POLICE BHAVAN KALABURAGI

POLICE BHAVAN KALABURAGI

09 June 2013

GULBARGA DISTRICT REPORTED CRIMES

ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಠಾಣೆ:ಶ್ರೀ ಮೊನಪ್ಪಾ ತಂದೆ ಸುಭಾಷ ಹಳ್ಳಿ ವಯಾ||24 ಜಾ:ಹರಿಜನ ಸಾ:ಕಡೆಹಳ್ಳಿ ವರು ನಾನು ದಿನಾಂಕ:08/06/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ತೊನಸಳ್ಳಿ (ಎಸ್‌‌) ಗ್ರಾಮದ ಬ್ರೀಜ್ಡ್ ಹತ್ತಿರ ನನ್ನ ಅಕ್ಕಳಾದ ಸಂಗೀತಾ ಇವಳಿಗೆ ಜೇವರ್ಗಿಗೆ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ನಮ್ಮೂರಿನವರಾದ ಗುರುರಾಜ, ಮಹಾಲಿಂಗಪ್ಪಾ, ಶರಣಪ್ಪಾ, ಅಣವೀರ, ಅರುಣ, ಮಹಾದೇವಪ್ಪಾ ಇವರೆಲ್ಲರೂ ಕೈಯಲ್ಲಿ ಬಡಿಗೆ ಮತ್ತು ಚಾಕು ಹಿಡಿದುಕೊಂಡು ಬಂದು ಉದ್ದೇಶ ಪೂರ್ವಕವಾಗಿ ನನ್ನ ಮೋಟಾರ ಸೈಕಲನ್ನು ಬಿಳಿಸಿದರು  ನಾವು ಕೆಳಗೆ ಬಿದ್ದಾಗ ಗುರುರಾಜ ಇತನು ಜಾತಿ ನಿಂದನೆ ಮಾಡಿ ನಾನು ಸಾಹುಕಾರ ರೋಡಿಗೆ ಬರುವಾಗ ದಾರಿ ಬಿಡಲಿಕ್ಕೆ ಬರಲ್ಲಾ ಭೋಸಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಎರಡು ವರ್ಷದ ಹಿಂದೆ ನಿಮ್ಮಪ್ಪನಿಗೆ ಒದ್ದಂಗ ನಿಮಗೂ ಒದ್ದು ಸತ್ತು ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ನಮ್ಮ ಅಕ್ಕಳಿಗೆ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:120/2013 ಕಲಂ:143,147,148,323,354,504,506,307,ಸಂಗಡ 149 ಐಪಿಸಿ ಮತ್ತು 3[1] [10] ಎಸ್‌ಸಿ/ಎಸ್‌ಟಿ ಪಿಎ ಆಕ್ಟ್‌ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಠಾಣೆ: ಶ್ರೀ ಗುರುರಾಜ ತಂದೆ ಶರಣಪ್ಪ ಇಂಗಿನಶಟ್ಟಿ ಸಾ:ಕಡೆಹಳ್ಳಿ ವರು ನಾನು ಮತ್ತು ನಮ್ಮ ಕಾಕಂದಿರಾದ ಮಹಾನಿಂಗಪ್ಪಾ, ತಮ್ಮ ರುದ್ರಪ್ಪ, ಚಿಕ್ಕಪ್ಪ ಮಹಾದೇವಪ್ಪ, ಮತ್ತು ಅಳಿಯ ಅರುಣ ಕೂಡಿ ದಿನಾಂಕ:08/06/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ ನಮ್ಮೂರ ಮೋನಪ್ಪ & ವಿಜಯ ಕುಮಾರ ರವರು ನನ್ನ ಜೊತೆ ತಕರಾರು ಮಾಡಿದ ಸಂಬಂಧ ಅವರ ವಿರುದ್ದ ಅರ್ಜಿ ಕೊಡಲು ಶಹಾಬಾದಕ್ಕೆ ಬರುತ್ತಿದ್ದಾಗ ತೊನಸಳ್ಳಿ (ಎಸ್‌) ಗ್ರಾಮದ ಸಣ್ಣ ಬ್ರಿಡ್ಜ ಹತ್ತಿರ ರೋಡಿನ ಮೇಲೆ ದೇವಿಂದ್ರಪ್ಪಾ ತಂದೆ ಸುಭಾಸಹಳ್ಳಿ 2)ಮೋನಪ್ಪ ತಂದೆ ಸುಭಾಸ 3)ವಿಜಯಕುಮಾರ ತಂದೆ ಸುಭಾಸ 4)ಶಿವರಾಯ 5)ಸಂತೋಷ ತಂದೆ ಭೀಮರಾಯ ಸಂ:ಇನ್ನೂ 10-15 ಜನರು ಸಾ:ಎಲ್ಲರೂ ಕಡೆಹಳ್ಳಿ ರವರು ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಟ್ಟಿಗೆಯಿಂದ ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ತೊಡರಿಗೆ ಜೋರಾಗಿ ಒದ್ದು ಮತ್ತು ಕುತ್ತಿಗೆಗೆ ಕೈಗಳಿಂದ ಜೋರಾಗಿ ಹಿಸುಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 121/2013 ಕಲಂ:143,147,148,323,504,506(2),307 ಸಂ:149 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಕಾಳಗಿ ಪೊಲೀಸ್ ಠಾಣೆ:ದಿನಾಂಕ:06/06/2013 ರಂದು ಕಲ್ಲಹಿಪ್ಪರಗಾ ಗ್ರಾಮದಲ್ಲಿ ಬಾಬಾಸಾಹೇಬ ದರ್ಗಾದ ಜಾತ್ರೆಯ ನಿಮಿತ್ಯ ಕುಸ್ತಿಗಳು ನಡೆಯುತ್ತಿದ್ದು ಕುಸ್ತಿ ನೋಡಲು ನಾನು ಮತ್ತು ನನ್ನ ಸಂಗಡ ನಮ್ಮ ಓಣಿಯ ವಿಶ್ವನಾಥಶರಣಪ್ಪ,ಶಿವಾನಂದ ಕುಸ್ತಿ ಮುಗಿದ  ನಂತರ 7-00 ಪಿ.ಎಂ  ಕ್ಕೆ ಎಲ್ಲರೂ  ಮರಳಿ ಮನೆಗೆ ತೆಕ್ಯಾದ ಹತ್ತಿರ ಬರುತ್ತಿದ್ದಾಗ ಮೈನೋದ್ದೀನ ಇನಾಮದಾರ ಮತ್ತು ಸಂಗಡ 28 ಜನರು ಕೂಡಿಕೊಂಡು ಬಂದವರೇ ನಮಗೆ  ಜಾತಿ ನಿಂದನೆ ನಮ್ಮ ಜಾತ್ರೆಯಲ್ಲಿ ನಿವ್ಯಾಕೆ ಬಂದಿರಿ ಅಂತಾ ಜಾತಿ ನಿಂದನೆ ಮಾಡಿ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಅವಾಚ್ಯ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಗಣೇಶ ತಂದೆ ಮಸ್ತಾನಪ್ಪಾ ಮದ್ದಲಿ ಉ: ಹಿಟಾಚಿ ಆಪರೇಟರ ಸಾ: ಕಲ್ಲಹಿಪ್ಪರಗಾ ತಾ|| ಚಿತ್ತಾಪೂರ ರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:64/2013 ಕಲಂ,143, 147, 148, 323, 324, 504, 506 ಸಂಗಡ 149 ಐಪಿಸಿ  ಮತ್ತು ಕಲಂ, 3 (1)  910)  ಎಸಸಿ/ಎಸಟಿ ಆಕ್ಟ 1988 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

06 June 2013

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳದಿಂದ ಗೃಹಿಣೆ ಸಾವು:;

ಕುಂಚಾವರಂ ಪೊಲೀಸ್ ಠಾಣೆ: ನನ್ನ ಮಗಳಾದ ನೀಲಾಬಾಯಿ ಇವಳಿಗೆ ಜಿಲ್ವರ್ಶಾ ತಾಂಡಾದ ಶ್ರವಣ ಜೋತೆಗೆ ದಿನಾಂಕ:10-1-2013 ರಂದು ಜಿನಗುರ್ತಿ ಅಮರೇಶ್ವರ ದೇವಸ್ಥಾನದಲ್ಲಿ ಲಗ್ನ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ 50 ಸಾವಿರ ರೂಪಾಯಿಗಳು, ಬಂಗಾರ ಹಾಗೂ ಇನ್ನಿತರ ಮದುವೆ ಸಾಮಾನುಗಳು ಕೊಟ್ಟು ಮದುವೆ ಮಾಡಿರುತ್ತೆವೆ. ಎರಡು ತಿಂಗಳ ಮೇಲೆ  ಗಂಡ ಮನೆಯವರು ಇನ್ನೂ ಕೊಡಬೇಕಾದ ಬಂಗಾರ ಮತ್ತು ಗಾಡಿ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಿದ್ದರಿಂದ ಮಗಳು ನಮ್ಮ ಮನೆಗೆ ಬಂದು ತಿಳಿಸಿದ್ದರಿಂದ ಮೋಟಾರ ಸೈಕಲ ಮತ್ತು ಒಂದೂವರೇ ತೋಲೆ ಬಂಗಾರ ಕೊಡಾ ಕೊಟ್ಟಿರುತ್ತೆವೆ. ಸ್ವಲ್ಪ ದಿನಗಳ ನಂತರ ಮಗಳು ಗರ್ಭಿಣಿಯಾಗಿದ್ದಾಗ ಗಂಡ ಅತ್ತೆ ಮಾವ ಇನ್ನೂ 20,000-00 ರೂಪಾಯಿ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ನನ್ನ ಮಗನಿಗೆ ಜಬರದಸ್ತಿಯಿಂದ ನಿನಗೆ ಮದುವೆ ಮಾಡಿದ್ದಾರೆ ನಿನಗೆ ಖಲಾಸ ಮಾಡಿ ನಾನು ಜೈಲಿಗೆ ಹೋದರು ಪರವಾಗಿಲ್ಲ ಅಂತಾ ದಿನಾಂಕ:05-06-2013 ರಂದು ನಸುಕಿನ 4-00 ಗಂಟೆಯ ಸುಮಾರಿಗೆ ನನ್ನ ಮಗಳಿಗೆ ನೀಲಾಬಾಯಿಗೆ ಆಕೆಯ ಗಂಡನಾದ ಶ್ರವಣ ಮತ್ತು ಅತ್ತೆ ದಸಲಿಬಾಯಿ, ಮಾವ ರಾಮಸಿಂಗ ಇವರು ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿ ನನ್ನ ಮಗಳ ಕುತ್ತಿಗೆ ಒತ್ತಿ ಹಿಡಿದು ಸಾಯಿಸಿ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ  ಕೀಶನ ತಂದೆ ಭದ್ರ್ಯಾನಾಯಕ ಚವ್ಹಾಣ ವ|| 45 ವರ್ಷ ಜಾ|| ಲಂಬಾಣಿ  ಸಾ|| ಜೈರಾಮ ತಾಂಡಾ ಪೆದ್ದಾಮೂಲ ಮಂಡಲ ತಾ|| ತಾಂಡೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ:41/2013 ಕಲಂ 498(ಎ), 302, 304(ಬಿ) ಸಂಗಡ 34 ಐ.ಪಿ.ಸಿ ಮತ್ತು ಕಲಂ 3& 4  ಡಿ.ಪಿ. ಆಕ್ಟ 1961  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:04/06/2013 ರಂದು ಮುಂಜಾನೆ 10:30 ಗಂಟೆ ಸುಮಾರಿಗೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಜಬ್ಬಾರ ಇತನು ಪೋನ ಮಾಡಿ ಗುಲಬರ್ಗಾ– ಸೇಡಂ ರಿಂಗ  ರೋಡಿಗೆ ಇರುವ ಮೇಜೆಸ್ಟೀಕ ಫಂಕ್ಷನ ಹಾಲ ಎದುರುಗಡೆ ಹನೀಪಾ ಗಂಡ ಮಹ್ಮದ ಹುಸೇನ ವಯಾ||65 ಸಾ|| ಮಿಲ್ಲತ್ತನಗರ  ಖಂಡಾಲ ಗ್ರೌಂಡ  ಹಿಂದೆ ಮದರ ಶಹಾ ಶಾಲೆ ಹತ್ತಿರ ಗುಲಬರ್ಗಾ ಇವರು ಆಟೋದಿಂದ ಇಳಿದು ರೋಡ ಕ್ರಾಸ ಮಾಡುತ್ತಿರುವಾಗ ಖರ್ಗೆ ಪೆಟ್ರೋಲ ಪಂಪ ಕಡೆಯಿಂದ ಕಾರ ನಂ ಕೆಎ 29 ಎಮ್‌ 6311 ನೇದ್ದರ ಚಾಲಕ  ಕಾರನ್ನು ಅತೀ ವೇಗ ಅಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಹೊಡೆದು ಕಾರನ್ನು ಅಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ. ತಲೆಯ ಹಿಂದೆ ಬಾರಿರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ಮಾತಾಡುವ ಸ್ಥಿತಿಯಲ್ಲಿರದೇ ಇರುವದರಿಂದ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮಾಡಿದ್ದು ಆಸ್ಪತ್ರೆಯವರು 20,000/- ರೂ ಗಳು ಕಟ್ಟಬೇಕು ಅಂತ ಹೇಳಿದ್ದರಿಂದ ನನ್ನ ಹತ್ತಿರ ಹಣ ಇಲ್ಲದೆ ಇರುವದರಿಂದ ಸರಕಾರಿ ಆಸ್ಪತ್ರೆಗೆ ಸಾಯಂಕಾಲ 4:45 ಗಂಟೆಯ ಸುಮಾರಿಗೆ ಸೇರಿಕೆ ಮಾಡಿರುತ್ತೇನೆ.  ಉಪಚಾರದಿಂದ ಗುಣ ಮುಖವಾಗದೆ ದಿನಾಂಕ:05/06/2013 ರಂದು ಮಧ್ಯರಾತ್ರಿ ಮೃತಪಟ್ಟಿರುತ್ತಾಳೆ ಅಂತ ಶ್ರೀ ನವಾಬ ತಂದೆ ಮಹ್ಮದ ಹುಸೇನ ಸಾ:ಮಿಲ್ಲತ್ತನಗರ  ಖಂಡಾಲ ಗ್ರೌಂಡ  ಹಿಂದೆ ಮದರಶಹಾ ಶಾಲೆ ಹತ್ತಿರ ಗುಲಬರ್ಗಾ ರವರು  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 286/2013 ಕಲಂ 279, 304 (ಎ) ಐಪಿಸಿ ಸಂ. 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:05/06/2013 ರಂದು ಸಾಯಂಕಾಲ ಬೇಲೂರ (ಜೆ) ಸೀಮಾಂತರದಲ್ಲಿ ಬರುವ ಮಾಲಪೂರಿ ಕಂಕರ ಮಶೀನ ಹತ್ತಿರ ಇಸ್ಪೇಟ ಜೂಜಾಟವಾಡುತ್ತಿದ್ದಾರೆ ಅಂತ ಬಂದ ಖಚಿತ ಬಾತ್ಮಿ ಮೇರೆಗೆ ಆನಂದರಾವ ಎಸ್ ಎನ್‌ ಪಿಎಸ್‌‌ಐ (ಕಾ&ಸು) ಗುಲ್ಬರ್ಗಾ ಗ್ರಾಮೀಣ ಠಾಣೆ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸಿರಾಜ ಅಹ್ಮದ ತಂದೆ ಮಹೆಬೂಬ ವ;36 ವರ್ಷ ಉ: ಮೆಕ್ಯಾನಿಕ ಸಾ: ಮಹೆಬೂಬ ನಗರ ಗುಲಬರ್ಗಾ , ಅಜ್ಮಲ ಅಹ್ಮದ ತಂದೆ ಎಕಬಾಲ ಅಹ್ಮದ ವ:37 ವರ್ಷ ಉ: ದಲ್ಲಾಳಿ ಕೆಲಸ ಸಾ: ಮಹೆಬೂಬ ನಗರ ಗುಲಬರ್ಗಾ, ಸೈಯ್ಯದ ಬಬಲೂ ತಂದೆ ಶಬ್ಬೀರ ಅಲಿ ವ:29 ವರ್ಷ ಉ: ಮೆಕ್ಯಾನಿಕ  ಕೆಲಸ ಸಾ: ತಾಜ ಫಂಕ್ಷನ ಹಾಲ ಹಿಂದೆ ಮಹೆಬೂಬ ನಗರ ಗುಲಬರ್ಗಾ,ಹೈದರಸಾಬ ತಂದೆ ಯಾಸೀನಸಾಬ ವ:53 ವರ್ಷ ಉ:ಹಣ್ಣಿನ ವ್ಯಾಪರ ಸಾ: ಬಿಲಾಲಬಾದ ಗುಲಬರ್ಗಾ,ಗುಲಾಮ ರಸೂಲ ತಂದೆ ಮಹ್ಮದ ನಬೀ ವ:39 ವರ್ಷ ಉ: ಬಟ್ಟೆ ವ್ಯಾಪರ ಸಾ: ಹಪ್ತ ಗುಮ್ಮಜ ಗುಲಬರ್ಗಾ ,ಸಾಜೀದ ಅಹ್ಮದ ತಂದೆ ಶಫೀ ಅಹ್ಮದ ವ:38 ವರ್ಷ ಉ;ಖಾಸಗಿ ಕೆಲಸ ಸಾ: ಸಂತ್ರಸವಾಡಿ ಗುಲಬರ್ಗಾ, ಅಮಜದ ತಂದೆ ಶಮ್ಮಶೀರ ಅಲಿ ವ:48 ವರ್ಷ ಉ:ವ್ಯಾಪರ ಸಾ:  ರೋಜಾ (ಬಿ) ಗುಲಬರ್ಗಾ, ಮಹ್ಮದ ಸಲೀಮ ತಂದೆ  ಮಹ್ಮದ ಬುರಾನ ವ:29 ವರ್ಷ ಉ: ವ್ಯಾಪರ ಸಾ: ಖಾಜ ಕಾಲನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿ ನಗದು ಹಣ 35640/- ರೂಪಾಯಿಗಳು ಹಾಗೂ ಜೂಜಾಟದ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 287/2013 ಕಲಂ, 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕೊಲೆ ಪ್ರಕರಣ:

ಮುದೋಳ ಪೊಲೀಸ್ ಠಾಣೆ:ಲಚಮಪ್ಪಾ ತಂದೆ ಕಾಶಪ್ಪಾ ಕಾಳಾ, ಶಾಮಪ್ಪಾ ತಂದೆ ಬಿಚ್ಚಪ್ಪಾ, ಮಲ್ಲೇಶ ತಂದೆ ಬಸಪ್ಪಾ ಮೂರು ಜನರು ಕೂಡಿಕೊಂಡು  ದಿನಾಂಕ:05-06-2013 ರಂದು ಸಾಯಂಕಾಲ  4-30 ಗಂಟೆಯ ಸುಮಾರಿಗೆ ಮುಧೋಳ ಬಸ್ಸಸ್ಟ್ಯಾಂಡ ಪಕ್ಕದಲ್ಲಿರುವ ನಾಗೇಶ ತಂದೆ ಹಣಮಂತು ಇವರ ಪಾಸ್ಟ್ ಫುಡ್ ಹೋಟೆಲಿಗೆ ನಾಸ್ಟಾ ಮಾಡಲು ಹೋಗಿ ಮೂರು ಜನರು ನಾಸ್ಟಾ ಮಾಡಿದ್ದು, ಲಚಮಪ್ಪಾ ಇವನು ಇನ್ನೊಂದು ಸಿಂಗಲ್ ಪ್ಲೇಟ್ ನಾಸ್ಟಾ ಕೊಡು ಅಂತಾ ಕೇಳಿದಾಗ ಹೊಟೆಲದವನಾದ ನಾಗೇಶ ಇವನು ಸಿಂಗಲ್ ಪ್ಲೇಟ್ ನಾಸ್ಟಾ ಕೊಡುವುದಿಲ್ಲಾ ಅಂತಾ ಹೇಳಿ ನಾಗೇಶನು ಇತನು ಲಚಮಪ್ಪನಿಗೆ ಜಾತಿ ನಿಂದನೆ ಮಾಡಿ ಕೈಗಳಿಂದ ಲಚಮಪ್ಪನಿಗೆ ಹೊಟ್ಟೆಗೆ ಹೊಡೆದು ಕೈ ಹಿಡಿದು ದಬ್ಬಿಸಿಕೊಟ್ಟು ಕೊಲೆ ಮಾಡುವ ಉದ್ದೇಶದಿಂದ ನಾಗೇಶನು ಅಡುಗೆ ಮಾಡಲು ಉಪಯೋಗಿಸುವ ಕಬ್ಬಿಣದ ರಾಡನ್ನು ತಗೆದುಕೊಂಡು ಲಚಮಪ್ಪನ ತಲೆಯ ಹಿಂಬಾಗಕ್ಕೆ, ಎದೆಗೆ ಹೊಡೆದು ಒಳ ಪೆಟ್ಟು ಮಾಡಿದಾಗ ಜೋರಾಗಿ ಹೊಡೆದು ಒಳ ಪೆಟ್ಟು ಮಾಡಿದ್ದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು ಒದ್ದಾಡುತ್ತಾ ಮೃತಪಟ್ಟಿರುತ್ತಾನೆ. ನನ್ನ ಮಗನಿಗೆ ಜಾತಿ ನಿಂದನೆ ಮಾಡಿ ಹೊಡೆದು ಕೊಲೆ ಮಾಡಿದ ನಾಗೇಶ ತಂದೆ ಹಣಮಂತು ಜಾ|| ಕಬ್ಬಲಿಗೇರ ಸಾ|| ಮುಧೋಳ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಮೃತನ ತಾಯಿಯಾದ ಶ್ರೀಮತಿ ಮುತ್ಯಮ್ಮ ಗಂಡ ಕಾಶಪ್ಪಾ ಕಾಳಾ ವ|| 50 ಉ|| ಕೂಲಿ ಜಾ|| ಮಾದಿಗ ಸಾ|| ಮದನಾ ಗ್ರಾಮ ಇವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 107/2013 ಕಲಂ:302 ಐ.ಪಿ.ಸಿ ಮತ್ತು 3 (1) (10)  ಎಸಸಿ/ಎಸಟಿ ಪಿಎ  ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.