POLICE BHAVAN KALABURAGI

POLICE BHAVAN KALABURAGI

30 December 2012

GULBARGA DISTRICT


:: ಪತ್ರಿಕಾ ಪ್ರಕಟಣೆ ::

          ಮುಂಬರುವ ಹೊಸ ವರ್ಷ 2013 ಶುಭಾಷಯಗಳನ್ನು ಕೋರುತ್ತಾ, ಈ ಕೆಳಕಂಡ ವ್ಯವಸ್ಥೆಯನ್ನು ಗುಲಬರ್ಗಾ ಜಿಲ್ಲಾ ಪೊಲೀಸ್ ವತಿಯಿಂದ ಮಾಡಿದ್ದು, ಅವುಗಳನ್ನು ಪಾಲಿಸಲು/ಸಹಕರಿಸಲು ಪ್ರಕಟಿಸಲಾಗಿದೆ.
Ø ಜಿಲ್ಲೆಯಲ್ಲಿ ಹೊಸ ವರ್ಷವನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಿಸುವ ಕುರಿತು ಸೂಕ್ತ  ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಿದ್ದು ಇರುತ್ತದೆ.
Ø ನಗರದ ಮೇನ್ ರೋಡ ಹಾಗೂ ರಿಂಗ ರೋಡಗಳಲ್ಲಿ ಮತ್ತು ಹೈವೆಗಳಲ್ಲಿ ವಿಶೇಷ ಚೆಕಪೊಸ್ಟಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಕರ್ತವ್ಯ ನಿರತ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಯುವಕರು ಕುಡಿದು, ಅಮಾಯಕರಿಗೆ ಅಡೆತಡೆ ಮಾಡುವುದು ಮತ್ತು ಅಪಘಾತಗಳು ಮಾಡದಂತೆ ನೋಡಿಕೊಳ್ಳುವ ಕುರಿತು ಸಲಹೆ ಸೂಚನೆಗಳು ಕೂಡಾ ನೀಡಿದ್ದು ಇರುತ್ತದೆ.
Ø ನಗರದಲ್ಲಿ ಹಾಗೂ ಪಟ್ಟಣಗಳಲ್ಲಿ ಇರುವ ಮಧ್ಯದ ಅಂಗಡಿಗಳನ್ನು ದಿನಾಂಕ:31-12-2012 ರಂದು ರಾತ್ರಿ 10-30 ಗಂಟೆಗೆ ಬಂದ ಮಾಡುವುದು.
Ø ಬಾರ್/ರೆಸ್ಟೊರೆಂಟ್ ಮಾಲಿಕರು ತಮ್ಮ ಬಾರ್/ರೆಸ್ಟೊರೆಂಟಗಳನ್ನು ದಿನಾಂಕ:31-12-2012 ರಂದು  ರಾತ್ರಿ  11-30 ಗಂಟೆಗೆ ಬಂದ್ ಮಾಡುವುದು.
Øಬಂದೋಬಸ್ತ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯವರಿಗೆ ವೈನ್ಸಶಾಪ್,  ಬಾರ್/ರೆಸ್ಟೊರೆಂಟಗಳನ್ನು ನಿಗದಿತ ಸಮಯದಲ್ಲಿ ಬಂದ್ ಮಾಡಿಸಲು ಸೂಚಿಸಲಾಗಿದೆ.
Ø   ವೈನ್ಸಶಾಪ್ ಮತ್ತು ಬಾರ್/ರೆಸ್ಟೊರೆಂಟ್ ಮಾಲಿಕರು ತಮ್ಮ ತಮ್ಮ ವೈನ್ಸಶಾಪ್ ಮತ್ತು  ಬಾರ್/ರೆಸ್ಟೊರೆಂಟಗಳನ್ನು ನಿಗದಿತ ಸಮಯದಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಬಂದ್ ಮಾಡಿ ಸಹಕರಿಸಲು ಕೋರಲಾಗಿದೆ.
Ø  ಸಾರ್ವಜನಿಕರು ಸುರಕ್ಷಿತವಾಗಿ ಹೊಸ ವರ್ಷವನ್ನು ಆಚರಣೆ ಮಾಡಲು ಪೊಲೀಸ್  ಇಲಾಖೆಯಿಂದ ಜಿಲ್ಲೆಯ ಎಲ್ಲಾ ನಾಗರಿಕರಿಗೆ ಶುಭಾಷಗಳನ್ನು ಕೋರಲಾಗಿದೆ.

                    ಎಸ್.ಪಿ. ಗುಲಬರ್ಗಾರವರಿಂದ 


GULBARGA DISTRICT REPORTED CRIME


ಹುಡಗ ಕಾಣೆಯಾದ ಬಗ್ಗೆ:
ಮಳಖೇಡ ಪೊಲೀಸ್ ಠಾಣೆ:ಶ್ರೀ ಗೊಲ್ಲಾಳಪ್ಪ ತಂದೆ ಶರಣಪ್ಪ ಪುಜಾರಿ ಸಾ|| ಕೊಂಕನಳ್ಳಿ ಗ್ರಾಮ ತಾ||ಸೇಡಂ ರವರು ಮಗನಾದ ಚೆನ್ನವೀರ ವಯ||16 ವರ್ಷ,10 ನೇ ತರಗತಿ ವಿಧ್ಯಾರ್ಥಿ,ಇತನು ದಿನಾಂಕ:26/12/2012 ರಂದು ಮುಂಜಾನೆ 8:30 ಗಂಟೆಗೆ ಶಾಲೆಗೆ ಹೋಗುವದಾಗಿ ತಿಳಿಸಿ ಮನೆಯಿಂದ ಹೋಗಿದ್ದು ಪುನಃ ಮನೆಗೆ ಬರದೆ ಕಾಣೆಯಾಗಿದ್ದು,ಕಾಣೆಯಾದ ನನ್ನ ಮಗನನ್ನು ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವದಿಲ್ಲ. ನನ್ನ ಚೆನ್ನವೀರ ಇತನನ್ನು ಪತ್ತೆ ಮಾಡಿಕೊಡಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:77/2012 ಕಲಂ,ಹುಡಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಾಣೆಯಾದ ಹುಡಗನ ಚಹರೆ ಪಟ್ಟಿ ಈ ರೀತಿಯಾಗಿದೆ. ಹೆಸರು: ಚೆನ್ನವೀರ, ವಯಸ್ಸು||16 ವರ್ಷ,ಎತ್ತರ,-4’1” ಗೋಧಿ ಮೈಬಣ್ಣ, ಕಪ್ಪು ಕೂದಲು,ಬಿಳಿ ಗೆರೆಯುಳ್ಳ ಉದ್ದನ ತೊಳಿನ ಅಂಗಿ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.ಇತನು ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ  ಮಳಖೇಡ ಪೊಲೀಸ್ ಠಾಣೆ-08441-280366/280306, ಗುಲಬರ್ಗಾ ಕಂಟ್ರೋಲ್ ರೂಮ್ 08472-263604, ಪೊಲೀಸ್ ಉಪಾಧೀಕ್ಷಕರು, ಚಿಂಚೋಳಿ-08475-273100,ಸಿಪಿಐ ಸೇಡಂ-08441-277026 ಈ ನಂಬರಿಗೆ ಮಾಹಿತಿ ನೀಡಲು ಕೋರಲಾಗಿದೆ. 

29 December 2012

GULBARGA DISTRICT



:: ಪತ್ರಿಕಾ ಪ್ರಕಟಣೆ ::
ಈಶಾನ್ಯ ವಲಯ ಪೊಲೀಸ್ ಮತ್ತು ಅಡ್ವೊಕೇಟ್ ಜನರಲ್ ಕಛೇರಿ ಸಹಯೊಗದೊಂದಿಗೆ ಗೂಂಡಾ ಕಾಯಿದೆ ಅನುಷ್ಟಾನಕ್ಕಾಗಿ ಒಂದು ದಿನದ ವಲಯ ಮಟ್ಟದ ಕಾರ್ಯಗಾರವನ್ನು  ಜಿಲ್ಲಾಧಿಕಾರಿಗಳ ಕಛೇರಿಯ ಸಂಭಾಗಣ ಗುಲಬರ್ಗಾದಲ್ಲಿ,
 ದಿನಾಂಕ:29-12-2012 ರಂದು ನಡೆದ ಗೂಂಡಾ ಕಾಯಿದೆ ಅನುಷ್ಟಾನ ಕಾರ್ಯಗಾರ.
ದಿನಾಂಕ:29-12-2012 ರಂದು ಜಿಲ್ಲಾಧಿಕಾರಿಗಳ ಕಛೇರಿಯ ಸಂಭಾಗಣ ಗುಲಬರ್ಗಾದಲ್ಲಿ ಗೂಂಡಾ ಕಾಯಿದೆ ಅನುಷ್ಟಾನಕ್ಕಾಗಿ ಕಾರ್ಯಗಾರವನ್ನು ಈಶಾನ್ಯ ವಲಯ ಪೊಲೀಸ್ ಇಲಾಖೆ ಮತ್ತು ಅಡ್ವೊಕೇಟ್ ಜನರಲ್ ಕಛೇರಿ ಸಹಯೊಗದೊಂದಿಗೆ ಏರ್ಪಡಿಸಿದ್ದು, ಈ ಕಾರ್ಯಕ್ರಮ ಬೆಳಿಗ್ಗೆ 10-00 ಗಂಟೆಗೆ ಪ್ರಾರಂಭವಾಗಿದ್ದು, ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಕೆ. ಎಮ್.ನಟರಾಜನ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕರ್ನಾಟಕ ರಾಜ್ಯ ಬೆಂಗಳೂರರವರು, ಮುಖ್ಯ ಅಥಿತಿಗಳಾಗಿ, ಶ್ರೀ,ಆರ.ಎಚ್.ಔರಾದಕರ್.,ಭಾ.ಪೊ.ಸೇ. ಪ್ರಧಾನ ಕಾರ್ಯದರ್ಶಿಗಳು  ಗೃಹ ಇಲಾಖೆ ಬೆಂಗಳೂರು, ಶ್ರೀ ಈ. ಇಂದ್ರೇಶ ಸರ್ಕಾರಿ ಅಬಿಯೋಜಕರು, ಹೈಕೊರ್ಟ ಬೆಂಗಳೂರು ರವರು ಆಗಮಿಸಿದ್ದು, ಬೆಳಿಗ್ಗೆ 10-30 ಗಂಟೆಗೆ ಶ್ರೀ ಕೆ.ಎಮ್ ನಟರಾಜನ್  ಕಾರ್ಯಗಾರವನ್ನು ಉದ್ಘಾಟಿಸಿದ್ದು, ಶ್ರೀ ಮಹಮದ್ ವಜೀರ ಅಹಮದ್ ಐ.ಪಿ.ಎಸ್,. ಪೊಲೀಸ್ ಮಹಾ ನಿರೀಕ್ಷಕರು, ಈಶಾನ್ಯ ವಲಯ ಗುಲಬರ್ಗಾರವರು ಸ್ವಾಗತ ಭಾಷಣವನ್ನು ಮಾಡಿದ್ದು, ನಂತರ ಶ್ರೀ ಕೆ.ಎಮ್ ನಟರಾಜನ್ ರವರು ಗೂಂಡಾ ಕಾಯಿದೆಯ ಅನುಷ್ಟಾನ ಮತ್ತು ಕಾಯಿದೆಯಲ್ಲಿ ಇರುವ ಕಲಂಗಳ  ಬಗ್ಗೆ ಮತ್ತು ಕಾಯಿದೆಯನ್ನು ಅಳವಡಿಸುವ ರೀತಿ ವಿಧಾನ ಹಾಗೂ ಈ ಕಾಯಿದೆ ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸುವದು, ಹಾಗು ಜಿಲ್ಲಾ ದಂಡಾಧಿಕಾರಿಯವರಿಗೆ ಇರುವ ಅಧಿಕಾರ ಮತ್ತು ಈ ಕಾಯಿದೆಯನ್ನು ಜಾರಿಗೆ ತರುವಾಗ ಪಾಲಿಸಬೇಕಾದ ರೀತಿ ನೀತಿಗಳಲ್ಲಿ ಯಾವ ತರಹದ ಲೋಪ ದೋಷಗಳು ಆಗುತ್ತವೆ, ಆದ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಪ್ರಸ್ತಾವನೆಯನ್ನು ಸಲ್ಲಿಸುವ ಮತ್ತು ಗೂಂಡಾ ಕಾಯಿದೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯವರು ಯಾವ ಯಾವ ದಾಖಲಾತಿಗಳನ್ನು ಸಂಗ್ರಹಿಸಬೇಕು ಎಂಬುವದರ ಕುರಿತು ವಿಸ್ತ್ರುತವಾಗಿ ಉಪನ್ಯಾಸವನ್ನು ನೀಡಿರುತ್ತಾರೆ.
ಅದೇ ರೀತಿಯಾಗಿ ಶ್ರೀ,ಈ.ಇಂದ್ರೇಶ ಸರ್ಕಾರಿ ವಕೀಲರು ಹೈಕೊರ್ಟ ಬೆಂಗಳೂರು ರವರು ಈ ಗೂಂಡಾ ಕಾಯಿದೆ ಅಳವಡಿಸುವಾಗ ಅಥವಾ ಅಳವಡಿಸಿದ ನಂತರ ಹೈಕೊರ್ಟನಲ್ಲಿ ವಾದ ಮಂಡಿಸುವ ಬಗ್ಗೆ ಮತ್ತು ಈ ಗೂಂಡಾ ಕಾಯಿದೆಗೂ ಹಾಗೂ ಸಂವಿಧಾನದಲ್ಲಿ ಅಳವಡಿಸಿರುವ ಪರಿಚ್ಚೇದಗಳ ಬಗ್ಗೆ ಇರುವ ಸಂಭಂದದ ಕುರಿತು ವಿವರವಾದ ಉಪನ್ಯಾಸವನ್ನು ನೀಡಿದರು.  
ಅದೇ ರೀತಿಯಾಗಿ ಶ್ರೀ. ಆರ್.ಎಚ್.ಔರಾದಕರ್ ಪ್ರಧಾನ ಕಾರ್ಯದರ್ಶಿಗಳು ಗೃಹ ಇಲಾಖೆ ಬೆಂಗಳೂರು ರವರು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಕ್ರಮಬದ್ದವಾಗಿ ನಿರ್ವಹಿಸುವ ಬಗ್ಗೆ ಹಾಗೂ ಗೂಂಡಾ ಕಾಯಿದೆಯ ರೀತಿ ನಿಯಮಗಳು ಮತ್ತು ಯಾವ ರೀತಿ ಪ್ರಸ್ತಾವನೆಯನ್ನು ಜಿಲ್ಲಾ ದಂಡಾಧಿಕಾರಿಗಳಿಗೆ ಸಲ್ಲಿಸಬೇಕೆಂಬುದರ ಕುರಿತು ಉಪನ್ಯಾಸ ನೀಡಿ, ಗುಲಬರ್ಗಾ ಜಿಲ್ಲೆಗೆ ಮಾನವ ಕಳ್ಳ ಸಾಗಾಣಿಕೆ ತಡೆಯಲು ವಿಶೇಷ ಘಟಕ ಮಂಜೂರಾಗಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.
ಶ್ರೀ ಮಹಮದ್ ವಜೀರ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ ರವರು ಈ ಕಾರ್ಯಗಾರವನ್ನು ಉದ್ದೇಶಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ಕಾರ್ಯಗಾರವನ್ನು ನಡೆಸುವ ಉದ್ದೇಶ ಹಾಗೂ ಗೂಂಡಾ ಕಾಯಿದೆಯ ಸದ್ಬಳಕೆ ಅನುಷ್ಟಾನ ಬಗ್ಗೆಹಾಗೂ ಸಮಾಜದಲ್ಲಿ ಸಮಾಜ ಘಾತುಕ ಶಕ್ತಿಗಳ ವಿರುದ್ದ ಕ್ರಮ ಕೈಕೊಳ್ಳುವ ಬಗ್ಗೆ ವಿವರವಾದ ಉಪನ್ಯಾಸವನ್ನು ನೀಡಿದರು.
