POLICE BHAVAN KALABURAGI

POLICE BHAVAN KALABURAGI

27 June 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ²æÃ ಶರಣಬಸಪ್ಪ ತಂದೆ ವೀರಭದ್ರಪ್ಪ ಕವಟಗಿ ಸಾ:ಮನೆ ನಂ. 2-911/5/2/9 ಅನು ಗೃಹ ಅಪ್ಪಾ ವಿಲ್ಸ ಎದುರುಗಡೆ ರಾಜಾಪೂರ ರೋಡ ಗುಲಬರ್ಗಾ ರವರ ಅಣ್ಣತಮ್ಮ ಕೀಯವರಾದ ಅನೀಲಕುಮಾರ ಕವಟಗಿ ಇವರು ಹಟ್ಟಿ ಚಿನ್ನದ ಗಣಿಯಲ್ಲಿ ಸುಪರವೈಸರ್‌ ಅಂತಾ ಕೆಲಸ ಮಾಡಿಕೊಂಡು ತಮ್ಮ ಕುಟುಂಬ ಸಮೇತ ರಾಯಚೂರ ಜಿಲ್ಲೆಯ ಲಿಂಗಸೂರ ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ವಾಸವಾಗಿರುತ್ತಾರೆ. ದಿನಾಂಕ: 25-06-2014 ರಂದು ಸಾಯಂಕಾಲ 5 ಗುಲಬರ್ಗಾಕ್ಕೆ  ತಮ್ಮ ಕಾರ ನಂ.ಕೆಎ 36 ಎಮ್/8059 ನೇದ್ದರಲ್ಲಿ ಗುಲಬರ್ಗಾಕ್ಕೆ ಬಂದಿದ್ದು  ದಿನಾಂಕ: 26-06-2014 ರಂದು ಬೆಳಗ್ಗೆ 10:30 ಗಂಟೆಯ ಸುಮಾರಿಗೆ ಹಟ್ಟಿಗೆ ಹೋಗುವ ಸಲುವಾಗಿ ಅನೀಲಕುಮಾರ ತನ್ನ ಹೆಂಡತಿ ಮಗಳೊಂದಿಗೆ ಮನೆಯಿಂದ ತಮ್ಮ ಕಾರ ನಂ.ಕೆಎ 36 ಎಮ್‌/8059 ನೇದ್ದರಲ್ಲಿ ಹೋಗಿದ್ದು ಬೆಳಗ್ಗೆ 11:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಣ್ಣತಮ್ಮಕೀಯ ಅನೀಲಕುಮಾರ ಇತನ ಮೊಬೈಲದಿಂದ ಯಾರೋ ಫೋನ್‌ ಮಾಡಿ ತಿಳಿಸಿದ್ದೆನಮದರೆ, ಈಗ 11:15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಭಾರತೀಯ ವಿದ್ಯಾ ಮಂದಿರ ಹತ್ತಿರ ಕಾರ ನಂ. ಕೆಎ 36 ಎಮ್‌/8059 ನೇದ್ದರ ಚಾಲಕನು ತನ್ನ ಕಾರನ್ನು ಗುಲಬರ್ಗಾ ಕಡೆಯಿಂದ ಜೇವರ್ಗಿ ಕಡೆಗೆ ಅತೀವೆಗ ಮತ್ತು ಆಲಕ್ಷ್ಯತನದಿಂದ ನಡೆಯಿಕೊಂಡು ಬಂದು ಬಂದು  ರಸ್ತೆಯ ಬದಿಗೆ ಇದ್ದ ಗುಟದ ಕಲ್ಲುಗಳಿಗೆ ಡಿಕ್ಕಿ ಪಡಿಸಿದ್ದರಿಂದ ತನ್ನ ಆಯಾ ತಪ್ಪಿ ರಸ್ತೆಯ ಮೇಲೆ ತನ್ನ ಕಾರನ್ನು  ಪಲ್ಟಿ ಗೊಳಿಸಿರುತ್ತಾನೆ ಇದರಿಂದ ಕಾರಿನಲ್ಲಿದ್ದ  ಹೆಣ್ಣು ಮಗಳು ರಸ್ತೆಯ ಮೇಲೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ. ಕಾರಿನಲ್ಲಿದ್ದ ಒಬ್ಬ ಮನುಷ್ಯನಿಗೆ ಮತ್ತು ಒಂದು ಸಣ್ಣ ಹುಡಗಿಗೆ ಅಲ್ಲಲ್ಲಿ ತರಚೀದ ಗಾಯವಾಗಿರುತ್ತವೆ ಅಂತ ಆತಿಳಿಸಿದ್ದರಿಂದ ನಾನು ಗಾಬರಿಗೊಂಡು ಕೂಡಲೆ ಸದರಿ ಅಪಘಾತವದ ಸ್ಥಳಕ್ಕೆ ಬಂದು ನೋಡಲಾಗಿ  ಅನೀಲಕುಮಾರ ಹೆಂಡತಿ ಶಾರದಾ ಇವಳಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೆ ಅನೀಲಕುಮಾರನಿಗೆ ಮತ್ತು ಅವನ 3 ವರ್ಷದ ಮಗಳಾದ ಧಾರುಣಿ ಇವಳಿಗೆ ಅಲ್ಲಲ್ಲಿ ತರಚೀದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಶಾಮರಾವ ಧಾಕಲೆ, ಸಾಃ ದೇವಿ ನಗರ ಆಳಂದ ರೋಡ ಗುಲಬರ್ಗಾ ರವರು ದಿನಾಂಕ 26-06-2014 ರಂದು 5-00 ಪಿ.ಎಮ್ ಕ್ಕೆ ಆಳಂದ ರೋಡಿನಲ್ಲಿ ಇರುವ ಶೆಟ್ಟಿ ಕಾಂಪ್ಲೆಕ್ಸ ಎದರುಗಡೆ ರೊಡಿನ ಪಕ್ಕದಲ್ಲಿ ತನ್ನ ತಂದೆ ಶಾಮರಾವ ಇವರೊಂದಿಗೆ ನಿಂತಾಗ ಆರೋಪಿತನು ತನ್ನ ಯಮಾಹ ಮೋಟಾರ ಸೈಕಲ ನಂ. ಕೆ.ಎ 32 8127 ನೇದ್ದರ ಮೇಲೆ ಇನ್ನೊಬ್ಬನನ್ನು ಕೂಡಿಸಿಕೊಂಡು ಶಹಾಬಜಾರ ನಾಕಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಯಾದ ಶಾಮರಾವ ವಃ 75 ವರ್ಷ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದರಿಂದ ಮೋ.ಸೈ ಸೀರಿಜ ಸರಿಯಾಗಿ ನೋಡಲು ಆಗಿರುವುದಿಲ್ಲ. ತನ್ನ ತಂದೆಗೆ ಎಡಗಾಲು ಮೊಳಕಾಲಿಗೆ ಮತ್ತು ಬಲಗೈ ರಟ್ಟೆ, ಮೊಳಕೈ ಹತ್ತಿರ ಗುಪ್ತ ಪೆಟ್ಟು ತರುಚಿದ ಗಾಯಗಲಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರತಕುಮಾರ ಪೂಜಾರಿ  ಇವರು ದಿನಾಂಕ 27-06-14 ರಂದು 11.00 ಎಎಮ್ ಕ್ಕೆ ಜೆಎಮ್ಎಫ್ ಸಿ ಕೊರ್ಟ ಅಫಜಲಪೂರದ ವಕೀಲರ ಬಾರ ರೂಮನಲ್ಲಿ ತಮ್ಮ ಫರ್ಸನ್ನು ಇಟ್ಟಿದ್ದು ಯಾರೋ ಕಳ್ಳರು ಫರ್ಸನಲ್ಲಿದ್ದ 1500/- ರೂ, ಸ್ಟೇಟಬ್ಯಾಂಕ ಕಾರ್ಡ, ಸಿಂಡಿಕೇಟ ಬ್ಯಾಂಕ ಎ.ಟಿ.ಎಮ್. ಕಾರ್ಡ, ಆಧಾರ ಕಾರ್ಡ, ಪ್ಯಾನ ಕಾರ್ಡ ಇತರೆ ಐಡಿ ಕಾರ್ಡ ಇದ್ದ ಫರ್ಸ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಪುತ್ರ ತಂದೆ ವಿಠೋಬಾ ಸುಲ್ತಾನಪೂರ ಸಾ|| ಕರಜಗಿ ರವರು ಮತ್ತು ನಮ್ಮ ಗ್ರಾಮದ ಈರಯ್ಯ ಹಿರೇಮಠ, ಅಶೋಕ ಲೋಣಾರ ನಮ್ಮ ಮೂರು ಜನರ ಪಾಲುದಾರಿಕೆಯಲ್ಲಿ ನಮ್ಮ ಗ್ರಾಮದಲ್ಲಿ ಅಂದರೆ ಕರಜಗಿಯಿಂದ 1 ಕಿ ಮಿ ಅಂತರದಲ್ಲಿ ಅಫಜಲಪೂರ ರೋಡಿಗೆ ನಮ್ಮದು ದಾಬಾ ಇರುತ್ತದೆ. ಸದರಿ ದಾಬಾದಲ್ಲಿ ನಾವೆಲ್ಲರೂ ಹಾಗೂ ಶ್ರೀಶೈಲ ಮರಭೋದ ಎಲ್ಲರೂ ಕೆಲಸ ಮಾಡುತ್ತೆವೆ, ಹಿಗಿದ್ದು ನಿನ್ನೆ ದಿನಾಂಕ 26-06-2014 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಮೇಲೆ ತಿಳಿಸಿದ ನಾವು 4 ಜನರು ದಾಬಾ ಬಂದ ಮಾಡಿಕೊಂಡು ನಮ್ಮ ದಾಬಾದ ಮುಂದೆ ನಿಂತುಕೊಂಡಿದ್ದೆವು, ಅದೆ ಸಮಯಕ್ಕೆ ನಮ್ಮ ಗ್ರಾಮದ ಅಂಬಣ್ಣ ನರಗೋದಿ ಈತನು ನಮ್ಮ ಹತ್ತಿರ ಬಂದು ನನಗೆ ದಾಬಾದ ಬಾಗಿಲು ತಗಿ ನಾನು ಊಟ ಮಾಡಬೇಕು ಅಂತಾ ಅಂದನು. ಆಗ ನಾನು ಊಟ ಇಲ್ಲ ಎಲ್ಲಾ ಖಾಲಿ ಆಗಿದೆ ಅಂತಾ ಅಂದೆನು. ಅದಕ್ಕೆ ಅಂಬಣ್ಣ ನರಗೋದಿ ಈತನು ಸೂಳೆ ಮಗನೆ ನನಗೆ ಊಟ ಇಲ್ಲಾ ಅಂತಾ ಹೇಳುತ್ತಿಯಾ ಎಂದು ಕೈಯಿಂದ ನನ್ನ ಮುಖದ ಮೇಲೆ ಗುದ್ದಿನು, ಆಗ ನಾನು ಯಾಕ ಹೊಡೆಯುತ್ತಿ ಊಟ ಇದ್ದರೆ ಕೋಡುತ್ತಿದ್ದೆ ಅಂತಾ ಹೇಳಿದೆನು, ಅದಕ್ಕೆ ಅಂಬಣ್ಣ ಈತನು ಬೋಸಡಿ ಮಗನೆ ನೀನು ಊಟಾ ಇಟ್ಟುಕೊಂಡು ಇಲ್ಲ ಅಂತಾ ಹೇಳುತ್ತಿ ಎಂದು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ಏಡಗೈ ಬೇರಳಿನ ಮೇಲೆ ಹಾಗೂ ಬಲ ಬುಜಕ್ಕೆ ಹೊಡೆದು ಗಾಯಗೋಳಿಸಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 June 2014

Gulbarga District Reported Crimes

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗಾಯತ್ರಿ ಗಂಡ ಯದುತ್ತಮ್ ಅವಧಾನಿ ಸಾ;ಮನೆ ನಂ.1-891/24/6(ಬಿ)ಪ್ಲಾಟ ನಂ.33 ದತ್ತ ನಗರ ಎನ್.ಜಿ.. ಕಾಲೂನಿ ಜೇವರ್ಗಿ ರೋಡ ಗುಲಬರ್ಗಾರವರು ದಿನಾಂಕ.26-06-2014 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಬಿದ್ದಾಪೂರ ಕಾಲೂನಿ ರಾಯರ ಮಠದ ಹತ್ತಿರ ಕಾಮಾಕ್ಷಿ ಜಾಗೀರದಾರ ಇವರ ಮನೆಯ ಎದರುಗಡೆ ಕಾಮಾಕ್ಷಿಯವರ ಸಂಗಡ ಮಾತಾಡುತ್ತಾ ನಿಂತಿರುವಾಗ ಇಬ್ಬರು ಅಪರಿಚಿತ ಯುವಕರು ತಮ್ಮ ಕಪ್ಪು ಕಲರನ ಪಲ್ಸರ ಮೋಟಾರ ಸೈಕಲ ಮೇಲೆ ಒಮ್ಮಲೆ ಅವರ ಮೈಮೇಲೆ ಬಂದಂತೆ ಮಾಡಿ ಫಿರ್ಯಾದಿದಾರರ ಕೊರಳಲ್ಲಿದ್ದ  ಅಂದಾಜು 2 ತೊಲೆ ಬಂಗಾರದ  ಮಂಗಳಸೂತ್ರ ಮತ್ತು 1 ತೊಲೆ ಬಂಗಾರದ ಚೈನ ಒಟ್ಟು ಅಕಿ.84,000/-ರೂ ಬೆಲೆ ಬಾಳುವದನ್ನು ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 26.06.2014 ರಂದು ಬೆಳಿಗ್ಗೆ 6-35 ಗಂಟೆಯ ಸುಮಾರಿಗೆ ಮೃತ ಈರಣ್ಣ ಹಾಗೂ ಗಾಯಾಳು ಬಸವರಾಜ ಇವರು ತಮ್ಮ ಹೊಲಗಳಿಗೆ ಗಳ್ಯಾ ಹೊಡೆಯುವ ಸಂಬಂಧ ಎತ್ತಿನ ಬಂಡಿ ಕಟ್ಟಿ ಅದರೊಳಗೆ ಕುಳಿತುಕೊಂಡು ಹಿಂದೆ 2 ಎತ್ತುಗಳನ್ನು ಕಟ್ಟಿಕೊಂಡು ಪಟ್ಟಣದಿಂದ ತಮ್ಮ ಹೊಲಗಳಿಗೆ ಹೋಗುವಾಗ ನಿಂಗಣ್ಣ ದೂಳಗೊಂಡ ವರ ಹೊಲದ ಹತ್ತೀರ ರೋಡಿನ ಎಡಗಡೆಯಿಂದ ಇಂದ ಹೋಗುವಾಗ ಗುಲ್ಬರ್ಗಾ ಕಡೆಯಿಂದ ಹಿಂದಿನಿಂದ ಲಾರಿ ಟ್ಯಾಂಕರ್ ನಂ: ಎಂ.ಹೆಚ್-12-ಹೆಚ್ಡಿ-3524 ನೇದ್ದರ ಚಾಲಕನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಒಳಗೆ ಕುಳಿತ ಈರಣ್ಣನು ರೋಡಿನ ಮೇಲೆ ಬಿದ್ದಾಗ ಮೇಲಿನಿಂದ ಟ್ಯಾಂಕರ್ ಹಾಯ್ದು ಹೋಗಿದ್ದರಿಂದ ಕಣ್ಣೀನ ಗುಡ್ಡಿಗಳು ಹೊರಗೆ ಬಂದಿದ್ದು ಬಾಯಿ ನಾಲಿಗೆ ಹೊರಗೆ ಬಂದು ಹಾಗೂ ಹೋಟ್ಟೆಯ ಕರಳುಗಳು ಹೊರಗೆ ಬಂದು ಎರಡು ಕೈಕಾಲುಗಳಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಬಸವರಾಜನಿಗೆ ಬಲಗೈ ಮೊಳಕೈಗೆ , ತಲೆಗೆ , ಟೊಂಕಿಗೆ , ಭಾರಿ ಒಳಪೇಟ್ಟಾಗಿ ಬೆಹುಷನಾಗಿದ್ದು ಅಪಘಾತ ಪಡಿಸಿದ ನಂತರ ಟ್ಯಾಂಕರ್ ಚಾಲಕ  ಹೋಗಿರುತ್ತಾನೆ ಅಂತಾ ಶ್ರೀ ರೇವಣಸಿದ್ದಪ್ಪ ತಂದೆ ಕುಪ್ಪಣ್ಣ ಭೂಂಯಾರ  ಸಾ|| ಪಟ್ಟಣ ತಾ|| ಜಿ|| ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:-25/06/2014 ರಂದು ರಾತ್ರಿ 09:30 ಗಂಟೆ ಸುಮಾರಿಗೆ ಮೃತ ಇಮಾಮ ಸಾಬ ತಂದೆ ಮೌಲಾಸಾಬ ಮುಲ್ಲಾವಾಲೇ ಇತನು ತನ್ನ ಹಿರೋ ಹೊಂಡಾ ಪ್ಯಾಶನ ಮೋಟಾರ ಸೈಕಲ ನಂ ಕೆಎ-32 ವ್ಹಾ-4667 ನೇದ್ದರ ಮೇಲೆ ಗುಲಬರ್ಗಾ ದಿಂದ ತನ್ನೂರಾದ ಸಾವಳಗಿ ಗ್ರಾಮಕ್ಕೆ ಹೋಗುವ ಕುರಿತು ಕೇರಿ ಬೋಸಗಾ ಕ್ರಾಸ ಹತ್ತಿರ ರೋಡಿನ ಎಡಬದಿಯಿಂದ ನಿದಾನವಾಗಿ ಹೋಗುವಾಗ ಅದೇ ವೇಳೆಗೆ ಎದುರಗಡೆಯಿಂದ ಒಬ್ಬ ಟ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ್‌ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಇಮಾಮ್‌ ಸಾಬನಿಗೆ ಜೋರಾಗಿ  ಡಿಕ್ಕಿ ಹೊಡೆದಿದ್ದರಿಂದ್ದ ತಲೆಗೆ ಹುಬ್ಬಿಗೆ ಮುಖಕ್ಕೆ ಭಾರಿ  ರಕ್ತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಟ್ರ್ಯಾಂಕರ ಚಾಲಕನು ಟ್ರ್ಯಾಂಕರನ್ನು ಹಾಗೇಯ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ  ಶ್ರೀ ಭಾಷಾಮಿಯಾ ತಂದೆ ಮೌಲಾಸಾಬ ವಾಲೇ ಸಾ : ಸಾವಳಗಿ (ಬಿ) ತಾ: ಜಿ: ಗುಲಬರ್ಗಾ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸಾಯಲಿ ಗಂಡ ಪಾರ್ಶ್ವನಾಥ್ ಬೆಳಕೇರಿ  ಸಾಃ ಪ್ಲಾ.ನಂ. 11 ಅರಿಹಂತ ನಗರ, ಸೇಡಂ ರೋಡ್ ಗುಲಬರ್ಗಾ ಇವರು ದಿನಾಂಕ : 02-06-2014  ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಜಯನಗರದಲ್ಲಿರುವ ಫಿರ್ಯಾದಿದಾರರ ಸಂಬಂಧಿಕರಾದ ಪ್ರಕಾಶ ಜೈನ್ ಇವರ ಮನೆಯಲ್ಲಿ ಕಾರ್ಯಕ್ರಮವಿದ್ದ ಪ್ರಯುಕ್ತ ಫಿರ್ಯಾದಿದಾರರು ಮತ್ತು ಪದ್ಮಾವತಿ ಹಾಗೂ ಶೋಭಾ ಎಲ್ಲರು ಕೂಡಿಕೊಂಡು ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಎಲ್ಲರು ಬರುತ್ತಿರುವಾಗ ಜಯನಗರ ಕ್ರಾಸ್ ಹತ್ತಿರವಿರುವ ಸುಮನ್ ಡಿ.ಟಿ.ಪಿ ಜೆರಾಕ್ಸ್ ಅಂಗಡಿಯ ಮುಂದೆ ರೋಡಿನ ಮೇಲೆ ನಡೆದುಕೊಂಡು ಬರುತ್ತಿರುವಾಗ ಫಿರ್ಯಾದಿದಾರರ ಎದುರುಗಡೆಯಿಂದ ಅಂದರೆ, ಜಯನಗರ ಕ್ರಾಸದಿಂದ ಒಂದು ಮೋಟಾರ್ ಸೈಕಲ್ ಮೇಲೆ ಇಬ್ಬರು ಕೂಡಿಕೊಂಡು ಬಂದವರೆ ಫಿರ್ಯಾದಿದಾರರ ಕೊರಳಿಗೆ ಮೋಟಾರ್ ಸೈಕಲ್ ಮೇಲೆ ಹಿಂದೆ ಕುಳಿತವನು ಕೈ ಹಾಕಿ ಕೊರಳಲ್ಲಿದ್ದ 40 ಗ್ರಾಂ ಬಂಗಾರದ ಮಂಗಳ ಸೂತ್ರ ಅಃಕಿಃ 1,00,000/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಅದೆ ಮೋಟರ ಸೈಕಲ ಮೇಲೆ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ. ಸುಧಾಕರ ತಂದೆ ಪರಮೇಶ್ವರ ಕಂಬಾರ   ಸಾ: ಮುತ್ಯಾನ ಬಬಲಾದ (ಐ.