ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಠಾಣೆ: ದಿನಾಂಕ: 22-04-2014 ರಂದು
ಶ್ರೀ. ದತ್ತಾತ್ರೇಯ @ ದತ್ತಪ್ಪ ತಂದೆ ಬಸಪ್ಪ ಹೊಸಳ್ಳಿ
ಸಾ:ಝಳಕಿ[ಬಿ] ತಾ:ಆಳಂದ. ಇವರು ಠಾಣೆಗೆ ಹಾಜರಾಗಿ 1]
ಶ್ರೀಮಂತ ತಂದೆ ಲಕ್ಷ್ಮಣ ಸಿಂಗೆ 2] ವಿಕ್ರಮ @ ನಾಗೇಶ ತಂದೆ ಪರಮೇಶ್ವರ ಮರಬೆ
ಇವರು ವಿನಾ: ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬಯ್ದು ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿ
ಜೀವ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಠಾಣೆ: ದಿನಾಂಕ: 22-04-2014 ರಂದು
ಶ್ರೀ. ನಾಗೇಶ ತಂದೆ ಪರಮೇಶ್ವರ ಮರಬೆ
ಸಾ:ಝಳಕಿ[ಬಿ] ಇವರು ಠಾಣೆಗೆ
ಹಾಜರಾಗಿ ತಾನು ತಮ್ಮ ಹೊಲಕ್ಕೆ ಹೋಗುವಾಗ 1] ದತ್ತಪ್ಪ ತಂದೆ ಬಸಪ್ಪ
ಹೊಸಳ್ಳಿ 2] ಶ್ರೀಮಂತ ತಂದೆ ಶಾಂತಪ್ಪ ಹೊಸಳ್ಳಿ 3] ಸಂಜುಕುಮಾರ ತಂದೆ ಅರ್ಜುನ ಹೊಸ್ಸಳ್ಳಿ 4]
ಪ್ರಕಾಶ ತಾಯಿ ದಯಾಬಾಯಿ ಹೊಸ್ಸಳ್ಳಿ 5] ಸಿದ್ದರಾಮ ತಂದೆ ಬೊಗಪ್ಪ ಹೊಸಳ್ಳಿ ಸಾ:ಎಲ್ಲರೂ
ಝಳಕಿ[ಬಿ] ಇವರೆಲ್ಲರೂ ನಮ್ಮ ಗ್ರಾಮದ ಲಕ್ಷ್ಮಣ ತಂದೆ ಶ್ರೀಮಂತ ಸಿಂಗೆ ಇತನೊಂದಿಗೆ ಜಗಳ
ಮಾಡುತ್ತಿದ್ದು ವಿಚಾರಿಸಲು ಹೋದಾಗ ದತ್ತಪ್ಪ, ಸಿದ್ರಾಮ, ಶ್ರೀಮಂತ, ಇವರುಗಳು ನನಗೆ ಅವಾಚ್ಯವಾಗಿ
ಬೈದು ಕಲ್ಲಿನಿಂದ, ಕೈ ಮುಷ್ಠಿ ಮಾಡಿ ಹೊಡೆದು ನನಗೆ ಮತ್ತು ಸಿದ್ರಾಮ ಹಡಲಗಿ ಇಬ್ಬರಿಗೊ ಜೀವದ
ಭಯದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 22/04/2014 ರಂದು ಶ್ರೀ ಸೈಬಣ್ಣಾ ತಂದೆ ಶರಣಪ್ಪ
ಜಮಾದಾರ ಸಾ|| ಹಡಲಗಿ ಇವರು ಠಾಣೆಗೆ ಹಡಲಗಿ ಗ್ರಾಮದ ಶಿವಣ್ಣಾ ತಂದೆ
ಚೌಡಪ್ಪ ಜಮಾದಾರ ಹಾಗೂ ಅಂಬಣ್ಣಾ ತಂದೆ ಚೌಡಪ್ಪ ಜಮಾದಾರ ಇಬ್ಬರಿಗೂ ಹೊಲದ ಸಂಭಂಧ ತಕರಾರು ಇದ್ದು, ನಾಗಣ್ಣಾ ಜಮಾದಾರ ಎಂಬುವವನು
ಶಿವಣ್ಣನ ಹೊಲ ಬಟಾಯಿಯಂತೆ ಮಾಡಿದ್ದು. ಇಂದು ಅಂಬಣ್ಣನು ನಾಗಣ್ಣನಿಗೆ ತಕರಾರಿನಲ್ಲಿದ್ದ
ಹೊಲವನ್ನು ಯಾಕೆ ಸಾಗುವಳಿ ಮಾಡುತ್ತಿರುವೆ ಅಂತಾ ಕೇಳಿದ್ದಕ್ಕೆ 1] ನಾಗಣ್ಣಾ ತಂದೆ ಪ್ರಭು ಜಮಾದಾರ,02] ಪಾರ್ವತಿ ಗಂಡ
ಶಿವಣ್ಣ ಜಮಾದಾರ, 03] ಷಡಾಕ್ಷರಿ ತಂದೆ ಶಿವಣ್ಣಾ
ಜಮಾದಾರ, 04] ಶಾಂತು ತಂದೆ ನಾಗಣ್ಣಾ
ಜಮಾದಾರ ಎಲ್ಲರೂ ಸೇರಿ ಅಂಬಣ್ಣನಿಗೆ ಹೊಡೆ ಬಡೆ ಮಾಡುತ್ತಿರುವಾಗ ತಾನು ಮತ್ತು ಸುರೇಶ, ಪ್ರಕಾಶ ಬಿಡಿಸಲು ಬಂದಾಗ ಆರೋಪಿತರೆಲ್ಲರೂ ಕೈಯಿಂದ, ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ
ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ
ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 22/04/2014 ರಂದು ಶ್ರೀಮತಿ ಪಾರ್ವತಿ ಗಂಡ
ಶಿವಣ್ಣಾ ಜಮಾದಾರ ಸಾ|| ಹಡಲಗಿ ಇವರು ಠಾಣೆಗೆ ಹಾಜರಾಗಿ ಇಂದು
ಸಾಯಂಕಾಲ ಹೊಲದ ಸಂಭಂಧ ಜಗಳ ತೆಗೆದು ಆರೋಪಿತರಾದ 01] ಸುರೇಶ ತಂದೆ ಅಂಬಣ್ಣಾ ಜಮಾದಾರ, 02] ಪ್ರಕಾಶ ತಂದೆ ಅಂಬಣ್ಣಾ
ಜಮಾದಾರ, 03] ಅಂಬಣ್ಣಾ ತಂದೆ ಚೌಡಪ್ಪ ಜಮಾದಾರ, 04] ಸೈಬಣ್ಣಾ ತಂದೆ ಶರಣಪ್ಪಾ ಜಮಾದಾರ ಎಲ್ಲರೂ ಫಿರ್ಯಾದಿಗೆ ಹಾಗೂ ಅವಳ ಕಡೆಯವರಿಗೆ ಕೈಯಿಂದ
ಜಗ್ಗಾಡಿ, ಕೈಯಿಂದ, ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ
ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂರ್ಗಾ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ
ಶಿವಪುತ್ರಪ್ಪಾ ತಂದೆ ಸಿದ್ರಾಮಪ್ಪ ಮರಡಿ ಸಾಃ
ಬನಶಂಕರಿ ಕಾಲೋನಿ ಗುಲಬರ್ಗಾ ಇವರು ತಾನು ಮನೆಯ ಮುಂದೆ ಇರುವಾಗ ನನ್ನ ತಮ್ಮಂದಿರಾದ ಶಾಂತಲಿಂಗಪ್ಪಾ ಮರಡಿ,
ಹಣಮಂತ ಮರಡಿ, ದುಂಡಪ್ಪ ಮರಡಿ ಇವರೆಲ್ಲರೂ ಕೂಡಿಕೊಂಡು ಬಂದವರೆ ಅವಾಚ್ಯ ಶಬ್ದಗಳಿಂದ ಬೈಯ್ದು ಬಡಿಗೆಯಿಂದ,
ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀಮತಿ ಗಂಗಮ್ಮಾ ಗಂಡ ದಿಃ ಬಸಪ್ಪಾ ಭೀಮನಳ್ಳಿ ಸಾಃ
ಭನಶಂಕರಿ ಕಾಲೋನಿ ಜಯನಗರ ಗುಲಬರ್ಗಾ ದಿನಾಂಕಃ 22/04/2014 ರಂದು ಶಿವಪುತ್ರಪ್ಪ ಹಾಗು ಆತನ
ಹೆಂಡತಿಯಾದ ಶಕುಂತಲಾ ಮಗನಾದ ರಜನಿಕಾಂತ ಹಾಗು ಮಗಳಾದ ಬಸಮ್ಮಾ ಇವರೆಲ್ಲರೂ ಬಂದವರೇ ಅವಾಚ್ಯ
ಶಬ್ದಗಳಿಂದ ಬಯ್ಯುತ್ತಾ ಮನೆ ಹಂಚಿಕೊಳ್ಳುವ ವಿಷಯದಲ್ಲಿ ಅಣ್ಣತಮ್ಮಂದಿರು ತಕರಾರು
ಮಾಡುತ್ತಿರುವಾಗ ನೀನು ಏಕೆ ಸುಮ್ಮನಿದ್ದಿ ಇದಕ್ಕೆಲ್ಲಾ ನೀನೆ ಕಾರಣ ಅಂತಾ ಅವಾಚ್ಯ ಶಬ್ದಗಳಿಂದ
ಬೈದು ಶಿವಪುತ್ರಪ್ಪಾ ಇತನು ಕೈಯಿಂದ ಮತ್ತು ಇಟ್ಟಿಗೆಯಿಂದ ತಲೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು.
ಶಕುಂತಲಾ, ರಜನಿಕಾಂತ, ಬಸಮ್ಮಾ ಇವರೆಲ್ಲರೂ ಸಹ ಕೈಯಿಂದ ಹೊಡೆದು ಸೀರೆಯನ್ನು ಜಗ್ಗಾಡಿ ಅವಾಚ್ಯವಾಗಿ
ಬೈಯ್ದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ : ದಿನಾಂಕ 22-04-2014 ರಂದು
00-30 ಗಂಟೆಗೆ ಸೋಮಶೇಖರ ತಂದೆ ಅಪ್ಪಾಸಾಬ ಕಣ್ಣಿ ಸಾ: ರಾಮತೀರ್ಥ ನಗರ ಆಳಂದ ರವರು ಮೋ/ಸೈಕಲ ನಂಬರ ಕೆಎ-32 ಎಸ್-9557 ರ ಮೇಲೆ ಎಸ್.ವಿ.ಪಿ
ಸರ್ಕಲದಿಂದ ಜಗತ ಸರ್ಕಲ ರೋಡಿನಲ್ಲಿ ಬರುವ ರಂಗ ಮಂದಿರ ಎದರುಗಡೆ ರೋಡಿನ ಮೇಲೆ ಜಗತ ಸರ್ಕಲ ಕಡೆಗೆ
ಹೋಗುತ್ತಿದ್ದಾಗ ಎಸ್.ವಿ.ಪಿ ಸರ್ಕಲ ಕಡೆಯಿಂದ ಯಾವುದೊ ಒಂದು ಕಾರ ಚಾಲಕನು ಅತೀವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿ
ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಹೊರಟು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ: ದಿನಾಂಕ: 22/04/2014. ರಂದು ಶ್ರೀ ರಾಮು ತಂದೆ ವೆಂಕಟಪ್ಪ ಯಾದವ ಸಾ|| ಗೊಲ್ಲರ ಗಲ್ಲಿ ಜಗತ್ ಗುಲಬರ್ಗಾ ಇವರು ಠಾಣೆಗೆ ಹಾಜರಾದಿ ತನ್ನ ಅಕ್ಕ ಯಂಕಮ್ಮಾ @
ಅಂಬಿಕಾ ಇವಳಿಗೆ 5 ವರ್ಷಗಳ ಹಿಂದೆ ಗುಲಬರ್ಗಾ ನಗರದ
ಗೊಲ್ಲರಗಲ್ಲಿಯ ಅಸೇನಿ ತಂದೆ ಗುರಪ್ಪ ಕೆರಂಟಿ ರವರೊಂದಿಗೆ ಮದುವೆ ಮಾಡಿ
ಕೊಟ್ಟಿದ್ದು ಅಕ್ಕ ಅಂಬಿಕಾಳಿಗೆ 2 ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದು. ಅಕ್ಕಳ ಗಂಡ ಅಸೇನಿ ಈತನು ಮದುವೆ ಆದ ಕೆಲವು ದಿವಸಗಳವರೆಗೆ ಅಕ್ಕಳೊಂದಿಗೆ ಸರಿಯಾಗಿ
ಇದ್ದು ನಂತರ ದಿವಸಗಳಲ್ಲಿ ದಿನಾಲು ಕುಡಿದು ಬಂದು ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಅವಳಿಗೆ ಹೊಡೆ
ಬಡೆಯುವದು ಮಾಡುತ್ತಿದ್ದನು. ಹೀಗಿದ್ದು
ಇಂದು ದಿನಾಂಕ 22/04/2014 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಅಂಬಿಕಾಳು ಇಂದು ಬೆಳಗ್ಗೆ 8
ಗಂಟೆಯ ಸುಮಾರಿಗೆ ತನ್ನ ಗಂಡನ ಕಿರುಕುಳ ತಾಳಲಾರದೆ ಮನೆಯಲ್ಲಿ ವಿಷ ಸೇವನೆ ಮಾಡಿದ್ದು ಅವಳನ್ನು
ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿ
ಆಗದೆ ಬೆಳಗ್ಗೆ 1100 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾಳೆ.
ನಮ್ಮ ಅಕ್ಕ ಅಂಬಿಕಾಳಿಗೆ ಆಕೆಯ ಗಂಡನಾದ ಅಸೇನಿ
ಈತನು ದಿನಾಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದರಿಂದ ಅವನ ಕಿರುಕುಳ ತಾಳಲಾರದೆ ಅಂಬಿಕಾ
ಇವಳು ವಿಷ ಸೇವನೆ ಮಾಡಿ ಮೃತಪಟ್ಟಿದ್ದು ನಮ್ಮ ಅಕ್ಕಳ ಮರಣಕ್ಕೆ ಕಾರಣನಾದ ನಮ್ಮ ಅಕ್ಕನ ಗಂಡ
ಅಸೇನಿ ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೇ ಕೈಕೊಳ್ಳಲಾಗಿದೆ.
No comments:
Post a Comment