿಂದ ಇಂದು ದಿನಾಂಕ: 17/01/2015 ರಂದು ಬೆಳಿಗ್ಗೆ ಮೃತ
ಪಟ್ಟಿರುತ್ತಾಳೆ ಅಂತಾ ಶ್ರೀಮತಿ ಗುಂಡಮ್ಮ ಗಂಡ ಚಂದ್ರಶ್ಯಾ
ಮಡಿವಾಳ ಸಾ|| ಅವರಾದ (ಬಿ) ಇವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment