POLICE BHAVAN KALABURAGI

POLICE BHAVAN KALABURAGI

23 April 2014

GULBARGA DIST REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ: ದಿನಾಂಕ: 22-04-2014 ರಂದು ಶ್ರೀ. ದತ್ತಾತ್ರೇಯ @ ದತ್ತಪ್ಪ ತಂದೆ ಬಸಪ್ಪ ಹೊಸಳ್ಳಿ ಸಾ:ಝಳಕಿ[ಬಿ] ತಾ:ಆಳಂದ. ಇವರು ಠಾಣೆಗೆ ಹಾಜರಾಗಿ 1] ಶ್ರೀಮಂತ ತಂದೆ ಲಕ್ಷ್ಮಣ ಸಿಂಗೆ  2] ವಿಕ್ರಮ @ ನಾಗೇಶ ತಂದೆ ಪರಮೇಶ್ವರ ಮರಬೆ ಇವರು ವಿನಾ: ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬಯ್ದು ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಠಾಣೆ: ದಿನಾಂಕ: 22-04-2014 ರಂದು ಶ್ರೀ. ನಾಗೇಶ ತಂದೆ ಪರಮೇಶ್ವರ ಮರಬೆ ಸಾ:ಝಳಕಿ[ಬಿ] ಇವರು ಠಾಣೆಗೆ ಹಾಜರಾಗಿ ತಾನು ತಮ್ಮ  ಹೊಲಕ್ಕೆ ಹೋಗುವಾಗ 1] ದತ್ತಪ್ಪ ತಂದೆ ಬಸಪ್ಪ ಹೊಸಳ್ಳಿ 2] ಶ್ರೀಮಂತ ತಂದೆ ಶಾಂತಪ್ಪ ಹೊಸಳ್ಳಿ 3] ಸಂಜುಕುಮಾರ ತಂದೆ ಅರ್ಜುನ ಹೊಸ್ಸಳ್ಳಿ 4] ಪ್ರಕಾಶ ತಾಯಿ ದಯಾಬಾಯಿ ಹೊಸ್ಸಳ್ಳಿ 5] ಸಿದ್ದರಾಮ ತಂದೆ ಬೊಗಪ್ಪ ಹೊಸಳ್ಳಿ ಸಾ:ಎಲ್ಲರೂ ಝಳಕಿ[ಬಿ] ಇವರೆಲ್ಲರೂ ನಮ್ಮ ಗ್ರಾಮದ ಲಕ್ಷ್ಮಣ ತಂದೆ ಶ್ರೀಮಂತ ಸಿಂಗೆ ಇತನೊಂದಿಗೆ ಜಗಳ ಮಾಡುತ್ತಿದ್ದು ವಿಚಾರಿಸಲು ಹೋದಾಗ ದತ್ತಪ್ಪ, ಸಿದ್ರಾಮ, ಶ್ರೀಮಂತ, ಇವರುಗಳು ನನಗೆ ಅವಾಚ್ಯವಾಗಿ ಬೈದು ಕಲ್ಲಿನಿಂದ, ಕೈ ಮುಷ್ಠಿ ಮಾಡಿ ಹೊಡೆದು ನನಗೆ ಮತ್ತು ಸಿದ್ರಾಮ ಹಡಲಗಿ ಇಬ್ಬರಿಗೊ ಜೀವದ ಭಯದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 22/04/2014 ರಂದು  ಶ್ರೀ ಸೈಬಣ್ಣಾ ತಂದೆ ಶರಣಪ್ಪ ಜಮಾದಾರ ಸಾ|| ಹಡಲಗಿ ಇವರು ಠಾಣೆಗೆ ಹಡಲಗಿ ಗ್ರಾಮದ ಶಿವಣ್ಣಾ ತಂದೆ ಚೌಡಪ್ಪ ಜಮಾದಾರ ಹಾಗೂ ಅಂಬಣ್ಣಾ ತಂದೆ ಚೌಡಪ್ಪ ಜಮಾದಾರ ಇಬ್ಬರಿಗೂ ಹೊಲದ ಸಂಭಂಧ ತಕರಾರು ಇದ್ದು, ನಾಗಣ್ಣಾ ಜಮಾದಾರ ಎಂಬುವವನು ಶಿವಣ್ಣನ ಹೊಲ ಬಟಾಯಿಯಂತೆ ಮಾಡಿದ್ದು. ಇಂದು ಅಂಬಣ್ಣನು ನಾಗಣ್ಣನಿಗೆ ತಕರಾರಿನಲ್ಲಿದ್ದ ಹೊಲವನ್ನು ಯಾಕೆ ಸಾಗುವಳಿ ಮಾಡುತ್ತಿರುವೆ ಅಂತಾ ಕೇಳಿದ್ದಕ್ಕೆ 1] ನಾಗಣ್ಣಾ ತಂದೆ ಪ್ರಭು ಜಮಾದಾರ,02] ಪಾರ್ವತಿ ಗಂಡ ಶಿವಣ್ಣ ಜಮಾದಾರ, 03] ಷಡಾಕ್ಷರಿ ತಂದೆ ಶಿವಣ್ಣಾ ಜಮಾದಾರ,  04] ಶಾಂತು ತಂದೆ ನಾಗಣ್ಣಾ ಜಮಾದಾರ ಎಲ್ಲರೂ ಸೇರಿ ಅಂಬಣ್ಣನಿಗೆ ಹೊಡೆ ಬಡೆ ಮಾಡುತ್ತಿರುವಾಗ ತಾನು ಮತ್ತು ಸುರೇಶ, ಪ್ರಕಾಶ ಬಿಡಿಸಲು ಬಂದಾಗ ಆರೋಪಿತರೆಲ್ಲರೂ ಕೈಯಿಂದ, ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ :     ದಿನಾಂಕ 22/04/2014 ರಂದು  ಶ್ರೀಮತಿ ಪಾರ್ವತಿ ಗಂಡ ಶಿವಣ್ಣಾ ಜಮಾದಾರ ಸಾ|| ಹಡಲಗಿ ಇವರು ಠಾಣೆಗೆ ಹಾಜರಾಗಿ ಇಂದು ಸಾಯಂಕಾಲ ಹೊಲದ ಸಂಭಂಧ ಜಗಳ ತೆಗೆದು ಆರೋಪಿತರಾದ 01] ಸುರೇಶ ತಂದೆ ಅಂಬಣ್ಣಾ ಜಮಾದಾರ, 02] ಪ್ರಕಾಶ ತಂದೆ ಅಂಬಣ್ಣಾ ಜಮಾದಾರ, 03] ಅಂಬಣ್ಣಾ ತಂದೆ ಚೌಡಪ್ಪ ಜಮಾದಾರ,  04] ಸೈಬಣ್ಣಾ ತಂದೆ ಶರಣಪ್ಪಾ ಜಮಾದಾರ ಎಲ್ಲರೂ ಫಿರ್ಯಾದಿಗೆ ಹಾಗೂ ಅವಳ ಕಡೆಯವರಿಗೆ ಕೈಯಿಂದ ಜಗ್ಗಾಡಿ, ಕೈಯಿಂದ, ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ  ಶಿವಪುತ್ರಪ್ಪಾ ತಂದೆ ಸಿದ್ರಾಮಪ್ಪ ಮರಡಿ ಸಾಃ ಬನಶಂಕರಿ ಕಾಲೋನಿ ಗುಲಬರ್ಗಾ ಇವರು ತಾನು ಮನೆಯ ಮುಂದೆ ಇರುವಾಗ ನನ್ನ ತಮ್ಮಂದಿರಾದ ಶಾಂತಲಿಂಗಪ್ಪಾ ಮರಡಿ, ಹಣಮಂತ ಮರಡಿ, ದುಂಡಪ್ಪ ಮರಡಿ ಇವರೆಲ್ಲರೂ ಕೂಡಿಕೊಂಡು ಬಂದವರೆ ಅವಾಚ್ಯ ಶಬ್ದಗಳಿಂದ ಬೈಯ್ದು ಬಡಿಗೆಯಿಂದ, ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಎಂ.ಬಿ.ನಗರ ಪೊಲೀಸ್ ಠಾಣೆ :  ಶ್ರೀಮತಿ ಗಂಗಮ್ಮಾ ಗಂಡ ದಿಃ ಬಸಪ್ಪಾ ಭೀಮನಳ್ಳಿ ಸಾಃ ಭನಶಂಕರಿ ಕಾಲೋನಿ ಜಯನಗರ ಗುಲಬರ್ಗಾ ದಿನಾಂಕಃ 22/04/2014 ರಂದು ಶಿವಪುತ್ರಪ್ಪ ಹಾಗು ಆತನ ಹೆಂಡತಿಯಾದ ಶಕುಂತಲಾ ಮಗನಾದ ರಜನಿಕಾಂತ ಹಾಗು ಮಗಳಾದ ಬಸಮ್ಮಾ ಇವರೆಲ್ಲರೂ ಬಂದವರೇ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಮನೆ ಹಂಚಿಕೊಳ್ಳುವ ವಿಷಯದಲ್ಲಿ ಅಣ್ಣತಮ್ಮಂದಿರು ತಕರಾರು ಮಾಡುತ್ತಿರುವಾಗ ನೀನು ಏಕೆ ಸುಮ್ಮನಿದ್ದಿ ಇದಕ್ಕೆಲ್ಲಾ ನೀನೆ ಕಾರಣ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಶಿವಪುತ್ರಪ್ಪಾ ಇತನು ಕೈಯಿಂದ ಮತ್ತು ಇಟ್ಟಿಗೆಯಿಂದ ತಲೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು. ಶಕುಂತಲಾ, ರಜನಿಕಾಂತ, ಬಸಮ್ಮಾ ಇವರೆಲ್ಲರೂ ಸಹ ಕೈಯಿಂದ ಹೊಡೆದು ಸೀರೆಯನ್ನು ಜಗ್ಗಾಡಿ ಅವಾಚ್ಯವಾಗಿ ಬೈಯ್ದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ : ದಿನಾಂಕ 22-04-2014 ರಂದು 00-30 ಗಂಟೆಗೆ ಸೋಮಶೇಖರ ತಂದೆ ಅಪ್ಪಾಸಾಬ ಕಣ್ಣಿ ಸಾ: ರಾಮತೀರ್ಥ ನಗರ ಆಳಂದ ರವರು  ಮೋ/ಸೈಕಲ ನಂಬರ ಕೆಎ-32 ಎಸ್-9557 ರ ಮೇಲೆ ಎಸ್.ವಿ.ಪಿ ಸರ್ಕಲದಿಂದ ಜಗತ ಸರ್ಕಲ ರೋಡಿನಲ್ಲಿ ಬರುವ ರಂಗ ಮಂದಿರ ಎದರುಗಡೆ ರೋಡಿನ ಮೇಲೆ ಜಗತ ಸರ್ಕಲ ಕಡೆಗೆ ಹೋಗುತ್ತಿದ್ದಾಗ ಎಸ್.ವಿ.ಪಿ ಸರ್ಕಲ ಕಡೆಯಿಂದ ಯಾವುದೊ ಒಂದು ಕಾರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಹೊರಟು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ:  ದಿನಾಂಕ: 22/04/2014. ರಂದು ಶ್ರೀ   ರಾಮು ತಂದೆ ವೆಂಕಟಪ್ಪ ಯಾದವ ಸಾ|| ಗೊಲ್ಲರ ಗಲ್ಲಿ ಜಗತ್ ಗುಲಬರ್ಗಾ ಇವರು ಠಾಣೆಗೆ ಹಾಜರಾದಿ ತನ್ನ ಅಕ್ಕ ಯಂಕಮ್ಮಾ @ ಅಂಬಿಕಾ ಇವಳಿಗೆ 5 ವರ್ಷಗಳ ಹಿಂದೆ ಗುಲಬರ್ಗಾ ನಗರದ ಗೊಲ್ಲರಗಲ್ಲಿಯ ಅಸೇನಿ ತಂದೆ ಗುರಪ್ಪ ಕೆರಂಟಿ ರವರೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಅಕ್ಕ ಅಂಬಿಕಾಳಿಗೆ 2 ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದು. ಅಕ್ಕಳ ಗಂಡ ಅಸೇನಿ ಈತನು ಮದುವೆ ಆದ ಕೆಲವು ದಿವಸಗಳವರೆಗೆ ಅಕ್ಕಳೊಂದಿಗೆ ಸರಿಯಾಗಿ ಇದ್ದು ನಂತರ ದಿವಸಗಳಲ್ಲಿ ದಿನಾಲು ಕುಡಿದು ಬಂದು ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಅವಳಿಗೆ ಹೊಡೆ ಬಡೆಯುವದು ಮಾಡುತ್ತಿದ್ದನು.       ಹೀಗಿದ್ದು ಇಂದು ದಿನಾಂಕ 22/04/2014 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಅಂಬಿಕಾಳು ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ತನ್ನ ಗಂಡನ ಕಿರುಕುಳ ತಾಳಲಾರದೆ ಮನೆಯಲ್ಲಿ ವಿಷ ಸೇವನೆ ಮಾಡಿದ್ದು ಅವಳನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿ ಆಗದೆ ಬೆಳಗ್ಗೆ 1100 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾಳೆ.


      ನಮ್ಮ ಅಕ್ಕ ಅಂಬಿಕಾಳಿಗೆ ಆಕೆಯ ಗಂಡನಾದ ಅಸೇನಿ ಈತನು ದಿನಾಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದರಿಂದ ಅವನ ಕಿರುಕುಳ ತಾಳಲಾರದೆ ಅಂಬಿಕಾ ಇವಳು ವಿಷ ಸೇವನೆ ಮಾಡಿ ಮೃತಪಟ್ಟಿದ್ದು ನಮ್ಮ ಅಕ್ಕಳ ಮರಣಕ್ಕೆ ಕಾರಣನಾದ ನಮ್ಮ ಅಕ್ಕನ ಗಂಡ ಅಸೇನಿ ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

22 April 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ  21-04-2014 ರಂದು ಘತ್ತರಗಾ ಗ್ರಾಮದ ಅಂಬೀಗರ ಚೌಡಯ್ಯ ವೃತ್ತದ ಹತ್ತಿರ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಮಟ್ಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಘತ್ತರಗಾ ಗ್ರಾಮದ ಅಂಬೀಗರ ಚೌಡಯ್ಯ ವೃತ್ತದ ಹತ್ತಿರ ಹೋಗಿ ನೋಡಲಾಗಿ ಸದರಿ ಬಾತ್ಮಿಯನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಚಂದುಗೌಡ ತಂದೆ ಹಣಮಂತಯ್ಯಗೌಡ ಮಾಲಿ ಪಾಟೀಲ್ ಸಾ: ಘತ್ತರಗಾ ಅಂತ ತಿಳಿಸಿದ್ದು ಸದರಿಯನ ವಶದಲ್ಲಿದ್ದ 670/-ರೂ, ಮಟ್ಕಾ ಚೀಟಿ ಮತ್ತು ಒಂದು ಬಾಲ ಪೇನ್ ನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು  ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಜಗದೀಶ ತಂದೆ ಕಲ್ಯಾಣರಾವ ಮದರಿ  ಸಾ: ಭೂಸನೂರ ಹಾ:ವ ಶಾಹಾಬಜಾರ ಗುಲಬರ್ಗಾ ಇವರು ತಮ್ಮ ಹೊಲದ ಕೆಲಸದ ಸಂಬಂಧ ಊರಿಗೆ ಬಂದಿದ್ದು ರಾತ್ರಿ 9-30 ಗಂಟೆಗೆ ಭೂಸನೂರ ಪ್ಯಾಕ್ಟರಿ ಕ್ರಾಸ್ ಹತ್ತಿರ ಖಾನಾವಳಿಯಲ್ಲಿ ಊಟ ಕಟ್ಟಿಕೊಳ್ಳುವಾಗ 1. ವಿಠ್ಠಲ ತಂದೆ ಕಲ್ಯಾಣಿ ಬೇಡಿ 2. ಚನ್ನಪ್ಪ ತಂದೆ ಲಕ್ಷ್ಮಣ್ಣ ಕೋಗನೂರ ಸಾ: ಇಬ್ಬರು ಕೋರಳ್ಳಿ ತಾ: ಆಳಂದ ಇವರು  ಬಂದು ಈ ಹಿಂದೆ ಮೋಟಾರ ಸೈಕಲ್ ಸೈಡ ಕೊಡುವ ಸಂಬಂದ ಆರೋಪಿತರಿಗೂ ಮತ್ತು ಫಿರ್ಯಾದಿ  ಜೋತೆ ಬಾಯಿ ಮಾತಿನ ತಕರಾರು ಮಾಡಿಕೊಂಡಿ ವಿಷಯದಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ರಾಡಿ ನಿಂದ ಬುಜಕ್ಕೆ, ಹೊಟ್ಟೆಗೆ ಮತ್ತು ಎಡಗಾಲು ಕಪ್ಪಗಂಡಿಯ ಹತ್ತಿರ ಹೊಡೆದು ಭಾರಿ ಗುಪ್ತಗಾಯ ಮತ್ತು ಸಾದಾ ಗುಪ್ತಗಾಯ ಪಡೆಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 20-04-2014 ರಂದು ಶ್ರೀ ಬಸವರಾಜ ತಂ ನಾಗಪ್ಪ ಭಾವಿಕಟ್ಟಿ ಸಾ :  ಮಡಕಿ  ಹಾ:ವ: ಕಾಕಡೆ ಚೌಕ  ಗುಲಬರ್ಗಾ ರವರು  ತನ್ನ ಮೋಟಾರ ಸೈಕಲ ನಂ ಕೆ,ಎ, 38 ಕೆ, 3204 ನೇದ್ದರ ಮೇಲೆ ತನ್ನ ತಾಯಿಗೆ ಗುಲಬರ್ಗಾ ದಿಂದ ಮಡಕಿಗೆ ಬಿಟ್ಟು ವಾಪಸ ಗುಲಬರ್ಗಾಕ್ಕೆ ಬರುವಾಗ ರಾತ್ರಿ 8 ಪಿ,ಎಮ್,ಸೂಮಾರಿಗೆ ಮಹಾಗಾಂವ ಸರಕಾರಿ ಆಸ್ಪತ್ರೆಯ ಹತ್ತಿರ ಇದ್ದ ಬ್ರಿಡ್ಜ ಹತ್ತಿರ   ಎದುರಗಡೆಯಿಂದ ಹಂಕ ಮೋಟಾರ ಸೈಕಲ ನಂ ಕೆ,ಎ, 26 ಕೆ, 8645 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ತನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ತನ್ನ ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ ಮತ್ತು ಬಲಗೈಯ ತೋರು,ಮದ್ಯ ಹಾಗೂ ಉಂಗೂರ ಬರೆಳುಗಳಿಗೆ ರಕ್ತಗಾವಾಗಿರುತ್ತದೆ ಮೋಟಾರ ಸೈಕಲ ಚಾಲಕ ಸಹ ಕೆಳಗೆ ಬಿದ್ದುದ್ದು  ಆತನಿಗೆ ಗಾಯವಾಗಿರಬಹುದು ಅವನ ಹೆಸರು ಕಳಿದ್ದಾಗ ಆತನು ತನ್ನ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀಮತಿ ರೆಷ್ಮಾ @ ಸಾದಿಯಾ ಗಂಡ ಶೇಖ್‌ ಸಿಕಂದರ ಸಾ: ಕಿಲ್ಲಾ ಸಿಟಿ ಬಸ್‌ ನಿಲ್ದಾಣದ ಹತ್ತಿರ ಗುಲಬರ್ಗಾ ರವರ ತವರ ಮನೆಯಾದ ನದಿಶಿನ್ನೂರ ಗ್ರಾಮಕ್ಕೆ ತನ್ನ ತಂದೆಯಾದ ಮಹಿಬೂಬಸಾಬ ಇತನಿಗೆ ಮಾತನಾಡಿಸಿಕೊಂಡು ಬರಲು ಗುಲಬರ್ಗಾದ ರಾಮ ಮಂದಿರದಿಂದ  ಮದ್ಯಾನ್ಹ 12:15 ಗಂಟೆಯ ಸುಮಾರಿಗೆ ಜೇವರ್ಗಿ ಕಡೆಗೆ ಹೋಗುವ ಕ್ರೂಜರ್‌ ಜೀಪ ನಂ. ಕೆಎ 28-9573 ನೇದ್ದರಲ್ಲಿ ನಾನು ಮತ್ತು ನನ್ನ ಮಕ್ಕಳಾದ 4 ವರ್ಷದ ಅದಿಬಾ, 2 ವರ್ಷದ ಅಜ್ಞಾನ ಎಲ್ಲರೂ ಕೂಡಿಕೊಂಡು ಹೊರಟಿದ್ದು ಮದ್ಯಾನ್ಹ 1:15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನದಿಶಿನ್ನೂರ ಗ್ರಾಮದ ಕ್ರಾಸ್‌ ಹತ್ತಿರ ಸದರಿ ಕ್ರೂಜರ್‌ ಜೀಪನ್ನು ಚಾಲಕನು ರೋಡಿನ ಎಡಗಡೆಯಲ್ಲಿ ಪಕ್ಕಕ್ಕೆ ನಿಲ್ಲಿಸಿ ನಮಗೆ ಇಳಿಸುತ್ತಿದ್ದಂತೆ ನಮ್ಮ ಹಿಂದಗಡೆಯಲ್ಲಿ ಗುಲಬರ್ಗಾದ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಕ್ರೂಜರ್‌ ಜೀಪಿಗೆ ಡಿಕ್ಕಿ ಬಡಿಸಿರುತ್ತಾನೆ. ಇದರಿಂದ ನನಗೆ ತಲೆಗೆ ರಕ್ತಗಾಯ, ಎಡಗಡೆ ಮುಂಡಿಗೆ ಮತ್ತು ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ನನ್ನ ಮಕ್ಕಳಾದ ಅದಿಬಾ ಇವಳಿಗೆ ತಲೆಗೆ ರಕ್ತಗಾಯ, ಮತ್ತು ಅಜ್ಞಾನ ಇತನಿಗೆ ತುಟಿಗೆ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ನಂತರ ಡಿಕ್ಕಿ ಪಡಿಸಿದ ಟಿಪ್ಪರ ನಂಬರ ನೋಡಲಾಗಿ ಕೆಎ 32 ಬಿ-6590 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 April 2014

Gulbarga District Reported Crimes

ಕೊಲೆ ಆರೋಪಿತರ ಬಂಧನ
ಚೌಕ ಪೊಲೀಸ್ ಠಾಣೆ :  ಗುನ್ನೆ ನಂ. 56/2014 ಕಲಂ 143,147,148,341,504,302 ಸಂ 149 ಐಪಿಸಿ ಮತ್ತು 25 ಆಯುಧ ಕಾಯ್ದೆ 1969 ನೇದ್ದರಲ್ಲಿಯ ಆರೋಪಿತರಾದ 1. ಪ್ರಕಾಶ ತಂದೆ ಮಹಾದೇವಪ್ಪ ವಟಾರೆ ಸಾಃ ಕೇರಿಬೊಸಗಾ ತಾಃಜಿಃ ಗುಲಬರ್ಗಾ  2. ಈಶ್ವರ ತಂದೆ ಶಿವಶರಣಪ್ಪ ಮುಡಬಿ ಸಾಃ ಸಂಜೀವ ನಗರ ಗುಲಬರ್ಗಾ 3. ಆನಂದ ತಂದೆ ಬಸವರಾಜ ಬಿಜಾಪೂರ ಸಾಃ ಸಂಜೀವ ನಗರ ಗುಲಬರ್ಗಾ  4. ಪ್ರಿತೇಶ ತಂದೆ ಮಾರುತಿ ನೂಲಕರ ಸಾಃ ಸಂಜೀವ ನಗರ ಗುಲಬರ್ಗಾ 5. ಸುದೀರ ತಂದೆ ರವಿ ಹಳ್ಳಿಖೇಡ ಸಾಃ ಸಂಜೀವ ನಗರ ಗುಲಬರ್ಗಾ 6. ಶರಣು @ ದೇವಿಂದ್ರ @ ದೇವ್ರು ತಂದೆ ಆನಂದ ಪೂಜಾರಿ ಸಾಃ ಕನಕನಗರ ಗುಲಬರ್ಗಾ  ಹಾಗೂ ಚೌಕ ಠಾಣೆಯ ಗುನ್ನೆ ನಂ. 57/2014 ಕಲಂ 143,147,148,341,504,307 ಸಂಗಡ 149 ಐಪಿಸಿ ಮತ್ತು 25 ಆಯುಧ ಕಾಯ್ದೆ 1969 ಹಾಗೂ 3(1)(10) ಎಸ್ಸಿ/ಎಸ್ ಟಿ ಪಿಎ ಅಕ್ಟ ನೇದ್ದರಲ್ಲಿ ಆರೋಪಿತರಾದ 1. ಶ್ರೀಶೈಲ ತಂದೆ ಸೂರ್ಯಕಾಂತ ಚರಪಳ್ಳಿ ಸಾಃ ಗಂಗಾನಗರ ಗುಲಬರ್ಗಾ 2. ದೇವು @ ದೇವಿಂದ್ರಪ್ಪ ತಂದೆ ಸಿಕ್ಕಿಂದ್ರಪ್ಪ ಕ್ಯಾಡಗಿ ಸಾಃ ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ರವರಿಗೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ, ಅಪರ ಎಸ್.ಪಿ ಸಾಹೇಬ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಉದಯಕುಮಾರ ಎಂ. ಬೆವಿನಗಿಡ ಡಿ.ಎಸ್.ಪಿ “ಬಿ” ಉಪವಿಭಾಗ ಗುಲಬರ್ಗಾ, ಶ್ರೀ ಎಸ್.ಕೆ ಮಾರಿಹಾಳ  ಪಿ.ಐ ಚೌಕಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಅಧಿಕಾರಿಯವರಾದ ಎನ್. ಸತೀಶಕುಮಾರ ಪಿ.ಐ ಬ್ರಹ್ಮಪೂರ ಹಾಗೂ ಪ್ರದೀಪಕೊಳ್ಳಾ ಪಿ.ಎಸ್.ಐ(ಕಾಸು) ಚೌಕ ಠಾಣೆ, ಹೆಮಂತಕುಮಾರ ಪಿ.ಎಸ್.ಐ ಆರ್.ಜಿ ನಗರ, ಶಾಮರಾವ ಎ.ಎಸ್.ಐ ಚೌಕ ಠಾಣೆ ಸಿಬ್ಬಂದಿಯವರಾದ 1] ಮಹಾಂತೇಶ ಪಿಸಿ 716 2] ಬಾಬು ಶೇರಿಕಾರ ಪಿಸಿ 333 3] ಮಹೇಬೂಬ ಪಿಸಿ 953 4] ಗೋಪಾಲ ಪಿಸಿ 953 5] ಅಲೋಕ ಪಿಸಿ 1008 6] ಪ್ರಶಾಂತ ಪಿಸಿ 920 7] ಪ್ರಕಾಶ ಪಿಸಿ 1132 8] ಮಕ್ತುಮಸಾಬ ಪಿಸಿ 499 9] ಕೇಶವ ಪಿಸಿ 1211 ಗ್ರಾಮೀಣ  10] ಸಂಜೀವರಡ್ಡಿ ಹೆಚ್.ಸಿ 85 ಗ್ರಾಮೀಣ 11] ಆಸೀಫ ಪಿಸಿ 535 12] ಬಂದೇನವಾಜ ಪಿಸಿ 429 13] ಶಿವಾನಂದ ಯಡ್ರಾಮಿ ಪಿಸಿ 992 14] ಶರಣಬಸವ ಪಿಸಿ 699 ರವರು ಕೂಡಿಕೊಂಡು ದಿನಾಂಕ 20.04.2014 ರಂದು ಬೆಳಗಿನ ಜಾವ 4-30 ಗಂಟೆಯಿಂದ 5 ಗಂಟೆಯ ಮದ್ಯದಲ್ಲಿ  ಗುಲಬರ್ಗಾ ರೈಲು ನಿಲ್ದಾಣ ಮತ್ತು ಕೇಂದ್ರ ಬಸ್ ನಿಲ್ದಾಣದಲ್ಲಿ ತಲೆ ಮರೆಸಿಕೊಂಡು ಓಡಿಹೋಗಲು ಪ್ರಯತ್ನದಲ್ಲಿದ್ದ ಆರೋಪಿತರನ್ನು ದಸ್ತಗಿರಿ ಮಾಡಿ   ನ್ಯಾಯಾಂಗ ಬಂಧನ ಕುರಿತು ಕಳಿಸಿದ್ದು ಇರುತ್ತದೆ.  ಸದರಿ ಆರೋಪಿತರಲ್ಲಿ ಕೆಲವು ಆರೋಪಿತರು ಹಲವಾರು ಅಪರಾಧ ಪ್ರಕರಣಗಳಲ್ಲಿ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರಿರುತ್ತಾರೆ. ನಗರದಲ್ಲಿ ಗುಂಪು ಕಟ್ಟಿಕೊಂಡು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಅಪರಾಧ ಪ್ರವೃತ್ತಿಯುಳ್ಳವರಾಗಿರುತ್ತಾರೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 19-04-2014 ರಂದು  ಬೆಳಗ್ಗೆ 11 ಗಂಟೆಗೆ ಮಹ್ಮದ ಬಿಲಾಲ ಇತನು ನಮ್ಮ ತಾಯಿಯಾದ ಹನಿಫಾ ಬೇಗಂ ಇವಳಿಗೆ ಕಣ್ಣು ತೊರಿಸಲು ಗುಲಬರ್ಗಾದ ನವಣಿ ಅಸ್ಪತ್ರೆಗೆ ಹೊಗಿರುತ್ತಾರೆ. ಮದ್ಯಾನ್ಹ 12 ಗಂಟೆಯ ಸುಮಾರಿಗೆ ವಾಡಿ ಹತ್ತಿರ ಇರುವ ಇಂಗಳಗಿ ಗ್ರಾಮದಲ್ಲಿ ನಮ್ಮ ಅಜ್ಜಿ ಶರಿಫಾ ಬೀ ಇವಳು ತಿರಿಕೊಂಡಿದ್ದ ಸುದ್ದಿ ತಿಳಿಯಿತು. ನಮ್ಮ ತಾಯಿ ಮತ್ತು ನಮ್ಮ ತಮ್ಮ ಗುಲಬರ್ಗಾಕ್ಕೆ ಹೊಗಿದ್ದರಿಂದ ಅವರು ಬರುವವರೆಗೂ ನಿಲ್ಲೋಣ ಅಂತಾ ಕಾಯುತ್ತ ಜೇವರ್ಗಿಯಲ್ಲಿ ಉಳಿದಿರುತ್ತೆವೆ. ನಮ್ಮ ತಮ್ಮ ಮಹ್ಮದ ಬಿಲಾಲ ಇತನು ಸಾಯಂಕಾಲ 4 ಗಂಟೆ ಸುಮಾರಿಗೆ ನಮ್ಮ ತಾಯಿಗೆ ಗುಲಬರ್ಗಾದ ನವಣಿ ಆಸ್ಪತ್ರೆಯಲ್ಲಿ ಬಿಟ್ಟು ಜೇವರ್ಗಿಗೆ ಬಂದಿರುತ್ತಾನೆ. ನಂತರ ಸದರಿ ನಮ್ಮ ಅಜ್ಜಿ ತಿರಿಕೊಂಡ ವಿಷಯ ತಿಳಿಸಿ ನಮ್ಮ ತಾಯಿಗೆ ಕರೆದುಕೊಂಡು ಬರಲು ಹೇಳಿದಾಗ ನಮ್ಮ ತಮ್ಮನು ಅವರ ಗೆಳೆಯನಾದ ಅಬ್ದುಲ್‌ ಬಾಷಾ ಇತನ ಟಿವಿಎಸ್‌ ಮೋಟರ್‌ ಸೈಕಲ್‌ ನಂ. ಕೆಎ 32 ಎಎಫ್‌-0541 ನೇದ್ದನ್ನು ತೆಗೆದುಕೊಂಡು ಇದರ ಮೇಲೆ ಕರೆದುಕೊಂಡು ಬರುತ್ತೆನೆ ಅಂತಾ ಹೇಳಿ ಹೊಗಿರುತ್ತಾನೆ. ಸಾಯಂಕಾಲ 4:30 ಗಂಟೆಗೆ ಸುಮಾರಿಗೆ ನಮ್ಮ ತಾಯಿ ತಾನು ಒಬ್ಬಳೆ ಅಸ್ಪತ್ರೆಗೆ ತೊರಿಸಿ ಮನೆಗೆ ಬಂದಿರುತ್ತಾಳೆ. ನಂತರ ನಾನು ಮತ್ತು ನನ್ನ ತಾಯಿ ಹನಿಫಾ ಬೇಗಂ ಇನ್ನೊಬ್ಬ ತಮ್ಮನಾದ ಮಹ್ಮದ ರಫೀಕ್‌ ಎಲ್ಲರೂ ಕೂಡಿಕೊಂಡು ಇಂಗಳಗಿ ಗ್ರಾಮಕ್ಕೆ ಹೋಗಿ ಅಂತ್ಯ ಸಂಸ್ಕಾರ ಮುಗಿಸಿ ಮರಳಿ ಜೇವರ್ಗಿಗೆ ರಾತ್ರಿ 11 ಗಂಟೆಗೆ ಸುಮಾರಿಗೆ ಬಂದಾಗ ನಮ್ಮ ಜೋಪಡಿ ಪಟ್ಟಿಯಲ್ಲಿರುವ ಫಾರೂಕ್‌ ಇತನು ಬಂದು ನಮಗೆ ತಿಳಿಸಿದ್ದೆನಂದರೆ ಈಗ ರಾತ್ರಿ 10:30 ಗಂಟೆಯ ಸುಮಾರಿಗೆ ರಾಷ್ರೀಯ ಹೆದ್ದಾರಿ 218 ರಸ್ತೆಯ ನಂದಿಕೂರ ತಾಂಡದ ಹತ್ತಿರ ಮಹ್ಮದ ಬಿಲಾಲ ಇತನು ಟಿವಿಎಸ್‌ ಮೋಟರ್‌ ಸೈಕಲ್‌ ಮೇಲೆ ಗುಲಬರ್ಗಾದಿಂದ ಜೇವರ್ಗಿಯ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಮಹ್ಮದ ಬಿಲಾಲನಿಗೆ  ಹಣೆಗೆ ಭಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲಿನ ಮೊಣಕಾಲಿನ ಹತ್ತಿರ ಮೂಳೆ ಮುರಿದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಮಹ್ಮದ ಮುಸ್ತಾಫ ತಂದೆ ಉಸ್ಮಾನ ಶಾ ವರವಿ ಸಾ:ಮಕ್ಕಾ ಮಜೀದ ಮುಸ್ಲಿಂ  ಬಸ್ತಿ ಜೊಪಡ ಪಟ್ಟಿ ರೋಡ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.