ಕಮಲಾಪೂರ ಪೊಲೀಸ್ ಠಾಣೆ:
ಅಪಘಾತ ಪ್ರಕರಣಗಳು :
ನಾನು, ಶಿವಪ್ಪಾ ತಂದೆ ಮಾರುತಿ ಕೋಳಿ ವಯ: 28 ವರ್ಷ ಜಾ: ಕಬ್ಬಲಿಗ
ಉ: ವ್ಯಾಪಾರ ಸಾಃ ಚಿಕ್ಕಲಿ (ಜೆ) ತಾಃ ಔರಾದ ಜಿಃ ಬೀದರ ಮೊ.ನಂ. 7760811269 ಅಂತಾ ಠಾಣೆ
ಗಣಕಯಂತ್ರದಲ್ಲಿ ಹೇಳಿ ಬರೆಸಿದ್ದು ಹೇಳಿಕೆ.ನಾನು ಈ ಮೇಲೆ ನಮೂದು ಮಾಡಿದ ವಿಳಾಸದ
ನಿವಾಸಿಯಾಗಿದ್ದು, ವ್ಯಾಪಾರ ಮಾಡಿಕೊಂಡು ಜೊತೆಯಲ್ಲಿ ಲಾರಿ ನಂ: ಕೆಎ-36–2235
ನೇದ್ದನ್ನು ಇಟ್ಟುಕೊಂಡು ಉಪಜೀವನ ಮಾಡಿಕೊಂಡಿರುತ್ತೇನೆ. ಈ ಲಾರಿಯ ಮೇಲೆ ಪ್ರಕಾಶ ತಂದೆ ಮಾರುತಿ
ಸಿಂಧೆ ಸಾಃ ಚಿಂತಾಕಿ ಈತನು ಚಾಲಕನಾಗಿದ್ದು. ಮತ್ತು ಸಾಯಿಕುಮಾರ ತಂದೆ ಮೊಗಲಪ್ಪಾ ವಯ:21 ವರ್ಷ
ಸಾಃ ಸುಂಧಾಳ ಈತನು ಕ್ಲೀನರ್ ನಾಗಿ ಕೆಲಸ ಮಾಡುತ್ತಿರುತ್ತಾರೆ.ನಿನ್ನೆ ದಿನಾಂಕ: 08-01-2014
ರಂದು ಝಹಿರಾಬಾದ ಪಟ್ಟಣದ ಹತ್ತಿರ ಇರುವ ಅಲಗೋಲ ಗ್ರಾಮದ ಕಬ್ಬನ್ನು ಆಳಂದ ಸಕ್ಕರೆ ಕಾರ್ಖಾನೆಗೆ
ತೆಗೆದುಕೊಂಡು ಹೋಗುವ ಬಾಡಿಗೆ ಬಂದಿರುವುದರಿಂದ, ನಮ್ಮ
ಲಾರಿಯ ಚಾಲಕ ಮತ್ತು ಕ್ಲೀನರ ರವರಿಗೆ ಅಲ್ಲಿಯ ಹೊಲಕ್ಕೆ ಕಳುಹಿಸಿಕೊಟ್ಟಿರುತ್ತೇನೆ. ಇಂದು ದಿನಾಂಕ:
09-01-2014 ರಂದು ಮುಂಜಾನೆ 09-20 ಗಂಟೆಯ ಸುಮಾರಿಗೆ ನಮ್ಮ ಲಾರಿಯ ಚಾಲಕ ಪ್ರಕಾಶ ಸಿಂಧೆ ಈತನು ನನಗೆ
ಫೋನ್ ಮಾಡಿ, ಮಾಹಿತಿ ತಿಳಿಸಿದ್ದೇನೆಂದರೆ, ಇಂದು ಬೆಳಗಿನ ಜಾವ 06-30 ಗಂಟೆಗೆ ಅಲಗೋಲ ಗ್ರಾಮದಿಂದ ಕಬ್ಬಿನ ಲೋಡನ್ನು ತೆಗೆದುಕೊಂಡು
ಆಳಂದ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗುವ ಕುರಿತು ಗುಲಬರ್ಗಾ ರೋಡಿಗೆ ಬರುತ್ತಿರುವಾಗ
ಕಮಲಾಪೂರ ಸಮೀಪ ಚಿಂದಿ ಬಸವಣ್ಣ ದೇವರ ಗುಡಿಯ
ಇಳಿಕಿನಲ್ಲಿ ಬೆಳೆಗ್ಗೆ 9-00 ಗಂಟೆಯ ಕಾಲಕ್ಕೆ ಲಾರಿ ಪಲ್ಟಿಯಾಗಿ ಕ್ಲೀನರ ಸಾಯಿಕುಮಾರ ಈತನು
ಕಬ್ಬಿನ ಮತ್ತು ಲಾರಿಯ ಕೆಳಭಾಗದಲ್ಲಿ ಸಿಕ್ಕಿಕೊಂಡು ಭಾರಿ ರಕ್ತಗಾಯಗೊಂಡು ಮೃತಪಟ್ಟಿರುತ್ತಾನೆ ಅಲ್ಲಿಂದ ನಾನು ಗಾಬರಿಗೊಂಡು ಓಡಿ ಬಂದಿರುತ್ತೇನೆ ಅಂತಾ ತಿಳಿಸಿದ್ದಕ್ಕೆ, ಕೂಡಲೇ ನಾನು ಮತ್ತು ನನ್ನ ಜೊತೆಯಲ್ಲಿ ಪ್ರಭು ಜಾಧವ ಇವರೊಂದಿಗೆ ಅಪಘಾತವಾದ ಸ್ಥಳಕ್ಕೆ
ಬೆಳಿಗ್ಗೆ 11-00 ಗಂಟೆ ನಂತರ ಬಂದು ನೋಡಲಾಗಿ ಲಾರಿಯು ರೋಡಿನ ಪಕ್ಷಿಮ ದಂಡೆಗೆ ಕ್ಲೀನರನ ಸೈಡಿನ
ಮಗ್ಗಲಾಗಿ ಬಿದ್ದಿದ್ದು, ಕಬ್ಬಿನಲ್ಲಿ ಹಾಗೂ ಲಾರಿಯ ಭಾಗದಲ್ಲಿ ಕ್ಲೀನರನು ಸಿಕ್ಕಿಕೊಂಡು ಬಿದ್ದಿದ್ದು, ಅಲ್ಲಿ ಪೊಲೀಸರು ಇದ್ದರು , ಮುಂದೆ ವಿಚಾರಣೆಯಲ್ಲಿ ಗೋತ್ತಾಗಿದ್ದೇನೆಂದರೆ, ನಮ್ಮ ಲಾರಿಯ ಚಾಲಕ ಪ್ರಕಾಶ ಸಿಂಧೆ ಈತನು ನಮ್ಮ ಲಾರಿಯಲ್ಲಿ ಕಬ್ಬಿನ ಲೋಡಿನೊಂದಿಗೆ
ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಗುಲಬರ್ಗಾ ಮಾರ್ಗದ ಕಡೆಗೆ ಬರುವಾಗ ಬೆಳೆಗ್ಗೆ
9-00 ಗಂಟೆ ಸುಮಾರಿಗೆ ಕಮಲಾಪೂರ ಸಮೀಪ ಚಿಂದಿ ಬಸವಣ್ಣನ ಗುಡಿಯ ಹತ್ತಿರ ರೋಡಿನ ಬದಿಗೆ ಪಲ್ಟಿ ಮಾಡಿದ್ದರಿಂದ ಲಾರಿಯ
ಕ್ಲೀನರ ಸಾಯಿಕುಮಾರ ಈತನು ಅದರಲ್ಲಿ
ಸಿಕ್ಕಿಹಾಕಿಕೊಂಡು ಹಣೆಯ ಭಾಗಕ್ಕೆ ,
ಬಲಗಾಲು, ಬಲಗೈಗೆ ಹಾಗೂ
ದೇಹದ ಇತರ ಕಡೆಗೆ ಭಾರಿ ಪ್ರಮಾಣದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಘಟನೆಯನ್ನು
ಮಹೇಶ ತಂದೆ ಕರಬಸಪ್ಪ ಪಾಟೀಲ್ ಸಾ: ಡೊಂಗರಗಾಂವ
ಮತ್ತು ಸಂತೋಷ ತಂದೆ ಕಾಶೀನಾಥ ಕೇಶ್ವರ ಸಾ; ಇಬ್ಬರೂ ಡೊಂಗರಗಾಂವ ಇವರು
ನೋಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ಮುಂದೆ ನಮ್ಮ ಚಾಲಕ ಪ್ರಕಾಶ ಈತನು ಸಧ್ಯ
ಎಲ್ಲಿರುತ್ತಾನೆ ಎಂಬುವ ಬಗ್ಗೆ ತಿಳಿದು ಬಂದಿರುವುದಿಲ್ಲಾ.ಕಾರಣ ಈ ವಿಷಯದಲ್ಲಿ ಮುಂದಿನ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಹೇಳಿ ಠಾಣೆಯ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ
ನಿಜವಿದೆ.
No comments:
Post a Comment