ಕೆ )  ತಾ:ಜಿ: ಗುಲಬರ್ಗಾ ಇವರು ದಿನಾಂಕ: 25-06-2014 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಸಂಜುಕುಮಾರನು ನಮ್ಮ ಮನೆಗೆ ತನ್ನ ಮೋಟರ್ ಸೈಕಲನ್ನು ತೆಗೆದುಕೊಂಡು ಬಂದು ಕಮಲಾಪೂರದಲ್ಲಿ ಪಾಸಪೋರ್ಟ ಏಜೆಂಟಗೆ ಭೇಟಿಯಾಗಿ ಬರೋಣ ನಡೆ ಅಂತಾ ನನ್ನನ್ನು ತನ್ನ ಮೋಟರ್ ಸೈಕಲ ಮೇಲೆ ಕೂಡಿಸಿಕೊಂಡು ಹೊರಟಿದ್ದು, ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ನಾವು ಕಮಲಾಪೂರಕ್ಕೆ ಬಂದು ತಲುಪಿದೆವು. ಇಲ್ಲಿ ಪಾಸಪೋರ್ಟ ಏಜೆಂಟನಿಗಾಗಿ ಹುಡುಕಾ ಡಲಾಗಿ ಆತನು ಸಿಗಲಿಲ್ಲ. ಮತ್ತೆ ಸಂಜುಕುಮಾರನು ಮರಳಿ ಊರಿಗೆ ಹೋಗೋಣ ನಡೆ ಅಂತಾ ನನ್ನನ್ನು ತನ್ನ ಮೋಟರ್ ಸೈಕಲ ಮೇಲೆ ಕೂಡಿಸಿಕೊಂಡು ಸಂಜುಕುಮಾರನೇ ಮೋಟರ್ ಸೈಕಲ್ ಚಲಾಯಿಸಿಕೊಂಡು ಹುಮನಾಬಾದ - ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ಮುಖಾಂತರ ನಮ್ಮ ಗ್ರಾಮಕ್ಕೆ ಹೋಗುವಾಗ ಸಂಜುಕುಮಾರನು ತಾನು ಚಲಾಯಿಸುತ್ತಿದ್ದ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದು, ನಾನು ನಿಧಾನವಾಗಿ ಮೋಟರ್ ಸೈಕಲ್ ಚಲಾಯಿಸು ಅಂತಾ ಹೇಳಿದ್ದನ್ನು ಕೇಳದೇ ಹಾಗೇಯೇ ಮುಂದುವರೆಸಿಕೊಂಡು ಹೋಗಿ ನಾವದಗಿ ಸೇತುವೆ ಹತ್ತಿರ ಇರುವ ತಿರುವಿನಲ್ಲಿ ತನ್ನ ನಿಯಂತ್ರಣ ಕಳೆದುಕೊಂಡು ರೋಡಗಾರ್ಡ ಕಲ್ಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಆಗ ನಾವು ಮೋಟರ್ ಸೈಕಲದಿಂದ ಕೆಳಗೆ ಬಿದ್ದೆವು. ನನಗೆ ಮೈ-ಕೈಗಳಿಗೆ ತರಚಿದ ಗಾಯವಾಗಿದ್ದು, ಸಂಜುಕುಮಾರನಿಗೆ ತೆಲೆಗೆ, ಮೂಗಿಗೆ, ಬಾಯಿಗೆ ರಕ್ತಗಾಯವಾಗಿದ್ದು ಅಲ್ಲದೇ ಮತ್ತು ಬಲ ಕಪಾಳ ಹಾಗೂ ಬಲ ಮೆಲಕಿನ ಹತ್ತಿರ ತರಚಿದ ರಕ್ತಗಾಯಗಳಾಗಿ ಸಂಜುಕುಮಾರನು ಬೇಹೋಷ ಆಗಿದ್ದನು. ಆಗ ನಾವು ಮೋಟರ್ ಸೈಕಲ್ ನಂಬರ್ ನೋಡಲಾಗಿ ಅದು ಹಿರೋಹೊಂಡಾ ಮೋಟರ್ ಸೈಕಲ್ ನಂಬರ್ ; ಎಂ.ಹೆಚ್. 14 ಯು 4947 ನೇದ್ದು ಇದ್ದು ಜಖಂಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.