POLICE BHAVAN KALABURAGI

POLICE BHAVAN KALABURAGI

30 April 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-29/04/2014 ರಂದು ರಾತ್ರಿ 08:15 ಗಂಟೆ ಸುಮಾರಿಗೆ ಮೃತ ಜಗದೀಶ ತಂದೆ ಸಿದ್ದಣ್ಣಾ ಜಾನೆ ಇತನು ತನ್ನ ಟಾಟಾ ಇಂಡಿಕಾ ಕಾರ ನಂ ಕೆ.ಎ-32 ಬಿ-4436 ನೇದ್ದರಲ್ಲಿ ತನ್ನ ಹೆಂಡತಿ ನಿಲಾವತಿ ಹಾಗು ಸಂಬಂದಿಕರಾದ ನಿಂಬೆಮ್ಮಾ ಗಂಡ ನಂದನಗೌಡ ಪಾಟೀಲ. ಹಾಗು ಪೂರ್ಣಿಮಾ ತಂದೆ ಶಂಭುಲಿಂಗ ಬಾಬಜಿ ಇವರಿಗೆ ಕೂಡಿಸಿಕೊಂಡು ಗುಲಬರ್ಗಾದಿಂದ ಮುನ್ನಳ್ಳಿಗೆ ದೇವರ ಜಾತ್ರೆ ಕುರಿತು ಹೋಗುವಾಗ ಗುಲಬರ್ಗಾದ ಹೈಕೊರ್ಟ ಹತ್ತಿರ ಇರುವ ಗುಲಬರ್ಗಾ-ಅಫಜಲಪುರ ಕ್ರಾಸಿನಲ್ಲಿ ನಿದಾನವಾಗಿ ಹೋಗುವಾಗ ಎದುರಗಡೆಯಿಂದ ಕೆ.ಎಸ್.ಆರ್.ಸಿ ಬಸ ನಂ ಕೆ.ಎ-34 ಎಪ್-1017 ನೇದ್ದರ ಚಾಲಕನು ತನ್ನ ಬಸನ್ನು ಅತೀವೇಗ ಮತ್ತು ನಿಕ್ಷಾಜಿತನದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಜಗದೀಶ ಇತನಿಗೆ ತಲೆಗೆ.ಹಣೆಗೆ ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು. ಪೂರ್ಣಿಮಾ ಇವಳಿಗೆ ಮುಖಕ್ಕೆ ಎರಡು ಕಾಲುಗಳಿಗೆ ಹಾಗು ಎರಡು ಕೈಗಳಿಗೆ ಬಲ ಮೆಲಕಿಗೆ, ತಲೆಗೆ, ತುಟಿಗೆ ಇತರೇ ಭಾಗಕ್ಕೆ ಭಾರಿ ಗಾಯವಾಗಿ ಉಪಚಾರ ಪಡೆಯುತ್ತಾ ಬಸವೇಶ್ವರ ಆಸ್ಪತ್ರೆಯಲ್ಲಿ ರಾತ್ರಿ 11:30 ಗಂಟೆಗೆ ಮೃತ ಪಟ್ಟಿದ್ದು ಹಾಗು ನೀಲಾವತಿ ಮತ್ತು ನಿಂಬೆಮ್ಮಾ ಇವರಿಗೆ ಭಾರಿ ರಕ್ತಗಾಯಗಳಾಗಿ ಉಪಚಾರ ಪಡೆಯುತ್ತಿದ್ದು ಅಪಘಾತ ಪಡಿಸಿದ ನಂತರ ಬಸ ಚಾಲಕ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಸಿದ್ದಣ್ಣಾ ತಂದೆ ಬಸಣ್ಣಾ ಜಾನೆ ಸಾ:ಮುನ್ನಳ್ಳಿ ತಾ:ಆಳಂದ ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 28-04-14 ರಂದು ಸಂಜೆ 7-00 ಗಂಟೆ ಸುಮಾರಿಗೆ ಶ್ರೀಮತಿ ಶಾಹೀನಾಬೀ ಗಂಡ ಖುರ್ಷಿದ ಅಲಿ ಚಿಂಚೋಳಿ ಸಾ:ಹರಕಂಚಿ ಗ್ರಾಮ ರವರು ಮತ್ತು  ತಮ್ಮ ಮಹೆಬೂಬ ಇಬ್ಬರು ತನ್ನ ಗಂಡನ ಮನೆಯ ಅಂಗಳದಲ್ಲಿ ಇದ್ದಾಗ ಖುರ್ಷಿದ ಅಲಿ ತಂದೆ ಬಾಬರಮಿಯ್ಯಾ ಚಿಂಚೋಳಿ ಸಾ: ಹರಕಂಚಿ ಗ್ರಾಮು ಇವನು ಕುಡಿದ ಅಮಲಿನಲ್ಲಿ ಫಿರ್ಯಾದಿದಾರಳಿಗೆ ಅವಾಚ್ಯ ಬೈದು ನಿನ್ನ ತಮ್ಮನ ಜೊತೆ ಅನೈತಿಕ ಸಂಬಂಧಕೊಟ್ಟಿದ್ದೀ ಅದಕ್ಕೆ ಕರೆಯಲಿಕ್ಕೆ ಬಂದಿದ್ದಾನೆ ಅನ್ನುತ್ತಾ ಕೈಯಿಂದ ಕುತ್ತಿಗೆ, ಬೆನ್ನ ಮೇಲೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂದನೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ದಿನಾಂಕ 27-04-2014 ರಿಂದ ಇದುವರೆಗೆ ಕನ್ನಡ ನ್ಯೂಸ್ ಚಾನಲ್‌ಗಳಲ್ಲಿ (ಸಯಮ ನ್ಯೂಸ್, ಪಬ್ಲಿಕ ಟಿ.ವಿ, ಸುವರ್ಣ ನ್ಯೂಸ್, ಟಿ.ವಿ 9, ರಾಜ್ ನ್ಯೂಸ್) ಯೋಗ ಗುರು ಬಾಬಾ ರಾಮದೇವ ದಲಿತರ ಬಗ್ಗೆ ಅತ್ಯಂತ ಕೀಳು ಮಟ್ಟದಿಂದ ಮಾತನಾಡಿದ್ದು ಮತ್ತು ದಲಿತರ ಹೆಣ್ಣು ಮಕ್ಕಳಿಗೆ ಮಾಡಿದ ಅಪಮಾನ ಜನಕ, ನಿಂದಾತ್ಮಕ ಮಾತುಗಳು ನಮಗೆ ಅತ್ಯಂತ ಖೇದ ಮತ್ತು ದುಖಃವಾಗಿದ್ದು, ಪ್ರಜಾ ಪ್ರಭುತ್ವ ವ್ಯವಸ್ಧೆಯಲ್ಲಿ ಏನು ಬೇಕಾದರು ಮಾಡಬಹುದು, ಯಾರನ್ನಾದ್ರೂ ಅಪಮಾನ ಮಾಡಬಹುದು ಎಂಬಂಥ ಮಾನಸಿಕ ಸ್ಧಿತಿಯ ಬಾಬಾ ರಾಮ್ ವೇವನಂಥವರಿಂದ ಸಮಾಜದ ಶಾಂತಿಗೆ ಭಂಗ ಬಂದಿದ್ದು ರಾಹುಲ ಗಾಂಧಿ ದಲಿತರ ಕೇರಿಗಳಿಗೆ ಪಿಕ್‌ನಿಕ್‌ಗೆ ಹೋಗುತ್ತಾರೆ. ದಲಿತರ ಹೆಣ್ಣು ಮಕ್ಕಳೊಂದಿಗೆ ಹನಿಮೂನ ಮಾಡುತ್ತಾರೆ ಎಂದು ಹೇಳಿ ದೇಶದಲ್ಲಿನ ಏಕತೆಗೆ ಭಂಗ ತಂದು ಭಾರತದ ದಲಿತ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಸಮಾಜ ಘಾತುಕ ಶಕ್ತಿಗಳೊಂದಿಗೆ ಶ್ಯಾಮಿಲಾಗಿರುವ ಬಾಬಾ ರಾಮದೇವನನ್ನು ಮಟ್ಟ ಹಾಕದೇ ಬಿಟ್ಟರೆ ದೇಶದಲ್ಲಿ ಅನಾಹುತಗಳಾಗುವ ಸಾಧ್ಯತೆಗಳಿವೆ. ಅಂತಾ ಶ್ರೀ ಹಣಮಂತ ಜಿ. ಯಳಸಂಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: