POLICE BHAVAN KALABURAGI

POLICE BHAVAN KALABURAGI

04 January 2014

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 02-01-2014 ರಂದು 08-30 ಪಿ.ಎಮ್ ಕ್ಕೆ ದತ್ತಾತ್ರಾಯ ತಂದೆ ಶರಣಪ್ಪಾ ಹೊನಗುಂಟಿ, ಸಾಃ ಗಂಗಾ ನಗರ ಗುಲಬರ್ಗಾ ರವರು ಮತ್ತು  ತನ್ನ ಗೆಳೆಯ ಮಹಾದೇವ ಇಬ್ಬರು ಕೂಡಿ ಮೋಟಾರು ಸೈಕಲ ನಂ. ಕೆ.ಎ 32 ಕೆ 4636 ನೇದ್ದರ ಮೇಲೆ ಶಹಾಬಜಾರ ನಾಕಾ ರೋಡಿಗೆ ಇರುವ ಖರ್ಗೆ ಕಾಲೇಜ ಹತ್ತಿರ ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32 ಎ 2805 ನೇದ್ದರ ಚಾಲಕನು ತನ್ನ ಅಟೋರಿಕ್ಷಾ ಪ್ರಕಾಶ ಟಾಕೀಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಪಾದಕ್ಕೆ ಮತ್ತು ಕಪಗಂಡಿ ಕೆಳಗಡೆ ಬಲಗೈ ಮೊಳಕೈ ಮತ್ತು ಬೆರಳುಗಳಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆಸೀಫ ರಹೆಮಾನ ತಂದೆ ರುಕ್ನೊದ್ದಿನ ಇವರು ಹುಟ್ಟಿನಿಂದಲೆ ಮೂಕನಾಗಿರುತ್ತಾನೆ ಮಾತನಾಡಲಿಕೆ ಬರುವದಿಲ್ಲಾ ಅಂತಾ ಗೊತ್ತಾಗಿ ಅವರ ಹತ್ತಿರವಿದ ಅವರ ತಾಯಿ ಖುರ್ಷಿದ ಬಾನು ಗಂಡ ರುಕ್ನೊದಿನ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ. ದಿನಾಂಕ 03-01-2014 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿ ಮಗನಾದ ಆಸೀಫ ರಹೆಮಾನ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-33 ಹೆಚ್-4738 ನೇದ್ದನ್ನು ರೇಲ್ವೆ ಸ್ಟೇಶನ ಕಡೆಯಿಂದ ಐವಾನ ಈ ಷಾಯಿ ರೋಡ ಕಡೆಗೆ ತಮ್ಮ ಕಾಲೇಜಕ್ಕೆ ಹೋಗುತ್ತಿದ್ದಾಗ ಹೊಸ ಐವಾನ ಈ ಷಾಯಿ ಎದುರು ರೋಡಿನ ಮೇಲೆ ಸ್ಟೇಶನ ರೋಡ ಕಡೆಯಿಂದ ಲಾರಿ ನಂಬರ ಎಮ್.ಹೆಚ್.-15 ಬಿಜೆ-3645 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ಲಾರಿ ಅಲ್ಲೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ತಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಬಸಮ್ಮ ಗಂಡ ಬಸವರಾಜ ಸಾಃ ಎಂ.ಬಿ ನಗರ ಗುಲಬರ್ಗಾ ರವರು ದಿನಾಂಕ 03-01-2014 ರಂದು ಮುಂಜಾನೆ 09:00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಶ್ರೀದೇವಿ, ನಾಗಮ್ಮ ಇವರು ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು  ಎಲ್ಲಾ ಮಂದಿ ಮುಂದ ಬಿ.ಸಿ ಹಣ ಕೇಳಿ ನನ್ನ ಮರ್ಯಾದೆ ತೆಗೆದಿದಿ ಅಂತಾ ಚಿರುಡುತ್ತಿದ್ದಾಗ ಮನೆಯ ಹೊರಗೆ ಬಂದು ಏಕೆ ಅಂತಾ ಕೇಳುತ್ತಿರುವಾಗ ಶ್ರೀದೇವಿ ಇವಳು ನನ್ನನ್ನು ತಡೆದು ನಿಲ್ಲಿ ನನ್ನ ತಲೆಯ ಕೂದಲನ್ನು ಹಿಡಿದು ಜಗ್ಗಿ ನನ್ನ ಮುಖದ ಮೇಲೆ ಕೈಯಿಂದ ಹೊಡೆದು ದು:ಖಾಪತಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ತಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 January 2014

Gulbarga Dist Reported Crimes

ಎಂ.ಬಿ.ನಗರ ಪೊಲೀಸ್ ಠಾಣೆ:
ಕಳವು ಪ್ರಕರಣ:
ದಿನಾಂಕಃ 02/01/2014 ರಂದು ಶ್ರೀ ಸೌಜನ್ಯ ತಂದೆ ಸುಹಾಸ ಸಾಯಿಕರ್ ಸಾಃ C/0 ಡಾಃ ಪಿ.ಜೆ ಜವಳಿ ಮನೆ ನಂ. 66, ವಿಶ್ವೇಶ್ವರಯ್ಯ ಕಾಲೋನಿ ಗುಲಬರ್ಗಾ ಇವರು ಠಾಣೆಗೆ ದಿನಾಂಕಃ 01/01/2014 ರಂದು ತಾನು ತನ್ನ ರೂಮಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ರಾತ್ರಿ 01:00 ಗಂಟೆಗೆ ಮಲಗಿಕೊಂಡಿದ್ದು ಮಲಗುವಾಗ ರೂಮಿನ ಕಿಡಕಿ ತೆರೆದಿಟ್ಟಿದ್ದು ನಂತರ ರಾತ್ರಿ 02:00 ಗಂಟೆಗೆ ತನ್ನ ಗೆಳೆಯನು ಮೊಬೈಲ್ ಗೆ ಕರೆ ಮಾಡಿದಕ್ಕೆ ನಿದ್ರೆಯಿಂದ ಎದ್ದು ನೋಡಲು ತನ್ನ ರೂಮಿನಲ್ಲಿದ್ದ HP CP-DV-1002AU Laptop with Sl.No. CNF 8311129 Black Colour, Silver Metal Body Worth Rs 16,000/- ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಿಡಕಿ ಒಳಗೆ ಕೈ ಹಾಕಿ ಲ್ಯಾಪಟಾಪ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಕಮಲಾಪೂರ ಠಾಣೆ:
ಮಟಕಾ ಬರೆದುಕೊಳ್ಳುತ್ತಿರುವವರ ಬಂಧನ:
ದಿನಾಂಕ 02/01/2014  ರಂದು ಕಮಲಾಪೂರ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣವನ್ನು ಪಡೆದುಕೂಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಕ್ಕೆ  ಶ್ರೀ.ನಿಂಗಪ್ಪಾ ಬಿ.ಶಿವೂರ ಪಿ.ಎಸ್.ಐ ಕಮಲಾಪೂರ ಪೂಲೀಸ ಠಾಣ ರವರು ಇಬ್ಬರು ಪಂಚ ಜನರಾದ 1) ಶಿವಪ್ಪಾ ತಂದೆ ಗುಂಡಪ್ಪಾ ಪಟ್ನಾಯಕ ಸಾ; ಕಮಲಾಪೂರ 2) ರೇವಣಸಿದ್ದಯ್ಯ ತಂದೆ ನಾಗಯ್ಯ ಮಹಾಂತ ಮಠ ಸಾ; ಕಮಲಾಪೂರ ರವರನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯಾದ  ಚಂದ್ರಕಾಂತ ಪಿಸಿ,  ವಿನೋದ ಪಿಸಿ, ಕೃಷ್ಣಾರೆಡ್ಡಿ ಪಿಸಿ, ರಾಜೇಂದ್ರ ಕುಮಾರ ರೆಡ್ಡಿ  ಖಾಸಗಿ ಜೀಪಿನಲ್ಲಿ ಕುಳಿತುಕೊಂಡು ಗುನ್ನೆ ಸ್ಥಳದ ಹತ್ತಿರ ಹೋಗಿ ಅಲ್ಲೆ ಗೊಡೆಗೆ ಆಸರೆಯಾಗಿ ನಿಂತು ನೋಡಿಲಾಗಿ, ಬಸವಣ್ಣ ದೇವರ ಗುಡಿಯ ಹತ್ತಿರ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ  ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಏನೋ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಿದ್ದು, ಹಾಗೂ ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಬನ್ನಿರಿ ಅಂತಾ ಕರೆಯುತ್ತಿರುವುದನ್ನು ನೋಡಿ ಖಚಿತಪಡಿಸಿಕೂಂಡು  ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ  ಏಕಕಾಲಕ್ಕೆ ದಾಳಿ ಮಾಡಿ ಸದರಿ ಮಟಕಾ ಬರೆದುಕೊಳ್ಳುತ್ತಿದ್ದವರನ್ನು ಹಿಡಿದು ವಿಚಾರಿಸಲಾಗಿ ಅವರ ಹೆಸರು .1) ಸಮದ ತಂದೆ ರಸೂಲಸಾಬ ಬಳಗಾರ  ಸಾ: ಕಮಲಾಪೂರ, 2) ಶರಣಪ್ಪಾ ತಂದೆ ಗುರುಪಾದಪ್ಪಾಕಲ್ಯಾಣ ಸಾ; ಕಮಲಾಪೂರ  ಅಂತಾ ತಿಳಿಸಿದರು, ಅವರ ಅಂಗಶೋಧನೆ ಮಾಡಲಾಗಿ ಅವ ಹತ್ತಿರ ನಗದು ಹಣ 1220/- ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಮತ್ತು ಎರಡು ಬಾಲಪೆನ್ ದೊರೆತಿದ್ದುಸದರಿ ಮುದ್ದೆಮಾಲುಗಳನ್ನು ತನಿಖೆ ಕುರಿತು ಜಪ್ತು ಪಡಿಸಿಕೊಂಡು  ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಹಲ್ಲೆ ಪ್ರಕರಣ:
ದಿ: 02/01/2014 ರಂದು ಶ್ರೀ.ಅಜೀಜಸಾಬ ತಂದೆ ಪೀರಸಾಬ ಮೋಮಿನ್ ಸಾ;ಬೇಲೂರ [ಕೆ] ಠಾಣೆಗೆ ಹಾಜರಾಗಿ ತಾನು  ದಿ: 01/01/2014 ರಂದು ಬೆಳೆಗ್ಗೆ 09-30 ಗಂಟೆ ಸುಮಾರಿಗೆ ನ್ನ ಮನೆಯಲ್ಲಿದ್ದಾಗ ನ್ನ ಹೆಂಡತಿ ಜಾಹೇದಾಬೀ ಮತ್ತು ಮಕ್ಕಳಾದ ನಸೀರ , ಮಶಾಖ ಮತ್ತು ಉಸ್ಮಾನ, ಮಹಿಬೂಬಬೀ  ಹಾಗೂ ನನ್ನ ಸೊಸೆಯಂದಿರಾದ ಮಹಿಬೂಬಬೀ ಗಂಡ ಮಶಾಖ ಮೋಮಿನ ಮತ್ತು ಲಾಲಬೀ ಗಂಡ ನಸೀರ ಮೋಮಿನ್ ಇವರುಗಳು ಮನೆಯ ಒಳಗೆ ಬಂದವರೇ ನಮಗೆ ಹೊಲ ಮತ್ತು ಮನೆಯನ್ನು ಪಾಲ ಮಾಡಿ ಕೊಡು ಇಲ್ಲದಿದ್ದರೇ ನಿನಗೆ ಸುಮ್ಮನೆ ಬಿಡುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಮಹಿಬೂಬ ಬೀ ಇವಳು ನನ್ನ ಮನೆಯಲ್ಲಿದ್ದ ಹೊಲಿಗೆ ಮಷೀನ್ ತೆಗೆದುಕೊಳ್ಳಲು ಹೋಗುತ್ತಿದ್ದಾಗ ತೆಗೆದುಕೊಳ್ಳದಂತೆ ಕೈ ಹಿಡಿದು ಜಗ್ಗುತ್ತಿದ್ದಾಗ ನನ್ನ ಮಗನಾದ ನಸೀರ ಈತನು ಬಂದವನೇ  ನನ್ನ ಎದೆಯ ಮೇಲಿನ ಅಂಗಿ ಹಿಡಿದು ನಮಗೆ ಬೇಕಾದ ಸಾಮಾನುಗಳನ್ನು ನಾವು ತೆಗೆದುಕೊಂಡು ಹೋಗುತ್ತೇನೆ, ನೀನು ಇಲ್ಲಿ ಒಬ್ಬನೇ ಸಾಯಿ ಅಂತಾ ಅಲ್ಲಿಯೇ ಬಿದ್ದಿದ್ದ ಒಂದು ಡಿಗೆ ತೆಗೆದುಕೊಂಡು ಹೊಡೆದು ಗುಪ್ತಗಾಯ ಪಡಿಸಿದನು. ನಂತರ ಮಶಾಖ ನನ್ನ ಹೆಂಡತಿ ಜಾಹೇದಾ ಬೀ , ಮಗಳಾದ ಮಹಿಬೂಬ ಬೀ ಮತ್ತು ಸೊಸೆಯಂದಿರಾದ ಲಾಲಬೀ ಮತ್ತು ಮಹಿಬೂಬ ಬೀ ಇವರುಗಳು ಈ ಕುಂಟ ಸೂಳೆ ಮಗನಿಗೆ ಇವತ್ತು ಜೀವ ಸಹಿತ ಬಿಡಬೇಡಿ ಅಂತಾ ಜೀವದ ಬೆದರಿಕೆ ಹಾಕುತ್ತಾ ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಆಗ ನಾನು ಅವರಿಂದ ಬಿಡಿಸಿಕೊಂಡು ನನ್ನ ಮನೆಯಿಂದ ಹೊರಗೆ ಬರುರುತ್ತಿದ್ದಾಗ ನನ್ನ ಮಗ ಉಸ್ಮಾನನು ನನಗೆ ಅಡ್ಡಗಟ್ಟಿ ನಿಲ್ಲಿಸಿ  ನನಗೆ ನೆಲಕ್ಕೆ ನೂಕಿಸಿಕೊಟ್ಟಿರುತ್ತಾನೆ. ಆಗ ಅಕ್ಕ ಪಕ್ಕದವರು ಜಗಳ ಬಿಡಿಸಿದ್ದು ಇವತ್ತು ಬದುಕಿದ್ದೀಯಾ, ಇಲ್ಲದಿದ್ದರೇ ನಿನ್ನನ್ನು ಖಲಾಸ ಮಾಡಿಯೇ ಹೋಗುತ್ತಿದ್ದೇವು ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

02 January 2014

Gulbarga Dist Reported Crimes

ಕೊಲೆ ಪ್ರಯತ್ನ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ :

ದಿ:- 01-01-2014 ರಂದು ರಾತ್ರಿ ಶ್ರೀ ಗುಂಡಪ್ಪಾ ತಂ. ಕರಬಸಪ್ಪ ತಳವಾರ ತನ್ನ ಮಗನಾದ ಅಶೋಕನೊಂದಿಗೆ ತಾನು ಪಾಲಿನಂತೆ ಮಾಡಿದ ಹೊಲಕ್ಕೆ ಹೋಗಿ ದಿನಾಂಕ  02-01-2014 ರಂದು ಬೆಳಿಗ್ಗೆ 06-00 ಗಂಟೆಗೆ ಮರಳಿ ಮನೆಗೆ ಬಂದಾಗ ಆತನ ಹೆಂಡತಿ ಮಹಾದೇವಿ ಅಳುತ್ತಾ  1) ಶರಣಪ್ಪ ತಂ.  ತುಕ್ಕಪ್ಪ ನಿಂಬರ್ಗಿ, 2)ಗುಂಡಪ್ಪ ತಂ. ಶರಣಪ್ಪ ನಿಂಬರ್ಗಿ, 3) ಬಸಪ್ಪಾ ತಂ. ತುಕ್ಕಪ್ಪಾ ನಿಂಬರ್ಗಿ, 4) ರಾಜಾ ತಂ. ಶಂಕಪ್ಪಾ ನಿಂಬರ್ಗಿ  ಸಾಎಲ್ಲರೂ ಬಮ್ಮನಳ್ಳಿ ಇವರು ಹಳೆಯ ದ್ವೇಶದ ವೈಷಮ್ಯದಿಂದ ತಮ್ಮ ಮಗಳಾದ ಸವಿತಾ ಹಾಗೂ ಕವಿತಾ ರವರು ಮಲಗಿಕೊಂಡ ಕೋಣೆಯಲ್ಲಿ ಅಕ್ರಮ ಪ್ರವೇಶ ಮಾಡಿ ತಾವೇ ಮಲಗಿಕೊಂಡಿರಬಹುದು ಅಂತ ತಿಳಿದು ನಿಮ್ಮನ್ನು ಕೊಲೆಮಾಡುವ ಉದ್ದೇಶದಿಂದ ಮುಖದ ತುಂಬಾ ಕೌದಿ ಹೊಚ್ಚಿಕೊಂಡು ಮಲಗಿಕೊಂಡಂತಹ ಸವಿತಾಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಯತ್ನಿಸಿರುತ್ತಾರೆ. ಆಗ ಅವಳು ಚೀರಾಡುವ ಸಪ್ಪಳ ಕೇಳಿ ಇನ್ನೊಂದು ಕೊಣೆಯಲ್ಲಿ ಮಲಗಿರುವ ನಾನು ಎದ್ದು ಹೋಗಿ ನೋಡಲಾಗಿ ಓಡಿ ಹೋಗಿರುತ್ತಾರೆ ಮಗಳಿಗೆ ನೋಡಲಾಗಿ ಎಡಗಡೆ ಕಣ್ಣಿಗೆಎಡ ಕಿವಿಗೆ ಮತ್ತು ಕಿವಿಯ ಮೇಲ್ಭಾಗದ ತಲೆಗೆ ಭಾರಿ-ರಕ್ತಗಾಯವಾಗಿರುತ್ತದೆ. ಎಂದು ತಿಳಿಸಿದ್ದು. ಕಾರಣ ತನ್ನ ಕೊಲೆ ಮಾಡುವ ಉದ್ದೇಶದಿಂದ ಸವಿತಾಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.