ಎಂ.ಬಿ.ನಗರ
ಪೊಲೀಸ್ ಠಾಣೆ:
ಕಳವು ಪ್ರಕರಣ:
ದಿನಾಂಕಃ 02/01/2014 ರಂದು ಶ್ರೀ
ಸೌಜನ್ಯ ತಂದೆ ಸುಹಾಸ ಸಾಯಿಕರ್ ಸಾಃ C/0 ಡಾಃ ಪಿ.ಜೆ ಜವಳಿ ಮನೆ ನಂ.
66, ವಿಶ್ವೇಶ್ವರಯ್ಯ ಕಾಲೋನಿ ಗುಲಬರ್ಗಾ ಇವರು ಠಾಣೆಗೆ ದಿನಾಂಕಃ 01/01/2014 ರಂದು ತಾನು
ತನ್ನ ರೂಮಿನಲ್ಲಿ ವಿದ್ಯಾಭ್ಯಾಸ
ಮಾಡಿಕೊಂಡು ರಾತ್ರಿ 01:00 ಗಂಟೆಗೆ ಮಲಗಿಕೊಂಡಿದ್ದು ಮಲಗುವಾಗ ರೂಮಿನ ಕಿಡಕಿ ತೆರೆದಿಟ್ಟಿದ್ದು
ನಂತರ ರಾತ್ರಿ 02:00 ಗಂಟೆಗೆ ತನ್ನ ಗೆಳೆಯನು ಮೊಬೈಲ್ ಗೆ ಕರೆ ಮಾಡಿದಕ್ಕೆ ನಿದ್ರೆಯಿಂದ ಎದ್ದು ನೋಡಲು ತನ್ನ
ರೂಮಿನಲ್ಲಿದ್ದ HP CP-DV-1002AU Laptop with Sl.No.
CNF 8311129 Black Colour, Silver Metal Body Worth Rs 16,000/- ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಿಡಕಿ ಒಳಗೆ ಕೈ ಹಾಕಿ
ಲ್ಯಾಪಟಾಪ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಕಮಲಾಪೂರ ಠಾಣೆ:
ಮಟಕಾ ಬರೆದುಕೊಳ್ಳುತ್ತಿರುವವರ ಬಂಧನ:
ದಿನಾಂಕ 02/01/2014 ರಂದು ಕಮಲಾಪೂರ
ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ
ಹಣವನ್ನು ಪಡೆದುಕೂಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ
ಕ್ಕೆ ಶ್ರೀ.ನಿಂಗಪ್ಪಾ ಬಿ.ಶಿವೂರ ಪಿ.ಎಸ್.ಐ
ಕಮಲಾಪೂರ ಪೂಲೀಸ ಠಾಣ ರವರು ಇಬ್ಬರು ಪಂಚ
ಜನರಾದ 1) ಶಿವಪ್ಪಾ ತಂದೆ ಗುಂಡಪ್ಪಾ ಪಟ್ನಾಯಕ ಸಾ; ಕಮಲಾಪೂರ 2) ರೇವಣಸಿದ್ದಯ್ಯ
ತಂದೆ ನಾಗಯ್ಯ ಮಹಾಂತ ಮಠ ಸಾ; ಕಮಲಾಪೂರ ರವರನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯಾದ ಚಂದ್ರಕಾಂತ ಪಿಸಿ, ವಿನೋದ ಪಿಸಿ,
ಕೃಷ್ಣಾರೆಡ್ಡಿ ಪಿಸಿ, ರಾಜೇಂದ್ರ ಕುಮಾರ ರೆಡ್ಡಿ ಖಾಸಗಿ ಜೀಪಿನಲ್ಲಿ
ಕುಳಿತುಕೊಂಡು ಗುನ್ನೆ ಸ್ಥಳದ ಹತ್ತಿರ ಹೋಗಿ ಅಲ್ಲೆ ಗೊಡೆಗೆ ಆಸರೆಯಾಗಿ ನಿಂತು ನೋಡಿಲಾಗಿ, ಬಸವಣ್ಣ ದೇವರ ಗುಡಿಯ ಹತ್ತಿರ ಇಬ್ಬರು
ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ
ಹಣವನ್ನು ಪಡೆದುಕೊಂಡು ಏನೋ ಚೀಟಿ
ಬರೆದು ಸಾರ್ವಜನಿಕರಿಗೆ ಕೊಡುತ್ತಿದ್ದು, ಹಾಗೂ ಹೋಗಿ
ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಬನ್ನಿರಿ ಅಂತಾ
ಕರೆಯುತ್ತಿರುವುದನ್ನು ನೋಡಿ ಖಚಿತಪಡಿಸಿಕೂಂಡು ಸಿಬ್ಬಂದಿಯವರ
ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಏಕಕಾಲಕ್ಕೆ ದಾಳಿ
ಮಾಡಿ ಸದರಿ ಮಟಕಾ ಬರೆದುಕೊಳ್ಳುತ್ತಿದ್ದವರನ್ನು ಹಿಡಿದು ವಿಚಾರಿಸಲಾಗಿ ಅವರ ಹೆಸರು .1) ಸಮದ
ತಂದೆ ರಸೂಲಸಾಬ ಬಳಗಾರ ಸಾ: ಕಮಲಾಪೂರ, 2) ಶರಣಪ್ಪಾ ತಂದೆ ಗುರುಪಾದಪ್ಪಾಕಲ್ಯಾಣ ಸಾ; ಕಮಲಾಪೂರ ಅಂತಾ ತಿಳಿಸಿದರು, ಅವರ ಅಂಗಶೋಧನೆ ಮಾಡಲಾಗಿ ಅವರ ಹತ್ತಿರ ನಗದು ಹಣ 1220/- ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಮತ್ತು
ಎರಡು ಬಾಲಪೆನ್ ದೊರೆತಿದ್ದು, ಸದರಿ ಮುದ್ದೆಮಾಲುಗಳನ್ನು ತನಿಖೆ ಕುರಿತು ಜಪ್ತು ಪಡಿಸಿಕೊಂಡು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಹಲ್ಲೆ ಪ್ರಕರಣ:
ದಿ: 02/01/2014 ರಂದು ಶ್ರೀ.ಅಜೀಜಸಾಬ ತಂದೆ ಪೀರಸಾಬ
ಮೋಮಿನ್ ಸಾ;ಬೇಲೂರ [ಕೆ] ಠಾಣೆಗೆ
ಹಾಜರಾಗಿ ತಾನು ದಿ: 01/01/2014 ರಂದು ಬೆಳೆಗ್ಗೆ 09-30 ಗಂಟೆ
ಸುಮಾರಿಗೆ ತನ್ನ ಮನೆಯಲ್ಲಿದ್ದಾಗ ತನ್ನ ಹೆಂಡತಿ ಜಾಹೇದಾಬೀ ಮತ್ತು ಮಕ್ಕಳಾದ ನಸೀರ , ಮಶಾಖ
ಮತ್ತು ಉಸ್ಮಾನ, ಮಹಿಬೂಬಬೀ ಹಾಗೂ ನನ್ನ
ಸೊಸೆಯಂದಿರಾದ ಮಹಿಬೂಬಬೀ ಗಂಡ ಮಶಾಖ ಮೋಮಿನ ಮತ್ತು ಲಾಲಬೀ ಗಂಡ ನಸೀರ ಮೋಮಿನ್ ಇವರುಗಳು ಮನೆಯ
ಒಳಗೆ ಬಂದವರೇ ನಮಗೆ ಹೊಲ ಮತ್ತು ಮನೆಯನ್ನು ಪಾಲ ಮಾಡಿ ಕೊಡು ಇಲ್ಲದಿದ್ದರೇ ನಿನಗೆ ಸುಮ್ಮನೆ
ಬಿಡುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಮಹಿಬೂಬ ಬೀ ಇವಳು ನನ್ನ ಮನೆಯಲ್ಲಿದ್ದ ಹೊಲಿಗೆ
ಮಷೀನ್ ತೆಗೆದುಕೊಳ್ಳಲು ಹೋಗುತ್ತಿದ್ದಾಗ ತೆಗೆದುಕೊಳ್ಳದಂತೆ ಕೈ ಹಿಡಿದು ಜಗ್ಗುತ್ತಿದ್ದಾಗ ನನ್ನ
ಮಗನಾದ ನಸೀರ ಈತನು ಬಂದವನೇ ನನ್ನ ಎದೆಯ ಮೇಲಿನ
ಅಂಗಿ ಹಿಡಿದು ನಮಗೆ ಬೇಕಾದ ಸಾಮಾನುಗಳನ್ನು ನಾವು ತೆಗೆದುಕೊಂಡು ಹೋಗುತ್ತೇನೆ, ನೀನು ಇಲ್ಲಿ
ಒಬ್ಬನೇ ಸಾಯಿ ಅಂತಾ ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆ ತೆಗೆದುಕೊಂಡು ಹೊಡೆದು ಗುಪ್ತಗಾಯ ಪಡಿಸಿದನು. ನಂತರ
ಮಶಾಖ ನನ್ನ ಹೆಂಡತಿ ಜಾಹೇದಾ ಬೀ , ಮಗಳಾದ ಮಹಿಬೂಬ ಬೀ ಮತ್ತು ಸೊಸೆಯಂದಿರಾದ ಲಾಲಬೀ ಮತ್ತು
ಮಹಿಬೂಬ ಬೀ ಇವರುಗಳು ಈ ಕುಂಟ ಸೂಳೆ ಮಗನಿಗೆ ಇವತ್ತು ಜೀವ ಸಹಿತ ಬಿಡಬೇಡಿ ಅಂತಾ ಜೀವದ ಬೆದರಿಕೆ
ಹಾಕುತ್ತಾ ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಆಗ ನಾನು ಅವರಿಂದ
ಬಿಡಿಸಿಕೊಂಡು ನನ್ನ ಮನೆಯಿಂದ ಹೊರಗೆ ಬರುರುತ್ತಿದ್ದಾಗ ನನ್ನ ಮಗ ಉಸ್ಮಾನನು ನನಗೆ ಅಡ್ಡಗಟ್ಟಿ
ನಿಲ್ಲಿಸಿ ನನಗೆ ನೆಲಕ್ಕೆ
ನೂಕಿಸಿಕೊಟ್ಟಿರುತ್ತಾನೆ. ಆಗ ಅಕ್ಕ ಪಕ್ಕದವರು ಜಗಳ ಬಿಡಿಸಿದ್ದು ಇವತ್ತು ಬದುಕಿದ್ದೀಯಾ,
ಇಲ್ಲದಿದ್ದರೇ ನಿನ್ನನ್ನು ಖಲಾಸ ಮಾಡಿಯೇ ಹೋಗುತ್ತಿದ್ದೇವು ಅಂತಾ ಜೀವದ ಬೆದರಿಕೆ ಹಾಕುತ್ತಾ
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
No comments:
Post a Comment