POLICE BHAVAN KALABURAGI

POLICE BHAVAN KALABURAGI

16 April 2013

GULBARGA DISTRCIT REPORTED CRIME


ಅಪಘಾತ ಪ್ರಕರಣ :
ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ.ಲಕ್ಷ್ಮೀಬಾಯಿ ಗಂಡ ರಾಮಣ್ಣ ಭಂಗನೊರ ವಯಾ||38 ವರ್ಷ ಸಾ|| ಮುಡಬಿ ಗ್ರಾಮ  ತಾ||ಬಸವಕಲ್ಯಾಣ  ಜಿ|| ಬೀದರ  ರವರು ನನ್ನ ತವರು ಮನೆ ಹುಡಗಿ ಗ್ರಾಮವಾಗಿದ್ದು, ನಾವು ಮತ್ತು ನಮ್ಮ ತವರು ಮನೆಯವರು ಘತ್ತರಗಿ ದೇವರಿಗೆ ನಡೆದುಕೊಳ್ಳುತ್ತಿರುತ್ತೇವೆ. ದಿನಾಂಕ:15/04/2013 ರಂದು ನಾನು ಮತ್ತು ನನ್ನ ಗಂಡ, ವಂದನಾ ತಂದೆ ಸೈಬಣ್ಣ ಗೋಣಿ ಕೂಡಿಕೊಂಡು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ದೇವಿಗೆ ಪಾದಯಾತ್ರೆ ಹೋಗುವ ಕುರಿತು ಊರಿನಿಂದ ಹೊರಟಿದ್ದು, ಹುಡಗಿ ಗ್ರಾಮದಿಂದ  ಕೂಡಾ ನನ್ನ ತಾಯಿ ಕಾಶಿಬಾಯಿ ಗಂಡ ಭೀಮಶ್ಯಾ ಪದ್ಮಾನೋರ, ತಂಗಿಯಾದ ಚಂದ್ರಕಲಾ ಗಂಡ ರಮೇಶ ಸೋಲಾಪೂರ ರವರೂ ಕೂಡಾ ಪಾದ ಯಾತ್ರೆಗೆ ಬರುತ್ತೇವೆ, ನೀವು ಕಮಲಾಪೂರಕ್ಕೆ ಬನ್ನಿ ಎಲ್ಲರೂ ಕೂಡಿಕೊಂಡು ಹೋಗೋಣ ಅಂತಾ ತಿಳಿಸಿದ್ದಕ್ಕೆ ನಿನ್ನೆ ರಾತ್ರಿ 7-00 ಗಂಟೆ ಸುಮಾರಿಗೆ ಕಮಲಾಪೂರ ಬಸ್ ಸ್ಟಾಂಡಿಗೆ ಬಂದಿರುತ್ತೆವೆ. ನಮ್ಮ ತಾಯಿ ಹಾಗೂ ತಂಗಿ ಮತ್ತು ಅವರ ಜೊತೆಯಲ್ಲಿ ಖಾಸಿಂಪೂರ ಗ್ರಾಮದ ನಮ್ಮ ತಂಗಿಯಾದ ಸತ್ಯಮ್ಮ @ ಸಂತೋಷಿ ಗಂಡ ಮಹಾನಂದ ಗುಮಾಸ್ತೆ ಹಾಗೂ ಅದೇ ಗ್ರಾಮದ ಶಶಿಕಲಾ ಗಂಡ ರಾಜಕುಮಾರ ಗುಮಾಸ್ತೆ , ಅನ್ನಪೂರ್ಣಾ ಗಂಡ ಅಂಬರೀಶ್ ಗುಮಾಸ್ತೆ, ನಾಗಮ್ಮ ಗಂಡ ಹರಿಹರ ಗುಮಾಸ್ತೆ, ಈರಮ್ಮ ಗಂಡ ವೈಜುನಾಥ ಗುಮಾಸ್ತೆ, ಪದ್ವಾವತಿ ಗಂಡ ಪ್ರಭು ಗುಮಾಸ್ತೆ, ಜಗದೇವಿ ತಂದೆ ತುಳಸಿರಾಮ ಗುಮಾಸ್ತೆ, ತೇಜಮ್ಮ ಗಂಡ ನರಸಪ್ಪ ಹಣಜೆ , ಬಸಮ್ಮ ಗಂಡ ಶರಣಪ್ಪ  ಹಾಗೂ ಮುತ್ತಂಗಿ ಗ್ರಾಮದ ಚಿತ್ರಮ್ಮ ಗಂಡ ವಿಠಲ ಬಾಳಪ್ಪನೋರ, ಕಲಾವತಿ ಗಂಡ ಸುಭಾಶ ಬಾಳಪ್ಪನೋರ ರವರೆಲ್ಲರೂ ಬಂದಿರುತ್ತೆವೆ.ದಿನಾಂಕ:16/04/2013 ರಂದು ನಸುಕಿನ 4-00 ಗಂಟೆ ಸುಮಾರಿಗೆ ನಡೆದುಕೊಂಡು ಹುಮನಾಬಾದ – ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಕಮಲಾಪೂರ ದಾಟಿ ನವನಿಹಾಳ ತಾಂಡಾದ ಕ್ರಾಸ್ ಹತ್ತಿರ ರೋಡಿನ ಎಡಬದಿಯಿಂದ ಹೊರಟಾಗ ನಮ್ಮ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಯಾವದೇ ಹಾರ್ನ ಹಾಕದೇ ಚಲಾಯಿಸಿಕೊಂಡು ಬಂದವನೇ ನಮ್ಮಲ್ಲಿಯ ಕೆಲವರಿಗೆ ಡಿಕ್ಕಿ ಹೊಡೆದು ನನಗೂ ಡಿಕ್ಕಿ ಪಡಿಸಿದ್ದರಿಂದ ನಾನು ಹಾರಿ ಬಿದ್ದೆನು. ನನಗೆ ಟೊಂಕಕ್ಕೆ ಗುಪ್ತಗಾಯ ಮತ್ತು ಬಲಗೈಗೆ ಗಾಯವಾಗಿದ್ದು, ನನ್ನ ಗಂಡ ರಾಮಣ್ಣನಿಗೆ ನೋಡಲಾಗಿ ತೆಲೆಗೆ, ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಾಗೂ ಖಾಸಿಂಪೂರದ ಬಸಮ್ಮ ಗಂಡ ಶರಣಪ್ಪ ಗುಮಾಸ್ತೆ ಇವಳಿಗೆ ತೆಲೆಯ ಭಾಗಕ್ಕೆ ಮತ್ತು ಅಲ್ಲಲ್ಲಿ ಭಾರಿ ಪ್ರಮಾಣದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಜಗದೇವಿ, ಅನ್ನಪೂರ್ಣ, ಶಶಿಕಲಾ ಮತ್ತು ನನ್ನ ತಾಯಿ ಕಾಶಿಬಾಯಿ ಹಾಗೂ ತಂಗಿ ಚಂದ್ರಕಲಾ ಗಂಡ ರಮೇಶ ಸೋಲಾಪೂರೆ ಹಾಗೂ ಇತರರಿಗೆ ರಕ್ತಗಾಯಗಳಾಗಿದ್ದವು. ಅವರೆಲ್ಲರಿಗೂ ಅಂಬುಲೆನ್ಸದಲ್ಲಿ ಹಾಕಿಕೊಂಡು ಗುಲಬರ್ಗಾದ  ಸರ್ಕಾರಿ ಆಸ್ಪತ್ರೆಗೆ ತರುವಾಗ ನನ್ನ ತಾಯಿ ಕಾಶಿಬಾಯಿ ಮತ್ತು ತಂಗಿ ಚಂದ್ರಕಲಾ ಇವರುಗಳು ಭಾರಿ ಗಾಯದಿಂದ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುತ್ತಾರೆ. ಬಸ್ ಚಾಲಕ ಓಡಿ ಹೋಗಿದ್ದು, ಬಸ್ ನಂಬರ್ ನೋಡಲಾಗಿ ಕೆಎ–32/ಎಫ್ – 1538 ನೇದ್ದು ಹೈದ್ರಾಬಾದ – ಗುಲಬರ್ಗಾ ಮಾರ್ಗದ ಬಸ್ಸು ಇದ್ದು, ಚಾಲಕನ ಹೆಸರು ಮಲ್ಲೇಶಿ ತಂದೆ ನರಸಪ್ಪಾ ಶಾಬಾದಿ ಅಂತಾ ಗೊತ್ತಾಗಿರುತ್ತದೆ. ಜಗದೇವಿ ತಂದೆ ತುಳಸಿರಾಮ ಇವಳು ಭಾರಿ ಗಾಯದಿಂದ ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ. ಉಳಿದ ಕೆಲವರಿಗೆ ಭಾರಿ ಮತ್ತು ಸಾದಾ ರಕ್ತಗಾಯಗಳಾಗಿರುತ್ತವೆ. ಪಾದಯಾತ್ರಿಗಳ ಪೈಕಿ ಇನ್ನೂ ಕೆಲವರಿಗೆ ಗಾಯಗಳಾಗಿರುತ್ತವೆ. ಬಸ್ಸ ಚಾಲಕ ಮಲ್ಲೇಶಿ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:37/2013 ಕಲಂ 279.337.338.304 [ಎ] ಐಪಿಸಿ ಸಂಗಡ  187 ಐಎಂವ್ಹಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

15 April 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ;
ನಿಂಬರ್ಗಾ ಪೊಲೀಸ್ ಠಾಣೆ:ಶ್ರೀ ಲಕ್ಷ್ಮಣ ತಂದೆ ನಿಂಗಪ್ಪ ಕರನಾಳಕರ ಸಾ|| ದಂಗಾಪೂರ ರವರು ದಿನಾಂಕ:14-04-2013 ರಂದು ರಾತ್ರಿ 10-00 ಗಂಟೆಯಿಂದ ನಸುಕಿನ ಜಾವ 5-30 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದಿದ್ದಾಗ ಮನೆಯ ಕೀಲಿ ಮುರಿದು ಮನೆಯಲ್ಲಿಟ್ಟಿದ್ದ ಒಂದು ತೊಲೆ ಬಂಗಾರದ ಚೈನ ಅ.ಕಿ 12,000/- ಹಾಗೂ ನಗದು ಹಣ 8000/- ರೂಪಾಯಿಗಳು ಮತ್ತು ನಮ್ಮ ಮನೆಯಲ್ಲಿ ಬಾಡಿಗೆಯಲ್ಲಿರುವ ರಾಣಿ ಇವರ ಮನೆಯಿಂದ ಒಂದು ಟಿ.ವಿ ಮತ್ತು ಸೌಂಡ ಬಾಕ್ಸ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 44/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಬಿಹಾರ ರಾಜ್ಯದಿಂದ ಸುಮಾರು 10-15 ಜನರು ಕೂಲಿ ಕೆಲಸಕ್ಕೆ ಅಂತಾ ಚಟ್ಟಿನಾಡ ಸಿಮೆಂಟ ಕಂಪನಿಗೆ ಕೆಲಸ ಮಾಡುವದಕ್ಕೆ ಬಂದಿದ್ದು, ಅವರಲ್ಲಿ  ರಾಜುರಾಮ ತಂದೆ ನೇತರಾಮ ಎಂಬುವವನು ಎಲ್ಲರಿಗೂ ಅಡಿಗೆ ಮಾಡುವವನಾಗಿದ್ದನು. ಪ್ರತಿ ಶನಿವಾರ ನಮ್ಮ ಸಂಭಳ ದೊರೆಯುತ್ತಿದ್ದು, ನಿನ್ನೆ ಶನಿವಾರದ ದಿವಸ ಸಂಭಳ ಪಡೆದುಕೊಂಡಿದ್ದರಿಂದ ಚಿಂಚೋಳಿಗೆ ಬಂದು  ಒಂದು ವಾರಕ್ಕೆ ಬೇಕಾಗುವ ಅಡುಗೆ  ಸಾಮಾಗ್ರಿಗಳನ್ನು  ಭಟ್ಟನಾದ ರಾಜುರಾಮ  ಮತ್ತು  ಔದೇಶ ಇಬ್ಬರು ಕೂಡಿ ಖರೀದಿ ಮಾಡಿಕೊಂಡು ಆಟೊ ನಂ:ಕೆಎ-32 /ಬಿ-2567 ನೇದ್ದರಲ್ಲಿ ಕುಳಿತು ಚಿಟ್ಟಿನಾಡ ಕಡೆಗೆ ಹೋಗುವಾಗ ಚಿಂಚೋಳಿ ಫೈರ ಸ್ಟೇಷನ ನಂತರ ತಾಂಡೂರ ಮುಖ್ಯ ರಸ್ತೆಯ ಮೇಲೆ ತಾಂಡೂರ ಕಡೆಯಿಂದ ಲಾರಿ  ನಂ:ಕೆಎ-39/–5361 ನೇದ್ದರ ಚಾಲಕನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅವರು ಕುಳಿತುಕೊಂಡ ಆಟೋಕ್ಕೆ ಡಿಕ್ಕಿ ಪಡಿಸಿದ್ದರಿಂದ ರಾಜುರಾಮನು ಮೃತಪಟ್ಟಿದ್ದಾನೆ. ಔದೇಶನಿಗೆ ಮತ್ತು  ಆಟೋ ಚಾಲಕನಿಗೆ  ಸಾಧಾ ಮತ್ತು ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ. ಲಾರಿ ಚಾಲಕನು ಲಾರಿ ಸಮೇತ ಓಡಿ ಹೋಗಿರುತ್ತಾನೆ. ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ,ಪಾರಸನಾಥ ತಂದೆ ಸೂರಜನಾಥ ತಾ|| ಚಾಂದ ಜ|| ಬುಗುಂವಾ (ಕೈಮೂರ್) ರಾಜ್ಯ || ಬಿಹಾರ ಹಾ||ವ|| ಚಟ್ಟಿನಾಡ ಸಿಮೆಂಟ ಕಂಪನಿ ಇತನು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:97/2013  ಕಲಂ 279,337,338,304(ಎ) ಐಪಿಸಿ ಸಂ 187 ಐ.ಎಮ್.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀಮತಿ.ನಿರ್ಮಲಾ ಗಂಡ ಮಂಜುನಾಥ ರಾಂಪೂರೆ ವಯಾ|| 28 ವರ್ಷ ಸಾ|| ಡೊಂಗರಗಾಂವ ತಾ||ಜಿ|| ಗುಲಬರ್ಗಾರವರು ನನಗೆ ನಾಲ್ಕು ವರ್ಷಗಳ ಹಿಂದ ಡೊಂಗರಗಾಂವ ಗ್ರಾಮದ ಮಂಜುನಾಥ ತಂದೆ ಲಿಂಗಶೇಟ್ಟೆಪ್ಪ ರಾಂಪೂರೆ ಇತನ ಜೋತೆ ಮದುವೆ ಮಾಡಿಕೊಟ್ಟಿದ್ದು, ಒಂದು ವರ್ಷದ ನಂತರ ನನ್ನ ಗಂಡ ಮಂಜುನಾಥ, ಅತ್ತೆ ಮಲ್ಲಮ್ಮ ಮತ್ತು ಮಾವ ಲಿಂಗಶೇಟ್ಟೆಪ್ಪ ಕೂಡಿಕೊಂಡು ನಿನಗೆ ಅಡುಗೆ ಸರಿಯಾಗಿ ಮಾಡುವದಕ್ಕೆ ಬರುವದಿಲ್ಲ ಅಂತಾ ವಿನಾಃಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆ ಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ನನ್ನ ತವರು ಮನೆಯವರಿಗೆ ಈ ವಿಷಯ ತಿಳಿಸಿದ್ದು, ಅವರೆಲ್ಲರೂ ಡೊಂಗರಗಾಂವ ಗ್ರಾಮಕ್ಕೆ ಬಂದು ರಾಜಿ ಪಂಚಾಯತಿ ಮಾಡಿ ನನ್ನನ್ನು ನನ್ನ ಗಂಡನ ಮನೆಯಾದ ಡೊಂಗರಗಾಂವದಲ್ಲಿ ಬಿಟ್ಟು ಹೋಗಿರುತ್ತಾರೆ. ದಿನಾಂಕ:13/04/2013 ರಂದು ಬೆಳೆಗ್ಗೆ  8-00 ಗಂಟೆ ಸುಮಾರಿಗೆ ನಾನು ಅಡುಗೆ ಮಾಡುತ್ತಿರುವಾಗ ನನ್ನ ಗಂಡ ಮತ್ತು ಅತ್ತೆ ಮಲ್ಲಮ್ಮ ಹಾಗೂ ಮಾವ ಲಿಂಗಶೇಟ್ಟಿ ಇವರು ನಿನಗೆ ಮಕ್ಕಳಾಗಿಲ್ಲ, ನಾವು ನಮ್ಮ ಮಗನಿಗೆ ಬೇರೆ ಮದುವೆ ಮಾಡುತ್ತೇವೆ, ನೀನು ಒಪ್ಪಿ ಈ  ಪತ್ರಕ್ಕೆ ಸಹಿ ಮಾಡು ಅಂತಾ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:36/2013 ಕಲಂ 341.323.498(ಎ).504.506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.