ಕೊಲೆಗೆ
ಪ್ರಯತ್ನ ಪ್ರಕರಣ:
ಶಹಾಬಾದ ನಗರ
ಠಾಣೆ:ಶ್ರೀ ಮೊನಪ್ಪಾ ತಂದೆ ಸುಭಾಷ ಹಳ್ಳಿ ವಯಾ||24 ಜಾ:ಹರಿಜನ ಸಾ:ಕಡೆಹಳ್ಳಿ ರವರು ನಾನು ದಿನಾಂಕ:08/06/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ತೊನಸಳ್ಳಿ (ಎಸ್) ಗ್ರಾಮದ ಬ್ರೀಜ್ಡ್ ಹತ್ತಿರ ನನ್ನ ಅಕ್ಕಳಾದ ಸಂಗೀತಾ
ಇವಳಿಗೆ ಜೇವರ್ಗಿಗೆ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ನಮ್ಮೂರಿನವರಾದ ಗುರುರಾಜ, ಮಹಾಲಿಂಗಪ್ಪಾ, ಶರಣಪ್ಪಾ, ಅಣವೀರ,
ಅರುಣ, ಮಹಾದೇವಪ್ಪಾ ಇವರೆಲ್ಲರೂ ಕೈಯಲ್ಲಿ ಬಡಿಗೆ ಮತ್ತು ಚಾಕು ಹಿಡಿದುಕೊಂಡು ಬಂದು ಉದ್ದೇಶ
ಪೂರ್ವಕವಾಗಿ ನನ್ನ ಮೋಟಾರ ಸೈಕಲನ್ನು ಬಿಳಿಸಿದರು ನಾವು ಕೆಳಗೆ ಬಿದ್ದಾಗ ಗುರುರಾಜ ಇತನು ಜಾತಿ ನಿಂದನೆ ಮಾಡಿ ನಾನು ಸಾಹುಕಾರ ರೋಡಿಗೆ ಬರುವಾಗ ದಾರಿ
ಬಿಡಲಿಕ್ಕೆ ಬರಲ್ಲಾ ಭೋಸಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಎರಡು ವರ್ಷದ ಹಿಂದೆ ನಿಮ್ಮಪ್ಪನಿಗೆ ಒದ್ದಂಗ
ನಿಮಗೂ ಒದ್ದು ಸತ್ತು ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ನಮ್ಮ ಅಕ್ಕಳಿಗೆ ಮಾನಭಂಗ
ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:120/2013 ಕಲಂ:143,147,148,323,354,504,506,307,ಸಂಗಡ
149 ಐಪಿಸಿ ಮತ್ತು 3[1] [10] ಎಸ್‌ಸಿ/ಎಸ್‌ಟಿ ಪಿಎ ಆಕ್ಟ್ 1989 ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ
ಪ್ರಯತ್ನ ಪ್ರಕರಣ:
ಶಹಾಬಾದ ನಗರ
ಠಾಣೆ: ಶ್ರೀ ಗುರುರಾಜ ತಂದೆ ಶರಣಪ್ಪ
ಇಂಗಿನಶಟ್ಟಿ ಸಾ:ಕಡೆಹಳ್ಳಿ ರವರು
ನಾನು ಮತ್ತು ನಮ್ಮ ಕಾಕಂದಿರಾದ ಮಹಾನಿಂಗಪ್ಪಾ, ತಮ್ಮ
ರುದ್ರಪ್ಪ, ಚಿಕ್ಕಪ್ಪ ಮಹಾದೇವಪ್ಪ, ಮತ್ತು ಅಳಿಯ ಅರುಣ ಕೂಡಿ ದಿನಾಂಕ:08/06/2013 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ ನಮ್ಮೂರ ಮೋನಪ್ಪ
& ವಿಜಯ ಕುಮಾರ ರವರು
ನನ್ನ ಜೊತೆ ತಕರಾರು ಮಾಡಿದ ಸಂಬಂಧ ಅವರ ವಿರುದ್ದ ಅರ್ಜಿ ಕೊಡಲು ಶಹಾಬಾದಕ್ಕೆ ಬರುತ್ತಿದ್ದಾಗ
