POLICE BHAVAN KALABURAGI

POLICE BHAVAN KALABURAGI

27 June 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ²æà ಶರಣಬಸಪ್ಪ ತಂದೆ ವೀರಭದ್ರಪ್ಪ ಕವಟಗಿ ಸಾ:ಮನೆ ನಂ. 2-911/5/2/9 ಅನು ಗೃಹ ಅಪ್ಪಾ ವಿಲ್ಸ ಎದುರುಗಡೆ ರಾಜಾಪೂರ ರೋಡ ಗುಲಬರ್ಗಾ ರವರ ಅಣ್ಣತಮ್ಮ ಕೀಯವರಾದ ಅನೀಲಕುಮಾರ ಕವಟಗಿ ಇವರು ಹಟ್ಟಿ ಚಿನ್ನದ ಗಣಿಯಲ್ಲಿ ಸುಪರವೈಸರ್‌ ಅಂತಾ ಕೆಲಸ ಮಾಡಿಕೊಂಡು ತಮ್ಮ ಕುಟುಂಬ ಸಮೇತ ರಾಯಚೂರ ಜಿಲ್ಲೆಯ ಲಿಂಗಸೂರ ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ವಾಸವಾಗಿರುತ್ತಾರೆ. ದಿನಾಂಕ: 25-06-2014 ರಂದು ಸಾಯಂಕಾಲ 5 ಗುಲಬರ್ಗಾಕ್ಕೆ  ತಮ್ಮ ಕಾರ ನಂ.ಕೆಎ 36 ಎಮ್/8059 ನೇದ್ದರಲ್ಲಿ ಗುಲಬರ್ಗಾಕ್ಕೆ ಬಂದಿದ್ದು  ದಿನಾಂಕ: 26-06-2014 ರಂದು ಬೆಳಗ್ಗೆ 10:30 ಗಂಟೆಯ ಸುಮಾರಿಗೆ ಹಟ್ಟಿಗೆ ಹೋಗುವ ಸಲುವಾಗಿ ಅನೀಲಕುಮಾರ ತನ್ನ ಹೆಂಡತಿ ಮಗಳೊಂದಿಗೆ ಮನೆಯಿಂದ ತಮ್ಮ ಕಾರ ನಂ.ಕೆಎ 36 ಎಮ್‌/8059 ನೇದ್ದರಲ್ಲಿ ಹೋಗಿದ್ದು ಬೆಳಗ್ಗೆ 11:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಣ್ಣತಮ್ಮಕೀಯ ಅನೀಲಕುಮಾರ ಇತನ ಮೊಬೈಲದಿಂದ ಯಾರೋ ಫೋನ್‌ ಮಾಡಿ ತಿಳಿಸಿದ್ದೆನಮದರೆ, ಈಗ 11:15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಭಾರತೀಯ ವಿದ್ಯಾ ಮಂದಿರ ಹತ್ತಿರ ಕಾರ ನಂ. ಕೆಎ 36 ಎಮ್‌/8059 ನೇದ್ದರ ಚಾಲಕನು ತನ್ನ ಕಾರನ್ನು ಗುಲಬರ್ಗಾ ಕಡೆಯಿಂದ ಜೇವರ್ಗಿ ಕಡೆಗೆ ಅತೀವೆಗ ಮತ್ತು ಆಲಕ್ಷ್ಯತನದಿಂದ ನಡೆಯಿಕೊಂಡು ಬಂದು ಬಂದು  ರಸ್ತೆಯ ಬದಿಗೆ ಇದ್ದ ಗುಟದ ಕಲ್ಲುಗಳಿಗೆ ಡಿಕ್ಕಿ ಪಡಿಸಿದ್ದರಿಂದ ತನ್ನ ಆಯಾ ತಪ್ಪಿ ರಸ್ತೆಯ ಮೇಲೆ ತನ್ನ ಕಾರನ್ನು  ಪಲ್ಟಿ ಗೊಳಿಸಿರುತ್ತಾನೆ ಇದರಿಂದ ಕಾರಿನಲ್ಲಿದ್ದ  ಹೆಣ್ಣು ಮಗಳು ರಸ್ತೆಯ ಮೇಲೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ. ಕಾರಿನಲ್ಲಿದ್ದ ಒಬ್ಬ ಮನುಷ್ಯನಿಗೆ ಮತ್ತು ಒಂದು ಸಣ್ಣ ಹುಡಗಿಗೆ ಅಲ್ಲಲ್ಲಿ ತರಚೀದ ಗಾಯವಾಗಿರುತ್ತವೆ ಅಂತ ಆತಿಳಿಸಿದ್ದರಿಂದ ನಾನು ಗಾಬರಿಗೊಂಡು ಕೂಡಲೆ ಸದರಿ ಅಪಘಾತವದ ಸ್ಥಳಕ್ಕೆ ಬಂದು ನೋಡಲಾಗಿ  ಅನೀಲಕುಮಾರ ಹೆಂಡತಿ ಶಾರದಾ ಇವಳಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೆ ಅನೀಲಕುಮಾರನಿಗೆ ಮತ್ತು ಅವನ 3 ವರ್ಷದ ಮಗಳಾದ ಧಾರುಣಿ ಇವಳಿಗೆ ಅಲ್ಲಲ್ಲಿ ತರಚೀದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಶಾಮರಾವ ಧಾಕಲೆ, ಸಾಃ ದೇವಿ ನಗರ ಆಳಂದ ರೋಡ ಗುಲಬರ್ಗಾ ರವರು ದಿನಾಂಕ 26-06-2014 ರಂದು 5-00 ಪಿ.ಎಮ್ ಕ್ಕೆ ಆಳಂದ ರೋಡಿನಲ್ಲಿ ಇರುವ ಶೆಟ್ಟಿ ಕಾಂಪ್ಲೆಕ್ಸ ಎದರುಗಡೆ ರೊಡಿನ ಪಕ್ಕದಲ್ಲಿ ತನ್ನ ತಂದೆ ಶಾಮರಾವ ಇವರೊಂದಿಗೆ ನಿಂತಾಗ ಆರೋಪಿತನು ತನ್ನ ಯಮಾಹ ಮೋಟಾರ ಸೈಕಲ ನಂ. ಕೆ.ಎ 32 8127 ನೇದ್ದರ ಮೇಲೆ ಇನ್ನೊಬ್ಬನನ್ನು ಕೂಡಿಸಿಕೊಂಡು ಶಹಾಬಜಾರ ನಾಕಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಯಾದ ಶಾಮರಾವ ವಃ 75 ವರ್ಷ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದರಿಂದ ಮೋ.ಸೈ ಸೀರಿಜ ಸರಿಯಾಗಿ ನೋಡಲು ಆಗಿರುವುದಿಲ್ಲ. ತನ್ನ ತಂದೆಗೆ ಎಡಗಾಲು ಮೊಳಕಾಲಿಗೆ ಮತ್ತು ಬಲಗೈ ರಟ್ಟೆ, ಮೊಳಕೈ ಹತ್ತಿರ ಗುಪ್ತ ಪೆಟ್ಟು ತರುಚಿದ ಗಾಯಗಲಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರತಕುಮಾರ ಪೂಜಾರಿ  ಇವರು ದಿನಾಂಕ 27-06-14 ರಂದು 11.00 ಎಎಮ್ ಕ್ಕೆ ಜೆಎಮ್ಎಫ್ ಸಿ ಕೊರ್ಟ ಅಫಜಲಪೂರದ ವಕೀಲರ ಬಾರ ರೂಮನಲ್ಲಿ ತಮ್ಮ ಫರ್ಸನ್ನು ಇಟ್ಟಿದ್ದು ಯಾರೋ ಕಳ್ಳರು ಫರ್ಸನಲ್ಲಿದ್ದ 1500/- ರೂ, ಸ್ಟೇಟಬ್ಯಾಂಕ ಕಾರ್ಡ, ಸಿಂಡಿಕೇಟ ಬ್ಯಾಂಕ ಎ.ಟಿ.ಎಮ್. ಕಾರ್ಡ, ಆಧಾರ ಕಾರ್ಡ, ಪ್ಯಾನ ಕಾರ್ಡ ಇತರೆ ಐಡಿ ಕಾರ್ಡ ಇದ್ದ ಫರ್ಸ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಪುತ್ರ ತಂದೆ ವಿಠೋಬಾ ಸುಲ್ತಾನಪೂರ ಸಾ|| ಕರಜಗಿ ರವರು ಮತ್ತು ನಮ್ಮ ಗ್ರಾಮದ ಈರಯ್ಯ ಹಿರೇಮಠ, ಅಶೋಕ ಲೋಣಾರ ನಮ್ಮ ಮೂರು ಜನರ ಪಾಲುದಾರಿಕೆಯಲ್ಲಿ ನಮ್ಮ ಗ್ರಾಮದಲ್ಲಿ ಅಂದರೆ ಕರಜಗಿಯಿಂದ 1 ಕಿ ಮಿ ಅಂತರದಲ್ಲಿ ಅಫಜಲಪೂರ ರೋಡಿಗೆ ನಮ್ಮದು ದಾಬಾ ಇರುತ್ತದೆ. ಸದರಿ ದಾಬಾದಲ್ಲಿ ನಾವೆಲ್ಲರೂ ಹಾಗೂ ಶ್ರೀಶೈಲ ಮರಭೋದ ಎಲ್ಲರೂ ಕೆಲಸ ಮಾಡುತ್ತೆವೆ, ಹಿಗಿದ್ದು ನಿನ್ನೆ ದಿನಾಂಕ 26-06-2014 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಮೇಲೆ ತಿಳಿಸಿದ ನಾವು 4 ಜನರು ದಾಬಾ ಬಂದ ಮಾಡಿಕೊಂಡು ನಮ್ಮ ದಾಬಾದ ಮುಂದೆ ನಿಂತುಕೊಂಡಿದ್ದೆವು, ಅದೆ ಸಮಯಕ್ಕೆ ನಮ್ಮ ಗ್ರಾಮದ ಅಂಬಣ್ಣ ನರಗೋದಿ ಈತನು ನಮ್ಮ ಹತ್ತಿರ ಬಂದು ನನಗೆ ದಾಬಾದ ಬಾಗಿಲು ತಗಿ ನಾನು ಊಟ ಮಾಡಬೇಕು ಅಂತಾ ಅಂದನು. ಆಗ ನಾನು ಊಟ ಇಲ್ಲ ಎಲ್ಲಾ ಖಾಲಿ ಆಗಿದೆ ಅಂತಾ ಅಂದೆನು. ಅದಕ್ಕೆ ಅಂಬಣ್ಣ ನರಗೋದಿ ಈತನು ಸೂಳೆ ಮಗನೆ ನನಗೆ ಊಟ ಇಲ್ಲಾ ಅಂತಾ ಹೇಳುತ್ತಿಯಾ ಎಂದು ಕೈಯಿಂದ ನನ್ನ ಮುಖದ ಮೇಲೆ ಗುದ್ದಿನು, ಆಗ ನಾನು ಯಾಕ ಹೊಡೆಯುತ್ತಿ ಊಟ ಇದ್ದರೆ ಕೋಡುತ್ತಿದ್ದೆ ಅಂತಾ ಹೇಳಿದೆನು, ಅದಕ್ಕೆ ಅಂಬಣ್ಣ ಈತನು ಬೋಸಡಿ ಮಗನೆ ನೀನು ಊಟಾ ಇಟ್ಟುಕೊಂಡು ಇಲ್ಲ ಅಂತಾ ಹೇಳುತ್ತಿ ಎಂದು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ಏಡಗೈ ಬೇರಳಿನ ಮೇಲೆ ಹಾಗೂ ಬಲ ಬುಜಕ್ಕೆ ಹೊಡೆದು ಗಾಯಗೋಳಿಸಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: