POLICE BHAVAN KALABURAGI

POLICE BHAVAN KALABURAGI

10 January 2014

Gulbarga District Reported Crimes

ಕಮಲಾಪೂರ ಪೊಲೀಸ್ ಠಾಣೆ:
ಅಪಘಾತ ಪ್ರಕರಣಗಳು :
                                                                                                           ನಾನು, ಶಿವಪ್ಪಾ ತಂದೆ ಮಾರುತಿ ಕೋಳಿ ವಯ: 28 ವರ್ಷ ಜಾ: ಕಬ್ಬಲಿಗ ಉ: ವ್ಯಾಪಾರ ಸಾಃ ಚಿಕ್ಕಲಿ (ಜೆ) ತಾಃ ಔರಾದ ಜಿಃ ಬೀದರ ಮೊ.ನಂ. 7760811269 ಅಂತಾ ಠಾಣೆ ಗಣಕಯಂತ್ರದಲ್ಲಿ ಹೇಳಿ ಬರೆಸಿದ್ದು ಹೇಳಿಕೆ.ನಾನು ಈ ಮೇಲೆ ನಮೂದು ಮಾಡಿದ ವಿಳಾಸದ ನಿವಾಸಿಯಾಗಿದ್ದು, ವ್ಯಾಪಾರ ಮಾಡಿಕೊಂಡು ಜೊತೆಯಲ್ಲಿ ಲಾರಿ ನಂ: ಕೆಎ-36–2235 ನೇದ್ದನ್ನು ಇಟ್ಟುಕೊಂಡು ಉಪಜೀವನ ಮಾಡಿಕೊಂಡಿರುತ್ತೇನೆ. ಈ ಲಾರಿಯ ಮೇಲೆ ಪ್ರಕಾಶ ತಂದೆ ಮಾರುತಿ ಸಿಂಧೆ ಸಾಃ ಚಿಂತಾಕಿ ಈತನು ಚಾಲಕನಾಗಿದ್ದು. ಮತ್ತು ಸಾಯಿಕುಮಾರ ತಂದೆ ಮೊಗಲಪ್ಪಾ ವಯ:21 ವರ್ಷ ಸಾಃ ಸುಂಧಾಳ ಈತನು ಕ್ಲೀನರ್ ನಾಗಿ ಕೆಲಸ ಮಾಡುತ್ತಿರುತ್ತಾರೆ.ನಿನ್ನೆ ದಿನಾಂಕ: 08-01-2014 ರಂದು ಝಹಿರಾಬಾದ ಪಟ್ಟಣದ ಹತ್ತಿರ ಇರುವ ಅಲಗೋಲ ಗ್ರಾಮದ ಕಬ್ಬನ್ನು ಆಳಂದ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗುವ ಬಾಡಿಗೆ ಬಂದಿರುವುದರಿಂದ, ನಮ್ಮ ಲಾರಿಯ ಚಾಲಕ ಮತ್ತು ಕ್ಲೀನರ ರವರಿಗೆ ಅಲ್ಲಿಯ ಹೊಲಕ್ಕೆ ಕಳುಹಿಸಿಕೊಟ್ಟಿರುತ್ತೇನೆ. ಇಂದು ದಿನಾಂಕ: 09-01-2014 ರಂದು ಮುಂಜಾನೆ 09-20 ಗಂಟೆಯ ಸುಮಾರಿಗೆ ನಮ್ಮ ಲಾರಿಯ ಚಾಲಕ ಪ್ರಕಾಶ ಸಿಂಧೆ ಈತನು ನನಗೆ ಫೋನ್ ಮಾಡಿ, ಮಾಹಿತಿ ತಿಳಿಸಿದ್ದೇನೆಂದರೆ, ಇಂದು ಬೆಳಗಿನ ಜಾವ 06-30 ಗಂಟೆಗೆ ಅಲಗೋಲ ಗ್ರಾಮದಿಂದ ಕಬ್ಬಿನ ಲೋಡನ್ನು ತೆಗೆದುಕೊಂಡು ಆಳಂದ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗುವ ಕುರಿತು ಗುಲಬರ್ಗಾ ರೋಡಿಗೆ ಬರುತ್ತಿರುವಾಗ ಕಮಲಾಪೂರ ಸಮೀಪ  ಚಿಂದಿ ಬಸವಣ್ಣ ದೇವರ ಗುಡಿಯ ಇಳಿಕಿನಲ್ಲಿ ಬೆಳೆಗ್ಗೆ 9-00 ಗಂಟೆಯ ಕಾಲಕ್ಕೆ ಲಾರಿ ಪಲ್ಟಿಯಾಗಿ ಕ್ಲೀನರ ಸಾಯಿಕುಮಾರ ಈತನು ಕಬ್ಬಿನ ಮತ್ತು ಲಾರಿಯ ಕೆಳಭಾಗದಲ್ಲಿ ಸಿಕ್ಕಿಕೊಂಡು ಭಾರಿ ರಕ್ತಗಾಯಗೊಂಡು  ಮೃತಪಟ್ಟಿರುತ್ತಾನೆ ಅಲ್ಲಿಂದ  ನಾನು ಗಾಬರಿಗೊಂಡು ಓಡಿ ಬಂದಿರುತ್ತೇನೆ ಅಂತಾ  ತಿಳಿಸಿದ್ದಕ್ಕೆ, ಕೂಡಲೇ ನಾನು ಮತ್ತು ನನ್ನ ಜೊತೆಯಲ್ಲಿ ಪ್ರಭು ಜಾಧವ ಇವರೊಂದಿಗೆ ಅಪಘಾತವಾದ ಸ್ಥಳಕ್ಕೆ ಬೆಳಿಗ್ಗೆ 11-00 ಗಂಟೆ ನಂತರ ಬಂದು ನೋಡಲಾಗಿ ಲಾರಿಯು ರೋಡಿನ ಪಕ್ಷಿಮ ದಂಡೆಗೆ ಕ್ಲೀನರನ ಸೈಡಿನ ಮಗ್ಗಲಾಗಿ ಬಿದ್ದಿದ್ದು, ಕಬ್ಬಿನಲ್ಲಿ ಹಾಗೂ ಲಾರಿಯ ಭಾಗದಲ್ಲಿ ಕ್ಲೀನರನು  ಸಿಕ್ಕಿಕೊಂಡು ಬಿದ್ದಿದ್ದು, ಅಲ್ಲಿ  ಪೊಲೀಸರು ಇದ್ದರು , ಮುಂದೆ ವಿಚಾರಣೆಯಲ್ಲಿ ಗೋತ್ತಾಗಿದ್ದೇನೆಂದರೆ, ನಮ್ಮ ಲಾರಿಯ ಚಾಲಕ ಪ್ರಕಾಶ ಸಿಂಧೆ ಈತನು ನಮ್ಮ ಲಾರಿಯಲ್ಲಿ ಕಬ್ಬಿನ ಲೋಡಿನೊಂದಿಗೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಗುಲಬರ್ಗಾ ಮಾರ್ಗದ ಕಡೆಗೆ ಬರುವಾಗ ಬೆಳೆಗ್ಗೆ 9-00 ಗಂಟೆ ಸುಮಾರಿಗೆ ಕಮಲಾಪೂರ ಸಮೀಪ ಚಿಂದಿ ಬಸವಣ್ಣನ ಗುಡಿಯ ಹತ್ತಿರ ರೋಡಿನ  ಬದಿಗೆ ಪಲ್ಟಿ ಮಾಡಿದ್ದರಿಂದ  ಲಾರಿಯ  ಕ್ಲೀನರ ಸಾಯಿಕುಮಾರ ಈತನು ಅದರಲ್ಲಿ  ಸಿಕ್ಕಿಹಾಕಿಕೊಂಡು ಹಣೆಯ ಭಾಗಕ್ಕೆ , ಬಲಗಾಲು, ಬಲಗೈಗೆ  ಹಾಗೂ ದೇಹದ ಇತರ ಕಡೆಗೆ ಭಾರಿ ಪ್ರಮಾಣದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಘಟನೆಯನ್ನು ಮಹೇಶ ತಂದೆ ಕರಬಸಪ್ಪ ಪಾಟೀಲ್ ಸಾ: ಡೊಂಗರಗಾಂವ  ಮತ್ತು ಸಂತೋಷ ತಂದೆ ಕಾಶೀನಾಥ ಕೇಶ್ವರ ಸಾ; ಇಬ್ಬರೂ  ಡೊಂಗರಗಾಂವ  ಇವರು  ನೋಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ಮುಂದೆ ನಮ್ಮ ಚಾಲಕ ಪ್ರಕಾಶ ಈತನು ಸಧ್ಯ ಎಲ್ಲಿರುತ್ತಾನೆ ಎಂಬುವ ಬಗ್ಗೆ ತಿಳಿದು ಬಂದಿರುವುದಿಲ್ಲಾ.ಕಾರಣ ಈ ವಿಷಯದಲ್ಲಿ  ಮುಂದಿನ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕೆಂದು  ಹೇಳಿ ಠಾಣೆಯ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ  ಹೇಳಿಕೆ  ನಿಜವಿದೆ.

08 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಅನೀತಾ ಗಂಡ ನಾಗೇಶ್ವರ ರಾವ  ಸಾ: ವೈಜಾಕ ತಾ: ಕೊಂಡಪಾಲಮ (ಎ.ಪಿ.) ಹಾ:ವ: ಬಿದ್ದಾಪೂರ ಕಾಲೋನಿ  ಗುಲಬರ್ಗಾ ರವರು ಮತ್ತು ಗಂಡನಾದ ನಾಗೇಶ್ವರ ಹಾಗು ವಿಶ್ವನಾಥ ರವರು 07-01-2014 ರಂದು ಸಾಯಂಕಾಲ ಅಪ್ಪನ ಕೆರೆ ಗಾರ್ಡನಕ್ಕೆ ನನ್ನ ಗಂಡ ಚಲಾಯಿಸುತ್ತಿರುವ ಮೋ./ಸೈಕಲ್ ನಂ: ಎ.ಪಿ. 31 ಬಿಹೆಚ್-0559 ರ ಮೇಲೆ ನಾನು ಮತ್ತು ವಿಶ್ವನಾಥ ಇಬ್ಬರು ಹಿಂದುಗಡೆ ಕುಳಿತು ಹೋಗಿ ವಾಪಸ ಮನೆಯ ಕಡೆಗೆ ರಾಮ ಮಂದೀರ ಸರ್ಕಲ್ ಮುಖಾಂತರ ಹೋಗುವಾಗ ರಾತ್ರಿ 8=15 ಗಂಟೆ ಸುಮಾರಿಗೆ ಸರ್ವಜ್ಞಾ ಶಾಲೆಯ ಎದುರು ರೋಡ ಡಿವೈಡರನಲ್ಲಿ ಸಿಲ್ವರ ಕಲರ ಕಾರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಕರುಣೇಶ್ವರ ನಗರ ಕಡೆಯಿಂದ ಅಡ್ಡವಾಗಿ ಬಂದು ಹೈ ಕೋರ್ಟ ಕಡೆಗೆ ತಿರುಗಿಸಿ ನಮ್ಮ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿದ್ದು ಮತ್ತು ನನ್ನ ಗಂಡನಿಗೆ ಹಾಗೂ ವಿಶ್ವನಾಥ ಇವರಿಗೆ ಭಾರಿ ಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ಕುಮಾರಿ ಸುರೇಖಾ ತಂದೆ ವೈಜನಾಥ ನಾಟಿಕರ, ಸಾಃ ರಾಮ ನಗರ ಗುಲಬರ್ಗಾ ಇವಳು ನಗರೇಶ್ವರ ಶಾಲೆಯಲ್ಲಿ ನೇ ತರಗತಿಯಲ್ಲಿ ಓದುತ್ತಿದ್ದು ಪ್ರತಿ ದಿವಸ ಶಾಲೆಗೆ ಅಟೋರಿಕ್ಷಾ ನಂ. ಕೆ 32  8991 ನೇದ್ದರಲ್ಲಿ ಹೋಗಿ ಬರುವದು ಮಾಡುತ್ತಿದ್ದು ದಿನಾಂಕ 07-01-2014 ರಂದು ಎಂದಿನಂತೆ ಅಟೋರಿಕ್ಷಾ ನಂ. ಕೆ.ಎ  32  8991 ನೇದ್ದರಲ್ಲಿ ಶಾಲೆಗೆ ಹೋಗುತ್ತಿದ್ದಾಗ ಅಟೋರಿಕ್ಷಾ ಚಾಲಕ ಮಲ್ಲಿಕಾರ್ಜುನ ಇತನು 9-30 ಎ.ಎಮ್ ಕ್ಕೆ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಣಕಲ್ ಪೆಟ್ರೊಲ್ ಬಂಕ ಹತ್ತಿರ ರೋಡಿನ ಪಕ್ಕಕ್ಕೆ ನಿಂತ  ಅಟೋರಿಕ್ಷಾ ನಂ. ಕೆ.ಎ 32 -8196 ನೇದ್ದರ ಹಿಂದಿನ ಎಡಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿ ಅಟೋರಿಕ್ಷಾದಿಂದ ಕೆಳಗೆ ಬಿದ್ದು ಎಡಗಾಲು ತೊಡೆಗೆ ಭಾರಿ ಪೆಟ್ಟು ಬಿದ್ದು ಗಾಯಹೊಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 07-01-2014 ರಂದು 11:45 ಎ.ಎಮ್ ಸುಮಾರಿಗೆ ರೇವಣಸಿದ್ದ ತಂ, ಅಪ್ಪಣ್ಣ ಕೋರಿ ಸಾ||ರಾಜನಾಳ ಇತನು ತನ್ನ ವಶದಲ್ಲಿದ್ದ ಹಿರೋ ಸ್ಪ್ಲೇಂಡರ್ ಪ್ಲಸ್ ನಂ; ಕೆ.ಎ-32-ಇಡಿ-2675 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕುರಿಕೋಟಾ ಗ್ರಾಮದ ಹತ್ತಿರ ಇರುವ ಶಿವಪ್ರಭು ಪಾಟೀಲ ಇವರ ಪೆಟ್ರೋಲ್ ಪಂಪ ಹತ್ತಿರ ಪಲ್ಟಿ ಮಾಡಿದ್ದರಿಂದ ಆತನ ತಲೆಗೆ ಭಾರಿರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 06-01-2014 ರಂದು ಸಂಜೆಯ ವೇಳೆಯಲ್ಲಿ ಶ್ರೀ ಜಗಧೀಶ ಕೆ ಜಿ ಪಿ ಎಸ್ ಐ ನೆಲೋಗಿ ಪೊಲೀಸ್ ಠಾಣೆ ರವರು ಹಳ್ಳಿ  ಗಸ್ತಿನಲ್ಲಿ ಸಿಬ್ಬಂದಿಯೊಂದಿಗೆ ಇದ್ದಾಗ ಮಾವನೂರ ಗ್ರಾಮದ ದೇವಿಂದ್ರ ಮೈನಾಳ ಇತನು ಫೋನ ಮಾಡಿ ತಿಳಿಸಿದ್ದೇನೆಂದರೆ ಅರ್ಜುನ ಕಿರಣಗಿ ಮತ್ತು ಅವನ ಸಂಬಂಧಿಕರು ನಮ್ಮ ಮಗನಿಗೆ ಹಾಗೂ ನಮ್ಮ ಅಣ್ಣನ ಮಗನಿಗೆ ಗಿಡಕ್ಕೆ ಕಟ್ಟಿ ಹೊಡೆಯುತ್ತಿದ್ದಾರೆ ಅಂತಾ ಹೇಳಿದಾಗ ಅಲ್ಲಿಗೆ ಜೀಪಿನಲ್ಲಿ ಹೋಗಿ ಗಿಡಕ್ಕೆ ಕಟ್ಟಿದ ಕೆಂಚಪ್ಪ ಹಾಗೂ ಶರಣಪ್ಪನಿಗೆ ಬಿಡಿಸಲು ಹೋದಾಗ ಆರೋಪಿತರು ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಲು ಯತ್ನಿಸಿ ಕೆಕೆ ಹಾಕುತ್ತಾ ಉದ್ತಿಕ್ತವಾಗಿ ವರ್ತಿಸಿ, ಪಿಸಿ 200 ಮತ್ತು ಪಿಸಿ 417 ರವರ ಮೇಲೆ ಹಲ್ಲೆ ಮಾಡಿದ್ದು, ಅವರ ಕೈಯಲ್ಲಿಒದ್ದ ಲಾಠಿಗಳನ್ನು ಕಸಿಯಲು ಯತ್ನಿಸಿದ್ದು, ನಂತರ ಆರೋಪಿತರೆಲ್ಲರು ಸಿಬ್ಬಂದಿಯವರಿಗೆ ಸಾಯಿಸಲ ಪ್ರಯತ್ನ ಮಾಡಿ ಕಾನೂನು ರೀತ್ಯಾ ಕರ್ತವ್ಯ ಮಾಡಲು ಅಡ ತಡೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ. ಅಮೀತ ತಂದೆ ಸೇವುಸಿಂಗ ರಾಠೋಡ  ಸಾ: ದಮರಾಸ ತಾ: ಕಾಲ್ಪಿ ಜಿ: ಜಾಲೂನ (ಯು.ಪಿ ರಾಜ್ಯ) ಹಾ.ವ:  ಖದಿರ ಚೌಕ  ಎಂ.ಎಸ್‌.ಕೆ ಮೀಲ ಗುಲಬರ್ಗಾ ರವರು ದಿನಾಂಕ 07-01-2014 ರಂದು ರಾತ್ರಿ  7:00 ಗಂಟೆ ಸುಮಾರಿಗೆ ವಡ್ಡರಗಲ್ಲಿಯಲ್ಲಿ ಪಾನಿಪೂರಿ ಬಂಡಿ ವ್ಯಾಪಾರ ಮಾಡಿತ್ತಿರುವಾಗ ಬಸವನಗರದ ಆವಾರ ಹುಡುಗುರಾದ ಅಂಬರಿಷ, ಮತ್ತು ಅವನ ಗೆಳೆಯರಾದ ಬಿನ್, ಶಿವಶರಣ, ವಿರೇಶ ಇವರು ಬಂದು ಪಾನಿಪುರಿ ತಿಂದಿದ್ದು ಬಿಲ್ ಕೇಳಿದಕ್ಕೆ ಅವರು ಅವಾಚ್ಯ ಶಬ್ದಗಳಿಂದ ಬೈದು ನಮಗೆ ಹಣ ಕೇಳುತ್ತಿ ಅಂತಾ ಅಂದು ನನ್ನ ಪಾನಿಪುರಿ ಬಂಡಿಯ ಗ್ಲಾಸ ಒಡೆದಿದ್ದರಿಂದ ಪಾನಿ ಮತ್ತು ಪುರಿ ಎಲ್ಲಾ ಚಲ್ಲಾಪಿಲ್ಲಿಯಾಗಿರುತ್ತವೆ. ಆಗ ನಾನು ಮೇರಾ (900/-)   ನೌಸೋ ರೂಪಿಯಾ ಲಾಸ ಹೋಗಯಾ ದೇವೊ”  ಅಂತಾ ಕೇಳಿದಕ್ಕೆ ಮಾಕೇ ಲೌಡೆ ಫೀರ ಹಮ್ ಸೇ ಪೈಸಾ ಪುಛತಾ ಸಾಲೇ ತೆರೋಕು ಛೋಡತಾ ನಹಿ ಖತಮ ಕರತು ಅಂತಾ ಅಂದವರೆ ತಲವಾರದಿಂದ ನನ್ನ ಕುತ್ತಿಗೆಗೆ ಹೋಡೆಯುತ್ತಿರುವಾಗ ನಾನು  ಏಡಗೈ ಅಡ್ಡಪಡಿಸಿದ್ದರಿಂದ ಏಟು ನನ್ನ ಏಡಗೈ ಹಸ್ತಕ್ಕೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ನನಗೆ ಅವಾಚ್ಯ ಶಬ್ದಗಳಿಂದ ಬೈದು ತಲವಾರದಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನೆಲೋಗಿ ಠಾಣೆ : ಶ್ರೀ  ಕೆಂಚಪ್ಪ ತಂದೆ ದೇವಿಂದ್ರ ಮೈನಾಳ ಸಾ: ಮಾವನೂರ   ರವರು ದಿನಾಂಕ: 06-01-2014 ರಂದು 06.15 ಪಿ ಎಮ್ ಕ್ಕೆ ತಮ್ಮ ಹೊದಲ್ಲಿ ತೊಗರಿ ರಾಶಿ ಮಾಡುವಾಗ 1. ಕೆಂಚಪ್ಪ ತಂದೆ ದೇವಿಂದ್ರ ಮೈನಾಳ 2. ಶರಣಪ್ಪ ತಂದೆ ತಿಪ್ಪಣ್ಣ ಆಲೂರ ಸಂಗಡ 5-6 ಜನರು ಸಾ: ಎಲ್ಲರು ಮಾವನೂರ ಇವರು ಗುಂಪು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಹೊಲಕ್ಕೆ ಹೋಗಿ ನಮ್ಮ ಮಗಳಾದ ಮರೆಮ್ಮ ಇವಳು ಮೌನೇಶ ಒಡ್ಡರ ಇವನ ಸಂಗಡ ಅನೈತಿಕ ಸಂಬಂಧ ಹೊಂದಲು ನೀವೆ 3 ಜನರು ಕಾರಣರೆಂದು ಫಿರ್ಯಾದಿಗೆ ಕೊಡಲಿಯಿಂದ ಹೊಡೆದು, ಬಿಡಿಸಲು ಬಂದವನಿಗೆ ಬಡಿಗೆಯಿಂದ ಹೊಡೆದು ಇವರಿಗೆ ಇಷ್ಟಕ್ಕೆ ಬಿಡಬಾರದು ಊರಲ್ಲಿ ಕರೆದುಕೊಂಡು ಹೋಗಿ ಜನರು ನೋಡುವಂತೆ ಗಿಡಕ್ಕೆ ಕಟ್ಟಬೇಕು ಅಂತಾ ಫಿರ್ಯಾದಿಗೆ ಹಾಗೂ ಶರಣಪ್ಪ ಬೇಲೂರ ಇತನಿಗೆ ಊರಿನ ತನಕ ಎಳೆದುಕೊಂಡು ಬಂದು ಗಿಡಕ್ಕೆ ಕಟ್ಟಿ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 07-01-2014 ರಂದು 7-15 ಪಿ.ಎಮ.ಕ್ಕೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಪ್ರಕಾಶ ಹೆಚ್.ಸಿ. 259, ಅಶೋಕ ಪಿಸಿ 86,  ಹಾಗು ಪಂಚರೋಂದಿಗೆ ಖಚಿತ ಬಾತ್ಮಿ ಮೇರೆಗೆ ಮಿಲನ ಚೌಕ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದವನ ಮೇಲೆ ದಾಳಿ ಮಾಡಿ ಮಟಕಾ ಬರೆಯಿಸುತ್ತಿದ್ದವರು ಓಡಿ ಹೋಗಿದ್ದುಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಅಬ್ದುಲ್ ಸತ್ತಾರ್ ತಂದೆ ಖಾಸಿಂ ಅಲಿ ಸಾ|| ಗಾಜೀಪೂರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಿಸಿದ  ನಗದು ಹಣ 875/-, ಮಟಕಾ ಚೀಟಿ, ಬಾಲ ಪೆನ್ನಇವುಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು  ಆರೋಪಿ ಅಬ್ದುಲ್ ಸತ್ತಾರ್ ಈತನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶಿವಲಿಂಗಪ್ಪಾತಂದೆ ಭೀಮಶ್ಯಾ ಮದರಿ ಸಾ;ಸಿಂಧಗಿ(ಬಿ) ತಾ;ಜಿ;ಗುಲಬರ್ಗಾ, ರವರ ªÀÄUÀ£Áಮಹಾಂತಪ್ಪಾ ವಯಸ್ಸು;16 ವರ್ಷ ಸದೃಡ ಮೈಕಟ್ಟು ಎಣ್ಣೆಗೆಂಪು ಮೈಬಣ್ಣ ನೇರವಾದ ಮೂಗು ಕನ್ನಡ ಭಾಷೆ ಮಾತನಾಡುವ 9 ನೇತರಗತಿ ವಿದ್ಯಾರ್ಥಿ ಇತನು ದಿನಾಂಕ. 4-11-2013 ರಂದು ಮನೆಯಿಂದ ಶಾಲೆಗೆ  ಹೋಗುತ್ತೇನೆ ಅಂತಾ ಮನೆಯಿಂದ ಹೋದವನು ಇವತ್ತಿನ ವರೆಗೆ ಬಂದಿರುವದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಸಿದ್ರಾಮಯ್ಯ ತಂದೆ ಬಸಯ್ಯ ಮಠ ಮು|| ನಾವದಗಿ ಸಧ್ಯ ವಾಸ ಪ್ಲಾಟ.ನಂ: 5 ರಘೋಜಿ ಲೆಔಟ್ ರೇವಣಸಿದ್ದೇಶ್ವರ ಕಾಲೋನಿ ಗುಲ್ಬರ್ಗಾ, ರವರ  ªÀÄUÀ£Áವೀರೇಶ ವಯಸ್ಸು;27 ವರ್ಷ ಎತ್ತರ 5 4 ಸದೃಡ ಮೈಕಟ್ಟು ನೇರವಾದ ಮೂಗು ಎಣ್ಣೆಗೆಂಪು ಮೈಬಣ್ಣ ಕನ್ನಡ, ಹಿಂದಿ ಭಾಷೆ ಮಾತನಾಡುವ ಇತನು ದಿನಾಂಕ. 21-12-2013 ರಂದು ಮನೆಯಿಂದ ಹೋದವನು ಇವತ್ತಿನ ವರೆಗೆ ಬಂದಿರುವದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 January 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಕೊಂಚಾವರಂ ಠಾಣೆ : ಶ್ರೀ ಮೊಘಲಪ್ಪಾ ತಂದೆ ಯಲ್ಲಪ್ಪಾ ಸಾ|| ಮಗದಂಪುರ ತಾ|| ಚಿಂಚೋಳಿ ರವರು ದಿನಾಂಕ 31.12.2013 ರಂದು ರಾತ್ರಿ ವೇಳೆಯಲ್ಲಿ 12.00 ಗಂಟೆಗೆ ಫಿರ್ಯಾದಿಯೂ ಮಗದಂಪುರ ಗ್ರಾಮದ ದಶರಥ ಇತನ ಕಟಿಂಗ್ ಶಾಪ ಅಂಗಡಿ ಮುಂದುಗಡೆ ರೋಡಿನ ಮೇಲೆ ಹೊಸ ವರ್ಷ ಆಚರಣೆ ಮಾಡುತ್ತಿರುವಾಗ ಆರೋಪಿ ದಶರಥ ತಂದೆ ಶಿವಣ್ಣ ಮಂಗಲಿ, ವಿಜು, ತಂದೆ ದಶರಥ ಬಿಚ್ಚಪ್ಪಾ ತಂದೆ ದಶರಥ , ಸತ್ಯಪ್ಪಾ ತಂದೆ ಶಿವಣ್ಣಾ ಇವರು ನೀನು ಹೊಲೇ ಸೂಳೀ ಮಗನೇ ನನ್ನ ಅಂಗಡಿ ಕಡೆ ಬಾ ನೋಡ್ತೀವಿ ಅಂತಾ ಜಾತೀ ಎತ್ತೀ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆದಿರುತ್ತಾರೆ, ನನಗೆ ಹೊಡೆ ಬಡೆ ಮಾಡಿದವರ ವಿರುದ್ದ   ಕಾನೂನು ಕ್ರಮ ಕೈಗೋಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಶಂಶದ ಮೇಲಿಂದ ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸಂಜುಕುಮಾರ ತಂದೆ ಗೋಪಿನಾತ ರಾಠೋಡ ಸಾ:ಮರಮಂಚಿ ತಾಂಡಾ ತಾ:ಜಿ: ಗುಲಬರ್ಗಾ ರವರು ದಿನಾಂಕ: 07-01-2014 ರಂದು ಮುಂಜಾನೆ 10-30 ಗಂಟೆಯ ಸೂಮಾರಿಗೆ ಮರಮಂಚಿ ಗ್ರಾಮದ ವಿಜಯಕುಮಾರ ತಂದೆ ವಿಠಲರಾವ ಜಮಾದಾರ ಇವರು ನನ್ನ ಮೋಬಾಯಿಲಗೆ ಕರೆಮಾಡಿ ನನ್ನ ಅಜ್ಜಿಯಾದ ಜೀಣಾಬಾಯಿ ರಾಠೋಡ ಇವಳಿಗೆ ಮರಮಂಚಿ ಗ್ರಾಮದಿಂದ ಸ್ವಂತ ಗ್ರಾಮದ ಕಡೆಗೆ ಹೋಗುವ ರಸ್ತೆಯ ಮೇಲೆ ಡೌನಲನಲ್ಲಿ ರಸ್ತೆ ಅಪಘಾತವಾದ ಬಗ್ಗೆ ವಿಷಯ ತಿಳಿಸಿದ್ದು ನಾನು ಗಾಬರಿಯಿಂದ ನಮ್ಮ ತಾಂಡಾದ ರಮೇಶ ರಾಠೋಡ ಮತ್ತು ಸುಭಾಷ ರಾಠೋಡ ಇವರನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲು ನನ್ನ ಅಜ್ಜಿ ಜೀಣಾಬಾಯಿಯ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿ ಬಾಯಿಯಿಂದ ಮುಗಿನಿಂದ ಮತ್ತು ಬಲ ಕಿವಿಯಿಂದ ರಕ್ತ ಬಂದಿದ್ದು ಅಲ್ಲದೆ ನನ್ನ ಅಜ್ಜಿ ಬಲಗಾಲ ಪಾದ ಮುರಿದು ಜೋತು ಬಿದ್ದಂತಾಗಿದ್ದನ್ನು ಕಂಡು ಅಲ್ಲೆ ಹಾಜರಿದ್ದ ವಿಜಯಕುಮಾರಿನಿಗೆ ವಿಚಾರಿಸಿದಾಗ ಡಿ.ಸಿ.ಎಮ ಟೆಂಪೋ 608 ಅದರ ನಂಬರ ಕೆಎ-38 -213 ನೇದ್ದರ ಚಾಲಕ ತನ್ನ ಟೆಂಪೋವನ್ನು ಮರಗುತ್ತಿ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತ ಬಂದು ರಸ್ತೆ ಬದಿಗೆ ಹೋರಟ ನನ್ನ ಅಜ್ಜಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.