POLICE BHAVAN KALABURAGI

POLICE BHAVAN KALABURAGI

02 May 2014

GULBARGA DIST REPORTED CRIMES

ಆಕಸ್ಮಿಕ ಬೆಂಕಿ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ: 01.05.2014 ರಂದು ಶ್ರೀ ಅಪ್ಪಾಸಾಬ ತಂದೆ ಮಲ್ಲಿಕಾರ್ಜುನ ಹುಗ್ಗಿ ಸಾ: ಹಳೆ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ 30.04.14 ರಂದು ರಾತ್ರಿ 9.30 ಪಿ.ಎಮ್.ಕ್ಕೆ ನಾನು ಅಡತಿ ಮುಚ್ಚಿಕೊಂಡು ಮನೆಗೆ ಹೋಗಿದ್ದು. ದಿ:01.05.2014 ರಂದು ಬೆಳಿಗ್ಗೆ 8.30 ಎ.ಎಮ್.ಸುಮಾರಿಗೆ ನನ್ನ ಅಡತಿಗೆ ಬೆಂಕಿಹತ್ತಿ ಕಡಲೆತೊಗರಿಯಚೀಲಗಳು & ಖಾಲಿ ಚೀಲಗಳು ಸುಟ್ಟಿದ್ದು. ಈ ಬಗ್ಗೆ ಚಿತ್ತಾಪೂರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ತಿಳಿಸಿ.  ಬೆಂಕಿ ಹತ್ತಿದ್ದರಿಂದ ಅಡತಿಯಲ್ಲಿದ್ದ 3000/- ಬೆಲೆಯ ಖಾಲಿ ಚೀಲಗಳು,  2) ಕಡಲಕೆ ಕಾಳು ತುಂಬಿದ್ದ  20 ಚೀಲಗಳು, 3) ತೊಗರೆ ತುಂಬಿದ ಚೀಲಗಳು ಹಾಗು ಅಡಿಯಲ್ಲಿದ್ದ 2008 ರಿಂದ 2013 ನೇ ಸಾಲಿನ ಅಡತಿಯ & ನನ್ನ ಹೆಸರಿನಲ್ಲಿದ್ದ ಅಣವೀಭದ್ರೇಶ್ವರ ದಾಲಮಿಲ್ ಹಾಗೂ ಶ್ರೀ ವಿಶ್ವನಾಥ ದಾಲ ಮಿಲ್ ದಾಖಲಾತಿಗಳು ಸುಟ್ಟಿದ್ದು.  ಒಟ್ಟು ಅ.ಕಿ. 3,90,000/-ರೂ ಸುಟ್ಟು ಲುಕ್ಸಾನ ಆಗಿರುತ್ತದೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಮಹಾಗಾಂವ ಪೊಲೀಸ್ ಠಾಣೆ : ಶ್ರೀ ಅನೀಲಕುಮಾರ ತಂದೆ ಮಹಾರುದ್ರಪ್ಪ ನಿಗ್ಗಡುಗಿ ಸಾ|| ಭೀಮನಾಳ ರವರು ಠಾಣೆಗೆ ಹಾಜರಾಗಿ ದಿನಾಂಕ 01-05-2014 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ತಮ್ಮ ಸೋದರ ಮಾವ ಹಣಮಂತರಾಯ ತಂದೆ ಶಿವಶರಣಪ್ಪ ಬಿರಾದಾರ ಮತ್ತು ಮೌನೇಶ್ವರ ತಂದೆ ಅಣ್ಣೇಪ್ಪ ಚೆಂದಿ ಇವರಿಬ್ಬರಿಗೆ ನಾವದಗಿ ಗ್ರಾಮದ ಹತ್ತೀರ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾವದಗಿ ಗ್ರಾಮಕ್ಕೆ ಹೋಗಿ ನೋಡಲಾಗಿ ಹಣಮಂತರಾಯ ಬಿರಾದಾರರಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ಮತ್ತು ಬಲಕಿವಿಯಿಂದ ರಕ್ತ ಸೋರಿ ಮೃತ ಪಟ್ಟಿದ್ದು , ಮೌನೇಶ್ವರ ಚೆಂದಿ ಈತನಿಗೆ ತಲೆಗೆ ರಕ್ತಗಾಯ ಮತ್ತು ಭಾರಿ ಗುಪ್ತ ಗಾಯವಾಗಿ ಎಡ ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿ ಮೃತ ಪಟ್ಟಿದ್ದು , ಲ್ಲಿದ ಸಾರ್ವಜನಿಕರಿಗೆ ವಿಚಾರಿಸಲಾಗಿ ಮೌನೇಶ್ವರನು ಹಿರೋ ಮೇಲೆ ಹಣಮಂತರಾಯನಿಗೆ ಹಿಂದೆ ಕೂಡಿಸಿಕೊಂಡು ಗುಲ್ಬರ್ಗಾ ಕಡೆಯಿಂದ ಕಮಲಾಪೂರ ಕಡೆಗೆ ಹೋಗುತ್ತಿರುವಾಗ ಹುಮ್ನಾಬಾದ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣದ ಟವೇರಾ ನಂ: ಕೆಎ-25-ಎನ್-5919 ನೇದ್ದರ ಚಾಲಕನು ಅತಿ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸುತ್ತಾ ಬಂದು ಮೌನೇಶ್ವರ ನಡೆಸುತ್ತಿದ್ದ ಮೊ.ಸೈ,ಗೆ ಅಪಘಾತಪಡಿಸಿದ್ದರಿಂದ ಮೌನೇಶ್ವರ ಮತ್ತು ಹಣಮಂತರಾಯ ಇಬ್ಬರೂ ರೋಡಿನ ಮೇಲೆ ಬಿದ್ದು ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಸತ್ತಿರುತ್ತಾರೆ ಅಂತಾ ತಿಳಿಸಿದ್ದು. ಅಪಘಾತಪಡಿಸಿದ ನಂತರ ತವೇರಾ ಚಾಲಕ ಗಾಡಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದು. ಟವೇರಾ ಕಾರ್ ಕೆಎ-25-ಎನ್-5919 ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

01 May 2014

GULBARGA DIST REPORTED CRIMES

¥ÀwæPÁ ¥ÀæPÀluÉ


         UÀÄ®§UÁð £ÀUÀgÀzÀ°è ªÉÄðAzÀ ªÉÄÃ¯É WÉÆÃgÀ ¥ÀæPÀgÀtUÀ¼ÀÄ ªÀgÀ¢ DUÀÄwÛzÀÝjAzÀ ªÀÄvÀÄÛ PÁ£ÀÆ£ÀÄ ¸ÀĪÀåªÀ¸ÉÜ PÁ¥ÁqÀĪÀ zÀȶ֬ÄAzÀ ²æÃ ¸À«±ÀAPÀgÀ £ÁAiÀÄPÀ r.J¸À.¦ (J) G¥À-«¨sÁUÀ UÀÄ®§UÁð, ²æÃªÀÄw «dAiÀÄ®Qëöä ¦.L gÀªÀgÀÄ ªÀÄÄ£ÉßZÀÑjPÉ PÀæªÀÄ PÀÄjvÀÄ C±ÉÆÃPÀ £ÀUÀgÀ ¥ÉưøÀ oÁuÉAiÀÄ MlÄÖ 20 d£À gËr d£ÀjUÉ »rzÀÄ vÀºÀ¹Ã¯ÁÝgÀgÀÄ ºÁUÀÆ vÁ®ÆèPÁ zÀAqÁ¢üPÁjAiÀĪÀgÀ ªÀÄÄAzÉ ºÁdgÀÄ ¥Àr¹ ¸À£ÀßqÀvÉUÁV ¨ÁAqÀ NªÀgÀ ªÀiÁr¸À¯ÁVzÉ
ಅಪಘಾತ ಪ್ರಕರಣ:
ಮಾದನ ಹಿಪ್ಪರತಾ ಠಾಣೆ: ದಿ: 25-04-2014 ರಂದು ಶ್ರೀ ನಾಗೇಶ ತಂ. ಹಣಮಂತರಾಯ ಕಲಶೆಟ್ಟಿ ಸಾ: ಬೋಳೆವಾಡ ರವರು ದೂರು ಸಲ್ಲಿಸಿದ್ದೇನೆಂದರೆ ದಿ: 24-04-2014 ರಂದು ತಾತ್ರಿ 09-30 ಗಂಟೆ ಸುಮಾರಿಗೆ ಹೊರೋಳ್ಳಿ ದೇಶಮುಖ ರವರ ಹೊಲದ ಹತ್ತಿರ ಲಾರಿ ನಂ ಕೆಎ25/ಸಿ492 ನೇದ್ದರ ಚಾಲಕ ಆತ್ಮರಾಮ ತಂ ಮಲ್ಲಿಕಾರ್ಜುನ ಬೆಳಮಗಿ ತನ್ನ ಲಾರಿಯನ್ನು ಅತಿವೇಗ ಮತ್ತು ನಿಶ್ಕಾಳಜಿತನದಿಂದ ಚಲಾಯಿಸಿ ನನ್ನ ಸಹೋದರ ಅನಿಲ @ ಅಣ್ಣಪ್ಪನಿಗೆ ಅಪಘಾತಪಡಿಸಿದ್ದು. ನನ್ನ ಸಹೋದರನಿಗೆ ಗುಲಬರ್ಗಾದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತ ಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ;
ಫರಹತಾಬಾದ ಠಾಣೆ: ದಿನಾಂಕ: 27/04/2014 ರಂದು   ಶ್ರೀ ಶರಣಪ್ಪಾ ತಂದೆ ಭೀಮಣ್ಣಾ ಪವಾರ ಸಾ|| ಫರಹತಾಬಾದ ರವರು ಶ್ರೀ ಶರಣಬಸವೇಶ್ವ ಜಾತ್ರಾ ಸ್ಥಳದಲ್ಲಿ ಶರಣಪ್ಪಾ ತಂದೆ ಮರೇಪ್ಪಾ ಹಾಗೂ ಆತನ ಸ್ನೇಹಿತರು ಮತ್ತು ಆತನ ಚಿಕ್ಕಪ್ಪನಾದ ನಾಗಪ್ಪಾ. ಚಂದ್ರು ಇವರೆಲ್ಲರು ಸೇರಿಕೊಂಡು ಶ್ರೀ ಶರಣಪ್ಪನಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದಲ್ಲದೆ ಚಾಕು ತಗೆದುಕೊಂಡು ನನ್ನ ಎರಡು ಕೈಗಳಿಗೆ ಹರಿದು ಮುಷ್ಟಿಗಾತ್ರಗಳಿಂದ ಹೊಟ್ಟೆಗೆ ಹೋಡೆದು ಜಿವ ಬೆದರಿಕೆ ಹಾಕಿದ್ದು ಅವರಿಂದ ತಪ್ಪಿಸಿಕೊಂಡು ಗುಲಬರ್ಗಾದ ಸರ್ಕಾರಿ ಆಸ್ಪತ್ರೆ ಬಂದು ಪ್ರಥಮ ಚಿಕಿತ್ಸೆಗಾಗಿ ಸೆರ್ಪಡೆಗೊಂಡು ಉಪಚಾರ ಪಡೆಯುತ್ತಿರುವ ಬಗ್ಗೆ ಸಲ್ಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಆಪಾದಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಠಾಣೆ: ದಿನಾಂಕ:27/4/2014 ರಂದು ಶ್ರೀ ±ÀgÀt§¸ÀÄì vÀAzÉ ªÀÄgÉ¥Áà  ಸಾ:¥sÀgÀºÀvÁ¨ÁzÀ ರವರು ಶರಣಬಸವೇಶ್ವರ ಗುಡಿಯ ಮುಂದೆ ಅಂಗಳದಲ್ಲಿ ನಿಂತು ಕೊಂಡಾಗ ಅದೇ ಗ್ರಾಮದ  1) ಶಂಕರ ತಂದೆ ಭಿಮಣ್ಣ ಪವಾರ 2) ಶರಣಬಸು ತಂದೆ ಭೀಮಣ್ಣ ಪವಾರ ಮತ್ತು ಅವರ ಅಣ್ಣ ತಮ್ಮಕೀಯ 3) ರಂಗಪ್ಪ ಪವಾರ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ವಿನಾ ಕಾರಣವಾಗಿ ನಮ್ಮ ತಂಗಿಗೆ ಚುಡಯಿಸ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಶಂಕರನು ಕೈ ಮುಸ್ಠಿ ಮಾಡಿ ನನಗೆ ಎಡಗಡೆಯ ಕಣ್ಣಿನ ಮೇಲೆ ಹೊಡೆದನು. ಶರಣಬಸು ತನ್ನ ಕೈಯಲ್ಲಿಂದ ಬ್ಲೇಡಿನಿಂದ ನನ್ನ ಎರಡು ಕೈಗಳ  ಮೇಲೆ ಕೊಯ್ದು ರಕ್ತಗಾಯ ಮಾಡಿರುತ್ತಾನೆ. ರಂಗಪ್ಪ ಇತನು ಕಾಲಿನಿಂದ ಒದ್ದಿರುತ್ತಾನೆ. ನಂತರ ಅಲ್ಲೆ ಇದ್ದ ನಮ್ಮೂರಿನ ಯಲ್ಲಪ್ಪ ಹಾಗರಗಿಬಸವರಾಜ ಕವಲಗಿ ಇವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ನಮ್ಮ ತಂದೆ ಮರೆಪ್ಪ ಮತ್ತು ಯಂಕಪ್ಪ ಬಳವಾಡ ಬಂದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಅವಾಚ್ಯವಾಗಿ ಬೈದು  ಹೊಡೆಬಡೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಠಾಣೆ:  ದಿನಾಂಕ:30/04/2014 ರಂದು ಶ್ರೀ ಹಣಮಂತ ತಂದೆ ಹುಣಚಪ್ಪಾ ನಾಟಿಕಾರ ಸಾ: ಖಣದಾಳ ಠಾಣೆಗೆ ಹಾಜರಾ ನಮ್ಮೂರಿನ ಶುಬ್ಬಣ್ಣಾ ನಾಟೀಕಾರ ಇವರು 20 ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆ ಇದ್ದು.  ಸುಬ್ಬಣ್ಣಾ ಮತ್ತು ಅವರ ಅಣ್ಣ ತಮ್ಮಂದಿರಾದ ಮಲ್ಲಿನಾಥ ಇವರ ನಡುವೆ ಮನೆಯ ಸಲುವಾಗಿ ಮತ್ತು ಹೋಲದಲ್ಲಿ ಕಟ್ಟಿಗೆ ಸುಟ್ಟಿದರ ಸಂಬಂಧ ಆಗಾಗ ಜಗಳ ಆಗುತ್ತಿದ್ದು. ದಿನಾಂಕ: 29/04/2014 ರಂದು ಸುಬ್ಬಣ್ಣನ ತಮ್ಮನಾದ ಮಲ್ಲಿನಾಥನು ನಮ್ಮ ಮನೆಯಲ್ಲಿ ಬಂದು ಸುಬ್ಬಣ್ಣನೊಂದಿಗೆ ಜಗಳ ಆಡುತ್ತಿದ್ದಾಗ ನಾನು ನಮ್ಮ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ ನಿಮ್ಮಿದು ಏನೆ ಜಗಳ ಇದ್ದರೊ ನಿವು ಹೋರಗೆ ಹೋಗಿ ಜಗಳವಾಡಿ ಎಂದು ಹೇಳಿದ್ದಕ್ಕೆ.  ನಾನು ಪಂಚಾಯತ ಎದುರಗಡೆ ನಿಂತಾಗ ಮಲ್ಲಿನಾಥನು ಕೋಡಲಿ ತಗೆದುಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಮ್ಮ ಅಣ್ಣತಮ್ಮರ ಜಗಳದಾಗ ನಿ ಏನು ಹೇಳುತ್ತಿ ಎನ್ನುತ್ತಾ ಕೈಗಳ ಮೇಲೆ ಹೋಡೆದು ರಕ್ತ ಗಾಯ ಮಾಡಿದ್ದು. ಅವರ ತಮ್ಮನಾದ ಗುರಪ್ಪಾ ಮತ್ತು ಶಿವಪ್ಪಾ ಜಗಳ ಬಿಡಿಸಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾ ಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

30 April 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-29/04/2014 ರಂದು ರಾತ್ರಿ 08:15 ಗಂಟೆ ಸುಮಾರಿಗೆ ಮೃತ ಜಗದೀಶ ತಂದೆ ಸಿದ್ದಣ್ಣಾ ಜಾನೆ ಇತನು ತನ್ನ ಟಾಟಾ ಇಂಡಿಕಾ ಕಾರ ನಂ ಕೆ.ಎ-32 ಬಿ-4436 ನೇದ್ದರಲ್ಲಿ ತನ್ನ ಹೆಂಡತಿ ನಿಲಾವತಿ ಹಾಗು ಸಂಬಂದಿಕರಾದ ನಿಂಬೆಮ್ಮಾ ಗಂಡ ನಂದನಗೌಡ ಪಾಟೀಲ. ಹಾಗು ಪೂರ್ಣಿಮಾ ತಂದೆ ಶಂಭುಲಿಂಗ ಬಾಬಜಿ ಇವರಿಗೆ ಕೂಡಿಸಿಕೊಂಡು ಗುಲಬರ್ಗಾದಿಂದ ಮುನ್ನಳ್ಳಿಗೆ ದೇವರ ಜಾತ್ರೆ ಕುರಿತು ಹೋಗುವಾಗ ಗುಲಬರ್ಗಾದ ಹೈಕೊರ್ಟ ಹತ್ತಿರ ಇರುವ ಗುಲಬರ್ಗಾ-ಅಫಜಲಪುರ ಕ್ರಾಸಿನಲ್ಲಿ ನಿದಾನವಾಗಿ ಹೋಗುವಾಗ ಎದುರಗಡೆಯಿಂದ ಕೆ.ಎಸ್.ಆರ್.ಸಿ ಬಸ ನಂ ಕೆ.ಎ-34 ಎಪ್-1017 ನೇದ್ದರ ಚಾಲಕನು ತನ್ನ ಬಸನ್ನು ಅತೀವೇಗ ಮತ್ತು ನಿಕ್ಷಾಜಿತನದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಜಗದೀಶ ಇತನಿಗೆ ತಲೆಗೆ.ಹಣೆಗೆ ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು. ಪೂರ್ಣಿಮಾ ಇವಳಿಗೆ ಮುಖಕ್ಕೆ ಎರಡು ಕಾಲುಗಳಿಗೆ ಹಾಗು ಎರಡು ಕೈಗಳಿಗೆ ಬಲ ಮೆಲಕಿಗೆ, ತಲೆಗೆ, ತುಟಿಗೆ ಇತರೇ ಭಾಗಕ್ಕೆ ಭಾರಿ ಗಾಯವಾಗಿ ಉಪಚಾರ ಪಡೆಯುತ್ತಾ ಬಸವೇಶ್ವರ ಆಸ್ಪತ್ರೆಯಲ್ಲಿ ರಾತ್ರಿ 11:30 ಗಂಟೆಗೆ ಮೃತ ಪಟ್ಟಿದ್ದು ಹಾಗು ನೀಲಾವತಿ ಮತ್ತು ನಿಂಬೆಮ್ಮಾ ಇವರಿಗೆ ಭಾರಿ ರಕ್ತಗಾಯಗಳಾಗಿ ಉಪಚಾರ ಪಡೆಯುತ್ತಿದ್ದು ಅಪಘಾತ ಪಡಿಸಿದ ನಂತರ ಬಸ ಚಾಲಕ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಸಿದ್ದಣ್ಣಾ ತಂದೆ ಬಸಣ್ಣಾ ಜಾನೆ ಸಾ:ಮುನ್ನಳ್ಳಿ ತಾ:ಆಳಂದ ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 28-04-14 ರಂದು ಸಂಜೆ 7-00 ಗಂಟೆ ಸುಮಾರಿಗೆ ಶ್ರೀಮತಿ ಶಾಹೀನಾಬೀ ಗಂಡ ಖುರ್ಷಿದ ಅಲಿ ಚಿಂಚೋಳಿ ಸಾ:ಹರಕಂಚಿ ಗ್ರಾಮ ರವರು ಮತ್ತು  ತಮ್ಮ ಮಹೆಬೂಬ ಇಬ್ಬರು ತನ್ನ ಗಂಡನ ಮನೆಯ ಅಂಗಳದಲ್ಲಿ ಇದ್ದಾಗ ಖುರ್ಷಿದ ಅಲಿ ತಂದೆ ಬಾಬರಮಿಯ್ಯಾ ಚಿಂಚೋಳಿ ಸಾ: ಹರಕಂಚಿ ಗ್ರಾಮು ಇವನು ಕುಡಿದ ಅಮಲಿನಲ್ಲಿ ಫಿರ್ಯಾದಿದಾರಳಿಗೆ ಅವಾಚ್ಯ ಬೈದು ನಿನ್ನ ತಮ್ಮನ ಜೊತೆ ಅನೈತಿಕ ಸಂಬಂಧಕೊಟ್ಟಿದ್ದೀ ಅದಕ್ಕೆ ಕರೆಯಲಿಕ್ಕೆ ಬಂದಿದ್ದಾನೆ ಅನ್ನುತ್ತಾ ಕೈಯಿಂದ ಕುತ್ತಿಗೆ, ಬೆನ್ನ ಮೇಲೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂದನೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ದಿನಾಂಕ 27-04-2014 ರಿಂದ ಇದುವರೆಗೆ ಕನ್ನಡ ನ್ಯೂಸ್ ಚಾನಲ್‌ಗಳಲ್ಲಿ (ಸಯಮ ನ್ಯೂಸ್, ಪಬ್ಲಿಕ ಟಿ.ವಿ, ಸುವರ್ಣ ನ್ಯೂಸ್, ಟಿ.ವಿ 9, ರಾಜ್ ನ್ಯೂಸ್) ಯೋಗ ಗುರು ಬಾಬಾ ರಾಮದೇವ ದಲಿತರ ಬಗ್ಗೆ ಅತ್ಯಂತ ಕೀಳು ಮಟ್ಟದಿಂದ ಮಾತನಾಡಿದ್ದು ಮತ್ತು ದಲಿತರ ಹೆಣ್ಣು ಮಕ್ಕಳಿಗೆ ಮಾಡಿದ ಅಪಮಾನ ಜನಕ, ನಿಂದಾತ್ಮಕ ಮಾತುಗಳು ನಮಗೆ ಅತ್ಯಂತ ಖೇದ ಮತ್ತು ದುಖಃವಾಗಿದ್ದು, ಪ್ರಜಾ ಪ್ರಭುತ್ವ ವ್ಯವಸ್ಧೆಯಲ್ಲಿ ಏನು ಬೇಕಾದರು ಮಾಡಬಹುದು, ಯಾರನ್ನಾದ್ರೂ ಅಪಮಾನ ಮಾಡಬಹುದು ಎಂಬಂಥ ಮಾನಸಿಕ ಸ್ಧಿತಿಯ ಬಾಬಾ ರಾಮ್ ವೇವನಂಥವರಿಂದ ಸಮಾಜದ ಶಾಂತಿಗೆ ಭಂಗ ಬಂದಿದ್ದು ರಾಹುಲ ಗಾಂಧಿ ದಲಿತರ ಕೇರಿಗಳಿಗೆ ಪಿಕ್‌ನಿಕ್‌ಗೆ ಹೋಗುತ್ತಾರೆ. ದಲಿತರ ಹೆಣ್ಣು ಮಕ್ಕಳೊಂದಿಗೆ ಹನಿಮೂನ ಮಾಡುತ್ತಾರೆ ಎಂದು ಹೇಳಿ ದೇಶದಲ್ಲಿನ ಏಕತೆಗೆ ಭಂಗ ತಂದು ಭಾರತದ ದಲಿತ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಸಮಾಜ ಘಾತುಕ ಶಕ್ತಿಗಳೊಂದಿಗೆ ಶ್ಯಾಮಿಲಾಗಿರುವ ಬಾಬಾ ರಾಮದೇವನನ್ನು ಮಟ್ಟ ಹಾಕದೇ ಬಿಟ್ಟರೆ ದೇಶದಲ್ಲಿ ಅನಾಹುತಗಳಾಗುವ ಸಾಧ್ಯತೆಗಳಿವೆ. ಅಂತಾ ಶ್ರೀ ಹಣಮಂತ ಜಿ. ಯಳಸಂಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.