POLICE BHAVAN KALABURAGI

POLICE BHAVAN KALABURAGI

23 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ. 22-04-2013 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಗುಲಬರ್ಗಾ – ಆಳಂದ ರಸ್ತೆಯ ಕೆರಿಬೋಸಗಾ ಕ್ರಾಸ ಹತ್ತಿರ  ಆಟೋರಿಕ್ಷಾ ನಂ.ಕೆಎ.32 ಬಿ-6843 ನೇದ್ದರಲ್ಲಿ  ಮಹಾಂತೇಶ ತಂದೆ ಭೀಮರಾಯ ಪೂಜಾರಿ ವಯಾ||14 ವರ್ಷ , 2) ನವನೀತ ತಂದೆ ಅಂಬರಾಯ ಪೂಜಾರಿ ವಯಾ||6 ವರ್ಷ ಇವರನ್ನು ಚಾಲಕನಾದ ಬಸವರಾಜ ತಂದೆ ಪರಮೇಶ್ವರ ನಾಟೀಕಾರ ಇತನು ಭೀಮಳ್ಳಿ ಗ್ರಾಮದಿಂದ ಕೆರಿಬೋಸಗಾಕ್ಕೆ ಕರೆದುಕೊಂಡು ಬರುತ್ತಿದ್ದು,  ಆಟೋರಿಕ್ಷಾ ಚಾಲಕ ಅತೀವೇಗವಾಗಿ ಚಲಾಯಿಸುತ್ತಿರುವಾಗ ಗುಲಬರ್ಗಾ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ.ಕೆ.ಎ.32 ಎಫ್. 1661 ನೇದ್ದರ ಚಾಲಕನು ಸಹ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿದ್ದರಿಂದ ಎರಡು ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದರಿಂದ ಆಟೋ ರಿಕ್ಷಾದಲ್ಲಿ ಕುಳಿತಿದ್ದ ಭೀಮರಾಯ ಪೂಜಾರಿ ಮತ್ತು 2) ನವನೀತ ತಂದೆ ಅಂಬರಾಯ ಪೂಜಾರಿ ಇವರುಗಳಿಗೆ ತಲೆಗೆ ,ಹಣೆಗೆ, ಭಾರಿಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ.  ಆಟೋ ಚಾಲಕ ಬಸವರಾಜ ನಾಟೀಕಾರ ಇತನಿಗೆ ಭಾರಿ ಗುಪ್ತಗಾಯಗಳಾಗಿದ್ದು, ಬಸ್ಸ ಚಾಲಕ ಓಡಿಹೋಗಿರುತ್ತಾನೆ ಅಂತಾ ಶ್ರೀ ಅಂಬರಾಯ ತಂದೆ ಶಿವರಾಯ ಪೂಜಾರಿ ಉ;ಆಟೋ ಚಾಲಕ ಸಾ;ಕೆರಿಬೋಸಗಾ ತಾ;ಜಿ;ಗುಲಬರ್ಗಾರವರು ದೂರು ಸಲ್ಲಿಸಿದ್ದರಿಂದ  ಠಾಣೆ ಗುನ್ನೆ ನಂ:208/2013 ಕಲಂ.279,338,304 (ಎ) ಐಪಿಸಿ. ಸಂಗಡ 187 ಐಎಂವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಅನೀಲ ತಂದೆ ವಿಠಲ ಶಹಾಬಾದ   ಸಾ|| ಕುಮಸಿ ತಾ ||ಗುಲಬರ್ಗಾರವರು ನಾನು ದಿನಾಂಕ:22-04-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಲಕ್ಷ್ಮಿನಿವಾಸ ಕಾಂಪ್ಲೆಕ್ಸ ಎದುರುಗಡೆ ರೋಡಿನ ಮೇಲೆ ಹೊರಟಾಗ ಲಾರಿ ನಂಬರ ಕೆಎ-32 ಎ-5943 ನೇದ್ದರ ಚಾಲಕನು ತನ್ನ ಲಾರಿಯನ್ನು ಗಂಜ ಬಸ್ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಮುಂದೆ ಮೋಟಾರ ಸೈಕಲ ನಂಬರ ಕೆಎ-36 ಎಸ್-7090 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಸುರೇಶ ತಂದೆ ಶರಣಪ್ಪಾ ಜಮಗಾ ಸಾ||ಕುಮಸಿ ಇವರಿಗೆ ಭಾರಿಗಾಯಗಳಾಗಿರುತ್ತವೆ. ಲಾರಿ ಚಾಲಕ ತನ್ನ ಲಾರಿಯನ್ನು  ಅಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:ದಿನಾಂಕ: 22/04/2013 ರಂದು ರಾತ್ರಿ 10-25 ಗಂಟೆ ಸುಮಾರಿಗೆ  ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಾಯನಗಲ್ಲಿಗೆ ಬಂದಾಗ ಕಬಲಾ ಬಾಷಾ ದರ್ಗಾ ಹಾಗೂ ಮುನಾವರ ಹುಸೇನ ಇವರ ಮನೆಯ ಹತ್ತಿರದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಕೆ.ಜೆ.ಪಿ ಪಕ್ಷದ  ಅಭ್ಯರ್ಥಿಯಾದ ಶ್ರೀ ಉಸ್ತಾದ ನಾಸೀರ ಹುಸೇನ ರವರು ಯಾವದೇ ಪರವಾನಿಗೆ ಪಡೆಯದೆ, ಕಬಲಾ ಬಾಷಾ ದರ್ಗಾ ಹಾಗೂ ಮುನಾವರ ಹುಸೇನ ಇವರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಚುನಾವಣೆ ಪ್ರಚಾರದ ಸಮಯ ಮುಗಿದ ಮೇಲೆ ಸಹ ಸಭೆಯನ್ನು ನಡೆಸಿದ್ದರಿಂದ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ ಅಂತಾ ಅನೀಲಕುಮಾರ ಪ್ಲಾಯಿಂಗ್ ಸ್ವ್ಕಾಡ ಆಪೀಸರ್  ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 30/2013 ಕಲಂ, 171, (ಹೆಚ) 1951 ಆರ.ಪಿ.ಆಕ್ಟ ಮತ್ತು 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

22 April 2013

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಸಿದ್ದಣ್ಣ ಮೈಲಾರ ಸಾ|| ವಾಸವದತ್ತ ಕಾಲೋನಿ ಸೇಡಂ ರವರು ನಾನು ಮತ್ತು ನನ್ನ ಧರ್ಮಪತ್ನಿ ಸುವರ್ಣ ಇಬ್ಬರು ದಿನಾಂಕ:21/04/2013 ರಂದು ರಾತ್ರಿ 8-00 ಗಂಟೆಗೆ ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದು ಬೆಂಗಳೂರಿಗೆ ಹೋಗುವ ಕುರಿತು ರಾಜಹಂಸ ಬಸ್ ನಂಬರ ಕೆಎ-32 ಎಫ್-1798 ನೇದ್ದರಲ್ಲಿ ಶೀಟ್ ನಂ. 25,26 ರ ಮೇಲೆ ಡೆಲ್ ಲ್ಯಾಪಟ್ಯಾಪ Sl No.BXYMMV1 ಮತ್ತು ಲ್ಯಾಪಟ್ಯಾಪ ಬ್ಯಾಗಿನಲ್ಲಿದ್ದ ಟಾಟಾ ಡೊಕೊಮೊ ಪುಟೊನ್ ಡಾಟಾ ಕಾರ್ಡ,ಚೆಕ್ ಬುಕ್, ಮನೆಯ ಮತ್ತು ಕಾರಿನ ಕಿಲಿಕೈಗಳು ಒಟ್ಟು ಅ.ಕಿ 45,000/- ಬೆಲೆಬಾಳುವುಗಳು ಶೀಟಿನ ಮೇಲೆ ಕ್ಯಾರಿಯರದಲ್ಲಿಟ್ಟಿದ್ದು, ನಾವು ಕುಳಿತಿರುವ ಬಸ್ಸು ರೈಲ್ವೆ ಗೇಟ ಹತ್ತಿರ ಹೋದಾಗ ಲಗೇಜ ಬ್ಯಾಗ ನೋಡಲು ನನ್ನ ಲ್ಯಾಪಟ್ಯಾಪ ಬ್ಯಾಗ ಕಾಣಿಸಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2013 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

21 April 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ದಿನಾಂಕ: 11.06.2011 ರಂದು 5 ಲಕ್ಷ ರೂಪಾಯಿಗಳು, 11 ತೋಲೆ ಬಂಗಾರ ಮತ್ತು ಸಾಮಾನುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆಯು ಅಶ್ಪಾಕ ಹುಸೇನನೊಂದಿಗೆ ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 6 ತಿಂಗಳವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ನಂತರ ತವರು ಮನೆಯಿಂದ ಟಿ.ವಿ ಫ್ರೀಜ್ ಹಣ ಪ್ಲಾಟ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಾ ಬಂದಿರುತ್ತಾನೆ.  ಹಾಗೂ ಅವರ ಮನೆಯವರು ಸಹ ಮಾನಸಿಕ ಹಿಂಸೆ ಕೊಡುತ್ತಾ ಬಂದಿರುತ್ತಾರೆ. ದಿನಾಂಕ:28.04.2002 ರಂದು ತನ್ನ ತವರು ಮನೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೆನೆ. ಆ ಮಗುವಿಗೆ ನೋಡಲು ಸಹ ಅಶಫಾಕ ಹುಸೇನ ಬಂದಿರುವುದಿಲ್ಲಾ. 2003 ರಲ್ಲಿ ಜಾಮಾ ಮಜೀದ ವಾಡಿ ಕಮೀಟಿ ಹತ್ತಿರ ಹೋಗಿ ಪಂಚಾಯಿತಿ ಮಾಡಿಸಿ ನನ್ನ ಗಂಡನಿಗೆ ಸರಿಯಾಗಿ ಇರಲು ತಿಳುವಳಿಕೆ ಹೇಳಲಾಗಿತ್ತು. ಆದರೂ ಸಹ ನನಗೆ ಸರಿಯಾಗಿ ನೋಡಿಕೊಳ್ಳದೇ ತವರು ಮನೆಯಿಂದ ಹಣ ಮತ್ತು ಬಂಗಾರ ತಗೆದುಕೊಂಡು ಬರುವಂತೆ ಆತನು ಮತ್ತು ಆತನ ಮನೆಯವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಶ್ರೀಮತಿ ಫರಜಾನಾ  ಬೇಗಂ ಗಂಡ ಅಶಫಾಕ ಹುಸೇನ ಸಾ:ಏಶೀಯನ್ ರೇಸಿಡೇಸ್ಸಿ ಎದುರುಗಡೆ  ಜಿ.ಡಿ.ಎ ಆಫೀಸ  ಗುಲಬರ್ಗಾರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಆದೇಶದಂತೆ ಠಾಣೆ ಗುನ್ನೆ ನಂ:23/2013 ಕಲಂ 498(ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ, ಸುಮಯ್ಯಾ ಅಪ್ರೀನ ಗಂಡ ಸೈಯ್ಯದ ಅಲಿಮ ಸಾ:ನೂರಬಾಗ ಎರಿಯಾ ಗುಲಬರ್ಗಾ ರವರು ನನ್ನ ಮದುವೆ  ಸೈಯ್ಯದ ಅಲಿಮ ಇತನ್ನೊಂದಿಗೆ ದಿನಾಂಕ:11-2-2010 ರಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ 21 ಸಾವಿರ ರೂಪಾಯಿಗಳು, 4 ತೊಲೆ ಬಂಗಾರ ಮತ್ತು ಗೃಹಬಳಕೆಯ ಸಾಮಾನುಗಳು ಕೊಟ್ಟು  ಮದುವೆ ಮಾಡಿರುತ್ತಾರೆ. ನನ್ನ ಗಂಡನು ನಿನ್ನ ತವರು ಮನೆಯಿಂದ 2 ಲಕ್ಷ ತೆಗೆದುಕೊಂಡು ಬರಬೇಕು ಅಂತಾ ದಿನಾಲು ಜಗಳ ತೆಗೆದು  ಕೈಯಿಂದ ಹೊಡೆಬಡೆ ಮಾಡುತ್ತಿದ್ದನು. ನನ್ನ ಅತ್ತೆ ಖೂತೆಜಾಬಿ ಮೈದುನ ಜಾವೀದ ಕೂಡಾ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿಗಳು  ತರದೆ ಇದ್ದರೆ, ನನ್ನ ಗಂಡನಿಗೆ ಮತ್ತೊಂದು ಮದುವೆ ಮಾಡುವುದಾಗಿ ಹೇಳಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ದಿನಾಂಕ:02-06-2012 ರಂದು 10-00 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸ ಮುಗಿಸಿಕೊಂಡು ಬಂದವನೇ ಹೊಡೆ ಬಡೆ ಮಾಡಿರುತ್ತಾನೆ. ನನ್ನ ಅತ್ತೆ ಖೂತೆಜಾಬಿ ಮೈದುನ ಜಾವೀದ ಇವರು ಸಹ ಅಂತಾ ಅವಾಚ್ಯ ಶಬ್ದಗಳಿಂದ ಬೈದ್ದು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:24/2013 ಕಲಂ 498(ಎ).323.504.506 ಸಂಗಡ 34 ಐ.ಪಿ.ಸಿ ಮತ್ತು 3&4 ಡಿ.ಪಿ.ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ 20-04-2013 ರಂದು ಸಾಯಂಕಾಲ 7-00 ಗಂಟೆಗೆ ಮಲ್ಲಿಕಾರ್ಜುನ ಇತನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ವಾಯ-4709 ನೇದ್ದರ ಮೇಲೆ ಶರಣಬಸವೇಶ್ವರ ದೇವಸ್ಥಾನದಿಂದ ಗೋವಾ ಹೋಟೆಲ ಮುಖಾಂತರ ಮನೆಯ ಕಡೆಗೆ ಬರುತ್ತಿರುವಾಗ ಕಲ್ಯಾಣಿ ಪೆಟ್ರೋಲ ಪಂಪ ಹತ್ತಿರ ಜಗತ ಸರ್ಕಲ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಎ-8576 ರ ಚಾಲಕ ರಾಜು ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿರುತ್ತಾನೆ ಅಂತಾ ಶ್ರೀ ವಿಜಯಕುಮಾರ ತಂದೆ ಪ್ರಭುಗೌಡ   ಸಾ:ಮನೆ ನಂ 45(ಎ) ಡಿಎಆರ ಹೆಡ  ಕ್ವಾಟರ್ಸ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2013  ಕಲಂ: 279,337  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.