ಶ್ರೀ ಎನ್, ಸತೀಷಕುಮಾರ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಈ ಕಾರ್ಯಕ್ರಮ ಉದ್ದೇಶಿಸಿ ಕರ್ನಾಟಕ ರಾಜ್ಯ ಹೊರತು ಪಡಿಸಿ ನೇರೆ ರಾಜ್ಯಗಳಲ್ಲಿ ಗೂಂಡಾ ಕಾಯಿದೆ ಪರಿಣಾಮಕಾರಿಯಾಗಿ  ಜಾರಿಗೊಳಿಸುತ್ತಿದ್ದು, ಅದೇ ರೀತಿಯಾಗಿ ಪೊಲೀಸ್ ಅಧಿಕಾರಿಗಳು ನಮ್ಮ ರಾಜ್ಯದಲ್ಲಿಯೂ ಸಹ ಪರಿಣಾಮಕಾರಿಯಾಗಿ ಗೂಂಡಾ ಕಾಯಿದೆಯನ್ನು ಜಾರಿಗೊಳಿಸಲು ಉಪನ್ಯಾಸ ಈ ಕಾರ್ಯಗಾರದಲ್ಲಿ ಹಾಜರಿದ್ದ ಗಣ್ಯರಿಗೆ ವಂದನಾರ್ಪಣೆಯನ್ನು ಸಲ್ಲಿಸಿ ನೆನಪಿನ ಕಾಣಿಕೆಯನ್ನು ನೀಡಿದರು.  
ಈ ಕಾರ್ಯಗಾರಕ್ಕೆ ಈಶಾನ್ಯ ವಲಯದ ಜಿಲ್ಲೆಗಳಾದ ಶ್ರೀ,ಪ್ರಸನ್ನ ಕುಮಾರ ಐ.ಎ.ಎಸ್., ಜಿಲ್ಲಾಧಿಕಾರಿಗಳು ಗುಲಬರ್ಗಾ, ಶ್ರೀಮತಿ, ಲತಾಕುಮಾರಿ  ಅಪರ್ ಜಿಲ್ಲಾಧಿಕಾರಿಗಳು ಗುಲಬರ್ಗಾ, ಶ್ರೀ ತ್ಯಾಗರಾಜನ್ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಬೀದರ , ಶ್ರೀ ಸಿ.ಕೆ.ಜಾಫರ್ ಐ.ಎ.ಎಸ್. ಜಿಲ್ಲಾಧಿಕಾರಿಗಳು ಬೀದರ, ಶ್ರೀ, ಬಿಸನಳ್ಳಿ ಐ.ಪಿ.ಎಸ್. ಪೊಲೀಸ್ ಅದೀಕ್ಷಕರು ರಾಯಚೂರು, ಶ್ರೀ, ಬಿ.ಎಸ್. ಪ್ರಕಾಶ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಕೊಪ್ಪಳ, ಹಾಗೂ ಸರ್ಕಾರಿ ಅಭಿಯೊಜಕರು, ಹಾಗು ಶ್ರೀ ಕಾಶೀನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಶ್ರೀ ಭೂಷಣೆ ಬೋರಸೆ ಐ.ಪಿ.ಎಸ್. (ಎ) ಉಪ-ವಿಭಾಗ ಗುಲಬರ್ಗಾ, ಹಾಗು ಈಶಾನ್ಯ ವಲಯ, ಪೊಲೀಸ್ ಉಪಾಧೀಕ್ಷಕರಗಳು, ಮತ್ತು  ಪೊಲೀಸ್ ಇನ್ಸಪೇಕ್ಟರ ರವರುಗಳು ಹಾಜರಿದ್ದರು.
ಶ್ರೀ ಮಹಮದ್ ವಜೀರ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ, ಹಾಗೂ ಶ್ರೀ ಎನ್, ಸತೀಷಕುಮಾರ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಅವಿರತವಾಗಿ ಶ್ರಮಿಸಿ ಕಾರ್ಯಗಾರವನ್ನು ಆಯೋಜಿಸಿ ಸಂಪೂರ್ಣವಾಗಿ ಯಶ್ವಿಸಿಗೊಳಿಸಿರುತ್ತಾರೆ.