ತೊನಸಳ್ಳಿ (ಎಸ್) ಗ್ರಾಮದ ಸಣ್ಣ ಬ್ರಿಡ್ಜ ಹತ್ತಿರ ರೋಡಿನ ಮೇಲೆ ದೇವಿಂದ್ರಪ್ಪಾ ತಂದೆ ಸುಭಾಸಹಳ್ಳಿ
2)ಮೋನಪ್ಪ ತಂದೆ ಸುಭಾಸ 3)ವಿಜಯಕುಮಾರ ತಂದೆ ಸುಭಾಸ 4)ಶಿವರಾಯ 5)ಸಂತೋಷ ತಂದೆ ಭೀಮರಾಯ
ಸಂ:ಇನ್ನೂ 10-15 ಜನರು ಸಾ:ಎಲ್ಲರೂ ಕಡೆಹಳ್ಳಿ ರವರು ಕೈಯಲ್ಲಿ
ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಟ್ಟಿಗೆಯಿಂದ
ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ತೊಡರಿಗೆ ಜೋರಾಗಿ ಒದ್ದು
ಮತ್ತು ಕುತ್ತಿಗೆಗೆ ಕೈಗಳಿಂದ ಜೋರಾಗಿ ಹಿಸುಕಿರುತ್ತಾರೆ
ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 121/2013 ಕಲಂ:143,147,148,323,504,506(2),307 ಸಂ:149
ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಾಳಗಿ ಪೊಲೀಸ್
ಠಾಣೆ:ದಿನಾಂಕ:06/06/2013 ರಂದು ಕಲ್ಲಹಿಪ್ಪರಗಾ ಗ್ರಾಮದಲ್ಲಿ ಬಾಬಾಸಾಹೇಬ ದರ್ಗಾದ ಜಾತ್ರೆಯ
ನಿಮಿತ್ಯ ಕುಸ್ತಿಗಳು ನಡೆಯುತ್ತಿದ್ದು ಕುಸ್ತಿ ನೋಡಲು ನಾನು ಮತ್ತು ನನ್ನ ಸಂಗಡ ನಮ್ಮ ಓಣಿಯ
ವಿಶ್ವನಾಥ, ಶರಣಪ್ಪ,ಶಿವಾನಂದ, ಕುಸ್ತಿ ಮುಗಿದ ನಂತರ 7-00 ಪಿ.ಎಂ ಕ್ಕೆ ಎಲ್ಲರೂ ಮರಳಿ ಮನೆಗೆ ತೆಕ್ಯಾದ ಹತ್ತಿರ ಬರುತ್ತಿದ್ದಾಗ ಮೈನೋದ್ದೀನ ಇನಾಮದಾರ
ಮತ್ತು ಸಂಗಡ 28 ಜನರು ಕೂಡಿಕೊಂಡು ಬಂದವರೇ ನಮಗೆ ಜಾತಿ ನಿಂದನೆ ನಮ್ಮ ಜಾತ್ರೆಯಲ್ಲಿ ನಿವ್ಯಾಕೆ ಬಂದಿರಿ ಅಂತಾ ಜಾತಿ
ನಿಂದನೆ ಮಾಡಿ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಅವಾಚ್ಯ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ
ಅಂತಾ ಶ್ರೀ ಗಣೇಶ ತಂದೆ ಮಸ್ತಾನಪ್ಪಾ ಮದ್ದಲಿ ಉ: ಹಿಟಾಚಿ ಆಪರೇಟರ ಸಾ: ಕಲ್ಲಹಿಪ್ಪರಗಾ ತಾ|| ಚಿತ್ತಾಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:64/2013 ಕಲಂ,143, 147, 148,
323, 324, 504, 506 ಸಂಗಡ 149 ಐಪಿಸಿ ಮತ್ತು
ಕಲಂ, 3 (1) 910) ಎಸಸಿ/ಎಸಟಿ ಆಕ್ಟ 1988 ನೇದ್ದರ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment