ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ. 22-04-2013 ರಂದು ಮಧ್ಯಾಹ್ನ
1-00 ಗಂಟೆಯ ಸುಮಾರಿಗೆ ಗುಲಬರ್ಗಾ – ಆಳಂದ ರಸ್ತೆಯ ಕೆರಿಬೋಸಗಾ ಕ್ರಾಸ ಹತ್ತಿರ ಆಟೋರಿಕ್ಷಾ ನಂ.ಕೆಎ.32 ಬಿ-6843 ನೇದ್ದರಲ್ಲಿ ಮಹಾಂತೇಶ ತಂದೆ ಭೀಮರಾಯ ಪೂಜಾರಿ ವಯಾ||14 ವರ್ಷ , 2)
ನವನೀತ ತಂದೆ ಅಂಬರಾಯ ಪೂಜಾರಿ ವಯಾ||6 ವರ್ಷ ಇವರನ್ನು ಚಾಲಕನಾದ ಬಸವರಾಜ ತಂದೆ ಪರಮೇಶ್ವರ ನಾಟೀಕಾರ
ಇತನು ಭೀಮಳ್ಳಿ ಗ್ರಾಮದಿಂದ ಕೆರಿಬೋಸಗಾಕ್ಕೆ ಕರೆದುಕೊಂಡು ಬರುತ್ತಿದ್ದು, ಆಟೋರಿಕ್ಷಾ ಚಾಲಕ ಅತೀವೇಗವಾಗಿ ಚಲಾಯಿಸುತ್ತಿರುವಾಗ ಗುಲಬರ್ಗಾ
ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ.ಕೆ.ಎ.32 ಎಫ್. 1661 ನೇದ್ದರ ಚಾಲಕನು ಸಹ ಅತೀವೇಗ
ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿದ್ದರಿಂದ ಎರಡು ವಾಹನಗಳು ಮುಖಾಮುಖಿಯಾಗಿ
ಡಿಕ್ಕಿಯಾಗಿದ್ದರಿಂದ ಆಟೋ ರಿಕ್ಷಾದಲ್ಲಿ ಕುಳಿತಿದ್ದ ಭೀಮರಾಯ ಪೂಜಾರಿ ಮತ್ತು 2) ನವನೀತ ತಂದೆ
ಅಂಬರಾಯ ಪೂಜಾರಿ ಇವರುಗಳಿಗೆ ತಲೆಗೆ ,ಹಣೆಗೆ, ಭಾರಿಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ. ಆಟೋ ಚಾಲಕ ಬಸವರಾಜ ನಾಟೀಕಾರ ಇತನಿಗೆ ಭಾರಿ
ಗುಪ್ತಗಾಯಗಳಾಗಿದ್ದು, ಬಸ್ಸ ಚಾಲಕ ಓಡಿಹೋಗಿರುತ್ತಾನೆ ಅಂತಾ ಶ್ರೀ ಅಂಬರಾಯ ತಂದೆ
ಶಿವರಾಯ ಪೂಜಾರಿ ಉ;ಆಟೋ ಚಾಲಕ ಸಾ;ಕೆರಿಬೋಸಗಾ ತಾ;ಜಿ;ಗುಲಬರ್ಗಾರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:208/2013 ಕಲಂ.279,338,304 (ಎ) ಐಪಿಸಿ. ಸಂಗಡ 187
ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಅನೀಲ ತಂದೆ ವಿಠಲ ಶಹಾಬಾದ ಸಾ|| ಕುಮಸಿ ತಾ ||ಗುಲಬರ್ಗಾರವರು ನಾನು ದಿನಾಂಕ:22-04-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಲಕ್ಷ್ಮಿನಿವಾಸ ಕಾಂಪ್ಲೆಕ್ಸ ಎದುರುಗಡೆ
ರೋಡಿನ ಮೇಲೆ ಹೊರಟಾಗ ಲಾರಿ ನಂಬರ ಕೆಎ-32 ಎ-5943 ನೇದ್ದರ ಚಾಲಕನು ತನ್ನ ಲಾರಿಯನ್ನು ಗಂಜ ಬಸ್
ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಮುಂದೆ ಮೋಟಾರ ಸೈಕಲ ನಂಬರ
ಕೆಎ-36 ಎಸ್-7090 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಸುರೇಶ ತಂದೆ ಶರಣಪ್ಪಾ ಜಮಗಾ ಸಾ||ಕುಮಸಿ
ಇವರಿಗೆ ಭಾರಿಗಾಯಗಳಾಗಿರುತ್ತವೆ. ಲಾರಿ ಚಾಲಕ ತನ್ನ ಲಾರಿಯನ್ನು ಅಲ್ಲಿಯೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ
ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:ದಿನಾಂಕ: 22/04/2013 ರಂದು ರಾತ್ರಿ 10-25 ಗಂಟೆ ಸುಮಾರಿಗೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಾಯನಗಲ್ಲಿಗೆ
ಬಂದಾಗ ಕಬಲಾ ಬಾಷಾ ದರ್ಗಾ ಹಾಗೂ ಮುನಾವರ ಹುಸೇನ ಇವರ ಮನೆಯ ಹತ್ತಿರದಲ್ಲಿ ಸಾರ್ವಜನಿಕ ರಸ್ತೆಯ
ಮೇಲೆ ಕೆ.ಜೆ.ಪಿ ಪಕ್ಷದ ಅಭ್ಯರ್ಥಿಯಾದ ಶ್ರೀ
ಉಸ್ತಾದ ನಾಸೀರ ಹುಸೇನ ರವರು ಯಾವದೇ ಪರವಾನಿಗೆ ಪಡೆಯದೆ, ಕಬಲಾ ಬಾಷಾ ದರ್ಗಾ ಹಾಗೂ ಮುನಾವರ
ಹುಸೇನ ಇವರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಚುನಾವಣೆ ಪ್ರಚಾರದ ಸಮಯ ಮುಗಿದ ಮೇಲೆ ಸಹ
ಸಭೆಯನ್ನು ನಡೆಸಿದ್ದರಿಂದ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ ಅಂತಾ
ಅನೀಲಕುಮಾರ ಪ್ಲಾಯಿಂಗ್ ಸ್ವ್ಕಾಡ ಆಪೀಸರ್
ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 30/2013 ಕಲಂ, 171,
(ಹೆಚ) 1951 ಆರ.ಪಿ.ಆಕ್ಟ ಮತ್ತು 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
No comments:
Post a Comment