ಕಳ್ಳತನ
ಪ್ರಕರಣ;
ನಿಂಬರ್ಗಾ
ಪೊಲೀಸ್ ಠಾಣೆ:ಶ್ರೀ ಲಕ್ಷ್ಮಣ ತಂದೆ ನಿಂಗಪ್ಪ
ಕರನಾಳಕರ ಸಾ|| ದಂಗಾಪೂರ ರವರು ದಿನಾಂಕ:14-04-2013 ರಂದು ರಾತ್ರಿ 10-00 ಗಂಟೆಯಿಂದ ನಸುಕಿನ ಜಾವ 5-30 ಗಂಟೆ
ಅವಧಿಯಲ್ಲಿ ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದಿದ್ದಾಗ ಮನೆಯ ಕೀಲಿ ಮುರಿದು ಮನೆಯಲ್ಲಿಟ್ಟಿದ್ದ
ಒಂದು ತೊಲೆ ಬಂಗಾರದ ಚೈನ ಅ.ಕಿ 12,000/- ಹಾಗೂ ನಗದು ಹಣ 8000/- ರೂಪಾಯಿಗಳು ಮತ್ತು ನಮ್ಮ ಮನೆಯಲ್ಲಿ
ಬಾಡಿಗೆಯಲ್ಲಿರುವ ರಾಣಿ ಇವರ ಮನೆಯಿಂದ ಒಂದು ಟಿ.ವಿ ಮತ್ತು ಸೌಂಡ ಬಾಕ್ಸ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 44/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಬಿಹಾರ ರಾಜ್ಯದಿಂದ ಸುಮಾರು 10-15 ಜನರು ಕೂಲಿ ಕೆಲಸಕ್ಕೆ ಅಂತಾ ಚಟ್ಟಿನಾಡ ಸಿಮೆಂಟ
ಕಂಪನಿಗೆ ಕೆಲಸ ಮಾಡುವದಕ್ಕೆ ಬಂದಿದ್ದು, ಅವರಲ್ಲಿ
ರಾಜುರಾಮ ತಂದೆ ನೇತರಾಮ ಎಂಬುವವನು ಎಲ್ಲರಿಗೂ ಅಡಿಗೆ ಮಾಡುವವನಾಗಿದ್ದನು. ಪ್ರತಿ
ಶನಿವಾರ ನಮ್ಮ ಸಂಭಳ ದೊರೆಯುತ್ತಿದ್ದು, ನಿನ್ನೆ ಶನಿವಾರದ ದಿವಸ ಸಂಭಳ ಪಡೆದುಕೊಂಡಿದ್ದರಿಂದ ಚಿಂಚೋಳಿಗೆ
ಬಂದು ಒಂದು ವಾರಕ್ಕೆ ಬೇಕಾಗುವ ಅಡುಗೆ ಸಾಮಾಗ್ರಿಗಳನ್ನು
ಭಟ್ಟನಾದ ರಾಜುರಾಮ ಮತ್ತು ಔದೇಶ ಇಬ್ಬರು ಕೂಡಿ ಖರೀದಿ ಮಾಡಿಕೊಂಡು ಆಟೊ ನಂ:ಕೆಎ-32
/ಬಿ-2567 ನೇದ್ದರಲ್ಲಿ ಕುಳಿತು ಚಿಟ್ಟಿನಾಡ ಕಡೆಗೆ ಹೋಗುವಾಗ ಚಿಂಚೋಳಿ ಫೈರ ಸ್ಟೇಷನ ನಂತರ
ತಾಂಡೂರ ಮುಖ್ಯ ರಸ್ತೆಯ ಮೇಲೆ ತಾಂಡೂರ ಕಡೆಯಿಂದ ಲಾರಿ
ನಂ:ಕೆಎ-39/–5361 ನೇದ್ದರ ಚಾಲಕನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಅವರು ಕುಳಿತುಕೊಂಡ ಆಟೋಕ್ಕೆ ಡಿಕ್ಕಿ ಪಡಿಸಿದ್ದರಿಂದ ರಾಜುರಾಮನು
ಮೃತಪಟ್ಟಿದ್ದಾನೆ. ಔದೇಶನಿಗೆ ಮತ್ತು ಆಟೋ
ಚಾಲಕನಿಗೆ ಸಾಧಾ ಮತ್ತು ಭಾರಿ ರಕ್ತ ಮತ್ತು
ಗುಪ್ತಗಾಯಗಳಾಗಿರುತ್ತವೆ. ಲಾರಿ ಚಾಲಕನು ಲಾರಿ ಸಮೇತ ಓಡಿ ಹೋಗಿರುತ್ತಾನೆ. ಲಾರಿ ಚಾಲಕನ ಮೇಲೆ
ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ,ಪಾರಸನಾಥ ತಂದೆ ಸೂರಜನಾಥ ತಾ|| ಚಾಂದ ಜ|| ಬುಗುಂವಾ (ಕೈಮೂರ್)
ರಾಜ್ಯ || ಬಿಹಾರ ಹಾ||ವ|| ಚಟ್ಟಿನಾಡ ಸಿಮೆಂಟ ಕಂಪನಿ ಇತನು ದೂರು ಸಲ್ಲಿಸಿದ್ದರಿಂದ ಠಾಣೆ
ಗುನ್ನೆ ನಂ:97/2013 ಕಲಂ 279,337,338,304(ಎ)
ಐಪಿಸಿ ಸಂ 187 ಐ.ಎಮ್.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment